ಇಂಡೋನೇಷ್ಯಾ, ಲಾವೋಸ್, ಕಾಂಬೋಡಿಯಾ, ಬಾಂಗ್ಲಾದೇಶ, ಬಹರೇನ್, ನೇಪಾಳ, ಮ್ಯಾನ್ಮಾರ್, ಶ್ರೀಲಂಕಾ, ವಿಯೆಟ್ನಾಂ...
ಭಾರತವು ಕೇವಲ ಪಾರಂಪರಿಕ ತಾಣಗಳ ಜೀರ್ಣೋದ್ಧಾರವನ್ನಷ್ಟೇ ಮಾಡುತ್ತಿಲ್ಲ; ಶತಮಾನಗಳಷ್ಟು ಹಳೆಯ ನಾಗರಿಕತೆಗಳ ನಡುವಿನ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಬಾಂಧವ್ಯಗಳನ್ನು ಇನ್ನಷ್ಟು ಬಲಪಡಿಸುತ್ತಿದೆ.
#ModiInAustralia
"ಬೇಡ Bro" ಮೊದಲು ನಿಮ್ಮ ಇಲಾಖೆ ಕೆಲಸ ಮಾಡಿ!
ರಾಜ್ಯದ ಗ್ರಹ ಸಚಿವ @PriyankKharge ಅವರೇ, "ಬಿಜೆಪಿ ಐಟಿ ಸೆಲ್ನವರಿ��ೆ ನಾವೇ ಉದ್ಯೋಗ ನೀಡಿದ್ದೇವೆ" ಎಂಬ ನಿಮ್ಮ ಭ್ರಮೆ ನಿಜಕ್ಕೂ ಹಾಸ್ಯಾಸ್ಪದ. ದಿನಬೆಳಗಾದರೆ ಆರ್ಎಸ್ಎಸ್ ಜಪ ಮಾಡುವುದಕ್ಕಾ ನಿಮ್ಮನ್ನು ಹೋಮ್ ಮಿನಿಸ್ಟರ್ ಸ್ಥಾನದಲ್ಲಿ ಕೂರಿಸಿದ್ದು? ಇದಕ್ಕಾಗಿಯೇ ನೀವು ಸರ್ಕಾರಿ ಸಂಬಳ ಪಡೆಯುತ್ತಿದ್ದೀರಾ?
ವಾಸ್ತವವಾಗಿ ನಿಮ್ಮ ಸರ್ಕಾರದ ಭ್ರಷ್ಟಾಚಾರ, ತುಷ್ಟೀಕರಣ ಹಾಗೂ ಆಡಳಿತ ವೈಫಲ್ಯಗಳೇ ವಿರೋಧ ಪಕ್ಷವಾಗಿ ನಮಗೆ ಪ್ರತಿದಿನ ಕೆಲಸ ಕೊಡುತ್ತಿವೆ! ನೀವು ಮತ್ತು ನಿಮ್ಮ ಸರ್ಕಾರ ತಪ್ಪುಗಳನ್ನು ಮಾಡುವುದನ್ನು ನಿಲ್ಲಿಸಿದ ದಿನ, ���ಮ್ಮ ಪ್ರಶ್ನೆಗಳೂ ನಿಲ್ಲುತ್ತವೆ.
