ಹೆಮ್ಮೆಯ ಕನ್ನಡಿಗ | Member of Parliament -Mandya | Union Minister Of Heavy Industries and Steel - GOI.| Former Chief Minister-Karnataka | ರಾಜ್ಯಾಧ್ಯಕ್ಷ, ಜೆಡಿಎಸ್
https://t.co/YXlHdo4bKE
ನೈಸ್ ರಸ್ತೆ ಯೋಜನೆಯ ಪಕ್ಕದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರು ಕುಟುಂಬ ಸದಸ್ಯರಿಗೆ ಇಷ್ಟು ದೊಡ್ಡ ಪ್ರಮಾಣದ ಭೂಮಿ ಹೇಗೆ ಬಂತು? ಕುಣಿಗಲ್ ಶಾಸಕ ರಂಗನಾಥ, ಅವರ ಪತ್ನಿ, ಮೈಸೂರಿನಲ್ಲಿರುವ ಸತ್ಯನಾರಾಯಣ ಮುಂತಾದವರಿಗೆಲ್ಲ ಈ ರಸ್ತೆ ಮಗ್ಗುಲಲಿಯೇ ಭೂಮಿ ಬಂದಿದ್ದು ಹೇಗೆ? ಎಂಬುದನ್ನು ನಾನು ಪ್ರಶ್ನೆ ಮಾಡುತ್ತಿದ್ದೇನೆ. ಇದಕ್ಕೆಲ್ಲ ಮುಖ್ಯಮಂತ್ರಿ ಉತ್ತರಿಸಬೇಕಾಗುತ್ತದೆ.
#ನಮ್ಮಭೂಮಿನಮ್ಮಹಕ್ಕು
#NiceLootsKarnataka
#NothingNice
@tv9kannada
2026ರ ಏಷ್ಯನ್ ಗೇಮ್ಸ್ನಲ್ಲಿ ಮಹಿಳೆಯರ 4x400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಹಾಗೂ ಮಿಶ್ರ 4x400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಹೆಮ್ಮೆಯ ಸಾಧನೆ ಮಾಡಿರುವ ಕರ್ನಾಟಕದ ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಐತಿಹಾಸಿಕ ಸಾಧನೆಯ ನಂತರ ಅವರು ತಾಯ್ನಾಡಿಗೆ ವಾಪಸ್ಸು ಬಂದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸುತ್ತಾ ಭವಿಷ್ಯದಲ್ಲಿ ಅವರು ಇನ್ನೂ ಎತ್ತರದ ಸಾಧನೆಗಳನ್ನು ಮಾಡಲಿ ಎಂದು ಹಾರೈಸುತ್ತೇನೆ. ಅಲ್ಲದೆ, ಪೂವಮ್ಮ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದೇನೆ. ಯುವಜನರಿಗೆ ಈ ಹೆಣ್ಣುಮಗಳು ಮಾದರಿ. ಅವರ ಸಾಧನೆ, ಪರಿಶ್ರಮ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ.
ಜೈ ಹಿಂದ್ 🇭🇺
#Poovamma
#AsianGames2026
ನೈಸ್ ಭೂ ಸಂತ್ರಸ್ತರನ್ನು ಭೇಟಿಯಾಗುವ ಸಂದರ್ಭದಲ್ಲಿ ಸೋಂಪುರದ ಬಳಿ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ಈ ಸಂದರ್ಭದಲ್ಲಿ ಭೂಮಿ ಕಳೆದುಕೊಂಡವರ ಅಹವಾಲು ಆಲಿಸಿದೆ.
"ಧೈರ್ಯಗುಂದಬೇಡಿ, ನಾನಿದ್ದೇನೆ.. ನಿಮ್ಮ ಪರವಾಗಿ ಹೋರಾಟ ನಡೆಸುತ್ತೇನೆ. ಯಾವುದೇ ಕಾರಣಕ್ಕೂ ಹಿಂದೆಜ್ಜೆ ಇರಿಸುವ ಪ್ರಶ್ನೆಯೇ ಇಲ್ಲ" ಎಂದು ಮಾತು ಕೊಟ್ಟಿದ್ದೇನೆ.
