ಮಿಸ್ಟರ್ @RAshokaBJP ಹಾಗೂ @BYVijayendra ಅವರೇ, ನಿಮಗೆ ಮರೆವಿನ ಕಾಯಿಲೆ ಇದೆ ಎಂದು ನಮಗೆ ಗೊತ್ತಿದೆ.
2019ರಲ್ಲಿ ನೀವು ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಾಗ ಸಿಎಂ ಆಗಿದ್ದ ಯಡಿಯೂರಪ್ಪ ಅವರು ಒಬ್ಬರೇ ಒಂದು ತಿಂಗಳ ಕಾಲ ಆಡಳಿತ ನಡೆಸಿದ್ದರು. ಆಗ ರಾಜ್ಯ ಪ್ರವಾಹಕ್ಕೆ ಸಿಲುಕಿ ತತ್ತರಿಸಿದ್ದರೂ ನಿಮ್ಮ ಹೈಕಮಾಂಡ್ ಒಬ್ಬ ಸಚಿವರ ನೇಮಕಕ್ಕೂ ಅವಕಾಶ ಕೊಡದೆ ಯಡಿಯೂರಪ್ಪ ಅವರೊಬ್ಬರನ್ನೇ ರಾಜ್ಯ ಸುತ್ತುವಂತೆ ಮಾಡಿದ್ದು ಮರೆತು ಹೋದರೆ.
ಅದು ಬಿಡಿ, 2023ರಲ್ಲಿ ನೀವು ಮಣ್ಣುಮುಕ್ಕಿದಾಗ ಆರು ತಿಂಗಳ ಕಾಲ ವಿರೋಧ ಪಕ್ಷದ ನಾಯಕ ನೇಮಕ ಮಾಡಲು ನಿಮ್ಮಿಂದ ಸಾಧ್ಯವಾಗಿರಲಿಲ್ಲ ಎಂದು ಮರೆತು ಹೋಯಿತೇ?
ನಮ್ಮ ಸರ್ಕಾರದಲ್ಲಿ ಅರ್ಧದಷ್ಟು ಮಂತ್ರಿಮಂಡಲವಿದೆ. ಆದರೂ ರಾಜ್ಯದಲ್ಲಿ ಆಡಳಿತ ಯಂತ್ರ ಎಲ್ಲೂ ಹಳಿ ತಪ್ಪದೇ ಸುಗಮವಾಗಿ ಸಾಗುತ್ತಿದೆ.
ಮನೆಯೊಂದು ಊರು ತುಂಬಾ ಬಾಗಿಲು ಎಂಬಂತೆ ಆಗಿರುವ ನಿಮ್ಮ ಪಕ್ಷದ ಬಗ್ಗೆ ನೋಡಿಕೊಳ್ಳಿ. ನಿಮ್ಮಲ್ಲಿ ಅಸಮರ್ಥತೆ ನೋಡಿ ನಿಮ್ಮ ಹೈಕಮಾಂಡ್, ಮೈತ್ರಿ ಪಕ್ಷದ ನಾಯಕರಿಗೆ ಮುಂದಿನ ಚುನಾವಣೆ ನೇತೃತ್ವ ಕೊಡುತ್ತಿದ್ದಾರೆ ಎಂದು ನಿಮ್ಮ ಪಕ್ಷದ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.
ನಿಮ್ಮ ಬುಡ ನೋಡಿಕೊಳ್ಳಿ, ಗಟ್ಟಿ ಮಾಡಿಕೊಳ್ಳಿ. ಕಾಂಗ್ರೆಸ್ ಬಗ್ಗೆ ಮಾತನಾಡುವುದರಲ್ಲೇ ಮೈಮರೆತರೆ ಕಳೆದು ಹೋಗುವುದು ನೀವೇ.
ಅಂದಹಾಗೆ, ನಿಮ್ಮ ಹೈಕಮಾಂಡ್ ನಿಮ್ಮನ್ನು ಈಡಿಯಟ್ ಎಂದು ಭಾವಿಸಿದ್ದು, ನಿಮ್ಮ ಸ್ಥಾನಕ್ಕೆ ಪರ್ಯಾಯ ಆಯ್ಕೆ ನೋಡುತ್ತಿರುವುದನ್ನು ಮರೆಯಬೇಡಿ.
