“ಕನಿಷ್ಠ ವೇತನವನ್ನು ನೀಡದೆ ಹೊರಗುತ್ತಿಗೆ ನೌಕರರನ್ನು ಜೀತದಾಳುಗಳಂತೆ ದುಡಿಸುವುದು ಅಮಾನವೀಯ”
ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ, ಗುತ್ತಿಗೆ, ದಿನಗೂಲಿ ಹಾಗೂ ಗೌರವಾಧನ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಸರ್ಕಾರ ಹೊರಡಿಸಿರುವ ಅಧಿಸೂಚನೆಯಂತೆ ಪರಿಷ್ಕೃತ ಕನಿಷ್ಠ ವೇತನವನ್ನು ಜಾರಿಗೊಳಿಸದೆ ತಡೆಹಿಡಿದಿರುವುದನ್ನು ವಿರೋಧಿಸ���, ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ, ಅವರ ನ್ಯಾಯಯುತ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲಾಯಿತು.
ಕನಿಷ್ಠ ವೇತನ ಕಾಯ್ದೆ 1948ರ ಅನ್ವಯ ದಿನಾಂಕ 22.05.2026 ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆಯಂತೆ ಪರಿಷ್ಕೃತ ಕನಿಷ್ಠ ವೇತನವನ್ನು ಜಾರಿಗೊಳಿಸದೆ, ನೌಕರರ ವೇತನವನ್ನು ತಡೆಹಿಡಿದಿರುವುದು ಅಮಾನವೀಯ. ಕನಿಷ್ಠ ವೇತನ ನೀಡುವ ಕುರಿತು ಸರ್ಕಾರ ಮೇ ತಿಂಗಳಲ್ಲಿ ಆದೇಶ ಹೊರಡಿಸಿ, ಜೂನ್ನಲ���ಲಿ ವೇತನ ನೀಡಿ ಜುಲೈ ತಿಂಗಳಲ್ಲಿ ಮತ್ತೆ ಆ ವೇತನವನ್ನು ಕಿತ್ತುಕೊಂಡಿರುವುದು ನೌಕರರಿಗೆ ಮಾಡಿದ ಅನ್ಯಾಯ. ಈ ಕೂಡಲೇ ತಡೆಹಿಡಿಯಲಾಗಿರುವ ಹೊಸ ವೇತನ ಪರಿಷ್ಕರಣೆಯನ್ನು ಹಿಂಪಡೆದು, 22.05.2026 ರಿಂದಲೇ ಅನ್ವಯವಾಗುವಂತೆ ಆರ್ಥಿಕ ಸೌಲಭ್ಯಗಳನ್ನು ಜಾರಿಗೊಳಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇನೆ.
Over the past 12 years, the Government of India under Prime Minister @narendramodi ji has taken bold decisions that have transformed the country and driven major reforms.
From GST, the ban on Triple Talaq, and Digital India to Make in India and the construction of the Ram Mandir, these landmark decisions have opened a new path for India’s growth, development, and progress.
ಆರೆಸ್ಸೆಸ್ ಕಾನೂನಿಗಿಂತ ಮೇಲಲ್ಲ — ಆದರೆ ಕಾನೂನು ಪಾಲಿಸುವ ಸಂಘಟನೆಯನ್ನು ಗುರಿಯಾಗಿಸುವುದು ಸರ್ಕಾರದ ಆದ್ಯತೆಯಾಗಬೇಕೇ?
