📘 Want to Build Wealth in the Stock Market? Start by Building Knowledge!
ಷೇರು ಮಾರುಕಟ್ಟೆಯಲ್ಲಿ ಹಣ ಗಳಿಸಬೇಕಾದರೆ ಮೊದಲು ಮಾರುಕಟ್ಟೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಕ��ಿಯಿರಿ.
ಹೊಸಬರಿಗಾಗಿ ಸರಳ ಕನ್ನಡದಲ್ಲಿ ಸಿದ್ಧಪಡಿಸಿರುವ ಎರಡು ಉಚಿತ Stock Market Model Books ಇಲ್ಲಿವೆ.
ಈ ಎರಡು ಪುಸ್ತಕಗಳನ್ನು ಓದಿ. ಪ್ರತಿದಿನ ಸ್ವಲ್ಪ ಸಮಯ Charts ನೋಡಿ. ಕಂಪನಿಗಳ Business Model ಅರ್ಥಮಾಡಿಕೊಳ್ಳಿ. ಪ್ರಶ್ನೆಗಳನ್ನು ಕೇಳಿ. ನಿಮ್ಮದೇ ನಿರ್ಧಾರ ತೆಗೆದುಕೊಳ್ಳುವುದನ್ನು ಕಲಿಯಿರಿ.
ಬೇರೆಯವರ Stock Tips ಮೇಲೆ ಅವಲಂಬಿತರಾಗುವ ಬದಲು, ನಿಮ್ಮದೇ Investment Knowledge ಮತ್ತು Judgment ಬೆಳೆಸಿಕೊಳ್ಳಿ.
📚 ಇಂದೇ ಮೊದಲ ಪುಸ್ತಕವನ್ನು ಓದಲು ಪ್ರಾರಂಭಿಸಿ. ಕಲಿಕೆಯನ್ನು ನಾಳೆಗೆ ಮುಂದೂಡಬೇಡಿ!
❤️ Like | 🔁 Share | 📚 Learn
#PremadaOorali BMS ticket sales🎟️
Week 1 - 207.92K
Week 2 - 909.29K
Day 15 - 171.41K
Day 16 - 260.07K
Total = 1,548.69K ~ 1.55M👌♥️
Compare week 1 stats & day 16 stats🫠
Single day highest🥇
Peak hour sales🥇
Consecutive days of 100k+ sales🥇
#KFI#Sandalwood
ಬೆಲೆ-ಗಳಿಕೆ ಅನುಪಾತವನ್ನು (Price-to-Earnings Ratio ಅಥವಾ PE Ratio) ಸರಳವಾದ ಉದಾಹರಣೆಯ ಮೂಲಕ ಅರ್ಥ ಮಾಡಿಕೊಳ್ಳೋಣ.
🏠 ಉದಾಹರಣೆ- ಒಂದು ಮನೆ ಬಾಡಿಗೆಗೆ ಅಥವಾ ಮಾರಾಟಕ್ಕೆ ಇದೆ ಅಂದುಕೊಳ್ಳಿ!
ನೀವು ವಾಸಿಸುವ ಪ್ರದೇಶದಲ್ಲೇ ಒಂದು ಸಣ್ಣ ಮನೆ ಮಾರಾಟಕ್ಕಿದೆ ಎಂದು ಭಾವಿಸೋಣ.
ಮನೆಯ ಬೆಲೆ (Price)- ₹40 ಲಕ್ಷ ರೂಪಾಯಿ.
ಆ ಮನೆಯಿಂದ ಬರುವ ವಾರ್ಷಿಕ ಬಾಡಿಗೆ (Earnings)- ₹2 ಲಕ್��� ರೂಪಾಯಿ (ವರ್ಷಕ್ಕೆ).
ಈಗ ಇದರ ಆಧಾರದ ಮೇಲೆ PE Ratio ಲೆಕ್ಕಾಚಾರ ಮಾಡೋಣ.
PE Ratio= ಮನೆಯ ಒಟ್ಟು ಮಾರಾಟದ ಬೆಲೆ\ಮನೆಯಿಂದ ಬರುವ ವಾರ್ಷಿಕ ಆದಾಯ
PE Ratio = ₹40,00,000/2,00,000= 20
ಅಂದರೆ, ಆ ಮನೆಯ ವಾರ್ಷಿಕ ಆದಾಯದ 20 ಪಟ್ಟು ಹಣವನ್ನು ಅದರ ಮಾಲೀಕ ಕೇಳುತ್ತಿದ್ದಾನೆ ಎಂದರ್ಥ.
