ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಲು ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಪವನ್ ಖೇರಾ ಎಂಬುವವರ ಹೆಸರು ಕಾಣಿಸಿಕೊಂಡಿದೆ. ಈ ಪವನ್ ಖೇರಾ ಯಾರು? ಕರ್ನಾಟಕಕ್ಕೂ ಇವರಿಗೂ ಏನು ಸಂಬಂಧ? ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಿಂದ ಆಯ್ಕೆ ಮಾಡಲು ಆ ಪಕ್ಷದ ನಾಯಕರು, ಕಾರ್ಯಕರ್ತರು ಯಾರೂ ಕಾಣಿಸಲಿಲ್ಲವೇ? ಉತ್ತರ ಭಾರತದ ನಿರಾಶ್ರಿತ ರಾಜಕಾರಣಿಯನ್ನು ಆಯ್ಕೆ ಮಾಡಲು ಏನು ಕಾರಣ?
ದೆಹಲಿ ಹೈಕಮಾಂಡ್ ಪಕ್ಷಗಳು ಮೊದಲಿನಿಂದಲೂ ಕನ್ನಡಿಗರ ಮೇಲೆ ಸವಾರಿ ಮಾಡುತ್ತಲೇ ಬಂದಿವೆ. ಕರ್ನಾಟಕದಿಂದ ಭಾರತೀಯ ಜನತಾ ಪಕ್ಷ ಆಯ್ಕೆ ಮಾಡಿದ ನಿರ್ಮಾಲಾ ಸೀತಾರಾಮನ್ ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಏನು? ಕನ್ನಡಿಗರ ಮೂಲಕ ಆಯ್ಕೆಯ���ಗಿದ್ದೇನೆಂಬ ಕನಿಷ್ಠ ಸೌಜನ್ಯ, ಉಪಕಾರ ಪ್ರಜ್ಞೆಯೂ ಇಲ್ಲದ ಅವರು ಕರ್ನಾಟಕಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಹಣಕಾಸು ಹಂಚಿಕೆಯನ್ನೂ ನೀಡಲಿಲ್ಲ. ಇಂಥವರನ್ನು ಆಯ್ಕೆ ಮಾಡಿ ಏನು ಪ್ರಯೋಜನ?
ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವುದು ಕೇವಲ ನಾಲ್ಕು ರಾಜ್ಯಗಳಲ್ಲಿ. ಅದರಲ್ಲೂ ಕರ್ನಾಟಕದ ಜನತೆ ವಿಶ್ವಾಸ ಇಟ್ಟು ದೊಡ್ಡ ಬಹುಮತ ನೀಡಿ ಗೆಲ್ಲಿಸಿದ್ದಾರೆ. ಕ��್ನಡಿಗರ ಈ ಔದಾರ್ಯವನ್ನು ಆ ಪಕ್ಷ ಮರೆಯುವಂತಿಲ್ಲ. ಹೀಗಿರುವಾಗ ಅನ್ಯರಾಜ್ಯಗಳ ರಾಜಕೀಯ ನಾಯಕರನ್ನು ಕರ್ನಾಟಕದಿಂದ ಆಯ್ಕೆ ಮಾಡುವ ಅಗತ್ಯವೇನು? ಕನ್ನಡಿಗರಿಗೆ ರಾಜ್ಯಸಭೆಯಲ್ಲಿ ಕುಳಿತುಕೊಳ್ಳಲು ಯೋಗ್ಯತೆ ಇಲ್ಲ ಎಂದು ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡಿದೆಯೇ?
ಕರ್ನಾಟಕದ ಕಾಂಗ್ರೆಸ್ ಘಟಕ ಹೈಕಮಾಂಡ್ ತೀರ್ಮಾನವನ್ನು ಧಿಕ್ಕರಿಸಬೇಕು. ಇನ್ನಾದರೂ ಹೈಕಮಾಂಡ್ ಗುಲಾಮಗಿರಿಯನ್ನು ಬಿಟ್ಟು ಪವನ್ ಖೇರಾ ಅವರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಬೇಕು. ಆದರೆ ಆ ಪಕ್ಷ�� ಇತಿಹಾಸವನ್ನು ಗಮನಿಸಿದರೆ ಹೈಕಮಾಂಡ್ ಏನೇ ದಬ್ಬಾಳಿಕೆ ಮಾಡಿದರೂ ಅದನ್ನು ವಿರೋಧಿಸುವ ಎದೆಗಾರಿಕೆ ಅದರ ನಾಯಕರಿಗೆ ಇಲ್ಲ. ಈ ರಾಜಕೀಯ ದಾಸ್ಯದಿಂದ ಹೊರಬರಲು ಅವರಿಗೆ ಸಾಧ್ಯವಾಗಿಯೇ ಇಲ್ಲ. ಇದನ್ನೇ ನಾವು ಹೈಕಮಾಂಡ್ ಗುಲಾಮಗಿರಿ ಎಂದು ಕರೆಯುವುದು.