ಈ ಮಹತ್ವದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಟಿ.ಎನ್. ಜವರಾಯಿಗೌಡರು, ಮಾಜಿ ಶಾಸಕರಾದ ಶ್ರೀ ಎ.ಮಂಜುನಾಥ್ ಅವರು, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷರಾದ ಶ್ರೀ ಹೆಚ್.ಎಂ. ರಮೇಶ್ ಗೌಡರು, ಹಿರಿಯ ಮುಖಂಡರಾದ ಶ್ರೀ ರುದ್ರೇಶ್ ಅವರು ಸೇರಿದಂತೆ ಸೇರಿದಂತೆ ಅನೇಕ ಅಕ್ಕತಂಗಿಯರು, ಅಣ್ಣತಮ್ಮಂದಿರು ಸಭೆಯಲ್ಲಿ ಭಾಗಿಯಾಗಿದ್ದರು.
#ನಮ್ಮಭೂಮಿನಮ್ಮಹಕ್ಕು
#NiceLootsKarnataka
#NothingNice
ಸಣ್ಣಪುಟ್ಟ ರೈತರ ಒಂದು ಎಕರೆ, ಎರಡು ಎಕರೆ ಜಮೀನೆಲ್ಲ ನೈಸ್ ಪಾಲಾಗಿದೆ. ಆದರೆ, ಇಲ್ಲೊಬ್ಬ ವ್ಯಕ್ತಿಯ ಪರಿವಾರಕ್ಕೆ ಸೇರಿದ 200 ಎಕರೆಗೂ ಹೆಚ್ಚಿನ ಭೂಮಿ ಇದೆ. ಬಿ.ಎಂ.ಕಾವೆಲ್'ನಲ್ಲಿ ವಿಶಾಲವಾಗಿ ಕಾಣುವ ಈ ಭೂಮಿ ರಾಜ್ಯದ ಹಾಲಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಸೇರಿದ್ದು. ಇವರಿಗೆ ಮಾತ್ರ ನೂರಾರು ಎಕರೆ! ಬಡಜನರಿಗೆ ಮಾತ್ರ ಭೂಮಿ ಬೇಕಿಲ್ಲವಂತೆ!! ಇದು ಇವರ ನೀತಿ.
ಈ ನೈಸ್ ಕಂಪನಿ ಶ್ರೀ ಸಿದ್ದಗಂಗಾ ಮಠಕ್ಕೆ ಆಗಲಿ, ಬಡ ರೈತರಿಗೆ ಆಗಲಿ NOC ಕೊಡುವುದಿಲ್ಲ. ಆದರೆ, ಪ್ರಭಾವಗಳಿಗೆ ಸುನಾಯಸವಾಗಿ ಅದು ಲಭ್ಯವಾಗುತ್ತದೆ!
#ನಮ್ಮಭೂಮಿನಮ್ಮಹಕ್ಕು
#NiceLootsKarnataka
#NothingNice
ನೈಸ್ ಯೋಜನೆಗಾಗಿ ಭೂಮಿ ಕಳೆದುಕೊಂಡ ನೊಂದ ಭೂಮಾಲೀಕರನ್ನು ಭೇಟಿ ಮಾಡಿದ ಮತ್ತಷ್ಟು ದೃಶ್ಯಗಳು ಇಲ್ಲಿವೆ.
ಭೂಮಿ ಕಳೆದುಕೊಂಡ ನೋವು ಒಂಡೆಯಾದರೆ, ಆ ನಂತರ ಬದುಕಿನಲ್ಲಿ ಸಂಭವಿಸಿದ ಏರಿಳಿತಗಳ ಹೊಡೆತಕ್ಕೆ ನಲುಗಿದ ಬದುಕುಗಳ ದರ್ಶನ ಕಂಡು ಕಣ್ತುಂಬಿ ಬಂತು. ಒಂದು ಕಾಲದಲ್ಲಿ ಚೆನ್ನಾಗಿ ಬಾಳಿ ಬದುಕಿದ ಕುಟುಂಬಗಳು ಇಂದು ಸಂಕಷ್ಟಕ್ಕೆ ಸಿಲುಕಿ ಬಾಳುತ್ತಿರುವುದನ್ನು ನೋಡಿ ಅತೀವ ದುಃಖ ಉಂಟಾಯಿತು.
