ಕೋರಾ, ರೆಡಿಟ್ ಮೊದಲಾದ ಕಡೆ (ಇನ್ನು ವಿಕಿಪೀಡಿಯ ಬಗ್ಗೆ ಕೇಳಲೇಬೇಡಿ!) ಬಾಯಿಗೆ ಬಂದ ಹಾಗೆ ಬರೆಯುವ ಪ್ರಕಾಂಡಪಂಡಿತರ ಉತ್ತರಗಳನ್ನು ನೋಡಿ ಈ ಪುಟ್ಟ ಬರಹ ಬರೆಯಬೇಕಾಯಿತು. ಎಲ್ಲವನ್ನೂ ಬೇರೆ ಗುಂಪುಗಳಿಗೆ ಮುಂದೂಡುವಂತೆ, ಇದನ್ನೂ ಸ್ವಲ್ಪ ಮುಂದೂಡಿ 🙂. ಕೆಲವು ಆಸಕ್ತರಾದರೂ ಸರಿ ದಾರಿ ಹಿಡಿಯಬಹುದು!
ಸಂಸ್ಕೃತವು "ಕಟ್ಟಿದ""ಕೃತಕ"ಭಾಷೆ,ಅದಕ್ಕೆ ಇರುವ ವ್ಯಾಕರಣ ನಿಯಮಗಳೇ ಸಾಕ್ಷಿ. ಪ್ರಾಕೃತಗಳನ್ನು ಸೋಸಿ ಸಂಸ್ಜೃತ ಮಾಡ��ಾಗಿ ವ್ಯಾಕರಣ ನಿಯಮಗಳನ್ನ ಹೇರಲಾಯಿತು ಅನ್ನುವ ಒಂದು ತಪ್ಪು ಕಲ್ಪನೆ ಜನರಲ್ಲಿ ಹರಡಿದೆ. ಹಾಗೆಂದರೆ ಪ್ರಾಕೃತ ಭಾಷೆಗಳಿಗೆ - ಅಥವಾ ಅದನ್ನೇ ಇನ್ನೂ ವಿಸ್ತರಿಸಿ ನೋಡಿದರೆ ಕನ್ನಡ, ತುಳು, ಕೊಡವ ಇಂಥ ಭಾಷೆಗಳಿಗೆ ವ್ಯಾಕರಣ ನಿಯಮಗಳಿಲ್ಲವೇ? ಇದ್ದೇ ಇದೆ. ಎಲ್ಲ ಭಾಷೆಗಳಿಗೂ ಅವುಗಳವುಗಳ ನಿಗದಿತ ಚೌಕಟ್ಟು ಇದ್ದೇ ಇರುತ್ತೆ. ಅದನ್ನೇ ವ್ಯಾಕರಣ ಅನ್ನುತ್ತೇವೆ ಅಷ್ಟೇ!
ಸಂಸ್ಕೃತ ಜನಸಾಮಾನ್ಯರು ಮಾತಾಡುವ ಸಮಯದಲ್ಲೇ ಪ್ರಾಕೃತ ಗಳನ್ನೂ ಮಾತಾಡುತ್ತಿದ್ದರು ಎನ್ನುವುದು ಸತ್ಯವೇ. ಅದು ಹೇಗೆ ಎಂಬ ಪ್ರಶ್ನೆ ಬಂದರೆ ಅವೆಲ್ಲ ಉಪಭಾಷೆಗಳು, ಹಾಗೂ ಒಬ್ಬ ವ್ಯವಹಾರ ಮಾತಾಡುತ್ತಿದ್ದ ಉಪಭಾಷೆ ಯಾವುದಾಗಿದ್ದರೂ, ಸಂಸ್ಕೃತ ಮತ್ತು ಉಳಿದ ಉಪಭಾಷೆಗಳು ಅರ್ಥ ವಾಗುತ್ತಿದ್ದವು ಎಂದೇ ತಿಳಿಯಬೇಕಾಗುತ್ತೆ. ಸಂಸ್ಕೃತನಾಟಕಗಳೇ ಇದಕ್ಕೆ ಸಾಕ್ಷಿ. ಇವುಗಳಲ್ಲಿ ಸುಮಾರು ೫೦-೬೦% ಭಾಗ ಪ್���ಾಕೃತಗಳಲ್ಲೇ ಇರುತ್ತವೆ. ಅಂದರೆ ಕಾಳಿದಾಸ ಒಬ್ಬ ಸಂಸ್ಕೃತಕವಿಯಷ್ಟೇ ಅಲ್ಲ, ಅವನು ಪ್ರಾಕೃತ ಕವಿ ಕೂಡ!
