ಡಬಲ್ ಇಂಜಿನ್ ಸರ್ಕಾರದಿಂದ ಭರಪೂರ ಅಭಿವೃದ್ಧಿಯಾಗುತ್ತದೆ, ಆಲ್ಲೂ ಬಿಜೆಪಿ, ಇಲ್ಲೂ ಬಿಜೆಪಿ, ಅನುದಾನದ ಹೊಳೆಯೇ ಹರಿಯುತ್ತದೆ ಎಂದವರು ಈಗ ಕೇಂದ್ರದಿಂದ ಅನುದಾನ, ತೆರಿಗೆ ತರಲಾಗದೆ ಜನರನ್ನ ಸುಲಿಗೆ ಮಾಡಿ ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಿರುವುದು ನಾಚಿಕೆಗೇಡು.
ಇಷ್ಟು ದಿನ ಮಾಡಿದ್ದು ಯಾರ ಅಭಿವೃದ್ಧಿ? ಯಾವ ಅಭಿವೃದ್ಧಿ? @BJP4Karnataka?
ಕಳೆದ ಎರಡು ಅಲೆಗಳು ಜನರಿಗೆ ನರಕದರ್ಶನ ಮಾಡಿಸಿವೆ, ಆಕ್ಸಿಜನ್, ಬೆಡ್ಗಳ ಕೊರತೆಯಿಂದಾದ ಸಾವು ನೋವುಗಳು ಇನ್ನೂ ಕಣ್ಣ ಮುಂದಿದೆ.
ಇನ್ನೂ ಸಹ ಆರೋಗ್ಯ ಕ್ಷೇತ್ರವನ್ನು ಸದೃಢಗೊಳಿಸುವಲ್ಲಿ ಸರ್ಕಾರ ಗಮನಿಸದಿರುವುದು ಶೋಚನೀಯ ಸಂಗತಿ.
@mla_sudhakar ಅವರೇ, ಆಕ್ಸಿಜನ್ ಘಟಕಗಳು ಸನ್ನದ್ಧವಾಗಲು ಇನ್ನೆಷ್ಟು ಹೆಣಗಳು ಬೀಳಬೇಕೆಂದು ಬಯಸುತ್ತಿದ್ದೀರಿ?
ಮಾಸ್ಕ್ ಧರಿಸದ ಜನಸಾಮಾನ್ಯರನ್ನು ಎಡಬಿಡದೇ ಕಾಡಿ ದಂಡ ವಸೂಲಿ ಮಾಡುವ ಸರ್ಕಾರ ಸಚಿವ ಉಮೇಶ್ ಕತ್ತಿ ಅವರಿಗೆ ದಂಡ ಹಾಕುವುದಿಲ್ಲವೇ?
ಈ ದೇಶದ ಯಾವುದೇ ಕಾನೂನು ಬಿಜೆಪಿಗರಿಗೆ ಅನ್ವಯಿಸುವುದಿಲ್ಲವೇ?
ತಮ್ಮದೇ ಸರ್ಕಾರದ ನಿಯಮಗಳನ್ನು ಪಾಲಿಸದೆ, ಮಾಸ್ಕ್ ವಿಚಾರದಲ್ಲಿ ಧಿಮಾಕಿನಿಂದ ಉತ್ತರಿಸುವ ಇವರು ಜನತೆಗೆ ಯಾವ ಸಂದೇಶ ಕೊಡಲು ಹೊರಟಿದ್ದಾರೆ?
ಟೆಲಿಪ್ರಾಂಪ್ಟರ್ ಇಲ್ಲದೆ ಒಂದೇ ಒಂದು ಮಾತೂ ಹೊರಡದು!
ಕ್ಯಾಮರಾ ಇಲ್ಲದೆ ಒಂದೇ ಒಂದು ಹೆಜ್ಜೆಯೂ ಮುಂದಿಡಲಾಗದು!
