ಕನ್ನಡ, ಕನ್ನಡಿಗ ಹಾಗೂ ಕರ್ನಾಟಕವನ್ನು ಹೀಯಾಳಿಸುವ ಪರಿಯಲ್ಲಿ ವ್ಯಂಗ ಮಾಡಿರುವ ತಮಿಳು ನಾಡು ಮೂಲದ ಐಪಿಎಸ್ ಅಧಿಕಾರಿ ಬಿ.ಎಸ್ ಧನುಷ್ ಕುಮಾರ್ ಅವರ ನಡೆ ಉದ್ಧಟತನದ ಪರಮಾವಧಿ!
ಕನ್ನಡಿಗರು ಸೌಹಾರ್ದತೆ, ಬಾಂಧವ್ಯ ಬೆಸೆಯುವ ಸಂಸ್ಕೃತಿಗೆ ಹೆಸರಾದ ಶ್ರೀಮಂತ ಪ��ಂಪರೆ ಹೊಂದಿರುವ ಹೆಮ್ಮೆಯ ಭಾರತೀಯರಾಗಿದ್ದಾರೆ. ನಾಡು, ನುಡಿ, ಜನ ಹಾಗೂ ಜಲ ಸಂರಕ್ಷಣೆಯ ಪ್ರಶ್ನೆ ಬಂದಾಗ ಸ್ವಾಭಿಮಾನದಿಂದ ದನಿ ಎತ್ತುತ್ತಾರೆ.
ಕರ್ನಾಟಕದ ನೆಲ, ಜಲ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಬಳಸಿಕೊಂಡು, ಉದ್ಯಮ ಸ್ಥಾಪನೆ ಮಾಡಿ, ಆದಾಯ ಗಳಿಸುವ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಹೋರಾಟ ನಡೆಸುವ ಕನ್ನಡ ಪರ ಸಂಘಟನೆಗಳ ಕಾಳಜಿಯನ್ನು ವ್ಯಂಗ್ಯ ಮಾಡಿದರೆ, ಅದು ಅವರ ಅಸಹಿಷ್ಣುತೆಯನ್ನು ಸಂಕೇತಿಸುತ್ತದೆ. ಭಾರತೀಯ ಪೊಲೀಸ್ ಸೇವೆಗೆ ಆಯ್ಕೆಯಾಗಿ, ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಅಧಿಕಾರಿಯೊಬ್ಬರು ಕನ್ನಡಿಗರನ್ನು ಕೆಣಕುವ ಕುಚೋದ್ಯದ ಪೋಸ್ಟ್ ಮಾಡಿರುವುದು ಇವರ ಸಂಕುಚಿತ ಮನೋಭಾವವನ್ನು ಸಾಕ್ಷೀಕರಿಸುತ್ತದೆ.
ತಮಿಳುನಾಡಿನಲ್ಲಿ ತಮಿಳು- ತಮಿಳಿಗ ಹೇಗೆ ಆದ್ಯತೆಯೋ ಕರ್ನಾಟಕದಲ್ಲಿ ಕನ್ನಡ- ಕನ್ನಡಿಗನೂ ಆದ್ಯತೆಯಾಗುವುದು ಸಹಜ ನ್ಯಾಯದ ಪ್ರತೀಕ. ಬಿ.ಎಸ್. ಧನುಷ್ ಕುಮಾರ್ ಅವರ ನಡೆ ಭಾಷಾ ಸಹೋದರತ್ವ ಹಾಗೂ ಬಾಂಧವ್ಯದಲ್ಲಿ ಬಿರುಕು ಮೂಡಿಸುವ ವಿಕೃತ ಮನೋಭಾವವನ್ನು ತೋರಿಸುತ್ತಿದೆ.
ಕನ್ನಡಿಗರ ಶಕ್ತಿ ಹಾಗೂ ಪ್ರತಿಭಾ ಸಾಮರ್ಥ್ಯವನ್ನು ಅಪಮಾನಿಸಿರುವ ಐಪಿಎಸ್ ಅಧಿಕಾರಿ ಬಿ.ಎಸ್. ಧನುಷ್ ಕುಮಾರ್ ಕೂ��ಲೇ ಕರ್ನಾಟಕದ ಜನತೆಯ ಕ್ಷಮೆ ಯಾಚಿಸಲಿ. ತಮಿಳುನಾಡು ಸರ್ಕಾರ ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಿ.
Jobs for Kannadigas, not just business in Karnataka
KRV teams are knocking on the doors of Bengaluru's IT giants, seeking hiring data & transparency in recruitment
Their message:Companies that thrive on Karnataka's resources must also respect Kannadigas' employment aspirations
ಎಲ್ಲವನ್ನು ವಲಸಿಗರಿಗೆ ಬಿಟ್ಟುಕೊಡಬೇಕೇ?
ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯ.