#ನಮ್ಮಭೂಮಿನಮ್ಮಹಕ್ಕು
#NiceLootsKarnataka
#NothingNice
📍ಬೆಂಗಳೂರು
ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (NICE) ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ನೊಂದ ಜನರನ್ನು ಭೇಟಿ ಮಾಡಲಾಯಿತು. ಈ ಸಂದರ್ಭದಲ್ಲಿ ಕಳೆದ 30 ವರ್ಷಗಳಿಂದ ಅವರು ಅನುಭವಿಸಿರುವ ಸಂಕಷ್ಟವನ್ನು ಆಲಿಸಿದ್ದೇನೆ. ಅವರ ಭೂಮಿಯನ್ನು ಆ ಜನರಿಗೇ ಬಿಟ್ಟುಕೊಡಬೇಕು. ಆ ನಿಟ್ಟಿನಲ್ಲಿ ಜನಾಂದೋಲನ ಆರಂಭಿಸಲಾಗುವುದು. ಅದಕ್ಕೆ ಪೂರ್ವಭಾವಿಯಾಗಿ ಮಾದಾವರದ ನೈಸ್ ಜಂಕ್ಷನ್ ಬಳಿ ಭೂಮಿ ಕಳೆದುಕೊಂಡ ನೂರಾರು ಜನರನ್ನು ಭೇಟಿಯಾಗಿ ಧೈರ್ಯ ಹೇಳುವ ಪ್ರಯತ್ನ ಮಾಡಿದ್ದೇನೆ.
#ನಮ್ಮಭೂಮಿನಮ್ಮಹಕ್ಕು
#NiceLootsKarnataka
#NothingNice
📍ಬೆಂಗಳೂರು
@JanataDal_S ಪಕ್ಷದ ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಹಾಗೂ ಭಾರತದ ದ್ವೀತಿಯ ಪ್ರಧಾನಿಗಳಾಗಿದ್ದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆ ಮಹಾನ್ ಚೇತನಗಳಿಗೆ ನಮನ ಸಮರ್ಪಿಸಲಾಯಿತು.🙏
ವಿಧಾನ ಪರಿಷತ್ ಸದಸ್ಯರಾದ ಶ್ರೀ ಟಿ.ಎ. ಶರವಣ ಅವರು, ಮಾಜಿ ಶಾಸಕರಾದ ಶ್ರೀ ನಾರಾಯಣ ರಾವ್ ಅವರು, ಶ್ರೀ ಕೆ.ಎನ್. ತಿಪ್ಪೇಸ್ವಾಮಿ ಅವರು, ಪಕ್ಷದ ಗ್ರೇಟರ್ ಬೆಂಗಳೂರು ಅಧ್ಯಕ್ಷರಾದ ಶ್ರೀ ಹೆಚ್.ಎಂ. ರಮೇಶ್ ಗೌಡರು, ಹಿರಿಯ ಮುಖಂಡ ಶ್ರೀ ಪ್ರಕಾಶ್ ಅವರು ಸೇರಿ ಅನೇಕ ಕಾರ್ಯಕರ್ತರು, ಮುಖಂಡರು ಭಾಗಿಯಾಗಿದ್ದರು.