ರಬ್ಬರ್ ಸ್ಟ್ಯಾಂಪ್ ಮುಖ್ಯಮಂತ್ರಿ @dkshivakumar ಅವರೇ,
ಕರ್ನಾಟಕ ಕಂಡ ಅತ್ಯಂತ ದುರ್ಬಲ ಹಾಗೂ ಅಸಹಾಯಕರ ಮುಖ್ಯಮಂತ್ರಿ ಎಂದರೆ ಅದು ನೀವೇ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಒಂದು ಕಡೆ ರಾಜ್ಯದಲ್ಲಿ ಕೃಷಿ, ಶಿಕ್ಷಣ, ಉನ್ನತ ಶಿಕ್ಷಣ, ಸಮಾಜ ಕಲ್ಯಾಣದಂತಹ ಪ್ರಮುಖ ಇಲಾಖೆಗಳು ಸಚಿವರಿಲ್ಲದೆ ಅನಾಥವಾಗಿ ಆಡಳಿತ ಯಂತ್ರ ಸಂಪೂರ್ಣ ಕಸಿದುಬಿದ್ದಿದೆ. ಬರ, ಕಾವೇರಿ ಬಿಕ್ಕಟ್ಟಿನಿಂದ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ.
ಆದರೆ, ನಿಮ್ಮ ದುರಹಂಕಾರಿ ಹೈಕಮಾಂಡ್ ಮತ್ತು ನಾಲಾಯಕ್ ನಾಯಕ @RahulGandhi ಅವರಿಗೆ ಮಾತ್ರ ಕರ್ನಾಟಕದ ಹಿತಾಸಕ್ತಿಗಿಂತ ತಮ್ಮ ರಾಜಕೀಯ ಮೇಲಾಟವೇ ಹೆಚ್ಚಾಯಿತು.
ಮುಖ್ಯಮಂತ್ರಿ ಆದಿಯಾಗಿ 40-45 ಸಚಿವಾಕಾಂಕ್ಷಿ ಶಾಸಕರನ್ನು ಕಳೆದ ಒಂದು ವಾರದಿಂದ ದೆಹಲಿಯ ಬೀದಿಗಳಲ್ಲಿ, ಹೈಕಮಾಂಡ್ ಅರಮನೆಯ ಪಡಸಾಲೆಗಳಲ್ಲಿ ಚಾತಕ ಪಕ್ಷಿಗಳಂತೆ ಕಾಯಿಸಿ, ಅಪಮಾನಿಸುತ್ತಿದ್ದರೂ ಹೈಕಮಾಂಡ್ ನಾಯಕರ ಮುಂದೆ ಧ್ವನಿ ಎತ್ತಲಾಗದ ನಿಮ್ಮ ಈ ಅಸಹಾಯಕತೆಯನ್ನ ಗುಲಾಮಗಿರಿ ಅನ್ನದೇ ಇನ್ನೇನ್ನಲು ಸಾಧ್ಯ?
ಪ್ರಮಾಣ ವಚನ ಸ್ವೀಕರಿಸಿ ಎರಡು ತಿಂಗಳಾಗುತ್ತಾ ಬಂದರೂ ಒಂದು ಸಂಪುಟ ವಿಸ್ತರಣೆ ಮಾಡಲು ದೆಹಲಿ ಹೈಕಮಾಂಡ್ ಬಾಗಿಲಲ್ಲಿ ಕಾವಲು ಕಾಯುತ್ತಾ ನಿಂತಿರುವುದು 7 ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಘೋರ ಅವಮಾನ.
ಅಧಿಕಾರಕ್ಕಾಗಿ ಸ್ವಾಭಿಮಾನವನ್ನೇ ದೆಹಲಿ ಸುಲ್ತಾನರ ಅಡಿಗೆ ಇಟ್ಟಿರುವ ನಿಮಗೇಕೆ ಬೇಕು ಈ ಮುಖ್ಯಮಂತ್ರಿ ಕುರ್ಚಿ?
ನಿಮ್ಮ ಹೈಕಮಾಂಡ್ ಆಟಾಟೋಪಕ್ಕೆ ರಾಜ್ಯದ ಆಡಳಿತ, ಅಭಿವೃದ್ಧಿ ಬಲಿಯಾಗುವುದನ್ನು ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ.
