ಕನ್ನಡಿಗರು ಮನವಿ ಮಾಡೋ ಜಗದಲ್ಲಿ ಅಲ್ಲಾ ಆದೇಶ ಮಾಡೋ ಜಾಗದಲ್ಲಿ ಇರಬೇಕು! ಕರ್ನಾಟಕದಲ್ಲಿ ಒಂದು ಅಪ್ಪಟ ಕನ್ನಡ ಪ್ರಾದೇಶಿಕ ಪಕ್ಷದ ತುಂಬಾ ಅಗತ್ಯವಿದೆ. ಬರೋ ಚುನಾವಣೆ ಒಳಗೆ ಅಪ್ಪಟ ಕನ್ನಡ ಪರವಾದ ಚಿಂತನೆ ಈ ನೆಲದಲ್ಲಿ ನಡೆಯುತ್ತೆ.
#ಕರವೇಸಾಮಾಜಿಕಜಾಲತಾಣ#ಕರವೇ#KRV#karave
ಕರ್ನಾಟಕ ರಕ್ಷಣಾ ವೇದಿಕೆ ಧಾರವಾಡ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾಗಿ ಮರು ನೇಮಕಗೊಂಡ ಶ್ರೀ ರುದ್ರೇಶ್ ಹವಳದ ಅವರಿಗೆ ಹಾರ್ದಿಕ ಅಭಿನಂದನೆಗಳು. ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಟಿ.ಎ. ನಾರಾಯಣಗೌಡರ ಮಾರ್ಗದರ್ಶನದಲ್ಲಿ ಸಂಘಟನೆ ಮತ್ತಷ್ಟು ಬಲಿಷ್ಠವಾಗಿ ಮುನ್ನಡೆಯಲಿ.
#ಕರವೇ#ಕನ್ನಡ#karave#krv
ಮಂಗಳೂರಿನಲ್ಲಿ ಇಂದು ನಡೆದ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ತುಳು ನುಡಿಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ನಿರ್ಧಾರ ಕೈಗೊಂಡಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತದೆ.
ಐದು ಪ್ರಮುಖ ದ್ರಾವಿಡ ನುಡಿಗಳಲ್ಲಿ ಒಂದಾದ ತುಳು ಅಧಿಕೃತ ಸ್ಥಾನಮಾನ ಪಡೆದಿರುವುದು ಸಂತಸದ ವಿಚಾರ. ಕನ್ನಡದ ಸೋದರ ನುಡಿಯಾದ ತುಳು ನುಡಿಯ ಬೆಳವಣಿಗೆ, ಉಳಿವು ಮತ್ತು ಬಳಕೆಗೆ ಈ ನಿರ್ಧಾರ ಸಹಕಾರಿಯಾಗಲಿದೆ.
ಇಷ್ಟಕ್ಕೇ ಇದು ಸೀಮಿತವಾಗಬಾರದು. ತುಳು ನುಡಿಯನ್ನು ಭಾರತ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಬೇಕು.
ತುಳು ನುಡಿಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಮೊದಲಿನಿಂದಲೂ ದನಿಯೆತ್ತುತ್ತಾ ಬಂದಿದೆ. ಈ ಸಂಬಂಧ ಹಿಂದೆ ಭಾರತ ಸರ್ಕಾರದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ, ನಾಡಿನ ವಿವಿಧ ವಿಚಾರಗಳ ಕುರಿತಾಗಿ ಹಕ್ಕೊತ್ತಾಯ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ತುಳುವನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವಂತೆ ಒತ್ತಾಯಿಸಲಾಗಿತ್ತು. ಆಗ ಸಂಸ್ಕೃತಿ ಸಚಿವರಾಗಿದ್ದ ಅಂಬಿಕಾ ಸೋನಿಯವರನ್ನೂ ಸಹ ನಾವು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶದಲ್ಲಿಯೂ ಈ ಕುರಿತು ನಿರ್ಣಯವನ್ನು ಅಂಗೀಕರಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ತುಳು ನುಡಿಗೆ ಸಂವಿಧಾನಾತ್ಮಕ ಮಾನ್ಯತೆ ದೊರೆಯುವಂತೆ ಅದನ್ನು ಭಾರತ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಪ್ರಕ್ರಿಯೆಯನ್ನು ಮುಂದುವರಿಸಬೇಕು ಎಂದು ನಾನು ಮನವಿ ಮಾಡುತ್ತೇನೆ.