ಪವನ್ ಖೇರಾ ಆಯ್ಕೆಯನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ವಿರೋಧಿಸಬೇಕು. ಯಾಕೆಂದರೆ ಅವರಿಗೆ ಸಿಗಬೇಕಾದ ಸ್ಥಾನ ಇನ್ಯಾವುದೋ ರಾಜ್ಯದ ನಾಯಕನಿಗೆ ಸಿಗುತ್ತಿದೆ. ಕಾಂಗ್ರೆಸ್ ಪಕ್ಷ ತಕ್ಷಣ ತನ್ನ ನಿರ್ಧಾರ ಬದಲಿಸಿ, ಕನ್ನಡಿಗರಿಗೆ ಆ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಆ ಪಕ್ಷ ತನ್ನ ಕಾಲ ಮೇಲೆ ತಾನೇ ಕೊಡಲಿ ಪೆಟ್ಟು ಹಾಕಿಕೊಂಡಂತಾಗುತ್ತದೆ. ಕರ್ನಾಟಕದ ಜನತೆಯಲ್ಲಿ ಜಾಗೃತಿ ಮೂಡಿಸಿ, ಈ ಇಂಥ ಅನ್ಯಾಯಗಳ ವಿರುದ್�� ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ಸಂಘಟಿಸಲಿದೆ.
ಒಂದು ದಿನದ ದುಂಡು ಮೇಜಿನ ಸಭೆ
ಸಮಗ್ರ ಭಾಷಾ ನೀತಿ, ಸಮಗ್ರ ಭಾಷಾ ಯೋಜನೆ: ಕರ್ನಾಟಕದ ಸಾಧ್ಯತೆಗಳು - ಸವಾಲುಗಳು.
ದಿನಾಂಕ: 14-6-2026, ಭಾನುವಾರ ಬೆಳಿಗ್ಗೆ 10-30 ರಿಂದ ಸಂಜೆ 5 ಗಂಟೆಯವರೆಗೆ
ಸ್ಥಳ: ಹೋಟೆಲ್ ಲಲಿತ್ ಅಶೋಕ ಕುಮಾರ ಕೃಪ ರಸ್ತೆ, ಬೆಂಗಳೂರು-01
#ಕರವೇಹೋರಾಟಗಳು#ಕನ್ನಡ#ಕರವೇ#karave#krv#ಬೆಂಗಳೂರು#bangalore
ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳು. ಅವರ ಅಧಿಕಾರಾವಧಿಗೆ ಶುಭಾಶಯಗಳು. ಕೇಂದ್ರವು ಕರ್ನಾಟಕ ಸರ್ಕಾರದೊಂದಿಗೆ ಜನರ ಕಲ್ಯಾಣಕ್ಕಾಗಿ ನಿಕಟವಾಗಿ ಕಾರ್ಯನಿರ್ವಹಿಸಲಿದೆ.
@DKShivakumar
ಎಸ್ ಎಸ್ ಎಲ್ ಸಿ ಯಲ್ಲಿ ತೃತೀಯ ಭಾಷೆಯನ್ನು ಅಂಕಗಳಿಂದ ಅಳೆಯುವ ಬದಲು ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಹೂಡಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವುದಷ್ಟೇ ಅಲ್ಲದೆ, ಪ್ರಚಾರದ ಹಂಬಲದಿಂದ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಒಂದು ಲಕ್ಷ ರುಪಾಯಿಗಳ ದಂಡ ವಿಧಿಸಿರುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಇದು ಹಿಂದಿಹೇರಿಕೆ ಪರವಾಗಿ ವಾದ ಮಾಡುತ್ತಿದ್ದವರಿಗೆ ನೇರವಾಗಿ ಮಾಡಿದ ಕಪಾಳಮೋಕ್ಷ. ಹಿಂದಿಯನ್ನೂ ಸಂಪೂರ್ಣವಾಗಿ ಕೈಬಿಡಲಾಗಿದೆ ಎಂಬ ಅರ್ಥದ ಹೇಳಿಕೆಯು ಮಾಧ್ಯಮಗಳಲ್ಲಿ ಪ್ರಕಟವಾಗಿಲ್ಲ. ಹೀಗಿದ್ದರೂ ಪೂರ್ವಾಗ್ರಹ ಪೀಡಿತವಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ಕಿಡಿ ಕಾರಿದೆ ಎಂದು ವರದಿಗಳು ಹೇಳುತ್ತಿವೆ. ಕೇವಲ ಪತ್ರಿಕಾ ಹೇಳಿಕೆ ಓದಿ ನೀವು ಪ��ಐಎಲ್ ಸಲ್ಲಿಸಿದ್ದೀರಾ ಎಂದು ನ್ಯಾಯಪೀಠ ಅರ್ಜಿದಾರರನ್ನು ಪ್ರಶ್ನಿಸಿತ್ತು.