ಅಂದಹಾಗೆ,
👉🏼 ಕಲಬುರಗಿಯಲ್ಲಿ ಬರ, ಕುಡಿಯುವ ನೀರಿನ ಕೊರತೆ
👉🏼 ಕೋಲಾರದಲ್ಲಿ ವೃದ್ಧೆಯ ಮೇಲೆ ರೇಪ್
👉🏼 ಬೆಂಗಳೂರಿನಲ್ಲಿ ಪುಂಡರ ವೀಲಿಂಗ್
👉🏼 ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಗೂಂಡಾಗಿರಿ
👉🏼 ರಾಜಧಾನಿಯಲ್ಲಿ ಪೊಲೀಸರ ಅಫ���ತಾ ವಸೂಲಿ
👉🏼ರಾಜ್ಯದಲ್ಲಿ ಮಿತಿ ಮೀರಿದ ಮತಾಂಧರ ಹಾವಳಿ
👉🏼 ಪ್ರತಿದಿನ ಗಾಂಜಾ, ಡ್ರಗ್ಸ್ ರಾಜ್ಯದಲ್ಲಿ ಹೆಚ್ಚಳ
ಈ ಎಲ್ಲಾ ವಿಚಾರಗಳ ಬಗ್ಗೆ ನಾವು ನಿಮಗೆ ಎಚ್ಚರಿಸುತ್ತಲೇ ಇದ್ದೇವೆ. ನಿಮ್ಮ ಗಮನಕ್ಕೆ ಬಂದಿದೆಯೇ? ಕೊನೆಯ ಪಕ್ಷ ಗೊತ್ತಿದೆಯೇ? 'ಟ್ವಿಟರ್ ಮಹಾಶಯರೇ, ಉತ್ತರಿಸಿ!
#CongressFailsKarnataka
ಡಿಜಿಟಲ್ ಮಾಧ್ಯಮದ ಮೂಲಕ ಸಬಲೀಕರಣ - ಒಂದು ಹೊಸ ಮ���ಲುಗಲ್ಲು! 💻
ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ 125 ನೇ ಜಯಂತಿ ಸ್ಮರಣಾರ್ಥ ನಡೆದ 'ಪಂಡಿತ ದೀನದಯಾಳ್ ಉಪಾಧ್ಯಾಯ ಡಿಜಿಟಲ್ ತರಬೇತಿ ಮಹಾ ಅಭಿಯಾನ' (23 ಜೂನ್ – 6 ಜುಲೈ, 2026) ಯಶಸ್ಸಿನ ಹೊಸ ಇತಿಹಾಸವನ್ನು ನಿರ್ಮಿಸಿದೆ!
✅ 11.65 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಡಿಜಿಟಲ್ ಕಲಿಕಾ ವೇದಿಕೆಗೆ (DLP) ಸೇರ್ಪಡೆಗೊಂಡು ಹೊಸ ದಾಖಲೆ ನಿರ್ಮಿಸಿದ್ದಾರೆ.
✅ 75% ಯಶಸ್ಸಿನ ಪ್ರಮಾಣದೊಂದಿಗೆ 8.8 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ತಮ್ಮ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಪ್ರಮಾಣಪತ್ರವನ್ನು ಪಡೆದಿದ್ದಾರೆ.
ತಂತ್ರಜ್ಞಾನ ಮತ್ತು ರಾಷ್ಟ್ರಸೇವೆಯ ಈ ವಿಶಿಷ್ಠ ಸಂಗಮದ ಭಾಗವಾದ ಎಲ್ಲಾ ಶ್ರಮಜೀವಿ ಕಾರ್ಯಕರ್ತರಿಗೆ ಹೃತ್ಪೂರ್ವಕ ಅಭಿನಂದನೆಗಳು! 🪷
#DigitalLearningPlatform
ಹಳೆ ಘಟನೆಗಳನ್ನು ಮರೆತು ಜೊತೆಯಾಗಿ ನಾವೆಲ್ಲರೂ ಕೆಲಸ ಮಾಡುತ್ತೇವೆ. ಸ್ಥಳೀಯ ಚುನಾವಣೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡುತ್ತೇವೆ.
ಪರಸ್ಪರ ಭಿನ್ನಾಭಿಪ್ರಾಯ ಮರೆತು ಭಾರತೀಯ ಜನತಾ ��ಕ್ಷವನ್ನು ನಮ್ಮ ಭಾಗದಲ್ಲಿ ಸದೃಢವಾಗಿ ಕಟ್ಟುತ್ತೇವೆ.