#GandhiJayanti
#MahatmaGandhi
#LalBahadurShastri
ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (SIR) ಆರಂಭದಲ್ಲಿ ವ್ಯಾಪಕ ಅಕ್ರಮ ಎಸಗಿದ @INCKarnataka ಈಗ ಅದರ ವಿರುದ್ಧ ಮಾತನಾಡುತ್ತಿರುವುದು ನಾಚಿಕೆಗೇಡು. ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸದಸ್ಯರು ಸಂಪುಟ ಸಭೆಯನ್ನೇ ಅಲಕ್ಷಿಸಿ ರಸ್ತೆಯಲ್ಲಿ ಕೂತು ನಡೆಸಿದ ಪ್ರಹಸನ ಹಾಸ್ಯಾಸ್ಪದ. ಪ್ರತಿಭಟನೆ ನಡೆಸಿ ವಾಹನ ಸಂಚಾರ ಮತ್ತು ಜನತೆಗೆ ಅಡ್ಡಿಪಡಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಪೊಲೀಸರು ಕೂಡಲೇ ಪ್ರಕರಣ ದಾಖಲಿಸಬೇಕು.
ವೋಟ್ ಚೋರಿ ಎಂದು ಕಾಂಗ್ರೆಸ್ ಅನಗತ್ಯವಾಗಿ ರಂಪ ಮಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದ ಹಾಗಿದೆ. ಇವರು ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು, ಮನೆಗಳು ಸೇರಿ ನಾನಾ ಕಡೆ ಜನರನ್ನು ಗುಂಪುಗುಂಪಾಗಿ ಸೇರಿಸಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿಸಿದ್ದನ್ನು ನೋಡಿದ್ದೇವೆ. ಅದರ ವಿರುದ್ಧ @JanataDal_S ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಆಮೇಲೆ #NDA ಮೈತ್ರಿಕೂಟದ ನಾಯಕರೆಲ್ಲರೂ ಹೋಗಿ ಆಯೋಗಕ್ಕೆ ಪಿರ್ಯಾದು ನೀಡಿದ್ದೇವೆ. ಆದರೂ ಅಕ್ರಮ ಎಸಗಿದ ಕಾಂಗ್ರೆಸ್ ಪಕ್ಷದವರೇ 'ಅಕ್ರಮ ಅಕ್ರಮ' ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ನಾವು ದೂರು ಕೊಟ್ಟಾಗ ಮೌನಕ್ಕೆ ಶರಣಾಗಿದ್ದ ಸರಕಾರ, ಈಗ ಮಾತನಾಡುತ್ತಿದೆ. ದೆಹಲಿ ನಾಯಕರು ಬಿಸಿ ಮುಟ್ಟಿಸಿದ ಮೇಲೆ ಇವರು ಈ ಪ್ರಹಸನ ಆರಂಭ ಮಾಡಿದ್ದಾರೆ.
3 ದಿನಗಳ ಹಿಂದೆ ನಾನು #Nice ಯೋಜನೆ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ, ನೈಸ್ ಕಂಪನಿ ಜತೆ ಶಾಮೀಲಾಗಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬ ಸದಸ್ಯರು ಯೋಜನೆಯ ಭೂಮಿ ಲಪಟಾಯಿಸುವ ಬಗ್ಗೆ ದಾಖಲೆಗಳ ಸಮೇತ ಬಹಿರಂಗ ಮಾಡಿದ್ದೆ. ಆ ವಿಷಯ ರಾಜಕೀಯವಾಗಿ, ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಒಳಗಾಗುತ್ತಿರುವ ಸಂದರ್ಭದಲ್ಲಿ ಜನರ ಗಮನ ಬೇರೆಡೆಗೆ ಸೆಳೆಯಲು ಈ SIR ವಿಷಯ ಮುನ್ನೆಲೆಗೆ ತಂದಿದ್ದಾರೆ ಮುಖ್ಯಮಂತ್ರಿ.
ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ!!
#CongresFailsKarnataka #SIR
On the birth anniversary of former Prime Minister Lal Bahadur Shastri avaru, I pay my respectful tributes to a leader whose simplicity, integrity and unwavering commitment to the nation continue to inspire generations.
His call of “Jai Jawan, Jai Kisan” remains deeply connected to India’s strength, self-reliance and service to the nation.
#LalBahadurShastri #JaiJawanJaiKisan
On Gandhi Jayanti, I pay homage to Mahatma Gandhi avaru, whose life and ideals continue to remind us of the enduring values of truth, non-violence and public service.
