ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಒಳಪಡುವ ವತಿಯಿಂದ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ BLA-2 ಗಳಿಗೆ ಎಸ್ಐಆರ್ ಜನಜಾಗೃತಿ ತರಬೇತಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಸಂಸದರು ಹಾಗೂ ಬಮೂಲ್ ಅಧ್ಯಕ್ಷರಾದ ಶ್ರೀ ಡಿ.ಕೆ ಸುರೇಶ್, BMICAPA ಅಧ್ಯಕ್ಷರಾದ ಶ್ರೀ ರಘುನಂದನ್ ರಾಮಣ್ಣ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.
ಗ್ರಾಮೀಣ ಭಾಗದ ಆಸ್ತಿ ದಾಖಲೆ ಸರಿಪಡಿಸುವ ಕಾಂಗ್ರೆಸ್ ಸರ್ಕಾರದ ದಿಟ್ಟ ಹೆಜ್ಜೆ ಇಟ್ಟಿದ್ದು, ದಾಖಲೆ ಇಲ್ಲದ ಹಳೆಯ ಗ್ರಾಮಠಾಣಾ ಮನೆಗಳಿಗೂ ನಿಯಮ ಸರಳಗೊಳಿಸಿ ಇ-ಸ್ವತ್ತು ನೀಡಲು ಕ್ರಮ ಕೈಗೊಳ್ಳಲಾಗಿದೆ. ನಮೂನೆ 11-ಬಿ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು ಸೆಪ್ಟೆಂಬರ್ವರೆಗೆ ವಿಸ್ತರಿಸಲಾಗಿದೆ.
ಮಳೆ ಕೊರತೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಕುಡಿಯುವ ನೀರು ಪೂರೈಕೆಗೆ ರಾಜ್ಯ ಸರ್ಕಾರ ₹117 ಕೋಟಿ ಬಿಡುಗಡೆ ಮಾಡಿದೆ.
ಮಹಾತ್ಮ ಗಾಂಧಿ ಹಾಗೂ ಅವರನ್ನು ಕೊಂದ ಗೋಡ್ಸೆ ಅವರ ರಾಜಕೀಯದ ಕಾವಲುದಾರಿಯಲ್ಲಿ ನಾವು ನಿಂತಿದ್ದೇವೆ. ಈಗಿನ ಧಾರ್ಮಿಕ ರಾಜಕಾರಣ ಪರಿಸ್ಥಿತಿಯಲ್ಲಿ ದನ ಕೊಂದವರು ಜೈಲಿಗೆ ಹೋಗುತ್ತಾರೆ, ಮನುಷ್ಯರನ್ನು ಕೊಂದವರು ಪ್ರಧಾನಮಂತ್ರಿ ಹಾಗೂ ಸಿಎಂ ಹುದ್ದೆಗೆ ಕೂರುತ್ತಿದ್ದಾರೆ.
@HariprasadBK2
ಕೆಪಿಸಿಸಿ ಅಧ್ಯಕ್ಷರು
ಮೈಸೂರಿನಲ್ಲಿ ನಡೆಯುತ್ತಿರುವ ಎಸ್ ಐ ಆರ್ ಜನಜಾಗೃತಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ @HariprasadBK2 ಅವರು ಭಾಗವಹಿಸಿದರು.
ಮಾಜಿ ಮುಖ್ಯಮಂತ್ರಿಗಳು ಹಾಗೂ ಸಿಡಬ್ಲ್ಯೂಸಿ ಸದಸ್ಯರಾದ @siddaramaiah, ಕೆಪಿಸಿಸಿ ಕಾರ್ಯಾಧ್ಯಕ್ಷರಾದ @GCC_MP, ತನ್ವಿರ್ ಸೇಠ್, ಸಚಿವರಾದ ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವರಾದ ಹೆಚ್.ಸಿ ಮಹದೇವಪ್ಪ, ವೆಂಕಟೇಶ್ ಮತ್ತಿತರರು ಮುಖಂಡರು ಉಪಸ್ಥಿತರಿದ್ದರು.
ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಪಣ ತೊಟ್ಟಿರುವ ಕಾಂಗ್ರೆಸ್ ಸರ್ಕಾರ, ಉತ್ತರ-ದಕ್ಷಿಣದ 16.7 ಕಿ. ಮೀ. ಸುರಂಗ ರಸ್ತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದೆ.
ಇದರ ಜೊತೆಗೆ 150 ಕಿ.ಮೀ. ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿದ್ದು, 75 ಕಿ.ಮೀ ಗೆ ಮೊದಲ ಹಂತದಲ್ಲಿ ಟೆಂಡರ್ ಕರೆಯಲಾಗುವುದು.
ಲೇಖನಿಯ ಮೂಲಕ ಸಮಾಜದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತಾ, ಸದಾ ಬೌದ್ಧಿಕ ಮತ್ತು ವೈಚಾರಿಕ ಆಲೋಚನೆಗಳಿಗೆ ಮುನ್ನುಡಿ ಬರೆಯುತ್ತಿದ್ದ ಕ್ರಿಯಾಶೀಲ ವ್ಯಕ್ತಿ ಎನ್. ಎಸ್. ಶಂಕರ್ ಅವರ ನಿಧನದ ಸುದ್ದಿ ತೀವ್ರ ಬೇಸರ ತಂದಿದೆ.
