Society and Government Are Always Committed to Supporting Senior Citizens
I had the privilege of inaugurating the distribution of free physical aids and assistive devices for senior citizens under the Rashtriya Vayoshri Yojana at the G.H. College Auditorium, Haveri. The programme was organized by the Ministry of Social Justice and Empowerment, Government of India.
It was truly heartwarming to see so many of our elderly fathers and mothers gathered together. Their blessings are our greatest strength, and ensuring their well-being is not only the responsibility of governments but also a shared duty of society. Respecting, caring for, and supporting our elders has always been the cornerstone of India's rich cultural heritage and family values.
Under the visionary leadership of Hon'ble Prime Minister Shri @narendramodi ji, the Central Government has introduced several welfare initiatives to ensure dignity, security, and a better quality of life for senior citizens. The Rashtriya Vayoshri Yojana is one such compassionate initiative that provides essential assistive devices to elderly citizens affected by age-related disabilities, enabling them to lead more independent, comfortable, and dignified lives.
In Haveri district, around 1,364 senior citizens are benefiting from this scheme, with the Central Government allocating nearly ₹80 lakh for the distribution of these assistive devices. Efforts are also underway to extend these benefits to every remaining eligible beneficiary in the district.
During my address, I emphasized that parents devote their entire lives to nurturing their children with unconditional love and countless sacrifices. As they grow older, it becomes our moral responsibility to care for them with the same love, gratitude, and respect. Strong families are the foundation of a strong nation, and preserving our family values is essential for building a compassionate and harmonious society.
I sincerely thank Hon'ble Prime Minister Shri Narendra Modi ji and the Ministry of Social Justice and Empowerment for implementing this meaningful and people-centric initiative. Let us all join hands to ensure that every senior citizen lives with dignity, security, care, and the respect they truly deserve.
The programme was attended by Karnataka Legislative Assembly Speaker Shri Rudrappa Lamani, former MLA Shri S.R. Patil, Shri M.M. Maidur, District Disabled Welfare Officer Smt. Ashu Nadaf, ALIMCO Manager Shri Shivakumar, Kumari Krishnaprabha, other dignitaries, and a large gathering of senior citizens.
@PMOIndia@NitinNabin@AmitShah@BJP4India@blsanthosh@BJP4Karnataka
ಇಂದು ಹಾವೇರಿಯ ರೈಲ್ವೆ ನಿಲ್ದಾಣದ ಹತ್ತಿರ ಇರುವ ಸರ್ಜಿ ರೇಣುಕಾ ದೇವಧರ ಆಸ್ಪತ್ರೆಯಲ್ಲಿ ನೂತನ ಕಾರ್ಡಿಯಾಕ್ ಕ್ಯಾತ್ ಲ್ಯಾಬ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದೆನು.
ಈ ಸಂಧರ್ಭದಲ್ಲಿ ವೈದ್ಯರಾದ ಡಾ. ಮಧು ಕೆ.ಆರ್ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
ಇಂದು ಹಾವೇರಿಯ ಜಿ.ಹೆಚ್ ಕಾಲೇಜಿನ ಸಭಾಂಗಣದಲ್ಲಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಕೇಂದ್ರ ಸರ್ಕಾರದ "ರಾಷ್ಟ್ರೀಯ ವಯೋಶ್ರೀ ಯೋಜನೆ" ಅಡಿಯಲ್ಲಿ ಹಿರಿಯ ನಾಗರಿಕರಿಗೆ ಉಚಿತ ದೈಹಿಕ ಸಲಕರಣೆಗಳು ಮತ್ತು ಸಹಾಯಕ ಸಾಧನಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದೆನು.
ಈ ಸಂಧರ್ಭದಲ್ಲಿ ವಿಧಾನ ಸಭೆಯ ಸಭಾಧ್ಯಕ್ಷರಾದ ಶ್ರೀ ರುದ್ರಪ್ಪ ಲಮಾಣಿ, ಮಾಜಿ ಶಾಸಕರಾದ ಶ್ರೀ ಎಸ್.ಆರ್ ಪಾಟೀಲ್, ಮುಖಂಡರಾದ ಶ್ರೀ ಎಂ.ಎಂ.ಮೈದೂರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಶ್ರೀಮತಿ ಆಶು ನದಾಫ, ಆಲಿಮ್ಕೊದ ಮ್ಯಾನೇಜರ ಶ್ರೀ ಶಿವಕುಮಾರ, ಕುಮಾರಿ ಕೃಷ್ಣಪ್ರಭಾ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಹಿರಿಯರು ಉಪಸ್ಥಿತರಿದ್ದರು.