ತೃತೀಯ ಭಾಷೆ ಗ್ರೇಡಿಂಗ್ ವ್ಯವಸ್ಥೆಯನ್ನು ಹಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಮನಸಿಗೆ ಬಂದಂತೆ ವ್ಯಾಖ್ಯಾನಿಸಿ ಗೊಂದಲ ಉಂಟುಮಾಡಿದ್ದರು. ಹಿಂದಿಯೂ ಸೇರಿದಂತೆ ಮೂರನೇ ಭಾಷೆಯ ಕಲಿಕೆಯನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿರಲಿಲ್ಲ. ಆದರೆ ಇದನ್ನು ತಪ್ಪುತಪ್ಪಾಗಿ ಬಿಂಬಿಸಲಾಯಿತು ಮಾತ್ರವಲ್ಲ, ಹೈಕೋರ್ಟ್ ವರೆಗೆ ತೆಗೆದುಕೊಂಡುಹೋಗಲಾಯಿತು. ಈಗ ಅಲ್ಲಿ ಅವರಿಗೆ ಮುಖಭಂಗವಾಗಿದೆ. ಮೊ��ಲು ಐವತ್ತು ಸಾವಿರ ದಂಡ ವಿಧಿಸಿದ್ದ ನ್ಯಾಯಾಲಯ ನಂತರ ಒಂದು ಲಕ್ಷ ರುಪಾಯಿ ದಂಡಕ್ಕೆ ಏರಿಸಿರುವುದು ಇದಕ್ಕೆ ಸಾಕ್ಷಿ.
ರಾಜ್ಯ ಸರ್ಕಾರ ತನ್ನ ನೀತಿಯ ಕುರಿತು ಇನ್ನೂ ನಿಯಮಾವಳಿಗಳನ್ನು ರೂಪಿಸುವ, ಆದೇಶ ಹೊರಡಿಸುವ ಮುನ್ನವೇ ನ್ಯಾಯಾಲಯಕ್ಕೆ ಹೋದವರು ಬಹಳ ಆತುರವಾಗಿ ಏನನ್ನೋ ಸಾಧಿಸುವ ಉದ್ದೇಶ ಹೊಂದಿದ್ದರು. ಒಂದು ವೇಳೆ ಅರ್ಜಿ ಸ್ವೀಕೃತವಾಗಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯೂ ಸಹ ವಿದ್ಯಾರ್ಥಿಗಳ ಪರ ಕಾನೂನು ಹೋರಾಟ ನಡೆಸಲು ಸಜ್ಜಾಗಿತ್ತು. ಆದರೆ ಅರ್ಜಿ ವಜಾಗೊಳಿಸಿ, ಅರ್ಜಿದಾರರಿಗೆ ದಂಡ ವಿಧಿಸಲಾಗಿರುವುದರಿಂದ ಪಟ್ಟಭದ್ರ ಶಕ್ತಿಗಳ ಹುನ್ನಾರ ವಿಫಲವಾಗಿದೆ.
ರಾಜ್ಯ ಸರ್ಕಾರ ಕೂಡಲೇ ನಿಯಮಾವಳಿಗಳನ್ನು ರೂಪಿಸ���, ಗ್ರೇಡಿಂಗ್ ವ್ಯವಸ್ಥೆ ಜಾರಿಗೊಳಿಸಬೇಕು. ಹಿಂದಿ ಸಾಮ್ರಾಜ್ಯಶಾಹಿಗಳ ಹುನ್ನಾರಗಳಿಗೆ ಮಣೆ ಹಾಕಬಾರದು. ಕನ್ನಡದ ಮಕ್ಕಳ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ನಾನು ಒತ್ತಾಯಿಸುತ್ತೇನೆ.
ಕನ್ನಡದ ನೆಲದಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಬೆಲೆ ಇಲ್ಲವೆ?
ಇದು ಕ���ವಲ ಭಾಷೆ ಅಲ್ಲ, ನಮ್ಮ ಗುರುತು.
ಇತಿಹಾಸ ಸಾಕ್ಷಿ—ನಾವು ಹೋರಾಡಿದವರು.
ಇನ್ನೂ ಹೋರಾಟ ನಿಲ್ಲೋದಿಲ್ಲ.
#GoBackGoverner
ಈ ನೆಲ ಬಸವಣ್ಣನವರದು, ಕುವೆಂಪುನವರದು.
