ರಾಜ್ಯ ಉಸ್ತುವಾರಿಗಳಾಗಿ ನಿಯುಕ್ತಿಗೊಂಡ ಶ್ರೀ ಹರೀಶ್ ದ್ವಿವೇದಿ ಅವರಿಗೆ ಮತ್ತು ಸಹ ಉಸ್ತುವಾರಿಗಳಾಗಿ ನಿಯುಕ್ತಿಗೊಂಡ ಡಾ. ಕಾಸಂ ವೆಂಕಟೇಶ್ವರಲು ಅವರಿಗೆ ಅಭಿನಂದನೆಗಳು.
@HarishD_BJP@KasamBJP
Heartiest congratulations to our Indian women’s cricket team on winning the Gold at the Asian Games. Our Nari Shakti continues to make the nation proud on the world stage! Jai Hind!🇮🇳
#AsianGames
ಆದರಣೀಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ರವರ ಜನ್ಮದಿನದ ಅಂಗವಾಗಿ ಮಲೇಶ್ವರದಲ್ಲಿ ಆಯೋಜಿಸಲಾಗಿದ್ದ ಗಣೇಶೋತ್ಸವ, ಗಂಗಾರತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ನಂತರ ಬ್ಯಾಟರಾಯನಪುರದ ಚಿಕ್ಕಜಾಲ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಸೇವಾ ಸಂಕಲ್ಪ ಅಭಿಯಾನದ ಪ್ರಯುಕ್ತ ಆಶೀರ್ವಾದದ ದೀಪ ಬೆಳಗಿ ಪ್ರಧಾನಿಗಳಿಗೆ ಶುಭ ಕೋರಲಾಯಿತು.
#AshirwadKaDiya
ನಮ್ಮೆಲ್ಲರ ಹೆಮ್ಮೆಯ ನಾಯಕ, ಸನ್ಮಾನ್ಯ ಪ್ರಧಾನಿ ಶ್ರೀ @narendramodi ಜೀ ರವರ ಜನ್ಮದಿನದ ಶುಭ ಸಂದರ್��ದಲ್ಲಿ, ಇಂದು ನಮ್ಮ ಮನೆಯ ದೇವರ ಎದುರಿಗೆ, ಶ್ರೀ ಮೋದಿಜೀ ರವರಿಗೆ ಭಗವಂತನ ಶ್ರೀರಕ್ಷೆ ಸದಾ ಇರಲಿ ಎಂದು ವಿಶೇಷವಾಗಿ ಪ್ರಾರ್ಥಿಸಿ, ಆಶೀರ್ವಾದದ ದೀಪವನ್ನು ಬೆಳಗಿಸಲಾಯಿತು.
#AshirwadKaDiya
From Gujarat to Delhi, 25 remarkable years of dedicated public service, guided by one unwavering commitment: Nation First.
Heartfelt birthday greetings to our Hon’ble Prime Minister Shri @narendramodi Ji. Your visionary leadership and tireless service continue to inspire millions. May you be blessed with good health, strength and a long life to continue guiding our nation towards greater heights.
ಸೇವೆ, ಸಾಧನೆ ಮತ್ತು ಸಮರ್ಪಣೆಗಳ 25 ವರ್ಷಗಳ ಸಾರ್ಥಕ ಸಾರ್ವಜನಿಕ ಜೀವನದಲ್ಲಿ, ತಮಗೆ ರಾಷ್ಟ್ರಸೇವೆಯೇ ಉಸಿರು, ಭಾರತವೇ ಮೊದಲು. ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ರವರಿಗೆ ಜನ್ಮದಿನದ ಹೃದಯಪೂರ್ವಕ ಶುಭಾಶಯಗಳು.
#AshirwadKaDiya #SevaSankalpAbhiyan
#HappyBdayPMModi
ಕನ್ನಡದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಎತ್ತರಕ್ಕೆ ಕೊಂಡೊಯ್ದಿರುವ ನಮ್ಮ ಹೆಮ್ಮೆಯ ಕಲಾವಿದ ಶ್ರೀ ಅನಂತ್ ನಾಗ್ ಅವರಿಗೆ ಪ��ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ಕನ್ನಡಿಗರೆಲ್ಲರಿಗೂ ಅಪಾರ ಸಂತಸ, ಹೆಮ್ಮೆ ಮತ್ತು ಸಂಭ್ರಮದ ಕ್ಷಣ.