#BJP4Karnataka
ಒಳ ಮೀಸಲಾತಿಯ ಅವೈಜ್ಞಾನಿಕ ಹಂಚಿಕೆಯ ಮೂಲಕ ಬಂಜಾರ ಸಮಾಜದ ಮೇಲೆ ಸೇಡಿನ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಾಗಲಕೋಟೆ ಕ್ಷೇತ್ರದಲ್ಲಿ ದಿಕ್ಸೂಚಿ ಬಂಜಾರ–ಕರ್ನಾಟಕ ವತಿಯಿಂದ "ನಮ್ಮ ಮೀಸಲಾತಿ, ನಮ್ಮ ಹಕ್ಕು" ಜ��ಾಂದೋಲನ ಜಾಗೃತಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಪ್ರಭು ಚೌವ್ಹಾಣ್, ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್, ಪ್ರಮುಖರಾದ ಶ್ರೀ ಮಣಿಕಂಠ ರಾಥೋಡ್, ಚಿಂತನಾ ಯಾತ್ರೆಯ ರಾಜ್ಯ ಸಂಯೋಜಕರಾದ ಶ್ರೀ ಎಸ್. ಪಿ. ಲಿಂಬ್ಯನಾಯ್ಕ, ಬಂಜಾರ ಸಮಾಜದ ಜಿಲ್ಲಾಧ್ಯಕ್ಷರಾದ ಶ್ರೀ ಹೂವಪ್ಪ ರಾಥೋಡ್, ಮುಖಂಡರಾದ ಶ್ರೀ ರವಿ ಸಾಹುಕಾರ್, ಶ್ರೀ ಆರ್. ಕೆ. ಚವ್ಹಾಣ್, ಸಾಮಾಜಿಕ ಜಾಲತಾಣ ಪ್ರಮುಖರಾದ ಶ್ರೀ ಮಂಜ್ಯಾನಾಯ್ಕ ಹರಿಹರ, ಶ್ರೀ ಹನುಮನಾಯ್ಕ, ಶ್ರೀ ದಿಲೀಪ್ ರಾಥೋಡ್ ಮತ್ತು ಪ್ರಮುಖರು ಉಪಸ್ಥಿತರಿದ್ದರು.
ಹೈಸ್ಕೂಲ್ ಮ��್ಕಳಿಗೆ ಅಕ್ಕಿ ನೀಡಲು ಯೋಗ್ಯತೆಯೇ ಇಲ್ಲದ ಸರ್ಕಾರವೆಂದರೆ ಅದು @INCKarnataka ಸರ್ಕಾರ!!
ಪ್ರಾಥಮಿಕ ಶಾಲಾ ಮಕ್ಕಳಿಗೆ ಮೀಸಲಾದ ಅಕ್ಕಿಯನ್ನೇ ಕಿತ್ತು ಹೈಸ್ಕೂಲ್ ಮಕ್ಕಳಿಗೆ ನೀಡುತ್ತಿದೆ. ಇದರಿಂದ ಪ್ರಾಥಮಿಕ ಶಾಲಾ ಮಕ್ಕಳಿಗೂ ಹೊಟ್ಟೆ ತುಂಬುತ್ತಿಲ್ಲ; ಅತ್ತ ಹೈಸ್ಕೂಲ್ ಮಕ್ಕಳಿಗೂ ಹೊಟ್ಟೆ ತುಂಬುತ್ತಿಲ್ಲ.
ಮಕ್ಕಳಿಗೆ ಅರೆಹೊಟ್ಟೆ ಊಟ ನೀಡುತ್ತಿರುವ ಸಿಎಂ @DKShivakumar ಅವರಿಗೆ ಧಿಕ್ಕಾರ.
