Malayali Muslims speaks Malayalam
Tamil Muslims speaks Tamil
Telugu Muslims speaks Telugu
Why Kannada muslims are like this?
Especially in public gathering they should speak Kannada
#Kannada
ಕನ್ನಡ ನೆಲದ ವರಸುತ ಆಂಜನೇಯನ ಆಶೀರ್ವಾದದೊಂದಿಗೆ ಭಾರತ ಇತಿಹಾಸದ ಸರ್ವಶ್ರೇಷ್ಠ ಭಾವವೊಂದನ್ನು ತೆರೆಯ ಮೇಲೆ ತರಲಿದ್ದೇವೆ.
ನಿಮ್ಮೆಲ್ಲರ ಪ್ರೀತಿ ಬೆಂಬಲ ಆಶೀರ್ವಾದ ಎಂದಿನಂತೆ ಸದಾ ಇರಲಿ - ಜೈ ಹನುಮಾನ್
A vow from the Tretayuga, bound to be fulfilled in the Kaliyuga🙏
We bring forth an epic of loyalty, courage and devotion❤️🔥
Extremely happy to collaborate with Director @prasanthvarma and Producers @mythriofficial
#Jaihanuman #Jaishreeram #Blessed
#JaiHanumanFirstlook #HappyDiwali
A hundred million on @X!
Happy to be on this vibrant medium and cherish the discussion, debate, insights, people’s blessings, constructive criticism and more.
Looking forward to an equally engaging time in the future as well.
An excellent meeting with our Champions!
Hosted the World Cup winning team at 7, LKM and had a memorable conversation on their experiences through the tournament.
ಸಾವಿಗೆ ಮುನ್ನವೇ ಸತ್ತವರಿಗೆ 'ಮುಕ್ತರು' ಎನ್ನುತ್ತಾರೆ. ಆ ಸಾವಿಗೆ ಮುನ್ನ ಸಾಯುವ ಕ್ರಿಯೆಗೆ 'ಸಮಾಧಿ' ಎನ್ನುತ್ತಾರೆ. ಅವರಿಗೆ ಹೆಸರಿನ ಮೋಹ ಸತ್ತುಹೋಗಿರುತ್ತದೆ. ಆ ವೀರನೇ ಹೆಸರಲ್ಲೇ ಸಾವನ್ನು ಹೊತ್ತ ಸಾವರ್ಕರ್.
ಅವರು ವರ್ಕೌಟ್ ಮಾಡುತ್ತಿದ್ದುದು ಜಿಮ್ಮಲ್ಲಿ ಅಲ್ಲ, ಸಾವಿನೊಡನೆ! ಅದಕ್ಕೇ ಆ ಹೆಸರು ಇಟ್ಟದ್ದಲ್ಲ ಬಂದದ್ದು ಸಾ'ವರ್ಕರ್'. ಅವರೊಡನೆ ಸೆಣಸಿ ಸೆಣಸಿ ಸಾವೇ ಸತ್ತುಹೋಗಿತ್ತು. ಒಂದು ಕೆಟ್ಟ ಕನಸು ಬಂದರೆ ತಡೆಯಲಾಗುವುದಿಲ್ಲ ನಮಗೆ. ಅವರು ಬದುಕಿದ್ದೆಲ್ಲ ಕೆಟ್ಟ ನನಸಲ್ಲೇ! ಒಂದು ಪತ್ರ ಬರೆಯಲು ಪೆನ್ನು, ಪೇಪರ್, ಟೇಬಲ್, ಚೇರ್, ಎ.ಸಿ ರೂಮ್, ಕಾಫಿ ಇಲ್ಲದಿದ್ದರೆ ಆಗದು ನಮಗೆ. ಆತ ಅಂಡಮಾನ್ ಜೈಲಿನ ಗೋಡೆಗಳ ಮೇಲೆ ಚೂಪಾದ ಮೊಳೆಗಳನ್ನು ಬಳಸಿ ಬರೆದದ್ದು ಗ್ರಂಥವೇ ಆಯಿತು. ಇಷ್ಟೆಲ್ಲಾ ಹೇಳುತ್ತಿದ್ದೀಯಲ್ಲಾ ಅವರ ಬಗ್ಗೆ ಎಲ್ಲಿ ಓದಿದ್ದೀಯ ಅಹೋರಾತ್ರ? ಎಂದು ನೀವು ಕೇಳಬಹುದು. ಹೇಳುವೆ ಕೇಳಿ ಆ ಸತ್ಯಕಥೆಯನ್ನು.
