ಸೊಕ್ಕಿನ @INCKarnataka ಸರ್ಕಾರಕ್ಕೆ ಸ್ವಪಕ್ಷದ ಶಾಸಕರೇ ಕನ್ನಡಿ ಹಿಡಿದಿದ್ದಾರೆ! ಒಬ್ಬ ಹಿರಿಯ ಶಾಸಕ ಹಾಗೂ ಮಾಜಿ ಸಚಿವರೊಬ್ಬರು ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡದೇ ಇದ್ದರೆ ರಾಜೀನಾಮೆ ಕೊಡುತ್ತೇನೆ ಎಂದು ಗಡುವು ನೀಡುತ್ತಿರುವುದು ಈ ಸರ್ಕಾರದ ರೈತ ವಿರೋಧಿ ನೀತಿಗೆ ಸಾಕ್ಷಿ.
ಉತ್ತರ ಕರ್ನಾಟಕದಲ್ಲಿ ತೀವ್ರ ಅಭಾವವಿದ್ದರೂ, ಅಧಿಕಾರ ಹಾಗೂ ಕಮಿಷನ್ ದಂಧೆಯಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಕಣ್ಣೀರು ಕಾಣುತ್ತಿಲ್ಲ. ಮಾಜಿ ಸಚಿವ ಹೆಚ್.ಕೆ. ಪಾಟೀಲರೇ ಸಿಎಂ/ಡಿಸಿಎಂ ಆದೇಶವನ್ನು ಅಧಿಕಾರಿಗಳು ಧಿಕ್ಕರಿಸುತ್ತಿದ್ದಾರೆ, ಸರ್ಕಾರಕ್ಕೆ ಮಸಿ ಬಳಿಯುತ್ತಿದ್ದಾರೆ ಎಂದು ಬಹಿರಂಗವಾಗಿ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿಗಳ ಮಾತಿಗೂ ಬೆಲೆಯಿಲ್ಲ, ಸಚಿವರ ಆದೇಶಕ್ಕೂ ಬೆಲೆಯಿಲ್ಲ. ಉತ್ತರ ಕರ್ನಾಟಕದ 73 ತಾಲೂಕುಗಳ ಪೈಕಿ 27 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸದೆ ಕಡೆಗಣಿಸಿರುವುದು ಈ ಸರ್ಕಾರದ ರೈತ ವಿರೋಧಿ ನೀತಿಗೆ ಕೈಗನ್ನಡಿ.
ಅಧಿಕಾರಿಗಳ ಅಸಮರ್ಥತೆ, ಸರ್ಕಾರದ ನಿರ್ಲಕ್ಷ್ಯದಿಂದ ಉತ್ತರ ಕರ್ನಾಟಕದ ರೈತರು ಬೀದಿಗೆ ಬಿದ್ದಿದ್ದಾರೆ. ತಕ್ಷಣವೇ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ಇಲ್ಲವೇ ಖುರ್ಚಿ ಖಾಲಿ ಮಾಡಿ.
@DKShivakumar
ನಮ್ಮ ತುಳು ಭಾಷೆಗೆ ರಾಜ್ಯದ 2 ನೇ ಅಧಿಕೃತ ಭಾಷೆಯ ಸ್ಥಾನಮಾನ ದೊರಕಿದ್ದು ಸಂಭ್ರಮದ ವಿಚಾರ. ಈ ಗೆಲುವಿನ ದಿನಕ್ಕಾಗಿ ನಿರಂತರವಾಗಿ ಶ್ರಮಿಸಿದ ತುಳುಪರ ಸಂಘಟನೆಗಳಿಗೆ ಹಾಗೂ ತುಳುಪರ ಹೋರಾಟಗಾರರಿಗೆ ಅಭಿನಂದನೆಗಳು. ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವನಾಗಿದ್ದ ಸಂಧರ್ಭ ಶ್ರೀ ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ರಚನೆಗೊಂಡ ಸಮಿತಿಯ ವರದಿಯನ್ನು ಅಂಗೀಕರಿಸಿ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಿದ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ ಶಿವಕುಮಾರ್ ಅವರಿಗೆ ಕೃತಜ್ಞತೆಗಳು.
