Official account I Member of Legislative Assembly- Vijayapura | Ex-Union Minister Of State for Railways & Textiles | #NoAdjustmentPolitics | [email protected]
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಇಂದು ಗಜೇಂದ್ರ ಯುವಕ ಮಂಡಳದ ವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಮಹಾಗಣಪತಿ ಉತ್ಸವ ಕಾರ್ಯಕ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದೆ. ಇದಕ್ಕೂ ಮೊದಲಯ ಹಿಂದೂ ಕಾರ್ಯಕರ್ತರು ಹೂ ಮಳೆ ಸುರಿಸಿ ಆತ್ಮೀಯವಾಗಿ ಪಟ್ಟಣಕ್ಕೆ ಸ್ವಾಗತಿಸಿ ಸತ್ಕರಿಸಿದರು. ಇದೇ ವೇಳೆ ವೀರ ರಾಣಿ ಕಿತ್ತೂರು ಚೆನ್ನಮ್ಮನ ವೃತ್ತದಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದೆ. ಮುಖಂಡರು, ಹಿತೈಷಿಗಳು, ಅಭಿಮಾನಿಗಳು, ಕಾರ್ಯಕರ್ತರು, ದೇಶ ಭಕ್ತರು, ಹಿಂದೂ ಕುಲಬಾಂಧವರು ಉಪಸ್ಥಿತರಿದ್ದರು.
The demolition of the 160-year-old Kumara Krupa Guest House, a historical landmark, to convert the property into the Chief Minister’s official residence raises serious concerns about the Congress Government’s approach to heritage conservation and public assets.
Kumara Krupa was one of Bengaluru’s oldest surviving bungalows. Maharaja Krishnaraja Wadiyar acquired the property from the descendants of Dewan K. Sheshadri Iyer and made it a State asset. Over the years, the iconic property hosted several dignitaries, including former Chief Minister Nijalingappa, judges and other prominent personalities.
At a time when the coffers are empty, spending public money on such a project raises questions about fiscal priorities. More importantly, the demolition has resulted in the loss of an important part of Bengaluru’s historical and cultural heritage. It also overlooks the contributions of Dewan K. Sheshadri Iyer, who played a significant role in transforming Bengaluru into a modern city. The Chief Minister's attitude of 'My Way, or Highway' is highly objectionable and deserves condemnation. The Government should have held public consultations before demolition.