When growth is driven by innovation and strengthened by inclusion, it creates lasting prosperity.
Karnataka crossing the World Bank's Upper Middle Income threshold, with an estimated per capita income of US$5,579, is a testament to that journey and a proud moment for every Kannadiga.
This milestone reflects the hard work and aspirations of our farmers, workers, entrepreneurs, startups, industries, researchers, women and youth who have made Karnataka a leader in technology, manufacturing, innovation and investment. It also reflects years of sustained investment in infrastructure, education, healthcare and economic development, complemented by our government's five guarantees that have strengthened household incomes, increased purchasing power and enabled more families to participate in Karnataka's growth story.
Karnataka's greatest strength has always been its people. As we move forward, our vision is to make Karnataka India's leading state for opportunity, innovation and inclusive development, ensuring that the benefits of economic progress reach every family, every region and every citizen.
https://t.co/lIfRNrJpEb
ಕಲಬುರಗಿಯ ಅತ್ಯಂತ ಪ್ರಸಿದ್ಧ ಹಜರತ್ ಖ್ವಾಜಾ ಬಂದಾ ನವಾಜ್ ದರ್ಗಾಗೆ ಭೇಟಿ ನೀಡಿ, ರಾಜ್ಯದ ಜನರ ಸುಖ, ಶಾಂತಿ, ಸೌಹಾರ್ದತೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಧರ್ಮಗುರುಗಳ ಆಶೀರ್ವಾದ ಪಡೆಯಲಾಯಿತು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಶ್ರೀ ಡಾ. ಜಿ ಪರಮೇಶ್ವರ್, ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಶ್ರೀ ಯು.ಟಿ ಖಾದರ್, ಡಾ. ಶರಣಪ್ರಕಾಶ್ ಪಾಟೀಲ್, ಶಾಸಕರಾದ ಶ್ರೀ ರಹೀಂ ಖಾನ್, ಶ್ರೀ ಅಜಯ್ ಸಿಂಗ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇಂದು ಕಲಬುರಗಿಯ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಹಿಂದಿನ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ಗದ್ದುಗೆಗೆ ನಮಿಸಿ ಗೌರವ ಸಲ್ಲಿಸಿದೆನು. ಈ ವೇಳೆ ಪ್ರಸ್ತುತ ಪೀಠಾಧಿಪತಿಗಳಾದ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಶ್ರೀ ಡಾ. ಜಿ ಪರಮೇಶ್ವರ್, ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಶ್ರೀ ಯು.ಟಿ ಖಾದರ್, ಶ್ರೀ ಡಾ. ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
'ತೂಗುಸೇತುವೆಗಳ ಸರದಾರ', ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರ ನಿಧನದ ಸುದ್ದಿ ತೀವ್ರ ಆಘಾತ ಉಂಟುಮಾಡಿದೆ. ಗ್ರಾಮೀಣ ಭಾರತದ ಸಂಪರ್ಕ ಕ್ರಾಂತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಅವರ ಅಗಲಿಕೆ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ.
ದೇಶದಾದ್ಯಂತ 140ಕ್ಕೂ ಹೆಚ್ಚು ತೂಗು ಸೇತುವೆಗಳನ್ನು ನಿರ್ಮಿಸಿದ್ದ ಭಾರದ್ವಾಜ್ ಅವರು, ಮೂಲಸೌಕರ್ಯ ವಂಚಿತ ಗ್ರಾಮೀಣ ಭಾಗಗಳ ಜನರಿಗೆ ಸುಲಭ ಸಂಪರ್ಕ ಕಲ್ಪಿಸುವ ಮೂಲಕ ಜನರ ಬದುಕಿಗೆ ಆಸರೆಯಾಗಿದ್ದರು. ಇವರ ಈ ತಾಂತ್ರಿಕ ಚಾತುರ್ಯ ಹಾಗೂ ಜನಪರ ಸೇವೆಯನ್ನು ಗುರುತಿಸಿಯೇ ಸಾರ್ವಜನಿಕರು ಇವರನ್ನು ಪ್ರೀತಿಯಿಂದ 'ಸುಳ್ಯದ ವಿಶ್ವೇಶ್ವರಯ್ಯ' ಎಂದು ಗೌರವಿಸುತ್ತಿದ್ದರು.
ಅಸಾಧಾರಣ ತಾಂತ್ರಿಕ ನೈಪುಣ್ಯತೆಯ ಮೂಲಕ ಜನಸಾಮಾನ್ಯರ ಸೇವೆ ಮಾಡಿದ ಡಾ. ಗಿರೀಶ್ ಭಾರದ್ವಾಜ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರು ಹಾಗೂ ಹಿತೈಷಿಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ.
ಬೀದರ್ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು, ಮಾತನಾಡಿದೆನು.
ನಾನು ಕೊರೋನಾ ಸಂಕಷ್ಟದ ಸಮಯದಲ್ಲಿ ಅಧಿಕಾರ ವಹಿಸಿಕೊಂಡು, ಕಳೆದ ಆರು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಅಲ್ಲಿಂದ ನಾವು ಹಲವಾರು ಚುನಾವಣೆಗಳನ್ನು ಎದುರಿಸಿದ್ದೇವೆ. ಆ ಸಮಯದಲ್ಲಿ ನಮಗೆ ಶಕ್ತಿ ತುಂಬಿದ್ದು ನಮ್ಮ ಕಾರ್ಯಕರ್ತರು. ನಾವೆಲ್ಲಾ ಒಟ್ಟಾಗಿ ಸೇರಿ 136 ಸೀಟುಗಳನ್ನು ಗೆದ್ದೆವು. ನಾನೊಬ್ಬ ಕಾರ್ಯಕರ್ತನಾಗಿ ಬೆಳೆದು ಬಂದವನು. ಕಾರ್ಯಕರ್ತರೇ ಕಾಂಗ್ರೆಸ್ ಪಕ್ಷದ ಆಧಾರಸ್ತಂಭವಾಗಿದ್ದು, ನೀವಿರೋದ್ರಿಂದಲೇ ನಾವು ಇಂದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದೇವೆ.