#CongressFailsKarnataka
ಪೊಲೀಸ್ ಇಲಾಖೆಯ 7905 ಹುದ್ದೆಗಳಿಗೆ ಆ.8 ರಿಂದ ನೇಮಕಾತಿ ಪರೀಕ್ಷೆ ನಡೆಯಲಿದ್ದು, ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಆಯ್ಕೆಗೆ ಕಾಂಗ್ರೆಸ್ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಅರ್ಹತಾ ಪರೀಕ್ಷೆಯಲ್ಲಿ ಅಕ್ರಮ ಮಾಡಿ ಸಿಕ್ಕಿಬಿದ್ದರೆ ಮತ್ತೆ ಯಾವುದೇ ಸರ್ಕಾರಿ ಹುದ್ದೆಗೆ ಪರೀಕ್ಷೆ ಬರೆಯಲು ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಅಭ್ಯರ್ಥಿಯ ಅರ್ಹತೆಗೆ ನಮ್ಮ ಮೊದಲ ಆದ್ಯತೆ.
ಎಥನಾಲ್ ಬಳಕೆಯಿಂದ ಮೈಲೇಜೂ ಇಲ್ಲ, ಜನಸಾಮಾನ್ಯರ ಜೇಬಿಗೂ ಕತ್ತರಿ…
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇ20 ಬಳಕೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬ ಬಗ್ಗೆ ನೀಡಿದ್ದ ಉದ್ದನೆಯ ಪಟ್ಟಿ ಹಸಿ ಸುಳ್ಳು ಎಂಬುದೀಗ ಬಟಾಬಯಲಾಗಿದೆ. ಎಥೆನಾಲ್ ಆಮದು ಸಹ ದುಬಾರಿಯಾಗಿದ್ದು, ದೇಶದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ.
ಇಷ್ಟಾದ್ರೂ ಎಥನಾಲ್ ಬಗ್ಗೆ ಇವರಿಗೇಕೆ ಇಷ್ಟೊಂದು ವ್ಯಾಮೋಹ? ಇವರು ಯಾರನ್ನು ಮೆಚ್ಚಿಸಲು ಹೊರಟಿದ್ದಾರೆ?
ಕಾಮನ್ವೆಲ್ತ್ ಕ್ರೀಡಾಕೂಟದ 7ನೇ ದಿನ ಪದಕ ಗೆದ್ದ ಕ್ರೀಡಾ ಸಾಧಕರಿಗೆ ಹಾರ್ದಿಕ ಅಭಿನಂದನೆಗಳು.
ಪುರುಷರ 100 ಮೀ. ಟಿ47ರಲ್ಲಿ ದಿಲೀಪ್ ಗವಿತ್ ಚಿನ್ನದ ಪದಕ ಗೆದ್ದಿದ್ದಾರೆ.
ಕೇರಳದ ಮೊಹಮ್ಮದ್ ಬಾಸಿಲ್ ಬೆಳ್ಳಿ ಪದಕ ಎತ್ತಿದ್ದಾರೆ.
ಲಾಂಗ್ ಜಂಪ್ ನಲ್ಲಿ ಮುರಳಿ ಶ್ರೀಶಂಕರ್ ಬೆಳ್ಳಿಗೆ ಕೊರಳೊಡ್ಡಿದ್ದಾರೆ.
Freedom is a fundamental human right, never a privilege. On World Day Against Trafficking in Persons, let us renew our resolve to end exploitation, dismantle trafficking networks, protect the vulnerable, and ensure every survivor finds justice, dignity, and hope.
#WorldDayAgainstTraffickingInPersons #EndHumanTrafficking
ನಿಷ್ಕಲ್ಮಶ, ಪಾರದರ್ಶಕ, ಕಳಂಕ ರಹಿತ ರಾಜಕಾರಣ ಮಾಡಿ, ದೇಶವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಿದ್ದ ಮಾಜಿ ಪ್ರಧಾನಿ ಮನಮೋಹನ್ ಅವರಿಗೆ ಜಯ ಸಿಕ್ಕಿದೆ.
ಅವರ ವಿರುದ್ಧ ಅಪಪ್ರಚಾರ ಮಾಡಿ ಅವರ ಹೆಸರಿಗೆ ಮಸಿ ಬಳಿಯುವ ದುರುಳರ ಕುತಂತ್ರಕ್ಕೆ ಸೋಲಾಗಿದೆ.
ಇವರು ನಮ್ಮೆಲ್ಲರ ಹೆಮ್ಮೆಯ 'ಮನ'ಮೋಹನ ಸಿಂಗ್.
