ನನ್ನ ಅಣ್ಣ ನನ���ೆ ದೇವರು ಕೊಟ್ಟ ವರ. ಗೆಳೆಯನಾಗಿ, ಬದುಕಿಗೆ ಮಾರ್ಗದರ್ಶಿಯಾಗಿ, ತಂದೆಯ ಸ್ಥಾನದಲ್ಲಿದ್ದುಕೊಂಡು ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾಗಿ ನಿಂತಿರುವ ಪ್ರೀತಿಯ ಅಣ್ಣನಿಗೆ ಜನುಮದಿನದ ಹಾರ್ದಿಕ ಶುಭಾಶಯಗಳು.ಅಣ್ಣ ನಿನ್ನ ಪ್ರೀತಿ, ಆಶೀರ್ವಾದವೇ ನನಗೆ ಶಕ್ತಿ ಮತ್ತು ಸ್ಫೂರ್ತಿ ಅಣ್ಣ ನಿನ್ನ ಎಲ್ಲಾ ಕನಸು ನನಸಾಗಲಿ ಅಣ್ಣ.ನಾಗೇಶ್ ಬಾಬು
ನಾಡಿನ ಸಮಸ್ತ ಜನತೆಗೆ ಹಾಗೂ ವಿಶೇಷವಾಗಿ ಕೋಲಾರ ಲೋಕಸಭಾ ಕ್ಷೇತ್ರದ ಜನತೆಗೆ ವಿಜಯ ದಶಮಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.
ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಿಯು ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ಪ್ರಾರ್ಥಿಸುತ್ತೇನೆ.
ನಾಡಿನ ಸಮಸ್ತ ಜನತೆಗೆ ಮಹಾಲಯ ಅಮಾವಾಸ್ಯೆಯ ಹಾರ್ದಿಕ ಶುಭಾಶಯಗಳು.
ಸರ್ವ ಪೂರ್ವಜರಿಗೆ ಶ್ರಾದ್ಧ, ತರ್ಪಣ ಸಲ್ಲಿಸುವ ವಿಶೇಷ ಹಾಗೂ ಪುಣ್ಯಕರ ದಿನವಾದ ಇಂದು ಎಲ್ಲಾ ಕುಟುಂಬಗಳಿಗೆ ಪೂರ್ವಜರ ಆಶೀರ್ವಾದ ದೊರೆಯುವಂತಾಗಲಿ, ಎಲ್ಲ���ಿಗೂ ಶುಭ ಉಂಟಾಗಲಿ ಎಂದು ಹಾರೈಸುವೆ.
#MahalayaAmavasya
ಭಾರತ ಮಾತೆಯ ಗೌರವ ಮತ್ತು ಸಂರಕ್ಷಣೆಗಾಗಿ ಪಾಕಿಸ್ತಾನದ ಪಾತಕಿಗಳಿಗೆ 'ಸರ್ಜಿಕಲ್ ಸ್ಟ್ರೈಕ್' ಮೂಲಕ ನಮ್ಮ ಯೋಧರು ದಿಟ್ಟತನದಿಂದ ಉತ್ತರಿಸಿದ ದಿನವಿಂದು.
