8.2.26 ರಂದು ಠಾಣೆಯ ಎಲ್ಲ ಸಿಬ್ಬಂದಿಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಭಾನುವಾರದ ಹಾಜರಾತಿ ಮಾಡಿ ಕೇಂದ್ರ ಕಚೇರಿಯ ಆದೇಶ ಸಂ CRM 03/178/2026 ದಿನಾಂಕ 21.1.26 ರಂತೆ ಮನೆ ಮನೆ ಪೊಲೀಸ್ ಭೇಟಿ ನೀಡಿದಾಗ ಏಕಾಂಗಿ ವಾಸ ಮಾಡುವ ಹಿರಿಯ ನಾಗರಿಕರ ಪಟ್ಟಿ ಮಾಡಿ ಅವರಿಗೆ ಆಸರೆ ನೀಡಲು ಅವರ ಸಮಸ್ಯೆಗಳಿಗೆ ಆಧ್ಯತೆಯೊಂದಿಗೆ ಸ್ಪಂದಿಸಲು ಸೂಚಿಸಲಾಯಿತು.
ಈ ದಿನ ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಸಾರ್ವಜನಿಕರು, ಆಟೋ, ಕಾರು ಲಾರಿ ಚಾಲಕರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಚಲಿಸುವಾಗ *Lane Discipline* ಪಾಲಿಸಲು ಕರಪತ್ರ ಹಂಚಿ ಜಾಗೃತಿ ಮೂಡಿಸಲಾಯಿತು.
ವಾಹನದಲ್ಲಿನ ಹೆಚ್ಚು ಬೆಳಕು ಹೊರಸೂಸುವ (ಹೈಬೀಮ್) ಎಲ್.ಇ.ಡಿ. ಹೆಡ್ ಲೈಟ್ ಗಳು ಅಪಘಾತಕ್ಕೆ ಕಾರಣವಾಗಬಹುದು. ಇಂತಹ ಮಾರ್ಪಡಿಸಿದ ಹೆಡ್ ಲೈಟ್ ಗಳನ್ನು ಬಳಸುವವರ ವಿರುದ್ದ ಕರ್ನಾಟಕದಾದ್ಯಂತ ಪ್ರಕರಣ ದಾಖಲಿಸಲಾಗುತ್ತಿದೆ.
#ಎಚ್ಚರಿಕೆ@DgpKarnataka
ದಿನಾಂಕಃ 12-06-2024 ರಂದು ಪಿಎಸ್ಐ ದೊಡ್ಡಪೇಟೆ ಪೊಲೀಸ್ ಠಾಣೆ ರವರು ಠಾಣಾ ವ್ಯಾಪ್ತಿಯ ಮಿಳ್ಳಘಟ್ಟ ಶಾಲೆ, ಕಿದ್ವಾಯ್ ಶಾಲೆ ಮತ್ತು ಮಹ್ಮದೀಯ ಸರ್ಕಾರಿ ಶಾಲೆಯಲ್ಲಿ, ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡು ವಿಧ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ, ಬಾಲ ವಿವಾಹ ನಿಷೇದ ಕಾಯ್ದೆ, ಬಾಲಕಾರ್ಮಿಕ ನಿಷೇದ ಕಾಯ್ದೆಗಳ ಮಾಹಿತಿಯನ್ನು ನೀಡಿರುತ್ತಾರೆ
ಸಾಮಾನ್ಯ ಸೇವಾ ಕೇಂದ್ರ(Common Service Centre) ಹೆಸರಿನ ಸರ್ಕಾರಿ ಸೇವಾ ಪೋರ್ಟಲ್ ಎಂದು ಬಿಂಬಿಸಿ,ನಕಲಿ ವಾಟ್ಸಾಪ್ ನಂಬರ್ ನಿಂದ ಬರುವ 𝐀𝐏𝐊 & ಫೈಲ್ ಗಳನ್ನು ಡೌನ್ಲೋಡ್ ಮಾಡಬೇಡಿ.ನಿಮ್ಮ ಮೊಬೈ���್ ಡೇಟಾ ಕಳ್ಳತನ ಮಾಡಿ ಬ್ಯಾಂಕ್ ಖಾತೆಯಿಂದ ಹಣ ಕದಿಯುತ್ತಾರೆ ಎಚ್ಚರ!!!
ಸೈಬರ್ ��್ರೈಮ್ ವಂಚನೆಗೆ ಒಳಗಾದರೆ ಕೂಡಲೇ 𝟭𝟵𝟯𝟬 ಗೆ ಕರೆ ಮಾಡಿ.
7,00,000/- ರೂ ನಗದು ಹಣವಿದ್ದ ಬ್ಯಾಗ್ ಅ���್ನು ಕಳ್ಳತನ ಮಾಡಿದ ಆರೋಪಿ ಶಿವಮೊಗ್ಗ ಟೌನ್ ಬ್ರೈಟ್ ಹೋಟೇಲ್ ನ ಸರ್ವರ್ ಅನ್ನು ಪಿಐ ದೊಡ್ಡಪೇಟೆ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂದಿಗಳ ತಂಡವು ದಸ್ತಗಿರಿ ಮಾಡಿ, ಆತನಿಂದ ರೂ 7,00,000/- ನಗದು ಹಣವನ್ನು ವಶಪಡಿಸಿಕೊಂಡಿರುತ್ತಾರೆ
ಆತ್ಮೀಯ ಮತದಾರರೇ:
ಇಂದು ಕರ್ನಾಟಕದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿರುತ್ತದೆ.
ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾರರು ತಮ್ಮ ಹಕ್ಕನ್ನು ಚಲಾಯಿಸಬಹುದಾಗಿದೆ.
ಪ್ರತಿ ಮತವೂ ಅಮೂಲ್ಯ , ತಪ್ಪದೇ ಮತ ಚಲಾಯಿಸಿ