ಇಂದು ಹಾವೇರಿ ಜಿಲ್ಲೆಯ ಸವಣೂರ ಪಟ್ಟಣದ ಶ್ರೀ ಚನ್ನಬಸವೇಶ್ವರ ಮಂಗಲ ಭವನ, ದೊಡ್ಡಹುಣಸೆ ಕಲ್ಮಠದಲ್ಲಿ ಆಯೋಜಿಸಲಾಗಿದ್ದ ಮಾತೋಶ್ರೀ ರುದ್ರಮ್ಮ ರೇವಣಸಿದ್ದಯ್ಯ ಕಲ್ಮಠ ಅವರ 80ನೇ ವರ್ಷದ ಅಮೃತ ಮಹೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆನು.
ಈ ಸಂಧರ್ಭದಲ್ಲಿ ಶ್ರೀ ಮ.ನಿ.ಪ್ರ ಜಗದ್ಗುರು ಡಾ.ಗುರುಶಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು, ಜಗದ್ಗುರು ಮೂರುಸಾವಿರ ಮಹಾ ಸಂಸ್ಥಾನಮಠ, ಹುಬ್ಬಳ್ಳಿ, ಶ್ರೀ ಮ.ನಿ.ಪ್ರ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು, ಶ್ರೀ ಫಕೀರೇಶ್ವರ ಸಂಸ್ಥಾನಮಠ, ಶಿರಹಟ್ಟಿ-ಬಾಲೇಹೊಸೂರ, ಶ್ರೀ ಮ.ನಿ.ಪ್ರ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರುಘಾಮಠ, ಧಾರವಾಡ, ಶ್ರೀ ಮ.ನಿ.ಪ್ರ. ಪ್ರಭುಚನ್ನಬಸವ ಮಹಾಸ್ವಾಮಿಗಳು ಮೋಟಗಿಮಠ, ಆಥಣಿ, ಶ್ರೀ ಮ.ನಿ.ಪ್ರ. ಡಾ. ಕೊಟ್ಟೂರ ಮಹಾಸ್ವಾಮಿಗಳು ಕಲ್ಮಠ, ಗಂಗಾವತಿ, ಶ್ರೀ ಮ.ನಿ.ಪ್ರ ಚನ್ನಬಸವ ಮಹಾಸ್ವಾಮಿಗಳು ದೊಡ್ಡಹುಣಸೇ ಕಲ್ಮಠ, ಸವಣೂರ ಶ್ರೀ ಮ.ನಿ.ಪ್ರ ಗುರುಲಿಂಗ ಮಹಾಸ್ವಾಮಿಗಳು ಅಕ್ಕಿಮಠ, ಅಗಡಿ, ಶ್ರೀ ಮ.ನಿ.ಪ್ರ ಸಂಗನಬಸವ ಮಹಾಸ್ವಾಮಿಗಳು ವಿರಕ್ತಮಠ, ಶಿಗ್ಗಾಂವ, ಶ್ರೀ ಮ.ನಿ.ಪ್ರ. ಬಸವಶಾಂತಲಿಂಗ ಮಹಾಸ್ವಾಮಿಗಳು ಹೊಸಮಠ, ಹಾವೇರಿ, ಶ್ರೀ ಮ.ನಿ.ಪ್ರ ಕುಮಾರ ಮಹಾಸ್ವಾಮಿಗಳು ಅಡವಿಸ್ವಾಮಿಮಠ, ಸವಣೂರ ಶ್ರೀ ಮ.ನಿ.ಪ್ರ ನಿಜಗುಣ ಶಿವಯೋಗಿ ಮಹಾಸ್ವಾಮಿಗಳು ವಿರಕ್ತಮಠ, ಹತ್ತಿಮತ್ತೂರ ಶ್ರೀಗಳವರು ಸಾನಿಧ್ಯ ವಹಿಸಿದ್ದರು.
ಕನ್ನಡ ಕುಲಪುರೋಹಿತ, ತಾಯಿ ಭುವನೇಶ್ವರಿಯ ಆರಾಧಕರಾಗಿ ಕನ್ನಡ ನಾಡಿನ ಸ್ವಾಭಿಮಾನವನ್ನು ಜಾಗೃತಗೊಳಿಸಿದ ಮಹನೀಯರಾದ ಶ್ರೀ ಆಲೂರು ವೆಂಕಟರಾಯರ ಜನ್ಮದಿನದಂದು ಗೌರವಪೂರ್ವಕ ನಮನಗಳು.
