ವಿದ್ಯಾರ್ಥಿಯೊಬ್ಬರು ಕಳೆದುಕೊಂಡಿದ್ದ ಲ್ಯಾಪ್ಟಾಪ್ ಅನ್ನು KSP e-lost ಪೋರ್ಟೆಲ್ ನಲ್ಲಿ ವರದಿ ಮಾಡಿದ್ದು, ನಂತರ 24 ಗಂಟೆಯೊಳಗೆ ಸದರಿ ಲ್ಯಾಪ್ ಟಾಪ್ ಅನ್ನು ಪತ್ತೆ ಮಾಡಿ, ವಾರಸುದಾರರಿಗೆ ಹಿಂದಿರುಗಿಸಿರುತ್ತಾರೆ.
ಈ ದಿನ ಹಾರೋಹಳ್ಳಿ ಠಾಣೆಯಲ್ಲಿ ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ನಡೆಸಿ, ಕಾನೂನು ಮತ್ತು ಸುವ್ಯವಸ್ಥೆ��ೆ ಧಕ್ಕೆಯಾಗದ ರೀತಿಯಲ್ಲಿ ಹಬ್ಬಗಳನ್ನು ಆಚರಿಸುವಂತೆ ಸೂಚಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.
ವಿದ್ಯಾರ್ಥಿನಿಯೊಬ್ಬರು ಹಾರೋಹಳ್ಳಿ ಬಸ್ ನಿಲ್ದಾಣದಲ್ಲಿ ತಮ್ಮ ಮೊಬೈಲ್ ಪೋನ್ ಅನ್ನು ಕಾಣೆಯಾಗಿರುವ ಬಗ್ಗೆ ಹಾಗೂ ಸಹಾಯ ಮಾಡುವಂತೆ ಹಾರೋಹಳ್ಳಿ ಠಾಣೆಯ ಪೊಲೀಸರನ್ನು ಸಂಪರ್ಕಿಸಿದ್ದು, ಕೇವಲ 1 ಗಂಟೆಯೊಳಗೆ, ಸದರಿ ಮೊಬೈಲ್ ಪೋನ್ ಅನ್ನು ಪತ್ತೆ ಮಾಡಿಕೊಡುವಲ್ಲಿ ಹಾರೋಹಳ್ಳಿ ಠಾಣೆಯ ಪೊಲೀಸರು ನೆರವು ನೀಡಿರುತ್ತಾರೆ.