ಶ್ರೀ ನಿಟ್ಟೆ ವಿನಯ ಹೆಗ್ಡೆಯವರು ನಾಡು ಕಂಡ ವಿಶಿಷ್ಟ ಶೈಕ್ಷಣಿಕ ಹರಿಕಾರ. ರಾಷ್ಟ್ರದ ಉನ್ನತಿಗೆ ಶಿಕ್ಷಣವೇ ಬುನಾದಿ ಎನ್ನುವ ನಿಲುವಿನೊಡನೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು. ಔದ್ಯಮಿಕ ಕ್ಷೇತ್ರದಲ್ಲೂ ತಮ್ಮದೇ ಆದ ಹೆಜ್ಜೆ ಗುರುತನ್ನು ಮೂಡಿಸಿದವರು. ಸಮಾಜ ಸೇವೆಯ ಮೂಲಕ ಜನಾನುರಾಗಿಯಾದವರು. ಕ್ರೀಡಾಕ್ಷೇತ್ರಕ್ಕೂ ಕೊಡುಗೆ ಕೊಟ್ಟವರು. ಅವರ ನಿಧನ ನಿಜವಾಗಿಯೂ ಶೂನ್ಯವನ್ನು ಸೃಷ್ಟಿಸಿದೆ. ಆ ಜೀವಕ್ಕೆ ಸದ್ಗತಿಯ ಆಕಾಂಕ್ಷೆ.
ಅಶೋಕ ಹುಗ್ಗಣ್ಣವರ ನಾಡು ಕಂಡ ಸಜ್ಜನ, ವಿಧೇಯ ಸಂಗೀತಗಾರ. ಔತ್ತರೇಯದಲ್ಲಿದ್ದ ಹಿಂದೂಸ್ಥಾನೀ ಸಂಗೀತಸರಿತ್ತನ್ನು ದಾಕ್ಷಿಣಾತ್ಯಕ್ಕೂ ಹರಿಸಿ, ಪ್ರವಹಿಸುವಂತೆ ಮಾಡಿದ ಭಗೀರಥ. ಮೂರು ದಶಗಳಿಗೂ ಹೆಚ್ಚು ಕಾಲ ಸಂಗೀತಾಚಾರ್ಯರಾಗಿ ನೂರಾರು ಶಿಷ್ಯಸಂತತಿಯನ್ನು ನೀಡಿದ್ದು ಅವರ ಹಿರಿಮೆ. ತಮ್ಮ ಕಂಠಸಿರಿಯ ಗಾಯನದಿಂದ ಅಭಿಮಾನ ಬಳಗವನ್ನು ಹೊಂದಿದ ಸ್ವಾಭಿಮಾನಿ. ದಿಗಂತಗಳಲ್ಲಿ ಯಶಸ್ಸನ್ನು ಪಡೆದರೂ ಮಕ್ಕಳೊಂದಿಗೆ ಮಕ್ಕಳಾಗಿ, ಹಿರಿಯರೊಂದಿಗೆ ಹಿರಿಯರಾಗಿ, ಜ್ಞಾನಿಗಳೊಂದಿಗೆ ಜ್ಞಾನಿಗಳಾಗಿ, ಸಂಗೀತಜ್ಞರೊಂದಿಗೆ ಸಂಗೀತಜ್ಞರಾಗಿದ್ದ ಇವರ ಬದುಕು ಆದರ್ಶ.
ಸದಾ ಸಂಗೀತವನ್ನೇ ಉಚ್ಛ್ವಾಸನಿಶ್ಶ್ವಾಸಗಳನ್ನಾಗಿಸಿಕೊಂಡಿದ್ದ ಇವರಿಗೆ ಶ್ರೀರಾಮಸಾಯುಜ್ಯವು ಪ್ರಾಪ್ತವಾಗಲಿ.
A true milestone strengthening the global movement for peace, harmony and spirituality!
Padmashri Sadguru Brahmeshanand Acharya Swamiji @Sadgurudev_Goa has been honoured at the British Parliament, House of Commons, with the "World Book of Records – Certificate of Excellence".
A proud and profound moment celebrating his unparalleled contributions to #Spirituality, Global #Peace, #Humanity & #Sanatan Culture.
ಮನುಷ್ಯರು ಮನುಷ್ಯರನ್ನು ಪ್ರೀತಿಸುವುದೇ ಕಷ್ಚವಾಗಿರುವಾಗ ಮರಗಳನ್ನು ವಾತ್ಸಲ್ಯದಿಂದ ಕಂಡ ಮಾತೃಹೃದಯಿ ಸಾಲುಮರದ ತಿಮ್ಮಕ್ಕ!
ಸಾಲುಮರಗಳನ್ನು ನೆಟ್ಟು ಬೆಳಸಿ ಪರಿಸರಕ್ಕೆ ಅಪಾರ ಕೊಡುಗೆ ಕೊಟ್ಟವರು;
ಏಕವ್ಯಕ್ತಿಯಾಗಿ ಮಾಡಿದ ಈ ಲೋಕೋಪಕಾರದ ಮೂಲಕ ಮಾದರಿಯಾದವರು!
ಆ ಆತ್ಮಕ್ಕೆ ಸದ್ಗತಿಯ ಆಕಾಂಕ್ಷೆ. ಅವರ ಸತ್ಕಾರ್ಯ ಲೋಕಕ್ಕೆ ಆದರ್ಶವಾಗಲಿ!
#SaalumaradaThimmakka #MotherOfTrees #GreenLegacy
In the divine presence of
Paramapujya @SriSamsthana Srimajjagadguru Shankaracharya SriSri Raghaveshwara Bharathi Mahaswamiji
"#Goudeepa ~ #Deepavali Special #GouPooja" was held at SriRamashrama, a branch of SriMatha.
◆ Namasankeerthana ~
Gou Gaanamruta – a special devotional musical concert by Smt. Sivasri Skandaprasad @ArtSivasri had immersed the gathered devotees in the wave of devotion.
◆ "Gou Sandesha" – was graced upon the devotees by Paramapujya SriSamsthana later.
ಭಾರತದ ಶಿಕ್ಷಣ ವ್ಯವಸ್ಥೆಯ ಕುರಿತು ಅಪಾರವಾದ ಕನಸಿಟ್ಟು, ಅದನ್ನು ನನಸಾಗಿಸಿದ್ದವರು, ಮತ್ತಷ್ಟು ಕನಸಿನೊಡನೆ ಮುನ್ನಡೆಯುತ್ತಿದ್ದವರು ಶಿಕ್ಷಣಪ್ರೇಮಿ ದೊರೆಸ್ವಾಮಿಯವರು. ನಮ್ಮ ಭಾವರಾಮಾಯಣ-ರಾಮಾವತರಣ ಕೃತಿಯನ್ನು ತಮ್ಮ ವಿಶ್ವವಿದ್ಯಾಲಯದಲ್ಲಿ ಪ್ರೀತಿಯಿಂದ ಲೋಕಾರ್ಪಣೆ ಮಾಡಿಸಿದ್ದರು. PES ಸಂಸ್ಥೆ ಅವರ ಆಶಯದಂತೆ ಇನ್ನಷ್ಟು ಉನ್ನತಿಗೇರಲಿ.