ಅಹೋರಾತ್ರ ಮುಂಬೈಗೆ ಹೋದದ್ದು ಒಂದು ಭಗವಾನುಸಂಧಾನವೇ ಸರಿ. ಬಯಸಿ ಹೋದದ್ದಲ್ಲ. ಅಲ್ಲಿಯೇ ಇರಲೆಂದು ನಿರ್ಧರಿಸಿಯೂ ಇಲ್ಲ. ಆಗ ಇವನ ವಯಸ್ಸು ಸುಮಾರು 28 ವರ್ಷ. ಸಾವರ್ಕರರ "ಆತ್ಮಾಹುತಿ" ಇವನು ಓದಿದ್ದು 14 ನೇಯ ವಯಸ್ಸಿಗೆ ಎಂಟನೆಯ ತರಗತಿಯಲ್ಲಿದ್ದಾಗ. ಅಷ್ಟೇ ಅಲ್ಲ, ಇವನು 'ಕಳಸಾಪುರದ ಹುಡುಗರು' ಓದಿದ್ದ, ಗಾಂಧೀಜಿಯ ಆತ್ಮಕಥೆಯೂ ಓದಿದ್���, ಮೈನ್ಕೆಂಪ್ ಕೂಡ ಓದಿದ್ದ. ಚಿಕ್ಕಪ್ಪ ತಂದುಕೊಟ್ಟಿದ್ದ ಸುಮಾರು ನೂರಾರು ದೇಶಭಕ್ತರ ಜೀವನಗಾಥೆಗಳನ್ನು ಕಾಮಿಕ್ಸ್ ನಲ್ಲೂ, ಭಾರತ ಭಾರತಿ ಸೀರೀಸಲ್ಲೂ ಓದಿದ್ದ. ತಿಲಕರೆಂದರೆ ಅಪಾರ ಗೌರವ ಕೂಡ ಇತ್ತು. ತಾತನಿಂದ ರಾಮಾಯಣ, ಮಹಾಭಾರತ, ಶಿವಾಜಿಯ ಸಾಹಸಗಳು. ಅಮ್ಮನಿಂದ ಚಂದಮಾಮ ಕಥೆಗಳು ಇವನಿಗೆ ಬಳುವಳಿಯಾದವು. ತಾತ ಗಾಂಧೀಜಿಯೊಡನಾಡಿ ಸತ್ಯಾಗ್ರಹಿಯಾಗಿ ಮಹಾತ್ಮನ ಕಥೆಗಳನ್ನು ಆರನೆಯ ವಯಸ್ಸಿಗೇ ಕಲಿಸಿಬಿಟ್ಟಿದ್ದರು. ಯಾರು ಬಂದರೂ ನಮ್ಮ ಬಾಬುಗೆ ಗಾಂಧೀಜಿ ಬಗ್ಗೆ ಏನು ಬೇಕಾದರೂ ಕೇಳಿ ಎಂದು ಸವಾಲು ಮಾಡುತ್ತಿದ್ದರು. ಸಹಜವಾಗಿ ಎಲ್ಲರೂ ಕೇಳುತ್ತಿದ್ದ ಪ್ರಶ್ನೆ ಗಾಂಧೀಯನ್ನು ಕೊಂದವರ್ಯಾರು? ಎಂದು. ಆಗ ಇವನು ಥಟ್ ಅಂತ ನಾಥೋರಾಮ್ ಗೋಡ್ಸೆ ಎನ್ನುತ್ತಿದ್ದಂತೆ ಅವರೆಲ್ಲ ಕರತಾಡನ ಮಾಡುತ್ತಿದ್ದರು. ಇಂತಹ ವಾತಾವರಣದಲ್ಲಿ ಬೆಳೆದವ ಅಹೋರಾತ್ರ.
ಮುಂಬೈನ ಬಾಬುಲ್ನಾಥ ದೇಗುಲಕ್ಕೆ ಹೋದಾಗ ಆ ಮಂದಿರದ ಪಕ್ಕದ ಗಾಂ���ೀಜಿ ನೆಲೆಸಿದ್ದ ಮನೆ ಮಣಿಭವನ್ ಕಡೆ ಅಹೋರಾತ್ರನ ಮನಸೆಳೆಯುವುದು. ಅಲ್ಲಿ ನಡೆದ ದೃಶ್ಯಾವಳಿಗಳು, ಅಂಬೇಡ್ಕರರು ಗಾಂಧೀಜಿಯನ್ನು ಸಂಧಿಸಿದ ಸ್ಥಳ, ಅವರಿಬ್ಬರ ಮಾತುಕಥೆ ಕಣ್ಣಿಗೆ ಕಟ್ಟುವಂತೆ ಭಾವನೇತ್ರಗಳಿಂದ ನೋಡುವುದು. ಗಿರ್ಗಾವಲ್ಲಿ ಓಡಾಡುವಾಗ ಗಾಂಧೀಜಿ ಮಗನೊಡನೆ ನಡೆದಾಡುವ ದೃಶ್ಯ ಕಾಣುವುದು. ಚೌಪಾಟಿಯಲ್ಲಿ ತಿಲಕರ ಪಾರ್ಥಿವ ದೇಹಯಾತ್ರೆಗೆ ಜನಸಾಗರ ಸೇರಿರುವುದ ಕಂಡು ಗಾಂಧೀಜಿ ಅಚ್ಚರಿಯಾಗುವುದು, ದಾದರ್ನ ಅಂಬೇಡ್ಕರ್ ಮನೆ, ಚೈತ್ಯಭೂಮಿ, ಸಿದ್ಧಾರ್ಥ ಕಾಲೇಜಿನ ಬಳಿ ಅಪ್ಪನೊಡನೆ ಬಾಲಕ ಅಂಬೇಡ್ಕರ್ ರವರು ಪರೀಕ್ಷೆಗೆ ಓದುವ ದೃಶ್ಯ, ತಿಲಕರಿಗೆ ಶಿಕ್ಷೆ ವಿಧಿಸಿದ ಕೋರ್ಟು, ಅವರು ವಾದಿಸುವ ದೃಶ್ಯ ಕಾಣುವಂತಾಗುವುದು. ಚಾಪೇಕರ್ ಬ್ರದರ್ಸ್ ನೇಣಿಗೆ ಮುನ್ನ ಭಗವದ್ಗೀತಾ ಪುಸ್ತಕಕ್ಕೆ ತಿಲಕರ ಸಹಿ ಕೇಳುವುದು ಕಣ್ಣು ತುಂಬಿ ಬಂದ ತಿಲಕರು. ಪ್ರಭಾದೇವಿಯ ಬಳಿ ಸಾವರ್ಕರ್ ಮನೆ. ಅಲ್ಲಿ ಸಾವರ್ಕರ್ ಗೋವಿಗೆ ಬಾಳೆಹಣ್ಣು ತಿನ್ನಿಸುವ ದೃಶ್ಯ. ಹೀಗೆ ಪುಸ್ತಕದಲ್ಲಿ ಓದಿದ್ದು, ಕೇಳಿದ್ದು ಎಲ್ಲ ವಿಷಯಗಳ ದೃಶ್ಯಾವಳಿ ಆಯಾ ಸ್ಥಳಗಳಲ್ಲಿ ಕಣ್��� ಮುಂದೆ ಹಾದುಹೋಗುತ್ತಿತ್ತು. ಅಂತಹ ಮುಂಬೈ ಅದು.