ಅವರ ಕನ್ನಡಾಭಿಮಾನ, ರಾಷ್ಟ್ರಪ್ರೇಮ ಮತ್ತು ಸಂಸ್ಕೃತಿ ಚೇತನ ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಿರಲಿ.
#AlooruVenkatarayaru
ಬಹುಭಾಷಾ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ನೋವಾಯಿತು. ತಮ್ಮ ಸುಮಧುರ ಕಂಠದಿಂದ ದೇಶ ವಿದೇಶಗಳಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ ಅವರ ಅಗಲಿಕೆಯಿಂದ ಸಂಗೀತ ಕ್ಷೇತ್ರಕ್ಕೆ ದೊಡ್ಡ ನಷ್ಟ ಉಂಟಾಗಿದೆ.
ಅವರ ಸುಶ್ರಾವ್ಯ ಕಂಠದಲ್ಲಿ ಮೂಡಿ ಬಂದಿರುವ ಹಾಡುಗಳು ಜನ ಮಾನಸದಲ್ಲಿ ಶಾಸ್ವತವಾಗಿ ಉಳಿದುಕೊಂಡಿವೆ. ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ, ಅವರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿಃ
ಇಂದು ಹಾವೇರಿಯ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಹಾವೇರಿ ಜಿಲ್ಲೆಯ ವತಿಯಿಂದ ಏರ್ಪಡಿಸಿದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆನು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಶ್ರೀ ವಿರುಪಾಕ್ಷಪ್ಪ ಬಳ್ಳಾರಿ, ಕೇಂದ್ರ ಸಚಿವರಾದ ಶ್ರೀ @JoshiPralhad, ಮಾಜಿ ಶಾಸಕರುಗಳಾದ ಶ್ರೀ ಶಿವರಾಜ ಸಜ್ಜನ, ಶ್ರೀ ಅರುಣಕುಮಾರ ಪೂಜಾರ, ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ ಎಸ್.ವಿ.ಸಂಕನೂರ, ಶ್ರೀ ಲಿಂಗರಾಜ ಪಾಟೀಲ್, ಮುಖಂಡರುಗಳಾದ ಶ್ರೀ ದತ್ತಾತ್ರೇಯ, ಶ್ರೀ ಭರತ ಬೊಮ್ಮಾಯಿ, ಡಾ. ಬಸವರಾಜ ಕೇಲಗಾರ, ಶ್ರೀ ಜಯತೀರ್ಥ ಕಟ್ಟಿ, ಶ್ರೀ ಡಿ.ಎಸ್ ಮಾಳಗಿ, ಶ್ರೀ ಗವಿಸಿದ್ದಪ್ಪ ದ್ಯಾಮಣ್ಣವರ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.
@narendramodi@NitinNabin@PMOIndia@BJP4India@BJP4Karnataka@BYVijayendra
#BJPHaveri #ViksitBharat
ಗದಗ ಜಿಲ್ಲೆಯಾದ್ಯಂತ ಭೀಕರ ಬರಗಾಲ ಆವರಿಸಿದೆ. ಜಿಲ್ಲೆಯ ಯಾವುದೇ ತಾಲೂಕಿನಲ್ಲೂ ವಾಡಿಕೆಯಂತೆ ಮಳೆಯಾಗಿಲ್ಲ. ಪರಿಣಾಮವಾಗಿ, ಜಿಲ್ಲೆಯಲ್ಲಿ ಕೇವಲ ಶೇ. 30ರಷ್ಟು ಮಾತ್ರ ಬಿತ್ತನೆಯಾಗಿದ್ದು, ಮುಂಗಾರು ಸಂಪೂರ್ಣವಾಗಿ ವಿಫಲವಾಗಿದೆ.
ಜಿಲ್ಲೆಯಲ್ಲಿ ಇಷ್ಟೊಂದು ಗಂಭೀರ ಪರಿಸ್ಥಿತಿ ಇದ್ದರೂ ಸಹ ಜಿಲ್ಲಾ ಆಡಳಿತವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಈ ಕಡೆಗೆ ತಿರುಗಿಯೂ ನೋಡಿಲ್ಲ. ಬರಗಾಲದ ಕುರಿತು ಪ್ರಾಥಮಿಕ ವರದಿಯನ್ನು ತರಿಸಿಕೊಳ್ಳುವ ಕನಿಷ್ಠ ಕೆಲಸವನ್ನೂ ಸರ್ಕಾರ ಮಾಡಿಲ್ಲ.