ಆರೆಸ್ಸೆಸ್ ಶಾಖೆಗಳು ಕಾನೂನುಬದ್ಧವಾಗಿ ನಡೆಯುತ್ತಿವೆ. ಶಾಖೆಯಲ್ಲಿ ವ್ಯಕ್ತಿಗೆ ಸಂಸ್ಕಾರ ನೀಡುವ, ವ್ಯಕ್ತಿ ನಿರ್ಮಾಣ, ಆ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಕಾರ್ಯಗಳು ನಡೆಯುತ್ತಿವೆಯೇ ಹೊರತು, ಕಾನೂನು ಬಾಹಿರ ಬೋಧನೆಗಳಲ್ಲ. ರಾಜ್ಯದಲ್ಲಿ ನಿಜವಾದ ಕಾನೂನು ಸುವ್ಯವಸ್ಥೆಯ ಸವಾಲುಗಳಾದ ಮಾದಕವಸ್ತುಗಳ ಜಾಲ, ಕೊಲೆಗಳು, ಮಹಿಳೆಯರ ಮೇಲಿನ ಅಪರಾಧಗಳು, ಸೈಬರ್ ಅಪರಾಧ ಹಾಗೂ ಸಂಘಟಿತ ಅಪರಾಧಗಳತ್ತ @INCKarnataka ಸರ್ಕಾರ ಗಮನ ಹರಿಸುವುದು ಯಾವಾಗ?
ಗೃಹ ಸಚಿವ @PriyankKharge ಅವರೇ, ಕಾನೂನು ಪಾಲಿಸುವವರನ್ನು ಪ್ರಶ್ನಿಸುವ ಬದಲು ಕಾನೂನು ಉಲ್ಲ��ಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಶಾಂತವಾಗಿದ್ದ ರಾಜ್ಯದಲ್ಲಿ ಗುಂಡಿನ ಸದ್ದು ಕೇಳಿದೆ, ಹತ್ಯೆಗಳು ನಡೆದಿವೆ. ಇದಕ್ಕೆ ನೀವು ಉತ್ತರ ನೀಡುವುದು ಯಾವಾಗ? ಬೇರೆ ರಾಜ್ಯಗಳಿಂದ ಬಂದ ಸುಪಾರಿ ಹಂತಕರು ರಾಜ್ಯದಲ್ಲಿ ಕಾನೂನು ಉಲ್ಲಂಘಿಸುತ್ತಿರುವಾಗ, ರಾಜ್ಯದ ಜನತೆಗೆ ರಕ್ಷಣೆ ಎಲ್ಲಿಂದ?
ರಾಜ್ಯದ ಜನರಿಗೆ ಬೇಕಿರುವುದು ರಾಜಕೀಯ ದ್ವೇಷವಲ್ಲ, ಸುರಕ್ಷಿತ ಕರ್ನಾಟಕ.
ಷರತ್ತುಬದ್ಧ ಜಾಮೀನು ಪಡೆದ ಭ್ರಷ್ಟಾಚಾರದ ಆರೋಪಿ ನ್ಯಾಯಾಲಯದ ಷರತ್ತು ಉಲ್ಲಂಘಿಸಿ ದೆಹಲಿಗೆ ತೆರಳುವಷ್ಟು ರಾಜ್ಯದಲ್ಲಿ ಕಾನೂನು ಹದಗೆಟ್ಟಿದೆಯೇ? ಅಥವಾ ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಏನು ಬೇಕಾದರೂ ಮಾಡಬಹುದು ಎನ್ನುವ ���ಹಂಕಾರವೇ?
ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿ, ಇಡಿ ತನಿಖೆ ಎದುರಿಸುತ್ತಿರುವ ಸಚಿವ ನಾಗೇಂದ್ರ ನ್ಯಾಯಾಲಯದ ಷರತ್ತುಗಳನ್ನು ಗಾಳಿಗೆ ತೆರಳಿ ದೆಹಲಿಗೆ ತೆರಳಿದ್ದಾರೆಯೇ ಎನ್ನುವ ಕುರಿತು ಚರ್ಚೆಗಳು ನಡೆಯುತ್ತಿವೆ.
ಒಂದು ವೇಳೆ ಕಾನೂನಿನ ಕಣ್ಣಿಗೆ ಮಣ್ಣೆರಚಿ ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದರೆ ಅದು @INCKarnataka ಭ್ರಷ್ಟ ನಾಯಕರ ಭ್ರಮೆಯಷ್ಟೆ. ಇಡಿ ಈಗಾಗಲೇ ನಾಗೇಂದ್ರ ಅವರ ಪ್ರವಾಸಕ್ಕೆ ಸಂಬಂಧಿಸಿದಂತೆ ಮಾಹಿತಿಗಳನ್ನು ಕಲೆಹಾಕುತ್ತಿದೆ.
