ಆದರಣೀಯ ಶಿವರಾಜ್ ತಂಗಡಗಿಯವರೇ,
ಕಾಂಗ್ರೆಸ್ಸಿನವರಿಗೂ 'ವಂದೇ ಮಾತರಂ' ಕುರಿತು ಆಸಕ್ತಿ ಹುಟ್ಟಿತಲ್ಲ ಎಂಬುದೇ ಸಂತಸ ತಂದಿತು. ಈ ಧಾವಂತದಲ್ಲಿ ಮೊದಲ ಬ���ರಿಗೆ 'ವಂದೇ ಮಾತರಂ' ಹಾಡಿದ್ದೇ ಕಾಂಗ್ರೆಸ್ಸಿನವರು ಎಂದು ಎದೆ ತಟ್ಟಿಕೊಂಡು ಹೇಳುತ್ತಿದ್ದೀರಿ; ಕೇಳಿಸಿಕೊಂಡರೆ ಮುಸಲ್ಮಾನರು ಎದೆಗೂಡು ಮುರಿದಾರು! ಇತಿಹಾಸವನ್ನು ತಿರುಚಿ ಅಭ್ಯಾಸವಾಗಿರುವ ಕಾಂಗ್ರೆಸ್ಸಿಗರು ವಂದೇ ಮಾತರಂ' ನಿಂದಾಗಿ ಒಂದಷ್ಟು ನಾಡಿನ ಕಥನ ಅರಿಯುವಂತಾದರೆ ರಕ್ತಗತವಾಗಿರುವ
ಗುಲಾಮಿತನ ದೂರವಾದೀತು.
'ವಂದೇ ಮಾತರಂ' 1875ರಲ್ಲಿ ಬಂಕಿಮರು ಬರೆದರು ಎಂಬುದನ್ನು 1907ರಲ್ಲಿ ದೃಢೀಕರಿಸಿದ್ದು ಯೋಗಿ ಅರವಿಂದರು. ಮೂಲದಲ್ಲಿ ಎರಡೇ ಚರಣವಿತ್ತೆಂದು ಅವರೆಲ್ಲೂ ಉಲ್ಲೇಖಿಸಿಲ್ಲ. ಆದರೆ ಅಧಿಕೃತವಾಗಿ ಈ ಹಾಡು ಜನಮಾನಸವನ್ನು ಮುಟ್ಟಿದ್ದು ಬಂಗದರ್ಶನವೆಂಬ ಪತ್ರಿಕೆಯಲ್ಲಿ ಬಂಕಿಮರೇ ಬರೆದ ಆನಂದಮಠ ಧಾರವಾಹಿಯ ಮೂಲಕ. ಅಲ್ಲಿ ಪೂರ್ಣ ಪಾಠ ಇದೆ. ಆ ಗೀತೆಯ ಸ್ವರೂಪ ಅದೆಷ್ಟು ರೋಮ��ಂಚನಕಾರಿಯಾಗಿತ್ತೆಂದರೆ ಬ್ರಿಟೀಷ್ ಅಧಿಕಾರಿ ಎ.ಒ ಹ್ಯೂಮ್ ಸ್ಥಾಪಿಸಿದ ಕಾಂಗ್ರೆಸ್ಸಿಗೂ ಅದರ ಪ್ರಭಾವ ತಡೆದುಕೊಳ್ಳಲಾಗಲಿಲ್ಲ. ದೇಶಭಕ್ತ ರವೀಂದ್ರರು ತಾವೇ ರಾಗ ಸಂಯೋಜಿಸಿ ಅದನ್ನು ಅಧಿವೇಶನದಲ್ಲಿ ಹಾಡಿದರು. 1905ರ ಬಂಗಾಳ ವಿಭಜನೆಯ ಹೊತ್ತಲ್ಲಿ. 'ವಂದೇ ಮಾತರಂ' ರಣಮಂತ���ರವಾಯ್ತು. ಪ್ರತೀ 'ಕಾಂಗ್ರೆಸ್' ಅಧಿವೇಶನದಲ್ಲಿ ಅದನ್ನು ಪೂರ್ತಿಯಾಗಿ ಹಾಡಲಾಗುತ್ತಿತ್ತು
