ದಿನಾಂಕ 28/06/2026 ರಂದು ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮ ಗಸ್ತು ಸೈಬರ್ ವಂಚನೆ ಬಗ್ಗೆ ಬೀಟ್ ಸಭೆ ಮಾಡಿ ಹಾಗೂ ತುರ್ತು ಸಂಧರ್ಭದಲ್ಲಿ 112 ಗೆ ಕರೆ ಮಾಡುವಂತೆ ಜಾಗೃತಿ ಮೂಡಿಸಲಾಯಿತು
ಮಾದಕ ವಸ್ತುಗಳ ವಿರೋಧಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ 5ಕೆ ಮ್ಯಾರಥಾನನ್ನು ಆರ್ ಎಲ್ ಜಾಲಪ್ಪ ಕಾಲೇಜಿನಿಂದ ಭಗತ್ ಸಿಂಗ್ ಕ್ರೀಡಾಂಗಣದವರೆಗೆ ಹಮ್ಮಿಕೊಂಡಿದ್ದು ಎಲ್ಲರೂ ಭಾಗವಹಿಸಬೇಕೆಂದು ಈ ಮೂಲಕ ಕೋರಲಾಗಿದೆ.
🚦 ಸಂಚಾರ ದಂಡಗಳ ಮೇಲೆ 50% ರಿಯಾಯಿತಿ!
ಜೂನ್ 21 ರಿಂದ ಜುಲೈ 10 ರವರೆಗೆ ಬಾಕಿ ಇರುವ ಸಂಚಾರ ದಂಡಗಳನ್ನು 50% ರಿಯಾಯಿತಿಯೊಂದಿಗೆ ಪಾವತಿಸಿ.
ಪಾವತಿಸುವ ವಿಧಾನಗಳು:
📱 KSP App
🏢 Karnataka One
📲 BTP ASTraM App
ಸಂಚಾರಿ ನಿಯಮಗಳನ್ನು ಪಾಲಿಸಿ ಉತ್ತಮ ನಾಗರಿಕರಾಗಿ.
ಈ ದಿನ ದಿನಾಂಕ 23.06.2026 ರಂದು ದೊಡ್ಡಬೆಳವಂಗಲ ಪೊಲೀಸ್ ಠಾಣಾ ಸರಹದ್ದಿನ ಕನ್ನಮಂಗಲ ಕ್ರಿಸ್ತು ಜಯಂತಿ CMI ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಹಾಗೂ ಸಂಚಾರಿ ನಿಯಮ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ದಿನ ದಿನಾಂಕ 22.06.2026 ರಂದು ದೊಡ್ಡಬೆಳವಂಗಲ ಪೊಲೀಸ್ ಠಾಣಾ ಸರಹದ್ದಿನ ದೊಡ್ಡಬೆಳವಂಗಲ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಹಾಗೂ ಸಂಚಾರಿ ನಿಯಮ ಬಗ್ಗೆ ಜಾಗೃತಿ ಮೂಡಿಸಲಾಯಿತು.
@bngdistpol ಈ ದಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಮುಂಬರುವ ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಹಮ್ಮಿಕೊಂಡು, ಸಭೆಗೆ ಹಾಜರಿದ್ದ ಮುಖಂಡರುಗಳೊಂದಿಗೆ ಹಬ್ಬವನ್ನು ಶಾಂತಿಯುತವಾಗಿ & ಸೌಹಾರ್ದಯುತವಾಗಿ ಆಚರಿಸಿ, ಕಾನೂನು ಸುವ್ಯವಸ್ಥೆ ಕಾಪಾಡಲು ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಯಿತು.
ಹೋಂಸ್ಟೇ ಹಾಗೂ ರೆಸಾರ್ಟ್ ಮಾಲೀಕರ ಸಭೆ 🏡 ಸಭೆಯಲ್ಲಿ ಅತಿಥಿಗಳ ದಾಖಲಾತಿ ನಿರ್ವಹಣೆ, ಸುರಕ್ಷತಾ ಕ್ರಮಗಳು, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವುದು, ಮಾದಕ ವಸ್ತುಗಳ ತಡೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಅರಿವು ಮೂಡಿಸಲಾಯಿತು.
@
ಈ ದಿನ ದಿನಾಂಕ 16.06.2026 ರಂದು ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿಕುಂಟೆ ಸರ್ಕಾರಿ ಶಾಲೆಯಲ್ಲಿ ಮಾದಕ ವಸ್ತು ಮತ್ತು ಸಂಚಾರಿ ನಿಯಮದ ಬಗ್ಗೆ ಜಾಗೃತಿ ಮೂಡಿಸಲಾಯಿತು.#awareness#drug
ಇಂದು ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗ್ರಾಮಗಸ್ತು ಮಾಡಿ, ರಾಜ್ಯ ಪೊಲೀಸ್ ಇಲಾಖೆಯ “ಮನೆ ಮನೆಗೆ ಪೊಲೀಸ್” ಕಾರ್ಯಕ್ರಮದ ಭಾಗವಾಗಿ, ಗ್ರಾಮಗಳ ಮನೆ ಮನೆ ಗೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಕುಂದು-ಕೊರತೆಗಳ ಹಾಗೂ ಸೈಬರ್ ಅಪರಾಧ ಬಗ್ಗೆ ಜಾಗೃತಿ ಮೂಡಿಸಲಾಯಿತು