ಆದರೆ @drashwathcn ಕೂಡ ಇದೇ ರೀತಿ ವೀಡಿಯೋ ಶೇರ್ ಮಾಡಿದ್ದು ನೋಡಿ ಆಶ್ಚರ್ಯವಾಗುತ್ತಿದೆ. ಹಾಲಿ ಶಾಸಕರಾಗಿರುವವರು ಸದನದಲ್ಲಿ ಕೂತು ಅಭಿವೃದ್ಧಿ ಕಾರ್ಯಗಳ ಬಗೆಗಿನ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿತ್ತು, ಆದರೆ ಅವರ ಗಮನವೆಲ್ಲ ವಿರೋಧ ಪಕ್ಷದ ನಾಯಕನ ಕುರ್ಚ���ಯ ಮೇಲೆ ಇದೆಯೆಂದು ಕಾಣುತ್ತೆ.
ನೀವು ಶೇರ್ ಮಾಡಿರುವ ತಿರುಚಿದ ವಿಡಿಯೋಗಳನ್ನು ನಂಬುವಷ್ಟು ರಾಜ್ಯದ ಜನ ಮೂರ್ಖರಲ್ಲ. ನಿಮ್ಮ ಗಮನಕ್ಕೆ ಇರಲಿ ಎಂದು ಪೂರ್ತಿ ವಿಡಿಯೋವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
@BJP4Karnataka ನಾಯಕರೇ, ನಿಮ್ಮ ಮಾನ ಮರ್ಯಾದೆ ಬಗ್ಗೆ ನಿಮಗೆ ಕನಿಷ್ಠ ಕಾಳಜಿ ಇದ್ದರೆ ನೀವು ಶೇರ್ ಮಾಡಿರುವ ವೀಡಿಯೋ ಡಿಲೀಟ್ ಮಾಡಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ.
ಬಿಜೆಪಿ ನಾಯಕರ ಇಂತಹ ನಡವಳಿಕೆಗಳು ಬಿಜೆಪಿ ಎಂದರೆ "ಬೊಗಳೆ ಜನತಾ ಪಾರ್ಟಿ" ಎಂಬ ಕುಖ್ಯಾತಿಯನ್ನು ದೃಡೀಕರಿಸುವಂತಿದೆ.
ಫೇಕ್ ನ್ಯೂಸ್ ಗಳ ಸೃಷ್ಟಿ ಮತ್ತು ಪ್ರಸಾರವನ್ನೇ ನಂಬಿ ರಾಜಕಾರಣ ಮಾಡುವ ಬಿಜೆಪಿಯವರಿಗೆ ನನ್ನ ವಚನ ಬದ್ಧತೆಯನ್ನು ಪ್ರಶ್ನಿಸುವ ನೈತಿಕತೆಯೇ ಇಲ್ಲ.
@narendramodi ಅವರು ಮೌಲ್ಯಾಧಾರಿತ ರಾಜಕಾರಣ ಮತ್ತು ಸತ್ಯದ ಪರವಾಗಿದ್ದರೆ ಈ ಕೂಡಲೇ "ಫೇಕ್ ನ್ಯೂಸ್ ಪೆಡ್ಲರ್" ಗಳಾದ @CTRavi_BJP ಮತ್ತು ಅಶ್ವತ್ಥ ನಾರಾಯಣ ಅವರನ್ನು ಪಕ್ಷದಿಂದ ಆಚೆಗಟ್ಟಲಿ. 2/2
#BogaleJanathaParty
ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ಜೀವಗಳನ್ನು ರಕ್ಷಿಸಿದ ಬಳಿಕ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿರುವ ಇಲಿ ಬಿಲ ಗಣಿಗಾರಿಕೆ ತಂಡವು ಮತ್ತೊಂದು ವಿಚಾರಕ್ಕೆ ಗಮನ ಸೆಳೆದಿದೆ.
ಇಲಿ ಬಿಲ ತಂಡದ ಮುಖ್ಯಸ್ಥ ವಕೀಲ್ ಹಸನ್ ಅವರು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘೋಷಿಸಿದ್ದ ಬಹುಮಾನದ ಹಣವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಕಾರ್ಮಿಕರ ರಕ್ಷಣೆಯಲ್ಲಿ ನಮ್ಮ ತಂಡದ ಎಲ್ಲರ ಒಗ್ಗಟ್ಟಿನ ಶ್ರಮವಿದ��. ನನ್ನನ್ನು ಒಬ್ಬನನ್ನೇ ಹೀರೋ ಮಾಡುವುದು ಬೇಡ ಎಂದು ಅವರು ಹೇಳಿದ್ದಾರೆ.