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಭಾನುವಾರ ರಾತ್ರಿ ಶ್ರೀ ಶಿವಗಣೇಶ ಯುವಕ ಮಂಡಳ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದೆ. ಇದಕ್ಕೂ ಮೊದಲು ವಿಘ್ನ ನಿವಾರಕ ಶ್ರೀ ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿ, ನಾಡಿಗೆ ಒಳಿತಾಗಲೆಂದು ಪ್ರಾರ್ಥಿಸಲಾಯಿತು. ಸ್ವಾಮೀಜಿಗಳು, ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು, ದೇಶ ಭಕ್ತರು, ಹಿಂದೂ ಕುಲಬಾಂಧವರು, ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಬಿಡದಿ ಅನ್ನದಾತರ ಮೇಲೆ ಬಲಪ್ರಯೋಗ ಮಾಡುತ್ತಿರುವುದು ಅಕ್ಷಮ್ಯ. ಬಿಡದಿ ರೈತರು ಸರ್ಕಾರದ ಸೌಲಭ್ಯವಾಗಲಿ, ಪರಿಹಾರವಾಗಲಿ ಕೇಳುತ್ತಿಲ್ಲ. ತಮ್ಮ ಭೂಮಿಯನ್ನು ಒತ್ತಾಯಪೂರ್ವಕವಾಗಿ ಕಸಿದು ಕೊಳ್ಳುತ್ತಿರುವುದನ್ನು ಪ್ರತಿಭಟಿಸುತ್ತಿದ್ದಾರೆ. ಅವರನ್ನು ಕೂಡಲೇ ಗೌರವಪೂರ್ವಕವಾಗಿ ಬಿಡುಗಡೆ ಗೊಳಿಸಬೇಕು ಎಂದು ಆಗ್ರಹಿಸುತ್ತೇನೆ
ಬಿಡದಿ ಭೂಮಿಯ ಮಣ್ಣಿನ ಗುಣಮಟ್ಟ, ನೀರಾವರಿ ಸೌಲಭ್ಯಗಳಿಂದ ಹಲವು ಬೆಳೆಗಳನ್ನು ಬೆಳೆಯಬಹುದಾಗಿದೆ. ಈ ಭಾಗದಿಂದ ನಿತ್ಯ ಬೆಂಗಳೂರಿಗೆ 6 ಲಕ್ಷ ಲೀಟರ್ ಹಾಲು ಸರಬರಾಜು ಆಗುತ್ತಿದೆ ಹಾಗೂ ಈ ಪ್ರದೇಶದಲ್ಲಿ 2 ಲಕ್ಷಕ್ಕೊ ಹೆಚ್ಚು ತೆಂಗಿನ ಮರಗಳಿವೆ. ರೇಷ್ಮೆ ಕೃಷಿ, ಹೈನುಗಾರಿಕೆ, ತೆಂಗು, ಮಾವು, ಅಡಿಕೆಯನ್ನು ಬೆಳೆದು ರೈತರು ಆರ್ಥಿಕವಾಗಿ ಸಮೃದ್ಧರಾಗಿದ್ದಾರೆ. ಇಲ್ಲಿರುವ ಫಲವತ್ತಾದ ಮಣ್ಣಿನಿಂದ ಬಹುವಿಧದ ಬೆಳೆಯನ್ನು [multicropping] ಇಲ್ಲಿನ ಭಾಗದ ರೈತರು ಬೆಳೆಯುತ್ತಿದ್ದಾರೆ. ಸುಮಾರು 6500 ಎಕರೆಯ ಅತ್ಯಂತ ಫಲವತ್ತಾದ, ನೀರಾವರಿ ಭೂಮಿಯನ್ನು ವಸತಿ ಉದ್ದೇಶಕ್ಕೆ ಸ್ವಾಧೀನಪಡೆಸಿಕೊಳ್ಳುತ್ತಿರುವುದು ಅವೈಜ್ಞಾನಿಕ, ಅವಾಸ್ತವಿಕ, ರೈತ ವಿರೋಧಿ ನಿರ್ಧಾರವಾಗಿದೆ ಎಂದು ಇಂದು ಸದನದಲ್ಲಿ ಸರ್ಕಾರದ ಗಮನ ಸೆಳೆಯಲಾಯಿತು
ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತರ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು. ಆಹಾರ ಭದ್ರತೆಗೆ, ಪರಿಸರವನ್ನು ಕಾಪಾಡುವುದಕ್ಕೆ ಕೃಷಿ ಹಾಗೂ ಅರಣ್ಯ ಪ್ರದೇಶವನ್ನು ರಕ್ಷಿಸಬೇಕು. ಕೃಷಿಗೆ ಯೋಗ್ಯವಲ್ಲದ ಭೂಮಿಗಳಲ್ಲಿ ಕೈಗಾರಿಕೆಗಳು, ವಸತಿ ಯೋಜನೆಗಳನ್ನು ರೂಪಿಸಬೇಕೇ ಹೊರತು ಸಮೃದ್ಧವಾದ ಕೃಷಿ ಭೂಮಿಯಲ್ಲಲ್ಲ.
ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿದು ಕೃಷಿ ಭೂಮಿಯನ್ನು ವಸತಿ ಯೋಜನೆ, ಎಐ ಸಿಟಿಗೆ ಮೀಸಲಿಡುವುದು ಸರ್ಕಾರದ ದೂರದರ್ಶಿತ್ವದ ಕೊರತೆ ತೋರಿಸುತ್ತದೆ. ಸರ್ಕಾರವು ಬೆಂಗಳೂರನ್ನು ದಟ್ಟಣೆಯಿಂದ ಕಡಿಮೆ ಮಾಡಬೇಕಾದರೆ ಬೇರೆ ಜಿಲ್ಲೆಗಳಲ್ಲಿ ಉತ್ತಮ ಮೂಲಭೂತ ಸೌಕರ್ಯ, ಉದ್ಯೋಗ ಸೃಜನೆ, ರಸ್ತೆ ಸೌಕರ್ಯವನ್ನು ಕೊಟ್ಟು ಅಭಿವೃದ್ಧಿ ಮಾಡಲಿ, ನೂರಾರು ವರ್ಷಗಳಿಂದ ಬಂಗಾರದಂತ ಬೆಳೆ ಬೆಳೆಯುತ್ತಿರುವ ಬಿಡದಿಯ ಕೃಷಿ ಭೂಮಿಯನ್ನಲ್ಲ.