#RaitaVirodhiCongress
#CongressFailsKarnataka
ಇಂದು ಗದಗ ನಗರದ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆನು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ @JoshiPralhad, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ರಾಜು ಕುರಡಗಿ, ಶಾಸಕರಾದ ಶ್ರೀ ಸಿ.ಸಿ. ಪಾಟೀಲ್ ಹಾಗೂ ಡಾ. ಚಂದ್ರು ಲಮಾಣಿ, ಮಾಜಿ ಸಚಿವರಾದ ಶ್ರೀ ಮುರುಗೇಶ ನಿರಾಣಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ವಿ. ಸಂಕನೂರ, ಮಾಜಿ ಶಾಸಕರಾದ ಶ್ರೀ ಕಳಕಪ್ಪ ಬಂಡಿ ಸೇರಿದಂತೆ ಪಕ್ಷದ ಪ್ರಮುಖರು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪಕ್ಷ ಸಂಘಟನೆ ಇನ್ನಷ್ಟು ಬಲಿಷ್ಠವಾಗುವ ನಿಟ್ಟಿನಲ್ಲಿ ಸಂಘಟನಾ ವಿಚಾರಗಳು, ಮುಂಬರುವ ಕಾರ್ಯಕ್ರಮಗಳು ಹಾಗೂ ಜನಸೇವೆಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು.
@narendramodi@NitinNabin@PMOIndia@BJP4India@BJP4Karnataka@BYVijayendra
#BJPGadag #ViksitBharat
ಧಾರವಾಡದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ನನ್ನ ಮಾತೋಶ್ರೀ ಶ್ರೀಮತಿ ಗಂಗಮ್ಮ ಎಸ್. ಬೊಮ್ಮಾಯಿ ಅವರ ಜೀವನ, ವ್ಯಕ್ತಿತ್ವ, ತಾಯ್ತನ, ಮೌಲ್ಯಗಳು ಹಾಗೂ ಅವರು ಸಮಾಜಕ್ಕೆ ನೀಡಿದ ಆದರ್ಶಗಳನ್ನು ದಾಖಲಿಸುವ "ಲೋಕ ವಂದಿತ ಅವ್ವ" ಕೃತಿಯ ಬಿಡುಗಡೆ ಸಮಾರಂಭ.
ಇಂದು ಧಾರವಾಡದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ನನ್ನ ಮಾತೋಶ್ರೀ ಶ್ರೀಮತಿ ಗಂಗಮ್ಮ ಎಸ್. ಬೊಮ್ಮಾಯಿ ಅವರ ಜೀವನ, ವ್ಯಕ್ತಿತ್ವ, ತಾಯ್ತನ, ಮೌಲ್ಯಗಳು ಹಾಗೂ ಅವರು ಸಮಾಜಕ್ಕೆ ನೀಡಿದ ಆದರ್ಶಗಳನ್ನು ದಾಖಲಿಸುವ "ಲೋಕ ವಂದಿತ ಅವ್ವ" ಕೃತಿಯ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೆನು.
ಜಗತ್ತಿನ ಅಸ್ತಿತ್ವಕ್ಕೆ ಮೂಲ ಕಾರಣ ತಾಯಿ ಮತ್ತು ತಾಯ್ತನ. ಜಗತ್ತು ಇಂದು ದೇವರನ್ನು ಕಾಣದಿರಬಹುದು, ಆದರೆ ಪ್ರತಿಯೊಬ್ಬರೂ ತಮ್ಮ ತಾಯಿಯ ರೂಪದಲ್ಲಿ ದೇವರನ್ನು ಕಾಣುತ್ತಾರೆ. ತಾಯ್ತನ ಎಂಬುದು ಯಾವುದೇ ಜಾತಿ, ಧರ್ಮ, ಭಾಷೆ, ಪ್ರದೇಶ ಅಥವಾ ದೇಶದ ಗಡಿಗಳನ್ನು ಮೀರಿದ ಸಾರ್ವತ್ರಿಕ ಮೌಲ್ಯವಾಗಿದೆ. ಮನುಕುಲದ ಅಸ್ತಿತ್ವ, ಸಂಸ್ಕೃತಿ, ಪರಂಪರೆ ಹಾಗೂ ಮಾನವೀಯತೆಯ ನಿರಂತರತೆಯ ಹಿಂದಿರುವ ಮಹಾನ್ ಶಕ್ತಿ ತಾಯ್ತನವೇ ಆಗಿದೆ.
ನನ್ನ ಮಾತೋಶ್ರೀ ಗಂಗಮ್ಮ ಅವರು ನನ್ನ ಜೀವನದಲ್ಲಿ ಕೇವಲ ತಾಯಿಯಾಗಿ ಮಾತ್ರವಲ್ಲ, ಮಾರ್ಗದರ್ಶಕರಾಗಿ, ಮೌಲ್ಯಗಳ ಪ್ರತೀಕವಾಗಿ ಮತ್ತು ಸದಾ ಸ್ಫೂರ್ತಿಯ ಸೆಲೆಯಾಗಿದ್ದರು. ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಅವರು ನನಗೆ ಸತ್ಯ, ಪ್ರಾಮಾಣಿಕತೆ, ಶಿಸ್ತು, ಮಾನವೀಯತೆ ಹಾಗೂ ಸಮಾಜದ ಬಗ್ಗೆ ಕಾಳಜಿ ಹೊಂದುವ ಸಂಸ್ಕಾರಗಳನ್ನು ನೀಡಿದರು. ನಾನು ಯಾವುದೇ ಹುದ್ದೆಯಲ್ಲಿದ್ದರೂ, ಅವರ ದೃಷ್ಟಿಯಲ್ಲಿ ನಾನು ಎಂದಿಗೂ ಮಗುವೇ ಆಗಿದ್ದೆ. ಇಂದು ನಾನು ಜೀವನದಲ್ಲಿ ಏನಾದರೂ ಸಾಧಿಸಿದ್ದರೆ, ಅದರ ಹಿಂದೆ ಅವರ ತ್ಯಾಗ, ಆಶೀರ್ವಾದ ಮತ್ತು ಸಂಸ್ಕಾರಗಳ ಮಹತ್ತರ ಪಾತ್ರವಿದೆ.
ಈ ಕೃತಿಯ ಮೂಲಕ ಅವರ ಬದುಕಿನ ಹಲವು ಅಪರೂಪದ ಆಯಾಮಗಳು, ಅವರ ವ್ಯಕ್ತಿತ್ವದ ವಿಶೇಷತೆಗಳು ಹಾಗೂ ಸಮಾಜದೊಂದಿಗೆ ಅವರು ಹೊಂದಿದ್ದ ಆತ್ಮೀಯ ಬಾಂಧವ್ಯ ಮುಂದಿನ ಪೀಳಿಗೆಗಳಿಗೆ ತಲುಪುವಂತಾಗಿದೆ ಎಂಬುದು ನನಗೆ ಸಂತೋಷವನ್ನುಂಟು ಮಾಡಿದೆ.
ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಖ್ಯಾತ ಹಿಂದೂಸ್ತಾನಿ ಸಂಗೀತ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಅವರು "ಅವ್ವನ ರೂಪದಲ್ಲಿ ಭಗವಂತನೇ ಭೂಮಿಯ ಮೇಲೆ ಇದ್ದಾನೆ" ಎಂಬ ಅತ್ಯಂತ ಮನಮುಟ್ಟುವ ವಿಚಾರವನ್ನು ಹಂಚಿಕೊಂಡರು. ಅವರ ಮಾತುಗಳು ತಾಯ್ತನದ ಮಹತ್ವವನ್ನು ಮತ್ತಷ್ಟು ಅನಾವರಣಗೊಳಿಸಿದವು.
ಕಾರ್ಯಕ್ರಮದಲ್ಲಿ ತಮ್ಮ ಅಮೂಲ್ಯ ವಿಚಾರಗಳನ್ನು ಹಂಚಿಕೊಂಡ ಹಿರಿಯ ಅಧಿಕಾರಿ ಜಯರಾಮ್ ರಾಯಪೂರ, ಮಾಜಿ ಸಚಿವ ಎಸ್. ಎಸ್. ಪಾಟೀಲ, ಮಾಜಿ ಸಂಸದ ಪ್ರೊ. ಐ. ಜಿ. ಸನದಿ, ಶಾಸಕರಾದ ಅರವಿಂದ ಬೆಲ್ಲದ, ಸಿ. ಸಿ. ಪಾಟೀಲ, ದಾನಪ್ಪ ಕಬ್ಬೇರ, ಮಹೇಶ್ ಬೊಮ್ಮಾಯಿ, ಭರತ ಬೊಮ್ಮಾಯಿ ಹಾಗೂ ಉಪಸ್ಥಿತರಿದ್ದ ಎಲ್ಲ ಗಣ್ಯರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಕೃತಿಯನ್ನು ರಚಿಸಿದ ಲೇಖಕ ಚಂದ್ರಶೇಖರ ವಸ್ತ್ರದ ಅವರಿಗೆ ವಿಶೇಷ ಅಭಿನಂದನೆಗಳು. ನನ್ನ ಮಾತೋಶ್ರೀಯವರ ವ್ಯಕ್ತಿತ್ವ ಮತ್ತು ಜೀವನ ಸಂದೇಶವನ್ನು ಅಕ್ಷರ ರೂಪದಲ್ಲಿ ಉಳಿಸುವ ಮೂಲಕ ಅವರು ಮಹತ್ವದ ಸಾಹಿತ್ಯಿಕ ಸೇವೆ ಸಲ್ಲಿಸಿದ್ದಾರೆ.
