ಇಂದಿನ ವಿಶೇಷ ಅತಿಥಿ..!
ಇಂದು ನವದೆಹಲಿಯ ನನ್ನ ನಿವಾಸಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ನಮ್ಮ ರಾಷ್ಟ್ರದ ಹೆಮ್ಮೆಯ ರಾಷ್ಟ್ರೀಯ ಪಕ್ಷಿ ನವಿಲಿಗೆ ಕಾಳು ಮತ್ತು ನೀರುಣಿಸುವ ಸೌಭಾಗ್ಯ ದೊರೆಯಿತು.
ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವುದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಪಕ್ಷಿ-ಪ್ರಾಣಿಗಳ ಸಂರಕ್ಷಣೆ ಮತ್ತು ಅವುಗಳ ಮೇಲಿನ ಕಾಳಜಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ.
Karnataka's drinking water and the interests of our farmers must come first.
The water available in our reservoirs is barely sufficient to meet our own drinking water needs. Under these circumstances, the state government should not release Kaveri water to Tamil Nadu.
Our case before the CWMA must be argued forcefully and backed by facts. A weak presentation only weakens Karnataka's position and invites repeated pressure.
When we were in government, we stood firm in protecting Karnataka's interests. The present government must show the same resolve by safeguarding our farmers, securing our drinking water needs, and pursuing the legal battle with determination.
#Cauvery #Karnataka #Kaveri
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ನನ್ನ ನೇತೃತ್ವದ ಬಿಜೆಪಿ ಸಂಸದರ ನಿಯೋಗ ಇಂದು ನವ ದೆಹಲಿಯಲ್ಲಿ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಭೇಟಿ ಮಾಡಿ ಕರ್ನಾಟಕದ ನೀರಾವರಿ ಯೋಜನೆಗಳ ಕುರಿತು ಚರ್ಚೆ ಮಾಡಿದರು. ಅಲ್ಲದೇ ಕರ್ನಾಟಕದಲ್ಲಿ ಮಳೆಯ ಕೊರತೆಯಿಂದ ಬರದ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿ ಕೇಂದ್ರ ಸರ್ಕಾರ ಸಹಕಾರ ನೀಡುವಂತೆ ಕೋರಿದೆವು.
ಈ ವೇಳೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಶ್ರೀ @JagadishShettar , ಶ್ರೀ @govind_karjol , ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಶ್ರೀ ಪಿ.ಸಿ. ಮೋಹನ್ ಹಾಗೂ ಶ್ರೀ ಪಿ.ಸಿ. ಗದ್ದಿಗೌಡರ ಉಪಸ್ಥಿತರಿದ್ದರು.
@CRPaatil@JoshiPralhad@BJP4Karnataka
ಭೌತಶಾಸ್ತ್ರ, ಸಸ್ಯಶಾಸ್ತ್ರ ಸೇರಿದಂತೆ ವಿಜ್ಞಾನದ ಅನೇಕ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆಗೈದ ಭಾರತದ ಹೆಮ್ಮೆಯ ವಿಜ್ಞಾನಿ ಶ್ರೀ ಜಗದೀಶ್ ಚಂದ್ರ ಬೋಸ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
ಅವರ ಸಂಶೋಧನೆಗಳು ಮುಂದಿನ ಪೀಳಿಗೆಗಳಿಗೆ ಸದಾ ಸ್ಫೂರ್ತಿಯಾಗಲಿ.
#JagadishChandraBose
ಪ್ರತಿ ಲೀಟರ್ ಇಥನಾಲ್ - ನಮ್ಮ ರೈತನಿಗೆ ಆಸರೆ!
E-20 ಇಂಧನ ನೀತಿಯಿಂದ ₹1.66 ಲಕ್ಷ ಕೋಟಿ ನೇರವಾಗಿ ರೈತರ ಕೈಸೇರಿದೆ ಮತ್ತು ದೇಶಕ್ಕೆ ₹1.97 ಲಕ್ಷ ಕೋಟಿಯಷ್ಟು ವಿದೇಶಿ ವಿನಿಮಯ ಉಳಿತಾಯವಾಗಿದೆ. ಸುಳ್ಳು ಸುದ್ಧಿಗಳಿಗೆ ಕಿವಿಗೊಡದಿರಿ, ಸತ್ಯವನ್ನು ತಿಳಿಯಿರಿ!
