ಕೆಂಪೇಗೌಡರ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ, ನಗರ ನಿರ್ಮಾಣ ಕಾರ್ಯದಲ್ಲಿ ಕೆಂಪೇಗೌಡರ ಕೊಡುಗೆಯನ್ನು ಸ್ಮರಿಸಲಾಯಿತು. ನೀರಾವರಿ, ನಗರ ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಕೆಂಪೇಗೌಡರು ಹಾಕಿದ ಅಡಿಪಾಯದ ಹಾದಿ ಇಂದಿಗೂ ನಮಗೆಲ್ಲರಿಗೂ ಸ್ಫೂರ್ತಿ.
ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಐಟಿಪಿಎಲ್ ಮುಖ್ಯರಸ್ತೆ ಬಳಿ ಶೆರಟನ್ ಗ್ರಾಂಡ್ ಹೋಟೆಲ್ ನಲ್ಲಿ ಗ್ರಾಮಾಂತರ ಮಂಡಲ ವತಿಯಿಂದ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿಯ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀಮತಿ ಮಂಜುಳಾ ಅರವಿಂದ ಲಿಂಬಾವಳಿ ಅವರೊಂದಿಗೆ ಭಾಗವಹಿಸಲಾಯಿತು.
ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಮಾರತ್ತಹಳ್ಳಿಯಲ್ಲಿ ಶಾಸಕರ ಕಚೇರಿಯಲ್ಲಿ ನಡೆದ SIR ಸಂಬಂಧಿತ ಸಭೆಯಲ್ಲಿ ಭಾಗವಹಿಸಿ, ಇದೇ ಬರುವ 28ರಂದು ಶರಟನ್ ಹೋಟೆಲ್ ನಲ್ಲಿ ನಡೆಯಲಿರುವ ಸಭೆಯ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು.
ಜೂನ್ 28ರ ಭಾನುವಾರ ನಡೆಯಲಿರುವ ಸಭೆಯ ಕುರಿತು ಇಂದು ಪೂರ್ವಭಾವಿ ಸಭೆ ನಡೆಸಿ, ಬೂತ್ ಮಟ್ಟದಿಂದ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಹಾಗೂ ಎಲ್ಲಾ ವ್ಯವಸ್ಥೆಯನ್ನು ಯಾವುದೇ ಲೋಪದೋಷ ಇಲ್ಲದಂತೆ ನಡೆಸಿಕೊಡುವ ಸಲುವಾಗಿ ಸಭೆಯಲ್ಲಿ ಚರ್ಚಿಸಲಾಯಿತು. ಮತ್ತು SIR ಪ್ರಕ್ರಿಯೆಗೆ ತಂಡಗಳನ್ನು ರಚಿಸುವ ಕುರಿತು ಸೂಚನೆ ನೀಡಿ,
ಪವರ್ ಲಿಫ್ಟಿಂಗ್ ಪಂದ್ಯದಲ್ಲಿ ಬಹಳಷ್ಟು ಯುವಕ ಯುವತಿಯರು ಭಾಗವಹಿಸಿದ್ದು, ಮಹಿಳಾ ವಿಭಾಗದಲ್ಲಿ ವಿಜೇತರಾದ ಪವರ್ ಲಿಫ್ಟಿಂಗ್ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಿ ಎಲ್ಲರಿಗೂ ಶುಭ ಹಾರೈಸಲಾಯಿತು.
ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಕೈಕೊಂಡ್ರಹಳ್ಳಿಯಲ್ಲಿ ರಿಲೆಂಟ್ಲೆಸ್ ಜಿಮ್ ನಲ್ಲಿ ನಡೆದ ವರ್ಲ್ಡ್ ಪವರ್ ಲಿಫ್ಟಿಂಗ್ ಪಂದ್ಯಾವಳಿಯನ್ನು ವೀಕ್ಷಣೆ ಮಾಡಿ, ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳು. ಅವರ ಅಧಿಕಾರಾವಧಿಗೆ ಶುಭಾಶಯಗಳು. ಕೇಂದ್ರವು ಕರ್ನಾಟಕ ಸರ್ಕಾರದೊಂದಿಗೆ ಜನರ ಕಲ್ಯಾಣಕ್ಕಾಗಿ ನಿಕಟವಾಗಿ ಕಾರ್ಯನಿರ್ವಹಿಸಲಿದೆ.