ತಾಯಿ ಕೇವಲ ಒಂದು ಕುಟುಂಬದ ಶಕ್ತಿಯಲ್ಲ, ಇಡೀ ಸಮಾಜದ ನೈತಿಕ ಬಲ. ತಾಯಿಯ ಪ್ರೀತಿ, ತ್ಯಾಗ ಮತ್ತು ಸಂಸ್ಕಾರಗಳು ಎಂದಿಗೂ ಕಾಲಾತೀತ. "ಲೋಕ ವಂದಿತ ಅವ್ವ" ಕೃತಿ ತಾಯ್ತನದ ಮಹತ್ವವನ್ನು ಸಮಾಜಕ್ಕೆ ಮತ್ತಷ್ಟು ಹತ್ತಿರ ತಲುಪಿಸುವ ಕಾರ್ಯವನ್ನು ಮಾಡಲಿದೆ.
ಇಂದು ಗದಗ ನಗರದಲ್ಲಿ ನಡೆದ ನಮ್ಮೂರ ದೇವಿ ಜಾತ್ರೆ, ಶ್ರೀ ದುರ್ಗಾದೇವಿ ನೂತನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಭವ್ಯ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದೆನು.
ತಾಯಿ ದುರ್ಗಾದೇವಿಯ ಕೃಪಾಶೀರ್ವಾದವು ಸರ್ವರ ಮೇಲಿರಲಿ. ನಮ್ಮ ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಸೌಹಾರ್ದತೆ ಸದಾ ನೆಲೆಸಿರಲಿ ಎಂದು ಪ್ರಾರ್ಥಿಸುತ್ತೇನೆ.
Warm birthday wishes to Hon'ble Defence Minister Shri @rajnathsingh Ji.
A statesman known for his humility, wisdom and unwavering commitment to national security, he has played a pivotal role in strengthening India's defence capabilities and advancing the vision of an Aatmanirbhar Bharat.
May God bless him with good health, happiness and many more years of dedicated service to our nation.
ನನ್ನ ಮಾತೋಶ್ರೀ ಶ್ರೀಮತಿ ಗಂಗಮ್ಮ ಎಸ್. ಬೊಮ್ಮಾಯಿ ಟ್ರಸ್ಟ್ ವತಿಯಿಂದ "ಲೋಕ ವಂದಿತ ಅವ್ವ" ಕೃತಿಯ ಪುಸ್ತಕ ಬಿಡುಗಡೆ ಸಮಾರಂಭವನ್ನು ನಡೆಯಲಿದೆ.
ದಿನಾಂಕ: 10 ಜುಲೈ 2026, ಶುಕ್ರವಾರ
ಸಮಯ: ಸಂಜೆ 4.00 ಗಂಟೆಗೆ
ಸ್ಥಳ: ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನ, ಜಿಲ್ಲಾಧಿಕಾರಿ ಕಚೇರಿ ಹತ್ತಿರ, ಧಾರವಾಡ.
ಈ ಸ್ಮರಣೀಯ ಸಮಾರಂಭದಲ್ಲಿ ತಾವು ಸಕುಟುಂಬ ಸಮೇತ ಆಗಮಿಸಿ, ತಮ್ಮ ಅಮೂಲ್ಯ ಉಪಸ್ಥಿತಿಯಿಂದ ಕಾರ್ಯಕ್ರಮದ ಗೌರವವನ್ನು ಹೆಚ್ಚಿಸಿ, ನಮ್ಮನ್ನು ಹಾರೈಸಬೇಕಾಗಿ ಆತ್ಮೀಯವಾಗಿ ಆಹ್ವಾನಿಸುತ್ತೇನೆ.
ತಮ್ಮ ಆಗಮನವೇ ನಮ್ಮೆಲ್ಲರಿಗೂ ಸಂತಸದ ಸಂಗತಿಯಾಗಿರುತ್ತದೆ.