#EthanolBlending#FarmersFirst#AtmanirbharBharat#E20
ಯುಪಿಐ : ಭಾರತದ ನಿಜವಾದ ಡಿಜಿಟಲ್ ಶಕ್ತಿ ! 🇮🇳
ಒಂದು ಕಾಲದಲ್ಲಿ ನಗದು ಮಾತ್ರ ಬಳಕೆಯಲ್ಲಿತ್ತು, ಆದರೆ ಇಂದು, ಕೇವಲ ಒಂದು "ಸ್ಕ್ಯಾನ್ ಮತ್ತು ಪೇ" ಲಕ್ಷಾಂತರ ಭಾರತೀಯರ ಜೀವನವನ್ನು ಸುಲಭಗೊಳಿಸಿದೆ.
✅ 55.49 ಕೋಟಿಗೂ ಅಧಿಕ ಬಳಕೆದಾರರು
✅ 24,161.69 ಕೋಟಿಗೂ ಅಧಿಕ ವಹಿವಾಟುಗಳು
✅ ಒಟ್ಟು ವಹಿವಾಟು ಮೌಲ್ಯ ₹314.23 ಲಕ್ಷ ಕೋಟಿ
ತರಕಾರಿ ಮಾರಾಟಗಾರರಿಂದ ಹಿಡಿದು ದೊಡ್ಡ ಮಾಲ್ಗಳವರೆಗೆ, ಯುಪಿಐ ದೇಶದ ಮೂಲೆ ಮೂಲೆಯನ್ನು ಸಂಪರ್ಕಿಸಿದೆ ಮತ್ತು ಭಾರತವು ಈಗ ಡಿಜಿಟಲ್ ಪಾವತಿಗಳಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ.
ಪ್ರತಿಯೊಂದು ಪಾವತಿ ಸುಲಲಿತಗೊಂಡಿದೆ... ಪ್ರತಿಯೊಂದು ವಹಿವಾಟು ಡಿಜಿಟಲ್ ಆಗಿದೆ ! 🤳🏻
#UPI #ViksitBharat
ವಿಶ್ವ ಹುಲಿ ದಿನದ ಶುಭಾಶಯಗಳು.
ಈ ವಿಶ್ವ ಹುಲಿ ದಿನದಂದು ಹುಲಿಗಳ ಸಂರಕ್ಷಣೆ, ಅರಣ್ಯಗಳ ರಕ್ಷಣೆ ಮತ್ತು ಪ್ರಕೃತಿಯ ಉಳಿವಿಗಾಗಿ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸುವ ದೃಢ ಸಂಕಲ್ಪ ಮಾಡೋಣ.
#WorldTigerDay
ಪ್ರಧಾನಿ ಶ್ರೀ @narendramodi ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಆತ್ಮನಿರ್ಭರ ಭಾರತಕ್ಕಾಗಿ ರಾಷ್ಟ್ರೀಯ ಯೂರಿಯ ಹೂಡಿಕೆ ನೀತಿ 2026 ಕ್ಕೆ ಅನುಮೋದನೆ ನೀಡಿದೆ.
ದೇಶದಲ್ಲಿ ಅನಿಲ ಆಧಾರಿತ ಯೂರಿಯಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಸಲುವಾಗಿ ಯೂರಿಯಾ ವಲಯದಲ್ಲಿ ಹೊಸ ಹೂಡಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಈ ನೀತಿ ಹೊಂದಿದೆ. ವಿದೇಶಿ ಆಮದಿನ ಮೇಲಿನ ಅವಲಂಬನೆಯನ್ನು ತಗ್ಗಿಸಿ ದೇಶದಲ್ಲೇ ರಸಗೊಬ್ಬರ ಭದ್ರತೆ ಕಾಪಾಡಲಾಗುತ್ತದೆ.
ಪ್ರಸ್ತುತ ಭಾರತವು ತನ್ನ ವಾರ್ಷಿಕ ಯೂರಿಯಾ ಅಗತ್ಯದ ಸುಮಾರು ನಾಲ್ಕನೇ ಒಂದು ಭಾಗವನ್ನು ಆಮದು ಮಾಡಿಕೊಳ್ಳುತ್ತಿದೆ. ಮುಂದಿನ ವರ್ಷಗಳಲ್ಲಿ ಯೂರಿಯಾ ಬೇಡಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ, ದೇಶೀಯ ಉತ್ಪಾದನೆಯನ್ನು ವಿಸ್ತರಿಸುವ ಈ ನಿರ್ಧಾರವು ಆಹಾರ ಭದ್ರತೆ, ರೈತರ ಹಿತ ಹಾಗೂ ರಾಷ್ಟ್ರದ ಸ್ವಾವಲಂಬನೆ ದೃಷ್ಟಿಯಿಂದ ಅತ್ಯಂತ ಮಹತ್ತರವಾಗಲಿದೆ.