ಜ್ಯೋತಿಷಿಯಾಗಿ ಅನೇಕ ರಾಜಕಾರಣಿಗಳು, ದೇಶದಲ್ಲೇ ಐಶ್ವರ್ಯವಂತ ವ್ಯಾಪಾರಿಗಳು, ಸಿನೆಮಾ ನಟರು ತಮ್ಮ ಮನೆಗೆ ಕರೆದುಕೊಂಡು ಹೋದರೂ ಎಲ್ಲೂ ಉದ್ವಿಗ್ನನಾಗದ ಅಹೋರಾತ್ರ ಈ ಮಹಾಪುರುಷರ ಕಾಲದೂಳು ತಗುಲಿರುವ ನೆಲ ಕಂಡರೆ ರೋಮಾಂಚಿತನಾಗುತ್ತಿದ್ದ. ಒಬ್ಬ ವ್ಯಾಪಾರಿ ಪದೇ ಪದೇ ಕರೆದರೂ ಅವರ ಮನೆಗೆ ವರ್ಷಗಟ್ಟಲೆ ಹೋಗದ ಅಹೋರಾತ್ರನಿಗೆ ಒಂದು ದಿನ ಅಂಬೇಡ್ಕರ್ ಬಗ್ಗೆ ಮಾತನಾಡುವಾಗ ಆತ ಹೇಳಿದ ಅಂಬೇಡ್ಕರ್ ಅನುಯಾಯಿಗಳೊಂದಿಗೆ ಮಂದಿರ ಪ್ರವೇಶಕ್ಕಾಗಿ ಹೋರಾಡಿದ ದೇಗುಲ ನಮ್ಮ ಮನೆಯ ಕೆಳಗೆ ಇದೆ ಎಂದದ್ದೇ ತಡ ಅಂದೇ ಆ ಮಂದಿರಕ್ಕೆ ಹೋಗಿ ಅಲ್ಲಿ ಅಂಬೇಡ್ಕರರ ಸಾಧನೆಯನ್ನು, ಸಂಕಲ್ಪವನ್ನು, ಧೈರ್ಯವನ್ನು ಮೆಲುಕುಹಾಕುತ್ತಾ ಅಲ್ಲಿಯೇ ಅರ್ಧದಿನ ಕುಳಿತುಬಿಟ್ಟಿದ್ದ ಅಹೋರಾತ್ರ. ಹಾಗೆಯೇ ಆ ವ್ಯಾಪಾರಿಯ ಮನೆಗೂ ಹೋಗಿದ್ದ ಅಹೋರಾತ್ರ. ಅವರು ಹೇಳಿದರು ನಾವು ದಿನವೂ ಈ ಮಂದಿರದ ಮುಂದೆ ಹಾದು ಹೋಗುತ್ತೇವೆ. ಆದರೆ ಇಂದು ನಿಮ್ಮಿಂದ ಈ ಕಥೆ ಕೇಳಿ ದಿನವೂ ಒಳಗೆ ಹೋಗಿ ನೀವು ಅನುಭವಿಸಿದ ಭಾವ ಸುಖವನ್ನು ನಾವು ಅನುಭವಿಸಬೇಕು ಎಂದಿದ್ದರು.