#CongressFailsKarnataka
ಸಚಿವ ಸಂಪುಟ ವಿಸ್ತರಣೆಯಾದರೆ @INCKarnataka ಸರ್ಕಾರ ಸ್ವಲ್ಪ ಮಟ್ಟಿಗಾದರೂ ಅಲುಗಾಡಲಿದೆ ಎಂಬುದನ್ನು ಸಚಿವ @JarkiholiSatish ಅವರೇ ಒಪ್ಪಿಕೊಂಡಿದ್ದಾರೆ.
ಅಲ್ಲಿಗೆ, ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಮತ್ತೊಂದು ರೀತಿಯ #CongressVsCongress ನಡೆಯಲಿರುವುದು ಖಚಿತ, ನಿಶ್ಚಿತ, ಖಂಡಿತ!
#ಕೈಕಚ್ಚಾಟ
ಪರಮಾಣು ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ-ಆಸ್ಟ್ರೇಲಿಯಾ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಒಪ್ಪಂದ ಆಸ್ಟ್ರೇಲಿಯಾದಿಂದ ಭಾರತಕ್ಕೆ ಯುರೇನಿಯಂ ಪೂರೈಕೆಗೆ ಅನುವು ಮಾಡಿಕೊಡುತ್ತದೆ ಮತ್ತು ನಮ್ಮ ಶುದ್ಧ ಇಂಧನ ಉದ್ದೇಶಗಳಿಗೆ ಹೊಸ ಶಕ್ತಿಯನ್ನು ನೀಡುತ್ತದೆ.
- ಪ್ರಧಾನಿ ಶ್ರೀ @narendramodi#ModiInAustralia
ಆಂತರಿಕ ಹಗ್ಗಜಗ್ಗಾಟದಿಂದಾಗಿ ಸಚಿವ ಸಂಪುಟವನ್ನೇ ಪುನರಚಿಸಲಾಗದ ಸ್ಥಿತಿಗೆ ತಲುಪಿದೆ @INCKarnataka ಸರ್ಕಾರ!
ನಾಯಕತ್ವ ಬದಲಾದ���ೂ ಅಸ್ಥಿರತೆ ಮುಂದುವರಿದಿದೆ, ಸಚಿವ ಸಂಪುಟ ಪುನರಚನೆ ಮಾಡಲಾಗದಿರುವುದು ದುರ್ಬಲ ಆಡಳಿತಕ್ಕೆ ಸಾಕ್ಷಿ. @DKShivakumar ಸರ್ಕಾರ ಮುಳುಗುವುದರಲ್ಲಿ ಯಾವುದೇ ಸಂಶಯವಿಲ್ಲ!
#CongressFailsKarnataka
𝐓𝐡𝐞 𝐰𝐨𝐫𝐥𝐝 𝐢𝐬 𝐩𝐥𝐚𝐜𝐢𝐧𝐠 𝐢𝐭𝐬 𝐭𝐫𝐮𝐬𝐭 𝐢𝐧 𝐈𝐧𝐝𝐢𝐚'𝐬 𝐭𝐞𝐜𝐡𝐧𝐨𝐥𝐨𝐠𝐢𝐜𝐚𝐥 𝐜𝐚𝐩𝐚𝐛𝐢𝐥𝐢𝐭𝐢𝐞𝐬. 🇮🇳
Australia will establish a space tracking terminal on the Cocos (Keeling) Islands to support the Gaganyaan mission, marking another significant milestone in India's human spaceflight journey.
When nations invest in critical infrastructure for India's space missions, it reflects the growing confidence in the capabilities, credibility and global stature of New India's space programme.
𝐖𝐚𝐭𝐜𝐡. 🔽
ಮುಖ್ಯಮಂತ್ರಿ ಬದಲಾದರೂ...
ಕಾಂಗ್ರೆಸ್ ಸರ್ಕಾರದ ಹಣೆಬರಹ ಬದಲಾಗುವುದಿಲ್ಲ!
