ಫೇಸ್ಬುಕ್ : https://t.co/HnvWQIn4Hc
ಯೂಟ್ಯೂಬ್ : https://t.co/Q5VnYoi1J6
ಇನ್ಸ್ಟಾಗ್ರಾಂ : https://t.co/Pg8t8qIEq3
ಈ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ನಮ್ಮನ್ನು ಹಿಂಬಾಲಿಸಿ ಮತ್ತು ಇತ್ತೀಚಿನ ವಿದ್ಯಮಾನಗಳನ್ನು ತಿಳಿಯಿರಿ.
#ನಮ್ಮನಾಡು_ನಮ್ಮಆಳ್ವಿಕೆ
“ಕನ್ನಡಿಗರ ಆಶೋತ್ತರಗಳನ್ನು ಬಲವಾಗಿ ಪ್ರತಿಪಾದಿಸುವ ಪಕ್ಷ ಮತ್ತು ರಾಜಕಾರಣಿಗಳು ಕನ್ನಡ ನಾಡಿನಲ್ಲಿ ಇಲ್ಲದಿದ್ದರೆ ನಾವು ನದಿ ನೀರಿನಂತೆಯೇ ನೆಲವನ್ನೂ ಕಳೆದುಕೊಳ್ಳುತ್ತೇವೆ"
ಸಾಮಾಜಿಕ ಜವಾಬ್ದಾರಿ, ದೇಶದ ಬಗ್ಗೆಯ ಕಳಕಳಿ ಬೇರೆಯವರಿಂದ ಅಪೇಕ್ಷಿಸುವಂಥದೇ ಅಲ್ಲ, ನಮ್ಮಲ್ಲೇ ಇರಬೇಕಾದುದು.
#ಪೂಚಂತೇ ಸವಿನೆನಪು
#ನಮ್ಮನಾಡು_ನಮ್ಮಆಳ್ವಿಕೆ
ಶಿವಾಜಿಯಿಂದ ಮೋಸದಿಂದ ಹತನಾದ ಬೆಳವಡಿ ರಾಜ ವೀರಶರಣ ಈಶ್ವರಪ್ರಭು ಸಾವಿಗೆ ಪ್ರತೀಕಾರ ತೀರಿಸಿಕೊಂಡ ನಮ್ಮ ಕನ್ನಡ ನಾಡಿನ ಹೆಮ್ಮೆಯ ರಾಣಿ ಬೆಳವಾಡಿ ಮಲ್ಲಮ್ಮ ಜಯಂತಿಯ ಶುಭಾಶಯಗಳು.
ಬೆಳವಾಡಿಯ ಹಸುಗಳನ್ನು ಕದ್ದಿದಕ್ಕೆ ಶುರುವಾದ ಕಾಳಗ ಕೊನೆಗೆ ಪ್ರಪಂಚದ ಮೊದಲ ಮಹಿಳಾ ಸೈನ್ಯ ಕಟ್ಟಿ, ಶಿವಾಜಿಯ ಸೈನ್ಯವನ್ನು ಸೋಲಿಸುವಲ್ಲಿ ಕೊನೆಮಾಡಿದ್ದ ಸಾಹಸಿ ಬೆಳವಡಿ ಮಲ್ಲಮ್ಮ!!
ತನ್ನ ನಾಡಿನ ಮೇಲೆ ಆಕ್ರಮಣ ಮಾಡಿದವರ ವಿರುದ್ಧ ಹೋರಾಟ ನಡೆಸಿದ, ನಮ್ಮ ಮಣ್ಣಿನ ಗರ್ವ.
