ನರೇಗಾದಡಿ ಕೂಲಿಕಾರರ ಫೇಸ್ ಅಥೆಂಟಿಕೇಶನ್ ಹಾಜರಾತಿ ಜಾರಿ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರಿಗೆ ಮುಖ ಗುರುತಿಸುವಿಕೆ ಆಧಾರಿತ ಹಾಜರಾತಿ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಈ ಹೊಸ #NMMS Face Recognition ಆ್ಯಪ್ ಬಳಸುವ ವಿಧಾನ ಮತ್ತು ಸಂಪೂರ್ಣ ಮಾಹಿತಿಗಾಗಿ ಇದನ್ನು ಓದಿ.
#MGNREGA#DigitalIndia#ನರೇಗಾ
ಉದ್ಯೋಗ ಖಾತ್ರಿ ಯೋಜನೆಯಡಿ ವೃದ್ಧರಿಗೆ ಕೆಲಸದ ಪ್ರಮಾಣದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಇಳಿವಯಸ್ಸಿನಲ್ಲಿಯೂ ದುಡಿಯುವ ಅವಶ್ಯಕತೆ ಇರುವವರಿಗೆ ಇದು ಆಸರೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 5.07 ಲಕ್ಷ ಹಿರಿಯ ನಾಗರಿಕರು ನರೇಗಾದಡಿ ನೋಂದಾಯಿಸಿಕೊಂಡಿದ್ದಾರೆ.
#RDPR#ruraldevelopment#MGNREGA#nregaworks
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿಯಿಂದ ಬೆಳಗಾವಿಯ ಸಿ.ಪಿ.ಇ.ಡಿ ಮೈದಾನದಲ್ಲಿ ಆಯೋಜಿಸಲಾದ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ #ಮನರೇಗಾ ಯೋಜನೆಯ ಮಾಹಿತಿ ಕೇಂದ್ರವನ್ನು ಗಣ್ಯ ಮಾನ್ಯರು ಉದ್ಘಾಟಿಸಿದರು..
#mgnrega
Constitution Day celebrated across Amrit Sarovars in Karnataka 🇮🇳💧
Children, youth, community members and #MGNREGA workers gathered around the #AmritSarovar to read the Preamble, take the Fundamental Duties pledge, display placards, and join discussions on water conservation.
ಮನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಅಮೃತ ಸರೋವರಗಳ ದಡದಲ್ಲಿ ಇಂದು 'ಸಂವಿಧಾನ ದಿನ' ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂವಿಧಾನ ಪ್ರತಿಜ್ಞಾ ವಿಧಿ ಬೋಧನೆ ಹಾಗೂ ಜಲ ಸಂರಕ್ಷಣೆಯ ಕುರಿತು ಅರಿವು ಮೂಡಿಸಲಾಯಿತು.
ನಾಡಿನ ಸಮಸ್ತ ಜನತೆಗೆ 'ಸಂವಿಧಾನ ದಿನ'ದ ಶುಭಾಶಯಗಳು ನಮ್ಮ ಸಂವಿಧಾನ, ನಮ್ಮ ಹೆಮ್ಮೆ #IndianConstitutionday
ನರೇಗಾ ಯೋಜನೆಗೆ ಯುಕ್ತಧಾರ ತಂತ್ರಾಂಶದ ಬಲ
2026-27ನೇ ಸಾಲಿನ ಕಾರ್ಮಿಕ ಆಯವ್ಯಯವನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಲು, ಬಹುಬಾಳಿಕೆಯ ಆಸ್ತಿಗಳನ್ನು ಸೃಜಿಸಲು ಯುಕ್ತಧಾರ ತಂತ್ರಾಂಶವನ್ನು ಜಾರಿಗೊಳಿಸಲಾಗಿದೆ.
#ಮನರೇಗಾ ಯೋಜನೆಯಡಿ ಮಹಿಳಾ ಭಾಗವಹಿಸುವಿಕೆ ಪ್ರಮಾಣ ಶೇ 50 ಕ್ಕಿಂತ ಕಡಿಮೆ ಇರುವ ಜಿಲ್ಲೆಯ 125 ಗ್ರಾಮ ಪಂಚಾಯತಿಗಳಲ್ಲಿ ‘ಸ್ತ್ರೀ ಚೇತನ’ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಮನೆ ಮನೆ ಭೇಟಿ, ಸ್ವ-ಸಹಾಯ ಸಂಘಗಳೊಂದಿಗೆ ಸಭೆ, ಜಾಥಾ ಹೀಗೆ ಹಲವಾರು ಚಟುವಟಿಕೆಗಳ ಮೂಲಕ ಯೋಜನೆಯ ಕುರಿತು ಮಾಹಿತಿ ನೀಡಿ, ಬೇಡಿಕೆಗಳನ್ನು ಪಡೆಯಲಾಗುತ್ತಿದೆ.
ಅಮೃತ ಸರೋವರ ದಂಡೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಸ��ಭ್ರಮದ ಆಯ್ದ ಚಿತ್ರಗಳು
ಜಲಸಂರಕ್ಷಣೆಗಾಗಿ ಒಂದು ಸರೋವರ, ಒಂದು ಸಂಕಲ್ಪ ಉದ್ದೇಶದೊಂದಿಗೆ ತಿರಂಗಾ ಧ್ವಜಾರೋಹಣ
ಸ್ಥಳ: ಹೊಸೂರು ಮತ್ತು ಹೋಸಪೇಟ ಗ್ರಾಮ ಪಂಚಾಯಿತಿ ವ್ಯಾಪ್ತಿ, ಹುಕ್ಕೇರಿ ತಾಲೂಕು. ಬೆಳಗಾವಿ ಜಿಲ್ಲೆ.
