Ram Jethmalani
M. A. M. Ramaswamy
Rajeev Chandrasekhar
Venkaiah Naidu
Hema Malini
R. Ramakrishna
Nirmala Sitharaman
Jairam Ramesh
Ajay Maken
ಇವರೆಲ್ಲಾ ರಾಜ್ಯಸಭೆಯಲ್ಲಿ ಎಂದಿಗೂ ಕನ್ನಡ - ಕನ್ನಡಿಗ - ಕರ್ನಾಟಕ ಪರವಾಗಿ ಕೆಲಸ ಮಾಡಿಲ್ಲ.
#SayNotoPawanKhera
ಬೆಂಗಳೂರಿನಲ್ಲಿ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಎಐಸಿಸಿ ಕಾರ್ಯದರ್ಶಿ, ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾಗಿದ್ದ ಶ್ರೀ ಸೂರಜ್ ಹೆಗ್ಡೆ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು.
ಸೂರಜ್ ಅವರು ಕೇವಲ ಒಬ್ಬ ಪಕ್ಷದ ನಾಯಕರಾಗಿರಲಿಲ್ಲ, ಬದಲಿಗೆ ಅಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರ ಶಕ್ತಿಯ ಮೂಲವಾಗಿದ್ದರು. ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ಭರಿಸಲಾರದ ನಷ್ಟ.
ಈ ಸಂದರ್ಭದಲ್ಲಿ ಲೋಕಸಭಾ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಹಾಗೂ ಇನ್ನಿತರ ನಾಯಕರೊಂದಿಗೆ ಭಾಗವಹಿಸಿ, ಜನಸೇವೆಯಲ್ಲಿ ಜೀವನದುದ್ದಕ್ಕೂ ತೊಡಗಿಸಿಕೊಂಡಿದ್ದ ಹಾಗೂ ಪಕ್ಷ ಸಂಘಟನೆಗಾಗಿ ಅವಿರತವಾಗಿ ಶ್ರಮಿಸಿದ ನಿಷ್ಠಾವಂತ ನಾಯಕನಿಗೆ ಗೌರವ ಸಲ್ಲಿಸಲಾಯಿತು.
Paid my last respects to Shri Suraj Hegde today alongside Shri Rahul Gandhi, Shri Siddaramaiah, and other leaders during his final rites, where he was accorded full state honours.
More than a party leader, he was a source of strength for countless Congress karyakartas who looked up to him. His passing is a great loss to our Congress family, and he will always be remembered with deep respect and gratitude.
📍ಮಂಡ್ಯ
ನಾಗಮಂಗಲ ವಿಧಾನಸಭೆ ಕ್ಷೇತ್ರದ ಹೊಸೂರು ಸಮೀಪದ ಹೆದ್ದಾರಿಯಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಬಸ್ ತಂಗುದಾಣದ ಉದ್ಘಾಟನೆ ನೆರವೇರಿಸಲಾಯಿತು. ಕೇಂದ್ರದ ಉಕ್ಕು ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಖನಿಜಾಭಿವೃಧಿ ನಿಗಮದ (NMDC) ಸಿಎಸ್ ಆರ್ ನಿಧಿ ನೆರವಿನಿಂದ ಈ ತಂಗುದಾಣವನ್ನು ನಿರ್ಮಿಸಲಾಗಿದೆ.
#ಮಂಡ್ಯ
ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ. ದೇವೇಗೌಡರ ಬಗ್ಗೆ ಈಗ ಕಾಂಗ್ರೆಸ್ಸಿಗರು ಮೊಸಳೆ ಕಣ್ಣೀರು ಸುರಿಸಿ, ಅನುಕಂಪ ತೋರುವುದು ಬೇಡ. ಕಾಂಗ್ರೆಸ್ಸಿಗರು ಅಂದು ದೇವೇಗೌಡರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದ್ದನ್ನು ಕನ್ನಡಿಗರು ಯಾರು ಮರೆತಿಲ್ಲ. ಅಧಿಕಾರ ಇದ್ದರೂ, ಇಲ್ಲದಿದ್ದರೂ ಕನ್ನಡಿಗರ ಪರವಾಗಿ ದೇವೇಗೌಡರು ಧ್ವನಿ ಎತ್ತೇ ಎತ್ತುತ್ತಾರೆ.