#ModiWithFarmers
ಪರೀಕ್ಷಾ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ವಂಚಕರಿಗೆ ಆಗಲಿದೆ ಕಠಿಣ ಶಿಕ್ಷೆ !⚖️
✅ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹10 ಕೋಟಿವರೆಗೆ ದಂಡ
✅ಆರೋಪಪಟ್ಟಿ ಸಲ್ಲಿಸಿದ 3 ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸುವ ಗುರಿ
✅ ಪರೀಕ್ಷಾ ಕೇಂದ್ರಗಳು ಮತ್ತು ಡಿಜಿಟಲ್ ವ್ಯವಸ್ಥೆಗಳ ಮೇಲೆ ಸೂಕ್ಷ್ಮ ಕಣ್ಗಾವಲು
ಕಷ್ಟಪಟ್ಟು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಣೆಗೆ ಬದ್ಧವಾಗಿದೆ ಮೋದಿ ಸರ್ಕಾರ ! 💪
🌿 ವಿಶ್ವ ಪ್ರಕೃತಿ ಸಂರಕ್ಷಣಾ ದಿನ 🌿
ಪ್ರಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ರಾಷ್ಟ್ರೀಯ ಕರ್ತವ್ಯ. ಪಕ್ಷಿಗಳು, ಮರಗಳು ಮತ್ತು ಜೀವವೈವಿಧ್ಯವನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಹಸಿರು, ಸ್ವಚ್ಛ ಹಾಗೂ ಸಮೃದ್ಧ ಭಾರತವನ್ನು ನಿರ್ಮಿಸೋಣ.
ಪ್ರಕೃತಿ ಉಳಿದರೆ ಭವಿಷ್ಯ ಉಳಿಯುತ್ತದೆ, ಹಸಿರು ಭಾರತವೇ ವಿಕಸಿತ ಭಾರತದ ಅಡಿಪಾಯ.
#WorldNatureConservationDay
ದೇಶದ ಭದ್ರತೆಯ ಹೆಮ್ಮೆಯ ಕಾವಲುಗಾರರಾದ ಎಲ್ಲಾ ಸಿ.ಆರ್.ಪಿ.ಎಫ್ (CRPF) ಯೋಧರಿಗೆ ಸಂಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳು.
ಭಯೋತ್ಪಾದನೆ, ನಕ್ಸಲ್ ವಿರೋಧಿ ಕಾರ್ಯಾಚರಣೆಗಳು ಹಾಗೂ ಆಂತರಿಕ ಭದ್ರತೆಯನ್ನು ಬಲಪಡಿಸುವಲ್ಲಿ ನಿಮ್ಮ ಶೌರ್ಯ, ತ್ಯಾಗ ಮತ್ತು ರಾಷ್ಟ್ರಸೇವೆಯ ಮನೋಭಾವ ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆ.
#CRPF #CRPFFoundationDay
ಭಾರತದ ಮಾಜಿ ರಾಷ್ಟ್ರಪತಿಗಳು, ವಿಶ್ವಪ್ರಸಿದ್ಧ ವಿಜ್ಞಾನಿ ಹಾಗೂ 'ಭಾರತದ ಮಿಸೈಲ್ ಮ್ಯಾನ್' ಎಂದೇ ಚಿರಪರಿಚಿತರಾದ ಭಾರತ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.
#APJAbdulKalam
"ಸಾಮಾನ್ಯ ಜನರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ದೊರಕಲು ಆರೋಗ್ಯ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆ ಅಗತ್ಯ"
ಸಾಮಾನ್ಯ ಜನರಿಗೆ ಸುಲಭವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ದೊರಕಬೇಕಾದರೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆಗಳನ್ನು ಜಾರಿಗೆ ತರುವುದು ಅನಿವಾರ್ಯ. 'ವಿಜಯ ಕರ್ನಾಟಕ' ಪತ್ರಿಕೆ ಆಯೋಜಿಸಿದ್ದ ವಿಕೆ ಹೆಲ್ತ್ ಎಕ್ಸಲೆನ್ಸ್ ಆಂಡ್ ಆನರ್ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೆನು.