ಸರಳವಾದ, ಒಂದು ಉದಾಹರಣೆಗೆ :
ನಾ ಹೋಗ್ತೀನಿ
ನಾನು ಹೋಗ್ತೀನಿ
ನಾನು ಓಯ್ತೀನಿ
ನಾನೋಯ್ತೀನಿ
ನಾವೋಯ್ತೀವಿ
ನಾನು ಹೋಗುತ್ತೇನೆ
ನಾನೋಗ್ತೀನಿ
ನಾ ಓಗ್ತೀನಿ
ನಾವೋಗ್ತೀವಿ
ನಾನೋಗ್ತೀನಿ
ನಾನ್ಹೋಗ್ತೀನಿ
ಇಷ್ಟು ಸಾಲುಗಳು ಸಾಮಾನ್ಯವಾಗಿ ಕರ್ನಾಟಕದಲ್ಲಿರುವ ಯಾವ ಕನ್ನಡಿಗನಿಗೂ ಒಂದೇ ಅರ್ಥವೆಂದು ತಿಳಿಯುತ್ತದೆ. ಅಲ್ಲವೆ? ಇದರಲ್ಲಿ, "ನಾನು ಹೋಗುತ್ತೇನೆ " ಎನ್ನುವುದನ್ನು ಸಂಸ್ಕೃತ ಕ್ಕೆ ಸಮಾಂತ��ವಾಗಿ ಇಟ್ಟು ಕೊಂಡರೆ, ಉಳಿದ ರೂಪಗಳನ್ನು ಶೌರಸೇನೀ ಮಹಾರಾಷ್ಟ್ರೀ ಮಾಗಧೀ ಮೊದಲಾದ ಪ್ರಾಕೃತ ಗಳಿಗೆ ಸಮಾಂತರವಾಗಿ ಒಟ್ಟು ಕೊಳ್ಳಬಹುದು.
ಇನ್ನು ಸಂಸ್ಕೃತವೇ ಮಾತಾಡುವ ವಾತಾವರಣ ಇಲ್ಲದ ಕಡೆ, ಸಂಸ್ಕೃತ ಮಾತಾಡುವಂಥವರು ( ಕೇರಳದ ತುತ್ತತುದಿಯಲ್ಲಿ ಎಂದುಕೊಳ್ಳೋಣ) ಸಂಸ್ಕೃತ ಕಲಿತು ಮಾತಾಡುವಾಗ ಅವರು ಬಹುಶಃ ಯಾವುದು ಪಾಣಿನೀಯವೋ, ಗ್ರಂಥಸ್ಥವೋ ಅಂತಹವನ್ನೇ ಕಲಿತು ಬಳಸುತ್ತಿದ್ದರು ಎಂದು ಊಹೆ ಮಾಡಬಹುದು. ನನ್ನ ಮೇಲಿನ ಕನ್ನಡ ಉದಾಹರಣೆಯಲ್ಲಿ ಅದು "ನಾನು ಹೋಗುತ್ತೇನೆ" ಎ���ಬುದಕ್ಕೆ ಸಮ. ಅಂತಹವರಿಗೆ, ನಾನೋಯ್ತೀನೀ ಅಥವಾ ನಾನೋಗ್ತೀನಿ ಎಂದರೆ ಗೊತ್ತಾಗದಿರಲಿಕ್ಕೂ ಸಾಕು. ಕೇವಲ ಪುಸ್ತಕದ ಕನ್ನಡವನ್ನೇ ಕಲಿತವರಿಗೆ , ಕರ್ನಾಟಕದ ಬೇರೆ ಬೇರೆ ಪ್ರಾಂತ್ಯಗಳ ಕನ್ನಡವು ಒಂದುವೇಳೆ ಸರಿಯಾಗಿ ಅರ್ಥವಾಗದೇ ಹೋಗದ ಹಾಗೆ. ಹಾಗಂತ, ಕನ್ನಡ ಒಂದು "ಕಟ್ಟಿದ" ಭಾಷೆ , ಅದರಲ್ಲಿ ಬೇಡವಾದ ವ್ಯಾಕರಣ ನಿಯಮಗಳಿವೆ - ಎನ್ನಲಾಗುತ್ತದೆಯೇ?