ಯುವಕರಲ್ಲಿ ಕ್ರೀಡೆ, ಸಂಸ್ಕೃತಿ, ಭ್ರಾತೃತ್ವ, ಸಾಂವಿಧಾನಿಕ ಮೌಲ್ಯಗಳು ಹಾಗೂ ಸಂಘಟನೆಯನ್ನು ಬಲವರ್ಧನೆಗೊಳಿಸಲು ನಾವು ಭಾರತ್ ಜೋಡೋ ಯುವಕ ಸಂಘವನ್ನು ಸ್ಥಾಪಿಸಲಿದ್ದೇವೆ. ಇದರೊಂದಿಗೆ 72,000 ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಿದ್ದೇವೆ ಹಾಗೂ ಇ-ಖಾತಾದಂತಹ ಸುಧಾರಿತ ವ್ಯವಸ್ಥೆಗಳನ್ನು ತಂದಿದ್ದೇವೆ. ಇನ್ನು 5 ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೂ ನಡೆಸಲಿದ್ದೇವೆ.
ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರ್ ಅವರು, ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಅವರು, ಶಾಸಕರಾದ ಶ್ರೀ ರಹೀಂ ಖಾನ್ ಅವರು, ಸಂಸದರಾದ ಸಾಗರ್ ಖಂಡ್ರೆ ಅವರು ಹಾಗೂ ಇನ್ನಿತರೆ ಪಕ್ಷದ ಪ್ರಮುಖ ಮಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ನಾರಿ ಶಕ್ತಿ ಈ ದೇಶದ ಶಕ್ತಿ..
ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ಹಮ್ಮಿಕೊಂಡಿದ್ದ 'ಅಕ್ಕಪಡೆ' - ಮಹಿಳೆಯರ ಶಕ್ತಿ ಪ್ರದರ್ಶನ ಮತ್ತು ಆತ್ಮರಕ್ಷಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಹಿಳಾ ಸಿಬ್ಬಂದಿಯ ಆತ್ಮರಕ್ಷಣೆಯ ಸಾಹಸ, ಕರಾಟೆ, ಲಾಠಿಪ್ರಹಾರ, ಕೌಶಲ್ಯ ಪ್ರದರ್ಶನವನ್ನು ವೀಕ್ಷಿಸಿ ಮಾತನಾಡಲಾಯಿತು.
ಹೆಣ್ಣು ಅಂದ್ರೆ ಭೂಮಿ, ಹೆಣ್ಣು ಅಂದ್ರೆ ಧೈರ್ಯ, ಹೆಣ್ಣು ಅಂದ್ರೆ ಭರವಸೆ, ಹೆಣ್ಣು ಅಂದ್ರೆ ಶಕ್ತಿ, ಹೆಣ್ಣು ಅಂದ್ರೆ ಬೆಳಕು. ಈ ಬೆಳಕು ಇಂದು ಪ್ರತಿ ಕುಟುಂಬವನ್ನೂ ಬೆಳಗುತ್ತಿದೆ. ನಾರಿ ಶಕ್ತಿ ಈ ದೇಶದ ಶಕ್ತಿಯಾಗಿದೆ.
ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಅಕ್ಕಪಡೆ ತಯಾರಾಗಿದೆ. ಅಕ್ಕಪಡೆಗೆ ಸೇರಿರುವವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಹೋರಾಟ, ನಿಮ್ಮ ಶ್ರಮ, ನಿಮ್ಮ ಶಕ್ತಿ, ನಿಮ್ಮ ಧೈರ್ಯ, ನಿಮ್ಮ ಸಾಧನೆ ಎಲ್ಲದ್ದಕ್ಕೂ ಫಲ ಸಿಗುತ್ತದೆ. ರಾಜ್ಯದಲ್ಲಿ 10,000 ಅಕ್ಕಪಡೆಗಳನ್ನು ಸ್ಥಾಪಿಸಲು ಸರ್ಕಾರ ಆದೇಶ ಹೊರಡಿಸಿದೆ. ನಿಮ್ಮಲ್ಲಿರುವ ಸಾಹಸ ಹಾಗೂ ಕೌಶಲ್ಯಗಳನ್ನು ಹೊರತೆಗೆಯಲು ಅಕ್ಕಪಡೆ ಅನುಕೂಲವಾಗಲಿದೆ.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್, ಸಚಿವರಾದ ಈಶ್ವರ್ ಖಂಡ್ರೆ, ಶರಣಪ್ರಕಾಶ್ ಪಾಟೀಲ್, ಶಾಸಕರಾದ ರಹೀಂ ಖಾನ್, ಸಂಸದರಾದ ಸಾಗರ ಖಂಡ್ರೆ ಅವರು ಸೇರಿದಂತೆ ಹಲವಾರು ನಾಯಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಕಳಬೇಡ, ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ
ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಅನುಭವ ಮಂಟಪಕ್ಕೆ ಭೇಟಿ ನೀಡಿ, ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಲಾಯಿತು.