ದೇಶದ ಪ್ರತಿಯೊಂದು ನುಡಿಗೂ ತನ್ನದೇ ಆದ ಪರಂಪರೆ, ಇತಿಹಾಸ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಇದೆ. ಎಲ್ಲ ನುಡಿಗಳನ್ನು ಉಳಿಸಿ ಬೆಳೆಸುವುದು ನಮ್ಮ ಹೊಣೆಗಾರಿಕೆಯಾಗಿದೆ. ವಿಶೇಷವಾಗಿ ದ್ರಾವಿಡ ನುಡಿಗಳನ್ನು ಮಾತನಾಡುವ ಜನರು ಒಂದಾಗಿ ತಮ್ಮ ನುಡಿ ಮತ್ತು ಸಂಸ್ಕೃತಿಯ ಉಳಿವಿಗಾಗಿ ಕೈಜೋಡಿಸಬೇಕಿದೆ.
ತುಳು ನುಡಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವುದು ಒಂದು ಮಹತ್ವದ ಹೆಜ್ಜೆ. ತುಳು ನುಡಿಗೆ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸ್ಥಾನ ದೊರೆಯುವವರೆಗೆ ನಮ್ಮ ಹಕ್ಕೊತ್ತಾಯ ಮುಂದುವರಿಯಲಿದೆ.
ಪಶ್ಚಿಮ ಘಟ್ಟಗಳ ಸಂರಕ್ಷಣೆ ಅಗತ್ಯ. ಆದರೆ ಮಲೆನಾಡಿನಲ್ಲಿ ತಲೆತಲಾಂತರಗಳಿಂದ ಬದುಕುತ್ತಿರುವ ಜನರ ಜೀವನ, ಕೃಷಿ, ಉದ್ಯೋಗ ಮತ್ತು ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುವ ಪರಿಸರ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ.
ಕಸ್ತೂರಿರಂಗನ್ ವರದಿಯ ಪ್ರಮುಖ ಸಮಸ್ಯೆಯೇ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವಾಗ ಸ್ಥಳೀಯ ವಾಸ್ತವಾಂಶಗಳಿಗೆ ಅಗತ್ಯ ಪ್ರಾಮುಖ್ಯತೆ ನೀಡದಿರುವುದು. ಉಪಗ್ರಹ ಚಿತ್ರಗಳ ಆಧಾರದ ಮೇಲಿನ ವಿಶಾಲ ಮಟ್ಟದ ಗುರುತಿಸುವಿಕೆಯಿಂದ ಜನವಸತಿ, ಕೃಷಿ ಮತ್ತು ತೋಟಗಾರಿಕೆ ಪ್ರದೇಶಗಳೂ ವ್ಯಾಪ್ತಿಗೆ ಬಂದಿವೆ ಎಂಬ ಆಕ್ಷೇಪಗಳಿವೆ. ನೆಲಮಟ್ಟದ ಸರ್ವೆ, ಗ್ರಾಮವಾರು ಪರಿಶೀಲನೆ ಮತ್ತು ಜನರ ಅಭಿಪ್ರಾಯಕ್ಕೆ ಆದ್ಯತೆ ನೀಡಬೇಕು.
ಕೇರಳ ಅನುಸರಿಸಿದ ಪರ್ಯಾಯ ಮಾದರಿಯಂತೆ ಸ್ಥಳೀಯ ಸಂಸ್ಥೆಗಳು, ತಜ್ಞರು, ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರ ಸಹಭಾಗಿತ್ವದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು. ಉಪಗ್ರಹ ಚಿತ್ರಗಳಿಗಿಂತ ಮಲೆನಾಡಿನ ನೆಲದ ಸತ್ಯಕ್ಕೆ ಆದ್ಯತೆ ಸಿಗಬೇಕು.