ಬೆಂಗಳೂರಿನ ಆಸ್ತಿ ಮಾಲೀಕರಿಗೆ ಕಾಂಗ್ರೆಸ್ ಸರ್ಕಾರ ಸಿಹಿ ಸುದ್ದಿ ನೀಡಿದೆ.ಬಿ ಖಾತಾ ಮತ್ತು ಏಕ ನಿವೇಶನದ ಎ ಖಾತಾ ನೋಂದಣಿ ಶುಲ್ಕವನ್ನು ಶೇ.5 ರಿಂದ ಶೇ.2ಕ್ಕೆ ಇಳಿಸಿದ್ದು, ನಿವೇಶನದಾರರು ಆಗಸ್ಟ್ 23ರವರೆಗೆ ಈ ಸೌಲಭ್ಯವನ್ನು ಪಡೆಯಬಹುದು. ಈ ಮೂಲಕ ಸರ್ಕಾರ ಪಾರದರ್ಶಕ ಹಾಗೂ ಜನಸ್ನೇಹಿ ಆಡಳಿತಕ್ಕೆ ನಾಂದಿ ಹಾಡಿದೆ.
ಅತ್ಯಾಚಾರಿಗಳು ಹಾಗೂ ಅತ್ಯಾಚಾರಿಗಳ ಸಮರ್ಥಕರು ಎಂದರೆ ಬಿಜೆಪಿಯವರಿಗೆ ಎಲ್ಲಿಲ್ಲದ ಪ್ರೀತಿ.
ಮಹಿಳೆಯರು, ಅದರಲ್ಲೂ ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯ ಕೊಡಿಸಲಾಗದವರು ಶಿಕ್ಷಣ ಸಚಿವರಾಗಿದ್ದೇ ಈ ದೇಶದ ದುರಂತ. ಬಿಜೆಪಿಯಲ್ಲಿ ಸಚಿವ ಆಗೋದಕ್ಕೆ ಅನುಭವ ಬೇಕಿಲ್ಲ; ಅತ್ಯಾಚಾರಿಗಳ ಪರ ವಕಾಲತ್ತು ವಹಿಸಿದ್ರೆ ಸಾಕು ಎಂಬುದು ಸಾಬೀತಾಗಿದೆ. ಅತ್ಯಾಚಾರಿಗಳಿಗೆ ಹಾರ ಹಾಕಿ ಸ್ವಾಗತಿಸೋದು ಸುಸಂಸ್ಕೃತಿಯಾಗಿದೆ.
ಬಿಜೆಪಿಯಲ್ಲಿ ಶಿಕ್ಷಣ ಸಚಿವರಾಗಲು ಶಿಕ್ಷಣ ಕ್ಷೇತ್ರದ ಅನುಭವ ಬೇಕಿಲ್ಲ; ಅತ್ಯಾಚಾರಿಗಳ ಬಿಡುಗಡೆಯನ್ನು ಸಮರ್ಥಿಸುವ ‘ಸಂಸ್ಕಾರ’ ಇದ್ದರೆ ಸಾಕೇ?!
ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳ ಬಿಡುಗಡೆಯನ್ನು ನಾಚಿಕೆಯಿಲ್ಲದೆ ಸಮರ್ಥಿಸಿದ್ದ @JoshiPralhad ಇಂದು ದೇಶದ ಶಿಕ್ಷಣ ಖಾತೆಯ ಹೊಣೆ ನೀಡಿರುವುದು ಈ ದೇಶದ ದುರಂತವೇ ಸರಿ.
ಅತ್ಯಾಚಾರಿಗಳಿಗೆ ಹಾರ ಹಾಕಿ ಸ್ವಾಗತಿಸುವುದು @BJP4India ಕಾರ್ಯಕರ್ತರ ಸಂಸ್ಕೃತಿಯಾದರೇ; ಅತ್ಯಾಚಾರಿಗಳ ಬಿಡುಗಡೆಯನ್ನು ಸಮರ್ಥಿಸುವುದು ಜೋಶಿಯ ರಾಜಕೀಯ ಸಂಸ್ಕೃತಿ; ಸಮರ್ಥಿಸುವವರನ್ನೇ ಸಚಿವ ಸ್ಥಾನ ನೀಡುವುದು @narendramodi ಸರ್ಕಾರದ ನೈತಿಕ ಸಂಸ್ಕೃತಿ!. ಇದು ಶಿಕ್ಷಣ ಸಚಿವಾಲಯವೋ ಅಥವಾ ಅತ್ಯಾಚಾರಿಗಳ ಸಮರ್ಥಕರ ರಾಜಕೀಯ ಪುನರ್ವಸತಿ ಕೇಂದ್ರವೋ?
