@Shubhamga@CPBlr@seemantsingh96@DgpKarnataka@KarnatakaCops@CMofKarnataka ಶ್ವೇತ ಎಂಬುವವರ ಮೇಲೆ ಅರುಣ್ ಎಂಬುವವರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನೀಡಿದ ದೂರು ಅರ್ಜಿಯ ವಿಚಾರವಾಗಿ ಎದುರುದಾರರಿಗೆ ನೋಟೀಸ್ ನೀಡಿ ಹೇ��ಿಕೆ ಪಡೆದುಕೊಂಡು ಸದರಿ ದೂರು ಅರ್ಜಿಯ ವಿಚಾರವಾಗಿ ಪರಸ್ಪರ ವಿಚಾರಣೆ ನಡೆಸಿದ್ದು ಸಿವಿಲ್ ವ್ಯಾಜವೆಂದು ತಿಳಿದುಬಂದಿದ್ದರಿಂದ ಹಿಂಬರಹ ನೀಡಿ ದೂರು ಅರ್ಜಿಯನ್ನು ಮುಕ್ತಾಯ ಮಾಡಲಗಿರುತ್ತದೆ..
**ಖ್ಯಾತ ನಟರಾದ ಡಾಲಿ ಧನಂಜಯ್ ಅವರ "ಬೇಡ ಬ್ರೋ" ಸಂದೇಶ**
"ನಮಸ್ಕಾರ, ನಾನು ಡಾಲಿ ಧನಂಜಯ್. ಯುವ ಸ್ನೇಹಿತರೇ, ನಿಮ್ಮ ಜೀವನ ಅಮೂಲ್ಯ. ಮಾದಕ ವಸ್ತುಗಳು ಕ್ಷಣಿಕ ಸಂತೋಷ ನೀಡಬಹುದು, ಆದರೆ ನಿಮ್ಮ ಆರೋಗ್ಯ, ಕುಟುಂಬ ಮತ್ತು ಭವಿಷ್ಯವನ್ನು ಹಾಳು ಮಾಡುತ್ತವೆ. ಆದ್ದರಿಂದ ಮಾದಕ ವಸ್ತುಗಳಿಗೆ 'ಬೇಡ ಬ್ರೋ' ಎಂದು ��ೈರ್ಯವಾಗಿ ಹೇಳಿ.
RISE Karnataka × #BedaBro | Building a Drug-Free Karnataka
ವಿಧಾನಸೌಧದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ‘RISE’ ಹಾಗೂ ‘Beda ಬ್ರೋ’ ಅಭಿಯಾನದ ನಿಮಿತ್ತ, ಸಿಸಿಬಿ ಮಾದಕ ವಸ್ತುಗಳ ನಿಗ್ರಹ ದಳವು (ANW) ಕಳೆದ 10 ದಿನಗಳ ಅವಧಿಯಲ್ಲಿ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಜಪ್ತಿಪಡಿಸಿಕೊಂಡಿದ್ದ ಅಂತಾರಾಷ್ಟ್ರೀಯ ಜಾಲದ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರು ವೀಕ್ಷಿಸಿ, ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾನ್ಯ ��ೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ (ಡಿಜಿ-ಐಜಿಪಿ) ಡಾ. ಎಂ. ಎ. ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್ ಸೇರಿದಂತೆ ಇಲಾಖೆಯ ಉನ್ನತ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
In a special event held at Vidhana Soudha today, as a part of ‘RISE’ and ‘Beda Bro’ campaign, the Honʼble Chief Minister, Shri D. K. Shivakumar along with Hon'ble Home Minister, Shri Priyank Kharge, inspected the massive haul of contraband seized from an international drug syndicate by the CCB's Anti-Narcotics Wing (ANW) during its relentless operations over the past 10 days.
DG & IGP Dr. M. A. Saleem, Bengaluru City Commissioner, Shri Seemanth Kumar Singh, and other senior police officials were present on the occasion.
#risekarnataka #BedaBro #BCP #CCB #Indianpolice
@CPBlr @seemantsingh96 @CMofKarnataka @PriyankKharge @DgpKarnataka @KarnatakaCops
ಹೆಬ್ಬಾಳ ಪೊಲೀಸ್ ಠಾಣೆ ಮೊಕದ್ದಮೆ ಸಂಖ್ಯೆ 113/2026, ಕಲಂ 305(a) BNS ಪ್ರಕರಣದಲ್ಲಿ ಕಳುವಾಗಿದ್ದ ಸುಮಾರು 151 ಗ್ರಾಂ ತೂಕದ ಚಿನ್ನದ ಒಡವೆಗಳು ಹಾಗೂ ₹80,000 ನಗದು ಹಣವನ್ನು ಯಶಸ್ವಿಯಾಗಿ ವಶಪಡಿಸಿಕೊಳ್ಳಲಾಗಿದೆ.
ಅಪರಾಧ ನಿಯಂತ್ರಣ ಹಾಗೂ ಸಾರ್ವಜನಿಕರ ಆಸ್ತಿ ರಕ್ಷಣೆಗೆ ಬೆಂಗಳೂರು ನಗರ ಪೊಲೀಸರು ಸದಾ ಬದ್ಧರಾಗಿದ್ದಾರೆ.
ಅಂತರರಾಷ್ಟ್ರೀಯ ಮಾದಕ ವ್ಯಸನ ಹಾಗೂ ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ಇಂದು ಹೆಬ್ಬಾಳ ಪೊಲೀಸ್ ಠಾಣೆಯ ವತಿಯ��ಂದ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
#ಮಾದಕದ್ರವ್ಯಮುಕ್ತಕರ್ನಾಟಕ #SayNoToDrugs #HebbalPoliceStation
🌟 A Proud Moment for Hebbal Police Station 🌟
Heartiest congratulations to Police Inspector Shri Bhyra on being awarded the prestigious DG & IGP Commendation Disc for the year 2025–26.🏅
Congratulations,Sir, on this well-deserved honour!
With warm regards, Hebbal Police Station
Under the directions of the Hon’ble Commissioner of Police, Bengaluru City, the Rani Chennamma Team of the NorthEast Division conducted an awareness programme by visiting PG accommodations and women’s hostels within the jurisdiction of Chikkajala Police Station.
During the programme, meeting was held with PG supervisors and administrators, and they were advised to implement necessary precautionary measures to ensure the safety and security of women residents.
They were informed about the importance of installing quality CCTV cameras at entry and exit points and regularly monitoring their functioning, appointing security personnel, maintaining visitor records, and remaining vigilant to prevent any suspicious activities within the premises.
The women residing in the PGs were also sensitized about the use of the Namma 112 emergency helpline during emergencies, the various safety features available in the KSP App, the POSH Act relating to the prevention of sexual harassment at the workplace, precautions against cybercrime, methods to stay safe from online fraud, and the various laws enacted for the protection of women and children.
During the session, detailed awareness was provided on personal safety, the responsible use of social media, avoiding the sharing of personal information with strangers, ways to seek assistance from the police during emergencies, and the importance of community participation in ensuring women’s safety.
The awareness programme was attended by members of the Rani Chennamma Team, personnel from Chikkajala Police Station, PG administrators, and women residents, who benefited from the session.
ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ಆದೇಶದ ಮೇರೆಗೆ, ಈಶಾನ್ಯ ವಿಭಾಗದ ರಾಣಿ ಚೆನ್ನಮ್ಮ ಪಡೆಯು ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಯಾಣಿ PG, SR Professional PG, MG PG, Queens Palace PG ಸೇರಿದಂತೆ ವಿವಿಧ ಮಹಿಳಾ ವಸತಿ ನಿಲಯಗಳಿಗೆ (PG) ಭೇಟಿ ನೀಡಿ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ PG ಮೇಲ್ವಿಚಾರಕರು ಹಾಗೂ ನಿರ್ವಾಹಕರೊಂದಿಗೆ ಸಭೆ ನಡೆಸಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು.
ಕಟ್ಟಡದ ಪ್ರವೇಶ ಹಾಗೂ ನಿರ್ಗಮನ ಸ್ಥಳಗಳಲ್ಲಿ ಗುಣಮಟ್ಟದ CCTV ಕ್ಯಾಮೆರಾಗಳನ್ನು ಅಳವಡಿಸಿ ಅವುಗಳ ಕಾರ್ಯನಿರ್ವಹಣೆಯನ್ನು ನಿಯಮಿತವಾಗಿ ಪರಿಶೀಲಿಸುವುದು, ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದು, ಸಂದರ್ಶಕರ ವಿವರಗಳನ್ನು ದಾಖಲಿಸುವುದು ಹಾಗೂ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸುವ ಕುರಿತು ಮಾಹಿತಿ ನೀಡಲಾಯಿತು.
ಅಲ್ಲದೆ PG ಗಳಲ್ಲಿ ವಾಸಿಸುತ್ತಿರುವ ಮಹಿಳೆಯರಿಗೆ ತುರ್ತು ಪರಿಸ್ಥಿತಿಯಲ್ಲಿ ನಮ್ಮ 112 ಸಹಾಯವಾಣಿ ಸೇವೆಯ ಉಪಯೋಗ, KSP App ನ ವಿವಿಧ ಸುರಕ್ಷತಾ ಸೌಲಭ್ಯಗಳು, ಮಹಿಳೆಯರ ಕೆಲಸದ ಸ್ಥಳದಲ್ಲಿನ ಲೈಂಗಿಕ ಕಿರುಕುಳ ತಡೆಗೆ ಸಂಬಂಧಿಸಿದ POSH ಕಾಯ್ದೆ, ಸೈಬರ್ ಅಪರಾಧಗಳ ಬಗ್ಗೆ ಎಚ್ಚರಿಕೆ ಕ್ರಮಗಳು, ಆನ್ಲೈನ್ ವಂಚನೆಗಳಿಂದ ಸುರಕ್ಷಿತವಾಗಿರುವ ವಿಧಾನಗಳು ಹಾಗೂ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಜಾರಿಯಲ್ಲಿರುವ ವಿವಿಧ ಕಾನೂನುಗಳ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದ ವೇ��ೆ ವೈಯಕ್ತಿಕ ಸುರಕ್ಷತೆ, ಸಾಮಾಜಿಕ ಜಾಲತಾಣಗಳ ಸುರಕ್ಷಿತ ಬಳಕೆ, ಅಪರಿಚಿತರೊಂದಿಗೆ ವೈಯಕ್ತಿಕ ಮಾಹಿತಿ ಹಂಚಿಕೊಳ್ಳದಿರುವುದು, ಸಂಕಷ್ಟದ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆಯುವ ವಿಧಾನಗಳು ಹಾಗೂ ಮಹಿಳಾ ಸುರಕ್ಷತೆಯಲ್ಲಿ ಸಮುದಾಯದ ಸಹಭಾಗಿತ್ವದ ಮಹತ್ವದ ಕುರಿತು ವಿವರವಾಗಿ ತಿಳಿಸಲಾಯಿತು.
ಈ ಜಾಗೃತಿ ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮ ಪಡೆ ಸಿಬ್ಬಂದಿ, ಚಿಕ್ಕಜಾಲ ಪೊಲೀಸ್ ಠಾಣೆಯ ಸಿಬ್ಬಂದಿ, PG ನಿರ್ವಾಹಕರು ಹಾಗೂ ಮಹಿಳಾ ನಿವಾಸಿಗಳು ಭಾಗವಹಿಸಿ ಕಾರ್ಯಕ್��ಮದ ಪ್ರಯೋಜನ ಪಡೆದರು
#RaniChennammaPade #DcpNorthEast #JointCpEast #BengaluruCityPolice
@CPBlr @BlrCityPolice @DgpKarnataka @jt_cpeastbcp
'ವಿಶ್ವ ಸಂಗೀತ ದಿನ' ಹಾಗೂ 'ಬೇಸಿಗೆಯ ಅಯನ ಸಂಕ್ರಾಂತಿ'ಯ (ಸಮ್ಮರ್ ಸಾಲ್ಸ್ಟಿಸ್) ಈ ದಿನದಂದು, ನಾವು ಸಾಮರಸ್ಯದ ಎರಡು ಪ್ರಭಾವಶಾಲಿ ಸಂಕೇತಗಳನ್ನು ಆಚರಿಸುತ್ತಿದ್ದೇವೆ — ಒಂದು ���ಂಗೀತದ ಮೂಲಕ, ಮತ್ತೊಂದು ಪ್ರಕೃತಿಯ ಮೂಲಕ.
ಮಧುರ ಧ್ವನಿಗಳು ಸಮುದಾಯಗಳನ್ನು ಒಗ್ಗೂಡಿಸುತ್ತಿದ್ದರೆ, ವರ್ಷದ ಅತ್ಯಂತ ದೀರ್ಘವಾದ ದಿನವು ನಮ್ಮ ಪ್ರಪಂಚದ ಲಯವನ್ನು ಗುರುತಿಸುತ್ತದೆ; ಇಂತಹ ದಿನದಂದು ಬೆಂಗಳೂರು ನಗರ ಪೊಲೀಸ್ ಇಲಾಖೆಯು ಕಾಳಜಿ, ಕರುಣೆ ಹಾಗೂ ಧೈರ್ಯದಿಂದ ನಗರದ ಸೇವೆಗೆ ಸದಾ ಬದ್ಧವಾಗಿದೆ.
On World Music Day and the Summer Solstice, we celebrate two powerful reminders of harmony one through music, the other through nature.
As melodies connect communities and the longest day of the year marks the rhythm of our world, Bengaluru City Police remains committed to serving the city with care, compassion, and courage.
#WorldMusicDay #SummerSolstice #BengaluruCityPolice #InTheServiceOfBengaluru
@CPBlr @seemantsingh96 @DgpKarnataka
ತಂದೆಯ ಮಾರ್ಗದರ್ಶನವೇ ಜವಾಬ್ದಾರಿ, ಗೌರವ ಮತ್ತು ಪ್ರಾಮಾಣಿಕತೆಯ ಮೊದಲ ಪಾಠವಾಗಿದೆ.
ಪ್ರತಿದಿನ ತಮ್ಮ ಕುಟುಂಬವನ್ನು ರಕ್ಷಿಸಿ, ಬೆಂಬಲಿಸಿ ಮತ್ತು ಪ್ರೇರೇಪಿಸುತ್ತಿರುವ ಎಲ್ಲಾ ತಂದೆಯರನ್ನು ಇಂದು ನಾವು ಗೌರವದಿಂದ ಸ್ಮರಿಸುತ್ತೇವೆ ಮತ್ತು ಸಂಭ್ರಮಿಸುತ್ತೇವೆ.
ಎಲ್ಲಾ ತಂದೆಯರಿಗೂ ಹೃತ್ಪೂರ್ವಕ ತಂದೆಯರ ದಿನಾಚರಣೆಯ ಶುಭಾಶಯಗಳು.
A father's guidance is the first lesson in responsibility, respect, and integrity.
Today, we celebrate the fathers who continue to protect, support, and inspire their families every day. Happy Father's Day!
#HappyFathersDay #FathersDay2026 #DadTheFirstHero #SaluteToFathers #EverydayHeroes
@CPBlr@seemantsingh96@DgpKarnataka
🚨 ಮ್ಯೂಲ್ ಬ್ಯಾಂಕ್ ಖಾತೆಗಳ ಬಗ್ಗೆ ಎಚ್ಚರ!
ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ಹಣ ಸ್ವೀಕರಿಸಲು ಅಥವಾ ವರ್ಗಾಯಿಸಲು ನೀಡುವುದು ಅಪರಾಧವಾಗಿದೆ.
❌ ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಹಂಚಿಕೊಳ್ಳಬೇಡಿ
❌ ಅಪರಿಚಿತರಿಗಾಗಿ ಹಣ ವರ್ಗಾಯಿಸಬೇಡಿ
❌ ಕಮಿಷನ್ಗಾಗಿ ಇತರರ ಹಣಕಾಸು ವ್ಯವಹಾರಗಳಲ್ಲಿ ಭಾಗವಹಿಸಬೇಡಿ
ನಿಮ್ಮ ಖಾತೆಯನ್ನು ಸೈಬರ್ ವಂಚನೆಗೆ ಬಳಸಿಕೊಳ್ಳಬಹುದು ಮತ್ತು ನೀ��ು ಕಾನೂನು ಕ್ರಮಕ್ಕೆ ಒಳಗಾಗಬಹುದು.
ಎಚ್ಚರಿಕೆಯಿಂದಿರಿ. ಸುರಕ್ಷಿತವಾಗಿರಿ.
🚨 Beware of Mule Bank Accounts!
Allowing someone else to use your bank account to receive or transfer money is a crime.
❌ Don’t share your bank account
❌ Don’t transfer money for strangers
❌ Don’t accept commissions for transactions
Your account could be used for cyber fraud, and you may face legal action.
@DgpKarnataka @KarnatakaCops @BlrCityPolice @jt_cpeastbcp
#CyberSafety #MuleAccount #StaySafeOnline #ಸೈಬರ್ಸುರಕ್ಷತೆ #SouthEastDivision
ಮಾದಕ ವಸ್ತುಗಳ ವಿರುದ್ಧದ ಮಹತ್ವದ ಕಾರ್ಯಾಚರಣೆಯಲ್ಲಿ, ಸಿಸಿಬಿ ನಾರ್ಕೋಟಿಕ್ಸ್ ಕಂಟ್ರೋಲ್ ಘಟಕವು ಹೆಬ್ಬಾಳ, ಇಂದಿರಾನಗರ, ಜೀವನ್ ��ೀಮಾನಗರ, ಸುದ್ದುಗುಂಟೆಪಾಳ್ಯ, ಹೆಣ್ಣೂರು, ಬಾಣಸವಾಡಿ, ಹಲಸೂರು ಮತ್ತು ಕೆ.ಜಿ. ಹಳ್ಳಿ ಪೊಲೀಸ್ ಠಾಣೆಗಳೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ 23 ಆರೋಪಿಗಳನ್ನು ಬಂಧಿಸಿದೆ. ಈ ವೇಳೆ ₹4 ಕೋಟಿ ಮೌಲ್ಯದ ಮಾದಕ ವಸ್ತುಗಳು ಹಾಗೂ ಸಂಬಂಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಅಂದಾಜು ಮಾರುಕಟ್ಟೆ ಮೌಲ್ಯ ₹8 ಕೋಟಿಯಾಗಿದೆ.
ಬಂಧಿತರಲ್ಲಿ 2 ವಿದೇಶಿ ಪ್ರಜೆಗಳು, 6 ಇತರೆ ರಾಜ್ಯಗಳ ವ್ಯಕ್ತಿಗಳು ಹಾಗೂ 15 ಸ್ಥಳೀಯರು ಸೇರಿದ್ದಾರೆ. ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂ��ನಕ್ಕೆ ಒಪ್ಪ���ಸಲಾಗಿದ್ದು, ಮಾದಕ ವಸ್ತುಗಳ ಪೂರೈಕೆ ಜಾಲವನ್ನು ಪತ್ತೆಹಚ್ಚಲು ಮುಂದಿನ ತನಿಖೆ ಮುಂದುವರಿದಿದೆ.
ಮಾದಕ ವಸ್ತುಗಳ ಹಾವಳಿಯ ವಿರುದ್ಧದ ಹೋರಾಟದಲ್ಲಿ ಬೆಂಗಳೂರು ನಗರ ಪೊಲೀಸ್ ತನ್ನ ದೃಢ ನಿಲುವನ್ನು ಮುಂದುವರಿಸಿದೆ.
In a major anti-drug crackdown, CCB Narcotics Control Unit along with Hebbal, Indiranagar, Jeevan Bhimanagar, Suddaguntepalya, Hennur, Banaswadi, Halsur and K.G. Halli Police arrested 23 accused and seized narcotics and related items worth ₹4 crore, with an estimated market value of ₹8 crore.
The accused include 2 foreign nationals, 6 out-of-state persons and 15 locals. All have been remanded to judicial custody, and further investigation is underway to trace the supply network.
Bengaluru City Police remains firm in its fight against the drug menace.
#SayNoToDrugs #BengaluruCityPolice #CCB #DrugFreeBengaluru
@CPBlr @seemantsingh96 @DgpKarnataka @KarnatakaCops
🚨━━━━━━━━━━━━━━━━━━🚨
ಬೈಕ್ ಕಳ್ಳತನ ತಡೆಗಟ್ಟೋಣ
ನಿಮ್ಮ ಎಚ್ಚರಿಕೆ – ನಿಮ್ಮ ಬೈಕ್ ರಕ್ಷಣೆ
🚨━━━━━━━━━━━━━━━━━━🚨
🏍️ ಬೈಕ್ ಅನ್ನು ಯಾವಾಗಲೂ ಸ್ಟೇರಿಂಗ್ ಲಾಕ್ ಮಾಡಿ
🔒 ಹೆಚ್ಚುವರಿ ಚೈನ್/ಡಿಸ್ಕ್ ಲಾಕ್ ಬಳಸಿ
📹 CCTV ಇರುವ ಸುರಕ್ಷಿತ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಿ
🔑 ವಾಹನದ ಕೀಗಳನ್ನು ಬೈಕ್ನಲ್ಲೇ ಬಿಡಬೇಡಿ
📍 GPS ಟ್ರ್ಯಾಕ��್ ಅಳವಡಿಸಿಕೊಳ್ಳಿ
👀 ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಮಾಹಿತಿ ನೀಡಿ
📞 ತುರ್ತು ಸಹಾಯವಾಣಿ: 112
⚠️ ಎಚ್ಚರಿಕೆಯಿಂದಿರಿ – ಬೈಕ್ ಕಳ್ಳತನ ತಡೆಗಟ್ಟಿರಿ
🚔 @BlrCityPolice
🚔 @JointCPWest
#BikeTheftPrevention #StayAlert #Dial112 #NorthDivisionPolice #BCP
🚨 ಇ-ಚಲನ್ ಹೆಸರಿನಲ್ಲಿ ಬರುತ್ತಿರುವ APK ಫೈಲ್ಗಳನ್ನು ಡೌನ್ಲೋಡ್ ಮಾಡಬೇಡಿ!
✅ ಚಲನ್ ಮಾಹಿತಿಯನ್ನು ಅಧಿಕೃತ Parivahan ವೆಬ್ಸೈಟ್ನಲ್ಲಿ ಮಾತ್ರ ಪರಿಶೀಲಿಸಿ. ❌ ಅಪರಿಚಿತ ಲಿಂಕ್ಗಳು ಅಥವಾ APK ಫೈಲ್ಗಳನ್ನು ಕ್ಲಿಕ್ ಮಾಡಬೇಡಿ.
ಸಂದೇಹಾಸ್ಪದ ಸಂದೇಶಗಳನ್ನು 1930 ಗೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ವರದಿ ಮಾಡಿ.
#HebbalPolice