ಇಲಿ ಬಿಲ ತಂಡದ ಮುಖ್ಯಸ್ಥ ವಕೀಲ್ ಹಸನ್ ಸೇರಿ 12 ಕಾರ್ಮಿಕರಿಗೆ ತಲಾ 50 ಸಾವಿರ ರೂಪಾಯಿ ನಗದು ಬಹುಮಾನವನ್ನು ಉತ್ತರಾಖಂಡ ಸಿಎಂ ಘೋಷಿಸಿದ್ದರು.
ಹಣಕ್ಕಿಂತ ವೃತ್ತಿಗೆ, ಮಾನವೀಯತೆಗೆ ಆದ್ಯತೆ ಕೊಟ್ಟಿರುವ ವಕೀಲ್ ಹಸನ್, ನಮ್ಮ ತಂಡದಲ್ಲಿ ಯಾರೋ ಒಬ್ಬರಿಂದ ಕಾರ್ಮಿಕರ ರಕ್ಷಣೆ ಆಗಿಲ್ಲ. ಹಿಂದೂ-ಮುಸ್ಲಿಂ ಧರ್ಮಗಳ ಕಾರ್ಮಿಕರು ಜಾತಿ, ಮತ, ಪಂಥವನ್ನು ಬದಿಗಿಟ್ಟು ಕೆಲಸ ಮಾಡಿದ್ದಾರೆ. ನಾವೆಲ್ಲರೂ ದ್ವೇ���ದ ವಿಷ ಬಿಟ್ಟು ಸೌಹಾರ್ದತೆಯಿಂದ ಬಾಳೋಣ. ಇದೇ ನನ್ನ ಸಂದೇಶ ಎಂದು ಹೇಳಿದ್ದಾ��ಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
“ನಮ್ಮ ತಂಡದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಇಬ್ಬರೂ ಇದ್ದಾರೆ. ಎರಡೂ ಧರ್ಮಗಳ ಜನರು 41 ಜೀವಗಳನ್ನು ಉಳಿಸಲು ಶ್ರಮಿಸಿದ್ದಾರೆ. ಅವರಲ್ಲಿ ಯಾರೂ ಇದನ್ನು ಒಬ್ಬರೇ ಮಾಡಲು ಸಾಧ್ಯವಿಲ್ಲ. ನಾವೆಲ್ಲರೂ ಸಾಮರಸ್ಯದಿಂದ ಬದುಕಬೇಕು. ದ್ವೇಷದ ವಿಷ ಹರಡಬಾರದು. ದೇಶಕ್ಕಾಗಿ ನಮ್ಮ 100 ಶೇಖಡ ಶ್ರಮ ಹಾಕಬೇಕು. ಇದು ನನ್ನ ಸಂದೇಶ, ದಯವಿಟ್ಟು ಇದನ್ನು ಎಲ್ಲರಿಗೂ ತಲುಪಿಸಿ” ಎಂದು ದೆಹಲಿ ಮೂಲದ ರಾಕ್ವೆಲ್ ಎಂಟರ್ಪ್ರೈಸಸ್ ಮಾಲ��ಕರಾದ ವಕೀಲ್ ಹಸನ್ ಈ ಹಿಂದೆ ಹೇಳಿದ್ದರು.
ಕೊನೆಯ ಹಂತದ ಸುರಂಗ ಕೊರೆದ ಇಲಿ ಬಿಲ ತಂಡದಲ್ಲಿ ಹಸನ್, ಮುನ್ನಾ ಖುರೇಷಿ, ನಸೀಮ್ ಮಲಿಕ್, ಮೋನು ಕುಮಾರ್, ಸೌರಭ್, ಜತಿನ್ ಕುಮಾರ್, ಅಂಕುರ್, ನಾಸಿರ್ ಖಾನ್, ದೇವೇಂದ್ರ, ಫಿರೋಜ್ ಖುರೇಷಿ, ರಶೀದ್ ಅನ್ಸಾರಿ ಮತ್ತು ಇರ್ಷಾದ್ ಅನ್ಸಾರಿ ಎಂಬ 20 ರಿಂದ 45 ವರ್ಷ ವಯಸ್ಸಿನವರು ಇದ್ದರು.