ನೂತನ ಅನುಭವ ಮಂಟಪವು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ತತ್ವಗಳನ್ನು ಬಿಂಬಿಸುವ ಒಂದು ಬೃಹತ್ ಯೋಜನೆಯಾಗಿದೆ. ತ್ರಿಪುರಾಂತ ಕೆರೆಯ ದಡದಲ್ಲಿ ನಿರ್ಮಾಣವಾಗುತ್ತಿರುವ ಈ ಐತಿಹಾಸಿಕ ಸಂಕೀರ್ಣವು ಕಲ್ಯಾಣ ಚಾಲುಕ್ಯ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ.
12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ಬಸವಣ್ಣರು ಸ್ಥಾಪಿಸಿದ ಅನುಭವ ಮಂಟಪವು ಸಮಾನತೆ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾಗಿ ವಿಶ್ವದೆಲ್ಲೆಡೆ ಗುರುತಿಸಿಕೊಂಡಿತ್ತು. ಇದೇ ಮಹಾನ್ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪವನ್ನು ನಿರ್ಮಿಸಲಾಗುತ್ತಿದೆ.
ಈ ಅನುಭವ ಮಂಟಪವು ಕೇವಲ ಕಟ್ಟಡವಲ್ಲ, ಬಸವ ತತ್ವ, ವಚನ ಸಾಹಿತ್ಯ, ಕಾಯಕ ದಾಸೋಹ, ಸಮಾನತೆ ಹಾಗೂ ಶರಣ ಸಂಸ್ಕೃತಿಯ ಜೀವಂತ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಇಲ್ಲಿ ಬಸವಣ್ಣ, ಅಲ್ಲಮ ಪ್ರಭು, ಅಕ್ಕ ಮಹಾದೇವಿ, ಚನ್ನಬಸವಣ್ಣ ಸೇರಿದಂತೆ ಶರಣ, ಶರಣೆಯರ ಚಿಂತನೆ, ವಚನಗಳು ಹಾಗೂ ಅವರ ಸಾಮಾಜಿಕ ಕ್ರಾಂತಿಯ ಸಂದೇಶವನ್ನು ಆಧುನಿಕ ತಂತ್ರಜ್ಞಾನದ ಮೂಲಕ ಜನರಿಗೆ ಪರಿಚಯಿಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಈ ವೇಳೆ ಪೂಜ್ಯ ಶ್ರೀ ನಾಡೋಜ ಬಸವಲಿಂಗ ಪಟ್ಟದೇವರು, ಶ್ರೀ ಶಿವಾನಂದ ಮಹಾಸ್ವಾಮೀಜಿ, ಶ್ರೀ ಗುರುಬಸವ ಪಟ್ಟದ್ದೇವರು, ಅಕ್ಕಾ ಗಂಗಂಬಿಕಾ ತಾಯಿ, ಶ್ರೀ ಬಸವ ಪ್ರಭು ಸ್ವಾಮೀಜಿ, ಡಾ. ಸಿದ್ದರಾಮ ಶರಣು ಬೇಲದ್ದಳ, ಶ್ರೀ ಪರ್ವತ ಲಿಂಗ ಪರಮೇಶ್ವರ್ ಮಹಾರಾಜ, ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್, ಸಚಿವರಾದ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಸಂಸದರಾದ ಸಾಗರ ಖಂಡ್ರೆ ಸೇರಿದಂತೆ ಬಸವಾದಿ ಶರಣರು ಜೊತೆಗಿದ್ದರು.
ಬಸವಕಲ್ಯಾಣದಲ್ಲಿ ಇಂದು ಛತ್ರಪತಿ ಶಿವಾಜಿ ಮಹಾರಾಜ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್, ಜಗದ್ಗುರು ಬಸವೇಶ್ವರ ಹಾಗೂ ಮಹಾತ್ಮ ಬೊಮ್ಮಗೊಂಡೇಶ್ವರರ ಪ್ರತಿಮೆಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್, ಸಚಿವರಾದ ಈಶ್ವರ್ ಖಂಡ್ರೆ, ಸಂಸದರಾದ ಸಾಗರ ಖಂಡ್ರೆ ಅವರು ಸೇರಿದಂತೆ ಹಲವಾರು ನಾಯಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ನಮ್ಮ ರಾಜ್ಯದ ರೈತರ ಹಿತರಕ್ಷಣೆ ಮತ್ತು ಆರ್ಥಿಕ ಭದ್ರತೆಯೇ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು 2025–26ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ರಾಗಿ, ಜೋಳ ಮತ್ತು ಭತ್ತ ಸೇರಿದಂತೆ ಒಟ್ಟು 7.96 ಲಕ್ಷ ಮೆಟ್ರಿಕ್ ಟನ್ ಧಾನ್ಯಗಳನ್ನು ಸುಮಾರು 2.89 ಲಕ್ಷ ರೈತರಿಂದ ಖರೀದಿಸಿದೆ.
ವಿವಿಧ ವರ್ಷಗಳ ಕ್ಲೈಮ್ಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಬೇಕಿರುವ ಒಟ್ಟು ₹1,902 ಕೋಟಿ ಅನುದಾನ ಇನ್ನೂ ಬಾಕಿಯಿದ್ದು, ಅದನ್ನು ಶೀಘ್ರವಾಗಿ ಪಡೆಯಲು ರಾಜ್ಯ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ.
