ಶತ ಪ್ರತಿಶತ ಫಲಿತಾಂಶ ಪಡೆದ ಕಾರಣ ಜಿ��್ಲಾಡಳಿತದಿಂದ ನಮ್ಮ ವಸತಿ ಶಾಲೆಯ ಪ್ರಾಂಶುಪಾಲರು ಶ್ರೀ ಮಲ್ಕಪ್ಪಾ ಜಿ ಬಿರಾದಾರ ರವರನ್ನು ಜಿಲ್ಲಾ ಪಂಚಾಯತ್ ಮುಖ್ಯ ಸಭಾಂಗಣದಲ್ಲಿ ಸನ್ಮಾನಿಸಲಾಯಿತು , ಮಾನ್ಯ CEO ಸರ್, DDPI ರವರು ಉಪಸ್ಥಿತರಿದ್ದರು @ed_kreis
@kreisemahithi
#karanataka_kreis_schools
@SWDGoK
ಕ್ರೈಸ್ ಶ��ಲೆಯ ಮಕ್ಕಳ ಸಾಧನೆಗೆ ನನ್ನ ಅಭಿನಂದನೆಗಳು !
ನಮ್ಮ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವಂತಹ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಪಿಯುಸಿ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿ 97.22% ನಷ್ಟು ಉತ್ತೀರ್ಣರಾಗಿದ್ದು ಇದು ಸರ್ಕಾರದ ಇತರೆ ಶಾಲೆಯ ವಿದ್ಯಾರ್ಥಿಗಳ ಉತ್ತೀರ್ಣದ ಒಟ್ಟಾರೆ ಪ್ರಮಾಣಕ್ಕಿಂತ ಇದು ಹೆಚ್ಚಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
ಇನ್ನು ನಮ್ಮ ಕ್ರೈಸ್ ಸಂಸ್ಥೆಯ ಪಿಯುಸಿ ವಿದ್ಯಾರ್ಥಿ ಅಂಕಿತ್ ಭೀಮಪ್ಪ ಕಾರಟಗಿ ಅವರು ರಾಜ್ಯಕ್ಕೆ ಎರಡನೇ Rank ಪಡೆದಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.
ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸರ್ಕಾರವು ಹಲವು ಸೌಲಭ್ಯಗಳನ್ನು ಒದಗಿಸುತ್ತಿದ್ದು ಇದರ ಪ್ರಯೋಜನ ಪಡೆದು ಎಲ್ಲ ಮಕ್ಕಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿರುವುದು ಸಂತಸದ ವಿಷಯವಾಗಿದೆ.
ಮಕ್ಕಳ ಸಾಧನೆಗೆ ಕಾರಣರಾದ @kreisemahithi ಸಂಸ್ಥೆಯ ಎಲ್ಲ ಅಧಿಕಾರಿ ಮಿತ್ರರು ಹಾಗೂ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತು ಅವರಿಗೆ ವಿದ್ಯೆ ನೀಡಿದ ಶಿಕ್ಷಕರು ಹಾಗೂ ಕಷ್ಟಪಟ್ಟು ಓದಿ ಉತ್ತಮ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.!
ಎಲ್ಲ ಮಕ್ಕಳ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ ಎಂದು ಈ ವೇಳೆ ಮನದುಂಬಿ ಹಾರೈಸುವೆನು.
#Puc #Results
ಇಂದು ನನ್ನ ಸರ್ಕಾರಿ ನಿವಾಸದಲ್ಲಿ ಜರುಗಿದ ಮಾಧ್ಯಮ ಗೋಷ್ಠಿಯಲ್ಲಿ ಭಾಗವಹಿಸಿದೆ.
ನಮ್ಮ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಪಿಯುಸಿ ಕಾಲೇಜು ವಿದ್ಯಾರ್ಥಿಗಳ ಫಲಿತಾಂಶವು ���್ರಕಟವಾಗಿದ್ದು ಈ ಬಾರಿ ನಮ್ಮ ಕ್ರೈಸ್ ವಸತಿ ಶಾಲೆಯ ಮಕ್ಕಳು 97.22% ನಷ್ಟು ಸಾಧನೆಯನ್ನು ಮಾಡಿರುತ್ತಾರೆ.
ಈ ಪೈಕಿ ನಮ್ಮ ವಸತಿ ಶಾಲೆಯ ವಿದ್ಯಾರ್ಥಿ ಅಂಕಿತ್ ಭೀಮಪ್ಪ ಕಾರಟಗಿ ಅವರು ರಾಜ್ಯಕ್ಕೆ ಎರಡನೇ Rank ಬಂದಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.
ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗಾಗಿ ಇರುವ ಈ ವಸತಿ ಶಾಲೆಗಳು ಬಾಬಾ ಸಾಹೇಬರ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ಈ ಬಾರಿ ನಮ್ಮ ನಿಗದಿತ ಗುರಿಗಿಂತಲೂ ಹೆಚ್ಚಾಗಿ ಸ��ಮಾರು 200 ವೈದ್ಯಕೀಯ ಸೀಟುಗಳಿಗೆ ಹಾಗೂ 2000 ಕ್ಕೂ ಹೆಚ್ಚಿನ ಇಂಜಿನಿಯರಿಂಗ್ ಸೀಟುಗಳಿಗೆ ಮಕ್ಕಳು ಆಯ್ಕೆಯಾಗಿರುವುದು ಸಂತೋಷದ ಸಂಗತಿಯಾಗಿದೆ.
ಮುಂಬರುವ ದಿನಗಳಲ್ಲಿ ಈ ಪಿಯುಸಿ ಕಾಲೇಜುಗಳನ್ನು ರಾಜ್ಯದ ಎಲ್ಲಾ ಕ್ರೈಸ್ ಶಾಲೆಗಳಿಗೂ ವಿಸ್ತರಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ.
ಇನ್ನು ಸರ್ಕಾರವೂ ಈ ಬಾರಿ ಪಿಯುಸಿಯಲ್ಲಿ ��ೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದಂತಹ ಮಕ್ಕಳನ್ನು ಅಂಬೇಡ್ಕರ್ ಜಯಂತಿಯ ದಿನದಂದು ಸನ್ಮಾನಿಸಲಿದೆ ಎಂದು ಈ ವೇಳೆ ತಿಳಿಸಿದೆನು.
#PUCResults