📊 ಇದರ ಅರ್ಥವೇನು?
1. ಮೂಲ ಬಂಡವಾಳ ಮರುಪಾವತಿ (Payback Period)- ನೀವು ಈ ಮನೆಯನ್ನು ₹40 ಲಕ್ಷಕ್ಕೆ ಖರೀದಿಸಿದರೆ, ಬರುವ ಬಾಡಿಗೆಯ ಮೂಲಕವೇ ನಿಮ್ಮ ಸಂಪೂರ್ಣ ಬಂಡವಾಳವನ್ನು ವಾಪಸ್ ಪಡೆಯಲು (ಯಾವುದೇ ಬಾಡಿಗೆ ಹೆಚ್ಚಳವಾಗದೆ ಹೋದರೆ) 20 ವರ್ಷಗಳು ಬೇಕಾಗುತ್ತವೆ.
2. ಹೂಡಿಕೆದಾರರ ನಂಬಿಕೆ - ಒಂದು ವೇಳೆ ಅದೇ ಪ್ರದೇಶದ ಇನ್ನುಳಿದ ಮನೆಗಳ PE Ratio 15 ಇದ್ದು, ಈ ಮನೆಯದ್ದು 20 ಇದ್ದರೆ; ಇದರರ್ಥ ಬೇರೆ ಮನೆಗಳಿಗೆ ಹೋಲಿಸಿದರೆ ಈ ಮನೆ ಹೆಚ್ಚು ಜನದಟ್ಟಣೆಯುಳ್ಳ ಒಳ್ಳೆಯ ಸ್ಥಳದಲ್ಲಿದೆ ಅಥವಾ ಭವಿಷ್ಯದಲ್ಲಿ ಇದರ ಬೆಲೆ ಅಥವಾ ಬಾಡಿಗೆ ಹೆಚ್ಚಾಗುವ ನಿರೀಕ್ಷೆ ಹೆಚ್ಚಿದೆ ಎಂದು ಮಾರುಕಟ್ಟೆ ನಂಬಿದೆ.
ಇದೇ ಪರಿಕಲ್ಪನೆಯನ್ನು ಷೇರು ಮಾರುಕಟ್ಟೆಗೆ ಅನ್ವಯಿಸೋಣ-
P (Price) = ಒಂದು ಷೇರಿನ ಪ್ರಸ್ತುತ ಮಾರುಕಟ್ಟೆ ಬೆಲೆ.
E (Earnings) = ಕಂಪನಿಯ ಪ್ರತಿ ಷೇರಿನ ಗಳಿಕೆ (EPS - Earnings Per Share).
ಒಂದು ಕಂಪನಿಯ PE ಅನುಪಾತ 10 ಇದೆ ಎಂದರೆ, ಹೂಡಿಕೆದಾರರು ಕಂಪನಿಯ ಪ್ರತಿ ಒಂದು ರೂಪಾಯಿ ಗಳಿಕೆಗೆ 10 ರೂಪಾಯಿ ನೀಡಲು ಸಿದ್ಧರಿದ್ದಾರೆ ಎಂದರ್ಥ.
What is PE Ratio 👇👇
ಬಹಳಷ್ಟು ಸಲ ನಾವೇ ಖುದ್ದಾಗಿ ಹಾಕೋ ಅರೋಗ್ಯ ವಿಮೆ ಕ್ಲೇಮ್ ಗಳು ಇನ್ಶೂರೆನ್ಸ್ ಕಂಪನಿ ಗಳಿಂದ ರಿಜೆಕ್ಟ್ ಆಗತ್ತೆ , ಯಾವೆಲ್ಲ ಕಾರಣಕ್ಕೆ ಮತ್ತೆ ಏನ್ ಮಾಡಬಹುದು ಅಂತ ಒಂದ್ ಪೋಸ್ಟ್ ಮಾಡ್ಬೇಕಾ ?
