ಕಲಬುರಗಿ-ಬೆಂಗಳೂರು ನಡುವೆ @OfficialStarAir ಸಂಸ್ಥೆಯಿಂದ ವಿಮಾನಯಾನ ಸೇವೆ ಬುಧವಾರದಿಂದ ಪುನರಾರಂಭವಾಗಿದ್ದು, ಕೆ.ಕೆ.ಆರ್.ಡಿ.ಬಿ ಆರ್ಥಿಕ ನೆರವಿನಿಂದ ಆರಂಭವಾಗಿರುವ ವಾಯುಯಾನ ಸೇವೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ @ajaydharamsingh ಅವರು ಕೇಕ್ ಕತ್ತಿಸುವ ಮೂಲಕ ಚಾಲನೆ ನೀಡಿದರು
ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ಮಂಗಳವಾರ ಜಿಲ್ಲೆಯ ಅಫಜಲಪೂರ ತಾಲೂಕಿನ ದತ್ತನ ಸುಕ್ಷೇತ್ರವಾದ ಐತಿಹಾಸಿಕ ದೇವಲ ಗಾಣಗಾಗಪುರ ಕ್ಷೇತ್ರಕ್ಕೆ ಭೇಟಿ ನೀಡಿ ���ೇವಸ್ಥಾನ ಮತ್ತ ಅದರ ಸುತ್ತುಮುತ್ತಲು ನಡೆಯುತ್ತಿರುವ ವಿವಿಧ ಪ್ರವಾಸಿ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿದರು
ಜಿಲ್ಲೆಯಲ್ಲಿ ರಸಗೊಬ್ಬರ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ ಕುರಿತು ರೈತರಿಂದ ದೂರು ಬರುತ್ತಿರುವ ಹಿನ್ನೆಲೆಯಲ್ಲಿ @DCKalaburagi ಇಕ್ರಮ್ ಶರೀಫ್ ಅವರು ಸೋಮವಾರ ರಸಗೊಬ್ಬರ ಮಾರಾಟ ಮಾಡುವ ಡೀಲರ್, ರಿಟೇಲರ್ ತುರ್ತು ಸಭೆ ಕರೆದು, ಯಾವುದೇ ಕಾರಣಕ್ಕೂ ರೈತರಿಗೆ ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದರು
ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಕಲ್ಯಾಣ ಕರ್ನಾಟಕ ವೃಂದ (596) ಮತ್ತು ಉಳಿದ ಮೂಲ ವೃಂದಗಳಿಗೆ ಒಟ್ಟು 3995 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ಆಕಾಂಕ್ಷಿಗಳಾಗಿರುವ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ.
ಒಳಮೀಸಲಾತಿಯನ್ನು ಯಶಸ್ವಿಯಾಗಿ ಜಾರಿಗೊಳಿಸಿರುವ ಗ್ಯಾರಂಟಿ ಸರ್ಕಾರವು ಕೊಟ್ಟ ಮಾತಿನಂತೆ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ರಾಜ್ಯ ಸರ್ಕಾರವು ಇತ್ತೀಚೆಗೆ ತೀರ್ಮಾನಿಸಿದ ರೋಸ್ಟರ್ ಬಿಂದುಗಳಿಗೆ ಅನುಸಾರ ನೇಮಕಾತಿ ನಡೆಸಲಾಗುತ್ತಿದೆ. ಇದರಿಂದ ಎಲ್ಲ ಸಮುದಾಯಗಳಿಗೆ ನ್ಯಾಯಯುತ ಅವಕಾಶ ದೊರಕಲಿದೆ.
ರಾಜ್ಯದ ಯುವಜನರು ತಮ್ಮ ��ಿರೀಕ್ಷೆ, ಅರ್ಹತೆಗಳಿಗೆ ಅನುಗುಣವಾದ ಉದ್ಯೋಗ ಪಡೆಯಬೇಕು, ನಿರುದ್ಯೋಗ ನಿವಾರಣೆಯಾಗಬೇಕು ಮತ್ತು ಅವಕಾಶವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕಬೇಕು ಎನ್ನುವುದು ಸರ್ಕಾರದ ಆಶಯ. ಈ ನೇಮಕಾತಿಯು ಅಧಿಸೂಚನೆಯು ಯುವಜನರ ಭವಿಷ್ಯ ಹಾಗೂ ಉದ್ಯೋಗದ ಕುರಿತಾದ ಕಾಂಗ್ರೆಸ್ ಪಕ್ಷ ಹಾಗೂ ಗ್ಯಾರಂಟಿ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ.