- ಶ್ರೀ @hd_kumaraswamy , ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
📍ಮಂಡ್ಯ
ನನ್ನ ಪಾಲಿಗೆ ಇದು ಅವಿಸ್ಮರಣೀಯ ಕ್ಷಣ 🙏
ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದ ತಗ್ಗಹಳ್ಳಿ ಗ್ರಾಮದ ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ತರಗತಿ ಕೊಠಡಿಗಳನ್ನು ಆ ಶಾಲೆಯ ಮುದ್ದು ಮಕ್ಕಳಿಂದಲೇ ಉದ್ಘಾಟನೆ ಮಾಡಿಸಿದ್ದು ಅತೀವ ಸಂತೋಷ ಉಂಟು ಮಾಡಿತು.
ಈ ಸುಂದರ ಸಮಾರಂಭದಲ್ಲಿ ಮಾಜಿ ಶಾಸಕರಾದ ಶ್ರೀ ರವೀಂದ್ರ ಶ್ರೀಕಂಠಯ್ಯ ಅವರು, ಶಾಲಾ ಕೋಣೆಗಳ ನಿರ್ಮಾಣಕ್ಕೆ ಸಿಎಸ್ಆರ್ ನಿಧಿಯ ಮೂಲಕ ನೆರವು ನೀಡಿರುವ ಮಿಚಿಲಿನ್ ಇಂಡಿಯಾ ಪ್ರೈವೇಟ್ ಕಂಪನಿಯ ನಿರ್ದೇಶಕರಾದ ಶ್ರೀ ಸಿದ್ದಾರ್ಥ ಪ್ರಸಾದ್ ಅವರು, ಕೆ.ಆರ್.ಪೇಟೆ ಶಾಸಕರಾದ ಶ್ರೀ ಮಂಜುನಾಥ್ ಅವರು ಮತ್ತು ಗ್ರಾಮಸ್ಥರು, ಶಿಕ್ಷಕರು, @JanataDal_S ಪಕ್ಷದ ಹಲವಾರು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೇಂದ್ರದಲ್ಲಿ ದೇವೇಗೌಡರು ಪ್ರಧಾನ ಮಂತ್ರಿಯಾದಾಗ ದೇವೇಗೌಡರಿಗೆ ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿದ್ದೇ ಕಾಂಗ್ರೆಸ್ 2004ರಲ್ಲಿ ಮುಳುಗುವ ಹಡಗಾಗಿದ್ದ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚನೆ ಮಾಡಿದ ಪ್ರಯುಕ್ತ ನೀವು ಕುತ್ತಿಗೆ ಕೊಯ್ಯುವ ಕೆಲಸ ಮಾಡಿದ್ದರಿಂದ ನಾವು ಬಿಜೆಪಿ ಜೊತೆ 20:20 ಸರ್ಕಾರ ಮಾಡಬೇಕಾಯಿತು.
2/6
ರಾಜ್ಯಸಭಾ ಸ್ಥಾನಕ್ಕಾಗಿ ಈ ಹಿಂದೆ ಕಾಂಗ್ರೆಸ್ನವರ ಹತ್ತಿರವೂ ನಾವು ಕೈಚಾಚಿಲ್ಲ, ಇವಾಗ ಬಿಜೆಪಿಯವರ ಹತ್ತಿರವೂ ನಾವು ಕೈಚಾಚಿಲ್ಲ, ದೇವೆಗೌಡರಿಗೆ ರಾಜ್ಯಸಭೆ ಟಿಕೆಟ್ ಕೈತಪ್ಪಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಉಸ್ತುವಾರಿ @rssurjewala ಮಾಡಿದ ಟ್ವಿಟ್ಗೆ ನಾನು ಖಂಡಿಸುತ್ತೇನೆ
1/6
ಭೂತದ ಬಾಯಲ್ಲಿ ಭಗವದ್ಗೀತೆ!
ಮಿಸ್ಟರ್ ವಸೂಲಿವಾಲಾ @rssurjewala, ಜೆಡಿಎಸ್ ಬಗ್ಗೆ ಮಾತನಾಡುವ ಮುನ್ನ ಕಾಂಗ್ರೆಸ್ನ ಕರಾಳ ಇತಿಹಾಸವನ್ನು ಒಮ್ಮೆ ನೆನಪಿಸಿಕೊಳ್ಳಿ:
👉🏿 1997ರಲ್ಲಿ ಕುತಂತ್ರದಿಂದ ಶ್ರೀ @H_D_Devegowda ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ ದ್ರೋಹಿಗಳು ನೀವು! @INCIndia ಪಕ್ಷ ಮಾಡಿದ ಈ ಮಹಾದ್ರೋಹವನ್ನು ಕಳೆದ 30 ವರ್ಷದಿಂದ ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ. ಉತ್ತರಿಸಿ?