@DKShivakumar@BSBommai
ಉಜ್ಜಯಿನಿಯ ಪವಿತ್ರ ಭೂಮಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಆಶೀರ್ವಾದದ ದೀಪ ಅಭಿಯಾನದಡಿ ಕಂಡ ಭಕ್ತಿ, ಪ್ರೀತಿ ಮತ್ತು ಶುಭಾಶಯಗಳ ಅದ್ಭುತ ಸಂಗಮ 🪔
ಪ್ರತಿ ದೀಪದಲ್ಲೂ ಪ್ರೀತಿ, ಪ್ರತಿ ಜ್ಯೋತಿಯಲ್ಲೂ ಆಶೀರ್ವಾದ, ಮತ್ತು ಪ್ರತಿಯೊಂದು ಹೃದಯದಲ್ಲೂ ಪ್ರಧಾನಿ ಮೋದಿ ಅವರ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ.
ಇದು ಕೇವಲ ದೀಪಗಳ ಬೆಳಕಲ್ಲ, ಕೋಟ್ಯಂತರ ದೇಶವಾಸಿಗಳ ಪ್ರೀತಿ ಮತ್ತು ವಿಶ್ವಾಸದ ಪ್ರತಿಬಿಂಬವಾಗಿದೆ. 🇮🇳
#AshirwadKaDiya
#HappyBdayPMModi
#SevaSankalpAbhiyan
ಆಗುಂಬೆ ಘಾಟ್ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ರೂ. 18.00 ಕೋಟಿ ಅನುದಾನ ಬಿಡುಗಡೆ
ಕರಾವಳಿ ಮತ್ತು ಮಲೆನಾಡು ಸೇರಿದಂತೆ ಉತ್ತರ ಕರ್ನಾಟಕದ ಸಂಪರ್ಕ ಸೇತು ಆಗಿರುವ ಆಗುಂಬೆ ಘಾಟಿಯ ಆಯ್ದ ಭಾಗಗಳಲ್ಲಿ ಕಾಂಕ್ರೀಟ್ ತಡೆಗೋಡೆ ಸಹಿತ ಆಗುಂಬೆಯಿಂದ ಹೆಬ್ರಿ ಪೇಟೆ ತನಕ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ವತಿಯಿಂದ 18 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿರುತ್ತದೆ.
ಆಗುಂಬೆ ಘಾಟ್ ರಸ್ತೆ ಅಭಿವೃದ್ಧಿ ಸೇರಿದಂತೆ ಕೆಲವೊಂದು ತಿರುವುಗಳಲ್ಲಿ ವಾಹನಗಳ ಸುಗಮ ಸಂಚಾರದ ಹಿತ ದೃಷ್ಟಿಯಿಂದ ಸದರಿ ರಸ್ತೆ ಅಭಿವೃದ್ಧಿಗೆ ಈ ಹಿಂದೆ ಮಾನ್ಯ ಸಂಸದರ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅದರಂತೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿ ವತಿಯಿಂದ ರೂಪಾಯಿ 18 ಕೋಟಿ ಅನುದಾನ ಬಿಡುಗಡೆ ಮಾಡಿದ್ದು ಇದಕ್ಕಾಗಿ ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಮತ್ತು ಸಾರಿಗೆ ಸಚಿವರಾದ ಶ್ರೀ ನಿತಿನ್ ಗಡ್ಕರಿ ಹಾಗೂ ಅನುದಾನ ಬಿಡುಗಡೆಗೆ ವಿಶೇಷ ಮುತುವರ್ಜಿ ವಹಿಸಿದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಧನ್ಯವಾದಗಳು. @KotasBJP@narendramodi@nitin_gadkari
ಮುಖ್ಯಮಂತ್ರಿ @DKShivakumar ಅವರನ್ನು ಇಂದು ಭೇಟಿ ಮಾಡಿ ಕಾರ್ಕಳದಲ್ಲಿ 2027 ರ ಫೆಬ್ರವರಿ 18ರಿಂದ ಹತ್ತು ದಿನಗಳ ಕಾಲ ನಡೆಯುವ ಐತಿಹಾಸಿಕ ಮಹಾಮಸ್ತಾಭಿಷೇಕದ ಬಗ್ಗೆ ಚರ್ಚಿಸಲಾಯಿತು.
ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಈ ಮಹಾಮಸ್ತಾಭಿಷೇಕದ ಸಿದ್ದತೆಗೆ ವಿಶೇಷ ಅನುದಾನ ನೀಡುವ ಜತೆಗೆ ಕಾರ್ಕಳ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಅನುದಾನ ಬಿಡುಗಡೆ ಬಗ್ಗೆ ವಿವರವಾಗಿ ಚರ್ಚಿಸಿದ್ದೇನೆ.
ಸೆಪ್ಟೆಂಬರ್ 18 ರಂದು ರಾಜ್ಯ ಸರ್ಕಾರ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಿದೆ. ಆದರೆ, ಈ ಸಭೆ ಕೇವಲ ಔಪಚಾರಿಕತೆ ಹಾಗೂ ಘೋಷಣೆಗೆ ಸೀಮಿತವಾಗಬಾರದು. ಕರಾವಳಿ ಜನರ ದಶಕಗಳ ಭಾವನಾತ್ಮಕ ಹಾಗೂ ನ್ಯಾಯಯುತ ಬೇಡಿಕೆಯಾದ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ನಿರ್ಧಾರವನ್ನು ಈ ಸಂಪುಟ ಸಭೆಯಲ್ಲಿ ಸರ್ಕಾರ ಘೋಷಿಸಲೇಬೇಕು ಎಂದು ನಾನು ಆಗ್ರಹಿಸುತ್ತೇನೆ.
ತುಳು ಕೇವಲ ಒಂದು ಭಾಷೆಯಲ್ಲ, ಅದು ಕರಾವಳಿಯ ಆಚಾರ, ವಿಚಾರ, ದೈವಾರಾಧನೆ ಮತ್ತು ಸಂಸ್ಕೃತಿಯ ಜೀವಾಳ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಸಾಧ್ಯಾಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಡಾ.ಎಂ.ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು.
ಈ ಸಮಿತಿ ಸಮಗ್ರವಾಗಿ ಅಧ್ಯಯನ ನಡೆಸಿ, ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಕಾನೂನಾತ್ಮಕವಾಗಿ ಹಾಗೂ ಸಾಂವಿಧಾನಿಕವಾಗಿ ಯಾವುದೇ ಅಡೆತಡೆಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದೆ. ನಮ್ಮ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಹಂತದಲ್ಲಿದ್ದಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಸಾಧ್ಯವಾಗಲಿಲ್ಲ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಆಡಳಿತಾತ್ಮಕವಾಗಿ ಎಲ್ಲಾ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ. ಈಗ ಚೆಂಡು ರಾಜ್ಯ ಸರ್ಕಾರದ ಅಂಗಳದಲ್ಲಿದೆ. ಸೆಪ್ಟೆಂಬರ್ ೧೮ರ ಸಂಪುಟ ಸಭೆಯಲ್ಲಿ ಮೋಹನ್ ಆಳ್ವ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸಿ, ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ನಿರ್ಧಾರಕ್ಕಾಗಿ ತುಳು ನಾಡಿನ ಜನತೆ ಕಾಯುತ್ತಿದ್ದಾರೆ. ಈಡೇರಿಸಿ.... @DKShivakumar
ಭಾರತ ಕಂಡ ಶ್ರೇಷ್ಠ ದಾರ್ಶನಿಕ ಹಾಗೂ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವದ ಈ ಶುಭ ಸಂದರ್ಭದಲ್ಲಿ, ನಮ್ಮ ಬದುಕಿಗೆ ದಾರಿದೀಪವಾಗಿರುವ ಎಲ್ಲಾ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ನಮ್ಮ ಬದುಕನ್ನು ರೂಪಿಸಿದ ಪ್ರತಿಯೊಬ್ಬ ಗುರುವಿಗೂ ಶಿರಸಾಷ್ಟಾಂಗ ಪ್ರಣಾಮಗಳು.