ಬೆಂಕಿ ಬಿದ್ದದ್ದು 1923ರಲ್ಲಿ ಕಾಕಿನಾಡದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ಮೌಲಾನಾ ಮೊಹಮ್ಮದ್ ಅಲಿ ಅದನ್ನು ಹಾಡಬಾರದೆಂದಾಗ. ಇಸ್ಲಾಂನಲ್ಲಿ ಸಂಗೀತಕ್ಕೆ ಅವಕಾಶವಿಲ್ಲ ಎಂದು ಆರಂಭವಾದದ್ದು, ಕೊನೆಗೆ ಮೂರ್ತಿ ಆರಾಧನೆಗೆ ನಮ್ಮಲ್ಲಿ ಜಾಗವಿಲ್ಲ ಎನ್ನುವವರೆಗೂ ಹೋಯ್ತು. ಪಾಪ, ಪತರಗುಟ್ಟಿದ ಕಾಂಗ್ರೆಸ್ಸು ಅವರ ಓಲೈಕೆಗೆಂದು ಕೊನೆಯ ಚರಣ - ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣಿ - ���ಿಟ್ಟಿತು. ಆಮೇಲೆ ತುಮಿ ವಿದ್ಯಾ ತುಮಿ ಧರ್ಮ ಕಾಣೆಯಾಯ್ತು. ಮುಸಲ್ಮಾನರ ವಿರೋಧ ನಿಲ್ಲದಾದಾಗ ಹಿಂದೂಗಳ ಕಣ್ಣೊರೆಸಲೆಂದು ನೇಮಿಸಿದ ಸಮಿತಿ ಈ ಒತ್ತಡದಲ್ಲಿಯೇ ಒಂದು ಪಲ್ಲವಿ, ಒಂದು ಚರಣ ಸಾಕೆಂದುಬಿಟ್ಟಿತು. ನೀವು ಹೇಳಿದ 1937ರ ನಿರ್ಣಯ ಅದೇ.
'ಗುರುವೇ' ಆ ನಿರ್ಣಯ ತೆಗೆದುಕೊಂಡ ಹತ್ತು ವರ್ಷಕ್ಕೇ ಮುಸಲ್ಮಾನರು ಪ್ರತ್ಯೇಕ ರಾಷ್ಟ್ರ ಪಡೆದುಕೊಂಡರು. ಬಾಬಾಸಾಹೇಬರ ಆಶಯಕ್ಕೆ ವಿರುದ್ಧವಾಗಿ ಮುಸಲ್ಮಾನರನ್ನು ಇಲ್ಲಿಯೇ ಇರಲು ಬಿಟ್ಟಿತಲ್ಲ ಕಾಂಗ್ರೆಸ್ಸು, ಅದು ಈಗ ಅವರೆದುರು ತಲೆ ಬಾಗಲಿಕ್ಕಲ್ಲ, ತೆವಳಲಿಕ್ಕೆ ಸಿದ್ಧವಾಗಿದೆ. ಬಿಡಿ ನಿಮ್ಮಗಳ ಬದುಕಿಗೆ ಅದು ಅನಿವಾರ್ಯ. ಇತಿಹಾಸವನ್ನು ಅರಿತೂ ಸಂಧಾನ ಮಾಡಿಕೊಂಡು ಬದುಕುವ ಜಾಯಮಾನಕ್ಕೆ ಯಾರು ಏನೆನ್ನಲಾದೀತು. ಮುಸಲ್ಮಾನರ ವಿರುದ್ಧ ನಿಮ್ಮ ಅಹಂಕಾರವು ಹೆಡೆಯೆತ್ತದೆ ಬಾಲ ಮುದುರಿಕೊಂಡು ಇರುವುದನ್ನು ಕಂಡಾಗ ನನಗಂತೂ ಅಚ್ಚರಿ ಎನಿಸುವುದಿಲ್ಲ.