👉🏿 2019ರಲ್ಲಿ ಮೈತ್ರಿ ನಾಟಕವಾಡಿ, ಶ್ರೀ @hd_kumaraswamy ಅವರ ಬೆನ್ನಿಗೆ ಚೂರಿ ಹಾಕಿ ಸರಕಾರ ಕೆಡವಿದ್ದೂ ನಿಮ್ಮದೇ @INCKarnataka.
ಕಾಂಗ್ರೆಸ್ನದ್ದು ಒಳಗೆ ಜಾತ್ಯತೀತತೆಯ ಮುಖವಾಡ, ಹೊರಗೆ ಜಾತಿ ವಿದ್ವೇಷದ ರಾಜಕಾರಣ!
ಮಾಜಿ ಪ್ರಧಾನಿಗಳಾದ ಶ್ರೀ ಪಿ.ವಿ.ನರಸಿಂಹರಾವ್ ಹಾಗೂ ಡಾ. ಮನಮೋಹನ್ ಸಿಂಗ್ ಅವರಂತಹ ನಾಯಕರನ್ನು ನಿಮ್ಮ ʼನಕಲಿ ಗಾಂಧಿʼ ಕುಟುಂಬ ಹೇಗೆ ಅಪಮಾನಿಸಿ, ಹೇಗೆಲ್ಲಾ ನಡೆಸಿಕೊಂಡಿತ್ತು ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಮೊದಲು ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ನೋಡಿಕೊಳ್ಳಿ ಮಿಸ್ಟರ್ ವಸೂಲಿವಾಲ!
ತಮಿಳುನಾಡಿನಲ್ಲಿ #DMK ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡು, ಫಲಿತಾಂಶದ ಬಳಿಕ ಗೆದ್ದೆತ್ತಿನ ಬಾಲ ಹಿಡಿದ ನೀತಿಗೆಟ್ಟ ಕಾಂಗ್ರೆಸ್ಸಿಗರೇ, @JanataDal_S ಪಕ್ಷದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ?
ಶ್ರೀ ದೇವೇಗೌಡರು ರಾಷ್ಟ್ರ ಕಂಡ ಮೇರು ನಾಯಕರು. ಕನ್ನಡ ನೆಲೆ ಕಂಡ ಏಕೈಕ ಪ್ರಧಾನಿ. ಇಮ್ಮಡಿ ಪುಲಕೇಶಿ ನಂತರ ಭರತಭೂಮಿಯನ್ನು ಆಳಿದ ಶ್ರೇಷ್ಠ ನಾಯಕರು. ಆ ಹಿರಿಯ ಜೀವದ ವಿಷಯದಲ್ಲಿ ರಾಜಕೀಯ ಮಾಡುವುದು ನಿಮ್ಮ ನೀಚತನದ ಪರಾಕಾಷ್ಠೆ.
ಕೇವಲ ವಸೂಲಿ ಮಾಡಿಕೊಂಡು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿರುವ ಸುರ್ಜಿವಾಲ ಉರುಫ್ ವಸೂಲಿವಾಲ ದೇವೇಗೌಡರ ವಿಷಯ ಬಿಟ್ಟು ನಿಮ್ಮ ಪಾರ್ಟಿ, ಸರಕಾರದಲ್ಲಿ ನಡೆಯುತ್ತಿರುವ ಒಳಜಗಳ, ಒಳಸಂಚು ಹತ್ತಿಕ್ಕುವ ಕಡೆ ಗಮನ ಹರಿಸಿ.
#ವಸೂಲಿವಾಲ
ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್ಗೆ ಆಹ್ವಾನಿಸುವ ಮುನ್ನ @DKShivakumar ಅವರೇ, ಒಂದು ಮಾತು ನೆನಪಿರಲಿ !
ಜೆಡಿಎಸ್ ಕಾರ್ಯಕರ್ತರೆಂದರೆ ಅದು ನಮ್ಮ ಹೆಮ್ಮೆಯ ಅನ್ನದಾತರು. ಜೆಡಿಎಸ್ ಎಂದರೆ ರೈತರ ಪಕ್ಷ, ರೈತಬಾಂಧವರೇ ಜೆಡಿಎಸ್ ಶಕ್ತಿ!