ಮಲಯಾಳ, ಇಂಗ್ಲೀಷ್, ಸಂಸ್ಕೃತ ಭಾಷೆಗಳಲ್ಲಿ ಇರುವಂತೆ ಕ್ರಿಯಾಪದಗಳಿಗೆ ಬೇರೆ ಬೇರೆ ಲಿಂಗಗಳಲ್ಲೂ ಒಂದೇ ಪದ ( He comes, She comes, അവൻ വര���ന്നു (Avan varunnu) and അവൾ വരുന്നു (Aval varunnu), सः आगच्छति (Saḥ āgacchati), सा आगच्छति (Sā āgacchati) ಇರುವಂತೆ ಕನ್ನಡದಲ್ಲಿ ಇಲ್ಲದೇ ( ಅವನು ಬರುತ್ತಾನೆ, ಅವಳು ಬರುತ್ತಾಳೆ) ಇರುವುದರಿಂದ ಕನ್ನಡದಲ್ಲಿ "ಕಷ್ಟಕರವಾದ ವ್ಯಾಕರಣ ನಿಯಮಗಳನ್ನು ಇಟ್ಟಿದ್ದಾರೆ" ಎಂದು ಹೇಳಿದರೆ ಎಷ್ಟು ಸರಿ?
ನೀವೇ ಯೋಚಿಸಿ!
-ಹಂಸಾನಂದಿ
#ಕನ್ನಡ #ವ್ಯಾಕರಣ #ಸಂಸ್ಕೃತ #ಪ್ರಾಕೃತ
Namaste All🙏🏻
Prekshaa seeks to promote Sanatana Culture, philosophy & literature with your support. Please donate to help us achieve our mission
PREKSHAA PRATISHTHANA
Ac No: 50200024118791
IFSC: HDFC0001232
Bank: HDFC, Mayur complex, Peenya, Bengaluru
UPI: 9448871438@hdfcbank
“ಹಲವು ವರ್ಷಗಳ ಹಿಂದೆ ನಾನು ನನ್ನ ಹಳ್ಳಿ ಮತ್ತು ಸುತ್ತಣ ಹಳ್ಳಿಗಳಲ್ಲಿ ಕಣ್ಣಾರೆ ನೋಡುತ್ತಿದ್ದ ಸಂಗತಿ: ಒಂದು ಬಸವನ ಮೇಲೆ ಕಟ್ಟಿದ ನಗಾರಿಯ ಸದ್ದು. ಅದನ್ನು ಕೇಳುತ್ತಿದ್ದ ಗ್ರಾಮಸ್ಥರು “ಸಿದ್ಧಗಂಗೆ ಸ್ವಾಮಿಗಳು ಭಿಕ್ಷಕ್ಕೆ ಬಂದ��ರೆ” ಎಂದು ಮನೆಯಿಂದ ಹೊರಗೆ ಬರುತ್ತಿದ್ದರು. ಶಿವಕುಮಾರಸ್ವಾಮಿಗಳಿಗೆ ಆಗ ನಲವತ್ತರ ಪ್ರಾಯ.”
Lightning Robotics had an incredible performance at Belleville High School where they won the prestigious FIRST Impact Award at their competition and qualified for states for the Michigan State competition at Grand Valley State University. Congratulations and good luck team! 🚀
P-CEP's Lightning Robotics Team had the chance to showcase the exciting things they've been working on when Michigan State Representative Ranjeev Puri visited the robotics workshop. Thank you to Representative Puri for taking the time to meet with the Lightning Robotics Team!
ಮೊನ್ನೆ #ಪುರಂದರದಾಸ ರ ಬಗ್ಗೆ, ಅವರ ಮೊದಲೂ #ಕರ್ನಾಟಕಸಂಗೀತ ವಿತ್ತು ಎಂದು ಮಾತಾಡಿದಾಗ, ಮಿತ್ರರೊಬ್ಬರು "ಗಾಳಿಯಲ್ಲಿ ಗುಂಡು ಹಾರಿಸಬೇಡಿ, ಆಧಾರವಿದ್ದರೆ ತೋರಿಸಿ" ಎಂದರು!