ಕಾಡನ್ನು ರಕ್ಷಿಸುತ್ತಿರುವವರು ಕಾಡಿನಂಚಿನಲ್ಲಿ ಬದುಕುತ್ತಿರುವ ಜನರು. ಅವರ ಮನೆ, ಕೃಷಿ, ರಸ್ತೆ, ಶಾಲೆ, ಆಸ್ಪತ್ರೆ, ಉದ್ಯೋಗ ಮತ್ತು ಬದುಕಿನ ಹಕ್ಕುಗಳನ್ನು ಕಿತ್ತುಕೊಂಡು ಪರಿಸರ ಸಂರಕ್ಷಣೆ ಮಾಡಲು ಸಾಧ್ಯವಿಲ್ಲ.
ಕರಡು ಅಧಿಸೂಚನೆಯಲ್ಲಿ ಹಲವು ಚಟುವಟಿಕೆಗಳ ಮೇಲೆ ನಿರ್ಬಂಧ ಮತ್ತು ನಿಯಂತ್ರಣಗಳನ್ನು ಪ್ರಸ್ತಾಪಿಸಲಾಗಿದೆ. ಭವಿಷ್ಯದಲ್ಲಿ ಇವು ಮಲೆನಾಡಿನ ಜನರ ಬದುಕಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಮನುಷ್ಯರ ಅಸ್ತಿತ್ವವನ್ನೇ ಸಂಕಷ್ಟಕ್ಕೆ ತಳ್ಳುವ ಯಾವುದೇ ಯೋಜನೆ ಅಥವಾ ನೀತಿ ಜಾರಿಯಾಗಬಾರದು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ @DKShivakumar ಅವರು ಮಲೆನಾಡಿನ ಜನರೊಂದಿಗೆ ಸಂವಾದ ಆರಂಭಿಸಿರುವುದು ಸ್ವಾಗತಾರ್ಹ. ವಿಶೇಷ ಅಧಿವೇಶನದಲ್ಲಿ ಗೊತ್ತುವಳಿ ಮಂಡಿಸಿ, ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಬೇಕು.
ಮಲೆನಾಡಿನ ಜನರನ್ನು ಪಶ್ಚಿಮ ಘಟ್ಟಗಳ ಶತ್ರುಗಳಂತೆ ನೋಡದೆ, ಅದರ ಸಂರಕ್ಷಣೆಯ ಪಾಲುದಾರರನ್ನಾಗಿ ಮಾಡಬೇಕು.
ಭೂಸುಧಾರಣೆ ಕಾಯ್ದೆ ತಿದ್ದುಪಡಿಯ ಬಳಿಕ ಕರ್ನಾಟಕದ ಸುಮಾರು 24 ಲಕ್ಷ ಎಕರೆ ಕೃಷಿಭೂಮಿ ಉಳ್ಳವರು, ನಾರ್ಥಿಗಳು ಹಾಗೂ ಪರರಾಜ್ಯದವರ ಕೈ ಸೇರಿದೆ. ಕನ್ನಡಿಗರ ನೆಲ ಕೈತಪ್ಪುತ್ತಿದೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ನಾಳೆ ಕನ್ನಡಿಗರೇ ಭೂರಹಿತರಾಗಬೇಕಾಗುತ್ತದೆ.
#ಕರವೇ#ಕನ್ನಡಿಗರನೆಲ#KarnatakaLand#KRV
ತುಳು ನುಡಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಿ
ತುಳು ನುಡಿಗೆ ಸಂವಿಧಾನದ 8ನೇ ಅನುಸೂಚಿಯಲ್ಲಿ ಸ್ಥಾನ ನೀಡಬೇಕೆಂದು ಒಕ್ಕೂಟ ಸರ್ಕಾರವನ್ನು ಆಗ್ರಹಿಸುತ್ತೇನೆ. ಇದು ನಮ್ಮ ಹೊಸ ಬೇಡಿಕೆಯೇನಲ್ಲ. ಕರವೇ ಮೊದಲಿನಿಂದಲೂ ಈ ಹಕ್ಕೊತ್ತಾಯವನ್ನು ಬೆಂಬಲಿಸುತ್ತಾ ಬಂದಿದೆ.
#ಕರವೇ#karave#krv#ತುಳು#ತುಳುಭಾಷೆ#Tulu#TuluLanguage
ತುಳು ನುಡಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಿ.
