ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದಿವಂಗತ ಡಾ. ಗಿರೀಶ್ ಭಾರದ್ವಾಜ್ ರವರಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.
ಸುರತ್ಕಲ್ ಮಾರುಕಟ್ಟೆ ಕಾಮಗಾರಿ ಸ್ಥಳ ಪರಿಶೀಲಿಸಿದ್ದು ಮಹಿಳಾ ಕೇಂದ್ರದ ಸ್ಥಳವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಬಗ್ಗೆ ಸಭೆ ನಡೆಸಲು ಹಾಗೂ ತಾತ್ಕಾಲಿಕ ಮಾರುಕಟ್ಟೆ ಕಾಮಗಾರಿಯನ್ನು ಪೂರ್ಣಗೊಳಿಸಿ MUDA ಸಂಕೀರ್ಣದ ಅಂಗಡಿಗಳನ್ನು ಕೊಡಲೇ ಸ್ಥಳಾಂತರಿಸಲು ಸೂಚಿಸಲಾಯಿತು, ಮತ್ತು ಇಡ್ಯಾ ಹೌಸಿಂಗ್ ಫಾರ್ ಆಲ್ ಕಾಮಗಾರಿ ಪರಿಶೀಲಿಸಲಾಯಿತು.
ಬಳ್ಕುಂಜೆ ಮತ್ತು ಉಳೆಪಾಡಿ ಗ್ರಾಮದ UKTL ವಿದ್ಯುತ್ ಲೈನ್ ಹೋಗುವ ಮಾರ್ಗದ ತಕರಾರು ಬಗ್ಗೆ ಸಾರ್ವಜನಿಕರಿಗೆ ತಿಳಿಹೇಳಲಾಯಿತು ಹಾಗೂ ಮುಲ್ಕಿ ತಾಲೂಕಿನಲ್ಲಿ ನೂತನ ಪ್ರಜಾಸೌಧ ತಾಲೂಕ ಆಡಳಿತ ಕೇಂದ್ರಕ್ಕೆ ಭೇಟಿ ನೀಡಿ ತಾಲೂಕು ಆಡಳಿತ ಕೇಂದ್ರವನ್ನು ಪರಿವೀಕ್ಷಣೆ ಮಾಡಲಾಯಿತು.