ಇಲ್ಲಿ ಬಲವಂತಕ್ಕೆ ಭಾಷೆ ಹೇರುವ ಹಕ್ಕು ಯಾರಿಗೂ ಇಲ್ಲ.
ನಮ್ಮ ಇತಿಹಾಸ ಹೋರಾಟದಿಂದಲೇ ಬರೆಯಲಾಗಿದೆ.
ಇನ್ನೂ ಅದೇ ದಾರಿ ಮುಂದುವರಿಯುತ್ತದೆ.
#GoBackGoverner
ಕನ್ನಡವೇ ನಮ್ಮ ಹೆಮ್ಮೆ
ಕನ್ನಡವೇ ನಮ್ಮ ಗುರುತು
ಇದನ್ನು ಪ್ರಶ್ನಿಸುವವರ ವಿರುದ್ಧ ಧ್ವನಿ ಎತ್ತೋಣ
ನಮ್ಮ ಸಹನೆ ಪರೀಕ್ಷಿಸಬೇಡಿ
ಇನ್ನು ಪ್ರತಿರೋಧವೇ ಉತ್ತರ
#GoBackGoverner@karave_KRV@BJP4Karnataka
ಕರ್ನಾಟಕದ ಮೊದಲ ರಾಜ್ಯಪಾಲರಾಗಿದ್ದವರು ಜಯಚಾಮರಾಜೇಂದ್ರ ಒಡೆಯರ್ ಅವರು. ಮೈಸೂರು ಸಂಸ್ಥಾನದ ಕೊನೆಯ ಮಹಾರಾಜರಾಗಿದ್ದ ಅವರು ಕನ್ನಡ ನಾಡಿನ ಸಂಸ್ಕೃತಿ, ಕಲೆ, ಸಾಹಿತ್ಯದ ದೊಡ್ಡ ಪೋಷಕರಾಗಿದ್ದವರು. ಕರ್ನಾಟಕದಲ್ಲಿ ಆಗಿಹೋದ ಟಿ.ಎನ್.ಚತುರ್ವೇದಿ, ಖುರ್ಷಿದ್ ಆಲಂ ಖಾನ್, ವಿ.ಎಸ್.ರಮಾದೇವಿ ಅವರುಗಳು ಈ ನಾಡಿನ ಅಸ್ಮಿತೆಯನ್ನು ಗೌರವಿಸಿ ಕನ್ನಡಿಗರ ಪ್ರೀತಿ ಗೆದ್ದಿದ್ದರು.
ಕನ್ನಡಿಗರ ದೌರ್ಭಾಗ್ಯವೆಂಬಂತೆ ಈ ಬೆರಳೆಣಿಕೆಯ ರಾಜ್ಯಪಾಲರನ್ನು ಹೊರತುಪಡಿಸಿದರೆ ರಾಷ್ಟ್ರೀಯ ಪಕ್ಷಗಳ ಕೈಗೊಂಬೆ ರಾಜಕಾರಣಿಗಳನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ರಾಜ್ಯಪಾಲರುಗಳು ಪಕ್ಷ ರಾಜಕಾರಣದಿಂದ ದೂರ ಉಳಿಯಬೇಕು ಎಂಬುದು ಸಾಂವಿಧಾನಿಕ, ನೈತಿಕ ಕರ್ತವ್ಯ. ಆದರೆ ತಾವು ಪ್ರತಿನಿಧಿಸುತ್ತಿದ್ದ ರಾಜಕೀಯ ಪಕ್ಷ, ತನ್ನನ್ನು ನೇಮಕ ಮಾಡಿದ ಸರ್ಕಾರದ ಏಜೆಂಟರಂತೆ ಇವರು ವರ್ತಿಸಿದ್ದೇ ಹೆಚ್ಚು.