ಕಲರ್ ಕಲರ್ ಬಟ್ಟೆ ಇಲ್ಲದೆ ಒಂದೇ ಒಂದು ಕಾರ್ಯಕ್ರಮವೂ ನಡೆಯದು!
ಭಾರತದ ಪ್ರಧಾನಿಗೆ ಮಾತನಾಡಲು ಬರುವುದಿಲ್ಲವೆಂದು ವಿಶ್ವ ವೇದಿಕೆಯಲ್ಲಿ ದೇಶಕ್ಕೆ ಮುಜುಗರ ತಂದ ಮೊದಲ ಪ್ರಧಾನಿ,
ಭಾರತೀಯರು ತಲೆ ತಗ್ಗಿಸುವ ದುಸ್ಥಿತಿ.
ದಲಿತರ ಮನೆಯನ್ನು ಬಿಜೆಪಿಯವರು ಫೋಟೋಶೂಟ್ ನ���ೆಸುವ ಸ್ಟುಡಿಯೋ ಎಂದು ಭಾವಿಸಿಸಿದ್ದಾರೆ.
ನಿರಂತರವಾಗಿ ದಲಿತರ ಮೇಲಿನ ಹಲ್ಲೆ, ದೌರ್ಜನ್ಯವನ್ನು 'ಮೌನ'ದ ಮೂಲಕ ಪ್ರೋತ್ಸಾಹಿಸುತ್ತಾ ಬಂದ ಬಿಜೆಪಿಯವರು ಚುನಾವಣೆಯ ಸಂದರ್ಭದಲ್ಲಿ 'ಊಟದ ನಾಟಕ'ಕ್ಕೆ ವೇದಿಕೆ ಮಾಡಿಕೊಂಡಿದ್ದಾರೆ.
ಬಿಜೆಪಿಗೆ ಬೇಕಿರುವುದು ದಲಿತರ ಹಿತವಲ್ಲ, ಮತ ಮಾತ್ರ.
ಪೆನ್ನಿಗೂ ಚಡ್ಡಿ ತೊಡಿಸುವ ಕೆಲಸ ನಡೆದಿದ್ದು ಗುಟ್ಟಾಗಿ ಏನೂ ಉಳಿದಿಲ್ಲ, ಈಗಾಗಲೇ ಹಲವು ಮಾಧ್ಯಮಗಳು ಗಣವೇಷ ತೊಟ್ಟು ನರ್ತಿಸುತ್ತಿವೆ!
ಈಗ RSS ಕಾರ್ಯಕ್ರಮದ ವರದಿಗೆ ತೆರಳಿದ ಪತ್ರಕರ್ತರಿಗೆ ಅಕ್ಷರಶಃ ಗಣವೇಷ ಹಾ���ಬೇಕು ಎಂಬ ಹುಕುಂ!
ದೇಶದಲ್ಲಿ ನಿಷೇಧಕ್ಕೊಳಪಟ್ಟಿದ್ದ ಜೀವವಿರೋಧಿಗಳ ಕೂಟದಿಂದ ವ್ಯವಸ್ಥೆಯನ್ನು ಮುಕ್ತಿಗೊಳಿಸಬೇಕಿದೆ.
ಮೇಕೆದಾಟು ಪಾದಯಾ��್ರೆ ತಡೆಯಲು ಕೋವಿಡ್ ರೂಲ್ಸ್ ಬಗ್ಗೆ ಮಾತನಾಡುವ @BJP4Karnataka ನಾಯಕರು, ಶಿವಮೊಗ್ಗದಲ್ಲಿ ನಡೆದಿದ್ದ ತಮ್ಮ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಏನು ಮಾಡುತ್ತಿದ್ದರು?
ಆ ಸಭೆಯ ನಂತರ ಕಟೀಲ್, R ಅಶೋಕ್, CM, ಸಚಿವ ನಾಗೇಶ್ ಎಲ್ಲರಿಗೂ ಕೊರೋನಾ ಬಂದಿದೆ.