ದೆಹಲಿ ಜಲ ಮಂಡಳಿಯಲ್ಲಿ ಪೈಪ್ ಅಳವಡಿಕೆ ಕೆಲಸ ಮಾಡುವ ವಕೀಲ್ ಹಸನ್ ಅವರ ತಂಡ ಇಲಿ ಬಿಲ ಸುರಂಗ ಕೊರೆಯುವುದರಲ್ಲಿ ಸಾಕಷ್ಟು ಅನುಭವ ಹೊಂದಿದೆ. ಆದರೆ, ಅವರು ಸಿಲ್ಕ್ಯಾರದಷ್ಟು ದೊಡ್ಡ ರಕ್ಷಣಾ ಕಾರ್ಯ ಮಾಡಿಲ್ಲ ಎನ್ನಲಾಗಿದೆ.
ಇಲಿ ಬಿಲ ಗಣಿಗಾರಿಕೆ ಎಂಬುವುದು ಈಶಾನ್ಯ ರಾಜ್ಯವಾದ ಮೇಘಾಲಯದಲ್ಲಿ ಕಲ್ಲಿದ್ದಲಿನ ತೆಳುವಾದ ಪದರಗಳನ್ನು ಹೊರತೆಗೆಯಲು ವ್ಯಾಪಕವಾಗಿ ಬಳಸಲಾಗುತ್ತಿದ್ದ ಅಪಾಯಕಾರಿ ಗಣಿಗಾರಿಕೆ ವಿಧಾನವಾಗಿದೆ. ಕಾರ್ಮಿಕರ ಸಾವು, ಪರಿಸರ ಹಾನಿಯ ಕಾರಣ ನೀಡಿ, ಹಸಿರು ನ್ಯಾಯಾಧೀಕರಣ 2014 ರಲ್ಲಿ ಇದನ್ನು ನಿಷೇಧ ಮಾಡಿದೆ
ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ "ಹಿಂದುಳಿದ ವರ್ಗಗಳ ನಿರ್ಣಯ" ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ಕರ್ನಾಟಕ ರಾಜ್ಯದಲ್ಲಿ ನಾವು ಐದು ಗ್ಯಾರಂಟಿಗಳನ್ನು 100 ದಿನಗಳಲ್ಲಿ ಜಾರಿ ಮಾಡಿದ್ದೇವೆ. ತೆಲಂಗಾಣದಲ್ಲೂ ಒಂದು ಬೋನಸ್ ಸೇರಿ ಆರು ಗ್ಯಾರಂಟಿಗಳು 100 ದಿನಗಳಲ್ಲಿ ಜಾರಿ ಆಗುತ್ತವೆ.
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯೇ ಆಗಿಲ್ಲ ಎಂಬ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಹಸಿ ಹಸಿ ಸುಳ್ಳುಗಳನ್ನು ಯಾರೊಬ್ಬರೂ ನಂಬಬೇಡಿ ಎಂದು ಮನವಿ ಮಾಡುತ್ತೇನೆ. ಕೆ.ಸಿ.ಆರ್ ಅವರೇ, ಕರ್ನಾಟಕ ರಾಜ್ಯಕ್ಕೆ ಬನ್ನಿ. 5 ಗ್ಯಾರಂಟಿ ಯೋಜನೆಗಳ ಸಕ್ಸಸ್ ನೋಡಿ ಬಳಿಕ ಚರ್ಚೆಗೆ ಮಾಡೋಣ. ನನ್ನ ಸವಾಲು ಸ್ವೀಕರಿಸಲು ಸಿದ್ಧರಿದ್ದೀರ?
BJP ಮತ್ತು BRC ಎರಡೂ ಒಂದೇ. BRS ತೆಲಂಗಾಣದಲ್ಲಿ BJP ಪಕ್ಷದ ಬಿ ಟೀಮ್ ಆಗಿ ಕೆಲಸ ಮಾಡುತ್ತಿದೆ. ತ��ಲಂಗಾಣದ ಜನತೆ ಕೆ.ಸಿ.ಆರ್ ಮತ್ತು ಮೋದಿಯವರ ಮಕ್ಮಲ್ ಟೋಪಿಗೆ ಈ ಬಾರಿ ತಲೆ ಕೊಡುವುದಿಲ್ಲ ಎಂಬ ನಂಬಿಕೆ ನನಗಿದೆ.