ಕೇಂದ್ರದಿಂದ ಮರುಪಾವತಿ ವಿಳಂಬವಾಗುತ್ತಿದ್ದರೂ, ರೈತರ ಆರ್ಥಿಕ ಹಿತವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ತನ್ನ ಆವರ್ತ ನಿಧಿಯಿಂದ (Revolving Fund) 2026ರ ಜೂನ್ 15ರಂದು ₹650 ಕೋಟಿಗಳನ್ನು ಬಿಡುಗಡೆ ಮಾಡಿ ರೈತರಿಗೆ ಪಾವತಿಸಿದೆ. ಅಲ್ಲದೆ, ಉಳಿದ ಬಾಕಿ ಪಾವತಿಗಳಿಗಾಗಿ ಹಣಕಾಸು ಇಲಾಖೆಯ ನಿಯಮಾವಳಿಗಳಿಗೆ ಅನುಗುಣವಾಗಿ 2026ರ ಜುಲೈ 4ರಂದು ಮತ್ತಷ್ಟು ₹600 ಕೋಟಿಗಳ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ.
ಇದರ ಜೊತೆಗೆ, 2026–27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹೆಸರುಕಾಳು, ಉದ್ದು ಹಾಗೂ ತೊಗರಿ ಸೇರಿದಂತೆ ವಿವಿಧ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯವಿರುವ ₹990 ಕೋಟಿ ಅನುದಾನದ ಕುರಿತು ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ರೈತರ ಹಿತಾಸಕ್ತಿ, ಆರ್ಥಿಕ ಭದ್ರತೆ ಮತ್ತು ಕೃಷಿ ಕ್ಷೇತ್ರದ ಸದೃಢ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಎಂದಿಗೂ ಬದ್ಧವಾಗಿದೆ.
ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಮ್ರವರ 40ನೇ ಪುಣ್ಯ ಸ್ಮರಣೆ ಅಂಗವಾಗಿ ವಿಧಾನಸೌಧದ ಪಶ್ಚಿಮ ದ್ವಾರದ ಬಳಿಯಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದ ದೃಶ್ಯಗಳು.
ಬಸವಾದಿ ಶರಣರು–ಸೂಫಿ ಸಂತರ ನಾಡಿನಿಂದ ನನ್ನ ಮೊದಲ ಉತ್ತರ ಕರ್ನಾಟಕ ಪ್ರವಾಸವನ್ನು ಇಂದಿನಿಂದ ಆರಂಭಿಸಿದ್ದೇನೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ; ಎರಡು ದಿನಗಳ ಜಿಲ್ಲಾ ಪ್ರವಾಸದಲ್ಲಿ ಸಮಗ್ರ ಪ್ರಗತಿ ಪರಿಶೀಲನೆ ನಡೆಸುವುದು ನನ್ನ ಉದ್ದೇಶ ಮತ್ತು ಗುರಿ ಆಗಿದೆ.
ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಉತ್ತರ ಕರ್ನಾಟಕ ಪ್ರವಾಸವನ್ನು ಬಸವಾದಿ ಶರಣರ ಸಮಾನತೆಯ ನೆಲೆ ಬಸವಕಲ್ಯಾಣದಿಂದಲೇ ಆರಂಭಿಸಿದ್ದೇನೆ.
ಸೂಫಿ ಸಂತರ ಸಾಮರಸ್ಯದ ಪರಂಪರೆಗೂ ಹೆಸರಾದ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಿಂದಲೇ ನಾನು ನನ್ನ ಪ್ರವಾಸವನ್ನು ಆರಂಭಿಸುತ್ತಿರುವುದು ನನಗೆ ಖುಷಿಕೊಟ್ಟಿದೆ. ಜೊತೆಗೆ ಈ ಭಾಗದ ಜನರ ರಾಜಕೀಯ, ಆಡಳಿತಾತ್ಮಕ ಹಾಗೂ ಸಾಂಸ್ಕೃತಿಕ ಬದ್ಧತೆಗೆ ಸಾಕ್ಷಿ ಆಗಲು ಬಯಸಿದ್ದೇನೆ.
ಜಗತ್ತಿಗೆ ಸಮಾನತೆ, ಕಾಯಕ, ದಾಸೋಹ ಮತ್ತು ಸಾಮಾಜಿಕ ನ್ಯಾಯದ ಸಂದೇಶ ನೀಡಿದ ಬಸವಾದಿ ಶರಣರ ಅನುಭವ ಮಂಟಪದ ಐತಿಹಾಸಿಕ ಪರಂಪರೆ ಒಂದೆಡೆಯಾದರೆ, ಕಲ್ಯಾಣ ಕರ್ನಾಟಕದಾದ್ಯಂತ ಧರ್ಮಸೌಹಾರ್ದ, ಸಹಿಷ್ಣುತೆ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತರಿಸಿದ ಸೂಫಿ ಸಂತರ ಶ್ರೀಮಂತ ಸಂಸ್ಕೃತಿ ಉತ್ತರ ಕರ್ನಾಟಕದ ಮಣ್ಣಿನಲ್ಲಿದೆ ಎಂದು ನಂಬಿದವನು ನಾನು.
ವೈವಿಧ್ಯತೆಯಲ್ಲಿ ಏಕತೆ ಮತ್ತು ಸರ್ವಧರ್ಮ ಸಮಭಾವದ ಸಂದೇಶ ಸಾರುವ ಈ ನೆಲದಿಂದ ಅಭಿವೃದ್ಧಿಯ ಹೊಸ ಪರ್ವಕ್ಕೆ ಚಾಲನೆ ನೀಡುತ್ತಿರುವುದು ನಮ್ಮ ಸರ್ಕಾರದ ಸಮಗ್ರ, ಸಮಾನ ಮತ್ತು ಜನಕೇಂದ್ರಿತ ಆಡಳಿತದ ಸಂಕಲ್ಪವಾಗಿದೆ.