Australia Forge Stronger Future!
While addressing the Australia joint press meet in Melbourne, PM Shri @narendramodi shared that India and Australia have taken significant decisions to elevate their strategic partnership through faster progress on the Comprehensive Economic Cooperation Agreement (CECA), a Bilateral Investment Treaty, and enhanced civil nuclear cooperation to advance clean energy objectives.
#PMModiInAustraliaIndia
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿಯ ಅರಬೈಲ್ ಘಟ್ಟದಲ್ಲಿ ನಡೆದ ಭೀಕರ ರಸ್ತೆ ಅಪಘಾತ ಹಲವಾರು ಕುಟುಂಬಗಳ ಬದುಕನ್ನೇ ಕತ್ತಲೆಯಲ್ಲಿಟ್ಟಿದೆ. ಧಾರವಾಡದ ಏಳು ಅಮೂಲ್ಯ ಜೀವಗಳು ಅಕಾಲಿಕವಾಗಿ ಕಳೆದುಹೋದ ಸುದ್ದಿ ಮನಸ್ಸಿಗೆ ತೀವ್ರ ಘಾಸಿಗೊಳಿಸಿದೆ
ಈ ದುರಂತದಲ್ಲಿ ಪ್ರಾಣ ಕಳೆದುಕೊಂಡ ಎಲ್ಲರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಕುಟುಂಬಗಳಿಗೆ ಈ ಅಸಹನೀಯ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಗಾಯಗೊಂಡಿರುವ ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ. ಸರ್ಕಾರ ತುರ್ತು ಪರಿಹಾರ ಕ್ರಮಗಳನ್ನು ಕೈಗೊಂಡು, ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ಗಾಯಾಳುಗಳಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಅಗತ್ಯ ನೆರವು ಒದಗಿಸಬೇಕು.
ಓಂ ಶಾಂತಿ.
ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣದ ಸಂಕಲ್ಪದೊಂದಿಗೆ ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರ್ಕಾರ ಆರಂಭಿಸಿದ 'ಲಖ್ಪತಿ ದೀದಿ' ಯೋಜನೆ ಇಂದು ಐತಿಹಾಸಿಕ ಮೈಲುಗಲ್ಲು ತಲುಪಿದೆ.
ದೇಶದ 3 ಕೋಟಿ ಮಹಿಳೆಯರು ವಾರ್ಷಿಕ ₹1 ಲಕ್ಷಕ್ಕಿಂತ ಹೆಚ್ಚಿನ ಆದಾಯ ಗಳಿಸುವ 'ಲಖ್ಪತಿ ದೀದಿ'ಗಳಾಗಿ ಹೊರಹೊಮ್ಮಿದ್ದಾರೆ. ಇದು ಕೇವಲ ಒಂದು ಅಂಕಿ-ಅಂಶವಲ್ಲ; ಮಹಿಳಾ ಸ್ವಾವಲಂಬನೆ, ಆತ್ಮವಿಶ್ವಾಸ ಮತ್ತು ಗ್ರಾಮೀಣ ಭಾರತದ ಆರ್ಥಿಕ ಪರಿವರ್ತನೆಯ ಪ್ರತೀಕವಾಗಿದೆ.
ಇದರೊಂದಿಗೆ ನಿಲ್ಲದೆ, ಇನ್ನೂ 3 ಕೋಟಿ ಲಖ್ಪತಿ ದೀದಿಯರನ್ನು ರೂಪಿಸುವ ಮಹತ್ವಾಕಾಂಕ್ಷಿ ಸಂಕಲ್ಪವನ್ನೂ ಮೋದಿ ಸರ್ಕಾರ ಕೈಗೊಂಡಿದೆ. ಮಹಿಳೆಯರ ಸಬಲೀಕರಣದ ಮೂಲಕ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಸಾಕಾರಗೊಳಿಸುವ ದಿಟ್ಟ ಹೆಜ್ಜೆಯಿದು.
ನಾರಿ ಶಕ್ತಿ – ರಾಷ್ಟ್ರ ಶಕ್ತಿ!
#NariShakthi #LakhpatiDidi
ವಿದ್ಯಾರ್ಥಿ ಶಕ್ತಿ ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಮಹತ್ತರ ಶಕ್ತಿ.