ಪ್ರಧಾನಿ ಮೋದಿಯವರು ಹಿಂದುಳಿದವರ ಉದ್ಧಾರಕ್ಕೆ ಅವತಾರ ಎತ್ತಿದವರಂತೆ ಭಾಷಣ ಮಾಡುತ್ತಾರೆ. ಆದರೆ ಅವರು ಪ್ರಧಾನಿ ಆದ 9 ವರ್ಷಗಳಲ್ಲಿ ಹಿಂದುಳಿದವರಿಗೆ, ದಲಿತರ ಉದ್ಧಾರಕ್ಕೆ ಯಾವ ಕಾರ್ಯಕ್ರಮಗಳನ್ನೂ ಜಾರಿ ಮಾಡಲಿಲ್ಲ. ಬದಲಿಗೆ ಹಿಂದುಳಿದವರು ಇನ್ನಷ್ಟು ಹಿಂದುಳಿಯುವಂತೆ ಮಾಡಿದ್ದಾರೆ.
ಮೋದಿಯವರು ದೇಶದ ಶೇ.4 ರಷ್ಟು ಮೇಲ್ವರ್ಗದ ಜನರ ಉದ್ದಾರಕ್ಕೆ ಮಾತ್ರ ಕೆಲಸ ಮಾಡುತ್ತಾರೆ. ನಾಗಪುರದ ಈ ಶೇ.4 ಜನರ ಪರವಾಗಿ ಹೇಳಿಕೊಟ್ಟ ಕಾರ್ಯಕ್ರಮವನ್ನು ಜಾರಿ ಮಾಡುವುದಷ್ಟೆ ಮೋದಿಯವರ ಕೆಲಸ.
ಕೆ.ಸಿ.ಆರ್ ಹತ್ತು ವರ್ಷ ಅಧಿಕಾರದಲ್ಲಿದ್ದೂ ತ��ಲಂಗಾಣವನ್ನು ಅಭಿವೃದ್ಧಿ ಮಾರ್ಗದಲ್ಲಿ ಕೊಂಡೊಯ್ಯದೆ ಭ್ರಷ್ಟಾಚಾರದಲ್ಲಿ ಮುಳುಗಿಸಿದರು. ಪ್ರಧಾನಿ ಮೋದಿಯವರು ಈ ಹತ್ತು ವರ್ಷಗಳಲ್ಲಿ ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಸಿದರು. ಇದನ್ನು ಕರ್ನಾಟಕದ ಜನತೆ ಅರ್ಥ ಮಾಡಿಕೊಂಡರು, ಜಾಗೃತರಾದರು. ತೆಲಂಗಾಣದ ಜನತೆಯೂ ಅರ್ಥ ಮಾಡಿಕೊಳ್ಳಬೇಕಾದ ಸಮಯ ಬಂದಿದೆ.
ಮೋದಿಯವರು ಜಾರಿಗೆ ತಂದಿರುವ ಎಲ್ಲಾ ಜನದ್ರೋಹಿ, ಜನ ವಿರೋಧಿ ಯೋಜನೆಗಳಿಗೆ ಕೆ.ಸಿ.ಆರ್ ಮತ್ತು ಬಿ.ಆರ್.ಎಸ್ ಬೆಂಬಲ ನೀಡಿ ತಾವೂ ಜನವಿರೋಧಿ ಆಗಿದ್ದಾರೆ.
ಕೆ.ಸಿ.ಆರ್ ಚುನಾವಣೆಯಲ್ಲಿ ಖರ್ಚು ಮಾಡುವ ಹಣ ಪಾಪದ ಹಣ. ಆದರೆ ತೆಲಂಗಾಣ ಜನತೆ BRC ಯನ್ನು ಸೋಲಿಸಲು ಸ್ಪಷ್ಟ ತೀರ್ಮಾನ ಮಾಡಿದ್ದಾರೆ.
BJP ತೆಲಂಗಾಣದಲ್ಲಿ 5 ಸೀಟು ಗೆದ್ದರೆ ಅದೇ ಹೆಚ್ಚು. ನರೇಂದ್ರ ಮೋದಿ ನೂರು ಬಾರಿ ತೆಲಂಗಾಣಕ್ಕೆ ಪ್ರಚಾರಕ್ಕೆ ಬಂದರೂ ಇಲ್ಲಿ ಬಿಜೆಪಿ ಗೆಲ್ಲಲ್ಲ. ಬಿಜೆಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಾರೆ.