ಮಹಾಪುರುಷರ ಧ್ಯೇಯಗ��ು ಹಲವು ಇರಬಹುದು. ಆದರೆ, ತ್ಯಾಗಗಳಿಗೆ ಗೌರವ ಸಲ್ಲಲೇಬೇಕು. ತ್ಯಾಗವಿಲ್ಲದೆ ಯಾವ ರಾಷ್ಟ್ರಪುರುಷರಿಗೂ ಜನ ಪ್ರೇಮ ಸಿಗುವುದಿಲ್ಲ ಅಲ್ಲವೇ?... ನಾಥೂರಾಮ್ ಗೋಡ್ಸೆ ಸರಿ, ಗಾಂಧೀಜಿ ತಪ್ಪು ಎಂದು ವಾದಿಸುವವರೂ ತಪ್ಪು. ಅಧ್ಯಯನವಿಲ್ಲದೆ ಅದರ ವಿರುದ್ಧ ಮಾತನಾಡುವುದು ಒಳಿತಲ್ಲ ಎಂಬುದು ನಾವು ಅರಿಯಬೇಕಿದೆ. ಕೃತ್ಯಗಳು ಕಾನೂನಿನ ವಿರುದ್ಧ ನಡೆದಾಗ ದೇಶದ ಏಳಿಗೆಯಾಗಲಾರದು ಅಲ್ಲವೇ?... ಸಾಮೂಹಿಕವಾಗಿ ಗುಂಪು ಸೇರಿ ಕೊಲೆ ಮಾಡುವುದು, ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ತಪ್ಪು ಎಂದು ಅಂಬೇಡ್ಕರರು ಹೇಳಿದ್ದಾರಲ್ಲವೇ. ಹಾಗಾಗಿ ಗಾಂಧೀಜಿ ಹತ್ಯೆ ಖಂಡನೀಯ��ಾಗಿತ್ತು. ಗೋಡ್ಸೆಯ ಕೃತ್ಯ ಸಾರ್ವಕಾಲಿಕವಾಗಿ ತಪ್ಪೇ ಆಗುತ್ತದೆ. ಹಾಗೆಯೇ ಭಾರತದ ಇಬ್ಭಾಗವಾಗುವಲ್ಲಿ ಸಾಮೂಹಿಕ ಹತ್ಯೆಗಳು, ಅತ್ಯಾಚಾರಗಳು ಎರಡೂ ಕಡೆ ನಡೆದದ್ದು ಕಾನೂನು ವಿರುದ್ಧವೇ! ಮುಗ್ಧ ಜನರ ಮಾರಣಹೋಮ ಆಯಿತು. ಅದರಲ್ಲೂ ಹೆಣ್ಣುಮಕ್ಕಳ ಮೇಲೆ ನಡೆದ ಘೋರ ಅತ್ಯಾಚಾರ ಅಕ್ಷಮ್ಯ ಅಪರಾಧವಲ್ಲವೇ? ಆದುದರಿಂದ ಆ ಕೃತ್ಯಕ್ಕೂ ಕಾರಣವಾದ ಆ ಇಬ್ಭಾಗಕ್ಕೆ ಅನೇಕ ನಾಯಕರು ಪರೋಕ್ಷ ಹೊಣೆಯಾದರು. ಅವರೆಲ್ಲ ಕನಸಲ್ಲೂ ಎಣಿಸಿರಲಿಲ್ಲ ಇಷ್ಟು ಕ್ರೌರ್ಯಾಂತವಾಗುವುದೆಂದು. ಈ ಕ್ರೌರ್���ಕ್ಕೆ ಅಂತ್ಯ ಹಾಡುವ ಉದ್ದೇಶ ತಾನು ಮಾಡಿದ ಈ ಕ್ರೌರ್ಯ ಮೂಲದ ಹತ್ಯೆ ಎಂಬುದು ನಾಥೂರಾಮನ ಹೇಳಿಕೆಯ ಮುಖ್ಯಾಂಶ. ನಾಥೂರಾಮನ ಸಮೇತ ಎಲ್ಲ ನಾಯಕರೂ ಸಾಯಲು ಸಿದ್ಧರಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರೇ. ಅವರವರ ಹಾದಿ ಬೇರೆ ಅಷ್ಟೇ.
ಹೀಗೆಲ್ಲಾ ದೇಶಭಕ್ತರ ಪಾದ ದೂಳಿನ ಹುಡುಕಾಟದಲ್ಲಿದ್ದ ಅಹೋರಾತ್ರನಿಗೆ 1997ರಲ್ಲಿ ಸುಮಾರು 92 ವರ್ಷದ ಆರುಕಾಲು ಅಡಿ ಎತ್ತರದ, ಬಿಳಿ ಮೈಬಣ್ಣದ, ಕನ್ನಡಕ ಹಾಕದ, ತೇಜಸ್ವೀ ಕಣ್ಣುಗಳುಳ್ಳ ದಿಟ್ಟ ಗರಡಿ ದೇಹದ ವ್ಯಕ್ತಿಯ ಭೇಟಿಯಾಗುತ್ತದೆ. ಹೇಗೆಂದರ���, ಆತ���ಿಗೆ ಪ್ರತಿದಿನವೂ ಅನ್ನ ಕೊಡುತ್ತಿದ್ದ ಮನೆಯವರು ಅಹೋರಾತ್ರನಲ್ಲಿ ಜ್ಯೋತಿಷ್ಯಕ್ಕಾಗಿ ಬಂದಿದ್ದಾಗ ಈ ವ್ಯಕ್ತಿಯ ಕುರಿತು ಮಾತು ಬರುತ್ತದೆ. ಮಾರನೆಯ ದಿನ ಅವರೂ ಕೂಡ ಆ ವ್ಯಕ್ತಿಯಲ್ಲಿ ಅಹೋರಾತ್ರನ ಬಗ್ಗೆ ಮಾತನಾಡಿದಾಗ ಆ ವ್ಯಕ್ತಿ ಅಹೋರಾತ್ರನನ್ನು ಮಾತನಾಡಬಯಸಿದಾಗ ಅಹೋರಾತ್ರನಿಗೆ ಹಬ್ಬವೇ ಆದಂತಾಯಿತು. ಅವರಿಗೆ ಮಹಾರಾಷ್ಟ್ರ ಸರ್ಕಾರ ಐದು ಸಾವಿರ ವೇತನ ಕೊಡುತ್ತಿತ್ತು. ಅವರ ವಯಸ್ಸು ನೋಡಿ ಅವರು ಬರುವುದು ಬೇಡ ಎಂದು ಅವರಲ್ಲೇ ಹೋಗುವ ನಿರ್ಧಾರ ಮಾಡಿ ಅಲ್ಲಿ ಹೋದಾಗ ���ವರು ನಾಲ್ಕನೆಯ ಮಹಡಿಯಲ್ಲಿ ಒಂದು ಚಿಕ್ಕ ರೂಮಲ್ಲಿ ವಾಸಿಸುತ್ತಿದ್ದರು. ಅತೀ ಸ್ವಚ್ಛವಾದ ರೂಮು, ಅಗರಬತ್ತಿಯ ಸುಗಂಧ, ಆರಂಭದಲ್ಲೇ ಕೊನೆಯಾಗುವ ಕೋಣೆಯ ಎದುರು ಗೋಡೆಯ ಮೇಲೆ ಕತ್ತೆಯ ಫೋಟೋ ನೇತುಹಾಕಿತ್ತು. ಅದಕ್ಕೆ ತಾಜಾ ಹೂವಿನ ಹಾರ ಹಾಕಿತ್ತು. ಬಾಪ್ಪಾ ನಟೇಶ ಕುಳಿತುಕೋ, ಬಾಯಾರಿಕೆ ಬೇಕಾ? ಎಂದು ಅಚ್ಚ ಕನ್ನಡದಲ್ಲಿ ಮಾತನಾಡಿದ ಅವರು ಕಾರವಾರದ ಕನ್ನಡಿಗರಂತೆ. ಬೆನ್ನು ಮೂಳೆಯೂ ಬಾಗದ, ನೇರ ಕುಳಿತಿದ್ದ ಅವರಿಗೆ ಸಾವರ್ಕರ್ ಪದೇ ಪದೇ ಹೇಳುತ್ತಿದ್ದರಂತೆ "ಏ ಕತ್ತೆ, ಬೆನ್ನು ��ಾಗಿಸಿದರೆ ಸಾವು ಬೆನ್ನಟ್ಟುವುದು" ಎಂದು. ಅವರು ಬೆನ್ನು ಬಾಗಿಸಿದಾಗಲೆಲ್ಲ ಆ ವೀರನ ಮಾತು ಕೇಳುತ್ತಿರುತ್ತಂತೆ. ಅವರನ್ನು ಕಂಡ ತಕ್ಷಣ ಅಹೋರಾತ್ರ ಆ ವ್ಯಕ್ತಿಯ ಎರಡೂ ಕಾಲು ಬಳಸಿ ಶಿರಸಾಷ್ಟಾಂಗ ಪ್ರಣಾಮ ಮಾಡಿದ. ಹಾಗೆಯೇ ಕೇಳಿದ "ಸಾರ್, ಯಾಕೆ ನೀವು ಕತ್ತೆಯ ಚಿತ್ರಕ್ಕೆ ಹಾರ ಹಾಕಿದ್ದೀರಿ?" ಎಂದು. ಅವರಂದರು "ನಮ್ಮ ದೊರೆ ಸಾವರ್ಕರರು ನನ್ನ ಪೆದ್ದತನ ನೋಡಿ ಪ್ರೀತಿಯಿಂದ ಕತ್ತೆ ಎನ್ನುತ್ತಿದ್ದರು. ಹೀಗೆ ದಿನವೆಲ್ಲಾ ಬಾರೋ ಕತ್ತೆ, ಹೋಗೋ ಕತ್ತೆ, ಚಾಯಿ ತಾರೋ ಕತ್ತೆ, ಪೋಸ್ಟ್ ಮಾಡೋ ಕತ್ತೆ, ಪೆನ್ನಿಗೆ ಶಾಯಿ ಹಾಕೋ ಕತ್ತೆ. ಆ ಧ್ವನಿ ನನ್ನ ಕಿವಿ ಬಿಟ್ಟು ಹೋಗುತ್ತಿಲ್ಲ. ಹಾಗಾಗಿ ಆ ಗೌರವಕ್ಕೆ ಅವರ ಬಾಯಲ್ಲಿ ನನ್ನ ಹೆಸರಿಗಿಂತ ತ���್ನ ಹೆಸರು ಬರಿಸಿಕೊಂಡ ಆ ಕತ್ತೆ ನಿಜವಾದ ಪುಣ್ಯವಂತ ಎಂದು ಆ ಹಾರ ಹಾಕಿದ್ದೀನಿ" ಎಂದರು. ಹೀಗೆ ಸಾವರ್ಕರ್ ಬಗ್ಗೆ ಅನೇಕ ವಿಷಯ ಹಂಚಿಕೊಂಡರು. ಅವುಗಳಲ್ಲಿ ಕೆಲವನ್ನು ಇಲ್ಲಿ ಹಂಚಿಕೊಳ್ಳುವೆ.