ಸಾಂವಿಧಾನಿಕ ಹುದ್ದೆಯ ಘನತೆಯನ್ನು ಲೆಟರ್ ಹೆಡ್ ಗೆ ಇಳಿಸಿದ ಕಾಂಗ್ರೆಸ್ ಹೈಕಮಾಂಡ್ ಈಗ ಸ್ಪೀಕರ್ ಹುದ್ದೆಯನ್ನು ಅಕ್ಷರಶಃ ರಾಜಕೀಯ ನೇಮಕಾತಿಯನ್ನಾಗಿಸಿದೆ. ಸಭಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದವರು ಪಕ್ಷದ ಸದಸ್ಯತ್ವಕ್ಕೆ ಮೊದಲು ರಾಜೀನಾಮೆ ನೀಡಬೇಕು. ನಿಷ್ಪಕ್ಷಪಾತಿಯಾಗಿರಬೇಕು. ಆದರೆ ಸಭಾಧ್ಯಕ್ಷರೇ ಪಕ್ಷದ ರಾಜ್ಯ ಉಸ್ತುವಾರಿಯನ್ನು ಭೇಟಿಯಾಗಿ ಕೃತಜ್ಞತೆಯ " ಸಂದಾಯ" ಮಾಡಿರುವುದು ಅವರ ಕಾರ್ಯವೈಖರಿಯನ್ನು ಪ್ರಶ್ನಾರ್ಹವಾಗಿಸುತ್ತದೆ. ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಲ್ಲೇ ಇನ್ನು ಮುಂದೆ ಸದನ ನಡೆಯಬಹುದೆಂಬ ಅಪಾಯವನ್ನು ಈ ಭೇಟಿ ಧ್ವನಿಸುತ್ತಿದೆ.
The Congress high command, which has already reduced the dignity of a constitutional office to a mere party letterhead, has now turned the Speaker’s post into nothing short of a political appointment.
A person occupying the office of the Speaker is expected to first resign from party membership and remain impartial. However, the fact that the Speaker himself has met the Congress State in-charge to offer a “gesture of gratitude” raises serious questions about his functioning and impartiality.
This meeting sends a disturbing signal that, from now on, the proceedings of the House may be conducted under the directions of the Congress high command.
@RahulGandhi@DKShivakumar
ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತರುವ ಎಲ್ಲ ಯೋಜನೆಗಳಲ್ಲಿ " ಇತರೆ" ವೆಚ್ಚಗಳು ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಹೆಚ್ಚುವರಿಯಾಗಿ ಈಗ 7% "ministers charge " ಎಂಬ ಹೊಸದಾದ ಇತರೆ ವೆಚ್ಚ ಸೇರ್ಪಡೆಯಾಗಿದೆ. ಭ್ರಷ್ಟಾಚಾರ ಹೊಸ ರೂಪದಲ್ಲಿ ಅನಾವರಣವಾಗುತ್ತಿರುವ ಬಗೆಯನ್ನು ಕಾಂಗ್ರೆಸ್ ಶಾಸಕ ಅಶೋಕ ಕುಮಾರ್ ರೈ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕೆಆರ್ ಐಡಿಎಲ್ ನಲ್ಲಿ ನಡೆಯುವ ಕರ್ಮಕಾಂಡದ ಬಗ್ಗೆ ಅಶೋಕ ರೈ ಬರೆದ ಪತ್ರ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಲೂಟಿ ಹೊಡೆಯಲು ನಿಂತಿರುವುದಕ್ಕೆ ದೃಷ್ಟಾಂತವಾಗಿದ್ದು, ಪೇಮೆಂಟ್ ಕೋಟಾದಲ್ಲಿ ಬಂದ ಸಂಪುಟ ಸದಸ್ಯರ ಡಕಾಯಿತಿ ಪ್ರಾರಂಭವಾಗಿದೆ. @DKShivakumar
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಆರೋಪಿ ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಭಾರತೀಯ ಜನತಾ ಪಕ್ಷ ಸದನದಲ್ಲಿ ನಡೆಸಿದ ನಿರಂತರ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಪರಿಶಿಷ್ಟ ಪಂಗಡದ ಹಣ ನುಂಗಿದ ನಾಗೇಂದ್ರ ಈಗ ತಾನು ದಲಿತ ಎಂಬ ಕಾರಣ ನೀಡಿ ತನಿಖೆಯಿಂದ, ನ್ಯಾಯಾಲಯದ ಆದೇಶದಿಂದ ತಪ್ಪಿಸಿಕೊಳ್ಳುವುದನ್ನು ಸಂವಿಧಾನ ಒಪ್ಪದು.