ನರೇಂದ್ರ ಮೋದಿ ಅವರು ಕರ್ನಾಟಕಕ್ಕೂ 48 ಬಾರಿ ಚುನಾವಣಾ ಪ್ರಚಾರಕ್ಕೆ ಬಂದಿದ್ದರು. ಅವರು ಪ್ರಚಾರ ಮಾಡಿದ ಜಾಗಗಳಲ್ಲೆಲ್ಲಾ ಬಿಜೆಪಿ ಹೀನಾಯವಾಗಿ ಸೋತಿದೆ.
ಕರ್ನಾಟಕ- ಶ್ರೀಮಂತ ಸಂಸ್ಕೃತಿ, ಇತಿಹಾಸ, ಪರಂಪರೆ ಹೊಂದಿರುವ ನೆಲ. ಗಂಧದ ಗುಡಿ ಇದು. ನಮ್ಮ ಹೆಮ್ಮೆಯ ಕರುನಾಡು ಕಲೆ, ಸಾಹಿತ್ಯದ ತವರೂರು.
ನಮ್ಮ ರಾಜ್ಯದ ಸುವರ್ಣ ಪರಂಪರೆಯನ್ನು ನೆನೆಯೋಣ. ರಾಜ್ಯ�� ಕೀರ್ತಿ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೆ ಹಾರಿಸಲು ಎಲ್ಲರೂ ಶ್ರಮಿಸೋಣ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
@dineshgrao@the_hindu ಕಬಡ್ಡಿ ಪಂದ್ಯಾಟದಲ್ಲಿ ಬಲಿಷ್ಠ ತಂಡವನ್ನು ಎದುರಿಸಲು ಹೆದರಿ ಓಕ್ ಓವರ್ ಕೊಟ್ಟು ಶರಣಾದಂತೆ ವಿಧಾನಸಭೆಯಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಸಾಧ್ಯವಾಗದೆ ಹೆದರಿ ಓಕ್ ಓವರ್ ಕೊಟ್ಟು ತಲೆ ತಗ್ಗಿಸಿ ಓಡಿ ಹೋದಂತೆ ಆಗಿದೆ ನಾಚಿಗೆ ಆಗಲ್ಲವೇ ಬಿಜೆಪಿಯವರಿಗೆ.
@drnagalakshmi_c@RahulGandhi@INCKarnataka@INCIndia ಕಬಡ್ಡಿ ಪಂದ್ಯಾಟದಲ್ಲಿ ಬಲಿಷ್ಠ ತಂಡದ ಎದುರು ಹೆದರಿ ಆಟ ಆಡದೆ ಓಕ್ ಓವರ್ ಕೊಟ್ಟಂತೆ ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಆಗದೆ ಹೆದರಿ ಓಕ್ ���ವರ್ ಕೊಟ್ಟು ಓಡಿ ಹೋದಂತೆ ಆಗಿದೆ.
@KpccSocialMedia ಇವತ್ತಿನ ಪಾದಯಾತ್ರೆ ಯಶಸ್ವಿಯಾಗಿ ನಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಆದರೆ ನೀವೆಲ್ಲರೂ ಅತೀ ಜಾಗೃತವಾಗುವುದು ಅತೀ ಅವಶ್ಯವಾಗಿದೆ ಎಲ್ಲರ ಕಣ್ಣು ಇದು ರಾಜಕೀಯ ಪಾದಯಾತ್ರೆ ಆದರೆ ಇದು ಮುಂದಿನ 50 ವರ್ಷದ ಜನತೆಯ ಕುಡಿಯುವ ನೀರಿನ ಕನಸು ಇದರ ಪ್ರಯೋಜನ ಯ��ರು ಪಡೆದರೂ ಅದು ಅವರವರ ಅದೃಷ್ಟ ಅಷ್ಟೇ.
@INCKarnataka@DKShivakumar@siddaramaiah @srpatilbagalkot ಹಗ್ಗ ಜಗ್ಗಾಟ ಸ್ಪರ್ದೆಯಲ್ಲಿ ಹಗ್ಗವನ್ನು ಸಡಿಲ ಬಿಡದೆ ಗಟ್ಟಿಯಾಗಿ ಹಿಡಿದರೆ ಮಾತ್ರ ಗೆಲ್ಲಲು ಸಾದ್ಯ ಅದರಂತೆ ಈ ಅವಕಾಶವನ್ನು ಎಷ್ಟೇ ಕಠಿಣವಾದರೂ ಗೆಲುವು ಸಾಧಿಸುವ ತನಕ ಹಗ್ಗವನ್ನು ಸಡಿಲ ಬಿಡಬೇಡಿ ನಮಗೆ ಗೆಲುವು ಗ್ಯಾರಂಟಿ.