ಸಂಚಾರ ಸಲಹಾ ನಕ್ಷೆ ರಾಜಕುಮಾರ್ ರಸ್ತೆಯ ನವರಂಗ್ ಜಂಕ್ಷನ್ ಇಂದ ಒರಿಯನ್ ಮಾಲ್ ವರೆಗೆ ವೈಟ್ ಟಾಪಿಂಗ್ ಕಾಮಗಾರಿಯು ಪ್ರಾರಂಭವಾಗಿರುವುದರಿಂದ ಸದರಿ ರಸ್ತೆಯಲ್ಲಿ ಸಂಚರಿಸುವ ಕೆ ಎಸ್ ಆರ್ ಟಿ ಸಿ ಬಸ್ಸುಗಳು ಹಾಗೂ ಎಲ್ಲಾ ರೀತಿಯ ಸರಕು ವಾಹನಗಳು ಮೆಜೆಸ್ಟಿಕ್ ಇಂದ ತುಮಕೂರ್ ರಸ್ತೆಗೆ ಸಂಚರಿಸಲು ಈ ಕೆಳಕಂಡ ಮಾರ್ಗವನ್ನು ಕಲ್ಪಿಸ ಲಾಗಿದೆ.
@shivrinsan@blrcitytraffic Cleared now!
We appreciate you for letting us know about it.
Download BTP Astram app from playstore/Appstore which facilitates the public to report traffic violations.
In view of the IPL 19th Edition Final Match scheduled to be held on 31.05.2026, the Bengaluru Traffic Division has issued the following traffic guidelines to ensure the smooth movement of the public.
@blrcitytraffic@DCPTrNorthBCP@AcptrnorthBTP
ಸಂಚಾರ ಸಲಹೆ!
Traffic Advisory!
ದಿನಾಂಕ: 31.05.2026 ರಂದು ನಡೆಯುವ ಐ.ಪಿ.ಎಲ್. 19 ನೇ ಆವೃತ್ತಿಯ ಫೈನಲ್ ಪಂದ್ಯದ ಪ್ರಯುಕ್ತ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಬೆಂಗಳೂರು ಸಂಚಾರ ವಿಭಾಗದಿಂದ ಈ ಕೆಳಕಂಡ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ವಿವರಗಳು ಈ ಕೆಳಕಂಡಂತೆ ನೀಡಲಾಗಿದೆ!
ಇಂದು ಸಂಜೆ ಭಾರೀ ಮಳೆಯಿಂದ ಮಲ್ಲೇಶ್ವರಂ ಮಾರ್ಗೋಸಾ ರಸ್ತೆ 15ನೇ ಕ್ರಾಸ್ನಲ್ಲಿ ಬೃಹತ್ ಮರವೊಂದು ಬಿದ್ದು ರಸ್ತೆ ತಡೆ ಉಂಟಾದ ಸಂದರ್ಭದಲ್ಲಿ, ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿರಂತರವಾಗಿ ಶ್ರಮಿಸಿ ಅಡಚಣೆಗಳನ್ನು ತೆರವುಗೊಳಿಸಿ, ಸಂಚಾರ ಸುಗಮವಾಗುವಂತೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು.
ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಹೇಶ್ ಜಮಾದಾರ ಹಾಗೂ ಠಾಣೆಯ PC-17252 ಚನ್ನಬಸಪ್ಪ ರವರು ಇಸ್ಕಾನ್ ದೇವಸ್ಥಾನದ ಮುಂಭಾಗ ಭಾರಿ ಮಳೆಗೆ ಮೇಲೆ ಬಂದಿದ್ದ ಮ್ಯಾನ್ ಹೋಲ್ ಅನ್ನು ಮುಚ್ಚುವ ಮೂಲಕ ವಾಟರ್ ಲಾಗಿಂಗ್ ಅನ್ನು ಕಡಿಮೆ ಮಾಡಿರುತ್ತಾರೆ!
ಈ ದಿನ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಇದ್ದ ಅವೈಜ್ಞಾನಿಕ ಯು-ತಿರುವನ್ನು ನಿರ್ಬಂಧಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಹಾಗೂ ರಾಜಾಜಿನಗರ 1ನೇ ಬ್ಲಾಕ್ ಬಳಿ ವಾಹನ ಸವಾರರಿಗೆ ರಸ್ತೆ ವಿಭಜಕಗಳು ಕಾಣುವಂತೆ ರೇಡಿಯಂ ರಿಫ್ಲೆಕ್ಟರ್ ಗಳನ್ನು ಅಳವಡಿಸಲಾಯಿತು.
ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವೆಸ್ಟ್ ಆಫ್ ಕಾರ್ಡ್ ರಸ್ತೆ ನಾರಾಯಣ ನೇತ್ರಾಲಯ ಆಸ್ಪತ್ರೆಯ ಮುಂಭಾಗ ಮಳೆಯ ಕಾರಣ ಮರವು ರಸ್ತೆಗೆ ಬಿದ್ದಿದ್ದು, GBA ಸಹಯೋಗದೊಂದಿಗೆ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸದರಿ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ.@blrcitytraffic@AcptrnorthBTP