@CMofKarnataka
ಕಲಬುರಗಿಯ ಮೊದಲ ‘ಮಿಯಾವಾಕಿ’ ಅರಣ್ಯ ಕ್ರಾಂತಿ!
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿಯ ಲುಂಬಿನಿ ಉದ್ಯಾನವನದಲ್ಲಿ ನಿರ್ಮಿಸಲಾಗಿರುವ ಜಿಲ್ಲೆಯ ಮೊಟ್ಟಮೊದಲ ‘ಮಿಯಾವಾಕಿ ಅರಣ್ಯ’ ಯೋಜನೆ ಇಂದು ಅತ್ಯಂತ ಯಶಸ್ವಿಯಾಗಿ ಕಣ್ಮನ ಸೆಳೆಯುತ್ತಿದೆ. ಕೇವಲ 17 ತಿಂಗಳ ಹಿಂದೆ ಸುಡುವ ಮಣ್ಣನ್ನು ಹೊತ್ತಿದ್ದ ಬರಡು ಭೂಮಿ, ಇಂದು ಹಕ್ಕಿಗಳ ಚಿಲಿಪಿಲಿ ಇಂಚರದ ದಟ್ಟವಾದ ಕಾನನವಾಗಿ ಮಾರ್ಪಟ್ಟಿದೆ.
ಈ ಬರಡು ನೆಲದಲ್ಲಿ 2024ರ ಡಿಸೆಂಬರ್ 2ರಂದು ಜಪಾನಿ ತಂತ್ರಜ್ಞಾನದ ವಿಶಿಷ್ಟ ಅರಣ್ಯೀಕರಣ ಯೋಜನೆಗೆ ಚಾಲನೆ ನೀಡಲಾಗಿತ್ತು. ಉದ್ಯಾನವನದ ಕೇವಲ 18 ಗುಂಟೆ ವಿಸ್ತೀರ್ಣದ ಪುಟ್ಟ ಜಾಗದಲ್ಲಿ ಒಟ್ಟು 42 ವಿವಿಧ ಸ್ಥಳೀಯ ಜಾತಿಯ 2,000ಕ್ಕೂ ಅಧಿಕ ಸಸಿಗಳನ್ನು ನಾಟಿ ಮಾಡಲಾಗಿತ್ತು. ಈ ಗಿಡಗಳು ಒಂದೂವರೆ ವರ್ಷದಲ್ಲೇ ಮುಗಿಲೆತ್ತರಕ್ಕೆ ಬೆಳೆದಿವೆ.
ಈ ಆಕರ್ಷಕ ಅರಣ್ಯವು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಅತ್ಯುತ್ತಮ ತಾಣವಾಗಿದೆ. ಮುಂದಿನ ದಿನಗಳಲ್ಲಿ ಕಲಬುರಗಿ ನಗರ ಭಾಗದಲ್ಲಿಯೂ ಮಿಯಾವಾಕಿ ಅರಣ್ಯ ಬೆಳೆಸಲು ಉದ್ದೇಶಿಸಲಾಗಿದೆ.
ಕಲಬುರಗಿ���ನ್ನು ಮಾದರಿ ಪರಿಸರ ಸ್ನೇಹಿ ಜಿಲ್ಲೆಯನ್ನಾಗಿ ರೂಪಿಸಲು ಗ್ಯಾರಂಟಿ ಸರ್ಕಾರ ಬದ್ಧವಾಗಿದೆ.