ಬಿಡದಿಯಲ್ಲಿ ಟೌನ್ಶಿಪ್ ಹೆಸರಿನಲ್ಲಿ ಭೂಸ್ವಾಧೀನ ಮಾಡಿಕೊಳ್ಳುವುದನ್ನು ವಿರೋಧಿಸಿ ಕಳೆದ ಒಂದು ವರ್ಷದಿಂದ ನೈಜ ರೈತರು ಧರಣಿ ನಡೆಸುತ್ತಿದ್ದಾರೆ. ಅವರು ನಿಮ್ಮನ್ನು ಆಹ್ವಾನಿಸುತ್ತಿದ್ದಾರೆ, ಧೈರ್ಯವಿದ್ದರೆ ಮೊದಲು ಅಲ್ಲಿಗೆ ಹೋಗಿ ರೈತ ಕುಟುಂಬಗಳ ಅಹವಾಲು ಆಲಿಸಿ. ಅಧಿಕಾರದ ಆಸೆಗೆ ರೈತರನ್ನು ಸೆಳೆಯುವ ನಾಟಕ ನಿಲ್ಲಿಸಿ. @INCKarnataka ಪಕ್ಷ ಸೇರ್ಪಡೆಗೆ ಆಹ್ವಾನ ಕೊಡುವ ದೊಡ್ಡಸ್ತಿಕೆ ಪ್ರದರ್ಶಿಸುವ ಮುನ್ನ ನಿಮ್ಮದೇ ಕ್ಷೇತ್ರದ ರೈತರ ಕಣ್ಣೀರು ಒರೆಸಿ.
ರಿಯಲ್ ಎಸ್ಟೇಟ್ಗಾಗಿ ಬಿಡದಿಯ ರೈತರ ಭೂಮಿ ಕಿತ್ತುಕೊಳ್ಳುವ ಟೌನ್ ಶಿಪ್ ಯೋಜನೆ ಜಾರಿಗೆ ಹಠ ಹಿಡಿದು ಕುಳಿತಿರುವ ನೀವು, ವರ್ಷದಿಂದ ಪ್ರತಿಭಟನೆ ಮಾಡುತ್ತಿರುವ ಅನ್ನದಾತರ ಧರಣಿ ಸ್ಥಳಕ್ಕೆ ಭೇಟಿ ನೀಡಲು ಯಾಕೆ ಹಿಂದೇಟು ಹಾಕುತ್ತಿದ್ದೀರಿ?
ಜೆಡಿಎಸ್ ಸದಾ ರೈತರ ಪರ. ಮೊದಲು ಬಿಡದಿಯ ನೈಜ ರೈತರ ನೋವಿಗೆ ಸ್ಪಂದಿಸಿ.
ರೈತರ ಕಷ್ಟಗಳಿಗೆ ಸದಾ ಮಿಡಿಯುವ 'ಮಣ್ಣಿನ ಮಗ', ಮಾಜಿ ಪ್ರಧಾನಿಗಳಾದ ಶ್ರೀ @H_D_Devegowda ಅವರು ಇಂದು ಲಾಲ್ ಬಾಗ್ನ ಮಾವು ಮೇಳಕ್ಕೆ ಭೇಟಿ ನೀಡಿ, ಮಾವು ಬೆಳೆಗಾರರೊಂದಿಗೆ ಸಮಾಲೋಚನೆ ನಡೆಸಿದರು.
ಈ ವೇಳೆ ರೈತರು ಮಾವು ಮತ್ತು ಹಲಸು ಬೆಲೆ ಕುಸಿತದಿಂದ ಆಗಿರುವ ಅಪಾರ ನಷ್ಟ ಮತ್ತು ಸಂಕಷ್ಟಗಳನ್ನು ಹಿರಿಯರಾದ ದೇವೇಗೌಡರಲ್ಲಿ ತೋಡಿಕೊಂಡರು. ರೈತರ ಸಮಸ್ಯೆಗಳನ್ನು ಆಲಿಸಿ, ಮಾವು, ಹಲಸು ಹಣ್ಣುಗಳಿಗೆ ಸೂಕ್ತ ಬೆಲೆ ಸೇರಿದಂತೆ, ರೈತರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಗೌರವಾನ್ವಿತ ಪ್ರಧಾನಿ ಶ್ರೀ @narendramodi ಅವರೊಂದಿಗೆ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಅನ್ನದಾತರ ಈ ಕಣ್ಣೀರು ರಾಜ್ಯ ಕಾಣುತ್ತಿಲ್ಲವೇ ? ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಂಕಷ್ಟದಲ್ಲಿರುವ ಮಾವು ಮತ್ತು ಹಲಸು ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಮಾಜಿ ಪ್ರಧಾನಿಗಳು ಆಗ್ರಹಿಸಿದರು.
@Ggk_here_ One of the reasons,,but mainly due t insta influencers agirodi,,,8km traffic & 8 hrs for darshana Andre namma Jana yentha kurigalu irbeku Ivnu