ಇಂದು ಅವರ ಜಯಂತಿಯಂದು, ಅವರ ಶೌರ್ಯಗಾಥೆಯನ್ನು ಸ್ಮರಿಸೋಣ ಮತ್ತು ಮುಂದಿನ ಪೀಳಿಗೆಗೆ ಸ್ಫೂರ್ತಿಯನ್ನಾಗಿಸೋಣ. 🙏
#ಬೆಳವಡಿಮಲ್ಲಮ್ಮ
#ನಮ್ಮನಾಡು_ನಮ್ಮವೀರವನಿತೆಯರು
#ಜೈ_ವೀರಭದ್ರ
#ನಮ್ಮನಾಡು_ನಮ್ಮಆಳ್ವಿಕೆ
#NaNNA
ಕನ್ನಡದ ಖ್ಯಾತ ನಟಿ ಸತತ ಎರಡು ಬಾರಿ ರಾಜ್ಯ ಪ್ರಶಸ್ತಿ ಮತ್ತು ಈ ವರ್ಷದ ಫಿಲಂಫೇರ್ ವಿಜೇತೆ, ಅಕ್ಷತಾ ಪಾಂಡವಪುರ ಅವರು ತಮ್ಮ ಕೆಂಗೇರಿಯ ಕಾಸಾ ಗ್ರಾಂಡಾ ಅಪಾರ್ಟ್ಮೆಂಟಿನ ಕಾರ್ಯಕ್ರಮದಲ್ಲಿ ಕನ್ನಡ ಇಲ್ಲದಿರುವುದನ್ನು ಪ್ರಶ್ನಿಸಿದ್ದರು. ಒಬ್ಬ ಕುಡುಕ ಸುಳ್ಳುಗಾರನ ಮಾತು ನಂಬಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಪರಭಾಷಿಕರು ಸಂಧಾನ ಸಭೆಗೆಂದು ಕರೆಸಿ ಎಲ್ಲರೂ ಸೇರಿ ಒಂಟಿ ಹೆಣ್ಣಿನ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ವಿಷಯ ತಲುಪಿತು. ಅಕ್ಷತಾ ಅವರ ಅಮ್ಮ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಫೋನ್ ಅನ್ನು ಕೂಡಾ ಕಿತ್ತುಕೊಂಡು, ಅಕ್ಷತಾ ಅವರ ಯಾವ ಸಮಜಾಯಿಷಿಗೂ ಅವಕಾಶ ಕೊಡದೇ ದಾದಾಗಿರಿ ನಡೆಸಲಾಗುತ್ತಿತ್ತು. ವಿಷಯ ತಿಳಿದ ಚಿತ್ರಸಾಹಿತಿ, ನಮ್ಮನಾಡು ನಮ್ಮಆಳ್ವಿಕೆಯ ಕವಿರಾಜ್ ಮತ್ತು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಮತ್ತು ಅವರ ಬಳಗದೊಂದಿಗೆ ಅಲ್ಲಿಗೆ ಧಾವಿಸಿ ಪ್ರತಿಭಟನೆ ನಂತರ ಆ ಸುಳ್ಳುಗಾರನ ಸುಳ್ಳನ್ನು ಎಲ್ಲರೆದುರು ಸಾಕ್ಷಿ ಸಮೇತ ತೆರೆದಿಟ್ಟು ಅವನೇ ಒಪ್ಪಿಕೊಳ್ಳುವಂತೆ ಮಾಡಿ, ಅಕ್ಷತಾ ಅವರಲ್ಲಿ ಕ್ಷಮೆ ಕೇಳುವಂತೆ ಮಾಡಲಾಯಿತು. ಮುಂದಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಕನ್ನಡಕ್ಕೆ ಪ್ರಮುಖ ಆದ್ಯತೆ ನೀಡುವುದಾಗಿ ಎಲ್ಲರೂ ಒಪ್ಪಿಕೊಂಡರು. ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ ಈ ಪರಭಾಷಿಕರ ದೌರ್ಜನ್ಯವನ್ನು ಪ್ರತಿಭಟಿಸದೇ ಹೋದರೆ ಖಂಡಿತಾ ಕನ್ನಡಿಗರು ಸದ್ಯದಲ್ಲೇ ಕನ್ನಡ ನಾಡಲ್ಲೇ ಅನಾಥರಂತೆ ಬದುಕಬೇಕಾಗುತ್ತದೆ ಎಂಬುದು ಶತಸಿದ್ಧ.
#ನಮ್ಮನಾಡು_ನಮ್ಮಆಳ್ವಿಕೆ
🚨 ಕೃಷ್ಣಾ ಇರಲಿ, ತುಂಗಭದ್ರಾ ಇರಲಿ, ಕಾವೇರಿ ಇರಲಿ... ದೆಹಲಿ ಹೈಕಮಾಂಡ್ ಪಕ್ಷಗಳಿಗೆ ಕರ್ನಾಟಕದ ಹಿತ ಎಷ್ಟು ಮುಖ್ಯ?