ಇವರ ಈ ಸಭೆಯಿಂದಲೇ ಇಡೀ ಕರ್ನಾಟಕದಲ್ಲಿ ಇಂದು ಕೋವಿಡ್ ಸ್ಪೋಟವಾಗಿದೆ.
ಮೋದಿಯವರ ಪೂರ್ವನಿಯೋಜಿತ ನಾಟಕವನ್ನ ದಾಳಿಗೆ ಸಂಚು ಎಂದು ಬಿಜೆಪಿಗರು ಬಿಂಬಿಸುತ್ತಿದ್ದಾರೆ
'ದಾಳಿಗೆ ಸಂಚು' ಎಂದಾದರೆ ಇದುವರೆಗೂ ಒಬ್ಬರನ್ನೂ ಬಂಧಿಸಿಲ್ಲವೇಕೆ❓
ದಾಳಿಕೋರರು ಯಾರೆಂದು ಹೇಳುತ್ತಿಲ್ಲವೇಕೆ❓
ಆ ದಾಳಿಕೋರರು ಬಿಜೆಪಿ ಕಾರ್ಯಕರ್ತರೇ❓
ಹಿಂದೆ ಪ್ರಧಾನಿಯಾದವರು ಆಡಳಿತ ಮಾಡುತ್ತಿದ್ದರು, ಈಗಿನವರು ಪ್ರೋಪಾಗಂಡ�� ಮಾಡುತ್ತಿದ್ದಾರೆ!
ಬಿಜೆಪಿ ಕೇವಲ ಪಾದಯಾತ್ರೆ ತಡೆಯುವ ದ್ವೇಷ ರಾಜಕೀಯಕ್ಕಾಗಿ ಇಡೀ ರಾಜ್ಯದ ಜನರನ್ನು ಹಿಂಸಿಸುತ್ತಿದೆ.
ವೀಕ್ ಎಂಡ್ ಲಾಕ್ಡೌನ್ ಎಂಬ ನಾಟಕದ ಮೂಲಕ ಈಗಾಗಲೇ ಕಷ್ಟದಲ್ಲಿರುವ ವ್ಯಾಪಾರಸ್ತರ, ಉದ್ಯೋಗಸ್ತರ ಗಾಯದ ಮೇಲೆ ಬರೆ ಎಳೆಯುತ್ತಿದೆ.
ವಾರಾಂತ್ಯದ ವ್ಯಾಪಾರ ವಹಿವಾಟುಗಳನ್ನು ನಂಬಿಕೊಂಡಿರುವವರ ನಷ್ಟಕ್ಕೆ ಹೊಣೆ ಯಾರು @BJP4Karnataka?
ಬಿಜೆಪಿ ಸರ್ಕಾರದ ಅಡಳಿತಾದುದ್ದಕ್ಕೂ ಕೇಳಿಬರುತ್ತಿರುವುದು ಕೆಲವೇ ಸಂಗತಿಗ��ು.
40% ಕಮಿಷನ್
ಸಂಪುಟ ರಚನೆ
ನಾಯಕತ್ವ ಬದಲಾವಣೆ
ಸಂಪುಟ ಪುನರ್ರಚನೆ
ಖಾತೆ ಬದಲಾವಣೆ
ಖಾತೆಗಾಗಿ ಕ್ಯಾತೆ
ಸಿಎಂ ಬದಲಾಗಿ 6 ತಿಂಗಳು ಕಳೆದಿಲ್ಲ, ಆಗಲೇ ಮಂತ್ರಿಗಳ ಬದಲಾವಣೆಗೆ ಮುಂದಾಗುವ @BJP4Karnataka ಆಡಳಿತದ ನಿಷ್ಕ್ರೀಯತೆಯನ್ನು ಅವರೇ ಒಪ್ಪಿಕೊಳ್ಳುತ್ತಿದ್ದಾರೆ.
