ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.) ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ಜಯಂತಿ ಪ್ರಯುಕ್ತ ಇಂದು ದಿನಾಂಕ 30-08-2026 ರಂದು ಬನ್ನಂಜೆ ನಾರಾಯಣ ಆಡಿಟೊರಿಯಂ ಇಲ್ಲಿ ಆಯೋಜಿಸಲಾದ "ಗುರು ಸಂದೇಶ ಸಾಮರಸ್ಯ ಜಾಥಾ ಮತ್ತು ರಾಜ್ಯ ಮಟ್ಟದ ಭಾಷಣ ಸ್ಪರ್ಧೆ"
ನಾಡಿನ ಸಮಸ್ತ ಜನತೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಹಾರ್ದಿಕ ಶುಭಾಶಯಗಳು.
ರಾಯರ ಭಕ್ತಿ, ಸೇವೆ ಹಾಗೂ ಸತ್ಯಮಾರ್ಗದ ಸಂದೇಶಗಳು ನಮ್ಮೆಲ್ಲರ ಬದುಕಿಗೆ ಸದಾ ದಾರಿದೀಪವಾಗಿವೆ. ಶ್ರೀ ಗುರು ರಾಯರ ದಿವ್ಯ ಆಶೀರ್ವಾದವು ನಾಡಿನ ಪ್ರತಿಯೊಬ್ಬರ ಮೇಲೂ ಸದಾ ಇರಲಿ;
ರಾಷ್ಟ್ರೀಯ ಕ್ರೀಡಾ ದಿನ.
ಭಾರತದ ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
ದೇಶದ ಸಮಸ್ತ ಕ್ರೀಡಾ ಸಾಧಕರಿಗೆ ಮತ್ತು ಕ್ರೀಡಾಪಟುಗಳಿಗೆ ಹಾರ್ದಿಕ ಅಭಿನಂದನೆಗಳು.
ಬಿಲ್ಲವ ಯುವ ವೇದಿಕೆ ಬ್ರಹ್ಮಾವರ - ನೂತನ ಪದಾಧಿಕಾರಿಗಳ ಪದಗ್ರಹಣ - ರಘುಪತಿ ಭಟ್ ಭಾಗಿ
ಬಿಲ್ಲವ ಸಮಾಜ ಸೇವಾ ಸಂಘ (ರಿ.) ಬ್ರಹ್ಮಾವರ, ಬಿಲ್ಲವ ಯುವ ವೇದಿಕೆ ಬ್ರಹ್ಮಾವರ ಇವರ ವತಿಯಿಂದ ಬಿಲ್ಲವ ಯುವ ವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಂದು ದಿನಾಂಕ 28-08-2026ರಂದು ನಾರಾಯಣ ಗುರು ಸಭಾಭವನ ಬ್ರಹ್ಮಾವರ ಇಲ್ಲಿ ನಡೆಯಿತು.
ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು.
ಸಹೋದರ–ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯದ ಸಂಕೇತವಾದ ಈ ಪವಿತ್ರ ಬಂಧವು ಸದಾ ಹಸಿರಾಗಿರಲಿ. ಕುಟುಂಬಗಳಲ್ಲಿ ಸಂತೋಷ, ನೆಮ್ಮದಿ ಮತ್ತು ಸೌಹಾರ್ದತೆ ನೆಲೆಸಲಿ.
ರಕ್ಷಾ ಬಂಧನದ ಶುಭಾಶಯಗಳು!
ಉಡುಪಿ ಜಿಲ್ಲಾ ರಚನಾ ದಿನದ ಹಾರ್ದಿಕ ಶುಭಾಶಯಗಳು
ಶ್ರೀಕೃಷ್ಣನ ಪಾವನ ಕ್ಷೇತ್ರ, ಕರಾವಳಿಯ ಸೊಬಗು, ಶ್ರೀಮಂತ ಸಂಸ್ಕೃತಿ, ಪರಂಪರೆ ಹಾಗೂ ಸೌಹಾರ್ದತೆಯಿಂದ ಕಂಗೊಳಿಸುವ ನಮ್ಮ ಹೆಮ್ಮೆಯ ಉಡುಪಿ ಜಿಲ್ಲೆ ಅಭಿವೃದ್ಧಿಯ ಹೊಸ ಎತ್ತರಗಳನ್ನು ತಲುಪಲಿ.
ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿ, ಶಾಂತಿ, ಸಮೃದ್ಧಿ ಮತ್ತು ಜನರ ನೆಮ್ಮದಿಗಾಗಿ ಸದಾ ಶ್ರಮಿಸೋಣ.
ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಅಮೂಲ್ಯ ಜೀವವನ್ನೇ ತ್ಯಾಗ ಮಾಡಿದ ಅಮರ ಕ್ರಾಂತಿಕಾರಿ ಶಿವರಾಮ ಹರಿ ರಾಜಗುರು ಅವರ ಜನ್ಮದಿನದಂದು ಭಕ್ತಿಪೂರ್ವಕ ಶತ ಶತ ನಮನಗಳು.
ದೇಶಭಕ್ತಿಯ ಕಿಚ್ಚು ಹೊತ್ತಿಸಿದ ಅವರ ತ್ಯಾಗ, ಧೈರ್ಯ ಮತ್ತು ಆದರ್ಶಗಳು ಸದಾ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿರಲಿ.
ನಿಟ್ಟೂರು ಶಾಲೆಯ 125ನೇ ವರ್ಷದ ಆಚರಣೆಯ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಉಡುಪಿಯ ನಿಕಟಪೂರ್ವ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಭಾಗವಹಿಸಿದರು.
ಸಭೆಯಲ್ಲಿ 125ನೇ ವರ್ಷದ ಸಂಭ್ರಮವನ್ನು ಅರ್ಥಪೂರ್ಣವಾಗಿ ಹಾಗೂ ಜನಸಹಭಾಗಿತ್ವದೊಂದಿಗೆ ಆಚರಿಸುವ ಕುರಿತು ಚರ್ಚಿಸಲಾಯಿತು. ಶಾಲೆಯ ಹಳೆ ವಿದ್ಯಾರ್ಥಿಗಳು,
ಪರಿಸರ ಸ್ನೇಹಿ ಇಂಧನ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಶಿವಾಸ್ ಸಿಎನ್ಜಿ ಸ್ಟೇಷನ್ನ ನೂತನ ಘಟಕವು ದಿನಾಂಕ 21.08.2026 ರಂದು ಶ್ಯಾಮ್ ಸರ್ಕಲ್ ಬಳಿ ಅದಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಿಯ ತೀರ್ಥರ ದಿವ್ಯ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತು.
ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ತಾಯಿ ಮಹಾಲಕ್ಷ್ಮೀಯು ಎಲ್ಲರ ಬಾಳಿನಲ್ಲಿ ಸುಖ, ಶಾಂತಿ, ಆರೋಗ್ಯ ಹಾಗೂ ಅಷ್ಟೈಶ್ವರ್ಯಗಳನ್ನು ಕರುಣಿಸಲಿ ಎಂದು ಮನಪೂರ್ವಕವಾಗಿ ಪ್ರಾರ್ಥಿಸುತ್ತೇನೆ.
ಅಲೆವೂರು ತಾಲಿಕಟ್ಟೆಯ ನಿವಾಸಿ, ಭಾರತೀಯ ಜನತಾ ಪಕ್ಷದ ಹಿರಿಯ ಕಾರ್ಯಕರ್ತರಾದ ಶ್ರೀ ಸುರೇಶ್ ಶೇರಿಗಾರ್ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು.
ಭಗವಂತನು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಹಾಗೂ ಕುಟುಂಬದವರಿಗೆ, ಬಂಧು-ಬಳಗದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ.
ಅಪ್ರತಿಮ ನಾಯಕ ಮಾಜಿ ಪ್ರಧಾನಿ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ನಮನಗಳು.
ರಾಷ್ಟ್ರಸೇವೆ, ಸರಳತೆ, ಸೌಜನ್ಯ ಹಾಗೂ ಅಪ್ರತಿಮ ನಾಯಕತ್ವದ ಮೂಲಕ ದೇಶದ ರಾಜಕೀಯ ಇತಿಹಾಸದಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ ಮಹಾನ್ ನಾಯಕನಿಗೆ ಗೌರವಪೂರ್ವಕ ನಮನಗಳು.