ಅಣೆಕಟ್ಟೆಯಲ್ಲಿ ಕರ್ನಾಟಕದ ಪಾಲಿನ ನೀರು ಮಾತ್ರ ಇರುವಾಗ ಈ ರೀತಿ ಆಂಧ್ರಕ್ಕೆ ನೀರು ಯಾಕೆ ಹರಿದುಹೋಗುತ್ತಿದೆ?
ಈ ಸಾಲಿನ ತುಂಗಭದ್ರಾ ನೀರಿನ ಹಂಚಿಕೆಯಲ್ಲಿ ಕರ್ನಾಟಕದ ರೈತರು ಅತಂತ್ರರಾಗಿದ್ದಾರೆ. ಈ ವರ್ಷದ ಆಂಧ್ರಪ್ರದೇಶಕ್ಕೆ ತುಂಗಭದ್ರಾ ನೀರು ಬಿಡುಗಡೆ ಕುರಿತು ಇನ್ನೂ ಸಭೆಯೇ ನಡೆದಿಲ್ಲದ ಕಾರಣ, ಆಂಧ್ರದತ್ತ ಹರಿಯುವ ನೀರನ್ನು ಬಳ್ಳಾರಿ ಭಾಗದ ರೈತರು ತಡೆದಿದ್ದಾರೆ. ಸರ್ಕಾರ ತನ್ನ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡದೆ ರೈತರು ಈ ಕೆಲಸ ಮಾಡಬೇಕಾಗಿದೆ.
ಕರ್ನಾಟಕದ ರೈತರ ನೀರಿನ ಹಕ್ಕು, ನೀರಿನ ಹಂಚಿಕೆ ಮತ್ತು ಕೃಷಿಯ ಭವಿಷ್ಯ ಇಂತಹ ಅನಿಶ್ಚಿತತೆಯಲ್ಲಿ ಸಿಲುಕಿರುವಾಗ, ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯಲ್ಲಿ ಕಾಂಗ್ರೆಸ್ ಸರ್ಕಾರ ನಿರತವಾಗಿದೆ.
ಕರ್ನಾಟಕದ ನೀರು, ಕರ್ನಾಟಕದ ರೈತರು ಮತ್ತು ಕರ್ನಾಟಕದ ಹಕ್ಕುಗಳಿಗಾಗಿ ಕರ್ನಾಟಕವೇ ಮೊದಲ ಆದ್ಯತೆಯಾಗಬೇಕು. ದೆಹಲಿ ಹೈಕಮಾಂಡ್ ಪಕ್ಷಗಳಿಗೆ ಪರ್ಯಾಯ ಕರ್ನಾಟಕ ಕೇಂದ್ರಿತ ಪಕ್ಷಗಳು ಬೇಕೇ ಬೇಕು.
ನಮ್ಮ ನೀರು. ನಮ್ಮ ರೈತರು. ನಮ್ಮ ನಿರ್ಧಾರ.
#ನಮ್ಮನಾಡು_ನಮ್ಮಆಳ್ವಿಕೆ
#ತುಂಗಭದ್ರಾ
#Tungabhadra
#Karnataka
#KarnatakaFarmers
ಕರುನಾಡ ತಾಯಿ ವೀರರ ಹಡೆದ ಮಹಾತಾಯಿ, ನಾಡಿನ ರಕ್ಷಣೆಗೆ ಬೇಕಾದಾಗ ನಾಡಿನ ಒಳಗೆ ಅನೇಕ ಸ್ವಾಭಿಮಾನ ಸಿಂಹ ಘರ್ಜನೆಗಳು ಕೇಳಿವೆ, ನಾಡ ರಕ್ಷಣೆಗೆ ಅನೇಕರ ರಕ್ತದ ಕೋಡಿ ಹರಿದದ್ದು ಸುಳ್ಳಲ್ಲ, ಅಂತಹ ನಾಡಿನ ಸೇವೆಗೆ ವೈರಿಗಳ ಕೋವಿಗೆ ಎದೆಗೊಟ್ಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಗಂಡುಗಲಿ ಜತ್ತದ ಗತ್ತು ಸಿಂಧೂರ ಲಕ್ಷಣ, ಇನ್ನೂ ಅನೇಕರು ಈ ನಾಡಿನ ರಕ್ಷಣೆಗಾಗಿ ಜೀವ ಕೊಟ್ಟಿದ್ದಾರೆ.
