ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಒಟ್ಟು 39 ಪದಕ (13 ಚಿನ್ನ, 17 ಬೆಳ್ಳಿ, 9 ಕಂಚು) ಗೆದ್ದು, ಪದಕ ಪಟ್ಟಿಯಲ್ಲಿ ಭಾರತವನ್ನು 4ನೇ ಸ್ಥಾನಕ್ಕೇರಿಸಿದ ನಮ್ಮ ಹೆಮ್ಮೆಯ ಕ್ರೀಡಾಪಟುಗಳಿಗೆ ಅಭಿನಂದನೆಗಳು.
ಜನಕಲ್ಯಾಣದ ಪಥದಲ್ಲಿ ಮುನ್ನಡೆದ ಜನಪರ ನಾಯಕರು, ಅಹಿಂದ ವರ್ಗಗಳ ಹೆಮ್ಮೆಯ ಜನನಾಯಕರಾದ ಹಾಗೂ ನಾಡಿನ ಹೆಮ್ಮೆಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ದೇವರ ಅನುಗ್ರಹ ಸದಾ ನಿಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ.
ಪಕ್ಷದ ಮುಖಂಡರು, ಮಾಜಿ ಸಚಿವರಾದ ಶ್ರೀ ಬಿ.ಝಡ್. ಜಮೀರ್ ಅಹಮದ್ ಖಾನ್ @BZZameerAhmedK ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಸರ್ವಶಕ್ತನಾದ ದೇವರು ತಮಗೆ ಆಯುಷ್ಯ, ಆರೋಗ್ಯ ಮತ್ತು ಜನಸೇವೆ ಮಾಡುವ ಹೆಚ್ಚಿನ ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.
ಪಕ್ಷದ ಮುಖಂಡರು, ಸಹೋದರ ಸಮಾನರಾದ ಶ್ರೀ ಬಿ.ಝಡ್. ಜಮೀರ್ ಅಹಮದ್ ಖಾನ್ @BZZameerAhmedK ಅವರಿಗೆ ಜನ್ಮದಿನದ ಶುಭಾಶಯ ಕೋರಲಾಯಿತು.
ಸರ್ವಶಕ್ತನಾದ ದೇವರು ತಮಗೆ ಆಯುಷ್ಯ, ಆರೋಗ್ಯ ಮತ್ತು ಜನಸೇವೆ ಮಾಡುವ ಹೆಚ್ಚಿನ ಶಕ್ತಿಯನ್ನು ಕರುಣಿಸಲಿ ಎಂದು ಶುಭ ಹಾರೈಸಿದೆ.
World Wide Web Day is observed all over the world on August 1st each year dedicated to web browsing, the online activity that brings the whole world to your fingertips, and places a wealth of knowledge at your feet...
#WorldWideWebDay
"ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನ"
ನಿಶ್ಚಿಂತೆಯಿಂದ ಉಸಿರಾಡಿ, ಜೀವನದಲ್ಲಿ ಇನ್ನಷ್ಟು ದೀರ್ಘಕಾಲ ಬದುಕಿ. ಎಲ್ಲರೂ ಒಂದಾಗಿ ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸೋಣ. - @MLAAbbayyaHD72#WorldLungCancerDay
ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಎಂಬ ಘೋಷಣೆಯೊಂದಿಗೆ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಸ್ಫೂರ್ತಿ ತುಂಬಿ, ಬ್ರಿಟಿಷರಿಗೆ ಸವಾಲಾಗಿ ನಿಂತ ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು. - @MLAAbbayyaHD72
Happy System Administrator Appreciation Day! 🎉
To all the system admins working behind the scenes: today is your day. Thank you for keeping the digital world running!
#SysAdminDay
ಜಲಿಯನ್ವಾಲಾ ಬಾಗ್ನ ರಕ್ತಸಿಕ್ತ ನೆನಪಿಗೆ ನ್ಯಾಯ ದೊರಕಿಸಲು ತನ್ನ ಜೀವವನ್ನೇ ಪಣಕ್ಕಿಟ್ಟ ಮಹಾನ್ ದೇಶಭಕ್ತ ಸರ್ದಾರ್ ಉದಮ್ ಸಿಂಗ್ ಅವರ ಪುಣ್ಯತಿಥಿಯಂದು ಆ ವೀರ ಚೇತನಕ್ಕೆ ಗೌರವ ನಮನಗಳು.