“ಬೇಟಿ ಬಚಾವೋ” ಎಂದು ವೇದಿಕೆಗಳಲ್ಲಿ ಘೋಷಿಸುವ ಬಿಜೆಪಿ, ಅಧಿಕಾರದಲ್ಲಿ ಮಾತ್ರ “ಅತ್ಯಾಚಾರಿ ಬಚಾವೋ - ಸಮರ್ಥಕನಿಗೆ ಮಂತ್ರಿಪದವಿ ಕೊಡೊ” ನೀತಿ ಅನುಸರಿಸುತ್ತಿದೆ. ಮಹಿಳೆಯರಿಗೆ ನ್ಯಾಯ ಕೊಡಲಾಗದವರು, ವಿದ್ಯಾರ್ಥಿಗಳ ನೋವನ್ನು ಕೇಳಲಾಗದವರು ದೇಶದ ಶಿಕ್ಷಣ ಸಚಿವರಾಗಿ ನೇಮಕವಾಗುವುದು ಈ ದೇಶದ ದುರಂತ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ, ನಿಮ್ಮ ಸಚಿವ ಸಂಪುಟದ ಅರ್ಹತಾ ಪರೀಕ್ಷೆಯ ಪ್ರಶ್ನೆಗಳು ಹೀಗಿವೆಯೇ? ಮಹಿಳೆಯರ ಕಣ್ಣೀರನ್ನು ನಿರ್ಲಕ್ಷಿಸಿದ್ದೀರಾ? ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸುವುದನ್ನು ಮೌನವಾಗಿ ನೋಡಿದ್ದೀರಾ? ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದನ್ನು ಮೌನವಾಗಿ ಸಮ್ಮಿತಿಸಿದ್ದೀರಾ? ಅತ್ಯಾಚಾರಿಗಳ ಬಿಡುಗಡೆಯನ್ನು ಸಮರ್ಥಿಸಿದ್ದೀರಾ? ಹಾಗಾದರೆ ನೀವು ಶಿಕ್ಷಣ ಸಚಿವರಾಗಲು ಸಂಪೂರ್ಣ ಅರ್ಹರು!..
ಕೇಂದ್ರ ಸಚಿವ ಜೋಶಿಯ ಸಹೋದರನ ವಿರುದ್ಧ ದೈಹಿಕ ಶೋಷಣೆಯ ಗಂಭೀರ ಆರೋಪ ಮಾಡಿರುವ ಮಹಿಳೆಯೊಬ್ಬರು ನ್ಯಾಯಕ್ಕಾಗಿ ಧರಣಿ ನಡೆಸುತ್ತಿದ್ದಾರೆ. ಆರೋಪದ ಸತ್ಯಾಸತ್ಯತೆ ನಿಷ್ಪಕ್ಷಪಾತ ತನಿಖೆಯಿಂದ ಹೊರಬರಲಿ. ಆದರೆ ಮಹಿಳೆಯೊಬ್ಬರ ನ್ಯಾಯದ ಕೂಗಿಗೂ ಸ್ಪಂದಿಸದ ಜೋಶಿ,ಈ ದೇಶದ ವಿದ್ಯಾರ್ಥಿಗಳಿಗೆ ಯಾವ ನೈತಿಕತೆಯ ಪಾಠ ಹೇಳುತ್ತಾರೆ?
ಮಹಿಳೆ ಬೀದಿಯಲ್ಲಿ ನ್ಯಾಯಕ್ಕಾಗಿ ಕುಳಿತಿದ್ದಾಳೆ; ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಬೀದಿಗಿಳಿದಿದ್ದಾರೆ; ಜೋಶಿಯವರು ಮಾತ್ರ ದೆಹಲಿಯ ಅಧಿಕಾರದ ಕುರ್ಚಿಯಲ್ಲಿ ಕುಳಿತು ಶಿಕ್ಷಣದ ಪಾಠ ಹೇಳುತ್ತಿದ್ದಾರೆ! ಮೋದಿ ಆಡಳಿತದ ನೈತಿಕ ದಿವಾಳಿತನಕ್ಕೆ ಇದಕ್ಕಿಂತ ಸ್ಪಷ್ಟ ಚಿತ್ರಣ ಇನ್ನೇನು ಬೇಕು?