ನಮ್ಮ ನಾಡಿನ ಇಂತಹ ಮಹಾನ್ ಕಲಿಗಳನ್ನು ನೆನೆಯುತ್ತಾ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಸಿಹಿ ಹಾರೈಕೆಗಳು.
#HappyIndependenceDay
#ನಮ್ಮನಾಡು_ನಮ್ಮಆಳ್ವಿಕೆ
#ನಮ್ಮನಾಡು_ನಮ್ಮಕಲಿಗಳು
ಇಂದಿರಾ ಗಾಂಧಿಯಿಂದ ಹಿಡಿದು ನರೇಂದ್ರ ಮೋದಿ ವರೆಗೂ ಎಲ್ಲಾ ಹಿಂದಿ ಹೈಕಮಾಂಡ್ ಒಕ್ಕೂಟ ಸರ್ಕಾರಗಳು ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಿ, ಭಾರತದ ಒಕ್ಕೂಟ ವ್ಯವಸ್ಥೆಯನ್ನು ಮತ್ತು ಸಂವಿಧಾನವನ್ನು ದುರ್ಬಲ ಮಾಡುತ್ತಲೇ ಬಂದಿವೆ.
ಇವರೆಲ್ಲಾ ಹಿಂದಿ ಸರ್ವಾಧಿಕಾರಿಗಳೇ ಹೊರತು ಭಾರತದ ಒಳಿತನ್ನು ಬಯಸುವವರಲ್ಲ.
#MMDR#MMDRBill
#ಎಚ್ಚರಿಕೆ_ಕನ್ನಡಿಗ
#ನಮ್ಮನಾಡು_ನಮ್ಮಆಳ್ವಿಕೆ
#ನಮ್ಮನಾಡು_ನಮ್ಮಸಂಪತ್ತು
ಕರ್ನಾಟಕ ರಾಜ್ಯ, ಇಲ್ಲಿನ ಜನಜೀವನ ಮತ್ತು ಸಂಸ್ಕೃತಿ ಶಾಂತಿಗೆ ಹೆಸರಾದದ್ದು. ಆದರೆ ಮಿತಿ ಮೀರಿದ ವಲಸೆ ಎಲ್ಲಾ ದಿಕ್ಕಿನಲ್ಲೂ ನಮ್ಮ ನಾಡಿನ ಹದಗೆಡಿಸುತ್ತಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಜರುಗುವ ಕ್ರೈಂ ಗಳಲ್ಲಿ ಉತ್ತರಭಾರತೀಯರದ್ದೇ ಸಿಂಹಪಾಲು. ಇವರಿಂದ ನಾಡಿನ ಕಾನೂನು ಸುವ್ಯವಸ್ಥೆಗೆ ಪದೇ ಪದೇ ಭಂಗವಾಗುತ್ತಿದೆ . ಯುಪಿಯ ಅನಾಗರೀಕ ಮಾಡೆಲ್ ಇಲ್ಲೂ ಬೇರೂರಲು ಶುರುವಾಗಿದೆ. ಅನಿಯಂತ್ರಿತ ವಲಸೆಯ ವಿರುದ್ಧ ಕಠಿಣ ನಿಲುವು ಮತ್ತು ಕ್ರಮ ತೆಗೆದುಕೊಳ್ಳದೆ ಹೋದರೆ ನಮ್ಮ ಕನ್ನಡ ನಾಡಿನ ನೆಮ್ಮದಿ ಮತ್ತು ಘನತೆ ಸದ್ಯದಲ್ಲೇ ಸಂಪೂರ್ಣ ಮಣ್ಣುಪಾಲಾಗಲಿದೆ. ಹೀಗೆ ಮುಂದುವರಿದರೆ ಕಷ್ಟದಿಂದ ಕಟ್ಟಿದ ನಮ್ಮ ಸುಂದರ ನಾಡು ಅನಾಗರೀಕರ ಪಾಲಾಗುವುದು ನಿಶ್ಚಿತ!!