ಹಿಂದೆ ರಾಜ್ಯಪಾಲರಾಗಿದ್ದ ವಜೂಬಾಯಿ ವಾಲಾ ಎಂಬುವವರು ರಾಜಭವನವನ್ನು ಗುಜರಾತ್ ಭವನವನ್ನಾಗಿ ಮಾಡಿಕೊಂಡಿದ್ದರು. ಈಗ ಮಧ್ಯಪ್ರದೇಶದವರಾದ ತಾವರ್ ಚಂದ್ ಗೆಹ್ಲೋಟ್ ತಮಗೆ ಬೇಡವಾದ ವಿಷಯಕ್ಕೆ ತಲೆಹಾಕಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ರಾಜ್ಯ ಸರ್ಕಾರ ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಮಾಡಿದರೆ ರಾಜ್ಯಪಾಲರಿಗೇನು ಸಮಸ್ಯೆ? ಜನರಿಂದ ಆಯ್ಕೆಯಾದ ರಾಜ್ಯ ಸರ್��ಾರ ಕರ್ನಾಟಕದ ಶಾಲಾಮಕ್ಕಳ ಮೇಲಿನ ಹೊರೆಯನ್ನು ಕಡಿಮೆ ಮಾಡಿದರೆ ರಾಜ್ಯಪಾಲರ ಗಂಟೇನು ಹೋಗುತ್ತದೆ? ಸರ್ಕಾರ ತನ್ನ ನೀತಿಯನ್ನು ಪುನರ್ ಪರಿಶೀಲಿಸಲಿ ಎಂದು ಅವರು ಯಾಕೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆಯುತ್ತಾರೆ? ಇದೇ ಕಾಳಜಿಯನ್ನು ಅವರು ತಮ್ಮ ತವರು ರಾಜ್ಯ ಮಧ್ಯಪ್ರದೇಶದ ಮಕ್ಕಳ ಮೇಲೆ ಏಕೆ ತೋರುವುದಿಲ್ಲ. ಅವರು ಅಲ್ಲಿಯೂ ಮಕ್ಕಳಿಗೆ ಮೂರನೇ ಭಾಷೆಯನ್ನು ಅಂಕಗಳಿಗೆ ಕಡ್ಡಾಯ ಮಾಡಬೇಕಲ್ಲವೇ? ಅಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಲಿ ನೋಡೋಣ.
ನ��ವು ಹಿಂದೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅಡಿಯಾಳಾಗಿದ್ದೆವು. ಈಗ ಹಿಂದಿ ಸಾಮ್ರಾಜ್ಯಶಾಹಿಯ ಗುಲಾಮರನ್ನಾಗಿಸಲು ಯತ್ನಿಸಲಾಗುತ್ತಿದೆ. ಈಗ ಕರ್ನಾಟಕ ಎಚ್ಚೆತ್ತುಕೊಂಡಿದೆ. ಇನ್ನು ಈ ಷಡ್ಯಂತ್ರಗಳಿಗೆ ನಾವು ಬಲಿಯಾಗುವುದಿಲ್ಲ.
ಕನ್ನಡ ವಿರೋಧಿ ಧೋರಣೆ ತಳೆದಿರುವ ತಾವರ್ ಚಂದ್ ಗೆಹ್ಲೋಟ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ, ಅಥವಾ ಅವರನ್ನು ನೇಮಿಸಿರುವ ಕೇಂದ್ರ ಸರ್ಕಾರ ಅವರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಿ. ಕರ್ನಾಟಕದಲ್ಲಿ ಕನ್ನಡದ್ರೋಹಿಗಳಿಗೆ ಯಾವುದೇ ಜಾಗವಿಲ್ಲ.
- ಟಿ.ಎ.ನಾರಾಯಣಗೌಡ
#GoBackGoverner
ಭಾಷೆ ಕೇವಲ ಮಾತಲ್ಲ
ಅದು ನಮ್ಮ ಸಂಸ್ಕೃತಿ, ನಮ್ಮ ಇತಿಹಾಸ
ಅದನ್ನು ನಾಶ ಮಾಡಲು ಯಾರಿಗೂ ಹಕ್ಕಿಲ್ಲ
ನಾವು ಎದ್ದು ನಿಲ್ಲುವ ಸಮಯ ಬಂದಿದೆ
ಕನ್ನಡಕ್ಕಾಗಿ ಹೋರಾಟ ಮುಂದುವರಿಯುತ್ತದೆ
#GoBackGoverner@siddaramaiah
ಸರ್ವರಿಗೂ ಐತಿಹಾಸಿಕ ಹಾಗೂ ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವದ ಹಾರ್ದಿಕ ಶುಭಾಶಯಗಳು.
ನಾಡಪ್ರಭು ಕೆಂಪೇಗೌಡರು ಕಟ್ಟಿದ ನಮ್ಮ ಹೆಮ್ಮೆಯ ಬೆಂಗಳೂರಿನ ಕರಗ ಮಹೋತ್ಸವವು ನಾಡಿನ ಪರಂಪರೆ, ಸಂಸ್ಕೃತಿ ಸಾರುವ ವೈಭವದ ಪ್ರತೀಕ.