◆ ಗಲ್ವಾನ್ ಕಣಿವೆಯಲ್ಲಿ ಚೀನಾ ಬಾವುಟ ಹಾರಿಸಿತು - ಮೋದಿ ಮೌನ
◆ ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಾದಿಂದ ಮರುನಾಮಕರಣ - ಮೋದಿ ಮೌನ
◆ ಚೀನಾದಿಂದ 20 ಭಾರತೀಯ ಯೋಧರ ಹತ್ಯೆಗೆ - ಮೋದಿ ಮೌನ
ಟಿಕ್ ಟಾಕ್ ಬ್ಯಾನ್ ಮಾಡಿ, ಚೀನಾಗೆ ಕ್ಲೀನ್ ಚಿಟ್ ಕೊಟ್ಟವರಿಗೆ 'ಚೀನಾ' ಎಂಬ ಹೆಸರು ಹೇಳಲೂ ಭಯ! ಇಂತಹ ನಕ��ಿ ಚೌಕಿದಾರರಿಂದ ರಕ್ಷಣೆ ಅಸಾಧ್ಯ.
ಪೆಟ್ರೋಲಿಗೆ 100+
ಡೀಸೆಲ್ಗೆ 100
ತರಕಾರಿಗಳು 100+
ಗ್ಯಾಸ್ ಬೆಲೆ 1000+
ಎಟಿಎಂ ಶುಲ್ಕ ₹21 ಏರಿಕೆ
ಚಪ್ಪಲಿ, ಬಟ್ಟೆ ತೆರಿಗೆ ಏರಿಕೆ
ಮಾಡೋದಿಕ್ಕೆ ಉದ್ಯೋಗವಿಲ್ಲ
ನೋವು ಹೇಳಲು ಸಾಧ್ಯವಿಲ್ಲ
ನಿಮ್ಮ ಭಕ್ತರ ಸ್ಥಿತಿ ಹೀಗಿರುವಾಗ ನಿಮ್ಮ ಪಾರ್ಟಿ ಫಂಡ್ಗೆ 1000 ರೂಪಾಯಿ ಹೇಗೆ ಕೊಡ್ತಾರೆ ಮೋದಿ��ಿ!?
ಒಂದು ಗ್ಯಾಸ್ ಸಿಲಿಂಡರ್ನ ಬೆಲೆ ಅದು!
✅ಕೋಟ್ಯಾಧಿಪತಿ ಉದ್ಯಮಿಗಳ
- ಕಾರ್ಪೊರೇಟ್ ತೆರಿಗೆ ಕಡಿತ
- ಬ್ಯಾಂಕ್ ಸಾಲಗಳಿಗೆ NPA ಎಂಬ ಎಳ್ಳುನೀರು
✅ಮೋದಿಯ
- ಐಷಾರಾಮಿ ವಿಮಾನಕ್ಕೆ 8000 ಕೋಟಿ
- ಹೊಚ್ಚ ಹೊಸ ಕಾರಿಗೆ 12 ಕೋಟಿ
❌ಆದರೆ ಜನಸಾಮಾನ್ಯರ
- ಬಟ್ಟೆ, ಚಪ್ಪಲಿಗೆ ತೆರಿಗೆ ಬರೆ
ಇದು ಬಡವರ ದೋಚಿ ಸಿರಿವಂತರಿಗೆ ನೀಡುವ 'ರಿವರ್ಸ್ ರಾಬಿನ್ಹುಡ್' ಮೋದಿಯ ಹೊಸ ವರ್ಷದ ಗಿಫ್ಟ್!