ನಾಗೇಂದ್ರನಂತಹ ಕಳಂಕಿತ ವ್ಯಕ್ತಿಯನ್ನು ಸಚಿವ ಸಂಪುಟಕ್ಕೆ ಸೇರಿಸಿದ್ದೇ ಅಕ್ಷಮ್ಯ. ಈಗ ಆತ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ ಎನ್ನುವುದಕ್ಕೆ ಏನು ಭರವಸೆ? ಈ ಸರ್ಕಾರ ನಿಜಕ್ಕೂ ಗ್ಯಾರಂಟಿ ಸರ್ಕಾರವೇ. ಅಪರಾಧಿಗಳಿಗೆ, ಆರೋಪಿಗಳಿಗೆ ರಕ್ಷಣೆ ನೀಡುವುದು, ಭ್ರಷ್ಟಾಚಾರಕ್ಕೆ ಬೆಂಬಲ ನೀಡುವುದೇ ಈ ಸರ್ಕಾರದ ಗ್ಯಾರಂಟಿ!
ಮುಖ್ಯಮಂತ್ರಿ @DKShivakumar ಅವರೇ, ನಾಗೇಂದ್ರ ನ್ಯಾಯಾಲಯಕ್ಕಿಂತ ದೊಡ್ಡವರಾದರೇ? ಈ ಪ್ರಕರಣದ ಕುರಿತು ಸರ್ಕಾರದ ವತಿಯಿಂದ ಸ್ಪಷ್ಟನೆ ನೀಡಬೇಕು. ಕಳಂಕಿತ ಸಚಿವ ನಾಗೇಂದ್ರ ಅವರನ್ನು ಈ ಕ್ಷಣವೇ ಸಂಪುಟದಿಂದ ತೆಗೆಯಬೇಕು. ಆರೋಪಿಗಳಿಂದ ಆಡಳಿತ ನಡೆಸಿಕೊಳ್ಳುವ ದರ್ದು ಕನ್ನಡಿಗರಿಗಿಲ್ಲ.
'ಬ್ರ್ಯಾಂಡ್ ಬೆಂಗಳೂರು' ಮಾಡುತ್ತೇವೆ ಎಂದವರು 'ಬ್ಯಾಡ್ ಬೆಂಗಳೂರು' ಮಾಡುತ್ತಿದ್ದಾರೆ!
ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವಾಸಿಗಳು ತಮಗೆ ಮೂಲಭೂತ ಸೌಕರ್ಯವಾದ ರಸ್ತೆ, ನೀರು ಕಲ್ಪಿಸುವಂತೆ ಮನವಿ ಮಾಡಿದರೆ, ಬಿಡಿಎ ಆಯುಕ್ತ ಮಣಿವಣ್ಣನ್ ಕ್ರಯ ಪತ್ರದಲ್ಲಿ ನೀರು, ರಸ್ತೆ ಕೊಡುತ್ತೇವೆ ಎಂದಿಲ್��� ಎಂದು ಉತ್ತರಿಸಿದ್ದಾರೆ! ಇದು ಸಾರ್ವಜನಿಕರ ಕುರಿತ ಅವಜ್ಞೆಯೋ, ಅಥವಾ ಏನು ಮಾಡಿದರೂ ನಡೆಯುತ್ತದೆ ಎನ್ನುವ ಉದ್ಧಟತನವೋ?
@INCKarnataka ಸರ್ಕಾರಕ್ಕೆ ಈಗ ಹಣ ಮಾಡುವುದು ಬಿಟ್ಟರೆ ಬೇರೆ ಯಾವುದೇ ಉದ್ದೇಶ ಇದ್ದಂತೆ ಕಾಣುತ್ತಿಲ್ಲ. ಸರ್ಕಾರದ ಕಾರ್ಯ ಜನರ ಸೇವೆ ಮಾಡುವುದೇ ಹೊರತು ಜನರನ್ನು ಶೋಷಿಸುವುದಲ್ಲ!