ಎರಡು ದಿನಗಳ ಪ್ರವಾಸದಲ್ಲಿ ನಾನು ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಲಿದ್ದೇನೆ.
ವಿವಿಧ ಇಲಾಖೆಗಳ ಯೋಜನೆಗಳ ಅನುಷ್ಠಾನ, ಶಿಕ್ಷಣ, ಆರೋಗ್ಯ, ನೀರಾವರಿ, ಮೂಲಸೌಕರ್ಯ, ಕೈಗಾರಿಕೆ, ಕುಡಿಯುವ ನೀರು, ಉದ್ಯೋಗ ಸೃಷ್ಟಿ ಹಾಗೂ ಜನಕಲ್ಯಾಣ ಕಾರ್ಯಕ್ರಮಗಳ ಪ್ರಗತಿಯನ್ನು ಇಲಾಖೆವಾರು ಪರಿಶೀಲಿಸಿ, ಬಾಕಿ ಉಳಿದಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಿದ್ದೇನೆ.
ಸಂವಿಧಾನದ ಪರಿಚ್ಛೇದ 371(J) ಅಡಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಯನ್ನು ನಮ್ಮ ಸರ್ಕಾರ ತನ್ನ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿ ಪರಿಗಣಿಸಿದೆ. ಶಿಕ್ಷಣ, ಕೃಷಿ, ಕೈಗಾರಿಕೆ, ಉದ್ಯೋಗ, ನೀರಾವರಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಸಾಧಿಸಲು ಹಾಗೂ ಇಲಾಖೆಗಳ ನಡುವೆ ಸಮನ್ವಯ ಹೆಚ್ಚಿಸಿ ಫಲಿತಾಂಶ ಆಧಾರಿತ ಆಡಳಿತಕ್ಕೆ ಚುರುಕು ನೀಡಲು ಈ ಪ್ರವಾಸ ಮಹತ್ವದ ವೇದಿಕೆಯಾಗಲಿದೆ ಎಂದು ಭಾವಿಸಿ ನಿಮ್ಮೆಲ್ಲರ ಸಹಕಾರ ಕೋರುತ್ತಿದ್ದೇನೆ.
ಜಿಲ್ಲಾ ಮಟ್ಟದಲ್ಲಿಯೇ ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವುದು, ಸ್ಥಳೀಯ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ತ್ವರಿತ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದು ಹಾಗೂ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಚುರುಕು ನೀಡುವುದು ನನ್ನ ಈ ಪ್ರವಾಸದ ಪ್ರಮುಖ ಉದ್ದೇಶವಾಗಿದೆ.
ರಾಜ್ಯದ ಯಾವುದೇ ಭಾಗ ಅಭಿವೃದ್ಧಿಯಿಂದ ವಂಚಿತವಾಗಬಾರದು ಎಂಬ ಸರ್ಕಾರದ ದೃಢ ಬದ್ಧತೆಯ ಭಾಗವಾಗಿಯೇ ನಾನು ನನ್ನ ಮೊದಲ ಉತ್ತರ ಕರ್ನಾಟಕ ಪ್ರವಾಸವನ್ನು ಕಲ್ಯಾಣ ಕರ್ನಾಟಕದಿಂದ ಆರಂಭಿಸಿದ್ದೇನೆ. ಇದು ಕೇವಲ ಆಡಳಿತಾತ್ಮಕ ಪ್ರವಾಸವಲ್ಲ; ಪ್ರಾದೇಶಿಕ ಸಮತೋಲನ, ಸಮಗ್ರ ಅಭಿವೃದ್ಧಿ ಮತ್ತು ಜನಕೇಂದ್ರಿತ ಆಡಳಿತಕ್ಕೆ ನಿಮ್ಮೆಲ್ಲರ ಸರ್ಕಾರ ನೀಡುತ್ತಿರುವ ಆದ್ಯತೆಯ ಸ್ಪಷ್ಟ ಸಂದೇಶವಾಗಿದೆ.
ಬಸವಣ್ಣನವರ ಸಮಾನತೆಯ ತತ್ವ, ಸೂಫಿ ಸಂತರ ಸಾಮರಸ್ಯದ ಸಂದೇಶ ಮತ್ತು ಸಮಗ್ರ ಅಭಿವೃದ್ಧಿಯ ಸಂಕಲ್ಪವನ್ನು ಒಗ್ಗೂಡಿಸಿಕೊಂಡ ನನ್ನ ಮೊದಲ ಉತ್ತರ ಕರ್ನಾಟಕ ಪ್ರವಾಸವು ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಪರ್ವಕ್ಕೆ ಹೊಸ ವೇಗ ನೀಡುವ ಮಹತ್ವದ ಮೈಲಿಗಲ್ಲಾಗಲಿ ಎನ್ನುವ ನಿರೀಕ್ಷೆ ನನ್ನದಾಗಿದೆ.