ಕರ್ನಾಟಕ ಲೋ(ಪ)ಕ ಸೇವಾ ಆಯೋಗದ ಹಗರಣಗಳನ್ನು ತನಿಖೆ ಮಾಡುವ SIT ತನ್ನ ತನಿಖಾ ವರದಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ನೀಡಬೇಕಾಗಿದೆ.
ತನಿಖೆಯಲ್ಲಿ 'ಮೂಗು ತೂರಿಸಲು' ಸರ್ಕಾರಕ್ಕೆ ಅವಕಾಶವಿರುವುದಿಲ್ಲ. ರಾಜಕೀಯ ಹಸ್ತಕ್ಷೇಪವಿಲ್ಲದೆ ತನಿಖೆ ಮಾಡಬಹುದು. ರಾಜಕೀಯ ಪ್ರಭಾವ ಬಳಸಿ ತನಿಖೆಯಿಂದ ಬಿಡುಗಡೆಗೊಳ್ಳಬಹುದು ಎಂದು ಯೋಚಿಸುತ್ತಿದ್ದ ಕೆಲ 'ಪ್ರಭಾವಿಗಳ', 'ದಲ್ಲಾಳಿಗಳ' ನಿದ್ದೆಗೆಡಿಸಿದೆ.
ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿರುವ ಆದೇಶವನ್ನು ಮಾರ್ಪಾಡು ಮಾಡಲು ಮುಖ್ಯ ಮಂತ್ರಿಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುವುದಾಗಿ ಹೇಳಿದ್ದಾರೆ.
ನ್ಯಾಯಾಲಯದ ಮೇಲೆ ನಿಮಗೆ ನಂಬಿಕೆ ಇಲ್ಲವೇ ? ಅಥವಾ ತನಿಖಾಧಿಕಾರಿಗಳ ಮೇಲೆ ವಿಶ್ವಾಸವಿಲ್ಲವೇ ? ತಮ್ಮ 'ಸಂಪನ್ಮೂಲಗಳೇ' ತನಿಖಾಧಿಕಾರಿಯಾಗಲು ಏಕೆ ಬಯಸುತ್ತೀರಿ ? ಸರ್ಕಾರ ಯಾರನ್ನು ರಕ್ಷಿಸಲು ಹೋಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ರಾಜಕೀಯ ಹಸ್ತಕ್ಷೇಪ ಮಾಡಲಾಗದೆ ತಮ್ಮ 'ಬಂಟರನ್ನು' ರಕ್ಷಿಸಲು ಸಾಧ್ಯವಿಲ್ಲ ಅನ್ನುವುದು ಚಿಂತೆಯೋ ಅಥವಾ SIT ಯಲ್ಲಿ ತಮ್ಮ 'ಸಂಪನ್ಮೂಲ' ಇಲ್ಲವೆಂಬುದು ಸಮಸ್ಯೆಯೋ ?
2 ದಿನಗಳ ಹಿಂದೆಯಷ್ಟೇ ಆಯೋಗವನ್ನು ಮುಚ್ಚುತ್ತೇವೆ ಎಂದು ವೀರಾವೇಶದಿಂದ ಹೇಳಿದವರು ಇಂದು ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುತ್ತೇವೆ ಎಂದು ನಡುಗುತ್ತಿರುವುದೇಕೆ ?
ರಾಜ್ಯದ ಜನತೆ ಅದರಲ್ಲೂ ಕಷ್ಟಪಟ್ಟು ಓದಿಕೊಂಡು ಸರ್ಕಾರಿ ಉದ್ಯೋಗಕ್ಕಾಗಿ ಹವಣಿಸುತ್ತಿರುವ ಯುವ ಸಮೂಹ ನಿಮ್ಮ ಉತ್ತರಕ್ಕೆ ಕಾಯುತ್ತಿದ್ದಾರೆ.