ದಿಟ್ಟತನದ ದಾಳಿ ನಡೆಸಿ, ಶತ್ರುಗಳನ್ನು ಸದೆಬಡಿದು, ಭಾರತದ ಸ��ಮರ್ಥ್ಯವನ್ನು ಜಗತ್ತಿಗೆ ಸಾರಿ ಭಾರತ ಮಾತೆಯ ಗೌರವವನ್ನು ಇಮ್ಮಡಿಗೊಳಿಸಿದ ಎಲ್ಲ ವೀರ ಯೋಧರಿಗೆ ಗೌರವ ಪ್ರಣಾಮಗಳು.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ಎದೆ ನಡುಗಿಸಿದ ಮಹಾನ್ ಕ್ರಾಂತಿಕಾರಿ, ದೇಶಕ್ಕಾಗಿ ಸಾವಿನ ಕುಣಿಕೆಗೆ ಕೊರಳೊಡ್ಡಿ ಪ್ರಾಣತ್ಯಾಗ ಮಾಡಿದ ಭಾರತ ಮಾತೆಯ ಹೆಮ್ಮೆಯ ಪುತ್ರ ಭಗತ್ ಸಿಂಗ್ ಅವರ ಜನ್ಮದಿನದಂದು ಶತಕೋಟಿ ನಮನಗಳು. 'ಇಂಕ್ವಿಲಾಬ್ ಜಿಂದಾಬಾದ್' ಘೋಷಣೆಯ ಮೂಲಕ ದೇಶಭಕ್ತಿಯ ಸ್ಪೂರ್ತಿದಾಯಕ ಜ್ವಾಲೆಯಾಗಿ ದೇಶದ ಕೋಟ್ಯಂತರ
ಬಾಲ್ಯವಿವಾಹ, ಬಹುಪತ್ನಿತ್ವ, ಸತಿಸಹಗಮನದಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿ, ಮೌಢ್ಯಗಳಿಗೆ ಚಾಟಿ ಏಟು ಬೀಸಿ ಜನರಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಿದ್ದ ಸಮಾಜ ಸುಧಾರಕ ಶ್ರೀ ರಾಜಾರಾಂ ಮೋಹನ್ ರಾಯ್ ಅವರ ಜನ್ಮಸ್ಮರಣೆಯಂದು ಗೌರವಪೂರ್ವಕ ನಮನಗಳು. ಸಾಮಾಜಿಕ ಕಳಕಳಿಯ ಶಿಕ್ಷಣ ತಜ್ಞರಾಗಿ ಅವರು ಹಾಕಿಕೊಟ್ಟ ವೈಜ್ಞಾನಿಕ ತಳಹದಿಯ ಮೇಲೆ ಸಾಗೋಣ.
ವಿಶ್ವ ಪ್ರವಾಸೋದ್ಯಮ ದಿನ
World Tourism Day
ಪ್ರವಾಸ ಮಾಡುವ ಹವ್ಯಾಸ ರೂಢಿಸಿಕೊಳ್ಳುವ ಮೂಲಕ ಪ್ರವಾಸೋದ್ಯಮದಲ್ಲಿ ಉದ್ಯೋಗ ಸೃಷ್ಠಿಗೆ, ಸುಸ್ಥಿರ ಅಭಿವೃದ್ಧಿಗೆ, ಸಂಸ್ಕೃತಿ, ಪರಂಪರೆಯ ರಕ್ಷಣೆಗೆ ಕೊಡುಗೆ ನೀಡೋಣ.
#WorldTourismDay2024
ಇಂದು ನವದೆಹಲಿಯ ಕೇಂದ್ರ ಕಛೇರಿಯಲ್ಲಿ ಕೇಂದ್ರ ಅತಿಸಣ್ಣ,ಸಣ್ಣ, ಮದ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆಗಳ ರಾಜ್ಯ ಸಚಿವರಾದ ಶ್ರೀಮತಿ Shobha Karandlaje ರವರನ್ನು ಭೇಟಿ ಮಾಡಿ ನಮ್ಮ ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಹಲವು ಯೋಜನೆಗಳನ್ನು ಶೀಘ್ರದಲ್ಲಿ ಅಭಿವೃದ್ಧಿಪಡಿಸುವಂತೆ ಭರವಸೆ ನೀಡಿದರು.....