ಹಲವು ದಶಕಗಳ ತಮ್ಮ ಸುದೀರ್ಘ ಕಲಾಯಾತ್ರೆಯಲ್ಲಿ ಸಹಜ ಅಭಿನಯ, ಅಪೂರ್ವ ಪ್ರತಿಭೆ ಹಾಗೂ ವೈವಿಧ್ಯಮಯ ಪಾತ್ರಗಳ ಮೂಲಕ ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗವನ್ನು ಶ್ರೀಮಂತಗೊಳಿಸಿರುವ ಅನಂತ್ ನಾಗ್ ಅವರು, ತಾವು ಅಭಿನಯಿಸಿದ ಪ್ರತಿಯೊಂದು ಪಾತ್ರಕ್ಕೂ ತಮ್ಮದೇ ಆದ ವಿಶಿಷ್ಟ ಜೀವಂತಿಕೆ, ಆಳ ಮತ್ತು ಆತ್��ೀಯತೆಯನ್ನು ತುಂಬಿದ್ದಾರೆ.
ಅವರ ಅಮೋಘ ಕಲಾಸೇವೆ, ಅಪಾರ ಪ್ರತಿಭೆ ಹಾಗೂ ಚಿತ್ರರಂಗಕ್ಕೆ ನೀಡಿರುವ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಸಂದಿರುವ ಈ ಪ್ರತಿಷ್ಠಿತ ಗೌರವವು ನಿಜಕ್ಕೂ ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿ.
ಪ್ರೀತಿಯ ಅನಂತ್ ನಾಗ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಆತ್ಮೀಯ ಶುಭಾಶಯಗಳು.
ಈ ಪ್ರತಿಷ್ಠಿತ ಗೌರವವು ಅವರ ಅಪೂರ್ವ ಕಲಾಯಾತ್ರೆಗೆ ಮತ್ತಷ್ಟು ಮೆರುಗು ನೀಡಲಿ. ಅವರ ಕಲಾಸೇವೆ, ಸರಳತೆ ಮತ್ತು ಅದ್ಭುತ ಅಭಿನಯವು ಇನ್ನೂ ಹಲವು ವರ್ಷಗಳ ಕ��ಲ ನಮ್ಮೆಲ್ಲರನ್ನು ರಂಜಿಸುತ್ತಾ, ಪ್ರೇರೇಪಿಸುತ್ತಾ ಮುಂದುವರಿಯಲಿ ಎಂದು ಹಾರೈಸುತ್ತೇನೆ.
Heartfelt birthday greetings to Aadaraniya Sarsanghachalak Shri Mohan Bhagwat ji. May you be blessed with good health and a long life dedicated to the service of Bharat.
@DrMohanBhagwat@RSSorg
ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಜಗದ್ಗುರು ಶ್ರೀ ಗಣಪತಿ ಸಚ್ಚಿದಾನಂದ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ, ಜೆ.ಎಸ್.ಎಸ್ ಮಹಾವಿದ್ಯಾಪೀಠದ ವತಿಯಿಂದ ಮೈಸೂರಿನಲ್ಲಿ ನಿರ್ಮಿಸಲಾಗಿರುವ 'ಜೆಎಸ್ಎಸ್ ಹಿರಿಯರ ಮನೆ' ಹಾಗೂ 'ಶಿವ ದೇವಾಲಯ'ವನ್ನು ಇಂದು ಉದ್ಘಾಟಿಸಲಾಯಿತು. ಜೀವನದ ಸಂಧ್ಯಾಕಾಲದಲ್ಲಿರುವ ಹಿರಿಯ ನಾಗರಿಕರಿಗೆ ಅಗತ್ಯ ಆಸರೆಯ ಜೊತೆಗೆ, ಅವರ ಆರೈಕೆ, ಪೋಷಣೆ ಹಾಗೂ ನೆಮ್ಮದಿಯ ಜೀವನಕ್ಕೆ ಪೂರಕವಾದ ಇಂತಹ ಸಮಾಜಮುಖಿ ಸೇವೆಗಳನ್ನು ಸುತ್ತೂರು ಶ್ರೀಮಠ ಸಾರ್ಥಕವಾಗಿ ಮುಂದುವರಿಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಸ್ತುತ್ಯರ್ಹ.
