ಜನನಾಯಕ, ಯುವಕರ ಧ್ವನಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ ನಿರಂತರವಾಗಿ ಹೋರಾಡುತ್ತಿರುವ ಶ್ರೀ ರಾಹುಲ್ ಗಾಂಧಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ನಿಮಗೆ ಉತ್ತಮ ಆರೋಗ್ಯ, ಸಂತೋಷ ಹಾಗೂ ದೇಶಸೇವೆಯ ಪಯಣದಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.
Happy Birthday @RahulGandhi Ji.
ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ಜನರ ಆಶೀರ್ವಾದ, ಪಕ್ಷದ ಕಾರ್ಯಕರ್ತರ ಪರಿಶ್ರಮ ಹಾಗೂ ನಾಯಕತ್ವದ ಮಾರ್ಗದರ್ಶನದಿಂದ ಈ ವಿಜಯ ಸಾಧ್ಯವಾಗಿದೆ. ಈ ಗೆಲುವು ರಾಜ್ಯದಲ್ಲಿ ಜನಪರ ಆಡಳಿತ ಮತ್ತು ಅಭಿವೃದ್ಧಿಯ ಕಾರ್ಯಗಳಿಗೆ ಬಲ ತುಂಬಲಿ ಎಂದು ಹಾರೈಸುತ್ತೇನೆ.
ಕರ್ನಾಟಕ ವಿಧಾನಸೌಧದಲ್ಲಿ ನಡೆದ ವಿಧಾನ ಪರಿಷತ್ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ನನ್ನ ಪಾತ್ರವನ್ನು ನಿರ್ವಹಿಸಿದೆ..
#LegislativeCouncilElection#Karnataka
ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಾನ್ಯರು ಶ್ರೀ ಬಿಕೆ ಹರಿಪ್ರಸಾದ್ ರವರನ್ನು ಭೇಟಿಯಾಗಿ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳನ್ನು ಸಲ್ಲಿಸಿದೆ. ಅವರ ನೇತೃತ್ವದಲ್ಲಿ ಪಕ್ಷವು ಮತ್ತಷ್ಟು ಸಂಘಟಿತವಾಗಿ ಬಲಿಷ್ಠವಾಗಲಿ ಎಂದು ಹಾರೈಸಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾದ ಶ್ರೀಯುತ @DKShivakumar ರವರಿಗೆ ಅಭಿನಂದನೆಗಳು.
ತಮ್ಮ ಚಾಣಾಕ್ಷತೆ, ದೂರ ದೃಷ್ಟಿಯ ನಾಯಕತ್ವದಿಂದ ಮತ್ತಷ್ಟು ಜನಪರ ಕಾರ್ಯಕ್ರಮ ಗಳೊಂದಿಗೆ ರಾಜ್ಯವು ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಪ್ರಾರ್ಥಿಸುತ್ತೇನೆ.
ಕರ್ನಾಟಕ ಸಚಿವ ಸಂಪುಟಕ್ಕೆ ನೂತನ ಸಚಿವರಾಗಿ ಆಯ್ಕೆಯಾದ ಶ್ರೀ ಯತೀಂದ್ರ ಸಿದ್ದರಾಮಯ್ಯ ರವರನ್ನು ಭೇಟಿಯಾಗಿ ಶುಭ ಕೋರಿದೆ. ರಾಜ್ಯದ ಅಭಿವೃದ್ಧಿ, ಜನಪರ ಆಡಳಿತ ಹಾಗೂ ಜನಸೇವೆಯ ಕಾರ್ಯಗಳಲ್ಲಿ ಅವರು ಯಶಸ್ಸು ಸಾಧಿಸಲಿ ಎಂದು ಹಾರೈಸಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾದ ಶ್ರೀಯುತ @DKShivakumar ರವರಿಗೆ ಅಭಿನಂದನೆಗಳು.