ಸಾಮಾಜಿಕ ಸಾಮರಸ್ಯ, ಜನ ಸೌಹಾರ್ದ ಇಲ್ಲದೆ ಯಾವುದೇ ಪ್ರದೇಶದ ಅಭಿವೃದ್ಧಿ, ಪ್ರಗತಿ ಸಾಧ್ಯವಿಲ್ಲ ಎನ್ನುವುದನ್ನು ನಾನು ನನ್ನ ಇಷ್ಟು ವರ್ಷಗಳ ರಾಜಕೀಯ ಅನುಭವದಿಂದ ಕಲಿತಿದ್ದೇನೆ. ಏಕೆಂದರೆ ಅಭಿವೃದ್ಧಿ ಎನ್ನುವುದು ಸರ್ವರನ್ನೂ ಒಳಗೊಳ್ಳುವ ಪ್ರಕ್ರಿಯೆಯಾಗಿದೆ.
ಜೊತೆಗೆ, ನಾನು ಮೊದಲ ಬಾರಿಗೆ ಈ ಜಿಲ್ಲೆಗಳಿಗೆ ಭೇಟಿ ನೀಡುತ್ತಿರುವ ಹೊತ್ತಲ್ಲೇ ಪಕ್ಷದ ಕಚೇರಿಗೂ ಭೇಟಿ ನೀಡಿ ಕಾರ್ಯಕರ್ತರನ್ನು ಮಾತಾಡಿಸುತ್ತಿದ್ದೇನೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಶ್ವದ ಮೊದಲ ಪ್ರಜಾಪ್ರಭುತ್ವದ ಮಾದರಿ ವಚನಕಾರರ ಅನುಭವ ಮಂಟಪದ ನೆಲೆಗೆ ಭೇಟಿ ನೀಡಬೇಕು ಎನ್ನುವುದು ನನ್ನ ಕಾರ್ಯಕರ್ತ ಸಮೂಹದ ಇಚ್ಛೆಯೂ ಆಗಿತ್ತು.
ಪಕ್ಷದ ಕಾರ್ಯಕರ್ತರೇ ಪಕ್ಷವನ್ನು ಸೈದ್ಧಾಂತಿಕವಾಗಿ ಕಟ್ಟಿ ನಿಲ್ಲಿಸುವ ಸಮರ ಸೇನಾನಿಗಳು. ಪಕ್ಷದ ರಥವನ್ನು ಅಧಿಕಾರಕ್ಕೆ ಕರೆದೊಯ್ಯುವ ಹೆದ್ದಾರಿಗಳು ಎನ್ನುವುದನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.
ದಮನಿತರ ಆತ್ಮವಿಶ್ವಾಸದ ಪ್ರತೀಕ ಡಾ. ಬಾಬು ಜಗಜೀವನ್ ರಾಮ್
ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು, ಹಸಿರು ಕ್ರಾಂತಿಯ ಹರಿಕಾರರು ಹಾಗೂ ಭಾರತದ ಮಾಜಿ ಉಪ ಪ್ರಧಾನಮಂತ್ರಿಗಳಾದ ಡಾ. ಬಾಬು ಜಗಜೀವನ್ ರಾಮ್ ಅವರ 40ನೇ ಪುಣ್ಯಸ್ಮರಣೆ ಅಂಗವಾಗಿ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.
ಸಮಾಜದ ಶೋಷಿತ, ದಲಿತ ಹಾಗೂ ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಅವರು ಸಲ್ಲಿಸಿದ ಅಪ್ರತಿಮ ಸೇವೆ, ಸಾಮಾಜಿಕ ನ್ಯಾಯಕ್ಕಾಗಿ ನಡೆಸಿದ ಹೋರಾಟ ಹಾಗೂ ರಾಷ್ಟ್ರದ ಕೃಷಿ ಮತ್ತು ಆಡಳಿತ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಳು ಸದಾ ಸ್ಮರಣೀಯ.
ಡಾ. ಬಾಬು ಜಗಜೀವನ್ ರಾಮ್ ಅವರ ಆದರ್ಶಗಳು ಮತ್ತು ಜನಪರ ಚಿಂತನೆಗಳು ಇಂದಿಗೂ ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದು, ಅವರ ಕನಸಿನ ಸಮಾನತೆ ಮತ್ತು ಅಭಿವೃದ್ಧಿಯ ಭಾರತ ನಿರ್ಮಾಣಕ್ಕೆ ಬದ್ಧತೆಯಿಂದ ನಾವೆಲ್ಲರೂ ಕಾರ್ಯನಿರ್ವಹಿಸೋಣ.
ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಡಾ.ಜಿ ಪರಮೇಶ್ವರ್ ಹಾಗೂ ಆಹಾರ ಸಚಿವರಾದ ಶ್ರೀ ಕೆ.ಹೆಚ್ ಮುನಿಯಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Paying my respectful tributes to former Deputy Prime Minister Babu Jagjivan Ram on his death anniversary. Rising above social barriers through determination and resilience, he became one of independent India's longest serving public representatives. His lifelong commitment to constitutional values, workers' rights, agricultural self sufficiency and the dignity of the marginalized left an indelible mark on our nation.
ಜನಸೇವೆಯೇ ಉತ್ತಮ ಆಡಳಿತದ ನಿಜವಾದ ಶಕ್ತಿ
ಸಾರ್ವಜನಿಕರ ಅಹವಾಲುಗಳನ್ನು ಹಾಗೂ ಸಮಸ್ಯೆಗಳನ್ನು ಆಲಿಸಲು ಪ್ರಜಾಸೇವೆ ಇಲಾಖೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ತಿಂಗಳಿನ 1ನೇ ಹಾಗೂ 3ನೇ ಶನಿವಾರದಂದು ಪ್ರಜಾಸೇವೆ ಅಭಿಯಾನ ನಡೆಸಬೇಕಾಗುತ್ತದೆ.