@AKSSAofficial I
ಕಾಂಗ್ರೆಸ್ ಸರ್ಕಾರದ 'ಧೃಡ ಸಂಕಲ್ಪವಿದು'
➥ಶಾಲಾ ಮಕ್ಕಳಿಗೆ ಶೂ ಇಲ್ಲ, ಬ್ಯಾಗ್ ಇಲ್ಲ: GBA ಶಾಲೆಯ 23 ಸಾವಿರ ಮಕ್ಕಳು ಸೌಲಭ್ಯ ವಂಚಿತರು
➥KSRTC ಬಸ್ಸುಗಳಲ್ಲಿ ನಿರ್ವಹಣೆ ಕೊರತೆ, ಮೊಬೈಲ್ ಟಾರ್ಚ್ ಲೈಟಿನಲ್ಲಿ ಬಸ್ ಪ್ರಯಾಣ
➥ಲೋಕೋಪಯೋಗಿ ಸಹಿತ 3 ಇಲಾಖೆಗಳಲ್ಲಿ ಗುತ್ತಿಗೆದಾರರ ಬಾಕಿ ಬಿಲ್ ಮೊತ್ತ 36136 ಕೋಟಿ ರೂ
➥ವಿತ್ತೀಯ ಕೊರತೆ 3% ಆಗಿದೆ
➥Revenue Liability 22,000 ಕೋಟಿಯಾಗಿದೆ
➥ಜಿಲ್ಲಾಸ್ಪತ್ರೆಗಳ ನಿರ್ವಹಣೆ, ಸಿಬ್ಬಂದಿ ವೇತನ ಪಾವತಿ ಮಾಡುವುದಕ್ಕೂ ಹಣವಿಲ್ಲ
➥ಉದ್ಯೋಗಾವಕಾಶ ಸೃಷ್ಟಿಸುವ ಇನ್ನೋವೇಶನ್ ಟೆಕ್ನಾಲಜಿ ಪಾರ್ಕ್ ಗೆ ಅನುದಾನವಿಲ್ಲ
➥ಬೀದಿ ನಾಯಿಗಳ ಕಡಿತದಿಂದ ದುರ್ಮಣಕ್ಕೀಡಾದವರಿಗೆ ಪರಿಹಾರ ನೀಡಲು ಹಣವಿಲ್ಲ
➥ಶಾಲಾ ಮಕ್ಕಳ ಸಮವಸ್ತ್ರಕ್ಕೆ ಹಣವಿಲ್ಲ
➥ಕನ್ನಡ ಸಂಸ್ಕೃತಿ ಇಲಾಖೆ ಸಿಬ್ಬಂದಿ ವೇತನ, ಭತ್ಯೆಗಳಿಗೆ ದುಡ್ಡಿಲ್ಲ
➥ದಲಿತ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಲಾಪ್ಟಾಪ್, ಫೆಲೋಶಿಪ್, ಭೋಜನ ವೆಚ್ಚಕ್ಕೆ ಅನುದಾನದ ಕೊರತೆ.