ರಾಷ್ಟ್ರಕ್ಕಾಗಿ ಬದುಕಿದ ಅವರ ಜೀವನ ಕೇವಲ ಇತಿಹಾಸವಲ್ಲ, ಸ್ಫೂರ್ತಿ.
#SardarUdhamSingh
ಮಾಜಿ ಸಂಸದರು ಹಾಗೂ ಸಜ್ಜನ ರಾಜಕಾರಣಿ
ದಿ. ಶ್ರೀ ಆರ್. ಧ್ರುವನಾರಾಯಣ್
ಜನ್ಮದಿನದಂದು ಗೌರವ ನಮನಗಳು.
ಸಂಸದರಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಸ ಕ್ರಾಂತಿ ಸೃಷ್ಟಿಸಿ, ತಮ್ಮ ಸರಳತೆ, ನಮ್ರತೆ ಹಾಗೂ ಪ್ರಾಮಾಣಿಕತೆಯಿಂದ ಪ್ರತಿಯೊಬ್ಬರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ ಮಹಾನ್ ಚೇತನ. - @MLAAbbayyaHD72
ಕರ್ನಾಟಕದ ಸಂಸದರೊಬ್ಬರು ದೇಶದ ಶಿಕ್ಷಣ ಸಚಿವರಾದರೆಂದು ನಾವೆಲ್ಲರೂ ಹೆಮ್ಮೆ ಪಡಬೇಕಾಗಿತ್ತು, ಆದರೆ ಸನ್ಮಾನ್ಯ @narendramodi ಅವರು ಮಹಿಳೆಯ ಅತ್ಯಾಚಾರಿಗಳನ್ನು ಸಮರ್ಥಿಸಿದ್ದ ಸಂಸದ @JoshiPralhad ಅವರನ್ನು ಶಿಕ್ಷಣ ಸಚಿವನನ್ನಾಗಿ ಮಾಡಿ ಕನ್ನಡಿಗರೆಲ್ಲರೂ ತಲೆತಗ್ಗಿಸುವ ಹಾಗೆ ಮಾಡಿದ್ದಾರೆ.
ನಿರ್ಗಮಿತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗಿಂತ ಪ್ರಹ್ಲಾದ್ ಜೋಷಿ ಅವರು ಯಾವುದೇ ರೀತಿ ಭಿನ್ನರಲ್ಲ, ಇವರಿಬ್ಬರೂ ಸೈದ್ಧಾಂತಿಕವಾಗಿ ಅವಳಿ-ಜವಳಿಗಳು. ಇಬ್ಬರೂ ಸಂಘ ಪರಿವಾರದ ಎಬಿವಿಪಿಯಿಂದ ಪಕ್ಷಕ್ಕೆ ಬಂದವರು. ಮಹಿಳೆಯರು, ದಲಿತರು, ಬಡವರು, ಹಿಂದುಳಿದ ಜಾತಿಗಳು ಮತ್ತು ಮುಸ್ಲಿಂ - ಕ್ರಿಶ್ಚಿಯನರ ಬಗ್ಗೆ ಆರ್.ಎಸ್.ಎಸ್ ಹೊಂದಿರುವ ಅಭಿಪ್ರಾಯವನ್ನೇ ಹೊಂದಿದವರು. ಇದಕ್ಕಾಗಿಯೇ ಪ್ರಧಾನ್ ಅವರ ಸ್ಥಾನಕ್ಕೆ ಜೋಷಿ ಅವರನ್ನು ತಂದು ಕೂರಿಸಲಾಗಿದೆ. ಇದೊಂದು ರೀತಿ ಊದುವುದನ್ನು ಕೊಟ್ಟು ಬಾರಿಸುವುದನ್ನು ಕೊಂಡು ಬಂದಂತೆ. ಬದಲಾಗಿದ್ದು ಪಾತ್ರಧಾರಿ ಅಷ್ಟೆ, ಸೂತ್ರಧಾರಿಗಳಾದ ಆರ್.ಎಸ್.ಎಸ್ ನ ನಿರ್ದೇಶನದಂತೆ ಇವರೂ ನಡೆದುಕೊಳ್ಳಬೇಕಾಗುತ್ತದೆ.