#IndependenceDay2025
#AmritSarovar
#MGNREGS
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಜಿಲ್ಲೆಯಲ್ಲಿ ನರೇಗಾ ಯೋಜನೆಯ ಅನುಷ್ಠಾನದ ಕುರಿತು ಪ್ರಕಟವಾದ ವಿಶೇಷ ಲೇಖನಗಳು..
#mgnrega#nrega@Vijaykarnataka
2 days to go!
🇮🇳Bharat prepares for a grand #IndependenceDay celebration across all #AmritSarovar sites.
This event is not just a commemoration of our past; it's a powerful statement about our collective commitment to a secure water future.
Be there!
Join the cause!
#MoRD #SchemesofRD #IndependenceDay #MahatmaGandhiNREGA #महात्मा_गांधी_नरेगा #अमृत_सरोवर #HarGharTiranga #हर_घर_तिरंगा
ಕೂಲಿಕಾರರ ಒಗ್ಗೂಡಿಸುವಲ್ಲಿ ಯಶಸ್ವಿಯಾದ ಸಂಜನಾ
ಕಳೆದ ಏಳೆಂಟು ವರ್ಷಗಳಿಂದ #NREGA ಯೋಜನೆಯಡಿ ಸಕ್ರಿಯ ಕಾಯಕ ಬಂಧುವಾಗಿ 150 ಕ್ಕೂ ಹೆಚ್ಚು ಕೂಲಿಕಾರರನ್ನು ಸಂಘಟಿಸಿ ದುಡಿಯುವ ಕೈಗಳಿಗೆ ಕೆಲಸ ಮಾಡಲು ಸಹಾಯಕಾರಿಯಾಗಿದ್ದಾರೆ ಸಂಜನಾ ಸಾತೇರಿ.
ಸ್ಥಳ: ಬೆಳಗಾವಿ ಜಿಲ್ಲೆ, ಖಾನಾಪುರ ತಾಲ್ಲೂಕು, ಮಂತುರ್ಗಾ ಗ್ರಾ.ಪಂ.
#mobilization#women
ಬೆಳಗಾವಿ ಜಿಲ್ಲೆಯ ಗ್ರಾ. ಪಂ. ಗಳ ವ್ಯಾಪ್ತಿಯ ಶಾಲೆ, ಸಮುದಾಯ ಭವನ ಹಾಗೂ ಇನ್ನಿತರೆ ಸ್ಥಳಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. #ಮನರೇಗಾ ದಡಿ ಅನುಷ್ಠಾನಗೊಂಡ ಅಮೃತ ಸರೋವರ ದಡದಲ್ಲಿ ಯೋಗ ಸಂಗಮ, ಹರಿತ ಯೋಗ ಕಾರ್ಯಕ್ರಮ ನಿಮಿತ್ತ ಸಸಿಗಳನ್ನು ನೆಟ್ಟು, ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
#InternationalYogaDay
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬೆಳಗಾವಿ ಜಿಲ್ಲೆ ಬಡಕುಂದ್ರಿ ಗ್ರಾಪಂ ವ್ಯಾಪ್ತಿಯ ತೋಟಗಾರಿಕೆ ಸಂಶೋದನಾ ಕೇಂದ್ರದಲ್ಲಿರುವ ಅಮೃತ ಸರೋವರ ದಡದಲ್ಲಿ ಯೋಗ ಸಂಗಮ, ಹರಿತ ಯೋಗ ಕಾರ್ಯಕ್ರಮ ನಿಮಿತ್ತ ಸಸಿಗಳನ್ನು ನೆಟ್ಟು, ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
#MGNREGA#yoga#yogaday#InternationalYogaDay@MoRD_GoI
ಸವದತ್ತಿ ತಾಲೂಕಿನ ಕೋಟೂರ ಶಿವಾಪೂರ ಹಾಗೂ ರಾಮದುರ್ಗ ತಾಲೂಕಿನ ಬನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಡಿ ಮನರೇಗಾ ಯೋಜನೆಯಡಿ ಕೈಗೊಂಡಿರುವ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನಿನ್ನೆ ಸುರಿದ ಮಳೆಯಿಂದ ಹಳ್ಳದಲ್ಲಿ ನೀರು ��ಿಂತಿರುವ ದೃಶ್ಯ.
#mgnrega
ಹಿರಿಯರ ಮೊಗದಲ್ಲಿ ಮಂದಹಾಸ ತಂದ #ಮನರೇಗಾ
ಸವದತ್ತಿ ತಾಲೂಕಿನ ತಡಸಲೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯ ದುಡಿಯೋಣ ಬಾ ಅಭಿಯಾನದಡಿ ಹಳ್ಳ ಹೂಳೆತ್ತುವ ಕಾಮಗಾರಿಯಲ್ಲಿ ಕೂಲಿ ಕೆಲಸದಲ್ಲಿ ತೊಡಗಿದ್ದ ಹಿರಿಯ ನಾಗರಿಕರು.
#mgnrega#nrega#labour