10 ತಿಂಗಳಿನಿಂದ ಮಕ್ಕಳ ಸಹಾಯವಾಣಿ 1098 ಸಿಬ್ಬಂದಿಗೆ ವೇತನವಿಲ್ಲ ಎಂಬ ವರದಿ ಅತ್ಯಂತ ಗಂಭೀರ ಮತ್ತು ಆತಂಕಕಾರಿ. ಸರ್ಕಾರ ಸಿಬ್ಬಂದಿಗಳನ್ನು ಇಷ್ಟರಮಟ್ಟಿಗೆ ಕಡೆಗಣಿಸಿರುವುದು ದುರದೃಷ್ಟಕರ.
ಮಕ್ಕಳ ರಕ್ಷಣೆಗಾಗಿ ಹಗಲಿರುಳು ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನೇ ಇಷ್ಟು ತಿಂಗಳ��� ವೇತನವಿಲ್ಲದೆ ದುಡಿಸಿಕೊಳ್ಳುವುದು ಯಾವ ರೀತಿಯ ಆಡಳಿತ? ತಿಂಗಳ ಸಂಬಳವನ್ನು ನಂಬಿಕೊಂಡು ಕುಟುಂಬ ನಡೆಸುವ ಸಿಬ್ಬಂದಿಗಳ ಬದುಕನ್ನು ಬೀದಿಗೆ ತರುವುದು @INCKarnataka ಸರ್ಕಾರದ ಉದ್ದೇಶವೇ?
ಮುಖ್ಯಮಂತ್ರಿ @DKShivakumar ಅವರೇ, 1098 ಸಿಬ್ಬಂದಿಯ ಬಾಕಿ ವೇತನವನ್ನು ಯಾವಾಗ ನೀಡುತ್ತೀರಿ? ಮಕ್ಕಳ ಸುರಕ್ಷತೆಯಂತಹ ಅತ್ಯಂತ ಸೂಕ್ಷ್ಮ ಸೇವೆಯನ್ನು ಸರ್ಕಾರ ಇಷ್ಟು ನಿರ್ಲಕ್ಷ್ಯದಿಂದ ನಡೆಸಿಕೊಳ್ಳುವುದೇಕೆ?
ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಬಾಕಿ ವೇತನ ಬಿಡುಗಡೆ ಮಾಡಿ, 1098 ಸೇವೆ ಸ್ಥಗಿತಗೊಳ���ಳುವ ಪರಿಸ್ಥಿತಿ ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳಬೇಕು.
The successful test launch of the Agni-4 missile from Odisha’s coast is a proud moment for every Indian.
With a range of around 4,000 km and advanced guidance technology, Agni-4 strengthens India’s defence capabilities and adds a powerful new layer to our national security.
This successful test is another major step towards Atmanirbhar Bharat and a stronger, self-reliant India.
#Agni4
"ಕ್ರಾಂತಿಕಾರಿಗಳ ತ್ಯಾಗ, ಹೋರಾಟ, ವಿರೋಚಿತ ಬಲಿದಾನದ ಫಲವೇ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ."
ತಿರಂಗಾ ಯಾತ್ರೆ ಆಯೋಜನಾ ಸಮಿತಿ, ಪುತ್ತೂರು ಇದರ ನೇತೃತ್ವದಲ್ಲಿ 80ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ���ವರಣದಿಂದ ಕಿಲ್ಲೆ ಮೈದಾಯದವರೆಗೆ ನಡೆದ 'ಬೃಹತ್ ತಿರಂಗಾ ಯಾತ್ರೆಯಲ್ಲಿ' ಭಾಗವಹಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಾಯಿತು.