ದೂರುಗಳ ತ್ವರಿತ ಪರಿಹಾರದಿಂದ ಹಿಡಿದು ಪರಿಣಾಮಕಾರಿ ಸೇವಾ ವಿತರಣೆಯವರೆಗೆ ಪ್ರತಿಯೊಂದು ಹಂತದಲ್ಲೂ ಸರ್ಕಾರವನ್ನು ಜನಸ್ನೇಹಿ, ಜವಾಬ್ದಾರಿಯುತವಾಗಿಸುವ ನಿಟ್ಟಿನಲ್ಲಿ ನಾವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.
ಪ್ರಜಾ ಸೇವೆ ಅಭಿಯಾನ ಹಾಗೂ ಆಡಳಿತಾತ್ಮಕ ಸುಧಾರಣೆಗಳ ಮೂಲಕ ಜನರ ನಡುವೆಯೇ ಇದ್ದು, ಅವರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವುದೇ ಸರ್ಕಾರದ ಉದ್ದೇಶವಾಗಿದೆ.
The true strength of a government lies in how well it serves its people. We are strengthening every step from grievance redressal to service delivery so that your government is more accessible, accountable and responsive.
Through Praja Seve Abhiyana and administrative reforms, we will remain among the people, resolve concerns promptly and place every citizen's trust and satisfaction at the heart of governance.
#PrajaSeve |
ಎಲ್ಲಾ ಶೋಷಿತರಿಗೂ ಬೆಳಕು ನೀಡಿದವರು ಬಾಬಾ ಸಾಹೇಬರು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದ ಪಕ್ಕದ ಮೈದಾನದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆ ಉದ್ಘಾಟನೆಯ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಭೆಯನ್ನುದ್ದೇಶಿಸಿ ಮಾತನಾಡಿದೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೇವಲ ಒಂದು ವರ್ಗದ ನಾಯಕರಾಗಿ ಹೋರಾಟ ಮಾಡಲಿಲ್ಲ. ಅವರು ಎಲ್ಲಾ ಶೋಷಿತ ವರ್ಗಕ್ಕೂ ಬೆಳಕು ನೀಡಿದರು. ಭಾರತದ ಪ್ರಜೆಗಳು ಸಮಾನತೆಯಿಂದ ಬದುಕಲು ರೂಪುರೇಷೆ ನೀಡಿದ ಧೀಮಂತ ನಾಯಕ ಅವರಾಗಿದ್ದಾರೆ.
ಜನರ ಪರವಾಗಿ ಧ್ವನಿ ಎತ್ತುವುದನ್ನು ಅಂಬೇಡ್ಕರ್ ಅವರು ನಮಗೆ ಕಲಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಅಂದಿನ ಕಾಲದಲ್ಲೇ ಅಂಬೇಡ್ಕರ್ ಅವರನ್ನು ಕಾನೂನು ಸಚಿವರನ್ನಾಗಿ ಮಾಡಿ ದೇಶ ಕಟ್ಟುವ ಮುಂದಾಳತ್ವ ನೀಡಿತು. ಅವರ ನೇತೃತ್ವದಲ್ಲಿ ಸಂವಿಧಾನವು ಈ ದೇಶಕ್ಕೆ ಕೊಡುಗೆಯಾಗಿ ಸಿಕ್ಕಿತು. ಭೀಮಾಬಾಯಿಯವರು ಕೇವಲ ಮಗುವಿಗೆ ಜನ್ಮ ನೀಡಲಿಲ್ಲ; ನಮ್ಮ ರಾಷ್ಟ್ರದ ಹಾಗೂ ಜನರ ಏಳಿಗೆಗೆ ಸಂವಿಧಾನವನ್ನು ಕೊಟ್ಟ ಮಹಾ ಶಕ್ತಿಗೆ ಜನ್ಮ ನೀಡಿದರು.
ನಮಗೆ 136 ಸ್ಥಾನಗಳನ್ನು ನೀಡಿ ಈ ರಾಜ್ಯದ ಆಡಳಿತ ನಡೆಸಲು ಜನ ಅವಕಾಶ ಮಾಡಿಕೊಟ್ಟಿದ್ದಾರೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮೂರು ವರ್ಷ ಕೆಲಸ ಮಾಡಿದ್ದೇವೆ. ಎಲ್ಲರಿಗೂ ಅತ್ಯುತ್ತಮ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ಮುಂದಿನ ಎರಡು ವರ್ಷ ಅಷ್ಟೇ ಅಲ್ಲ, 2028 ಹಾಗೂ 2029 ರಲ್ಲೂ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತದೆ.
ಕಾಂಗ್ರೆಸ್ ಪಕ್ಷದ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಸಂವಿಧಾನ ಸೇರಿದಂತೆ ಹಲವಾರು ಕೊಡುಗೆಗಳನ್ನು ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ನೀಡಿದೆ. ಇದರಿಂದಾಗಿ ಸಮಾಜದಲ್ಲಿ ಸಮಾನತೆ ಸಾಧಿಸಲು ಸಾಧ್ಯವಾಗಿದೆ. ಹಿಂದೆ ಮಹಾತ್ಮ ಗಾಂಧಿಯವರು ಕುಳಿತಿದ್ದ ಜಾಗದಲ್ಲಿ, ಇಂದು ಈ ರಾಜ್ಯದ ಹಿಂದುಳಿದ ಪ್ರದೇಶದಿಂದ ಜನಪ್ರತಿನಿಧಿಯಾಗಿ ಆಯ್ಕೆಯಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿದ್ದಾರೆ. 371(ಜೆ) ತಿದ್ದುಪಡಿ ಮೂಲಕ ಕಲ್ಯಾಣ ಕರ್ನಾಟಕದ ಜನತೆಯ ಉದ್ಧಾರಕ್ಕೆ ಮುನ್ನುಡಿ ಬರೆದವರು ಅವರು. ಅಲ್ಲಿನ ಜನರ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದು ಸಾಕ್ಷಿಗುಡ್ಡೆಯಾಗಿ ನಿಂತಿದ್ದಾರೆ.