ಗುಜರಾತ್ ಗಲಭೆಯ ಕಾಲದಲ್ಲಿ ಬಿಲ್ಕಿಸ್ ಭಾನು ಎಂಬ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರಿಗಳನ್ನು 2022ರಲ್ಲಿ ಗುಜರಾತ್ ಸರ್ಕಾರ ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿದ್ದನ್ನು ಪ್ರಹ್ಲಾದ ಜೋಷಿ ಅವರು ಸಮರ್ಥಿಸಿ ಅತ್ಯಾಚಾರಿಗಳ ಪರವಾಗಿ ಮಾತನಾಡಿದ್ದರು. ಇಂತಹವರು ಶಿಕ್ಷಣ ಸಚಿವರಾದರೆ ದೇಶದ ಶಿಕ್ಷಣ ವ್ಯವಸ್ಥೆಯ ಗತಿ ಏನಾಗಬಹುದು ಎನ್ನುವುದು ನಮ್ಮೆಲ್ಲರ ಈಗಿನ ಆತಂಕ.
ವಿರೋಧ ಪಕ್ಷದ ನಾಯಕರಾದ @RahulGandhi ಅವರು ಮತ್ತು ಸಂಸದೆ @priyankagandhi ಅವರು ಲೋಕಸಭೆಯಲ್ಲಿ ಪ್ರಹ್ಲಾದ್ ಜೋಷಿ ಅವರ ಮುಖವಾಡವನ್ನು ಕಿತ್ತೊಗೆದು ದೇಶದ ಮುಂದೆ ನಿಲ್ಲಿಸಿದ್ದಾರೆ. ಸದನದಲ್ಲಿ ಅವರ ಬಾಯಿ ಮುಚ್ಚಿಸಬಹುದು, ಆದರೆ ದೇಶದ ಕೋಟ್ಯಂತರ ಜನರ ಬಾಯಿ ಮುಚ್ಚುವುದು ಸಾಧ್ಯ ಇಲ್ಲ.
ಧರ್ಮೇಂದ್ರ ಪ್ರಧಾನ್ ಹಾದಿಯಲ್ಲಿಯೇ ಜೋಷಿ ಅವರು ಹೊರಡುವುದಕ್ಕೆ ಬಹಳ ದಿನಗಳು ಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬಗ್ಗೆ ಒಂದಿಷ್ಟು ಕಾಳಜಿ ಹೊಂದಿದ್ದರೆ ತಕ್ಷಣ ಶಿಕ್ಷಣ ಖಾತೆಯನ್ನು ಜೋಷಿ ಅವರಿಂದ ಕಿತ್ತುಕೊಂಡು, ಯಾರಾದರೂ ಅರ್ಹರಿದ್ದರೆ ಅಂತವರಿಗೆ ಈ ಮಹತ್ವದ ಖಾತೆಯ ಹೊಣೆ ವಹಿಸಿ ಕೊಡಬೇಕು ಎಂದು ನಾನು ಒತ್ತಾಯಿಸುತ್ತೇನೆ.
ದೇಶದ ಒಳಗಿನ ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ Anti-paper leak bill ಅನ್ನು ಮಂಡಿಸಿ ಅದನ್ನು ಅಂಗೀಕರಿಸಿದೆ.
ಆದರೆ ಯಾವುದೇ ಮಸೂದೆಯನ್ನು ಜಾರಿಗೊಳಿಸುವಾಗ ಅದನ್ನು ಸದನದಲ್ಲಿ ಮಂಡಿಸಿ,ಕಾಯ್ದೆಯ ಕುರಿತಾಗಿ ವಿಪಕ್ಷದ ನಾಯಕರ ಅಭಿಪ್ರಾಯವನ್ನು ಆಲಿಸಿ, ನಂತರದಲ್ಲಿ ಸದನದ ಸದಸ್ಯರ ಅನುಮೋದನೆಯೊಂದಿಗೆ ಮಸೂದೆಯು ಅಂಗೀಕಾರಗೊಳ್ಳುತ್ತದೆ.