ಬೇಕು ಅನ್ನೋರು REPOST ಮಾಡಿ , 100 ರೀಪೋಸ್ಟ್ ಬಂದ್ರೆ ಖಂಡಿತ ಪೋಸ್ಟ್ ಹಾಕ್ತಿನಿ
100 🔁 ಮಾಡಿ
ಆರೋಗ್ಯ ವಿಮೆ ಬಗ್ಗೆ ಮತ್ತೊಂದು ಪೋಸ್ಟ್ ಕಾಮೆಂಟ್ ನಲ್ಲಿದೆ ಗಮನಿಸಿ
✅ಷೇರು ಮಾರುಕಟ್ಟೆ ಕಲಿಯುವ ಹಂಬಲವಿದೆಯೇ?
ಹೊಸಬರಿಗಾಗಿ ಸರಳವಾಗಿ ಅರ್ಥವಾಗುವಂತೆ ನಾನೇ ಒಂದು 'Stock Market Model Book' ಅನ್ನು PDF ರೂಪದಲ್ಲಿ ಸಿದ್ಧಪಡಿಸಿದ್ದೇನೆ.
ಇದು ನಿಮ್ಮ ಟ್ರೇಡಿಂಗ್ ಜರ್ನಿಗೆ ಸಹಾಯ ಆಗುತ್ತೆ.
ನಿಮಗೆ ಈ PDF ಬೇಕಿದ್ದರೆ -
1️⃣ Follow at @Sheru_Katte
2️⃣ ಈ ಪೋಸ್ಟ್ ಅನ್ನು Retweet ಮಾಡಿ.
3️⃣ ಕಾಮೆಂಟ್ ಬಾಕ್ಸ್ನಲ್ಲಿ 'PDF' ಎಂದು ಟೈಪ್ ಮಾಡಿ.
ಶೀಘ್ರದಲ್ಲೇ ನಾನು ನಿಮಗೆ Direct Message (DM) ಮೂಲಕ ಕಳುಹಿಸಿಕೊಡುತ್ತೇನೆ! 🚀
Like, Share, Retweet ❤️💚
ಯುದ್ಧಗಳು ಸಿದ್ಧಾಂತಗಳಿಗಾಗಿ ನಡೆಯುತ್ತವೆ ಎಂದು ಜಗತ್ತು ನಂಬುತ್ತದೆ, ಆದರೆ ವಾಸ್ತವದಲ್ಲಿ ಅವು ಸಂಪನ್ಮೂಲ ಮತ್ತು ಕರೆನ್ಸಿಯ ಅಧಿಪತ್ಯಕ್ಕಾಗಿ ನಡೆಯುತ್ತವೆ.
ಈಗ ಅಮೇರಿಕಾ ಇರಾನ್ ಇಸ್ರೇಲ್ ನಡುವೆ
ನಡೆಯುತ್ತಿರುವ ಯುದ್ಧ ಭೌಗೋಳಿಕ ರಾಜಕೀಯದ (Geopolitics) ಒಂದು ಪ್ರಮುಖ ಮತ್ತು ವಾಸ್ತವಿಕ ಆಯಾಮವನ್ನು ಎತ್ತಿ ತೋರಿಸುತ್ತದೆ. ಇದನ್ನು "ಪೆಟ್ರೋಡಾಲರ್" (Petrodollar) ರಾಜಕೀಯ ಮತ್ತು "ಸಾಂಪ್ರದಾಯಿಕ ಶಕ್ತಿ ಸಮರ" ಎಂದು ಕರೆಯಲಾಗುತ್ತದೆ.
ಇರಾನ್ನ ಇಂಧನ ಶಕ್ತಿ ಮತ್ತು ಜಾಗತಿಕ ಮಾರುಕಟ್ಟೆಯ ಮೇಲಿನ ಹಿ��ಿತ-
ಇರಾನ್ ಕೇವಲ ಒಂದು ದೇಶವಲ್ಲ, ಅದು ವಿಶ್ವದ ಅತಿದೊಡ್ಡ ಇಂಧನ ಭಂಡಾರಗಳಲ್ಲಿ ಒಂದು ಎನ್ನುವುದಕ್ಕೆ ಈ ಕೆಳಗಿನ ಅಂಕಿ-ಅಂಶಗಳೇ ಸಾಕ್ಷಿ.