❌ ಗ್ಯಾರಂಟಿಗಳ ಅನುಷ್ಠಾನದಲ್ಲಿ ಗೊಂದಲ
❌ ಒಂದೇ ಒಂದು ಹೊಸ ಜನಪರ ಯೋಜನೆ ಇಲ್ಲ
❌ ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಕೊರತೆ
❌ ರೈತರ ಸಂಕಷ್ಟಕ್ಕೆ ಸಮರ್ಪಕ ಸ್ಪಂದನೆ ಇಲ್ಲ
❌ ಬಡವರ ನೋವಿಗೆ ಕಿವಿಗೊಡದ ಆಡಳಿತ
ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಜನಸಾಮಾನ್ಯರು ಹೇಳುತ್ತಿದ್ದಾರೆ "ಕಾಂಗ್ರೆಸ್ ಗ್ಯಾರಂಟಿ ಪಕ್ಕಾ 420!"
#CongressFailsKarnataka
ಕಳೆದ ಒಂದು ವಾರದಲ್ಲಿಯೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದ ಮೂರನೇ ಘಟನೆ ಇದಾಗಿದೆ.
ರಾತ್ರಿ ವೇಳೆ ಕುಡಿದು ರಸ್ತೆಗೆ ಇಳಿಯುವ ಪುಂಡರು ಕಾರು, ಬಸ್ ಸೇರಿದಂತೆ ವಾಹನ ಚಾಲಕರು, ಕುಟುಂಬಸ್ಥರ ಮೇಲೆ ಹಲ್ಲೆ, ದೌರ್ಜನ್ಯ ಎಸಗುತ್ತಲೇ ಇದ್ದಾರೆ. ಆದರೂ ಗ್ರಹ ಸಚಿವ @PriyankKharge ರಿಜಿಸ್ಟರ್, ಅನುಮತಿ ಕಡ್ಡಾಯ ಅಂತ ಟ್ವೀಟ್ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ.
ಸಿಎಂ @DKShivakumar ಅವರೇ, ಕೊತ್ವಾಲ್ ಸಂಸ್ಕೃತಿ ರಾಜ್ಯದಲ್ಲಿ ಹೆಚ್ಚಳವಾಗುತ್ತಿದ್ದರೂ ನೀವು ಮೌನವಾಗಿರುವುದೇಕೆ?
#CongressFailsKarnataka
ಭಾರತ–ಆಸ್ಟ್ರೇಲಿಯಾ ಸಮಗ್ರ ಕಾರ್ಯತಾಂತ್ರಿಕ ಪಾಲುದಾರಿಕೆಗೆ ಮತ್ತಷ್ಟು ಬಲ !
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಮೂರನೇ ��ಾರ್ಷಿಕ ಶೃಂಗಸಭೆ ನಡೆಸಿದರು.
ಈ ಶೃಂಗಸಭೆಯಲ್ಲಿ ರಕ್ಷಣೆ, ಕಡಲ ಭದ್ರತೆ, ಪರಮಾಣು ಶಕ್ತಿ ಸೇರಿದಂತೆ ಇಂಧನ, ಪ್ರಮುಖ ತಂತ್ರಜ್ಞಾನಗಳು, ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಪರಸ್ಪರ ಸಹಕಾರದ ಹಲವು ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದ ಅನೇಕ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
#ModiInAustralia
ರಾಜ್ಯದಲ್ಲಿ ಲಕ್ಷಾಂತರ ರೈತರು, ಕೃಷಿ ಕಾರ್ಮಿಕರು, ಗ್ರಾಮೀಣ ಕುಟುಂಬಗಳು ಸಂಕಷ್ಟದಲ್ಲಿದ್ದು ರಾಜ್ಯ ಸರ್ಕಾರ ತುರ್ತು ನೆರವು ಬಿಡುಗಡೆ ಮಾಡಬೇಕು.