Resume ಅಲ್ಲಿ ಕನ್ನಡ ಮಾತೃಭಾಷೆ ನೋಡಿದ್ರೆ ��ದ್ಯೋಗ ಕೊಡ್ತಿಲ್ಲ ಅನ್ನೋ ಆರೋಪ.
ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬ ಹೆಣ್ಣುಮಗಳ ನೋವಿನ ವಿಡಿಯೋ ನೋಡಿ ಈ ಉತ್ತರ..
ದಯವಿಟ್ಟು ಈ ರಾಜ್ಯೋತ್ಸವದ ಸಂದರ್ಭದಲ್ಲಿ
ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಕಾನೂನು ತನ್ನಿ..
ಬಹುದಿನಗಳ ಬೇಡಿಕೆಯಂತೆ ಮಂಗಳೂರು ರೈಲ್ವೇ ನಿಲ್ದಾಣವನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ವಿಭಜಿಸಿ ಮೈಸೂರು ರೈಲ್ವೇ ವಿಭಾಗಕ್ಕೆ ಸೇರಿಸುವ ಭಾರತ ಸರಕಾರದ ನಿರ್ಧಾರವನ್ನು ಕರ್ನಾಟಕ ರಕ್ಷಣಾ ವೇದಿಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ ಹಾಗೂ ಕೇಂದ್ರ ಸರಕಾರವನ್ನು ಅಭಿನಂದಿಸುತ್ತದೆ.
ಈ ಮಹತ್ವದ ನಿರ್ಧಾರದ ಹಿಂದೆ ಕೆಲಸ ಮಾಡಿದ ರೈಲ್ವೇ ಸಚಿವ ವಿ. ಸೋಮಣ್ಣ ಹಾಗೂ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾಪ್ಟ���್ ಬ್ರಿಜೇಶ್ ಚೌಟ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ವೈಯಕ್ತಿಕವಾಗಿ ಅಭಿನಂದಿಸುತ್ತದೆ. ಮಂಗಳೂರು ಹಾಗೂ ಕರಾವಳಿ ಕರ್ನಾಟಕದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ಆದರೆ, ಮಂಗಳೂರನ್ನು ಪಾಲಕ್ಕಾಡ್ ವಿಭಾಗದಿಂದ ವಿಭಜಿಸಿ ಕರ್ನಾಟಕದ ಮೈಸೂರು ವಿಭಾಗಕ್ಕೆ ಸೇರಿಸಿರುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಕೇರಳದ ಮುಖ್ಯಮಂತ್ರಿ ಸೇರಿದಂತೆ ಅಲ್ಲಿನ ಹಲವು ರಾಜಕಾರಣಿಗಳು ವಿರೋಧ ವ್ಯಕ್ತಪಡಿಸು��್ತಿರುವುದನ್ನು ಗಮನಿಸುತ್ತಿದ್ದೇವೆ. ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ಶಶಿ ತರೂರ್ ಸೇರಿದಂತೆ ಕೇರಳದ ಹಲವು ಲೋಕಸಭಾ ಸದಸ್ಯರು ಈ ನಿರ್ಧಾರದ ವಿರುದ್ಧ ಧ್ವನಿ ಎತ್ತುತ್ತಿರುವುದು ಗಮನಾರ್ಹವಾಗಿದೆ.
ಕೇರಳದ ರಾಜಕಾರಣಿಗಳು ತಮ್ಮ ರಾಜ್ಯದ ಹಿತಾಸಕ್ತಿಗಾಗಿ ಒಗ್ಗಟ್ಟಿನಿಂದ ಧ್ವನಿ ಎತ್ತುತ್ತಿರುವ ಇದೇ ಸಂದರ್ಭದಲ್ಲಿ ಕರ್ನಾಟಕ ಸರಕಾರ ಹಾಗೂ ಕರ್ನಾಟಕದ ಬಹುತೇಕ ರಾಜಕೀಯ ನಾಯಕರು ಈ ವಿಚಾರದಲ್ಲಿ ಮೌನವಾಗಿರುವುದು ದುರದೃಷ್ಟಕರ. ಇದು ಕರ್ನಾಟಕದ ಹಿತಾಸಕ್ತಿಯ ವಿ��ಾರಗಳಲ್ಲಿ ನಮ್ಮ ರಾಜಕಾರಣಿಗಳ ನಾಡಪರ ಬದ್ಧತೆಯನ್ನು ಪ್ರಶ್ನಿಸುವಂತಾಗಿದೆ.
ನಿಮ್ಮ ಪಕ್ಷಗಳ ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ನಾಡು ಮತ್ತು ನುಡಿಯ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು. ಕರ್ನಾಟಕದ ಹಕ್ಕು, ��ಂಪನ್ಮೂಲ ಹಾಗೂ ಹಿತಾಸಕ್ತಿಯ ಪ್ರಶ್ನೆ ಎದುರಾದಾಗ ಪಕ್ಷಾತೀತವಾಗಿ ಕರ್ನಾಟಕದ ಪರವಾಗಿ ಧ್ವನಿ ಎತ್ತುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಜವಾಬ್ದಾರಿಯಾಗಿದೆ.