ಭಾರತ ದೇಶದೊಳಗೆ ಆಡಳಿತ ನಡೆಸಿದ ಮತ್ತು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಆಡಳಿತ ನಡೆಸುವ ಎಲ್ಲಾ ಸರ್ಕಾರಗಳೂ ಕೂಡಾ ಮಸೂದೆಯನ್ನು ಪಾಲಿಸುವಾಗ ಸದನದಲ್ಲಿ ಚರ್ಚೆ ನಡೆಸುತ್ತವೆ. ಇದು ಸಂಸದೀಯ ಪ್ರಜಾಪ್ರಭುತ್ವದ ಕರ್ತವ್ಯ ಕೂಡಾ.
ಆದರೆ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಆಡಳಿತ ನಡೆಸುತ್ತಿದ್ದೇವೆ ಎಂಬ ಸಂಗತಿಯನ್ನೇ ಮರೆತಿರುವ ಕೇಂದ್ರ ಸರ್ಕಾರವು ತನ್ನ ಎಂದಿನ ಅರಾಜಕತೆ ಮತ್ತು ಸರ್ವಾಧಿಕಾರಿ ಮನಸ್ಥಿತಿಯಿಂದ ಯಾವುದೇ ಚರ್ಚೆ ಮಾಡದೇ ಮಸೂದೆ ಜಾರಿಗೊಳಿಸಿರುವುದು ಅನುಮಾನಾಸ್ಪದವಾಗಿದೆ.
ಎಲ್ಲ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಗತ್ಯವಾಗಿ ರೂಪಿಸಬೇಕಾದ ಕಾಯ್ದೆಯನ್ನು ಚರ್ಚಿಸದೇ ಜಾರಿ ಮಾಡಿರುವ ಉದ್ದೇಶವಾದರೂ ಏನು?
ಪ್ರಶ್ನಿಸುವ ಯುವಕರನ್ನೇ ದೇಶದ್ರೋಹಿಗಳು ಎಂದು ಕರೆದ ಬಿಜೆಪಿಗರು ಮಸೂದೆಯನ್ನು ಚರ್ಚಿಸದೇ
ಯಾವ ಸಂಗತಿಯನ್ನು ಮರೆ ಮಾಚಲು ಹೊರಟಿದೆ ಎಂಬುದರ ಬಗ್ಗೆ ಅನುಮಾನವಾಗಿದೆ.
ಸಂಸದೀಯ ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಯ್ದೆ ಕಾನೂನುಗಳು ಚರ್ಚಿತವಾಗಬೇಕು, ಮತ್ತು ಈ ಸರಳ ಸಂಗತಿಯು ಕೇಂದ್ರ ಸರ್ಕಾರಕ್ಕೆ ಅರ್ಥವಾಗಬೇಕು
Amit Shah is solely responsible for the police brutality against India’s students.
If he ordered the attack, he is culpable. If he was unaware, he is incompetent.
As the Education Minister of India, the BJP puts a man who is a defender of rapists. That is the filthiest type of man.
The PM chooses a person who protects rapists.