ತುಳು ನುಡಿಗೆ ಸಂವಿಧಾನದ 8ನೇ ಅನುಸೂಚಿಯಲ್ಲಿ ಸ್ಥಾನ ನೀಡಬೇಕೆಂದು ಒಕ್ಕೂಟ ಸರ್ಕಾರವನ್ನು ಆಗ್ರಹಿಸುತ್ತೇನೆ. ಇದು ನಮ್ಮ ಹೊಸ ಬೇಡಿಕೆಯೇನಲ್ಲ. ಕರವೇ ಮೊದಲಿನಿಂದಲೂ ಈ ಹಕ್ಕೊತ್ತಾಯವನ್ನು ಬೆಂಬಲಿಸುತ್ತಾ ಬಂದಿದೆ.
#ಕರವೇ#karave#krv#ತುಳು#ತುಳುಭಾಷೆ#Tulu#TuluLanguage
ತುಳು ನುಡಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಿ.
ಕನ್ನಡದ ಸೋದರ ನುಡಿಯಾದ ತುಳು ನುಡಿಯ ಉಳಿವು, ಬೆಳವಣಿಗೆ ಮತ್ತು ಗೌರವಕ್ಕಾಗಿ ತುಳುವರು ಅನೇಕ ವರ್ಷಗಳಿಂದ ಮಂಡಿಸುತ್ತಿರುವ ಹಕ್ಕೊತ್ತಾಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಸಂಪೂರ್ಣವಾಗಿ ಬೆಂಬಲಿಸುತ್ತದೆ.
#ಕರವೇಹೋರಾಟಗಳು#ಕರವೇ#karave#krv#ತುಳುಭಾಷೆ#Tulu#TuluLanguage
ತುಳು ನುಡಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಿ.
ನಾಳೆ ಮಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಸಭೆ ನಡೆಯುತ್ತಿದೆ.
ಇದೊಂದು ಐತಿಹಾಸಿಕ ಸಂದರ್ಭ. ರಾಜ್ಯ ಸರ್ಕಾರ ತುಳು ನುಡಿಯನ್ನು ತುಳು ಮಾತನಾಡುವ ಪ್ರದೇಶಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡುವ ನಿರ್ಧಾರವನ್ನು ಘೋಷಿಸಬೇಕು ಎಂದು ಒತ್ತಾಯಿಸುತ್ತೇನೆ.
#ತುಳು
ಸೆಪ್ಟೆಂಬರ್ 17, ಕಲ್ಯಾಣ ಕರ್ನಾಟಕದ ಇತಿಹಾಸದಲ್ಲಿ ನಿರ್ಣಾಯಕ ದಿನ. 1948ರ ಈ ದಿನ, ಹೈದರಾಬಾದ್ ಸಂಸ್ಥಾನದಲ್ಲಿ ನಿಜಾಮರ ಆಳ್ವಿಕೆ ಅಂತ್ಯವಾಗಿ, ಭಾರತೀಯ ಒಕ್ಕೂಟದೊಂದಿಗೆ ಅದರ ವಿಲೀನಕ್ಕೆ ದಾರಿ ಮಾಡಿಕೊಟ್ಟ ಐತಿಹಾಸಿಕ ಘಟನೆ ನಡೆಯಿತು. ಸರ್ದಾರ್ ವಲ್ಲಭಭಾಯಿ ಪಟೇಲರ ನಿರ್ಣಾಯಕ ನಾಯಕತ್ವದಲ್ಲಿ ನಡೆದ ‘ಆಪರೇಷನ್ ಪೋಲೊ’ ಕಾರ್ಯಾಚರಣೆಯ ಬಳಿಕ ಸೆಪ್ಟೆಂಬರ್ 17ರಂದು ನಿಜಾಮರು ಕದನ ವಿರಾಮ ಘೋಷಿಸಿ ಭಾರತೀಯ ಒಕ್ಕೂಟಕ್ಕೆ ಸೇರುವುದಕ್ಕೆ ಒಪ್ಪಿಕೊಂಡರು. ಸೆಪ್ಟೆಂಬರ್ 18ರಂದು ಹೈದರಾಬಾದ್ ರಾಜ್ಯ ಸೇನೆಯ ಔಪಚಾರಿಕ ಶರಣಾಗತಿ ನಡೆಯಿತು. ಆ ಐತಿಹಾಸಿಕ ಸಂದರ್ಭದಲ್ಲಿ ಆಪರೇಷನ್ ಪೋಲೊದಲ್ಲಿ ಪಾಲ್ಗೊಂಡ ಮೈಸೂರು ಲ್ಯಾನ್ಸರ್ಸ್ ಮತ್ತು ಮೈಸೂರು ಇನ್ಫ್ಯಾಂಟ್ರಿಯ ಕೊಡುಗೆಯನ್ನೂ ಸ್ಮರಿಸಬೇಕು. ಮೈಸೂರು ಮಹಾರಾಜರಾದ ಚಾಮರಾಜ ಒಡೆಯರ್ ಅವರ ಕೊಡುಗೆಯನ್ನೂ ಮರೆಯುವಂತಿಲ್ಲ.