@DCKalaburagi ಇಕ್ರಮ್ ಶರೀಫ್ ಶುಕ್ರವಾರ ವಾಣಿಜ್ಯ /ಗೃಹ ಬಳಕೆ ಎಲ್.ಪಿ.ಜಿ. ಸಿಲಿಂಡರ್ ಪೂರೈಕೆಯಲ್ಲಿ ನಿಯಂತ್ರಣ & ಮೇಲ��ವಿಚಾರಣೆಗಾಗಿ ರಚಿಸಲಾಗಿರುವ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆ ನಡೆಸಿ ಎಲ್.ಪಿ.ಜಿ. ಸಿಲಿಂಡರ್ ಪೂರೈಕೆಯಲ್ಲಿ ಶಿಕ್ಷಣ-ಆರೋಗ್ಯ ಸಂಸ್ಥೆ, ಕ್ಯಾಂಟಿನ್ ಗಳಿಗೆ ಪೂರೈಕೆ ಮೊದಲ ಆದ್ಯತೆಯಾಗಿರಬೇಕೆಂದು ಸೂಚಿಸಿದರು
ಅಟಲ್ಜೀ ಜನಸ್ನೇಹಿ ಕೇಂದ್ರದ ಮೂಲಕ ಮೇ-2026ರ ಮಾಹೆಯಲ್ಲಿ ಸ್ವೀಕರಿಸಿದ 39,363 ಅರ್ಜಿಗಳಲ್ಲಿ 38,551 ಅರ್ಜಿಗಳನ್ನು ಕಾಲಮಿತಿಯಲ್ಲಿಯೇ ವಿಲೇವಾರಿ ಮಾಡಿ ಶೇ.97.94ರಷ್ಟು ಪ್ರಗತಿ ಸಾಧಿಸುವ ಮೂಲಕ ರಾಜ್ಯದಲ್ಲಿಯೇ ಅರ್ಜಿ ವಿಲೇವಾರಿಯಲ್ಲಿ ಕಲಬುರಗಿ ಜಿಲ್ಲೆ ಮತ್ತೆ ನಂಬರ್-1 ಸ��ಥಾನ ಪಡೆದಿದೆ
#ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಹೇಳಿಕೆ
2026-27ನೇ ಸಾಲಿಗೆ ಕೇಂದ್ರ ಸರ್ಕಾರವು ಪರಿಶಿಷ್ಟ ಜಾತಿ ಸಮುದಾಯಗಳ ಕಲ್ಯಾಣಕ್ಕೆ ಸುಮಾರು 1,96,400.37 ಕೋಟಿ ರೂ. ಹಣ ಮೀಸಲಿಟ್ಟಿದೆ #ಮಂಗಳವಾರ ಕಲಬುರಗಿಯಲ್ಲಿ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ @RamdasAthawale ಹೇಳಿಕೆ #ಕಳೆದ ವರ್��ಕ್ಕೆ ಹೋಲಿಸಿದರೆ ಈ ಬಾರಿಯ 35,195.27 ಕೋಟಿ ರೂ. ಹೆಚ್ಚಳ ಎಂದಿದಾರೆ
ಭಾರತ ಚುನಾವಣಾ ಆಯೋಗವು ವಿಶೇಷ ಸಮಗ್ರ ಪರಿಷ್ಕರಣೆ ಪಟ್ಟಿ ತಯಾರಿಸುವ ಕುರಿತು ವೇಳಾಪಟ್ಟಿ ಪ್ರಕಟಿಸಿದ್ದು, ಕಲಬುರಗಿ ಜಿಲ್ಲೆಯಲ್ಲಿ ಜೂ.20 ರಿಂದ ಪ್ರಕ್ರಿಯೆ ಆರಂಭವಾಗಲಿದ್ದು, ಆಗಸ್ಟ್ 5ಕ್ಕೆ ಕರಡು ಮತದಾರರ ಪಟ್ಟಿ & ಅಕ್ಟೋಬರ್ 7ಕ್ಕೆ ಅಂತಿಮ ಮತದಾರರ ಪಟ್ಟಿ #ಪತ್ರಿಕಾಗೋಷ್ಟಿಯಲ್ಲಿ@deokalaburagi ಇಕ್ರಮ್ ಶರೀಫ್ ಹೇಳಿಕೆ
@DCKalaburagi ಇಕ್ರಮ್ ಶರೀಫ್ ಅವರು ಮಂಗಳವಾರ ತಮ್ಮ ಕಚೇರಿಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಲಾರದ ಸಭೆ ನಡೆ���ಿ ಕೃಷಿ ಸಂಬಂಧಿತ ಇಲಾಖೆಗಳು ಮುಂಗಾರು ಸಿದ್ಧತೆ ಕೈಗೊಳ್ಳಬೇಕು. ಪ್ರವಾಹ ಪೀಡಿತ ಪ್ರದೇಶಗಳ ಮೇಲೆ ತೀವ್ರ ನಿಗಾ ವಹಿಸಬೇಕು. ಜನ-ಜಾನುವಾರು ಹಾನಿ ತಪ್ಪಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು
@SEOC_Karnataka
ಹೊಸ ಆಶಯಗಳು ಮತ್ತು ಕನಸುಗಳೊಂದಿಗೆ 2026-27ನೇ ಸಾಲಿನ ಶೈಕ್ಷಣಿಕ ವರ್ಷವು ಬರುವ ಜೂನ್ 1 ರಿಂದ ಆರಂಭವಾಗುತ್ತಿದ್ದು, ಜಿಲ್ಲೆಯ ಸರಕ���ರಿ ಶಾಲೆಗಳಲ್ಲಿ ಶಾಲಾ ಪ್ರಾರಂಭೊತ್ಸವ ಆಯೋಜಿಸಲಾಗುತ್ತಿದೆ #ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ @CEOZPKalaburagi ರಾಹುಲ್ ಸಂಕನೂರ್ ಜಿಲ್ಲೆಯ ಪಾಲಕ-ಪೋಷಕರಲ್ಲಿ ಮನವಿ ಮಾಡಿದ್ದಾರೆ