ಬಿಜೆಪಿ ಸರ್ಕಾರ ತನ್ನ ಇಡೀ ಅಧಿಕಾರಾವಧಿಯನ್ನು ಖಾತೆ ಹಂಚಿಕೆ, ಖಾತೆ ಬದಲಾವಣೆ, ಸಂಪುಟ ವಿಸ್ತರಣೆ, ನಾಯಕತ್ವ ಬದಲಾವಣೆ, ಕಚ್ಚಾಟ, ಕಿತ್ತಾಟಗಳಲ್ಲಿಯೇ ಕಳೆದಿದೆ.
ಇದುವರೆಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು ನೇಮಿಸದೆ ಕಾಲ ತಳ್ಳುತ್ತಿದ್ದಾರೆ,
ಬೊಮ್ಮಾಯಿಯವರೇ, ನಿಮ್ಮ ಕುರ್ಚಿ ಭದ್ರ ಮಾಡಿಕೊಳ್ಳುವುದೊಂದೇ ಯೋಚನೆಯೇ ತಮಗೆ?
ಆಡಳಿತಾರೂಢ ಪಕ್ಷವನ್ನು ತಿರಸ್ಕರಿಸಿದ್ದಾರೆ ಎಂದರೆ ಬಿಜೆಪಿಯ ದುರಾಡಳಿತದಿಂದ ಜನತೆ ರೋಸಿ ಹೋಗಿರುವುದಕ್ಕೆ ನಿದರ್ಶನ.
✔️ಗ್ರಾಮ ಪಂಚಾಯತ್
✔️ವಿಧಾನ ಪರಿಷತ್
✔️ಸ್ಥಳೀಯ ಸಂಸ್ಥೆಗಳು
ಎಲ್ಲದರಲ್ಲೂ ಅತಿ ಹೆಚ್ಚು ಮತಗ��ಿಕೆ ಕಾಂಗ್ರೆಸ್ನದ್ದು.
@BJP4Karnataka ತಮ್ಮ ಗಂಟು ಮೂಟೆ ಕಟ್ಟಿಕೊಂಡು ವಿಧಾನಸೌದ ಖಾಲಿ ಮಾಡಲು ಸಜ್ಜಾಗಿದೆ!
ಬಿಜೆಪಿ ವರಿಷ್ಠರಿಗೆ ರಾಜ್ಯದಲ್ಲಿ ಬಿಜೆಪಿಯ ಕೊನೆ ದಿನಗಳ ಸೂಚನೆ ಸಿಕ್ಕಿದೆ!
◆ಮಿತಿಮೀರಿದ ಭ್ರಷ್ಟಾಚಾರ
◆ನಿಷ್ಕ್ರೀಯ ಆಡಳಿತ ಯಂತ್ರ
◆ಹಗರಣಗಳ ಸ���ಮಾಲೆ
◆ಆರ್ಥಿಕ ದಿವಾಳಿತನ
◆ಸಾಲು ಸಾಲು ವೈಫಲ್ಯ
◆ಆಂತರಿಕ ಕಿತ್ತಾಟ
◆ಜನರಲ್ಲಿ ಬಿಜೆಪಿ ವಿರೋಧಿ ಅಲೆ
ಹೀಗಾಗಿ ಬೊಮ್ಮಾಯಿಯವರಿಗೆ ಅಂತಿಮ ಟಾಸ್ಕ್ ನೀಡಿ ಆಟಕ್ಕೆ ಬಿಟ್ಟಿದ್ದಾರೆ!!
◆ಆರೋಗ್ಯ ಕ್ಷೇತ್ರದಲ್ಲಿ ಕುಸಿತ
◆ಹೆಚ್ಚುತ್ತಿರುವ ಅಪೌಷ್ಟಿಕತೆ
◆ಹೆಚ್ಚಿದ ಮಕ್ಕಳ ಸಾವು
◆ಸಾಂಕ್ರಾಮಿಕ ರೋಗಗಳ ದಾಳಿ.