ಕಲ್ಯಾಣ ಕರ್ನಾಟಕದ ಸಮಸ್ತ ಜನತೆಗೆ ಈ ಐತಿಹಾಸಿಕ ದಿನದ ಹಾರ್ದಿಕ ಶುಭಾಶಯಗಳು.
ಆದರೆ ನೋವಿನ ವಿಷಯವೆಂದರೆ ರಾಜಕೀಯ ಮುಕ್ತಿ ದೊರೆತು ಎಪ್ಪತ್ತೆಂಟು ವರ್ಷಗಳಾದರೂ, ಕಲ್ಯಾಣ ಕರ್ನಾಟಕದ ಜನರಿಗೆ ಅಭಿವೃದ್ಧಿಯ ಸಮಾನ ಅವಕಾಶ ಇನ್ನೂ ಪೂರ್ಣವಾಗಿ ದೊರೆತಿಲ್ಲ. ಸಂವಿಧಾನದ 371(ಜೆ) ವಿಧಿಯಡಿ ವಿಶೇಷ ಸ್ಥಾನಮಾನ ದೊರೆತ ಬಳಿಕ, 2013ರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಯಿತು. ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ₹5,000 ಕೋಟಿಯ ಕಾರ್ಯಯೋಜನೆ ರೂಪಿಸುತ್ತಿದೆ. ಆದರೆ ಹಣ ಹಂಚಿಕೆಯ ಜೊತೆಗೆ ಅದರ ಸಮರ್ಪಕ ಬಳಕೆ ಮತ್ತು ಕಾಮಗಾರಿಗಳ ಪರಿಣಾಮಕಾರಿ ಅನುಷ್ಠಾನವೂ ಅಷ್ಟೇ ಮುಖ್ಯ.
ಮಾನವ ಅಭಿವೃದ್ಧಿ, ತಲಾ ಆದಾಯ, ಶಿಕ್ಷಣ ಮತ್ತು ಆರೋಗ್ಯದ ಹಲವು ಸೂಚಕಗಳಲ್ಲಿ ಕಲ್ಯಾಣ ಕರ್ನಾಟಕ ರಾಜ್ಯದ ಇತರ ಭಾಗಗಳಿಗಿಂತ ಇನ್ನೂ ಹಿಂದುಳಿದಿದೆ. ಲಭ್ಯವಿರುವ ಇತ್ತೀಚಿನ ಸರ್ಕಾರಿ ಅಂಕಿ-ಅಂಶಗಳ ಪ್ರಕಾರ, ಕಲಬುರಗಿ ಜಿಲ್ಲೆಯ ತಲಾ ಆದಾಯ ರಾಜ್ಯದಲ್ಲೇ ಅತ್ಯಂತ ಕಡಿಮೆ ಮಟ್ಟದಲ್ಲಿದೆ. ಅನೇಕ ತಾಲ್ಲೂಕುಗಳು ನಂಜುಂಡಪ್ಪ ಸಮಿತಿ ವರದಿಯಲ್ಲಿ ‘ಅತ್ಯಂತ ಹಿಂದುಳಿದ’ ವರ್ಗದಲ್ಲೇ ಉಳಿದಿವೆ.