ಹಗರಣದ ಹೊಣೆ ಹೊತ್ತು ಈ ಹಿಂದೆ ರಾಜೀನಾಮೆ ನೀಡಿದ್ದ ಬಿ. ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿದ್ದು ಕಾಂಗ್ರೆಸ್ ಹೈಕಮಾಂಡ್ ಮಾತ್ರವಲ್ಲ ಸಿಎಂ @DKShivakumar ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಭಂಡತನಕ್ಕೆ ಸಾಕ್ಷಿಯಾಗಿತ್ತು. ಆ ಭಂಡತನವನ್ನು ನಾವು ಸಂಸದೀಯ ವ್ಯವಸ್ಥೆಯಲ್ಲೇ ಭೇದಿಸಿ, ಬಗ್ಗಿಸಿದ್ದೇವೆ.
ಭ್ರಷ್ಟಾಚಾರದ ಬಗ್ಗೆ ‘ಶೂನ್ಯ ಸಹಿಷ್ಣುತೆ’ ಎಂದ ಸಿಎಂ ಡಿ.ಕೆ.ಶಿವಕುಮಾರ್ ಅವರು, ಭ್ರಷ್ಟ ನಾಗೇಂದ್ರನನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದೇ ಇನ್ನೊಂದು ದೊಡ್ಡ ಭ್ರಷ್ಟಾಚಾರವಾಗಿತ್ತು. ಜನರ ಹಣಕ್ಕೆ ಲೆಕ್ಕ ಕೇಳುವ ಬದಲು, ಆರೋಪ ಹೊತ್ತವರಿಗೇ ಅಧಿಕಾರದ ರಕ್ಷಾಕವಚ ನೀಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂಬುದು ಅರಿವಾಗುತ್ತದ್ದಂತೆ ನಾಗೇಂದ್ರ ರಾಜೀನಾಮೆ ಪಡೆದು ಕಾಂಗ್ರೆಸ್ ಮುಖ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದೆ.
ನಾವು ಸದನದಲ್ಲಿ ಮೊದಲ ದಿನ ಈ ವಿಚಾರ ಪ್ರಸ್ತಾಪಿಸಿದಾಗಲೇ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದರೆ, ಬರ, ಕೆಪಿಎಸ್ ಸಿ ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವುದಕ್ಕೆ ಅವಕಾಶವಾಗುತ್ತಿತ್ತು. ಆದರೆ ಸರ್ಕಾರ ಹರಿಬಿರಿಯಲ್ಲಿ ಕಲಾಪ ಮೊಟಕುಗಳಿಸಿ ಚರ್ಚೆಯಿಂದ ತಪ್ಪಿಸಿಕೊಂಡಿತು. ಭ್ರಷ್ಟರ ಪೋಷಣೆಗೆ ಕಾಂಗ್ರೆಸ್ ಕಲಾಪ ನುಂಗಿದ್ದನ್ನು ಜನ ಕ್ಷಮಿಸುವುದಿಲ್ಲ. @INCKarnataka
Two Home Ministers, one organization…! Mr. Priyank Kharge, the Home Minister who spews hatred against the RSS day in and day out, here is what you have written about the organization in the Assembly. In the Legislative Council, Priyank has stated that no untoward incident has taken place and no case has been registered during RSS shakhas or path sanchalans. In 2025, the then Home Minister Dr. G. Parameshwara had given the exact same answer.