May we uphold these principles in our collective journey towards a stronger, more inclusive India.
#GandhiJayanti #MahatmaGandhi
ರಾಷ್ಟ್ರದ ಎರಡನೇ ಪ್ರಧಾನಿಗಳು, ಸರಳತೆ ಮತ್ತು ಪ್ರಾಮಾಣಿಕತೆಯ ಸಾಕಾರಮೂರ್ತಿ, ಭಾರತರತ್ನ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಅವರಿಗೆ ಶತಶತ ನಮನಗಳನ್ನು ಸಮರ್ಪಿಸುತ್ತೇನೆ.
ದೇಶದ ರಕ್ಷಣೆಗಾಗಿ ಹೋರಾಡುವ ಸೈನಿಕ ಹಾಗೂ ಅನ್ನ ನೀಡುವ ರೈತನ ಮಹತ್ವವನ್ನು ಜಗತ್ತಿಗೆ ಸಾರಿದ ಅವರ 'ಜೈ ಜವಾನ್, ಜೈ ಕಿಸಾನ್' ಎಂಬ ಐತಿಹಾಸಿಕ ಘೋಷಣೆ ಇಂದಿಗೂ ಭಾರತೀಯರಲ್ಲಿ ದೇಶಭಕ್ತಿಯ ಕಿಚ್ಚನ್ನು ಜಾಗೃತಗೊಳಿಸುತ್ತಿದೆ. 1965ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಅವರು ದೇಶವನ್ನು ಮುನ್ನಡೆಸಿದ ರೀತಿ ಮತ್ತು ಅಪ್ರತಿಮ ನಾಯಕತ್ವ ನಮಗೆಲ್ಲರಿಗೂ ಸದಾ ಪ್ರೇರಣೆ. 🇮🇳🙏
#LalBahadurShastriJayanti #LalBahadurShastri
"ಜಗತ್ತಿನಲ್ಲಿ ನೀವು ಯಾವ ಬದಲಾವಣೆಯನ್ನು ನೋಡಲು ಬಯಸುತ್ತೀರೋ, ಮೊದಲು ಆ ಬದಲಾವಣೆ ನಿಮ್ಮಲ್ಲಿಯೇ ಆಗಲಿ. ದ್ವೇಷವನ್ನು ಪ್ರೀತಿಯಿಂದ, ಹಿಂಸೆಯನ್ನು ಅಹಿಂಸೆಯಿಂದ ಮಾತ್ರ ಗೆಲ್ಲಲು ಸಾಧ್ಯ." ಎಂದು ಪ್ರತಿಪಾದಿಸಿದ ಮಹಾತ್ಮ ಗಾಂಧೀಜಿ ಅವರನ್ನು ಅತ್ಯಂತ ಭಾವಪೂರ್ಣವಾಗಿ ಸ್ಮರಿಸಿ ನಮಿಸುತ್ತೇನೆ. ಅವರ ಸತ್ಯ, ಅಹಿಂಸೆ ಮತ್ತು ಶಾಂತಿಯ ತತ್ವಗಳು ನಮಗೆ ಎಂದೆಂದಿಗೂ ದಾರಿದೀಪ. ಸಮಸ್ತ ಜನತೆಗೆ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.
#GandhiJayanti #MahatmaGandhi
https://t.co/E71b0kOMeq
@KannadaRepublic ಸುದ್ದಿವಾಹಿನಿಯಲ್ಲಿ ನನ್ನ ಸಂದರ್ಶನ. ರಾಜ್ಯ ರಾಜಕಾರಣದ ಬೆಳವಣಿಗೆಗಳ ಜತೆಗೆ ಜನಪರವಾಗಿ ನಾನು ಕೈಗೆತ್ತಿಕೊಂಡಿರುವ ಹೋರಾಟಗಳ ಕುರಿತಾಗಿ ಅತ್ಯಂತ ವಿಸ್ತೃತವಾಗಿ ಚರ್ಚಿಸಲಾಯಿತು.
#Karnataka@JanataDal_S