> ಬೃಹತ್ ತೈಲ ಮತ್ತು ಅನಿಲ ನಿಕ್ಷೇಪ- ಇರಾನ್ ಸುಮಾರು 208 ಬಿಲಿಯನ್ ಬ್ಯಾರೆಲ್ ತೈಲ ಮತ್ತು ಅಂದಾಜು 1,200 ಟ್ರಿಲಿಯನ್ ಕ್ಯೂಬಿಕ್ ಅಡಿ ನೈಸರ್ಗಿಕ ಅನಿಲವನ್ನು ಹೊಂದಿದೆ. ಇದು ವಿಶ್ವದ ಅತಿದೊಡ್ಡ ಇಂಧನ ನಿಕ್ಷೇಪಗಳಲ್ಲಿ ಒಂದಾಗಿದೆ.
> ಹಾರ್ಮುಜ್ ಜಲಸಂಧಿ (Strait of Hormuz)- ಜಗತ್ತಿನ ಒಟ್ಟು ತೈಲ ಪೂರೈಕೆಯ ಶೇಕಡಾ 20% ಕ್ಕಿಂತ ಹೆಚ್ಚು ಪ್ರತಿದಿನ ಈ ಕ���ರಿದಾದ ಜಲಸಂಧಿಯ ಮೂಲಕವೇ ಸಾಗುತ್ತದೆ. ಇದು ಜಾಗತಿಕ ಆರ್ಥಿಕತೆಯ ಅತ್ಯಂತ ನಿರ್ಣಾಯಕ 'ನರನಾಡಿ' (Energy Artery) ಇದ್ದಂತೆ.
> ಜಾಗತಿಕ ಪ್ರಭಾವ- ಒಂದು ವೇಳೆ ಇರಾನ್ ಮಿಲಿಟರಿ ಬಲಗೊಂಡರೆ ಅಥವಾ ಪರಮಾಣು ಶಕ್ತಿಯನ್ನು ಹೊಂದಿದರೆ, ಅದು ಈ ಜಾಗತಿಕ ಇಂಧನ ಹರಿವಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತದೆ. ಅಂದರೆ, ಇಡೀ ವಿಶ್ವದ ಇಂಧನ ಬೆಲೆಯನ್ನು ನಿಯಂತ್ರಿಸುವ ಶಕ್ತಿ ಇರಾನ್ಗೆ ಸಿಗುತ್ತದೆ.
ಇದರ ಜೊತೆಗೆ ಇದು ಚೀನಾ ಜೊತೆಗೆ ಹೊಂದಿರುವ ಉತ್ತಮ ಸಂಬಂಧ ಅಮೇರಿಕಾದ ನಿದ್ದೆಗೆಡಿಸಿದೆ.
> ಚೀನಾ ಮತ್ತು ಇರಾನ್ ತೈಲ ಸಂಬಂಧ- ಅಮೆರಿಕದ ಕಠಿಣ ನಿರ್ಬಂಧಗಳ ಹೊರತಾಗಿಯೂ, ಇರಾನ್ನ ಸುಮಾರು 90% ತೈಲ ರಫ್ತು ಚೀನಾಕ್ಕೆ ಹೋಗುತ್ತದೆ. ಚೀನಾ ಇದನ್ನು ಡಾಲರ್ ಬದಲಿಗೆ ತನ್ನದೇ ಕರೆನ್ಸಿಯಾದ ಯುವಾನ್ (Yuan) ನಲ್ಲಿ ಪಾವತಿಸುತ್ತದೆ. ಇದು ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಅಮೆರಿಕದ ಡಾಲರ್ ಅಧಿಪತ್ಯಕ್ಕೆ (Dollar Hegemony) ದೊಡ್ಡ ಸವಾಲಾಗಿದೆ.
