ಕರುನಾಡ ಕನ್ನಡಿಗರ ವೇದಿಕೆ ಗೌರಿಬಿದನೂರು ರವರ ವತಿಯಿಂದ ಇಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿ.
ಈ ಸಂದರ್ಭ
ಕರ್ನಾಟಕದ ಗಾನ ಗಾಯಕರಾದ ವಿಜಯ್ ಪ್ರಕಾಶ್ ಅವರನ್ನು ವೇದಿಕೆಯಲ್ಲಿ ಭೇಟಿ ಮಾಡಿದ ಸಂದರ್ಭ.
#ಶ್ರೀ_ರಾಮೋತ್ಸವ_ಗೌರಿಬಿದನೂರು
ಶ್ರೀ ರಾಮ ನವಮಿ ಹಬ್ಬದ ಪ್ರಯುಕ್ತ ಗೌರಿಬಿದನೂರು ನಗರದಲ್ಲಿ ಶ್ರೀ ರಾಮೋತ್ಸವ ಮೆರವಣಿಗೆಯನ್ನು ಎಲ್ಲ ಭಕ್ತಾದಿಗಳು ಯಶಸ್ವಿಗೊಳಿಸಿ. ಶ್ರೀರಾಮ ಅನುಗ್ರಹಕ್ಕೆ ಪಾತ್ರರಾಗಿ ಇರುವಂತಹ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.
ನಾಡಿನ ಸಮಸ್ತ ಜನತೆಗೆ ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯಗಳು.
ಮರ್ಯಾದಾ ಪುರುಷೋತ್ತಮ, ಉತ್ಕೃಷ್ಟ ಜೀವನ ಮೌಲ್ಯಗಳ ಪ್ರತೀಕ, ಪ್ರಭು ಶ್ರೀರಾಮಚಂದ್ರನ ಆದರ್ಶಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಪಾಲಿಸೋಣ. ಶ್ರೀ ರಾಮ ನವಮಿಯನ್ನು ಶ್ರದ್ಧೆ, ಸಂಭ್ರಮ, ಸಡಗರದಿಂದ ಆಚರಿಸೋಣ. ಜೈ ಶ್ರೀ ರಾಮ
#ramnavami2022
ಆರೋಗ್ಯಂ ಭಾಸ್ಕರಾದಿಚ್ಛೇತ್
ಕ್ಷಣಕ್ಷಣವೂ ಕೋಟಿ ಕಿರಣಗಳನು ಜಗಕೆ ನೀಡಿ ಸಕಲ ಜೀವರಾಶಿಗಳಲ್ಲೂ ನಿತ್ಯ ಚೈತನ್ಯವನ್ನು ತುಂಬುವ ಸೂರ್ಯ ನಾರಾಯಣ ಪ್ರತ್ಯಕ್ಷ ದೈವವೇ ಸರಿ.
ಸೂರ್ಯೋಪಾಸನೆಯ ಪವಿತ್ರ ದಿನವಾದ ರಥಸಪ್ತಮಿ ಎಲ್ಲರಿಗೂ ಶುಭವನ್ನು ತರಲಿ.
ಹಾಡು ಹಳೆಯದಾದರೇನು ಭಾವ ನವನವೀನ;
ಎದೆಯ ಭಾವ ಹೊಮ್ಮುವುದಕೆಭಾಷೆ ಒಂದು ಸಾಧನ.
ಅಕ್ಷರಗಳಿಗೂ ಭಾವ ತುಂಬಿ, ಓದುಗರ ಹೃದಯ ತಟ್ಟಿದ ಸಾಹಿತಿ, ಮಾನವತಾವಾದಿ, ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಜನ್ಮದಿನದಂದು ಅನಂತ ಕೋಟಿ ನಮನಗಳು.
#GSShivarudrappa
ಕ್ಯಾನ್ಸರ್ ಬಗೆಗಿನ ಅಜ್ಞಾನ, ಭಯವನ್ನು ತೊಲಗಿಸಿ, ರೋಗಿಗಳಲ್ಲಿ ಅರಿವು, ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಮಾಡೋಣ.
ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡು ಕ್ಯಾನ್ಸರ್ ಬರದಂತೆ ತಡೆಯೋಣ.
#WorldCancerDay
ನಡೆದಾಡುವ ದೇವರು, ತ್ರಿವಿಧ ದಾಸೋಹಿಗಳು, ಅನ್ನ ಹಾಗೂ ಅಕ್ಷರ ನೀಡಿ ಲಕ್ಷಾಂತರ ಬಡ ಮಕ್ಕಳ ಬಾಳು ಬೆಳಗಿದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆಯಂದು ಅವರ ಪಾದಂಗಳಿಗೆ ಭಕ್ತಿ ಹಾಗೂ ಗೌರವ ಪೂರ್ವಕ ನಮಸ್ಕಾರಗಳನ್ನು ಸಲ್ಲಿಸುತ್ತೇನೆ.
ವೇಮನ ಬದುಕನ್ನು ಸರಳೀಕರಣಗೊಳಿಸುವ ಪದ್ಯಗಳನ್ನು ರಚನೆ ಮಾಡಿ ಬದುಕನ್ನು ಸರಳೀಕರಿಸುವ ಸತ್ಯ ಸಂದೇಶವನ್ನು ಜಗತ್ತಿಗೆ ನೀಡಿದ್ದಾರೆ,
ಶ್ರೀ ಮಹಾಯೋಗಿ ವೇಮನ ಜಯಂತಿಯ ಶುಭಾಶಯಗಳು
#VemanaJayanthi