#ಬೆಂಗಳೂರು#ಕರಗ_ಮಹೋತ್ಸವ@karave_KRV
@Varun9464141437 @narayanagowdru@BYVijayendra ಲೇ ಫೇಕು 2008 20 ಕ್ಕೂ ಹೆಚ್ಚಿನ ಬಿಜೆಪಿಯ MLA ಗೆಲ್ಲೋಕೆ ಕಾರಣ ಕರವೇ ಆವಾಗ ಎಲ್ಲಿದ್ದೆ 2014 ನಂತರ ��ಿಮ್ಮ WhatsApp university ಪ್ರಾರಂಭ ಆಗಿದ್ದು ಅಲ್ವ. ಥೂ ನಿಮ್ಮ ಜನ್ಮಕ್ಕೆ ನಾಡದ್ರೋಹಿಗಳು ನೀವೆಲ್ಲ
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ @BYVijayendra ಅವರೇ,
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಇದ್ದ ಹೊರೆಯನ್ನು ತೆಗೆದು, ಮೂರನೇ ಭಾಷೆಗೆ ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ನಿಮ್ಮ ಹೇಳಿಕೆ ಗಮನಿಸಿದೆ. ನಿಮ್ಮ ಒಟ್ಟು ಹೇಳಿಕೆಯು ಆತ್ಮಘಾತಕತನದಿಂದ ಕೂಡಿದೆ, ಕನ್ನಡದ ಮಕ್ಕಳ ಭವಿಷ್ಯದ ವಿರುದ್ಧವಾಗಿದೆ, ಕನ್ನಡಿಗರ ಆಶೋತ್ತರಗಳನ್ನು ಹೀಯಾಳಿಸುವಂತೆ ಇದೆ. ಇಂಥ ಹೇಳಿಕೆಯನ್ನು ನಿಮ್ಮಿಂದ ನಾನು ನಿರೀಕ್ಷಿಸಿರಲಿಲ್ಲ.
2023-2024ರ SSLC ಪರೀಕ್ಷೆಯಲ್ಲಿ 90,000ಕ್ಕೂ ಹೆಚ್ಚು ಕನ್ನಡದ ಮಕ್ಕಳು ಹಿಂದಿ���ಲ್ಲಿ ಅನುತ್ತೀರ್ಣರಾಗಿದ್ದರು. 2024-25ರಲ್ಲಿ ಹಿಂದಿಯೊಂದರಲ್ಲಿ 1,42,400 ಮಕ್ಕಳು ಫೇಲ್ ಆಗಿದ್ದರು. ಪ್ರತಿ ವರ್ಷ ನಮ್ಮ ಕನ್ನಡದ ಮಕ್ಕಳು ತಮ್ಮದಲ್ಲದ ಹಿಂದಿಯ ಕಡ್ಡಾಯ ಕಲಿಕೆಯಿಂದ ಒಂದು ವರ್ಷ ಕಳೆದುಕೊಳ್ಳುತ್ತಿದ್ದರು. ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ? ನಮ್ಮ ಕನ್ನಡದ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡಲು ನಮಗೇನು ಹಕ್ಕಿದೆ? ಯಾಕೆ ಅವರ ಮೇಲೆ ಇಂಥ ದೌರ್ಜನ್ಯ? ಯಾವತ್ತಾದರೂ ಯೋಚಿಸಿದ್ದೀರಾ? ದಶಕಗಳಿಂದ ಕನ್ನಡದ ಮಕ್ಕಳು ಈ ದೌರ್ಜನ್ಯ ಅನುಭವಿಸಿದ್ದಾರೆ. ಇನ್ನೂ ಎಷ್ಟು ಕಾಲ ಈ ��ಾನಸಿಕ ಅತ್ಯಾಚಾರವನ್ನು ಅನುಭವಿಸಬೇಕು?
ಕಳೆದ ವರ್ಷ ನಿಮ್ಮದೇ ಪಕ್ಷ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ತೃತೀಯ ಭಾಷೆಯನ್ನು ಕೈಬಿಟ್ಟು ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳಲಾಯಿತು? ಯಾಕೆ ಅಲ್ಲಿ ಹಿಂದಿಯನ್ನು ತೆಗೆಯಲಾಯಿತು ಎಂಬುದನ್ನು ಅಲ್ಲಿನ ನಿಮ್ಮ ಮುಖ್ಯಮಂತ್ರಿಗಳನ್ನು ಒಮ್ಮೆ ಕೇಳಿ. ಆಗ ನೀವು ಯಾಕೆ ಮಾತನಾಡಲಿಲ್ಲ? ದೇಶದಲ್ಲೇ ಮಾದರಿ ತ್ರಿಭಾಷಾ ಶಿಕ್ಷಣ ನೀತಿಯನ್ನು ಯಾಕೆ ತೆಗೆದಿರಿ ಎಂದು ಕೇಳಬೇಕಿತ್ತಲ್ಲವೇ? ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬ ನೀತಿ ಸರಿಯೇ?
ಹಿಂದಿಯನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ ಎಂದು ಹೇಳಿದ್ದೀರಿ. ಇದು ಯಾವ ಬಗ್ಗೆಯ ಚಿಂತನೆ? ಕನ್ನಡವನ್ನು, ತಮಿಳನ್ನು, ತೆಲುಗನ್ನು ಅಥವಾ ಇನ್ನುಳಿದ ಭಾಷೆಗಳನ್ನು ನೀವು ಯಾಕೆ ರಾಷ್ಟ್ರೀಯ ದೃಷ್ಟಿಕೋನದಲ್ಲಿ ನೋಡುವುದಿಲ್ಲ. ನಮ್ಮ ಭಾಷೆಗಳೆಲ್ಲ ಬೇರೆ ದೇಶಗಳಿಂದ ಬಂದವುಗಳಾ? ಅಥವಾ ಮೂರನೇ ದರ್ಜೆ ಭಾಷೆಗಳಾ? ಹಿಂದಿಯೊಂದೇ ರಾಷ್ಟೀಯವೇ? ಬೇರೆಯ ಭಾಷೆಗಳೆಲ್ಲ ಏನು ಹಾಗಾದರೆ? ಈ ಬಾಲಿಷ, ಕುಯುಕ್ತಿಯ ಚಿಂತನೆಗಳನ್ನು ನೀವೂ ಯಾಕೆ ಪ್ರತಿಪಾದಿಸುತ್ತಿದ್ದೀರಿ?
ಒಂದು ಕೆಲಸ ಮಾಡಿ. ಉತ್ತರ ಪ್ರದೇಶ, ಬಿಹಾರ ಇನ್ನಿತ್ಯಾದಿ ಹಿಂದಿ ರಾಜ್ಯಗಳಲ್ಲಿ ನಿಮ್ಮದೇ ಪಕ್ಷದ ಸರ್ಕಾರಗಳಿವೆ. ಅಲ್ಲಿ ಕೇವಲ ಎರಡು ಭಾಷೆಗಳನ್ನು ಕಲಿಸಲಾಗುತ್ತಿದೆ. ನೀವು ಅಲ್ಲಿ ಮೂರನೇ ಭಾಷೆಯನ್ನಾಗಿ ಕನ್ನಡವನ್ನು ಕಡ್ಡಾಯಗೊಳಿಸಿ. ನೂರು ಅಂಕ ನಿಗದಿಪಡಿಸಿ. ಅಲ್ಲಿನ ಮಕ್ಕಳು ಕನ್ನಡ ಓದಿ, ಕನಿಷ್ಠ 35 ಅಂಕ ಪಡೆದು ಪಾಸಾಗಲಿ. ಇದು ನಿಮಗೆ, ನಿಮ್ಮ ಪಕ್ಷಕ್ಕೆ ನೇರ ಸವಾಲು. ಇದು ಸಾಧ್ಯವೇ ನಿಮ್ಮಿಂದ? ಸಾಧ್ಯವಿಲ್ಲವಾದರೆ ಕರ್ನಾಟಕದ ಮಕ್ಕಳು ಮೂ��ನೇ ಭಾಷೆ ಹೇರಿಸಿಕೊಂಡು ಫೇಲಾಗಿ ಭವಿಷ್ಯ ಹಾಳುಮಾಡಿಕೊಳ್ಳಲಿ ಎಂದು ದಯವಿಟ್ಟು ಬೋಧನೆ ಮಾಡಬೇಡಿ. ಕನ್ನಡಿಗರು ಈಗ ಎಚ್ಚೆತ್ತುಕೊಂಡಿದ್ದಾರೆ. ಇದು ಹೊಸ ಕರ್ನಾಟಕ, ನಾವು ಬಗ್ಗುವುದೂ ಇಲ್ಲ, ಜಗ್ಗುವುದೂ ಇಲ್ಲ. ನಾವು ಯಾರ ಗುಲಾಮರೂ ಅಲ್ಲ.
ʻʻಕೇಂದ್ರ ಸರಕಾರದ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುವ ಕರ್ನಾಟಕದ ಯುವಸಮೂಹವು ರಾಷ್ಟ್ರಮಟ್ಟದಲ್ಲಿ ಹಿಂದೆ ಬೀಳಬಾರದುʼʼ ಎಂದು ಕಾಳಜಿ ತೋರಿದ್ದೀರಿ. ಇದು ಸರಿಯಾದ ಮಾತು. ಇದಕ್ಕೆ ಸರಿಯಾದ ಉತ್ತರವೂ ನಿಮ್ಮ ಬಳಿಯೇ ಇರುತ್ತದೆ. ಕೇಂದ್ರ ��ರ್ಕಾರದ ಉದ್ಯೋಗಗಳಿಗೆ ಹೋಗುವವರಿಗೆ ಹಿಂದಿ ಗೊತ್ತಿರಲೇಬೇಕು ಎಂಬ ವಾತಾವರಣವನ್ನು ಈ ಕೂಡಲೇ ಬದಲಾಯಿಸಿ. ಕೇಂದ್ರ ಸರ್ಕಾರವನ್ನು ಹಿಂದಿ ಭಾಷಿಕರಿಗೆ ನಾವು ಬರೆದುಕೊಟ್ಟಿಲ್ಲ. ಕೇಂದ್ರ ಸರ್ಕಾರವೆಂದರೆ ಅದು ಎಲ್ಲರ ಸರ್ಕಾರ, ಕನ್ನಡಿಗರ, ಮಲೆಯಾಳಿಗಳ, ಅಸ್ಸಾಮಿಗಳ, ಬಂಗಾಳಿಗಳ ಹೀಗೆ ಎಲ್ಲರ ಸರ್ಕಾರ. ಅದನ್ನು ಅರ್ಥ ಮಾಡಿಕೊಂಡು ಎಲ್ಲ ಭಾಷೆಗಳನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯನ್ನಾಗಿ ಮಾಡಿ. ಆಗ ನಿಮ್ಮ ಕಾಳಜಿಗೆ ಸರಿಯಾದ ಉತ್ತರ ಸಿಗುತ್ತದೆ.