ಶಿಕ್ಷಣ, ಸಾಹಿತ್ಯ, ಸಮಾಜ ಸುಧಾರಣೆ ಈ ಮೂರು ಕ್ಷೇತ್ರಗಳಲ್ಲಿಯೂ ಅದ್ಭುತ ಸೇವೆ ಸಲ್ಲಿಸಿದ ಮಹಾನ್ ಸಮಾಜ ಸುಧಾರಕ, ಮಹಿಳೆಯರ ಶಿಕ್ಷಣಕ್ಕಾಗಿ ಶ್ರಮಿಸಿದ್ದ ಈಶ್ವರಚಂದ್ರ ವಿದ್ಯಾಸಾಗರ ಅವರ ಜನ್ಮದಿನದ ಸ್ಮರಣೆಗಳು.
#IshwarChandraVidyasagar
ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಚುನಾಯಿತರಾದ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಸದಸ್ಯರಾದ ಶ್ರೀ ಎಂ.ವಿ ವೆಂಕಟಸ್ವಾಮಿ ಮತ್ತು ಶ್ರೀಮತಿ ರೂಪ ನವೀನ್ ಅವರಿಗೆ ಅಭಿನಂದನೆಗಳು.
ನಿಮ್ಮ ನೇತೃತ್ವದಲ್ಲಿ ಶಿಡ್ಲಘಟ್ಟ ನಗರ ಅಭಿವೃದ್ಧಿಯತ್ತ ಸಾಗಲೆಂದು ಆಶಿವ
'ಕೌಶಲ್ಯಯುತ ಯುವಶಕ್ತಿ ದೇಶದ ಶಕ್ತಿ'. ನಾಡಿನ ಸಮಸ್ತ ಯುವ ಸಮ್ಮಿತ್ರರಿಗೆ 'ವಿಶ್ವ ಯುವ ಕೌಶಲ್ಯ ದಿನದ' ಹಾರ್ದಿಕ ಶುಭಾಶಯಗಳು. ನಮ್ಮ ಯುವ ಜನತೆ ಶಿಕ್ಷಣದ ಜತೆಗೆ ಉದ್ಯಮಾಧಾರಿತ ಕೌಶಲ್ಯ ತರಬೇತಿ ಪಡೆಯುವ ಮೂಲಕ ಉದ್ಯೋಗಶೀಲ ಹಾಗೂ ಉದ್ಯಮಶೀಲರಾಗಬೇಕಿದೆ. ಆ ಮೂಲಕ ಆತ್���ನಿರ್ಭರ ಭಾರತದ ಕನಸು ನನಸಾಗಿಸಿ, ವಿಕಸಿತ ಭಾರತದ ಸಹಭಾಗಿಗಳಾಗಬೇಕಿದೆ.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವರಾದ ಶ್ರೀ ರಾಮದಾಸ್ ಅಠಾವಳೆ ರವರು ಇಂದು ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿನ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಅವರನ್ನು ಕೋಲಾರ��� ಪ್ರವಾಸಿ ಮಂದಿರದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಆಶೀರ್ವಾದ ಪಡೆಯಲಾಹಿತು
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವರಾದ ಶ್ರೀ ರಾಮದಾಸ್ ಅಠಾವಳೆ ರವರು ಇಂದು ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿನ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಅವರನ್ನು ಕೋಲಾರದ ಪ್ರವಾಸಿ ಮಂದಿರದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಆಶೀರ್ವಾದ ಪಡೆಯಲಾಯಿತು
@MpKolar2951ಇಂದು ನಮ್ಮ ಗೃಹ ಕಛೇರಿಗೆ ಕೆ.ಜಿಎಫ್ ನ BEML ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ನನ್ನನ್ನು ಭೇಟಿ ಮಾಡಿ ಹೊರಗುತ್ತಿಗೆ ನವಕರರಿಗೆ ಖಾಯಮಾತಿ ಹಾಗು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ನೌಕರರು ಮನವಿ ಮಾಡಿದರು.. ನೌಕರರ ಸಮಸ್ಯೆಗಳನ್ನು ಆಲಿಸಿ ಸಂಸತ್ ಅಧಿವೇಶನದಲ್ಲಿ ಇದರ ಬಗ್ಗೆ ಪ್ರಸ್ತಾಪ