ಶಿಕಾರಿಪುರದಲ್ಲಿ ಇಂದು ರಾಷ್ಟ್ರೋತ್ಥಾನ ಬಳಗ ಆಯೋಜಿಸಿದ್ದ, ಸಂಘದ ಹಿರಿಯ ಪ್ರಚಾರಕ ದಿವಂಗತ ಶ್ರೀ ಮೈ.ಚ. ಜಯದೇವ ಅವರ ಕುರಿತ ಕೃತಿ ‘ಅವಿಶ್ರಾ��ತ ಧ್ಯೇಯಜೀವಿ ಮೈ.ಚ. ಜಯದೇವ: ಬದುಕು-ನೆನಪು’ ಹಾಗೂ ನಾಡೋಜ ಡಾ|| ಎಸ್.ಆರ್. ರಾಮಸ್ವಾಮಿ ಅವರ ‘ಇತಿಹಾಸದ ಸೆರಗು’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಶ್ರೀಕೃಷ್ಣ ಜನ್ಮಾಷ್ಟಮಿಯ ಪವಿತ್ರ ಸಂದರ್ಭದಲ್ಲಿ ಇಂದು ಶಿವಮೊಗ್ಗ ನಗರದ ಶ್ರೀ ಕೃಷ್ಣ ��ೇವಸ್ಥಾನಕ್ಕೆ ಭೇಟಿ ನೀಡಿ, ಬಾಲ ಗೋಪಾಲನ ದರ್ಶನ ಪಡೆದು, ನಾಡಿನ ಒಳಿತಿಗಾಗಿ ವಿಶೇಷ ಪೂಜೆ-ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಬಳಿಕ, ಶ್ರೀ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ, ಪೂಜ್ಯ ಸಾಯಿ ಭಗವಾನರ ದರ್ಶನ ಪಡೆದು ಪೂಜೆ ನೆರವೇರಿಸಲಾಯಿತು. ಶ್ರೀಕೃಷ್ಣನ ಶ್ರೀರಕ್ಷೆ ಮತ್ತು ಬಾಬಾರ ಕಾರುಣ್ಯ ಭಕ್ತಜನತೆಯ ಮೇಲೆ ಸದಾ ಇರಲಿ.
ಕನ್ನಡಿಗರ ಆಕ್ರೋಶದ ಕಹಳೆಯಾಗಿ, ರೈತರು, ಮಹಿಳೆಯರು, ಯುವಜನರು, ಶ್ರಮಿಕರು ಹಾಗೂ ಜನಸಾಮಾನ್ಯರ ಧ್ವನಿಯಾಗಿ, ಪಕ್ಷದ ‘ಬಳ್ಳಾರಿ ಚಲೋ’ ಪಾದಯಾತ್ರೆಗೆ ಇಂದು ಲಿಂಗಸೂಗೂರಿನಲ್ಲಿ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ಪಕ್ಷದ ಎಲ್ಲ ನಾಯಕರ ಉಪಸ್ಥಿತಿಯಲ್ಲಿ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಾಯಿತು. ಅಧಿಕಾರದ ಮದದಲ್ಲಿ ಜನರ ಹಿತವನ್ನು ಮರೆತು, ಭ���ರಷ್ಟಾಚಾರ ಮತ್ತು ದುರಾಡಳಿತದಲ್ಲಿ ಮುಳುಗಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧದ ಈ ಪ್ರತಿಭಟನಾ ಪಾದಯಾತ್ರೆ ಕೇವಲ ರಾಜಕೀಯ ಹೋರಾಟವಲ್ಲ, ಇದು ಕರ್ನಾಟಕದ ಹಿತಕ್ಕಾಗಿ ನಡೆಯುತ್ತಿರುವ ಜನಾಂದೋಲನ! ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ.
ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಪಾವನ ಸಂದರ್ಭದಲ್ಲಿ, ಶ್ರೀ ಗುರು ರಾಘವೇಂದ್ರ ರಾಯರ ಮೂಲ ಬೃಂದಾವನದ ದರ್ಶನ ಪಡೆದು, ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು.