ಕೋಲಾರದಲ್ಲಿ ಆಯೋಜಿಸಿರುವ "ಜೈ ಭಾರತ" ಸಮಾವೇಶದಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ @RahulGandhi ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಪಿಸಿಸಿ ಅಧ್ಯಕ್ಷರಾದ @DKShivakumar ಹಾಗೂ ವಿಪಕ್ಷ ನಾಯಕರಾದ @siddaramaiah ಅವರು ಭರಮಾಡಿಕೊಂಡರು.
"ಪಕ್ಷ ತೊರೆದವರಿಗೆ ಬಿಜೆಪಿ ಬಾಗಿಲು ಶಾಶ್ವತ ಬಂದ್" ಎನ್ನುವ ಶಾಸಕರ ಕಳ್ಳತನದಲ್ಲಿ ಹೆಸರುವಾಸಿಯಾದ @BJP4Karnataka ಮಾತು ಜಗತ್ತಿನ ಅತಿ ದೊಡ್ಡ ಹಾಸ್ಯ!
ಆಪರೇಷನ್ ಕಮಲದ ಹೆಸರಲ್ಲಿ ಶಾಸಕರ ಕಳ್ಳತನ ಮಾಡುವವರಿಗೆ ನೈತಿಕತೆ ಇದ್ದರೆ ಇತರ ಪಕ್ಷದ ಶಾಸಕರನ್ನು ಅ��ಹರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಲಿ.
ನಿಮ್ಮಿಂದ ಸಾಧ್ಯವೇ @ArunSinghbjp?
2014 ಕ್ಕೂ ಮೊದಲಿದ್ದ ನಿಯಮಗಳನ್ನು ಬದಲಾಯಿಸಿ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕನ್ನಡ ಸೇರಿದಂತೆ ಇತರ ಭಾಷೆಗಳಿಗೆ ಕೊಕ್ ನೀಡಲಾಯಿತು. ಇದರಿಂದ ಪ್ರತಿ ವರ್ಷ ಸಾವಿರಾರು ಕನ್ನಡಿಗರ ಉದ್ಯೋಗ ಹೊರ-ರಾಜ್ಯದವರ ಪಾಲಾಗಿದೆ. ಹಿಂದಿಗೆ ಬೆಣ್ಣೆ ಕನ್ನಡಕ್ಕೆ ಸುಣ್ಣ, ಇದು ಡಬಲ್ ಎಂಜಿನ್ ಸರ್ಕಾರದ ನೀತಿಯಾಗಿದೆ
#ಬಿಜೆಪಿ_ತೊಲಗಿಸಿ_ಕರ್ನಾಟಕ_ಉಳಿಸಿ
ವಿಶ್ವದಲ್ಲೇ ಅತಿ ದೊಡ್ಡ ಹನಿ ನೀರಾವರಿ ಯೋಜನೆಯನ್ನು ರಾಜ್ಯದ 'ರಾಮಥಾಳ'ದಲ್ಲಿ ಅನುಷ್ಠಾನಗೊಳಿಸಿದ್ದು ಕಾಂಗ್ರೆಸ್ ಸರ್ಕಾರ. ಇಸ್ರೇಲ್ ಮಾದರಿಯ ಈ ಯೋಜನೆಯು ಇಂದು 60 ಸಾವಿರ ಎಕರೆ ಬರಡು ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ.
ಜನಪರ ಯೋಜನೆಗಳಿಗೆ ಕಾಂಗ್ರೆಸ್ ಎಂದಿಗೂ ಬದ್ಧವಾಗಿದೆ.
#ಕಾಂಗ್ರೆಸ್_ಬರಲಿದೆ_ಪ್ರಗತಿ_ತರಲಿದೆ
ಮಕ್ಕಳ ಹಾಗೂ ಗರ್ಭಿಣಿಯರ ಅಪೌಷ್ಟಿಕತೆ ನಿವಾರಣೆಗೆ ಕಾಂಗ್ರೆಸ್ ಕ್ಷೀರಭಾಗ್ಯ, ಮೊಟ್ಟೆ ವಿತರಣೆ, ಮಾತೃಪೂರ್ಣದಂತಹ ಮಹತ್ತರ ಯೋಜನೆಗಳನ್ನು ಜಾರಿಗೊಳಿಸಿತ್ತು.
ಭ್ರಷ್ಟ ಬಿಜೆಪಿ ಅಪೌಷ್ಟಿಕತೆ ನಿವಾರಣೆಯ ಯೋಜನೆಗಳನ್ನು ಹಳ್ಳ ಹಿಡಿಸಿದ ಪರಿಣಾಮ ರಾಜ್ಯದಲ್ಲಿ ತಾಂಡವವಾಡುತ್ತಿದೆ.
ಈ ಸಂಕಷ್ಟ ಮುಗಿಯಲಿದೆ, ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ.
"ಸತ್ಯಗಳು ಹೊರಬರುವುದು ಜಗಳದಲ್ಲಿಯೇ"
ನೀರಾವರಿ ಯೋಜನೆಯಲ್ಲಿ ಮುಖ್ಯಮಂತ್ರಿಗಳು 1,500 ಕೋಟಿಯನ್ನು ನೀರು ಕುಡಿದಷ್ಟೇ ಸುಲಭದಲ್ಲಿ ನುಂಗಿದ್ದಾರೆ ಎಂಬ ಗಂಭೀರ ವಿಚಾರವನ್ನು ಬಿಜೆಪಿಯ ಶಾಸಕರೇ ಆರೋಪಿಸಿದ್ದಾರೆ.
ಬೆಂಕಿ ಇಲ್ಲದೆ ಹೊಗೆ ಬರಲು ಸಾಧ್ಯವೇ @BSBommai ಅವರೇ?
ಬಂಡಾಯದ ಬೆಂಕಿಯಲ್ಲಿ ಭ್ರಷ್ಟಾಚಾರದ ಹೊಗೆ ಏಳುತ್ತಿದೆ.
ಗುರುಮಿಟ್ಕಲ್ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಬಾಬುರಾವ್ ಚಿಂಚನಸೂರ್ ಅವರಿಗೆ ಕಾರು ಅಪಘಾತದಲ್ಲಿ ತೀವ್ರ ಗಾಯಗಳಾದ್ದು ಆತಂಕದ ಸಂಗತಿ.
ಬಾಬುರಾವ್ ಚಿಂಚನಸೂರ್ ಅವರು ಶೀಘ್ರ ಗುಣಮುಖರಾಗಿ ಚುನಾವಣಾ ಪ್ರಚಾರದಲ್ಲಿ ಆದಷ್ಟು ಬೇಗ ತೊಡಗಿಸಿಕೊಳ್ಳುವಂತಾಗಲಿ ಎಂದು ಹಾರೈಸುತ್ತೇವೆ.
ಸಿಎಂ Basavaraj Bommai ಅವರೇ, ನಿಮ್ಮ ಮೀಸಲಾತಿ ಗಿಮಿಕ್ ಅನುಷ್ಠಾನ ಮಾಡುವುದು ಅಸಾಧ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜನತೆಗೆ ಈಗ ನಿಮ್ಮ ಉತ್ತರವೇನು? ಸಂವಿಧಾನ ಶಿಲ್ಪಿ ಅಂಬೇಡ್ಕರ್ರವರ ಜಯಂತಿ ಸಂದರ್ಭದಲ್ಲಿ ಸಂವಿಧಾನದ ಆಶಯವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ರಾಜ್ಯದ ರೈತರ ನೆರವಿಗಾಗಿ 'ಕ್ಷೀರ ಧಾರೆ' ಯೋಜನೆಯ ಮೂಲಕ ರೈತರಿಗೆ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಪ್ರೋತ್ಸಾಹ ಧನ ನೀಡುವ ಮೂಲಕ ಹೈನುಗಾರಿಕೆಯನ್ನು ಪ್ರೋತ್ಸಾಹಿಸಿ ರೈತರ ಬೆನ್ನೆಲುಬಾಗಿ ನಿಂತಿದ್ದು ಕಾಂಗ್ರೆಸ್ ಪಕ್ಷ.
��ದರಿಂದ ಹಾಲಿನ ಉತ್ಪಾದನೆಯು 43ರಿಂದ 75 ಲಕ್ಷ ಲೀಟರಿಗೆ ಹೆಚ್ಚಾಯಿತು.
#ಕಾಂಗ್ರೆಸ್_ಬರಲಿದೆ_ಪ್ರಗತಿ_ತರಲಿದೆ
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ @rssurjewala, ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರ ಸಮ್ಮುಖದಲ್ಲಿ ಮಾಜಿ ಡಿಸಿಎಂ @LaxmanSavadi, ಮಾ���ಿ ಸಚಿವರಾದ ಶಶಿಕಾಂತ್ ನಾಯಕ್, ಮುಖಂಡರಾದ ಅಕ್ಕಪ್ಪ ಮತ್ತಿತರರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ನಂದಿನಿಯ ಹಾಲಿಗೆ ಅಮೂಲ್ ಎಂಬ ಹುಳಿ ಹಿಂಡಿದ ನಂತರ ಗುಜರಾತಿನ ಮೆಣಸಿನ ರಾಜ್ಯಕ್ಕೆ ಲಗ್ಗೆ ಇಟ್ಟು, ಕರುನಾಡಿನ ರೈತರಿಗೆ ಸಂಕಷ್ಟ ತಂದೊಡ್ಡಿದೆ.
ಇದೆಲ್ಲದರ ಹಿಂದೆ ಇರುವವರು ಯಾರು?
ಮೆಣಸು ಬೆಳೆಯಲ್ಲಿ ಗುಜರಾತಿಗಿಂತ ಕರ್ನಾಟಕವೇ ಮುಂದಿದ್ದರೂ ಅಲ್ಲಿನ ಮೆಣಸನ್ನು ಇಲ್ಲಿಗೆ ತಂದು ರಾಜ್ಯದ ಮಾರುಕಟ್ಟೆಯನ್ನು ಕುಲುಷಿತಗೊಳಿಸುತ್ತಿರುವವರ�� ಯಾರು?
ಮಿತ್ತಲ್ ಸ್ಟೀಲ್ ಕಂಪನಿಗೆ ಕೆಂಪು ಹಾಸಿನ ಸ್ವ್ವಾಗತ ಕೋರುವ ಬಿಜೆಪಿ ಡಬಲ್ ಎಂಜಿನ್ ಸರ್ಕಾರ ನಮ್ಮ ವಿಶ್ವೇಶ್ವರಯ್ಯನವರು ಕಟ್ಟಿದ ನಮ್ಮದೇ ವಿಶ್ವೇಶ್ವರಯ್ಯ ಸ್ಟೀಲ್ ಲಿಮಿಟೆಡ್ ಕಾರ್ಖಾನೆಗೆ ಗಣಿ ಗುತ್ತಿಗೆ ನೀಡದೆ, ಪ್ರ���ತ್ಸಾಹ ನೀಡದೆ ಕೊನೆಗೆ ನಷ್ಟದ ನೆಪ ಹೇಳಿ ಕಾರ್ಖಾನೆಯ ಬಾಗಿಲು ಮುಚ್ಚಲು ಮುಂದಾಗಿದೆ.
#ಬಿಜೆಪಿ_ತೊಲಗಿಸಿ_ಕರ್ನಾಟಕ_ಉಳಿಸಿ
ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗದ ಸಹ ಅಧ್ಯಕ್ಷರಾದ @MansoorKhanINC, ಉಪಾಧ್ಯಕ್ಷರಾದ ರಮೇಶ್ ಬಾಬು, ಎಐಸಿಸಿ ವಕ್ತಾರರಾದ @GouravVallabh ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕೊಟ್ಟ ಭರವಸೆಗಳು ಆರುನೂರು,
ಈಡೇರಿಸಿದ್ದನ್ನು ಕಂಡವರಾರು!
ಇದು ಬಿಜೆಪಿಯ ಹಿಂದಿನ ಪ್ರಣಾಳಿಕೆಯ ಭರವಸೆಗಳ ಅಸಲಿ ಕತೆ.
ಅಭಿವೃದ್ಧಿಪರ ಚಿಂತನೆ ಇಲ್ಲದ ಬಿಜೆಪಿಯಿಂದ ಬೇಸತ್ತಿರುವ ಕರ್ನಾಟಕಕ್ಕೆ ಕೆಲವೇ ದಿನಗಳಲ್ಲಿ ಆಶಾದಾಯಕ ದಿನಗಳು ಬರಲಿವೆ.
ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ.
ಬಿಜ���ಪಿ ವಂಚಕರ ಮಾತಿಗೆ ಮರುಳಗದೆ ಕಾಂಗ್ರೆಸ್ ಬೆಂಬಲಿಸಿ.
ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನವನ್ನು ರಕ್ಷಿಸಲು ಬಯಸುವ ನಾವು ಆ ಹಾದಿಯಲ್ಲಿರುವ ಕೆಡುಕುಗಳನ್ನು ಗುರುತಿಸಬೇಕು, ಸಂವಿಧಾನದ ಆಶಯಗಳನ್ನು ಉಳಿಸಿಕೊಳ್ಳುವುದೇ ದೇಶಸೇವೆಯ ಅತ್ಯುತ್ತಮ ಮಾರ್ಗ.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ರವರ ಜಯಂತಿಯಂದು ಶ್ರೀಮತಿ ಸೋನಿಯಾ ಗಾಂಧಿಯವರ ಲೇಖನ.
ಓದಿ..
ಅಧ್ಯಯನವಿಲ್ಲದೆ ಚುನಾವಣೆ ಗಿಮಿಕ್ಗಾಗಿ ಮುಸ್ಲಿಂ ಮೀಸಲಾತಿಯನ್ನು ಕಿತ್ತು ಮೂಗಿಗೆ ತುಪ್ಪ ಸವರುವ ನಿರ್ದಾರ ದೋಷಪೂರಿತ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು @BJP4Karnataka ಸರ್ಕಾರದ ��ೌದ್ಧಿಕ ದಿವಾಳಿತನಕ್ಕೆ ಸಾಕ್ಷಿ.
"ಅನುಷ್ಠಾನ ಅಸಾಧ್ಯ" ಎಂಬುದು ಸುಪ್ರೀಂ ಹೇಳುವ ಮೂಲಕ ಬಿಜೆಪಿಯ ಕಿವಿ ಮೇಲೆ ಹೂವು ಇಡುವ ಪ್ರಯತ್ನವನ್ನು ಬಯಲುಗೊಳಿಸಿದೆ.
ಆಜಾನ್ ಕೇಳಿದರೆ ಕಿರಿಕಿರಿಯಾಗುತ್ತದೆ ಎಂದವರು, ಹಲಾಲ್ ಬೇಡ ಜಟ್ಕಾ ಬೇಕು ಎಂದವರು, ಮುಸ್ಲಿಂರು ವ್ಯಾಪಾರ ಮಾಡಬಾರದು ಎಂದವರು, ಸದಾ ಮುಸ್ಲಿಂ ದ್ವೇಷ ಕಾರುತ್ತಿರುವವರು.
ಇಂತಹ ಬಿಜೆಪಿಗರನ್ನು ಈಗ ಬೇರೆಲ್ಲೂ ಹುಡುಕುವುದು ಬೇಡ, ಮಸೀದಿಯೊಳಗೆ ಇಣುಕಿದರೆ ಕಾಣುತ್ತಾರೆ!
ಬಿಜೆಪಿ ಶಾಸಕ ಉದಯ್ ಗರುಡಾಚಾರ್, ಸಚಿವ ಸುಧಾಕರ್ ಇದಕ್ಕೆ ಉದಾಹರಣೆ.
ಬಿಜೆಪಿಯವರ ಭ್ರಷ್ಟಾಚಾರ ಬಿಜೆಪಿಯವರಿಗಿಂತ ಬೇರೆ ಯಾರಿಗೆ ಚೆನ್ನಾಗಿ ತಿಳಿದಿರಲು ಸಾಧ್ಯ.
ಬ���ಜೆಪಿ ಶಾಸಕ ನೆಹರೂ ಒಲೆಕಾರ್ ಸಿಎಂ ವಿರುದ್ಧ ಹನಿ ನೀರಾವರಿಯಲ್ಲಿ ₹1,500 ಕೋಟಿ ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
#BJPvsBJP ಜಗಳದಲ್ಲಿ #40Percentsarkara ದ ರಹಸ್ಯಗಳು ಹೊರಬರುತ್ತಿವೆ.
@BSBommai ತನಿಖೆಗೆ ಒಡ್ಡಿಕೊಳ್ಳುವರೇ?
ಅಸ್ಪೃಶ್ಯತೆಯ ನಿವಾರಣೆಗಾಗಿ, ಸಮ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ,
ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ
ಭಾರತದ ಘನ ಸಂವಿಧಾನವನ್ನು ರಚಿಸಿದ,
ಶೋಷಿತರ ಶಾಶ್ವತ ಧ್ವನಿ, ಮಹಾನ್ ಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯಂದು ಅವರನ್ನು ಗೌರವ, ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತೇವೆ.
#AmbedkarJayanti2023