ಪತ್ರಕರ್ತರಾಗಿ, ಸಿನಿಮಾ ನಿರ್ದೇಶಕರಾಗಿ, ಜನಪ್ರಿಯ ಅಂಕಣಕಾರರಾಗಿ ಗುರುತಿಸಿಕೊಂಡಿದ್ದ ಅವರು, ಕನ್ನಡ ದಲಿತ ಸಾಹಿತ್ಯ ಕ್ಷೇತ್ರಕ್ಕೆ ಹಲವು ಪ್ರಶಂಸನೀಯ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರ ಅಗಲಿಕೆ ಮಾಧ್ಯಮ ಕ್ಷೇತ್ರ ಹಾಗೂ ಸಾಹಿತ್ಯ ವಲಯಕ್ಕೆ ತುಂಬಲಾರದ ನಷ್ಟ.
ಭಗವಂತನು ಮೃತರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ, ಅವರ ಕುಟುಂಬಸ್ಥರಿಗೆ ಹಾಗೂ ಹಿತೈಷಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಕರುಣಿಸಲಿ.
ಓಂ ಶಾಂತಿ
ಕಾರ್ಯಕರ್ತರು ಬಲಿಷ್ಠರಾಗಬೇಕು. ನಿಮ್ಮ ಬದ್ಧತೆ ನೋಡಿ ನಾಯಕರುಗಳು ಹೆದರುವಂತಾಗಬೇಕು. ನೀವು ಬಿಎಲ್ಓ ಹೇಳಿದ್ದನ್ನು ಮಾಡುವ ಬದಲು, ನೀವೇ ಬಿಎಲ್ಓಗಳಿಗೆ ಹೇಳಿ ಕೆಲಸ ಮಾಡಿಸುವಂತೆ ಆಗಬೇಕು ಎಂದು ಜಾಗೃತಿ ಮೂಡಿಸುತ್ತಿದ್ದೇವೆ.
@GCC_MP
ಕೆಪಿಸಿಸಿ ಕಾರ್ಯಾಧ್ಯಕ್ಷರು
ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ದಿನದ ಅಂಗವಾಗಿ ಸಿಎಂ @DKShivakumar ಅವರು ತಮ್ಮ ಸದಾಶಿವನಗರ ನಿವಾಸದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆರೋಗ್ಯ ಸಚಿವರಾದ @utkhader ಅವರು ಉಪಸ್ಥಿತರಿದ್ದರು.
ನಿಮ್ಮ ಮಮೆಯಲ್ಲೂ ಐದು ವರ್ಷದೊಳಗಿನ ಮಕ್ಕಳಿದ್ದರೆ ತಪ್ಪದೇ ಲಸಿಕೆ ಹಾಕಿಸಿ. ಆರೋಗ್ಯಕರ ಕುಟುಂಬದಿಂದ ಮಾತ್ರ ಆರೋಗ್ಯಕರ ರಾಜ್ಯ ಹಾಗೂ ದೇಶ ನಿರ್ಮಾಣ ಸಾಧ್ಯ.
ರಾಜ್ಯ ಪೊಲೀಸ್ ಇಲಾಖೆ ಬಲಪಡಿಸಲು ಕಾಂಗ್ರೆಸ್ ಸರ್ಕಾರ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿದೆ. 1600 ಪೊಲೀಸ್ ಕಾನ್ಸ್ ಸ್ಟೇಬಲ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನಿಲಾಗಿದ್ದು, ಜು.22ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಎಸ್ಐಆರ್ ಪ್ರಕ್ರಿಯೆಯನ್ನು ಹಗುರವಾಗಿ ಪರಿಗಣಿಸಬೇಡಿ. ಇದು ಕೇವಲ ಮತದಾರರ ಮ್ಯಾಪಿಂಗ್ ಪ್ರಕ್ರಿಯೆಯಲ್ಲ. ಹೊಸದಾಗಿ ಮತದಾರರ ಪಟ್ಟಿ ರಚಿಸುವ ಪ್ರಕ್ರಿಯೆ. ನಿಮ್ಮ ಮತದಾನದ ಹಕ್ಕು ಪಡೆಯಲು ಎನ್ಯುಮರೇಷನ್ ಅರ್ಜಿಯನ್ನು ಸರಿಯಾಗಿ ತುಂಬಿ. ಈ ಪ್ರಕ್ರಿಯೆ ಕುರಿತ ಮಾಹಿತಿ ನಿಮ್ಮ ಮುಂದೆ.
