ಹಾವೇರಿ ಜಿಲ್ಲೆಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹಾವೇರಿ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕಾರ್ಮಿಕ ಇಲಾಖೆಯಲ್ಲಿ ಇರುವ ಕಾಯ್ದೆಗಳು, ಸೌಲಭ್ಯಗಳು, ಮಂಡಳಿಗಳು ಹಾಗೂ ಮಂಡಳಿಗಳಲ್ಲಿರುವ ಸೌಲಭ್ಯಗಳು, ಮತ್ತು ನಿಯಂತ್ರಣ ) ಕಾಯ್ದೆ -1986 ಕುರಿತು ಮಾನ್ಯ ಕಾರ್ಮಿಕ ಅಧಿಕಾರಿಗಳು ಜಾಗೃತಿ ಮೂಡಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆ ಬರಂಪುರ ಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆ & ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಬಾಲ್ಯ ಅವಸ್ಥೆ ಹಾಗು ಕಿಶೋರಾವಸ್ಥೆ , ಕಾರ್ಮಿಕ ಪದ್ಧತಿ ನಿಷೇಧ ಕುರಿತಂತೆ ಉಪನ್ಯಾಸ ನೀಡಲಾಯಿತು .
ಮಲ್ಪೆ ಬಂದರಿನಲ್ಲಿ ಮಕ್ಕಳು ಮೀನು ಆಯುತ್ತಿರುವ ಕುರಿತು ಮಲ್ಪೆ ಬಂದರಿನ ಸಾರ್ವಜನಿಕರ ದೂರವಾಣಿ ಕರೆ ಮೂಲಕ ಬಂದ ಅನ್ವಯ ಮಕ್ಕಳ ರಕ್ಷಣಾ ಘಟಕ ಪೋಲಿಸ್ ಇಲಾಖೆ ಅಕ್ಕಪಡೆ ಹಾಗೂ ಕಾರ್ಮಿಕ ನಿರೀಕ್ಷಕರೊಂದಿಗೆ ಜಂಟಿ ತಪಾಸಣೆ ನಡೆಸಲಾಯಿತು ತದನಂತರ ವಿವಿಧ ವಾಣಿ ಸಂಸ್ಥೆಗಳಿಗೆ ಭೇಟಿ ನೀಡಿ ಕಾಯ್ದೆ ಕ���ರಿತು ಅರಿವು ಮೂಡಿಸಲಾಯಿತು.
ಕಾರ್ಮಿಕ ನಿರೀಕ್ಷಕರು ಹೊನ್ನಾವರರವರ ನೇತೃತ್ವದಲ್ಲಿ ಕಲಂ 17 ರಡಿ ನೇಮಕ ಗೊಂಡ ವಿವಿಧ ಇಲಾಖೆಗಳ ನಿರೀಕ್ಷಕರ ಜೊತೆ ಬಾಲ ಹಾಗೂ ಕಿಶೋರ್ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತ ಜಾಗ್ರತಿ ಕರ ಪತ್ರ ಹಾಗೂ ಬಿತ್ತಿ ಪತ್ರಗಳನ್ನು ಅಂಗಡಿ, ಬೇಕರಿ ಹಾಗೂ ವಿವಿಧ ಸಂಸ್ಥೆಗಳಿಗೆ ಭೇಟಿ ನೀಡಿ ಜಾಗ್ರತಿ ಮೂಡಿಸಲಾಯಿತು.
ತಹಶೀಲ್ದಾರರು ಮೊಳಕಾಲ್ಮೂರು ಇವರ ಅಧ್ಯಕ್ಷತೆಯಲ್ಲಿ TTF ಸಭೆಯನ್ನು ಆಯೋಜಿಸಲಾಗಿದ್ದು. ನಂತರ ಮೊಳಕಾಲ್ಮುರು ತಾಲೂಕಿನ ರಾಂಪುರದಲ್ಲಿ ವಿವಿಧ ಅಂಗಡಿ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಶೋರೂಮಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಾಕಾರನ್ನು ಪತ್ತೆ ಹಚ್ಚಿ ಕೆಲಸದಿಂದ ಬಿಡುಗಡೆಗೊಳಿಸಿ CWC ಚಿತ್ರದುರ್ಗ ಇವರಿಗೆ ಹಾಜರುಪಡಿಸಲಾಯಿತು.