ಜನನಿ, ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲು. ತಾಯಿ ಭಾರತಿಯನ್ನು ಬ್ರಿಟಿಷರ ದುರಾಡಳಿತದಿಂದ ಸ್ವಾತಂತ್ರ್ಯಗೊಳಿಸಲು ಅಸಂಖ್ಯ ಯುವಕರು ತಮ್ಮ ರಕ್ತವನ್ನು ಅರ್ಪಿಸಿದ್ದಾರೆ. ಭಾರತದ ಸ್ವಾತಂತ್ರ್ಯ ಚರಿತ್ರೆ ರಕ್ತದಿಂದ ಬರೆದ ಚರಿತ್ರೆ. ದೇಶಭಕ್ತಿಯ ಜಾಗರಣೆಗಾಗಿ ಈ ತಿರಂಗಯಾತ್ರೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ, ಸಂಸದರಾದ ಕ್ಯಾಪ್ಟನ್ ಬ್ರಿ��ೇಶ್ ಚೌಟ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ನಾಯ್ಕ, ಶಾಸಕರಾದ ಡಾ. ಭರತ್ ಶೆಟ್ಟಿ, ಶ್ರೀ ವೇದವ್ಯಾಸ್ ಕಾಮತ್, ಶ್ರೀ ಹರೀಶ್ ಪೂಂಜಾ, ಕು. ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್, ಮಾಜಿ ಶಾಸಕರಾದ ಶ್ರೀ ಸಂಜೀವ ಮಠಂದೂರು, ವಿಭಾಗ ಪ್ರಭಾರಿಗಳಾದ ಶ್ರೀ ಭಾರತೀಶ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಶ್ರೀ ದಯಾನಂದ ಶೆಟ್ಟಿ ಉಜಿರೆಮಾರು, ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಶ್ರೀ ಶಿವಪ್ರಸಾದ್ ಪಿ. ಬಿ. ಸೇರಿದಂತೆ ವಿವಿಧ ಗಣ್ಯರು, ���್ರ��ುಖ ಮುಖಂಡರು, ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.
“ಯುವ ಸಮೂಹ ರಾಷ್ಟ್ರವನ್ನು ಮುನ್ನಡೆಸಿದರೆ ವಿಶ್ವಗುರು ಭಾರತದ ನಿರ್ಮಾಣ ಸಾಧ್ಯ “
ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾ���ಿದ್ಯಾಲಯದ (ಸ್ವಾಯತ್ತ) ಕೇಶವ ಸಂಕಲ್ಪ ಸಭಾಭವನದಲ್ಲಿ ಆಯೋಜಿಸಲಾಗಿದ್ದ '2026-2027 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯುವ ವಿದ್ಯಾರ್ಥಿಗಳನ್ನುದೇಶಿಸಿ ಮಾತನಾಡಲಾಯಿತು.
ಯುವಶಕ್ತಿ ದೇಶದ ಆಸ್ತಿ. ವಿದ್ಯಾರ್ಥಿಗಳು ಮೌಲ್ಯಾಧಾರಿತ ಶಿಕ್ಷಣದೊಂದಿಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಸಮಾಜ ಹಾಗೂ ರಾಷ್ಟ್ರದ ಪ್ರಗತಿಗೆ ಸಕ್ರಿಯವಾಗಿ ಕೊಡುಗೆ ನೀಡಬೇಕು. ಭಾರತ ವಿಶ್ವವನ್ನು ಮುನ್ನಡೆಸಬೇಕಾದರೆ ಯುವಕರು ದೇಶವನ್ನು ಮುನ್ನಡೆಸಬೇಕು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ ಶೆಟ್ಟಿ ಕಡಬ, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕರಾದ ಶ್ರೀ ಮುರಳಿಕೃಷ್ಣ ಕೆ. ಎನ್., ಪ್ರಾಂಶುಪಾಲರಾದ ಪ್ರೊ. ಶ್ರೀಕೃಷ್ಣ ಗಣರಾಜ ಭಟ್, ಸೇರಿದಂತೆ ವಿದ್ಯಾರ್ಥಿ ಸಂಘದ ನಾಯಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಭಾರತ ಹಿಂದೂ ರಾಷ್ಟ್ರ ಆಗಬಾರದು ಎಂದು ಸಚಿವ ಡಾ| ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಹಿಂದೂಗಳು ಬಹುಸಂಖ್ಯಾತರಾಗಿರುವ ತನಕ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುವ 'ಸೆಕ್ಯುಲರ್' ರಾಜಕಾರಣವನ್ನು ಮಾಡಬಹುದು. ಸನಾತನ ಹಿಂದೂ ಧರ್ಮ ���ನೆಂದು ಅರಿಯದವರು ಮಾತ���ರವೇ ಹಿಂದೂ ರಾಷ್ಟ್ರ ಎಂದರೆ ತಾರತಮ್ಯದ ಸಮಾಜವಾಗಬಹುದು ಎನ್ನುವ ಮಾತುಗಳನ್ನು ಆಡಬಹುದು. ಜಾತಿ ವ್ಯವಸ್ಥೆ ಕರ್ಮಾನುಸಾರವಾಗಿ ಬಂತೇ ಹೊರತು, ಜನ್ಮಾನುಸಾರ ಅಲ್ಲ ಎನ್ನುವುದು ವಾಸ್ತವ. ಜಾತಿಗಳ ಆಧಾರದಲ್ಲಿ ರಾಜಕಾರಣ ಮಾಡಿದವರು ಇಂದು ಹಿಂದೂ ಧರ್ಮದ ವಿರುದ್ಧ ಮಾತನಾಡುವುದು ಹಾಸ್ಯಾಸ್ಪದವಾಗಿದೆ.