ಇನ್ನು ಆಂಜನೇಯನ ನಾಡು ನಿಮ್ಮೂರು. ರಾಮನ ಅಸ್ತಿತ್ವವನ್ನ�� ಅಲ್ಲಗಳೆದ, ರಾಮಮಂದಿರಕ್ಕೆ ಇದುವರೆಗೂ ಕಾಲಿಡದ ನಾಯಕರ ಅನುಸರಿಸುವ ತಾವು ಕೊಪ್ಪಳದ ಹೆಸರೆತ್ತದಿದ್ದರೆ ಒಳಿತು. ಅಂದಹಾಗೆ, ನನ್ನ ಸವಾಲು ಈಗಲೂ ಹಾಗೆಯೇ ಇದೆ. ಕನ್ನಡಿಗರು ವಂದೇ ಮಾತರಂ ಹಾಡುತ್ತಾರೆ, ಪೂರ್ಣವಾಗಿ ಹಾಡುತ್ತಾರೆ. ಕಾರ್ಯಕ್ರಮ ಯಾವುದಾದರೇನು, ದೇಶದ ಜನರ ರಾಷ್ಟ್ರಭಕ್ತಿಯನ್ನು ನೂರ್ಮಡಿಗೊಳಿಸಿದ ಗೀತೆ ನಮ್ಮ ಹೃದಯದಿಂದ ಎಂದೂ ದೂರವಾಗಲಾರದು. ದೂರ ಮಾಡುವ ತಾಕತ್ತಿದೆ ಎಂದೆನಿಸಿದರೆ ಈಗಲೂ ಪ್ರಯತ್ನಿಸಿ.
ಮರೆತೆ, ��ಲ್ಲಿಕಾರ್ಜುನ ಖರ್ಗೆಯವರನ್ನು ಸಭೆಯೊಂದಕ್ಕೆ ಬರಲು ಬಿಡದೇ ಬಾಗಿಲು ಹಾಕಿ ಹೊರಗೆ ನಿಲ್ಲಿಸಿದ್ದು ನಿಮ್ಮದ್ದೇ ಪಕ್ಷವಲ್ಲವೇ? ಇತ್ತೀಚೆಗೆ BRICS ಸಂದರ್ಭದಲ್ಲಿ ಮಲೇಷಿಯಾದ ಪ್ರಧಾನಮಂತ್ರಿ ರಾಹುಲ್ ಮತ್ತು ಪ್ರಿಯಾಂಕಾರನ್ನು ಭೇಟಿಯಾದರಲ್ಲ. ಪ್ರಿಯಾಂಕಾ ಏಕೆ? ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಖರ್ಗೆಯವರಿರಬೇಕಿತ್ತಲ್ಲ! ಹಿರಿಯರು ಮತ್ತು ಆ ಸಮಾಜದಿಂದ ಬಂದವರೊಂದಿಗೆ ಹೀಗೆ ನಡೆದುಕೊಳ್ಳುವುದು ಸರಿಯಾ ತಂಗಡಗಿಯವರೇ? ಇದಕ್ಕೆ ನಿಮ್ಮದ್ದೂ ಸಹಮತಿ ಇದೆಯಾ?
ಇಷ್ಟಾದ ಮೇಲೂ ನಿಮ್ಮೊಂದಿಗೆ 'ವಂದೇ ಮಾತರಂ' ಕುರಿತ ಮುಕ್ತವಾದ ಚರ್ಚೆಗೆ ನಾನು ಸಿದ್ಧ. ಕೊಪ್ಪಳದಲ್ಲಿಯೇ ಆಗಲಿ.
@sstangadagi
Jago Bharat version 2.0 was launched last Sunday. The enthusiasm of the audience was unparalleled. Some people are trying to provoke Gen Z into protests, but I noticed that Gen Alpha is also out of their clutches. Children chanting "Bharat Mata Ki Jai" slogans will definitely give sleepless nights to those who want to break India into pieces.
We are on track 🙂
#NaneBharata
Hahha.. no where i have mentioned that this video is from India. But thanks for the proof that wherever they are the same skill they possess..
😂
@zoo_bear
It all started with our Mysuru(Nanjangudu) @yuva_brigade team. They are very creative and committed. They erect stage inside the river with humongous effort and literally practice Arati for weeks. All Credits to them.
Thanks @KiranKS for remembering us����🙏
ಪೇಜಾವರ ಶ್ರೀಗಳ ಹೇಳಿಕೆಯಲ್ಲಿ ತಪ್ಪೇನಿದೆ? ಧರ್ಮ ಗುರುಗಳು ಧರ್ಮದ ಕುರಿತು ಯಾರಾದರೂ ಬಾಲಿಶ ಹೇಳಿಕೆ ಕೊಟ್ಟರೆ ಖಂಡಿಸಬಾರದೇ?
ಹಿಂದೂ ಧರ್ಮ, ಧರ್ಮಗುರುಗಳ ಬಗ್ಗೆ ಇಷ್ಟೊಂದು ದ್ವೇಷವೇಕೆ ಕಾಂಗ್ರೆಸ್ಸಿಗೆ?