'ಪೆಟ್ರೋಡಾಲರ್' ವ್ಯವಸ್ಥೆಗೆ ಧಕ್ಕೆ-
ವಿಶ್ವದ ತೈಲ ವ್ಯಾಪಾರ��ು ಹೆಚ್ಚಾಗಿ ಡಾಲರ್ನಲ್ಲೇ ನಡೆಯುತ್ತದೆ. ಇರಾನ್, ರಷ್ಯಾ ಮತ್ತು ವೆನೆಜುವೆಲಾದಂತಹ ದೇಶಗಳು ಡಾಲರ್ ಬಿಟ್ಟು ಬೇರೆ ಕರೆನ್ಸಿಯಲ್ಲಿ ವ್ಯಾಪಾರ ಮಾಡಿದರೆ, ಅದು ಅಮೆರಿಕದ ಆರ್ಥಿಕ ಶಕ್ತಿಯನ್ನು ಕುಗ್ಗಿಸುತ್ತದೆ. ಇರಾನ್ ಮೇಲೆ ಯುದ್ಧ ಅಥವಾ ದಾಳಿ ಮಾಡುವುದರಿಂದ, ಆ ತೈಲ ಮಾರುಕಟ್ಟೆಯನ್ನು ಮತ್ತೆ ಡಾಲರ್ ವ್ಯಾಪ್ತಿಗೆ ತರಬಹುದು ಎಂಬುದು ಅಮೇರಿಕಾದ ನಡೆ.
ಚೀನಾವನ್ನು ಕಟ್ಟಿಹಾಕುವುದು-
ಚೀನಾ ವಿಶ್ವದ ಅತಿದೊಡ್ಡ ತೈಲ ಆಮದುದಾರ ದೇಶ. ಇರಾನ್ನಿಂದ ಅಗ್ಗದ ದರದಲ್ಲಿ ತೈಲ ಸಿ��ದಿದ್ದರೆ ಚೀನಾದ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ. ವೆನೆಜುವೆಲಾ ಮತ್ತು ಇರಾನ್ ಮೇಲೆ ನಿರ್ಬಂಧ ಹೇರುವ ಮೂಲಕ ಅಮೆರಿಕವು ಚೀನಾ�� ತೈಲ ಪೂರೈಕೆ ಸರಪಳಿಯನ್ನು (Supply Chain) ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವುದು ನಿಜ...
ಇರಾನ್ ಮತ್ತು ಚೀನಾ ವ್ಯಾಪಾರ ಚಕ್ರ
ಇರಾನ್ ತೈಲ ಮಾರಿ ಗಳಿಸಿದ ಯುವಾನ್ಗಳನ್ನು ಮತ್ತೆ ಚೀನಾದಿಂದ ಯಂತ್ರೋಪಕರಣಗಳು, ತಂತ್ರಜ್ಞಾನ ಮತ್ತು ರಕ್ಷಣಾ ಸಾಧನಗಳನ್ನು ಖರೀದಿಸಲು ಬಳಸುತ್ತದೆ. ಇದು ಚೀನಾದ ಆರ್ಥಿಕತೆಗೆ ದೊಡ್ಡ ಬಲ ನೀಡುತ್ತದೆ. ಈ ಚಕ್ರವನ್ನು ಮುರಿಯುವುದು ಅಮೆರಿಕದ ಕಾರ್ಯತಂತ್ರದ ಭಾಗ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಈ ಸಂಘರ್ಷವು ಕೇವಲ ಎರಡು ದೇಶಗಳ ನಡುವಿನ ವೈಷಮ್ಯವಲ್ಲ. ಇದು ಜಗತ್ತಿನ ಭವಿಷ್ಯದ ಆರ್ಥಿಕತೆಯನ್ನು ಯಾರು ನಿಯಂತ್ರಿಸುತ್ತಾರೆ ಎಂಬ ಹಗ್ಗಜಗ್ಗಾಟ.
ಇತಿಹಾಸದಲ್ಲಿ ನಡೆದ ಬಹುತೇಕ ದೊಡ್ಡ ಯುದ್ಧಗಳ ಹಿಂದೆ 'ಶಾಂತಿ' ಅಥವಾ 'ಧರ್ಮ'ದ ಮಾತುಗಳಿದ್ದರೂ, ಅದರ ಆಳದಲ್ಲಿ ಯಾವಾಗಲೂ ಸಂಪನ್ಮೂಲ ಮತ್ತು ಕರೆನ್ಸಿಯ ಅಧಿಕಾರವೇ ಇರುತ್ತದೆ. ಇರಾನ್ ಬಿಕ್ಕಟ್ಟು ಇದಕ್ಕೆ ಇತ್ತೀಚಿನ ಮತ್ತು ಜೀವಂತ ಉದಾಹರಣೆ.