ರಾಷ್ಟ್ರಭಕ್ತಿ, ಸೇವಾ ಮನೋಭಾವ ಹಾಗೂ ನಾಯಕತ್ವದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುತ್ತಾ, ಅನೇಕ ದಶಕಗಳಿಂದ ವಿದ್ಯಾರ್ಥಿ ಹಿತ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಸಂಸ್ಥಾಪನಾ ದಿನದಂದು ಎಲ್ಲಾ ಎಬಿವಿಪಿ ಕಾರ್ಯಕರ್ತರಿಗೆ ಹಾಗೂ ದೇಶದ ಸಮಸ್ತ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದ್ಯಾರ್ಥಿ ದಿನದ ಹಾರ್ದಿಕ ಶುಭಾಶಯಗಳು.
ರಾಷ್ಟ್ರ ಮೊದಲೇ, ವಿದ್ಯಾರ್ಥಿ ಸದಾ ಮುಂಚೂಣಿಯಲ್ಲಿರಲಿ.
#ABVPFoundationDay #NationalStudentsDay
ಶರಣ ಸಾಹಿತ್ಯವು ಸಾರ್ವಕಾಲಿಕ ಸತ್ಯ, ಜೀವಂತ ಸಾಹಿತ್ಯ.
ಇಂದು ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 14ನೇ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಸಾಧಕರನ್ನು ಸನ್ಮಾನಿಸಿದೆನು.
ಬಸವಾದಿ ಶರಣರ ವೈಚಾರಿಕ ಕ್ರಾಂತಿಯ ಫಲವೇ ವಚನ ಸಾಹಿತ್ಯ. ಇದು ಕೇವಲ ಸಾಹಿತ್ಯವಲ್ಲ, ಬದುಕಿನ ಸತ್ಯವನ್ನು ಸಾರುವ, ಸಮಾಜಕ್ಕೆ ದಾರಿದೀಪವಾಗಿರುವ ಜೀವಂತ ತತ್ವ. ಕಾಲದ ಪರೀಕ್ಷೆಯಲ್ಲೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿರುವ ಶರಣ ಸಾಹಿತ್ಯವನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ.
"ದಯೆಯಿಲ್ಲದ ಧರ್ಮವದು ಧರ್ಮವಲ್ಲ" ಎಂಬ ಬಸವಣ್ಣನವರ ಸಂದೇಶ ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದೆ. ಮಾನವೀಯ ಧರ್ಮವೇ ಶಾಶ್ವತ ಧರ್ಮ. ಶರಣರ ತತ್ವಗಳು ಸಮಾಜವನ್ನು ಒಗ್ಗೂಡಿಸುವ ಶಕ್ತಿಯಾಗಿದ್ದು, ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವೇ ಜಗತ್ತಿನ ಮೊದಲ ಸಂಸತ್ತು ಎಂಬ ಹೆಮ್ಮೆಯ ವಿಚಾರವನ್ನು ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ @narendramodi ಅವರು ವಿಶ್ವದ ವಿವಿಧ ವೇದಿಕೆಗಳಲ್ಲಿ ಪ್ರಸ್ತಾಪಿಸಿ, ಬಸವಣ್ಣನವರ ತತ್ವ-ದರ್ಶನವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.
ಅದೇ ರೀತಿ, ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ದೃಢ ಸಂಕಲ್ಪದೊಂದಿಗೆ ಚಾಲನೆ ನೀಡಿ, ಅಗತ್ಯ ಅನುದಾನ ಒದಗಿಸಿದ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ಕೊಡುಗೆ ಐತಿಹಾಸಿಕವಾಗಿದೆ. ಶರಣ ಸಾಹಿತ್ಯದ ಸಂರಕ್ಷಣೆ ಮತ್ತು ಪ್ರಸಾರಕ್ಕೆ ಅವರು ನೀಡಿದ ಬೆಂಬಲ ಸದಾ ಸ್ಮರಣೀಯವಾಗಿದೆ.
ಶರಣರ ತತ್ವ, ವಚನ ಸಾಹಿತ್ಯ ಹಾಗೂ ಮಾನವೀಯ ಮೌಲ್ಯಗಳು ಸಮಾಜದ ಏಕತೆ, ಸಮಾನತೆ ಮತ್ತು ಸೌಹಾರ್ದತೆಯ ಶಾಶ್ವತ ಮಾರ್ಗದರ್ಶಿಗಳಾಗಿವೆ.
#Basavanna #SharanaSahitya #VachanaSahitya #AnubhavaMantapa #Karnataka
The stories carved in stone continue to inspire generations.
Under the leadership of PM Shri @narendramodi, India is helping restore and conserve historic temples and heritage sites across the world. These efforts preserve our shared civilisational legacy, strengthen cultural ties and deepen global partnerships.
#PMModiInIndonesia