@DKShivakumar
ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ವೈಟ್ ಫೀಲ್ಡ್ ನ ಇನ್ನರ್ ಸರ್ಕಲ್ ನಲ್ಲಿ ನಡೆದ “ಮಹದೇವಪುರ ಮಾವು ಉತ್ಸವ” ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
ಸದ್ಯ ಮಾವಿನ ಋತು ನಡೆಯುತ್ತಿದ್ದು, ಇಂದಿನ ಈ ಮಾವು ಉತ್ಸವದಲ್ಲಿ ದೇಶದ ವಿವಿಧ ರಾಜ್ಯಗಳ ಮಾವಿನ ತಳಿಗಳನ್ನು ಇರಿಸಲಾಗಿದೆ ಮತ್ತು ಮಾವು ಪ್ರಿಯರಿಗೆ ಇದೊಂದು ಅಪರೂಪದ ಉತ್ಸವ ಎಂದೇ ಹೇಳಬಹುದು.
ಇಂದು ಬೆಂಗಳೂರಿನ ಟೌನ್ ಹಾಲ್ ನಲ್ಲಿ ರಾಷ್ಟ್ರೋತ್ತಾನ ಪರಿಷತ್ ಬೆಂಗಳೂರು ಇವರ ವತಿಯಿಂದ ನಡೆದ “ಅವಿಶ್ರಾಂತ ಧ್ಯೇಯಜೀವಿ”- ಮೈ.ಚ.ಜಯದೇವ ಬದುಕು -ನೆನಪು“ ಎಂಬ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
Visited the Bengaluru Art of Living Ashram on the occasion of its 45th anniversary and the 70th birthday of Poojya Sri Sri Ravi Shankar Guruji, and extended birthday wishes to Guruji while seeking his blessings.
@ArtofLiving
ಬೆಂಗಳೂರು ಆರ್ಟ್ ಆಫ್ ಲಿವಿಂಗ್ ಆಶ್ರಮದ 45ನೇ ವಾರ್ಷಿಕೋತ್ಸವ ಹಾಗೂ ಪೂಜ್ಯ ಶ್ರೀ ರವಿಶಂಕರ ಗುರೂಜಿ ಅವರ 70ನೇ ಜನ್ಮದಿನದ ಅಂಗವಾಗಿ ಆಶ್ರಮಕ್ಕೆ ಭೇಟಿ ನೀಡಿ, ಹುಟ್ಟುಹಬ್ಬದ ಶುಭಾಶಯಗಳನ್ನುತಿಳಿಸಿ, ಗುರೂಜಿಯ ಆಶೀರ್ವಾದ ಪಡೆಯಲಾಯಿತು.
ಆಶ್ರಮದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದರು.
Under the guidance of Prime Minister Shri Narendra Modi and your capable leadership, I hope West Bengal emerges as a state of development, progress, and peace.
ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಹಾಗೂ ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಕ್ಷದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ ಸುವೆಂದು ಅಧಿಕಾರಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
Heartfelt congratulations to Shri Suvendu Adhikari on taking oath as the new Chief Minister of West Bengal and as the first Chief Minister from the Bharatiya Janata Party in the state.
“ಕರುನಾಡಿಗೆ ಸ್ವಾಗತ ಮೋದೀಜಿ”
ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರ್ನಾಟಕಕ್ಕೆ ಆಗಮಿಸುತ್ತಿರುವ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಸ್ವಾಗತ.
@narendramodi