ಹಣ ಮೀಸಲಿಡುವುದು ಮಾತ್ರ ಸಾಲದು. ಅದು ನಿಗದಿತ ಕಾಲಮಿತಿಯಲ್ಲಿ, ಪಾರದರ್ಶಕವಾಗಿ, ಜನರ ಬದುಕಿನಲ್ಲಿ ಕಾಣುವಂತೆ ಬಳಕೆಯಾಗಬೇಕು. ಪ್ರತಿ ಜಿಲ್ಲೆಗೂ ಮುಂದಿನ ಐದು ವರ್ಷಗಳ ಸಮಗ್ರ ಅಭಿವೃದ್ಧಿ ಕಾರ್ಯಯೋಜನೆ ರೂಪಿಸಿ, ಪ್ರತಿ ಕ್ಷೇತ್ರಕ್ಕೂ ನಿಗದಿತ ಅನುದಾನ, ಕಾಲಮಿತಿ ಮತ್ತು ಹೊಣೆಗಾರ ಅಧಿಕಾರಿಗಳನ್ನು ಗುರುತಿಸಬೇಕು. ಪ್ರತಿವರ್ಷದ ಜಿಲ್ಲಾವಾರು ಪ್ರಗತಿ ವರದಿಯನ್ನು ಸಾರ್ವಜನಿಕಗೊಳಿಸಬೇಕು.
ಯುವಕರು ಉದ್ಯೋಗಕ್ಕಾಗಿ ನೆಲ ತೊರೆಯುವ ಪರಿಸ್ಥಿತಿ ಮುಂದುವರಿಯುತ್ತಿದೆ. ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್ಗಳು ಹಾಗೂ ಐಟಿ-ತಂತ್ರಜ್ಞಾನ ಪಾರ್ಕ್ಗಳನ್ನು ಸ್ಥಾಪಿಸಿ, ವಿಶೇಷ ಹೂಡಿಕೆ ನೀತಿಯ ಮೂಲಕ ದೊಡ್ಡ ಮತ್ತು ಮಧ್ಯಮ ಕೈಗಾರಿಕೆಗಳನ್ನು ಆಕರ್ಷಿಸಬೇಕು. ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಟಿಸುವುದು ಮಾತ್ರ ವಲಸೆಯನ್ನು ತಡೆಯಬಲ್ಲದು.
ಶಿಕ್ಷಣ ಕ್ಷೇತ್ರದಲ್ಲಿ ಮೂಲಸೌಕರ್ಯದ ಕೊರತೆ ಮತ್ತು ಶಿಕ್ಷಕರ ಖಾಲಿ ಹುದ್ದೆಗಳು ಇನ್ನೂ ಸಮಸ್ಯೆಯಾಗಿವೆ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ, ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳನ್ನು ಹೆಚ್ಚಿಸಿ, ಪ್ರತಿ ಜಿಲ್ಲೆಯಲ್ಲಿ ಗುಣಮಟ್ಟದ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸಬೇಕು.
ನೀರಾವರಿ ಕ್ಷೇತ್ರದಲ್ಲಿ ಕೃಷ್ಣಾ, ಭೀಮಾ, ತುಂಗಭದ್ರಾ, ಕಾಗಿಣಾ, ಮಂಜೀರಾ ನದಿಗಳ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಬೇಕು. ಬಾಕಿ ಉಳಿದಿರುವ ಯೋಜನೆಗಳ ಆಡಳಿತಾತ್ಮಕ, ಭೂಸ್ವಾಧೀನ, ತಾಂತ್ರಿಕ ಮತ್ತು ಪರಿಸರ ಸಂಬಂಧಿತ ತೊಡಕುಗಳನ್ನು ಕಾಲಮಿತಿಯಲ್ಲಿ ನಿವಾರಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ನೀರು ಹೊಲಕ್ಕೆ ತಲುಪಿದಾಗ ಮಾತ್ರ ಯೋಜನೆಯ ಯಶಸ್ಸು ಅರ್ಥಪೂರ್ಣ. ಇಲ್ಲದಿದ್ದರೆ ಖರ್ಚು ಮಾಡಿದ ಹಣಕ್ಕೆ ಅರ್ಥವೇ ಇರುವುದಿಲ್ಲ.