ಕಲಬುರಗಿ ಜಿಲ್ಲೆಯ ಮಾಡಬೂಳ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಕಲಬುರಗಿ ಮೃಗಾಲಯವು ಜೂನ್ 15ರ ವರೆಗೆ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30ರ ವರೆಗೆ ಮಾತ್ರ ಸಾರ್ವಜನಿಕರ ವೀಕ್ಷಣೆಗೆ ಅವಕಾಶ. @aranya_kfd ಪ್ರಾದೇಶಿಕ ವಿಭಾಗದ ಉಪಸಂರಕ್ಷಣಾಧಿಕಾರಿ ಹೇಳಿಕೆ
@PriyankKharge@S_PrakashPatil@KarnatakaVarthe
ಕಲಬುರಗಿ ಜಿಲ್ಲಾ ಪಂಚಾಯತ್ ಸಿ.ಇ.ಓ ಆಗಿ ಸುಮಾರು 3 ವರ್ಷಗಳ ಕಾಲ ಸೇವೆ ಸಲ್ಲಿಸಿ ಮುಂಬಡ್ತಿ ಪಡೆದು ಚಿಕ್ಕಮಂಗಳೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿರುವ ಭಂವರ್ ಸಿಂಗ್ ಮೀನಾ ಅವರಿಗೆ ಶನಿವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಚೇರಿ ಸಿಬ್ಬಂದಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು
ಶುಕ್ರವಾರ ಇಲ್ಲಿನ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕರಣ�� ಸಭೆ ನಡೆಯಿತು. ಮುಂಗಾರು ಆಗಮನ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಕೊರತೆಯಾಗದಂತೆ ಮುಂಜಾಗೃತ ಕ್ರಮ ಕೈಗೊಳ್ಳಬೇಕೆಂದು ಕೃಷಿ ಅಧಿಕಾರಿಗಳಿಗೆ ಜಿಲ್ಲಾ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಧಂಗಾಪೂರ ತಿಳಿಸಿದರು@
@SWDGoK ಅಧೀನದ
ಕಲಬುರಗಿಯ ಪ್ರಬುದ್ಧ ಅಕಾಡೆಮಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಅಭ್ಯರ್ಥಿಗಳಿಗೆ #IAS#KAS ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆ ಮಾಡುವ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಅರ್ಜಿ ಸಲ್ಲಿಸುವ ಅವಧಿ ಇದೇ ಮೇ 30 ವರೆಗೆ ವಿಸ್ತರಿಸಲಾಗಿದೆ. https://t.co/9a0LehziyV ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
ತಂಬಾಕು ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಜುಲೈ ಮಾಹೆಯ ಅಂತ್ಯದೊಳಗೆ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕನಿಷ್ಠ 1 ಗ್ರಾಮವನ್ನಾದರು ತಂಬಾಕು ಮುಕ್ತ ಗ್ರಾಮವನ್ನಾಗಿಸಿ ಘೋಷಿಸಬೇಕು #ಗುರುವಾರ ಡಿ.ಸಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ADC ರಾಯಪ್ಪ ಹುಣಸಗಿ ಸೂಚನೆ
@DCKalaburagi ಇಕ್ರಮ್ ಶರೀಫ್ ಅವರು ಬುಧವಾರ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣಕ್ಕೆ ಭೇಟಿ ನೀಡಿ ಲೋಕೋಪಯೋಗಿ ಮತ್ತು ಕೆ.ಆರ್.ಐ.ಡಿ.ಎಲ್. ಸಂಸ್ಥೆಯಿಂದ ನಡೆಯುತ್ತಿರುವ ವಿವಿಧ ಕಾಮಗಾರಿಗಳು ಪರಿಶೀಲಿಸಿದರು. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಅನುಷ್ಠಾನ ಎಜೆನ್ಸಿಗಳಿಗ��� ಡಿ.ಸಿ ಖಡಕ್ ಸೂಚನೆ ನೀಡಿದ್ದಾರೆ