ನಿಮ್ಮ ತಂದೆಯವರಾದ ಮಾನ��ಯ ಬಿ.ಎಸ್.ಯಡಿಯೂರಪ್ಪನವರು @BSYBJP ಹಲವು ಬಾರಿ ಮುಖ್ಯಮಂತ್ರಿಗಳಾಗಿದ್ದಾಗ ಕನ್ನಡದ ವಿಷಯಕ್ಕೆ ಬಂದಾಗ ಯಾವತ್ತೂ ರಾಜಿ ಆದವರಲ್ಲ. ನಿಮ್ಮದೇ ಪಕ್ಷದವರು ಕನ್ನಡ ಬಾವುಟ ಹಾರಿಸಬಾರದು ಎಂದು ಆದೇಶ ಹೊರಡಿಸಿದಾಗಲೂ ರಾಜ್ಯೋತ್ಸವದಂದು ಕಂಠೀರವ ಸ್ಟೇಡಿಯಂನಲ್ಲಿ ಕನ್ನಡ ಬಾವುಟ ಹಾರಿಸಿದವರು ಅವರು. ನೀವು ಅವರ ರಾಜಕೀಯ ಪುಟಗಳಿಂದ ಈ ಸ್ವಾಭಿಮಾನದ ಪಾಠವನ್ನು ಕಲಿತಹಾಗೆ ಕಾಣುತ್ತಿಲ್ಲ.
ದಯವಿಟ್ಟು ನಿಮ್ಮನ್ನು ತಪ್ಪು ದಾರಿಗೆ ಎಳೆಯುತ್ತಿರುವವರಿಗೆ ಬುದ್ಧಿಹೇಳಿ, ಕನ್ನಡ ಪ್ರೇಮಿಗಳಾಗಿ. ನಾವೆಲ್ಲರೂ ನಿಮ್ಮನ್ನು ಗೌರವಿಸುತ್ತೇವೆ. ಆ ಗೌರವವನ್ನು ನೀವೇ ಕಳೆದುಕೊಳ್ಳಬೇಡಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಂದಿನಿ ಹಾಲಿನ ವಿಷಯವು ಯಾವ ಪ್ರಮಾಣದಲ್ಲಿ ನಿಮ್ಮ ಪಕ್ಷಕ್ಕೆ ಘಾಸಿ ಮಾಡಿತು ಎಂಬುದನ್ನು ನೀವು ಮರೆತಿಲ್ಲ ಎಂಬುದನ್ನು ಭಾವಿಸುತ್ತೇನೆ.
ನಾವಂತೂ ಹಿಂದಿಹೇರಿಕೆ ಪರವಾಗಿರುವವರನ್ನು ನಾಡದ್ರೋಹಿಗಳು ಎಂದು ತೀರ್ಮಾನಿಸಿದ್ದೇವೆ. ನೀವು ನಾಡದ್ರೋಹಿಗಳಾಗಬೇಡಿ. ನಿಮ್ಮ ಮೇಲಿನ ಪ್ರೀತಿಯಿಂದಲೇ ಈ ಮಾತನ್ನು ಹೇಳುತ್ತಿದ್ದೇನೆ.
@BYVijayendra@BJP4India@BJP4Karnataka ತ್ರ��ಭಾಷಾ ಸೂತ್ರ ಕನ್ನಡಕ್ಕೆ ಮಾರ��. ಹಿಂದಿ ರಾಜ್ಯಗಳಲ್ಲಿ ಕನ್ನಡಕ್ಕೂ ಸ್ಥಾನ ಕೊಡಿಸಿ ನೋಡೋಣ. ನಿಮ್ಮಪ್ಪ ಅವರಿಗೆ ಇರುವಷ್ಟು ಭಾಷಾಭಿಮಾನ ನಿಮಗಿರಲಿ