➥ಹಣಕಾಸು ಪರಿಸ್ಥಿತಿ ಸರಿಯಿಲ್ಲವೆಂದು ಶಾಲಾ ಕಾಲೇಜುಗಳ ಉನ್ನತೀಕರಣ 2 ವರ್ಷ ಮುಂದಕ್ಕೆ
➥ವಸತಿ ಶಾಲೆಗಳಿಗೆ ಶೇ 10 ಪ್ರವೇಶ ಹೆಚ್ಚಳಕ್ಕೆ 11.29 ಕೋಟಿ ಅನುದಾನವಿಲ್ಲ
➥8.92 ಲಕ್ಷ ಹಾಲು ಉತ್ಪಾದಕರಿಗೆ 602.84 ಕೋಟಿ ರೂ ಬಾಕಿ ಉಳಿಸಿಕೊಂಡ ಸರ್ಕಾರ
➥ಅಲೆಮಾರಿ ಜನಾಂಗದ ಮನೆ ನಿರ್ಮಾಣಕ್ಕೆ ಹಣವಿಲ್ಲ
➥ವಿದ್ಯಾರ್ಥಿ ನಿಲಯದಲ್ಲಿ ಅಕ್ಕಿ ಇಲ್ಲ, ಸಿದ್ದಗಂಗಾ ಮಠದಿಂದ ಸಾಲ ಪಡೆದ ವಾರ್ಡನ್ ಗಳು
➥ಟ್ರಾಮಾ ಕೇರ್ ಕೇಂದ್ರಕ್ಕೆ ಶೇ 60 ರಷ್ಟು ಕಡಿತ
ಅತಿಥಿ ಶಿಕ್ಷಕರಿಗೆ ಸಕಾಲದಲ್ಲಿ ಸಂಬಳವಿಲ್ಲ
➥ದ್ವಿತೀಯ ಪಿ ಯು ಸಿ ಪರೀಕ್ಷಾ ಸಿಬ್ಬಂದಿ ಸಂಭಾವನೆ ಪಾವತಿಗೂ ಅನುದಾನ ಕೊರತೆ
➥ಕಲ್ಯಾಣ ಕರ್ನಾಟಕದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನದ ಕೊರತೆ
➥ಹೊರರಾಜ್ಯದ ಗಡಿ ಕನ್ನಡಿಗರಿಗೆ ಅನುದಾನದ ಕೊರತೆಯಿಂದ ಸೌಲಭ್ಯವಿಲ್ಲ
➥ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಸತಿ ಶಾಲೆ, ಕಾಲೇಜುಗಳಲ್ಲಿನ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಟ್ಟೆ, ಲೋಟ, ದಿಂಬು , ಹಾಸಿಗೆ ಖರೀದಿ ಮಾಡೋಕೆ ಹಣವಿಲ್ಲ
➥ಹೊಸ ವಿದ್ಯಾರ್ಥಿ ನಿಲಯ ಮಂಜೂರಾತಿಗೆ ಹಣವಿಲ್ಲ
ಕೆರೆ ನಿರ್ಮಾಣಕ್ಕೆ ಹಣವಿಲ್ಲ
➥ಗಂಗಾ ಕಲ್ಯಾಣ ಯೋಜನೆಗಳಿಗೆ ಬಿಡಿಗಾಸಿಲ್ಲ
@CMofKarnataka I #CongressFailsKarnataka I #ಮತದಾನದ_ದಿನದಂದು_ಮೈಮರೆಯದಿರಿ
ಹೊಸ ಯೋಜನೆಗಳಿಗೆ ಹಣವಿಲ್ಲ ಎಂದು ಹಣಕಾಸು ಇಲಾಖೆಯು ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ನಿನ್ನೆ ಕೊಪ್ಪಳದಲ್ಲಿ ಮೊಬೈಲ್ ಟಾರ್ಚ್ ಲೈಟಿನಲ್ಲಿ ರಾಜ್ಯ ಸಾರಿಗೆ ಬಸ್ ಸಂಚರಿಸಿದೆ. ಇಷ್ಟರ ಮಟ್ಟಿಗೆ ರಾಜ್ಯದ ಆರ್ಥಿಕ ವ್ಯವಸ್ಥೆ ಕುಸಿದಿದೆ.
ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮುಖ್ಯ ಮಂತ್ರಿಗಳು ಶ್ವೇತ ಪತ್ರ ಹೊರಡಿಸಲಿ. ಅನುಭವಿ ಸೂಪರ್ವೈಸರ್ ಗಳಿಂದ ತಪಾಸಣೆ ಮಾಡದೆ ಸಾರಿಗೆ ಬಸ್ಸುಗಳನ್ನು ರಸ್ತೆಗೆ ಬಿಡಬಾರದು. ತಾಂತ್ರಿಕವಾಗಿ, ಸುರಕ್ಷತೆ ದೃಷ್ಟಿಯಿಂದ ಸರಿ ಇದೆ ಎಂದರಷ್ಟೇ ಬಸ್ಸುಗಳನ್ನು ರಸ್ತೆಗೆ ಬಿಡಬೇಕು.