ಕರ್ನಾಟಕದ ರಾಜಕಾರಣಿಗಳು ಕರ್ನಾಟಕದ ಪರವಾಗಿ ಒಗ್ಗಟ್ಟಿನಿಂದ ನಿಂತರೆ ಮಾತ್ರ ದೆಹಲಿಯಲ್ಲಿ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯುವ ಲಾಬಿಗೆ ಸೂಕ್ತ ಉತ್ತರ ನೀಡಲು ಸಾಧ್ಯ. ಕರ್ನಾಟಕದ ವಿರುದ್ಧದ ಯಾವುದೇ ಲಾಬಿಗೆ ದೆಹಲಿಯಲ್ಲಿ ಅವಕಾಶ ಮಾಡಿಕೊಡುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಎಂದಿಗೂ ಸ��ಿಸುವುದಿಲ್ಲ.
ಮಂಗಳೂರು ರೈಲ್ವೇ ನಿಲ್ದಾಣವನ್ನು ಮೈಸೂರು ವಿಭಾಗಕ್ಕೆ ಸೇರಿಸಿರುವ ನಿರ್ಧಾರವನ್ನು ಸ್ವಾಗತಿಸುವುದರ ಜೊತೆಗೆ, ಈ ನಿರ್ಧಾರದ ವಿರುದ್ಧ ನಡೆಯುವ ಯಾವುದೇ ಪ್ರಯತ್ನಕ್ಕೆ ಕರ್ನಾಟಕ ಸರಕಾರ ಮತ್ತು ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ಪ್ರತಿಕ್ರಿಯಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ.
ನಾಡು-ನುಡಿಯ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಯೇ ಎಲ್ಲಕ್ಕಿಂತ ಮುಖ್ಯ. ಈ ವಿಚಾರದಲ್ಲಿ ಯಾವುದೇ ರಾಜಕೀಯ ಪಕ್ಷದ ನಾಯಕರು ಮೌನ ವಹಿಸದೆ, ಕರ್ನಾಟಕದ ಪರವಾಗಿ ಸ್ಪಷ್ಟ ನಿಲುವು ಪ್ರಕಟಿಸಬೇಕು.
@arvindbhat515 ಹಾಗಾದರೆ 2028 ಕ್ಕೆ ಜೋಶಿ ನೆೇತೃತ್ವದಲ್ಲಿ ಚುನಾವಣೆ ಗೆ ಹೋಗಿ ಮುಂದಿನ ಸಿಎಂ ಅಭ್ಯರ್ಥಿ ಎಂದು ಈಗಲೇ ಘೋಷಣೆ ಮಾಡಿ ನೋಡೋಣ atleast ಒಬ್ಬ mla ಗೆಲ್ಲಿಸಿಕೊಂಡು ಬರಲಿ ಆ ಮೇಲೆ ಸಿಎಂ ಮಾಡಿ
ಕರವೇ ಗ್ರೇಟರ್ ಬೆಂಗಳೂರು ಚುನಾವಣೆಗೆ ನಿಲ್ಲುವ ಮನಸ್ಸು ಮಾಡಿದೆ ಎನಿಸುತ್ತದೆ.
ದಯವಿಟ್ಟು ಕರವೇಯನ್ನು ಜಾತಿ-ದರ್ಮಗಳ ಹಂಗು ತೊರೆದು ಎಲ್ಲಾ ಕನ್ನಡಿಗರೂ ಬೆಂಬಲಿಸಿರಿ. 🙏
ಕರವೇ ಒಂದು ಸಣ್ಣ ರಾಜಕೀಯ ಶಕ್ತಿಯಾಗಿ ನೆಲೆಯೂರಿದರೂ ಅದೀಗ ಕನ್ನಡಿಗರಿಗೆ ದೊಡ್ಡ ಹೆಜ್ಜೆ.
ಕನ್ನಡವೇ ನಮ್ಮ ��ರ್ಮ. 🙏
#ಕನ್ನಡ_ಕೇಂದ್ರಿತ_ರಾಜಕಾರಣ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಅಂತ ಬರೆಯೋ ಬದಲು ( KSR) ಅಂತ ಬರೆಯೋದು,
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಅಂತ ಬಹಳ ಉತ್ಸಾಹದಿಂದ ಬರೆಯೋ ಬದಲು CSMT ಅಂತ ಬರೆಯಬಹುದಿತ್ತು ಅಲ್ಲವೇ?
@JoshiPralhad ಅವರೇ
ಈಗಲೂ ಬದಲಾವಣೆ ಮಾಡಬಹುದು ಆದ್ರೆ
ಸಂಗೊಳ್ಳಿ ರಾಯಣ್ಣ ಅಂತ ಬರೆಯಿರಿ.
ಅಥವಾ ಬರೆಯೋಕೆ ನೋವಾಗುತ್ತೆ ಅಂದ್ರು ಹೇಳಿ.