#GoBackMigrants
#ನಮ್ಮನಾಡು_ನಮ್ಮಆಳ್ವಿಕೆ
೧೫ ವರ್ಷದ ಹಿಂದೆ ನಾನು ಹೇಳಿದ ಮಾತು ಈಗ ಸತ್ಯವಾಗುತ್ತಿದೆ, ಈಗಲಾದರು ಕನ್ನಡಿಗರು ಎಚ್ಚರವಾಗದಿದ್ದರೆ ನಮ್ಮ ಸರ್ವನಾಶ ಖಂಡಿತ,
ಒಂದಾಗಿ ನಿಲ್ಲಿ, ಕನ್ನಡದ ಪರವಾಗಿ ಕೂಗು ಹಾಕಿ.
#GoBackMigrants#ನಮ್ಮನಾಡು_ನಮ್ಮಆಳ್ವಿಕೆ
5,500 ಟಿಎಂಸಿ ಅಡಿ ನೀರು. ಒಂದು ದಶಕ. ಒಂದು ಕ್ಷಮಿಸಲಾಗದ ದ್ರೋಹ.
ಹಿಂದಿ ಹೈಕಮಾಂಡ್ ಪಕ್ಷಗಳ ಆಡಳಿತ ವೈಫಲ್ಯದಿಂದ ಕಳೆದ 10 ವರ್ಷಗಳಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗಿದ್ದ 5,500 ಟಿಎಂಸಿ ಅಡಿಗೂ ಹೆಚ್ಚು ಕೃಷ್ಣಾ ನದಿ ನೀರು ಬಳಕೆಯಾಗದೆ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಹರಿದುಹೋಗಿದೆ.
ಈ ನೀರಿನಿಂದ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸುಮಾರು 6 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸಬಹುದಿತ್ತು. ಸಾವಿರಾರು ರೈತರ ಬದುಕು ಬದಲಾಗಬಹುದಿತ್ತು. ಆದರೆ ದೆಹಲಿ ಅಧೀನದ ಪಕ್ಷಗಳಿಗೆ ಕರ್ನಾಟಕದ ಹಿತಕ್ಕಿಂತ ತಮ್ಮ ಹೈಕಮಾಂಡ್ ಮುಖ್ಯವಾಯಿತು.
ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ, ಕರ್ನಾಟಕದ ಹಕ್ಕಿನ ವಿಚಾರ ಬಂದಾಗ ಎರಡೂ ಒಂದೇ ನಾಣ್ಯದ ಎರಡು ಮುಖಗಳು.
ನಮ್ಮ ನೀರು ಹರಿಯಿತು. ನಮ್ಮ ರೈತರು ಕಾಯುತ್ತಲೇ ಉಳಿದರು. ನಮ್ಮ ಅಭಿವೃದ್ಧಿ ನಿಂತಿತು.
ಇನ್ನಾದರೂ ಕನ್ನಡಿಗರು ಕೇಳಬೇಕಾದ ಪ್ರಶ್ನೆ ಒಂದೇ: ಕರ್ನಾಟಕವನ್ನು ದೆಹಲಿಯಿಂದ ನಡೆಸುವ ಪಕ್ಷಗಳೇ ಬೇಕೇ? ಅಥವಾ ಕರ್ನಾಟಕದ ಹಿತವನ್ನೇ ಮೊದಲಿಗಾಗಿಸುವ ಕರ್ನಾಟಕ ಕೇಂದ್ರಿತ ಪಕ್ಷಗಳೇ ಬೇಕೇ?
ನಮ್ಮ ನೀರು. ನಮ್ಮ ಹಕ್ಕು. ನಮ್ಮ ನಿರ್ಧಾರ.