ಬಸ್ಸಿನಲ್ಲಿ ಪ್ರಯಾಣ ಮಾಡುವವರು ಅವರ ಕುಟುಂಬಗಳಿಗೆ ಅನ್ನದಾತರು ಎಂದು ಸರ್ಕಾರ ಮರೆಯದಿರಲಿ. ಎಲ್ಲದಕ್ಕಿಂತ ಮುಖ್ಯವಾಗಿ ವೋಟು ನೀಡುವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ, ಆದ್ಯತಾ ವಲಯಗಳಿಗೆ ಅನುದಾನ ನೀಡಲಿ.
@CMofKarnataka I @byrathi_suresh I
ಕರ್ನಾಟಕ ಲೋ(ಪ)ಕ ಸೇವಾ ಆಯೋಗದಲ್ಲಿ ಆಗುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ, ಸ್ವಜನಪಕ್ಷಪಾತ, cash-for-job ಹಗರಣದ ತನಿಖೆಯನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು SIT ಗೆ ನೀಡಿತ್ತು. SIT ಯನ್ನು ದಕ್ಷ IPS ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯಬೇಕೆಂದು ತೀರ್ಪಿನಲ್ಲಿ ಉಲ್ಲೇಖಿಸಿತ್ತು.
ಪಶುವೈದ್ಯ ಅಧಿಕಾರಿಗಳ ನೇಮಾಕಾತಿಯಲ್ಲದೆ ಆಯೋಗದಲ್ಲಿ ನಡೆದಿದೆ ಎನ್ನಲಾಗುವ ಎಲ್ಲ ಹಗರಣಗಳು SIT ವ್ಯಾಪ್ತಿಗೆ ಬರುತ್ತದೆ ಎಂದು ಮಾನ್ಯ ನ್ಯಾಯಾಲಯ ತೀರ್ಪಿನಲ್ಲಿ ಹೇಳಿತ್ತು. ತೀರ್ಪು ಪ್ರಕಟವಾದ ಕೂಡಲೇ ಕೆಲವರಿಗೆ ನಡುಕ ಶುರುವಾಗಿದೆ. ತೀರ್ಪನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಮುಖ್ಯ ಮಂತ್ರಿಗಳು ಹೇಳಿದ್ದಾರೆ. ತಮ್ಮ 'ಬಿಡುವಿಲ್ಲದ' ಕೆಲಸದ ಮಧ್ಯೆಯೂ SIT ಯಲ್ಲಿ ನೇಮಕ ಗೊಂಡಿದ್ದ IPS ಕುಶಾಲ್ ಚೋಕ್ಸೆ ಯನ್ನು ವರ್ಗಾವಣೆ ಮಾಡುತ್ತೀರಿ. ಇದರ timing ಅನುಮಾನಾಸ್ಪದ ಅಲ್ಲವೇ. SIT ಸದ್ಯಸರಾಗಿದ್ದವರನ್ನೇ ವರ್ಗ ಮಾಡುವ ತುರ್ತು ಏನಿತ್ತು ಮುಖ್ಯ ಮಂತ್ರಿಗಳೇ ? ಚಿತ್ರದುರ್ಗದ ಪೊಲೀಸ್ ವರಿಷ್ಠಾಧಿಕಾರಿ ನೇಮಕಕ್ಕೆ SIT ಯಲ್ಲಿದ್ದ ಅಧಿಕಾರಿಗಳು ಬಿಟ್ಟರೆ, ಬೇರೆ ಯಾರೂ ಸಿಗಲಿಲ್ಲವೇ ?