ಮೈಸೂರಿನಲ್ಲಿ ಎಲ್ಲಿ ಹಿಡಿತ ಕೈತಪ್ಪುತ್ತದೋ ಎಂದು ಹಿರಿಯ ಶಾಸಕರಾದ ತನ್ವೀರ್ ಸೇಠ್, ಎಚ್ ಸಿ ಮಹದೇವಪ್ಪ ಅವರಿಗೆ ಸಚಿವ ಸ್ಥಾನ ತಪ್ಪಿಸಿ, ಇಂದು ಜಾತ್ಯಾತೀತತೆಯ ಭಾಷಣ ಮಾಡುವುದು ನಿಜಕ್ಕೂ ಪರಿಸ್ಥಿತಿಯ ವ್ಯಂಗ್ಯವೇ ಸರಿ.
ಹಿಂದೂ ಧರ್ಮ ಎನ್ನುವುದು ಒಂದು ಶ್ರೇಷ್ಠ ಜೀವನ ವಿಧಾನ ಎನ್ನುವುದನ್ನು ಅರಿತರೆ ಬಹುಶಃ ಯತೀಂದ್ರ ಅವರಿಗೆ ಹಿಂದೂ ವಿರೋಧಿಗಳನ್ನು ಮೆಚ್ಚಿಸುವ ಇಂತಹ ಹೇಳಿಕೆಗಳನ್ನು ನೀಡುವ ಅಗತ್ಯ ಬೀಳಲಿಕ್ಕಿಲ್ಲ.
Today, 7th August is National Handloom Day. Let’s make India’s handloom diversity popular.
Share your videos with your favourite handloom products, including GRWM videos on social media.
Don’t forget to use #NationalHandloomDay.
-PM Shri @narendramodi ji
“ನಮ್ಮ ನೇಕಾರರ ದಾರದ ಪ್ರತಿಯೊಂದು ಎಳೆಯಲ್ಲೂ ಭಾರತೀಯ ಸಂಸ್ಕೃತಿ, ಕಲೆ ಮತ್ತು ದೇಶೀಯ ಶ್ರಮದ ಕಥೆಯಿದೆ.”
ಭಾರತೀಯ ಪಾರಂಪರಿಕ ಶ್ರೇಷ್ಠತೆಯನ್ನು ಮತ್ತು ಸ್ವದೇಶಿ ಜಾಗೃತಿಯನ್ನು ಎತ್ತಿಹಿಡಿಯುವ ನಮ್ಮ ಕೈಮಗ್ಗ ನೇಕಾರರ ಶ್ರಮ ಹಾಗೂ ಕೌಶಲ್ಯವನ್ನು ಗೌರವಿಸೋಣ. ನಮ್ಮ ಮಣ್ಣಿನ ಕಲೆಗೆ ಜೀವ ನೀಡುವ ನೇಕಾರರಿಗೆ ನಮನ ಸಲ್ಲಿಸುತ್ತಾ, ಎಲ್ಲರಿಗೂ ರಾಷ್ಟ್ರೀಯ ಕೈಮಗ್ಗ ದಿನದ ಹಾರ್ದಿಕ ಶುಭಾಶಯಗಳು.
#NationalHandloomDay