ಗಾಂಧೀಜಿ ಹತ್ಯೆಯ ಸಂಚು ಸಾವರ್ಕರರು ಮಾಡಿದ್ದಾ?.
ಖಂಡಿತಾ ಇಲ್ಲ. ಅವರು ಯಾವತ್ತೂ ಅವರನ್ನು ಕೊಲ್ಲಬೇಕು, ಇವರನ್ನು ಹೊಡೆಯಬೇಕು ಎಂದು ಹೇಳುತ್ತಿರಲಿಲ್ಲ. ಯಾವಾಗಲೂ ಸೇನೆ ಕಟ್ಟಬೇಕು, ಸೈನಿಕರಾಗಬೇಕು, ರಕ್ಷಣೆ ಮುಖ್ಯ, ರೈತರು ವಿದ್ಯಾವಂತರಾಗಬೇಕು ಎನ್ನುತ್ತಿದ್ದರು. ವಿಭಜನೆಯ ಬಗ��ಗೆ ಅವರಿಗೆ ಅಪಾರ ಬೇಸರವಿತ್ತು. ಸಾವು-ನೋವಿನ ಬಗ್ಗೆ ದುಃಖಿತರಾಗಿದ್ದರು. ಲಾ ಅಂಡ್ ಆರ್ಡರ್ ಚೆನ್ನಾಗಿರಬೇಕು. ಅಸ್ಪೃಶ್ಯತೆ ತೊಲಗಬೇಕು ಎನ್ನುತ್ತಿದ್ದರು. "ಸಾರ್, ನೀವು ನಾಥೋರಾಮ್ ಗೋಡ್ಸೆನ ನೋಡಿದ್ದೀರಾ?"
"ಅವ ನನ್ನ ಸ್ನೇಹಿತ" ಅಂದರು.
"ಸಾವರ್ಕರ್ ರವರಿಗೇ?" ಎಂದೆ. ಅದಕ್ಕವರು ಗೋಡ್ಸೆ ಮತ್ತು ಸಾವರ್ಕರರ ಮೊದಲ ಭೇಟಿಯ ಬಗ್ಗೆ ಹೇಳಿದರು.
ಪೂನಾದಿಂದ ಒಬ್ಬ ಯುವಕ ಬರುವುದಾಗಿ ಪತ್ರ ಬಂದಿತ್ತು. ಅವ ಬರುವ ಸಮಯವೂ ಆಗಿತ್ತು. ಸಾವರ್ಕರರಿಗೆ ವಿಷಯ ತಿಳಿಸಿದ್ದೆ. ನಾವು ವರಾಂಡಾದ ಪಕ್ಕ ಸಾವರ್ಕರರ ವಿಚಾರ ವಿನಿಮಯ ಕೋಣೆಯಲ್ಲಿ ಕುಳಿತಿದ್ದೆವು. ಆ ಹುಡುಗ ಗೇಟು ತೆರೆದು ಒಳಗೆ ಬರುತ್ತಿದ್ದ. ಅವನ ನಡಿಗೆ ನೋಡಿದ್ದೇ ಸಾವರ್ಕರರು ಅವಾಕ್ಕಾದರು. ಒಂದೇ ಸಮನೆ "ಅವ ಬಂದಾ ಕಣೋ, ಮತ್ತೆ ಬಂದಾ ನೋಡು" ಎಂದರು. "ಯಾರು ಪಾಜಿ ಯಾರು?" ಎಂದೆ. ಅವರಂದರು "ಧಿಂಗ್ರಾ ಕಣೋ ಕತ್ತೆ, ಮತ್ತೆ ಬಂದ ನೋಡು" ಎಂದರು. ಅರ್ಥ ಆಗಲಿಲ್ಲ. ದೇವ, ಧಿಂಗ್ರರವರು ಅಂದೇ ಆತ್ಮಾಹುತಿಗೈದರಲ್ಲಾ? ಎಂದಾಗ ಹೌದು ಕಣೋ ಅವ ಅಂದು ನೇಣಿಗೆ ಮುನ್ನ ಜೈಲಿನಲ್ಲಿ ಸಿಕ್ಕಾಗ ಹೇಳಿದ್ದ "ನಾನು ಮತ್ತೆಮತ್ತೆ ಹುಟ್ಟಿ ಬಂದು ನಮ್ಮ ಭಾರತ ದೇಶದ ಬಂಧಮುಕ್ತಿಗಾಗಿ ನಗುನಗುತ್ತಾ ನೇಣಿಗೇರಲು ಅಣಿಯಾಗುತ್ತೇನೆ" ಎಂದಿದ್ದ. ನೋಡು ಅವನೇ ಇವನು. ಅ��ೇ ನೋಟ, ಅದೇ ನಡಿಗೆ ಎಂದರು. ನನಗಂತೂ ಏನೂ ಅರ್ಥವಾಗಲಿಲ್ಲ. ನಿನಗೆ ಅರ್ಥಮಾಡಿಸುತ್ತೇನೆ ತಡಿ ಎಂದರು. ಆ ಬಂದವ ಸಾವರ್ಕರರಿಗೆ ವಂದಿ��ಿ ತನ್ನ ಹೆಸರು ನಾಥೋರಾಮ್ ಗೋಡ್ಸೆ, ಪೂನಾದಿಂದ ಬಂದಿರುವುದಾಗಿ ಹೇಳುತ್ತಾನೆ. ಆಗ ಸಾವರ್ಕರರು ನಿನ್ನ ಹುಟ್ಟಿದ ದಿನಾಂಕ ಹೇಳು ಎಂದಾಗ ಅವ 19th May 1910 ಎಂದ. ಆಗಿವರು ಹೇಳಿದರು ಧಿಂಗ್ರ ಆತ್ಮಾಹುತಿಯಾದದ್ದು 17th August 1909 ನೋಡು ಎಂದರು. ನೋಡು ಕತ್ತೆ ಕಾಸಾರ್, ಅವನ ಮರಣಕ್ಕೂ ಇವನ ಜನನಕ್ಕೂ ಒಂಭತ್ತು ತಿಂಗಳು ಎರಡು ದಿವಸ ತಾಯಿಯ ಗರ್ಭಾವಾಸಕ್ಕೆ ಮೀಸಲಾಗಿದೆ ಎಂದಾಗ ಸಾವರ್ಕರರ ಆ ದಿವ್ಯಜ್ಞಾನಕ್ಕೆ ನಖಶಿಕಾಂತ ರೋಮಾಂಚನವಾಯಿತು. ಅಷ್ಟೇ ಅಲ್ಲ ಅವ ಹೋದ ಮೇಲೆ ಸಾವರ್ಕರ್ ಹೇಳಿದರು ಅಂದು ಧಿ��ಗ್ರಾ ಕೂಡಾ ತನ್ನದೇ ನಿರ್ಧಾರಕ್ಕೆ ಬಂದ. ನಾಳೆ ಇವ ಕೂಡಾ ಅವನೇ ಆದುದರಿಂದ ತನ್ನದೇ ನಿರ್ಧಾರ ಮಾಡುವ ಲಕ್ಷಣ ಕಾಣುತ್ತಿದೆ ಎಂದಿದ್ದರು. ಕೊನೆಗೂ ಅದು ನಿಜವಾಯಿತು ಎಂದರು ಅಪ್ಪಾ ಕಾಸಾರ್. ಈ ಘಟನೆಯಿಂದ ಸಾವರ್ಕರರ ಅಧ್ಯಯನ ಎಷ್ಟು ಆಳ, ಅಗಲ ಇದೆ ಎಂದು ತಿಳಿಯುವುದು. ಅಷ್ಟೇ ಅಲ್ಲ, ಅಪ್ಪಾ ಕಾಸಾರರು ಅಂದು ಇವನೊಡನೆ ಸಾವರ್ಕರ್ ಮತ್ತು ಸುಭಾಷ್ ಚಂದ್ರ ಬೋಸರ ಭೇಟಿಗೂ ತಾನು ಸಾಕ್ಷಿಯಾಗಿದ್ದಿದ್ದನ್ನು ಹಂಚಿಕೊಂಡರು. ಇಷ್ಟೆಲ್ಲಾ ಅವರ ವೃದ್ಧ ಶೈಲಿಯಲ್ಲಿ ಕನ್ನಡದಲ್ಲೇ ಮಾತುಕಥೆ ನಡೆಯಿತು. ಆ ಮನೆಯವರು ಹಿಂದಿ-ಮರಾಠಿಯಲ್ಲಿ ಮಾತಾಡಿ ಪ್ಲೀಸ್ ನಾವು ಕೇಳಬೇಕು ಎನ್ನುತ್ತಿದ್ದರು. ಆಗವರು ನಕ್ಕು ಬಹುದಿನದ ನಂತರ ಕನ್ನಡ ಮಾತಾಡಲು ಸಿಕ್ಕಿದೆ ತಾಯಿ, ಮಾತನಾಡಲು ಬಿಡಿ ಎಂದು ನಕ್ಕರು. ಅದಾದ ನಂತರದ ಕೊನೆಯ ಮಾತುಗಳು ಕೇಳಿ.