ಇತ್ತೀಚೆಗೆ ಬರಪೀಡಿತ ರೈತರ ಸಾಲಮನ್ನಾ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿದ್ದ ಕಾಂಗ್ರೆಸ್ ಸರ್ಕಾರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ರೈತರಿಗೆ ಈಗ ಬೇಕಾಗಿರುವುದು ಪರಿಶೀಲನೆ ಅಲ್ಲ, ತಕ್ಷಣದ ನಿರ್ಧಾರ. ಆದ್ದರಿಂದ ವಿಳಂಬ ಮಾಡದೆ ಬರ ಮತ್ತು ಪ್ರವಾಹ ಸಂತ್ರಸ್ತ ಎಲ್ಲಾ ರೈತರಿಗೆ 50 ಸಾವಿರ ರೂಪಾಯಿವರೆಗೆ ಸಾಲಮನ್ನಾ ಘೋಷಿಸಿ ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು.
- ಶ್ರೀ @RAshokaBJP, ಪ್ರತಿಪಕ್ಷ ನಾಯಕರು
#CongressFailsKarnataka #RaithaVirodhiCongress
ರಾಜ್ಯದಲ್ಲಿ ಒಂದೆಡೆ ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ರೈತರು ಕ್ಯೂ ನಿಲ್ಲಬೇಕು. ಮತ್ತೊಂದೆಡೆ ಹವಾಮಾನ ವೈಪರೀತ್ಯ, ಕೀಟಬಾಧೆಯಿಂದ ಬೆಳೆ ನಾಶವಾದರೆ ಸಂಕಷ್ಟ ಆಲಿಸಲು ಕೃಷಿ ಇಲಾಖೆಯಲ್ಲಿ ಸಿಬ್ಬಂದಿಯೇ ಇಲ್ಲ!
ಸಿಎಂ @DKShivakumar ಅವರೇ, 6000 ಹುದ್ದೆಗಳನ್ನು ಖಾಲಿ ಇಟ್ಟುಕೊಂಡು ರೈತರ ಹಿತ ಕಾಯುತ್ತೇವೆ ಎನ್ನುವುದು ಬರೀ ಬೂಟಾಟಿಕೆ.
ಅನ್ನದಾತನಿಗೆ ಸಕಾಲಕ್ಕೆ ತಾಂತ್ರಿಕ ಸಲಹೆ, ಪರಿಹಾರ ಸಿಗದೆ ಕೃಷಿ ವಲಯ ತತ್ತರಿಸುತ್ತಿದೆ. ನಿಮ್ಮ ಸರ್ಕಾರ ಕಣ್ಣು ಬಿಡುವುದು ಯಾವಾಗ?
6000 ಹುದ್ದೆಗಳನ್ನು ಖಾಲಿ ಇಟ��ಟುಕೊಂಡು ಅನ್ನದಾತರನ್ನು ಬೀದಿಗೆ ತಳ್ಳಿರುವ @INCKarnataka ಸರ್ಕಾರಕ್ಕೆ ರೈತರ ಶಾಪ ತಟ್ಟದೆ ಇರದು.
#RaithaVirodhiCongress
#CongressFailsKarnataka
ಕ್ಯಾಬಿನೆಟ್ ವಿಸ್ತರಣೆಗೆ ಮುಂದಾದರೆ ಸರ್ಕಾರದ ಬುಡ ಅಲ್ಲಾಡುತ್ತದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷರ ಭವಿಷ್ಯವಾಣಿ ನಿಜವಾಗುತ್ತಿದೆ. ಸರ್ಕಾರಕ್ಕೆ ಗಂಡಾಂತರದ ಮುನ್ಸೂಚನೆಯ ಬೆನ್ನಲ್ಲೇ ಸಿಎಂ ಬಣ ಡಿನ್ನರ್ ಮೀಟಿಂಗ್ ನಡೆಸಿದೆ. ಸಚಿವ ಸ್ಥಾನದ ಕಚ್ಚಾಟದಿಂದ ಕಾಂಗ್ರೆಸ್ ಸರ್ಕಾರ ಕುಸಿದು ಬೀಳುವುದು ನಿಶ್ಚಿತ.
#CongressFailsKarnataka