ಬಾಲ ಕಾರ್ಮಿಕ ದೂರು ಸ್ವೀಕೃತವಾದ ಹಿನ್ನೆಲೆಯಲ್ಲಿ, ಇಂದು ಬೆಂಗಳೂರಿನ ಜೀವನ್ ಭೀಮಾ ನಗರದ 10ನೇ ಕ್ರಾಸ್ನಲ್ಲಿ ನಡೆಸಿದ ದಿಢೀರ್ ದಾಳಿಯ ವೇಳೆ, ಅಂಗಡಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ 17 ವರ್ಷದ ಹದಿಹರೆಯದ ಬಾಲಕನನ್ನು ರಕ್ಷಿಸಿ,ಮುಚ್ಚಳಿಕೆ ಪತ್ರದೊಂದಿಗೆ ಆತನ ಚಿಕ್ಕಪ್ಪನ ವಶಕ್���ೆ ಸುರಕ್ಷಿತವಾಗಿ ಒಪ್ಪಿಸಲಾಯಿತು.
1098 ಮಕ್ಕಳ ಸಹಾಯವಾಣಿ ದೂರಿನ ಅನ್ವಯ ದಿನಾಂಕ 18.11.2026 ರಂದು ಬೀಳಗಿ ತ��ಲೂಕಿನ ಕುಂದರಗಿ ಗ್ರಾಮದಲ್ಲಿರುವ ಜಮ್ ಶುಗರ್ ಫ್ಯಾಕ್ಟರಿ ಹತ್ತಿರವಿರುವ ಕ್ಯಾಂಟೀನ್ ಗೆ ಅನಿರೀಕ್ಷಿತ ಭೇಟಿ ನೀಡಿ ಬಾಲ ಮತ್ತು ಕಿಶೋರ ಕಾರ್ಮಿಕರ ಕೆಲಸ ಮಾಡುತ್ತಿರುವ ಕುರಿತು ಅಧಿಕಾರಿಗಳ ತಂಡ ಪರಿಶೀಲನೆ ಮಾಡಲಾಯಿತು.
ಜಿಲ್ಲಾ ಕಾರ್ಮಿಕ ಅಧಿಕಾರಿಗಳ ನೇತೃತ್ವದಲ್ಲಿ ಚಾಮರಾಜನಗರ ತಾಲ್ಲೂಕಿನ ವಿವಿಧ ಕ್ರಷರ್ & ಕಲ್ಲು ಗಣಿಗಳಿಗೆ ಭೇಟಿ ನೀಡಿ ಬಾಲಕಾರ್ಮಿಕರ ತಪಾಸಣೆ ನಡೆಸಲಾಯಿತು ಆ ಸಂದರ್ಭದಲ್ಲಿ ಕಲ್ಲು ಗಣಿ ಒಂದರಲ್ಲಿ ��ೆಲಸ ನಿರ್ವಹಿಸುತ್ತಿದ್ದ 1 ಕಿಶೋರ ಕಾರ್ಮಿಕರನ್ನು ಗುರುತಿಸಿ ಕೆಲಸದಿಂದ ಬಿಡಿಸಿ ಮುಂದಿನ ಕ್ರಮಕ್ಕಾಗಿ ಬಾಲಕರ ಬಾಲ ಮಂದಿರಕ್ಕೆ ದಾಖಲಿಸಲಾಗಿದೆ.
ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯಲ್ಲಿ ಹೋಬಳಿ ಮಟ್ಟದ ತಂಡದಿಂದ ವಿವಿಧ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ಮಾಡಿ ಬಾಲಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬಾರದೆಂದು ಕಾನೂನಿನ ಅರಿವು ಮೂಡಿಸಲಾಯಿತು.
ಕಾರವಾರ ತಾಲೂಕಿನಲ್ಲಿ ವಿವಿಧ ಕಡೆ ಹಠಾತ ದಾಳಿ ನಡೆಸಲಾಯಿತು ಆ ಸಂದರ್ಭದಲ್ಲಿ ತಾಕ್ಲಾಲೀಕ್ ವಾಗಿ ರಗ್ಗು ಹಾಗೂ ಚಾಪೆ ವ್ಯಾಪಾರ ನಡೆಸುತ್ತಿದ್ದ ಸ್ಟಾಲಗೆ ಭೇಟಿ ನೀಡಿ ಅಲ್ಲಿ ಬೇರೆ ರಾಜ್ಯದಿಂದ ವ್ಯಾಪಾರಕ್ಕೆ ಕುಟುಂ ಬದೊಂದಿಗೆ ಬಂದಿದ್ದ ಒಬ್ಬ ಬಾಲಕನನ್ನು ರಕ್ಷಿಸಿ CWC ಕಾರವಾರ ರಲ್ಲಿಗೆ ಪುನರ್ವಸತಿ ಗೊಳಿಸಲಾಯಿತು.
ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ವತಿಯಿಂದ ಟಿ ಎಸ್ ಪಿ ಮತ್ತು ಎಸ್ ಸಿ ಪಿ ಯೋಜನೆ ಅಡಿಯಲ್ಲಿ ಗುಂಡ್ಲುಪೇಟೆಯ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನ ಬಗ್ಗೆ ಅರಿವು ಕಾರ್ಯಕ್ರಮವನ್ನು ನಡೆಸಲಾಯಿತು.
ತಿಲಕ್ ನಗರ ವ್ಯಾಪ್ತಿಯಲ್ಲಿ ನಡೆದ ಬಾಲಕಾರ್ಮಿಕರ ಜಂಟಿ ತಪಾಸಣೆ ಹಾಗ��� ದಾಳಿಯ ಸಂದರ್ಭದಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 4 ಕಿಕಾನನ್ನು ರಕ್ಷಿಸಲಾಗಿದೆ. ಸದರಿ ಬಾಲಕರನ್ನು ಕೆಲಸದಿಂದ ಬಿಡುಗಡೆಗೊಳಿಸಿ, ಪುನರ್ವಸತಿಗಾಗಿ ಸರ್ಕಾರಿ ಬಾಲಕರ ಬಾಲಮಂದಿರಕ್ಕೆ ದಾಖಲಿಸಲಾಗಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಮಲ್ಲೂರ ಗ್ರಾಮದಲ್ಲಿ ಹಮ್ಮಿಕೊಂಡ ಮಕ್ಕಳ ಗ್ರಾಮ ಸಭೆಯಲ್ಲಿಭಾಗವಹಿಸಲಾಯಿತು. ಮತ್ತು ಸದರಿ ಗ್ರಾಮ ಸಭೆಯಲ್ಲಿ ಮಕ್ಕಳ ಹಕ್ಕುಗಳು, ಕಾಯ್ದೆ -1986 ಕುರಿತು, ಸಮಗ್ರ ಮಕ್ಕಳ ಸಂರಕ್ಷಣಾ ಯೋಜನೆ, ಹಾಗೂ ಮಕ್ಕಳ ಕಾನೂನುಗಳ ಕುರಿತು ಅರಿವು ಮೂಡಿಸಲಾಯಿತು.
ಕಾರ್ಮಿಕ ಅಧಿಕಾರಿಗಳು ಕಾರವಾರ ರವರಿಗೆ ಬಂದ ದೂರವಾಣಿ ದೂರಿಗೆ ಸಂಬಂದಿಸಿ ಮಾನ್ಯರ ಮಾರ್��ದರ್ಶನದಲ್ಲಿ ಕುಮಟಾ ತಾಲೂಕಿನ ಗೋಕರ್ಣದ ಹೋಟೆಲ್ ಮೇಲೆ ಕಾರ್ಮಿಕ ನಿರೀಕ್ಷಕರು ಕುಮಟಾರವರ ನೇತೃತ್ವದಲ್ಲಿ ಕಲಂ 17 ರಡಿ ನೇಮಕ ಗೊಂಡ ವಿವಿಧ ಇಲಾಖೆಗಳ ನಿರೀಕ್ಷಕರ ಜೊತೆ ಬಾಲ ಹಾಗೂ ಕಿಶೋರ್ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತ ಹಠಾತ ದಾಳಿ ನಡೆಸಲಾಯಿತು.
2021-2022 ನೇ ಸಾಲಿನಲ್ಲಿ ರಕ್ಷಿಸಲಾದ ಬಾಲಕನು 18 ವ��್ಷ ಪೂರ್ಣಗೊಂಡ ಪ್ರಯುಕ್ತ ಸದರಿ ಬಾಲಕನಿಗೆ ಕಾರ್ಪಸ್ ನಿಧಿಯಿಂದ ಠೇವಣಿ ಮಾಡಲಾದ ಮೊತ್ತವನ್ನು ಚೆಕ್ ಮೂಲಕ ಗೌರವಾನ್ವಿತ ಶ್ರೀ ಶ್ರೀನಿವಾಸ ನವಲೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಲ್ಬುರ್ಗಿ ರವರು ವಿತರಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನಲ್ಲಿ ಮಾನ್ಯ ತಹಸೀಲ್ದಾರವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಪುನರ್ವಸತಿ ಸಮಿತಿ ಸಭೆ, ಕಾರ್ಯಪಡೆ ಸಮಿತಿ ಸಭೆ ಹಾಗೂ ಕಾರ್ಯಕಾರಿ ಸಮಿತಿ ಸಭೆಯನ್ನು ಕಾರ್ಮಿಕ ನಿರೀಕ್ಷಕರು ದೇವನಹಳ್ಳಿ ರವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.