ಸ್ವಾಮೀ ಮುಖ್ಯ ಮಂತ್ರಿಗಳೇ ರಾಜ್ಯ ಬರ ಎದುರಿಸುತ್ತಿದೆ, ಅದನ್ನು ನಿರ್ವಹಿಸಲು ಕೆಲಸ ಮಾಡಿ. ಮೂಲಭೂತ ಸೌಕರ್ಯ ಅಭಿವೃದ್ಧಿ, ನೀರಾವರಿ, ಮಹಿಳಾ ಸಬಲೀಕರಣ ಸೇರಿದಂತೆ ಇನ್ನಷ್ಟು ಆದ್ಯತಾ ವಲಯಗಳಿವೆ ಅಲ್ಲಿ ನಿಮ್ಮ ಸಮಯವನ್ನು, ನಿಮ್ಮ ಅಧಿಕಾರಿಗಳ ಸಮಯವನ್ನು ವ್ಯಯಿಸಿ. ಉಚ್ಚ ನ್ಯಾಯಾಲಯ ನೀಡಿರುವ ತೀರ್ಪಿನಿಂದ ಯಾರಿಗೆ ಸಮಸ್ಯೆಯಾಗಿದೆ ? ನಡುಕ ಯಾರಿಗೆ ಉಂಟಾಗಿದೆ ? ಅದರಲ್ಲೂ SIT ವ್ಯಾಪ್ತಿ ಕೇವಲ ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಸೀಮಿತವಲ್ಲ ಅಂದ ಮೇಲೆ ಕೆಲ 'ರಾಜಕೀಯ ಗಣ್ಯರ' ರಕ್ತದೊತ್ತಡ ಹೆಚ್ಚಾಗಿದೆ, ರಾತ್ರೋ ರಾತ್ರಿ ವಿಷಮಶೀತ ಜ್ವರ ಬಂದಿದೆ. ಸಾವಿರಾರು ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಕನಸನ್ನು ನುಚ್ಚು ನೂರು ಮಾಡಿದ ಆಯೋಗದ ಭ್ರಷ್ಟರನ್ನು SIT ತನಿಖೆಗೆ ಒಳಪಡಿಸಲಿ. ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ದೊರಕಿಸಿಕೊಡಲಿ.
ಸರ್ವೋಚ್ಛ ನ್ಯಾಯಾಲಯಕ್ಕೆ ಮೊರೆ ಹೋಗವುದು 'ಆಡಳಿತಾತ್ಮಕ ನಡೆಯಲ್ಲ' ಬದಲಾಗಿ ಪರೀಕ್ಷಾರ್ಥಿಗಳ ವಿರೋಧಿ ನಡೆ. ನಿಮ್ಮ ಸರ್ಕಾರ ದಲ್ಲಾಳಿಗಳ ಪರ, ಭ್ರಷ್ಟರ ಪರ ಇದೆಯೋ ಪರೀಕ್ಷಾರ್ಥಿಗಳ ಪರ ಇದೆಯೋ ಎಂದು ಹೇಳಿ. ಲೋ(ಪ)ಕ ಸೇವಾ ಆಯೋಗದಲ್ಲಾಗಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು SIT ಯೇ ತನಿಖೆ ಮಾಡಲಿ.
ನಮ್ಮ ನಾಡಿನ ಯುವ ಪೀಳಿಗೆ ಬಗ್ಗೆ ಕಿಂಚಿತ್ತಾದರೂ ನಿಮಗೆ ಚಿಂತನೆ, ಕಾಳಜಿಯಿದ್ದಲ್ಲಿ SIT ಇಂದಲೇ ತನಿಖೆಯಾಗಲಿ. ಉದ್ಯೋಗಾಕಾಂಕ್ಷಿಗಳ ಕನಸನ್ನು ನುಚ್ಚು ನೂರು ಮಾಡಿದವರು ಕೃಷ್ಣ ಪರಮಾತ್ಮನ ಜನ್ಮ ಸ್ಥಳದಲ್ಲಿ ಕಾಯಂ ಆಗಿ ನೆಲಸಲಿ. ದೇಶದ ಭವಿಷ್ಯವಾದ ಯುವ ಸಮೂಹಕ್ಕೆ ನ್ಯಾಯ ಸಿಗಲಿ.