ವೈದ್ಯಕೀಯ ಕ್ಷೇತ್ರವು ತಂತ್ರಜ್ಞಾನದೊಂದಿಗೆ ಮಾನವೀಯ ಮೌಲ್ಯಗಳನ್ನೂ ಸಮಾನವಾಗಿ ಉಳಿಸಿಕೊಳ್ಳಬೇಕು. ಇಂದಿನ ವೈದ್ಯಕೀಯ ಪದ್ಧತಿಯಲ್ಲಿ ಯಂತ್ರಗಳು ಮತ್ತು ರೋಗನಿರ್ಣಯ ಪರೀಕ್ಷೆಗಳಿಗೆ ಹೆಚ್ಚಿನ ಮಹತ್ವ ಸಿಗುತ್ತಿದ್ದು, ವೈದ್ಯರು ರೋಗಿಯೊಂದಿಗೆ ಕಳೆಯುವ ಸಮಯ ಕಡಿಮೆಯಾಗುತ್ತಿದೆ. ರೋಗಿಯ ಆತಂಕವನ್ನು ನಿವಾರಿಸುವ ವೈದ್ಯರ ಆತ್ಮೀಯ ಮಾತುಗಳೇ ಚಿಕಿತ್ಸೆಯ ಮಹತ್ವದ ಭಾಗ. ಹಿಂದೆ ಇದ್ದ ಕುಟುಂಬ ವೈದ್ಯರ ಮಾದರಿಯ ಆತ್ಮೀಯತೆ ಮತ್ತೆ ಬೆಳೆಯಬೇಕಿದೆ
ಕಳೆದ ಹತ್ತು ವರ್ಷಗಳಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದರೂ ಸ್ಪರ್ಧೆ ಕಡಿಮೆಯಾಗಿಲ್ಲ. ವೈದ್ಯಕೀಯ ಶಿಕ್ಷಣದ ವೆಚ್ಚ ದಿನದಿಂದ ದಿನಕ್ಕೆ ಏರುತ್ತಿದ್ದು, ಅದರ ಪರಿಣಾಮ ಸಾಮಾನ್ಯ ಜನರ ಚಿಕಿತ್ಸಾ ವೆಚ್ಚದ ಮೇಲೂ ಬೀಳುತ್ತಿದೆ. ಕೋಚಿಂಗ್ ಸಂಸ್ಕೃತಿ ಅತಿಯಾಗಿ ಬೆಳೆಯುತ್ತಿರುವುದು ಆತಂಕದ ವಿಷಯವಾಗಿದೆ. ವೈದ್ಯಕೀಯ ಶಿಕ್ಷಣ ಎಲ್ಲರಿಗೂ ಕೈಗೆಟುಕುವಂತಾದಾಗ ಮಾತ್ರ ಆರೋಗ್ಯ ಸೇವೆಯೂ ಕೈಗೆಟುಕುವಂತಾಗಲಿದೆ
ಇಂದು ನಗರ ಪ್ರದೇಶಗಳು ಹಾಗೂ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರೀಕೃತರಾಗಿರುವುದರಿಂದ ಗ್ರಾಮೀಣ ಪ್ರದೇಶಗಳು ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಎದುರಾಗಿದೆ. ಈ ಅಸಮಾನತೆಯನ್ನು ನಿವಾರಿಸಿ ಗ್ರಾಮೀಣ ಭಾಗಕ್ಕೂ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸುವುದು ಸರ್ಕಾರಗಳ ಆದ್ಯತೆಯಾಗಬೇಕು.
ಆರೋಗ್ಯ ಕ್ಷೇತ್ರಕ್ಕೆ ವಿದೇಶಿ ಹೂಡಿಕೆಗಳು ಬರಬಹುದು. ಆದರೆ ಭಾರತದ ಜನರ ಚಿಕಿತ್ಸಾ ವೆಚ್ಚವನ್ನು ವಿದೇಶದಲ್ಲಿ ಕುಳಿತು ಯಾರೂ ನಿರ್ಧರಿಸುವಂತಾಗಬಾರದು. ನಮ್ಮ ದೇಶದ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಆರೋಗ್ಯ ನೀತಿಗಳು ರೂಪುಗೊಳ್ಳಬೇಕು.
ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಂಗಳೂರಿನಲ್ಲಿ 184 ಹಾಗೂ ರಾಜ್ಯಾದ್ಯಂತ 400 **'ನಮ್ಮ ಕ್ಲಿನಿಕ್'**ಗಳನ್ನು ಆರಂಭಿಸಿದ್ದನ್ನು ಸ್ಮರಿಸಿದೆ. ಅಲ್ಲದೆ, ಹುಬ್ಬಳ್ಳಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಹಾಗೂ ಬೆಳಗಾವಿಯಲ್ಲಿ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ಶಾಖೆಗಳನ್ನು ಆರಂಭಿಸಲು ಕೈಗೊಂಡ ಪ್ರಯತ್ನಗಳನ್ನು ಉಲ್ಲೇಖಿಸಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಆಯುಷ್ಮಾನ್ ಭಾರತ್ ಹಾಗೂ ಜನೌಷಧಿ ಯೋಜನೆಗಳು ಸಾಮಾನ್ಯ ಜನರಿಗೆ ಆರೋಗ್ಯ ಸೇವೆಯನ್ನು ಮತ್ತಷ್ಟು ಸುಲಭಗೊಳಿಸಿರುವುದನ್ನು ಶ್ಲಾಘಿಸಿದೆ.
ವೈದ್ಯಕೀಯ ವೃತ್ತಿ ಕೇವಲ ಉದ್ಯೋಗ ಅಥವಾ ಹಣ ಗಳಿಸುವ ಸಾಧನವಾಗಬಾರದು. ಅದು ಮಾನವನ ನೋವನ್ನು ನಿವಾರಿಸುವ ಅತ್ಯಂತ ಪವಿತ್ರ ಸೇವೆಯಾಗಿದೆ. ಯಶಸ್ಸಿಗಿಂತ ನಿರಂತರ ಸೇವೆಯೇ ನಿಜವಾದ ಸಾಧನೆ. ಬಡವರ ನೋವಿಗೆ ಸ್ಪಂದಿಸಿ, ಅವರ ಬದುಕಿನಲ್ಲಿ ನಗು ಮೂಡಿಸುವ ಕೆಲಸವನ್ನು ವೈದ್ಯರು ಮುಂದುವರಿಸಬೇಕು. ಉತ್ತರ ಕರ್ನಾಟಕದ ಜನರು ಚಿಕಿತ್ಸೆಗಾಗಿ ಬೆಂಗಳೂರಿಗೆ ಬರಬೇಕಾದ ಪರಿಸ್ಥಿತಿ ಕಡಿಮೆಯಾಗುವಂತೆ ಅಲ್ಲಿಯೇ ಉತ್ತಮ ಆರೋಗ್ಯ ಸೌಲಭ್ಯಗಳು ಅಭಿವೃದ್ಧಿಯಾಗಬೇಕು.
@Vijaykarnataka
Interacting with the participants of the Viksit Vibrant Village Programme. Great to see that the initiative is instilling a deeper sense of nation-building among the youth.
#Youth4ViksitBharat#MYBharat https://t.co/2vCFle03vY
‘Catch The Rain’ is a simple message: conserve every drop of rain where it falls. Let us make rainwater harvesting, groundwater recharge, revival of old water sources, and tree plantation a people’s movement.
— PM Shri @narendramodi Ji.
#MannKiBaat
ಕಾರ್ಗಿಲ್ ವಿಜಯ ದಿವಸವು ಭಾರತದ ಶೌರ್ಯ, ಸಂಕಲ್ಪ ಮತ್ತು ತ್ಯಾಗದ ಅಮರ ಗಾಥೆಯನ್ನು ಸ್ಮರಿಸುವ ದಿನ.
ಅಸಾಧ್ಯವೆನಿಸಿದ ಸವಾಲುಗಳ ನಡುವೆಯೂ ಶತ್ರುಗಳನ್ನು ಮಣಿಸಿ ತ್ರಿವರ್ಣ ಧ್ವಜದ ಗೌರವವನ್ನು ಎತ್ತಿಹಿಡಿದ ನಮ್ಮ ವೀರ ಯೋಧರ ಧೈರ್ಯ, ಶಿಸ್ತು ಮತ್ತು ರಾಷ್ಟ್ರನಿಷ್ಠೆಗೆ ಹೃದಯಪೂರ್ವಕ ವಂದನೆಗಳು.
ಅವರ ತ್ಯಾಗ ಮತ್ತು ಪರಾಕ್ರಮವು ಪ್ರತಿಯೊಬ್ಬ ಭಾರತೀಯನಿಗೂ ದೇಶಸೇವೆಯ ಪ್ರೇರಣೆಯಾಗಿ ಸದಾ ಉಳಿಯಲಿದೆ.
ಕಾರ್ಗಿಲ್ನ ಅಮರ ವೀರರಿಗೆ ಕೋಟಿ ಕೋಟಿ ನಮನಗಳು.
ಜೈ ಹಿಂದ್! 🇮🇳
#KargilVijayDiwas