ಆರೋಗ್ಯ ಕ್ಷೇತ್ರದಲ್ಲಿ ಪ್ರತಿ ಹೋಬಳಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸುಸಜ್ಜಿತ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ, ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಿಸಬೇಕು. ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ತಜ್ಞ ಸೇವೆಗಳನ್ನು ಸ್ಥಳೀಯವಾಗಿಯೇ ದೊರೆಯುವಂತೆ ಮಾಡಬೇಕು.
ರಸ್ತೆ, ಸೇತುವೆ, ಕುಡಿಯುವ ನೀರು, ವಿದ್ಯುತ್, ಸಾರ್ವಜನಿಕ ಸಾರಿಗೆ, ಇಂಟರ್ನೆಟ್ ಮತ್ತು ಮಾರುಕಟ್ಟೆ ಮೂಲಸೌಕರ್ಯಗಳ ಕೊರತೆ ಇರುವ ಗ್ರಾಮಗಳನ್ನು ಗುರುತಿಸಿ ವಿಶೇಷ ಯೋಜನೆ ರೂಪಿಸಬೇಕು. ಅಭಿವೃದ್ಧಿಯ ಅರ್ಥ ಕೇವಲ ನಗರಗಳ ನಿರ್ಮಾಣ ಎಂದು ನಾವು ಭಾವಿಸುವುದು ತಪ್ಪು. ಪ್ರತಿ ಹಳ್ಳಿಯ ಬದುಕಿನ ಗುಣಮಟ್ಟವನ್ನು ಎತ್ತುವುದು ನಮ್ಮ ಮೂಲ ಗುರಿಯಾಗಬೇಕು.
ಕಲ್ಯಾಣ ಕರ್ನಾಟಕದ ಜನರಿಗೆ ಕೇವಲ ಅನುದಾನದ ಘೋಷಣೆಗಳಿಂದ ಪ್ರಯೋಜನವಾಗದು. ಶಾಲೆ ನಿರ್ಮಾಣವಾಗಬೇಕು, ಆಸ್ಪತ್ರೆ ಕಾರ್ಯನಿರ್ವಹಿಸಬೇಕು, ಹೊಲಕ್ಕೆ ನೀರು ಬರಬೇಕು, ಯುವ ಜನತೆಗೆ ಉದ್ಯೋಗ ಸಿಗಬೇಕು, ಕೈಗಾರಿಕೆ ಸ್ಥಾಪನೆಯಾಗಬೇಕು, ಹಳ್ಳಿಗೆ ರಸ್ತೆ ಬರಬೇಕು. ಆಗ ಮಾತ್ರ ಅಭಿವೃದ್ಧಿ ಕಾಗದದಿಂದ ಬದುಕಿಗೆ ಇಳಿದಿದೆ ಎನ್ನಬಹುದು.
ಕಲ್ಯಾಣ ಕರ್ನಾಟಕ ನಿಜವಾಗಿಯೂ ಅಭಿವೃದ್ಧಿ ಹೊಂದಿದಾಗ ಮಾತ್ರ ಈ ದಿನವನ್ನು ಉತ್ಸವವನ್ನಾಗಿ ಆಚರಿಸುವುದು ಅರ್ಥಪೂರ್ಣ. ಹಾಗಾದಾಗ ಮಾತ್ರ ಹುತಾತ್ಮರ ಬಲಿದಾನಕ್ಕೆ ನಿಜವಾದ ಗೌರವ ಸಲ್ಲುತ್ತದೆ.
ಮತ್ತೊಮ್ಮೆ ಕಲ್ಯಾಣ ಕರ್ನಾಟಕ ಉತ್ಸವ ದಿನದ ಶುಭಾಶಯಗಳು.
ತುಳು ನುಡಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಿ.
ಕನ್ನಡದ ಸೋದರ ನುಡಿಯಾದ ತುಳುವಿನ ಉಳಿವು, ಬೆಳವಣಿಗೆ ಮತ್ತು ಗೌರವಕ್ಕಾಗಿ ತುಳುವರು ಹಲವು ವರ್ಷಗಳಿಂದ ಮಂಡಿಸುತ್ತಿರುವ ಹಕ್ಕೊತ್ತಾಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಸಂಪೂರ್ಣವಾಗಿ ಬೆಂಬಲಿಸುತ್ತದೆ.
#ಕರವೇ#karave#krv#ತುಳು#ತುಳುಭಾಷೆ#Tulu#TuluLanguage