ಕೇಂದ್ರ ಸರ್ಕಾರ ನರೇಗಾ ಯೋಜನೆಯನ್ನು ಮಾರ್ಪಾಡುಗೊಳಿಸಿ ವಿಬಿ-ಜಿ ರಾಮ್ ಜಿ ಎಂದು ಅನುಷ್ಠಾನಗೊಳಿಸಿದೆ. ಹಿಂದಿನ ನರೇಗಾಕ್ಕಿಂತ ಹೆಚ್ಚಿನ ಕಾರ್ಯಕ್ಷಮತೆ ಮತ್ತು ಕೂಲಿಕಾರ್ಮಿಕರಿಗೆ ಹೆಚ್ಚು ಉದ್ಯೋಗ ಒದಗಿಸುವ ನೂತನ ಯೋಜನೆಯನ್ನು @INCKarnataka ಸರ್ಕಾರ ಕೇವಲ ರಾಜಕೀಯ ಕಾರಣಕ್ಕಾಗಿ ವಿರೋಧಿಸುತ್ತಿದೆ.
ಸಿಎಂ @siddaramaiah ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ರಾಜ��ೀಯ ದ್ವೇಷಕ್ಕೆ ನರೇಗಾ ಸಿಬ್ಬಂದಿಗಳು ಬಲಿಯಾಗುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಕುತಂತ್ರದಿಂದಾಗಿ 7 ಸಾವಿರಕ್ಕೂ ಅಧಿಕ ನೌಕರರು ಅತಂತ್ರರಾಗಿದ್ದಾರೆ. ರಾಜ್ಯದಲ್ಲಿ ವಿಜಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಗೊಳಿಸುವುದಿಲ್ಲ ಎಂದು ಪಟ್ಟು ಹಿಡಿಯುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್ ಸರ್ಕಾರ ಧಕ್ಕೆ ತರುತ್ತಿದೆ.
#CongressFailsKarnataka
ಒಂದು ಕಾಲದಲ್ಲಿ ಜಿಲ್ಲೆಯ ರಾಜಕೀಯ ಶಕ್ತಿಕೇಂದ್ರವಾಗಿದ್ದ ದೇವದುರ್ಗ ಈಗ ರಾಜಕೀಯ ತುಳಿತಕ್ಕೆ ಒಳಗಾಗಿದೆ. ವೆಂಕಟೇಶ ನಾಯಕ, ಬಿ.ವಿ.ನಾಯಕ, ಹನುಮಂತಪ್ಪ ಆಲ್ಕೋಡ್, ಕೆ.ಶಿವನಗೌಡ ನಾಯಕ ಜಿಲ್ಲೆಗೆ ಯಾವುದೇ ಪ್ರಭಾವಿ ಯೋಜನೆ ಬಂದರೂ ತಾಲೂಕಿಗೆ ತರುತ್ತಿದ್ದರು. ಆದರೀಗ ಜಿಲ್ಲೆಯ ರಾಜಕಾರಣದಲ್ಲಿ ತಾಲೂಕಿನ ಪ್ರಭಾವ ತಗ್ಗಿದೆ.