ಆಧಾರಕ್ಕೇನು, ಸಾವಿರಾರಿವೆ. ಸ್ಥಾಲೀಪುಲಾಕ���್ಯಾಯದಂತೆ ಪುರಂದರದಾಸರಿಗೇ ಹತ್ತಿರವಾದ ಒಂದನ್ನು ನೋಡೋಣ -
ಹರಿದಾಸ ಪರಂಪರೆಗೇ ಸೇರಿದ, ಅವರಿಗಿಂತ ಸುಮಾರು ೭೫ ವರ್ಷ ಮಾತ್ರ ಹಿರಿಯರಾದ #ಶ್ರೀಪಾದರಾಜ ರ ರಚನೆ ಯೊಂದು ಲಾಲಿಗೋವಿಂದಲಾಲಿ ಎಂದು ಮೊದಲಾಗುತ್ತದೆ.
೨೦ಕ್ಕೂ ಹೆಚ್ಚಿನ ಚರಣಗಳುಳ್ಳ ಈ ಪದದ ಕೆಲವು ಚರಣಗಳಲ್ಲಿ, ರಾಗಗಳ ಹೆಸರು ಹೇಳಿರುವುದನ್ನು ಗಮನಿಸಿ.
ಈ ರಾಗಗಳು ಇಂದಿಗೂ ಕರ್ನಾಟಕ ಸಂಗೀತದಲ್ಲಿ ಸುಪ್ರಸಿದ್ಧವಾಗಿರುವವೇ ಆಗಿದೆ.
ಆಸಕ್ತರಿಗೆಂದು ಆ ಪದದ ಆ ಚರಣಗಳ ಸಾಹಿತ್ಯವನ್ನಿಲ್ಲಿ ಹಾಕಿರುವೆ.
-----------------------------------------------------
ಲಾಲಿ ಗೋವಿಂದ ಲಾಲಿ ಕೌಸಲ್ಯಬಾಲ ಶ್ರೀರಾಮ ಲಾಲಿ ||ಪ||
ಲಾಲಿ ಮುನಿವಂದ್ಯ ಲಾಲಿ ಜಾನಕಿ-ರಮಣ ಶ್ರೀರಾಮ ಲಾಲಿ ||ಅ.ಪ||
ಪ��್ಲವಾಧರೆಯರೆಲ್ಲ ಈ ಶಿಶುವು ತುಲ್ಯವಾರಿಜವೆನುತಲಿ
ಸಲ್ಲಲಿತ ಗಾನದಿಂದ ತೂಗಿದರು ಕಲ್ಯಾಣಿ ರಾಗದಿಂದ ॥೧೭॥
ಆನಂದಸದನದೊಳಗೆ ಗೋಪಿಯರುಆ ನಂದಸುತನ ಕಂಡು
ಆನಂದ ಭರಿತರಾಗಿ ತೂಗಿದರುಆನಂದ ಭೈರವಿಯಿಂದ ||18||
ದೇವಾಧಿದೇವನೆಂದು ಈ ಶಿಶುವುಭಾವನಾತೀತನೆಂದುದೇವ
ಗಂಧರ್ವರ್ಪಾಡಿ ತೂಗಿದರು ದೇವ ಗಾಂಧಾರ ದಿಂದ ||19||
ತುಂಗ ಭವಭಂಗ ಜೋ ಜೋ ಪರಮಾತ್ಮರಂಗ ಕೃಪಾಂಗ ಜೋ ಜೋ
ಮಂಗಳಾಪಾಂಗ ಜೋ ಜೋ ಮೋಹನಾಂಗರಂಗವಿಠಲನೆ ಜೋ ಜೋ ||22||
A note about closely related ragas (of Hindustani & Karnataka Sangeeta) - their similarities and differences:
Here I discuss the ragas Bhinna Shadja, Hemant, Vasanta, Mand and Kannada.
Check it out and share with your musically inquisitive friends. #music#Raga#taxonomy
I could not help stopping Vidwaan Shri Ravindra Attoor to talk about the Arani Manthana ritual. He spoke in chaste Kannada, some of which my English-educated mind was slow to comprehend. However, I was enthralled to find him comparing the whole long-drawn process of manifesting Agni to knowledge-generation in which the rotating wooden unit was like a Shishya (student) and the wooden piece it rubbed against was the Guru. The prolonged friction represented the discussions, debates, hard work, frustration, pain and exhaustion, which would lead to the light of knowledge in the end. Read the full article here: https://t.co/k5sLSmJFSz