@mla_sudhakar ಅವರೇ, ��ಿಮ್ಮ ಇಲಾಖೆ ಅನಾರೋಗ್ಯದಲ್ಲಿದ್ದರೂ ನಿಮ್ಮ ಭ್ರಷ್ಟಾಚಾರ ಮಾತ್ರ ಪೌಷ್ಟಿಕವಾಗಿ ಬೆಳೆಯುತ್ತಿದೆ.
ಉತ್ತರ ಪ್ರದೇಶವೇ ನಿಮಗೆ ಮಾಡೆಲ್ ಆಗಿರುವಾಗ ಮಕ್ಕಳ ಸಾವಿಗೆ ನಿಮ್ಮ ಮನ ಕರಗದು ಅಲ್ಲವೇ?
ಬಿಟ್ ಕಾಯಿನ್ ಹಗರಣವನ್ನು ಮುಚ್ಚಿ ಹಾಕಲು ಸ��್ಕಾರದ ಶತಪ್ರಯತ್ನಗಳು ಒಂದೊಂದೇ ಹೊರಬರುತ್ತಿವೆ.
ಸಿಐಡಿಗೆ ಶ್ರೀಕಿಯ ಹಾರ್ಡ್ಡಿಸ್ಕ್ ಪಾಸ್ವರ್ಡ್ಗಳನ್ನ ತಪ್ಪಾಗಿ ಕೊಟ್ಟಿದ್ದೇಕೆ❓ಯಾರ ಆದೇಶದ ಮೇರೆಗೆ❓ಯಾರನ್ನು ರಕ್ಷಿಸಲು❓ತನಿಖೆ ನಡೆಸಲು ಇಚ್ಛಾಶಕ್ತಿ ಏಕಿಲ್ಲ❓
@BSBommaiಅವರೇ, ಈ ಪ್ರಯತ್ನಗಳೆಲ್ಲವೂ ನಿಮ್ಮ ಕುರ್ಚಿ ಉಳಿಸಿಕೊಳ್ಳಲೆಂದೇ?
ಇಡೀ ಸರ್ಕಾರವೇ ಬೆಳಗಾವಿಯಲ್ಲಿದೆ, ಹಾಗೆಯೇ ಇಡೀ ಪುಂಡರ ತಂಡವೇ ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸುತ್ತಿದೆ.
ಒಂದು ವಾರವಾದರೂ ನಾಡವಿರೋಧಿ ಚಟುವಟಿಕೆಯನ್ನು ಹದ್ದುಬಸ್ತಿಗೆ ತಂದು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ, ಇದು ಗೃಹ ಇಲಾಖೆಯ ವೈಫಲ್ಯವಲ್ಲವೇ?
ಅಥವಾ ಇದೆಲ್ಲವೂ ಸರ್ಕಾರಿ ಪ್ರಾಯೋಜಿತವೇ @BJP4Karnataka?
ಬೊಮ್ಮಾಯಿಯವರು ಸಿಎಂ ಆದಮೇಲೆ ರಾಜ್ಯ ಸುತ್ತಿದ್ದಕ್ಕಿಂತ ದೆಹಲಿ ಸುತ್ತಿದ್ದೇ ಹೆಚ್ಚು!
ಮಳೆ ಹಾನಿಯಿಂದ ರೈತರು ಕಷ್ಟದಲ್ಲಿದ್ದಾರೆ, ಓಮಿಕ್ರಾನ್ ವೈರಸ್ ಆತಂಕ ಸೃಷ್ಟಿಸಿದೆ, ರಾಜ್ಯದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ.
ಆದರೆ ಸಿಎಂಗೆ ಕುರ್ಚಿ ಭದ್���ಪಡಿಸಿಕೊಳ್ಳುವುದು, ಆಂತರಿಕ ಕಲಹ ನಿಭಾಯಿಸುವುದು, ವರಿಷ್ಠರ ಓಲೈಸುವುದೇ ಅವರ ಆದ್ಯತೆಯಾಗಿದೆ.