ಶಿಕ್ಷಣ ಸಚಿವರನ್ನು ಆಯ್ಕೆ ಮಾಡುವ ಮೊದಲು ವಿರೋಧ ಪಕ್ಷದ ಸಲಹೆ ಕೇಳಬೇಕೆಂಬ ನಿರೀಕ್ಷೆಯಂತೂ ನಮಗಿಲ್ಲ. ಕನಿಷ್ಠ ತಮ್ಮದೇ ಸಚಿವ ಸಂಪುಟದ ಸಹೋದ್ಯೋಗಿ @hd_kumaraswamy ಯವರ ಮಾತನ್ನಾದರೂ ಮೋದಿ ಕೇಳಬಹುದಿತ್ತು. ಜೋಶಿಯ “ಸಂಸ್ಕೃತಿ” ಕುರಿತು ಅವರು ಈಗಾಗಲೇ ಅದ್ಭುತವಾದ ಅರ್ಹತಾ ಪ್ರಮಾಣಪತ್ರವೇ ನೀಡಿದ್ದಾರೆ!
“ಮಹಾತ್ಮ ಗಾಂಧಿಯನ್ನು ಕೊಂದ ವರ್ಗಕ್ಕೆ ಸೇರಿದವರು”, “ಶೃಂಗೇರಿ ಮಠದ ಮೇಲೆ ದಾಳಿ ನಡೆಸಿದ ಪೇಶ್ವೆಗಳ ವಂಶಸ್ಥರು”, “ಜೋಶಿಗೆ ಸಂಸ್ಕೃತಿಯೇ ಇಲ್ಲ—ಅದು ಬೇಕಾಗಿಯೂ ಇಲ್ಲ”, “ಕುತಂತ್ರ ರಾಜಕೀಯ ಮಾಡುವ ಪಾರ್ಥೇನಿಯಂ” ಎಂದು ಜೋಶಿಯವರ ಗುಣಗಾನ ಮಾಡಿದ್ದವರು ಇದೇ ಕುಮಾರಸ್ವಾಮಿ. ಇಂತಹ ಮಹೋನ್ನತ ‘ಪ್ರಶಂಸಾಪತ್ರ’ ಪಡೆದ ವ್ಯಕ್ತಿಗೇ ದೇಶದ ಶಿಕ್ಷಣ ಖಾತೆ ನೀಡಿರುವುದು ಮೋದಿ ಸರ್ಕಾರದ ಆಯ್ಕೆ ಪ್ರಕ್ರಿಯೆ ಎಷ್ಟು ಸಂಸ್ಕಾರಯುತವಾಗಿದೆ ಎಂಬುದಕ್ಕೆ ಸಾಕ್ಷಿ!
#RapistDefenderJoshi
#ShameOnPrahladJoshi
#JusticeForWomen
#BJPProtectsRapists
#WomenDeserveJustice
ಎಸ್ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಹಕ್ಕು ರಕ್ಷಣೆಗಾಗಿ ಕಾಂಗ್ರೆಸ್ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ರಾಜ್ಯದ 4.85 ಕೋಟಿ ಕುಟುಂಬಳಿಗೆ ಉಚಿತ ಜಾತಿ ಪ್ರಮಾಣಪತ್ರ ಹಾಗೂ ಶಾಶ್ವತ ನಿವಾಸ ದೃಢೀಕರಣ ಪತ್ರವನ್ನು ಮನೆ ಮನೆಗೆ ತಲುಪಿಸುತ್ತಿದೆ. ಈ ಮೂಲಕ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸಿದ ದೇಶದ ಮೊದಲ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ, ಕಾರ್ಯಕರ್ತರ ಪ್ರೀತಿಯ ನಾಯಕ, ಸಂಘಟನೆ, ಹೋರಾಟವನ್ನೇ ಜೀವನವನ್ನಾಗಿಸಿಕೊಂಡು ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ಶ್ರಮಿಸಿರುವ ನಮ್ಮೆಲ್ಲರ ನೆಚ್ಚಿನ ಅಧ್ಯಕ್ಷರಾದ ಶ್ರೀ @HariprasadBK2 ಅವರಿಗೆ ಜನ್ಮದಿನದ ಶುಭಾಶಯಗಳು.