ಯುದ್ದ ನಡೆದಿದೆ 👍
ಇವರಿಗೆ
ಗಡಿಯ ಆಚೆಯವ ಸತ್ತಿದ್ದಾನೆ
ಈಚೆಯವ ಹುತಾತ್ಮನಾಗಿದ್ದಾನೆ.
ಅವರಿಗೆ
ಗಡಿಯ ಈಚೆಯವ ಸತ್ತಿದ್ದಾನೆ
ಆಚೆಯವ ಹುತಾತ್ಮನಾಗಿದ್ದಾನೆ.
ಒಂದಂತೂ ಸತ್ಯ
ಇಬ್ಬರೂ ಹೆಣವಾಗಿದ್ದಾರೆ.
"ಸಾವಿರಾರು ವರ್ಷಗಳಿಂದ ಪ್ರವಚನಗಳಿಂದ ಬದಲಾಯಿಸಲಾರದ್ದನ್ನು ಬುದ್ಧ ನಸು ನಕ್ಕು ಬದಲಾಯಿಸಿದ"
"ತಿದ್ದಲಾರದ ಹೃದಯ ಮತ್ತು ಮನಸ್ಸುಗಳನ್ನು ತಿದ್ದಿದ ಮಹಾ ಮಾನವತಾವಾದಿ ಬುದ್ದ"
ಬುದ್ದ ಪೂರ್ಣಿಮೆಯ ಶುಭಾಶಯಗಳು.
KPSC ಯ ಕಾರ್ಯದರ್ಶ��� ಆಗಿದ್ದ ವಿಕಾಸ ಕಿಶೋರ್ ಸುರಳ್ಕರ್ ಅವರನ್ನು ಆ ಸ್ಥಾನದಿಂದ ವರ್ಗಾವಣೆ ಮಾಡಿದ್ದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. @siddaramaiah ನವರೇ, KPSC ನೇಮಕಾತಿಯಲ್ಲಿ ಹಲವಾರು ಕ್ರಾಂತಿಕಾರಿ ಸುಧಾರಣೆ ಮಾಡಲು ಹೊರಟಿದ್ದ ಇವರನ್ನು ಎತ್ತಂಗಡಿ ಮಾಡಿದ್ದು ಯಾಕೆ? #Bringbackvikaskishoresurlkartokpsc
ಅಂದು ನೀವು ಆಡಳಿದ ನಡೆಸಿದ್ದೀರಿ ಎನ್ನುವ ಕಾರಣಕ್ಕಾಗಿ ಇಂದು ನಾವು ಘನತೆಯಿಂದ ಬಾಳುತ್ತಿದ್ದೇವೆ. ಪ್ರಾಮಾಣಿಕರಿಗೆ ವರ್ತಮಾನ ಕ್ರೂರವಾಗಿದ್ದರೂ ಕೂಡ , ಇತಿಹಾಸ ಸ್ಮರಿಸುತ್ತದೆ ಎನ್ನುವುದಕ್ಕೆ ನೀವು ಸಜೀವ ನಿದರ್ಶನ. ಹಿಂದುಳಿದ ವರ್ಗಗಳ ಅರಸ, ದೇವರಾಜ ಅರಸು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಚುನಾವಣಾ ಪೂರ್ವದಲ್ಲಿ ನೀಡಿದ ಆಶ್ವಾಸನೆಯಂತೆ 5 ಗ್ಯಾರಂಟಿಗಳನ್ನು ಜಾರಿ ಮಾಡಲು ಆದೇಶ ಹೊರಡಿಸಿರುವ ರಾಜ್ಯ ಸರಕಾರಕ್ಕೆ ಧನ್ಯವಾದಗಳು.
ಆದರೆ,
ಸರಕಾರದ ವಿವಿಧ ಇಲಾಖೆಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವ ಮೂಲಕ, ಯುವಜನತೆಗೆ ಉದ್ಯೋಗಭಾಗ್ಯ ನೀಡಬೇಕೆಂದು ವಿನಂತಿ.@siddaramaiah
"ಕಾವೇರಿಯನ್ನು ಹರಿಯಲು ಬಿಟ್ಟು ನಾಲ್ವಡಿಯರು ಶ್ರಮ ಪಡದಿದ್ದರೆ ಬಂಗಾರ ಬೆಳೆವಾ ಹೊನ್ನಾಡು ಆಗುತಿತ್ತೆ ಈ ನಾಡು"
ಕನ್ನಂಬಾಡಿ ಜಲಾಶಯದ ನಿಜ ನಿರ್ಮಾತೃ. ಮೈಸೂರು ಸಂಸ್ಥಾನದ ಸಾಮಾಜಿಕ ನ್ಯಾಯದ ಹರಿಕಾರರು.
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
@kni70459358@kpscadda@siddaramaiah ನಾವು ಟ್ವೀಟ್ ಮಾಡಿದ್ದೆ ತಡ, ಸ್ವಂತ ಲಾಭಕೊಸ್ಕರ ಮಾಡ್ತಿದಾರೆ ಅಂತ ಹೇಳುವ ಜನ ಇರುವಾಗ, ಅದಕ್ಕೆ ಉಳಿದವರು ಸುಮ್ನೆ ಕುಳಿತುಕೊಳ್ತಾರೆ.
ಆದರೆ ಯಾರೂ ಏನಾದರೂ ಅಂದುಕೊಳ್ಳಲಿ. ನಾವು ವಿದ್ಯಾರ್ಥಿಗಳ ಪರ ಏನಾದರೂ ಮಾಡೋಣ ಅನ್ನೋದು ನನ್ನ ಬಯಕೆ.
@being_111@siddaramaiah ಕೋಚಿಂಗ್ ಕೊಡೋದು ನನ್ನ ಹವ್ಯಾಸವೇ ಹೊರತು ಹೊಟ್ಡೆಪಾಡು ಅಲ್ಲ. ಬೇರೆಯ ಹೆಸರು ಇಟ್ಟುಕೊಂಡು ಬೊಗಳುವ ಬದಲು, ಧಮ್ ನೇರವಾಗಿ ನಿನ್ನ ಹೆಸರು ಇಟ್ಟುಕೊಂಡು ರಿಪ್ಲಾಯ್ ಮಾಡು. ಇಲ್ಲದಿದ್ದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ. ಎಲ್ಲಿಯೋ ಕುಳಿತುಕೊಂಡು ಬೊಗಳುವ ಬದಲು ನನ್ನ ಕಣ್ಣು ಮುಂದೆ ಬಾ.
Educated ಮತ್ತು Educated fools ಗೂ ಬಹಳ ವ್ಯತ್ಯಾಸ ಇದೆ.
Educated- ಸುಶಿಕ್ಷಿತನೂ ಹಾಗೂ ಜಗತ್ತಿನ ಆಗುಹೋಗುಗಳ ಬಗ್ಗೆ ಪಕ್ಷಾತೀತ ಹಾಗೂ ಧರ್ಮಾತೀತವಾಗಿ ವಿಚಾರ ಮಾಡುವವನು.
Educated fools- ಸರಿ ತಪ್ಪು ತಿಳಿಯದೇ, ಜನಪರ ಮತ್ತು ಜನವಿರೋಧಿ ಯಾವುದು ಎಂದು ತಿಳಿಯದೇ ಪಕ್ಷಪಾತ ಮತ್ತು ಗುಲಾಮಗಿರಿ ಮಾಡುವವನು. ತಾನೇ ಸರಿ ಎಂದು ವಾದಿಸುವನು.