#ನಮ್ಮನಾಡು_ನಮ್ಮಆಳ್ವಿಕೆ
#ಕೃಷ್ಣಾನೀರು
#UpperKrishnaProject
#SaveKarnataka #Kannadiga #Karnataka
5,500 ಟಿಎಂಸಿ ಅಡಿ ನೀರು. ಒಂದು ದಶಕ. ಒಂದು ಕ್ಷಮಿಸಲಾಗದ ದ್ರೋಹ.
ಹಿಂದಿ ಹೈಕಮಾಂಡ್ ಪಕ್ಷಗಳ ಆಡಳಿತ ವೈಫಲ್ಯದಿಂದ ಕಳೆದ 10 ವರ್ಷಗಳಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗಿದ್ದ 5,500 ಟಿಎಂಸಿ ಅಡಿಗೂ ಹೆಚ್ಚು ಕೃಷ್ಣಾ ನದಿ ನೀರು ಬಳಕೆಯಾಗದೆ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಹರಿದುಹೋಗಿದೆ.
ಈ ನೀರಿನಿಂದ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸುಮಾರು 6 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸಬಹುದಿತ್ತು. ಸಾವಿರಾರು ರೈತರ ಬದುಕು ಬದಲಾಗಬಹುದಿತ್ತು. ಆದರೆ ದೆಹಲಿ ಅಧೀನದ ಪಕ್ಷಗಳಿಗೆ ಕರ್ನಾಟಕದ ಹಿತಕ್ಕಿಂತ ತಮ್ಮ ಹೈಕಮಾಂಡ್ ಮುಖ್ಯವಾಯಿತು.
ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ, ಕರ್ನಾಟಕದ ಹಕ್ಕಿನ ವಿಚಾರ ಬಂದಾಗ ಎರಡೂ ಒಂದೇ ನಾಣ್ಯದ ಎರಡು ಮುಖಗಳು.
ನಮ್ಮ ನೀರು ಹರಿಯಿತು. ನಮ್ಮ ರೈತರು ಕಾಯುತ್ತಲೇ ಉಳಿದರು. ನಮ್ಮ ಅಭಿವೃದ್ಧಿ ನಿಂತಿತು.
ಇನ್ನಾದರೂ ಕನ್ನಡಿಗರು ಕೇಳಬೇಕಾದ ಪ್ರಶ್ನೆ ಒಂದೇ: ಕರ್ನಾಟಕವನ್ನು ದೆಹಲಿಯಿಂದ ನಡೆಸುವ ಪಕ್ಷಗಳೇ ಬೇಕೇ? ಅಥವಾ ಕರ್ನಾಟಕದ ಹಿತವನ್ನೇ ಮೊದಲಿಗಾಗಿಸುವ ಕರ್ನಾಟಕ ಕೇಂದ್ರಿತ ಪಕ್ಷಗಳೇ ಬೇಕೇ?
ನಮ್ಮ ನೀರು. ನಮ್ಮ ಹಕ್ಕು. ನಮ್ಮ ನಿರ್ಧಾರ.
#ನಮ್ಮನಾಡು_ನಮ್ಮಆಳ್ವಿಕೆ
#ಕೃಷ್ಣಾನೀರು
#UpperKrishnaProject
#SaveKarnataka #Kannadiga #Karnataka
"Abolish #NEET, Restore Education to the State List!!"
"ನೀಟ್ ರದ್ದುಪಡಿಸಿ, ಶಿಕ್ಷಣವನ್ನು ರಾಜ್ಯಪಟ್ಟಿಗೆ ಮರಳಿ ತನ್ನಿ!!"
Sign the below petition and pass this 👇👇
🔗https://t.co/r1WlSc6nFk
#Ban_NEET#BanNEET
"ನಮ್ಮ ನಾಡು ನಮ್ಮ ಆಳ್ವಿಕೆ" ಕಡೆಯಿಂದ ನೀಟ್ ರದ್ದು ಪಡಿಸಿ, ಕರ್ನಾಟಕದ ಮೆಡಿಕಲ್ ಸೀಟುಗಳಿಗೆ CET ವ್ಯವಸ್ಥೆಯನ್ನು ಮರು ಸ್ಥಾಪಿಸುವಂತೆ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಲಾಯಿತು.
#Ban_NEET#BanNEET#ನಮ್ಮನಾಡು_ನಮ್ಮಆಳ್ವಿಕೆ