ಸಾವರ್ಕರ್ ಸಾವನ್ನು ಸ್ವೀಕರಿಸಲು ಉಪವಾಸ ದೀಕ್ಷೆಯಲ್ಲಿರುತ್ತಾರೆ. ಕರ್ಣಾಟಕ ಮೂಲದ ಹಿಂದಿ ಸಿನೆಮಾ ಖ್ಯಾತ ನಿರ್ದೇಶಕ ಮತ್ತು ಆದಾ ಹೈ ಚಂದಮಾ ರಾತ್ ಆದಿ ಹಾಡಿನಿಂದ ಖ್ಯಾತರಾದ ಶಾಂತಾರಾಮ್ ಸಾವರ್ಕರರ ಅಭಿಮಾನಿಯಾಗಿರುತ್ತಾರೆ. ಸಾವರ್ಕರರ ಧರ್ಮಪತ್ನಿ ತೀರಿಕೊಳ್ಳುತ್ತಾರೆ. ಆ ಸುದ್ಧಿ ತಂದ ಶಾಂತಾರಾಮ್ ಮರಣವನ್ನು ಕಾಯುತ್ತಾ ಉಪವಾಸದಿಂದ ಮಲಗಿದ್ದ ಸಾವರ್ಕರರಿಗೆ ಅಪ್ಪಾ ಕಾಸಾರ್ ಮುಖೇನ ಹೇಳುತ್ತ��ರೆ. ಹಾಗೆಯೇ, ಶಾಂತಾರಾಮ್ ಹೇಳುತ್ತಾ ಆ ಮಾತೆಯ ಸಮಾಧಿ ಸ್ಥಳದ ಬಗ್ಗೆ ಅಂದರೆ ಮುಂದೆ ಸಾವರ್ಕರರ ಸಮಾಧಿಗಾಗಿ ಸೂಚ್ಯವಾಗಿ ಸ್ಥಳ ಮತ್ತು ಶ್ರಾಧ್ಧಾಚರಣೆಯ ಬಗ್ಗೆ ಕೇಳುತ್ತಾರೆ. ನಿಮಗೆ ತೋಚಿದ ಹಾಗೆ ಮಾಡಿ ಎಂದು ಮಗ್ಗುಲು ಬದಲಿಸುತ್ತಾರೆ ಸಾವರ್ಕರ್. ಆಗ ಸಾವರ್ಕರರಲ್ಲಿ ಸಲಿಗೆಯಿದ್ದ ನಾನು "ದೊರೆ, ನಿಮ್ಮ ಸಮಾಧಿಯ ಬಗ್ಗೆ ಕೇಳುತ್ತಿದ್ದಾರೆ ಶಾಂತಾರಾಮ್ ಅವರು" ಎಂದಾಗ ಆ ನಾನತ್ವಕೊಂದ ಸ್ವಾತಂತ್ರ್ಯ ವೀರನ ಮಾತು ಆ 92 ವರ್ಷದ ಅಪ್ಪಾ ಕಾಸರರ ಬಾಯಲ್ಲಿ ಕೇಳಿ ಗದ್ಗದಿತನಾದ ಅಹೋರಾತ್ರ. ಆ ಮಾತು ಹೀಗಿದೆ "ಏ ಕತ್ತೆ, ಈ ಸಾವರ್ಕರನ ಸತ್ತ ದೇಹವನ್ನು ಕತ್ತೆಯ ಬಾಲಕ್ಕೆ ಕಟ್ಟಿ ಬೀದಿ ಬೀದಿ ಎಳೆದು ಸುತ್ತಿಸಿ ರಣಹದ್ದುಗಳಿಗೆ ಹಾಕಿ" ಎಂದು ಮೌನವಾ��ುತ್ತಾರೆ. ದೇಶಕ್ಕಾಗಿ ಜೀವನವನ್ನೇ ಜ್ಯೋತಿಯಂತೆ ಬೆಳಗಿ ಅರ್ಪಿಸಿದ ಮೇರು ಪರ್ವತ ಆಡಿದ ಆ ಮಾತು ಕೇಳಿ ಎಲ್ಲರೂ ಸ್ತಬ್ಧರಾಗುತ್ತಾರೆ. ಅದು ನೋಡ್ರಿ, ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಅಂದರೆ. ತನ್ನ ಮರಣದ ನಂತರ ದೇಹದ ಮತ್ತು ಸಮಾಧಿಯ ಆಸಕ್ತಿಯೇ ತೊರೆದ ಆ ಪುರುಷಸಿಂಹನಿಗೆ ಹೆಸರಿನ ಹುಚ್ಚು ಇರಲು ಸಾಧ್ಯವೇ ಇಲ್ಲ. ಆತ ಕರ್ನಾಟಕವನ್ನು ತುಂಬಾ ಇಷ್ಟಪಡುತ್ತಿದ್ದರು. ಕಂಪ್ಲಿಯ ಹತ್ತಿರದ ಹಳ್ಳಿಯಲ್ಲಿ ತಿಂಗಳಾನುಗಟ್ಟಲೆ ಅಜ್ಞಾತವಾಸದಲ್ಲಿದ್ದರು. ಶಿವ ಛತ್ರಪತಿಯ ಎರಡನೇ ಮಗನಾದ ರಾಜಾರಾಮರಿಗೆ ಆಶ್ರಯ ಕೊಟ್ಟ ಕೆಳದಿಯ ಮೇಲಿನ ಗೌರವಕ್ಕೆ ಶಿವಮೊಗ್ಗಕ್ಕೆ ಬಂದಿದ್ದರು. ನೀವು ಅವರ ಹೆಸರನ್ನು ಯಾವ 'ಮೇಲು ಸೇತುವೆ'ಗೋ ಅಥವಾ ಫೀಮೇಲು ಸೇತುವೆಗೋ ಇಡದಿದ್ದರೆ ಯಾವ ನಷ್ಟವೂ ಇಲ್ಲ. ಆದರೆ ಆ ವ್ಯಕ್ತಿಯ ಬಗ್ಗೆ ಅಧ್ಯಯನವಿಲ್ಲದೆ ಅನುಚಿತ ಮಾತು, ವರ್ತನೆ ಒಳಿತಲ್ಲ.
✍️ ಅಹೋರಾತ್ರ