ಚಿಕ್ಕಬಳ್ಳಾಪುರ ಶಾಸಕರಾದ ಶ್ರೀ @pnimmodige ಪ್ರದೀಪ್ ಈಶ್ವರ್ ಅವರ ಮೇಲೆ ಸಾರ್ವಜನಿಕವಾಗಿ ವಿರೋಧ ಪಕ್ಷದವರು ಚಪ್ಪಲಿ ಎಸೆದು ನಡೆಸಿರುವ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ.
ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ ವಾದದಿಂದ ಎದುರಿಸಲಾಗದವರು, ಪ್ರಜಾಪ್ರಭುತ್ವದ ಭಾಷೆಯಲ್ಲಿ ಉತ್ತರಿಸಲು ಸಾಧ್ಯವಾಗದವರು ಮಾತ್ರ ಇಂತಹ ಹೇಯ ಮತ್ತು ಹೇಡಿತನದ ಕೃತ್ಯಗಳಿಗೆ ಇಳಿಯುತ್ತಾರೆ.
ಭಿನ್ನಮತವನ್ನು ಹಿಂಸೆ, ಬೆದರಿಕೆ ಮತ್ತು ಅವಮಾನದಿಂದ ಹತ್ತಿಕ್ಕಲು ಹೊರಟಿರುವ ರಾಜಕೀಯ ಸಂಸ್ಕೃತಿಗೆ ಕರ್ನಾಟಕದಲ್ಲಿ ಯಾವುದೇ ಸ್ಥಾನವಿಲ್ಲ. ಜನರ ತೀರ್ಪಿಗೆ ಗೌರವ ಕೊಡುವ ಪ್ರಜಾಪ್ರಭುತ್ವದಲ್ಲಿ ಇಂತಹ ದುಷ್ಕೃತ್ಯಗಳಿಗೆ ಯಾವುದೇ ಸಮರ್ಥನೆ ಇಲ್ಲ.
ಶ್ರೀ ಪ್ರದೀಪ್ ಈಶ್ವರ್ ಅವರು ಎದೆಗುಂದಬೇಕಿಲ್ಲ. ಕಾಂಗ್ರೆಸ್ ಪಕ್ಷ ನಿಮ್ಮೊಂದಿಗೆ ದೃಢವಾಗಿ ನಿಂತಿದೆ. ಸತ್ಯ, ಪ್ರಜಾಪ್ರಭುತ್ವ ಮತ್ತು ಜನರ ಪರವಾದ ಧ್ವನಿಯನ್ನು ಇಂತಹ ಕೃತ್ಯಗಳಿಂದ ಯಾರೂ ಮೌನಗೊಳಿಸಲು ಸಾಧ್ಯವಿಲ್ಲ.
ನಮ್ಮ ಪೂರ್ವಜರು ನಮಗೆ ಸಂವಿಧಾನ, ಪ್ರಜಾಪ್ರಭುತ್ವ ಕೊಟ್ಟಿದ್ದು, ಸಂವಿಧಾನದ ಮೂಲಕ ಎಲ್ಲರೂ ಸಮಾನರು ಎಂದು ನೀಡಿರುವ ಶಕ್ತಿಯನ್ನು ಬಿಜೆಪಿ ಹಾಗೂ ಆರ್ ಎಸ್ಎಸ್ ಮುಗಿಸುತ್ತಿವೆ.
@HariprasaBK2
ಕೆಪಿಸಿಸಿ ಅಧ್ಯಕ್ಷರು
ಅಸಂಘಟಿತ ಕಾರ್ಮಿಕರ ಜೀವನಕ್ಕೆ ಕಾಂಗ್ರೆಸ್ ಆಸರೆ.
ಬೀದಿಬದಿ ವ್ಯಾಪಾರಿಗಳ ಸ್ವಾಭಿಮಾನದ ಬದುಕಿಗೆ ಕಾಂಗ್ರೆಸ್ ಸರ್ಕಾರ ಹಾಗೂ ಪಕ್ಷದ ಬೀದಿಬದಿ ವ್ಯಾಪಾರಿಗಳ ವಿಭಾಗ ಬೆಂಬಲವಾಗಿ ನಿಂತಿದೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಬಿಎಲ್ಓ 2ಗಳಿಗೆ ಅಗತ್ಯ ನೆರವು ನೀಡಲು ಕಾಂಗ್ರೆಸ್ ವಾರ್ ರೂಂ ರಚಿಸಿದೆ. ಪ್ರತಿಯೊಬ್ಬರೂ ಮುಂದಿನ ತಿಂಗಳ ಅಂತ್ಯಕ್ಕೆ ಯಾರು ಎಷ್ಟು ಜನರ ಅರ್ಜಿ ತುಂಬಿಸಿದ್ದಾರೆ ಎಂದು ಮಾಹಿತಿ ನೀಡಿ. ಈ ಪ್ರಕ್ರಿಯೆಯಲ್ಲಿ ನಿಮ್ಮ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸಿ. ಪಕ್ಷ ನಿಮ್ಮನ್ನು ಗುರುತಿಸುತ್ತದೆ.
@GCC_MP
ಕೆಪಿಸಿಸಿ ಕಾರ್ಯಾಧ್ಯಕ್ಷರು.