‘Goebbels Congress’ leaders, no matter how many lies you tell, you cannot tarnish the values and culture of the RSS.”
@PriyankKharge@DrParameshwara@RahulGandhi
ಇಬ್ಬರು ಗೃಹ ಸಚಿವರು, ಸಂಘಟನೆ ಒಂದೇ...!
RSS ಸಂಘಟನೆ ಬಗ್ಗೆ ದಿನಬೆಳಗಾದರೆ ದ್ವೇಷ ಕಕ್ಕುವ ಗೃಹ ಸಚಿವ ಪ್ರಿಯಾಂಕ ಖರ್ಗೆಯವರೇ ಸದನದಲ್ಲಿ ಸಂಘದ ಬಗ್ಗೆ ಬರೆದ ಷರಾ ಇದು.
RSS ಶಾಖೆ ಹಾಗೂ ಪಂಥ ಸಂಚಲನ ದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಪ್ರಿಯಾಂಕ್ ವಿಧಾನ ಪರಿಷತ್ತಿನಲ್ಲಿ ಉತ್ತರಿಸಿದ್ದಾರೆ.
2025 ರಲ್ಲಿ ಅಂದಿನ ಗೃಹ ಸಚಿವ ಡಾ.ಜಿ.ಪರಮೇಶ್ವರ ಕೂಡಾ ಇದೇ ಉತ್ತರ ನೀಡಿದ್ದರು.
"ಗೊಬೆಲ್ಸ್ ಕಾಂಗ್ರೆಸ್" ನಾಯಕರೇ ನೂರು ಸುಳ್ಳು ಹೇಳಿದರು ಸಂಘದ ಸಂಸ್ಕಾರಕ್ಕೆ ಧಕ್ಕೆ ತರಲಾಗದು.
ಭಾರತದ ಯುಪಿಐ ಪಯಣಕ್ಕೆ 10 ವರ್ಷಗಳ ಸಂಭ್ರಮ !
ಒಂದು ಸರಳ QR ಸ್ಕ್ಯಾನ್ನಿಂದ ಪ್ರಾರಂಭವಾದ ಭಾರತದ ಯುಪಿಐ ಪಯಣ ಇಂದು ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದೆ.
UPI ಭಾರತದ ಪಾವತಿ ವಿಧಾನವನ್ನು ಮಾತ್ರ ಬದಲಾಯಿಸಲಿಲ್ಲ. ಅದು ವ್ಯವಹಾರಗಳಿಗೆ ಡಿಜಿಟಲ್ ಹೆಜ್ಜೆಗುರುತುಗಳನ್ನು ರಚಿಸಿ, ಡಿಜಿಟಲ್ ಪಾವತಿಗಳಲ್ಲಿ ನಂಬಿಕೆಯನ್ನು ಬೆಳೆಸಿ, ಸಾಲಕ್ಕೆ ಹೊಸ ಮಾರ್ಗಗಳನ್ನು ಸಕ್ರಿಯಗೊಳಿಸಿ, ಹೆಚ್ಚಿನ ಜನರನ್ನು ಬ್ಯಾಕಿಂಗ್ನತ್ತ ಸೆಳೆಯುವುದರೊಂದಿಗೆ ಭಾರತದಾದ್ಯಂತ ಡಿಜಿಟಲ್ ಅಳವಡಿಕೆಯನ್ನು ಪ್ರೋತ್ಸಾಹಿಸುತ್ತಿದೆ.
#10YearsOfUPI