@AKSSAofficial I @CMofKarnataka I @tv9kannada I
ಬಿಡದಿ ಟೌನ್ ಶಿಪ್ ಯೋಜನೆ ವಿರುದ್ಧ ರೈತರು ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರ ಅವರತ್ತ ನೋಡುತ್ತಿಲ್ಲ. ಅವರ ನ್ಯಾಯಯುತವಾದ ಬೇಡಿಕೆ ಆಲಿಸುತ್ತಿಲ್ಲ. ಅಧ್ಯಯನ ಮಾಡಲು ಸರ್ಕಾರವೇ ನೇಮಿಸಿರುವ 'ತಜ್ಞರ ತಂಡ' ಇದುವರೆಗೂ ಭೇಟಿ ನೀಡಿಲ್ಲ. ಸರ್ಕಾರ ರೈತರ ಪರವಾಗಿರಬೇಕೇ ಹೊರತು 'ರಿಯಲ್ ಎಸ್ಟೇಟ್' ಲಾಬಿ ಪರವಲ್ಲ. ಬಿಡದಿ ಟೌನ್ ಶಿಪ್ ಯೋಜನೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕೆಂದು ಮತ್ತೊಮ್ಮೆ ಆಗ್ರಹಿಸುತ್ತೇನೆ ಹಾಗೂ ಪ್ರತಿಭಟನಾನಿರತ ರೈತರಿಗೆ ನನ್ನ ಬೆಂಬಲವನ್ನು ನೀಡುತ್ತೇನೆ.
@CMofKarnataka I
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದ ನಿಟ್ಟೂರು ನರಸಿಂಹಮೂರ್ತಿ ಬಯಲು ಜಾಗದಲ್ಲಿ ಇಂದು ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ. ಇದಕ್ಕೂ ಮೊದಲು ಶ್ರೀ ಗಣೇಶನಿಗೆ ಪೂಜೆ ಸಲ್ಲಿಸಿ, ನಾಡಿಗೆ ಒಳಿತಾಗಲೆಂದು ಪ್ರಾರ್ಥಿಸಲಾಯಿತು. ಇದೇ ವೇಳೆ ಸಮಿತಿಯಿಂದ ಹಾಗೂ ಅಭಿಮಾನಿಗಳು ಆತ್ಮೀಯವಾಗಿ ಸನ್ಮಾನಿಸಿದರು.
ಮುಖಂಡರು, ಹಿತೈಷಿಗಳು, ಅಭಿಮಾನಿಗಳು, ಹಿಂದೂ ಕಾರ್ಯಕರ್ತರು, ದೇಶಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ, ಗಜಾನನ ಉತ್ಸವಕ್ಕೆ ಮೆರಗು ನೀಡಿದರು.
#ಬಳ್ಳಾರಿಜಿಲ್ಲೆ #ಸಿರುಗುಪ್ಪ #ಗಜಾನನಉತ್ಸವ
ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೇರು ನಟ ಶ್ರೀ ಅನಂತ್ ನಾಗ್ ಅವರಿಗೆ ಹಾರ್ದಿಕ ಅಭಿನಂದನೆಗಳು
#AnantNag I #DadaSahebPhalke I #AnanthNag I
ವಿಜಯಪುರ ತಾಲ್ಲೂಕಿನ ಕಗ್ಗೋಡ ಗ್ರಾಮದಲ್ಲಿರುವ ನಮ್ಮ ಶ್ರೀ ಸಿದ್ದೇಶ್ವರ ಸಂಸ್ಥೆಯ ಶ್ರೀ ರಾಮನಗೌಡ ಬಾಪುಗೌಡ ಪಾಟೀಲ ಯತ್ನಾಳ ಗೋ ರಕ್ಷಾ ಕೇಂದ್ರಕ್ಕೆ ಇಂದು ಶ್ರೀ ಶ್ರೀ ಶ್ರೀ1008 ಶ್ರೀಶೈಲ ಜಗದ್ಗುರುಗಳಾದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಭೇಟಿ ನೀಡಿ, ಆಶೀರ್ವದಿಸಿದರು. ಪೂಜ್ಯ ಶ್ರೀಗಳಿಗೆ ಶ್ರೀ ಸಿದ್ದೇಶ್ವರ ಸಂಸ್ಥೆ ವತಿಯಿಂದ ಸತ್ಕರಿಸಲಾಯಿತು. ಸಂಸ್ಥೆಯ ಪದಾಧಿಕಾರಿಗಳು, ಮುಖಂಡರು, ಹಿತೈಷಿಗಳು, ಅಭಿಮಾನಿಗಳು ಉಪಸ್ಥಿತರಿದ್ದರು.