ಮಹಾತ್ಮ ಗಾಂಧೀಜಿಯವರ ಪುತ್ಥಳಿಯ ಜೊತೆಯಲ್ಲೇ ಇವತ್ತು ಬಾಬಾಸಾಹೇಬರ ಪುತ್ಥಳಿಯನ್ನೂ ನಾವು ಈ ದೇಶದ ಉದ್ದಗಲಕ್ಕೂ ಕಾಣುತ್ತಿದ್ದೇವೆ. ನಾನು ಪ್ರತಿ ಬಾರಿಯೂ ಹೇಳುತ್ತೇನೆ, ಅಂಬೇಡ್ಕರ್ ಅವರನ್ನು ಯಾವುದೇ ಒಂದು ಜಾತಿ ಅಥವಾ ವರ್ಗಕ್ಕೆ ಸೀಮಿತಗೊಳಿಸಬಾರದು. ಇಡೀ ದೇಶಕ್ಕೆ ಸಮಾನತೆಯನ್ನು ಕೊಟ್ಟಂತಹ ನಾಯಕರು ಅವರು. ಎಲ್ಲಾ ವರ್ಗಕ್ಕೂ ನಾಯಕರಾಗಿ ಬೆಳಕು ತಂದವರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 14 ಅಡಿ ಎತ್ತರದ ಭವ್ಯ ಕಂಚಿನ ಪ್ರತಿಮೆಯನ್ನು ಎಐಸಿಸಿ ಅಧ್ಯಕ್ಷರು, ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ಮಲ್ಲಿಕಾರ್ಜುನ್ ಖರ್ಗೆ ಅವರೊಂದಿಗೆ ಅತ್ಯಂತ ಗೌರವದಿಂದ ಲೋಕಾರ್ಪಣೆಗೊಳಿಸಲಾಯಿತು.
ಬಾಬಾಸಾಹೇಬರು ಆಶಿಸಿದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಿಗುವಂತಾಗಬೇಕು. ಈ ಪ್ರತಿಮೆಯು ನಮಗೆ ಸದಾ ಸಂವಿಧಾನದ ಆಶಯಗಳನ್ನು ನೆನಪಿಸುವ ಮತ್ತು ಆ ದಾರಿಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲು ಪ್ರೇರೇಪಿಸುವ ಸಾಂಕೇತಿಕ ದಿಕ್ಸೂಚಿಯಾಗಿದೆ.
ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಕೆ.ಎಚ್. ಮುನಿಯಪ್ಪ, ಶ್ರೀ ಕೆ.ಜೆ. ಜಾರ್ಜ್, ಶಾಸಕರಾದ ಶರತ್ ಬಚ್ಚೇಗೌಡ, ಆನೇಕಲ್ ಶಿವಣ್ಣ, ಎನ್. ಶ್ರೀನಿವಾಸ್, ಧೀರಜ್ ಮುನಿರಾಜು, ಶ್ರೀನಿವಾಸ್, ಸಂಸದರಾದ ಡಾ. ಕೆ. ಸುಧಾಕರ್, ಎಂಎಲ್ಸಿ ರವಿ ಮತ್ತಿತರರು ಉಪಸ್ಥಿತರಿದ್ದರು.
ಚನ್ನಪಟ್ಟಣದ ಶಾಸಕರು ಹಾಗೂ ನಟರಾದ ಶ್ರೀ ಸಿ.ಪಿ. ಯೋಗೇಶ್ವರ್ ಅವರು ಹಾಗೂ ಅವರ ಪುತ್ರ ಧ್ಯಾನ್ ಯೋಗೇಶ್ವರ್ ಅವರ ಚಲನಚಿತ್ರದ ಮುಹೂರ್ತ ಸಮಾರಂಭದಲ್ಲಿ ಪಾಲ್ಗೊಂಡು, ಚಿತ್ರತಂಡಕ್ಕೆ ಶುಭಹಾರೈಸಿದೆನು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಚಿತ್ರರಂಗದ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
Bengaluru: Karnataka CM DK Shivakumar said that the government will bring a new footpath policy to ensure clear pedestrian access and impose fines up to Rs 1 lakh on illegal flex banners
"I have agreed that a new policy should be brought for footpaths. Citizens are facing a lot of trouble walking on footpaths. We have made footpaths after investing heavily, but vehicles are parked there, and business is being carried out. We must fix specific places for vendors and create an opportunity to keep footpaths clean for citizens to walk... That is why we have decided to bring a new policy for footpaths."
On the issue of illegal flex banners, he said, "No matter how much we say, flex banners keep coming up. All parties put them up; our party people also do. Everyone puts up flexes. The name of whoever is at the bottom will be fined. We have said that a fine of ₹50,000 to ₹1 lakh will be imposed for each flex. Because this flex business has become excessive. Birthday wishes, all that. If the government has something, there is a streamlined system for it. There is an advertisement board. Anyone can take that and do it. Apart from that, there is no permission to put up banners anywhere else."