@RahulGandhi
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ದೆಹಲಿಯ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಪೆಲೆಟ್ ಗನ್, ರೈಫಲ್ಗಳನ್ನು ಬಳಕೆ ಮಾಡಿರುವುದು ಅತ್ಯಂತ ಆಘಾತಕಾರಿ ವಿಚಾರವಾಗಿದೆ. ಕೆಲವು ಪೊಲೀಸರು ವಿದ್ಯಾರ್ಥಿಗಳನ್ನು ಕಾಲುಕೊಟ್ಟು ಬೀಳಿಸುತ್ತಿರುವುದು, ಕೆಲವರು ಮಹಿಳೆಯರು, ಅಪ್ರಾಪ್ತರು ಎಂದು ಲೆಕ್ಕಿಸದೆ ಕಪಾಳಕ್ಕೆ ಹೊಡೆಯುತ್ತಿರುವುದು, ವಿದ್ಯಾರ್ಥಿನಿಯರಿಗೆ ಲಾಠಿಯಿಂದ ಹಿಂದಿನಿಂದ ತಿವಿಯುತ್ತಿರುವುದು, ಜೇಬಿನಲ್ಲಿ ಗಾಂಜಾ ಇಟ್ಟು ಪ್ರಕರಣ ದಾಖಲಿಸುವುದಾಗಿ ವಿದ್ಯಾರ್ಥಿಗಳನ್ನು ಹೆದರಿಸುತ್ತಿರುವುದು, ಸಮವಸ್ತ್ರ ಧರಿಸದ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಹೊಡೆಯುತ್ತಿರುವುದು, ಮೊಳೆಗಳಿರುವ ಲಾಠಿಗಳನ್ನು ಬಳಕೆ ಮಾಡುತ್ತಿರುವುದು, ಪೊಲೀಸರೇ ವಾಹನಗಳ ಗಾಜುಗಳನ್ನು ಪುಡಿ ಮಾಡುತ್ತಿರುವುದು ಹೀಗೆ ಸಾಕಷ್ಟು ರೀತಿಯಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿರುವ ವಿಡಿಯೋಗಳನ್ನು ನೋಡಿದ್ದೇವೆ. ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳ ವಿರುದ್ಧ ದಾಳಿ ನಡೆಸಿರುವುದು ಅಕ್ಷಮ್ಯ.
ದೆಹಲಿ ಪೊಲೀಸರು ಗೃಹ ಇಲಾಖೆಯ ಸುಪರ್ದಿಯಲ್ಲಿ ಬರುವುದರಿಂದ ಸಚಿವರಾದ ಅಮಿತ್ ಶಾ ನೇರ ಹೊಣೆ. ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ದಾಳಿ ನಡೆಸಲು ಅಮಿತ್ ಶಾ ಅವರೇ ಆದೇಶ ನೀಡಿರುವ ಅನುಮಾನ ವ್ಯಕ್ತವಾಗುತ್ತಿದೆ. ಅವರು ಆದೇಶ ಮಾಡಿಲ್ಲದಿದ್ದರೆ ಬೇರೆ ಯಾರು ಮಾಡಿರುತ್ತಾರೆ? ಅಮಿತ್ ಶಾ ಅವರ ಗಮನಕ್ಕೆ ಬಾರದಂತೆ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ ಅವರೇ ನೇರವಾಗಿ ಆದೇಶಿಸಿದ್ದಾರೆ ಎಂದಾದರೆ ಗೃಹಸಚಿವರು ಅಸಮರ್ಥ ಎಂದರ್ಥವಲ್ಲವೇ? ಅಮಿತ್ ಶಾ ದಾಳಿಯ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂಬ ರಾಹುಲ್ ಗಾಂಧಿ ಅವರ ಒತ್ತಾಯಕ್ಕೆ ನನ್ನ ಬೆಂಬಲವೂ ಇದೆ.
ಉಪವಾಸ ಸತ್ಯಾಗ್ರಹ ನಡೆಸುವುದು, ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು. ನ್ಯಾಯ ಕೇಳುವ ವಿದ್ಯಾರ್ಥಿಗಳನ್ನು ಭಯೋತ್ಪಾದಕರಿಗಿಂತ ಕಡೆಯಾಗಿ ನಡೆಸಿಕೊಳ್ಳುವುದು ಪ್ರಜಾಪ್ರಭುತ್ವ ಸರ್ಕಾರಕ್ಕೆ ತಕ್ಕುದಾದುದ್ದಲ್ಲ.
Skyroot Aerospace founders Shri Pawan Chandana and Shri Naga Bharath Daka called on Hon'ble Chief Minister Shri D.K. Shivakumar in New Delhi today.
He congratulated them on the successful launch of Vikram-1, India's first privately developed orbital launch vehicle, and wished the entire @SkyrootA team continued success in advancing India's space ambitions through innovation and excellence.