ಮೊನ್ನೆ ವಿದ್ಯಾಲಕ್ಷ್ಮಿ ಎನ್ನುವ ಈ ಹುಡುಗಿಯನ್ನು ಭೇಟಿಯಾದೆ. ಸ್ಕ್ಲಿರೊಡರ್ಮ ಎಂಬ ಖಾಯಿಲೆ ಅವಳನ್ನೇ ನುಂಗಿ ಹಾಕುವಂತೆ ಆವರಿಸಿಕೊಂಡುಬಿಟ್ಟಿತ್ತಂತೆ. ಆಲೋಪತಿ ಆಕೆಗೆ ಎರಡು ವರ್ಷ ಸಮಯವಷ್ಟೇ ಕೊಟ್ಟಿತ್ತು. ಸ್ಟೀರಾಯ್ಡ್ಗಳು ಆಕೆಯನ್ನು ಹಿಂಡಿ ಹಿಪ್ಪೆ ಮಾಡಿದ್ದವು. ಕೊನೆಗೆ ಯಾರದ್ದೋ ಸಲಹೆಯಂತೆ ವಿದ್ಯಾ ನಾಗರಭಾವಿಯ ಸುಧರ್ಮ ಹೊಮಿಯೊ ಕ್ಲಿನಿಕ್ಗೆ ಹೋಗಿ ವೈದ್ಯರ ಆರೈಕೆಯಂತೆ ಬದಲಾಗಿ ಬಂದಿದ್ದಾಳೆ. ಕಾನೂನಿನಲ್ಲಿ ಪದವಿ ಪಡೆದುಕೊಂಡಿದ್ದಾಳೆ. ಇಂದು ಅವಳ ಆತ್ಮವಿಶ್ವಾಸ ಎಷ್ಟಿದೆ ಎಂದರೆ 'ಜಡ್ಜ್ ಎಕ್ಸಾಂ ಬರೀತೀನಿ' ಅಂತ ಹೆಮ್ಮೆಯಿಂದ ಹೇಳುವಾಗ ನನಗಾದ ಆನಂದ ಅಷ್ಟಿಷ್ಟಲ್ಲ.
ಆಕೆಯ ಹೋರಾಟದ ಹಾದಿ ನಿಜಕ್ಕೂ ಪ್ರೇರಣೆ ನೀಡಬಲ್ಲದು. ಈ ಬಾರಿಯ ಬೆಳಗಾವಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯ ಶ್ರಾವಣಕ್ಕೆ ಆಕೆಯನ್ನು ಆಹ್ವಾನಿಸಬೇಕೆಂದಿದ್ದೇನೆ. ಸಾವಿನ ಮನೆಯ ಬಾಗಿಲು ತಟ್ಟಿ ಬದುಕಿನಲ್ಲಿ ನಗುನಗುತ್ತ ಕಾಲ ಕಳೆಯುತ್ತಿರುವ ಈ ಮಗುವಿನಿಂದ ಪ್ರೇರಣೆ ಪಡೆಯುವುದು ಸಾಕಷ್ಟಿದೆ. ನನಗಂತೂ ಬೆಟ್ಟದಷ್ಟು ಸಿಕ್ಕಿದೆ.
ಆಕೆಯೊಡನೆ ನಾಲ್ಕು ಮಾತಾಡಿ. ಆಕೆಯ ಹೋರಾಟದ ಹಾದಿಯಿಂದ ಪ್ರೇರಣೆ ಪಡೆಯಲು ನೀವೂ ಪ್ರಯತ್ನಿಸಬಹದು - 8123642427
ಅಂದಹಾಗೆ, ಈ ಮಗುವನ್ನು ಸಾಕ್ಷಾತ್ತು ಮಗುವಿನಂತೆ ಕಂಡು ಆಕೆಯನ್ನು ಹೊತ್ತುಕೊಂಡು ಆಸ್ಪತ್ರೆಗೆ ಒಯ್ಯುತ್ತಿದ್ದ ತಂದೆ-ತಾಯಿಯರ ಸಾಹಸವೂ ಸಾಮಾನ್ಯವಲ್ಲ. ಅವರೀರ್ವರನ್ನೂ ನೋಡಿ ಕಣ್ಣಾಲಿಗಳು ತುಂಬಿ ಬಂದವು. ಈ ವಿಡಿಯೊದಲ್ಲಿ ಆಕೆಯ ಪರಿವರ್ತನೆಯ ಅಷ್ಟೂ ಚಿತ್ರಣವಿದೆ. ಒಮ್ಮೆ ನೋಡಿ.