ತಮ್ಮ ಚಾಣಕ್ಯತೆ, ದೂರ ದೃಷ್ಟಿಯ ನಾಯಕತ್ವದಿಂದ ಮತ್ತಷ್ಟು ಜನಪರ ಕಾರ್ಯಗಳು ಕರ್ನಾಟಕ ರಾಜ್ಯವು ಮತ್ತಷ್ಟು ಸುಭಿಕ್ಷವಾಗಿರಲಿ ಎಂದು ಪ್ರಾರ್ಥಿಸುತ್ತೇನೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಆಯೋಜಿಸಿದ್ದ ಶಿಕ್ಷಣ ಎಕ್ಸ್ಪೋ ಕಾರ್ಯಕ್ರಮ ಉದ್ಘಾಟಿಸಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಶಿಕ್ಷಣ ಸಂಸ್ಥೆಗಳು ಪಾಲ್ಗೊಳ್ಳುವ
ಇಂತಹ ವೇದಿಕೆಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದು ಆಯೋಜಕರನ್ನು ಅಭಿನಂದಿಸಿದೆ.
#SuvarnaShikshana#Expo
Honoured to attend 75th Platinum Jubilee celebrations of UBDT College, Davanagere, alongside Vice President of India Sri CP Radhakrishnan and the Governor of Karnataka Sri Thawarchand Gehlot ravaru. A proud occasion celebrating the institution’s rich legacy, academic excellence
ಸಮಸ್ತ ಮುಸಲ್ಮಾನ್ ಬಾಂಧವರಿಗೆ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು.
ತ್ಯಾಗ ಮತ್ತು ಬಲಿದಾನದ ಸಂಕೇತವಾದ ಈ ಹಬ್ಬವೂ ಎಲ್ಲೆಡೆ ಸುಖ ಶಾಂತಿ, ಸೌಹಾರ್ದತೆ, ಸಮೃದ್ಧಿಗೆ ಪ್ರೇರಣೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
#ಬಕ್ರೀದ್#bakrid
ಸೀಟು ಹಂಚಿಕೆ ಪ್ರಕ್ರಿಯೆ, ಆಪ್ಷನ್ ಎಂಟ್ರಿ, ಛಾಯ್ಸ್ ಆಯ್ಕೆ, ಶುಲ್ಕ ಪಾವತಿ ಸೇರಿದಂತೆ ಹಲವು ಪ್ರಮುಖ ಮಾಹಿತಿಗಳನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಗುತ್ತದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಸ್ಲಾಟ್ ಬುಕ್ ಮಾಡಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಿ.
#UGCET2026 ಸಿಇಟಿ ಕೌನ್ಸೆಲಿಂಗ್ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿರುವ ಅನುಮಾನಗಳನ್ನು ನಿವಾರಿಸಲು #KEA ವತಿಯಿಂದ ಮೇ 25 ರಿಂದ 30 ರವರೆಗೆ ರಾಜ್ಯದ 65 ಸರ್ಕಾರಿ, ಅನುದಾನಿತ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ/ದಂತ ವೈದ್ಯಕೀಯ ಕಾಲೇಜುಗಳಲ್ಲಿ “ಸೀಟು ಹಂಚಿಕೆ ಮಂಥನ” ಕಾರ್ಯಕ್ರಮ ಆಯೋಜಿಸಲಾಗಿದೆ.
https://t.co/1pW4vXyST6
ಚಿಂತಾಮಣಿಯ ಆಜಾದ್ ಚೌಕದ ನವೀಕರಣ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಲಾಯಿತು, ಈ ವೇಳೆ ಕಾಮಗಾರಿಯ ವಿನ್ಯಾಸ ಹಾಗೂ ಗುಣಮಟ್ಟ ವೀಕ್ಷಿಸಿದೆ.
ತಿನಿಸುಗಳಿಗೆ ಪ್ರಸಿದ್ಧವಾದ ಆಜಾದ್ ಚೌಕದಲ್ಲಿ ನಾಗರಿಕರು ಹಾಗೂ ಕಾರ್ಯಕರ್ತರೊಂದಿಗೆ ಬೆರೆತು ಹೆಸರುವಾಸಿಯಾದ ದೋಸೆ ಮತ್ತು ತಿನಿಸುಗಳನ್ನು ಸವಿದೆ.
ವೈದ್ಯಕೀಯ ಕೋರ್ಸ್ ಹೊರತಾಗಿ ಇತರೆ ಎಲ್ಲಾ ವೃತ್ತಿಪರ ಕೋರ್ಸುಗಳ ಕೌನ್ಸಿಲಿಂಗ್ ಆರಂಭಿಸಲು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಖಾಸಗಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಶರಣಪ್ರಕಾಶ್ ಪಾಟೀಲ್ ಹಾಜರಿದ್ದರು.
#CET#Counselling#KEA
NEET ಪ್ರವೇಶ ಪರೀಕ್ಷೆ ರದ್ದಾಗಿದ್ದು ಮರು ಪರೀಕ್ಷೆ ಫಲಿತಾಂಶ ವಿಳಂಬವಾಗುವ ಹಿನ್ನೆಲೆಯಲ್ಲಿ, ಇಂಜಿನಿಯರ್ ಕೋರ್ಸ್ ಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಹಾಗೂ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಏರುಪೇರು ಆಗುವುದನ್ನು ನಿಯಂತ್ರಿಸಲು,
1/2
ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಹಾರ ವಿತರಣೆಯನ್ನು ಪರಿಹರಿಸಲಾಯಿತು.
ಈ ವೇಳೆ ಪರ್ಯಾಯ ಭೂಮಿ ನೀಡಬೇಕಾಗಿದ್ದ ರೈತರಿಗೆ ಸಹ ಶೀಘ್ರವಾಗಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಪಡೆದ ಪರಿಹಾರವನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಲು ಸಲಹೆ ನೀಡಿ ರೈತರಿಗೆ ಶುಭ ಕೋರಿದೆ.
ಚಿಂತಾಮಣಿಯ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ತಮ್ಮ ಭೂಮಿಯನ್ನು ನೀಡಿದ ಮಾರಪ್ಪಲ್ಲಿ ಮಲ್ಕಾಪುರ ಗ್ರಾಮಗಳ ವ್ಯಾಪ್ತಿಯ ರೈತರ ಭೂಮಿಯ ಮರ ಮಾಲ್ಕಿಗಳ ಪರಿಹಾರದ ಭಾಗವಾಗಿ ಇಂದು 77 ಜನ ಫಲಾನುಭವಿಗಳಿಗೆ 6.79 ಕೋಟಿ ಮೊತ್ತದ ಪರಿಹಾರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ವೈದ್ಯಕೀಯ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಗ್ರಾಮೀಣಾಭಿವೃದ್ಧಿ ಮತ್ತು ಐಟಿಬಿಟಿ ಸಚಿವರಾದ ಪ್ರಿಯಾಂಕ ಖರ್ಗೆ ಹಾಜರಿದ್ದು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಉನ್ನತ ಶಿಕ್ಷಣ ಇಲಾಖೆ ಬೆಂಗಳೂರುನಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ *ಕ್ಯಾಂಪಸ್ ಟು ಕರಿಯರ್* C2C ಕಾರ್ಯಕ್ರಮದ ಸಮಾರೋಪ ಸಮಾರಂಭ ದಲ್ಲಿ ಕೌಶಲ್ಯ,ತಂತ್ರಜ್ಞಾನ ಮತ್ತು ಆವಿಷ್ಕಾರಗಳೊಂದಿಗೆ ಉನ್ನತ ಶಿಕ್ಷಣದ ವಿದ್ಯಾರ್ಥಿಗಳನ್ನು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಜ್ಜುಗೊಳಿಸುವ ಬಗ್ಗೆ ಉನ್ನತ ಶಿಕ್ಷಣ ಇಲಾಖೆ,
1/3
ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಕೈಗೊಂಡಿರುವ ಹಲವಾರು ಉಪಕ್ರಮಗಳ ಬಗ್ಗೆ ಸ್ಪಷ್ಟ ಸಂದೇಶವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು ಹಾಗೂ ಉದ್ಯಮಿಗಳು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಉತ್ತರಿಸಲಾಯಿತು.
2/3