ತಮ್ಮ ಕೀರ್ತನಾಮೃತದ ಮೂಲಕ ಸಮಾಜದಲ್ಲಿನ ಅನಿಷ್ಟ ಪದ್ಧತಿಗಳು ಮೌಢ್ಯಗಳ ಕುರಿತು ಅರಿವು ಮೂಡಿಸಿದ ಮಹಾನ್ ದಾರ್ಶನಿಕ ಮೇಲುಕೀಳಿಲ್ಲದ ನಿಜವಾದ ಭಕ್ತಿಯ ಮಾನವೀಯ ಮೌಲ್ಯವುಳ್ಳ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿಯಂದು ಗೌರವ ನಮನಗಳು
#KanakadasaJayanti#ಕನಕದಾಸಜಯಂತಿ#ಕನಕಜಯಂತಿ#KanakaJayanti
ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ದರ್ಶನ್ ಧ್ರುವನಾರಾಯಣ್ ಹಾಗೂ ಡಾ. ಶ್ರೀನಿಧಿ ಅವರು ಮಂತ್ರ ಮಾಂಗಲ್ಯದ ಮೂಲಕ ಹೊಸ ಜೀವನಕ್ಕೆ ಮುನ್ನುಡಿ ಬರೆದಿರುವ ಬಾಳ ಪಯಣದ ಪ್ರತಿ ಹೆಜ್ಜೆಯೂ ಸಂತಸದಿಂದ ಕೂಡಿರಲಿ ಎಂದು ಶ್ರೀ ನಂಜುಂಡೇಶ್ವರ ಸ್ವಾಮಿಯವರಲ್ಲಿ ಪ್ರಾರ್ಥಿಸುತ್ತೇವೆ
#DarshanDhruvanarayan#nanjanagudu#ನಂಜನಗೂಡು
ನವೆಂಬರ್ 26ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಂವಿಧಾನ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ
ಬನ್ನಿ,
ಸಂವಿಧಾನವನ್ನು ಗೌರವಿಸೋಣ.
ಪ್ರಜಾಪ್ರಭುತ್ವವನ್ನು ಬಲಪಡಿಸೋಣ.
ಸಮಾನತೆಯ ಸಮಾಜವನ್ನು ನಿರ್ಮಿಸೋಣ.
ಸಂವಿಧಾನದ ದಿನದಲ್ಲಿ ಭಾಗವಹಿಸೋಣ 💙💙
#IndianConstitution#ConstitutionDay#DrBRAmbedkar#SamvidhanDiwas
ಕೊಡಗಿನ ಬಂಧುಗಳಿಗೆ ಸುಗ್ಗಿಯ ಸಂಭ್ರಮ ಹುತ್ತರಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಪಾಡಿ ಇಗ್ಗುತ್ತಪ್ಪ ಹಾಗು ಲೋಕಪಾವನಿ ಶ್ರೀ ಕಾವೇರಿ ಮಾತೆಯ ಕೃಪೆಯಿಂದ ಎಲ್ಲರ ಬಾಳಲ್ಲೂ ಸುಖ ಶಾಂತಿ, ನೆಮ್ಮದಿ ಸಮೃದ್ಧಿ ಸದಾ ತುಂಬಿರಲಿ ಎಂದು ಪ್ರಾರ್ಥಿಸುತ್ತೇವೆ
#ಹುತ್ತರಿಹಬ್ಬ#ಕೊಡಗು#huttari
ಕರ್ನಾಟಕ ರತ್ನ, ಪದ್ಮವಿಭೂಷಣ, ರಾಜ್ಯಸಭಾ ಸದಸ್ಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು
ನಿಮ್ಮ ಮಾರ್ಗದರ್ಶನ ಹಾಗೂ ಆಶೀರ್ವಾದ ನಾಡಿನ ಜನತೆಗೆ ಸದಾ ದೊರೆಯಲಿ ಎಂದು ಪ್ರಾರ್ಥಿಸುತ್ತೇವೆ
#ವೀರೇಂದ್ರಹೆಗ್ಗಡೆ#Dharmasthala#VeerendraHeggade
ಯುವ ಪ್ರತಿಭೆ ವೈಭವ್ ಸೂರ್ಯವಂಶಿ ʻಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026' ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಯುಎಇ ವಿರುದ್ಧ ಭಾರತ 'ಎ' ತಂಡದ ಪರ ವೈಭವ್ ಸೂರ್ಯವಂಶಿ ಕೇವಲ 52 ಎಸೆತಗಳಲ್ಲಿ ವೇಗದ ದ್ವಿಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ
#VaibhavSuryavanshi#TeamIndia | #RisingStarsAsiaCup | #INDAvUAE
ನಾಡಿನ ಸಮಸ್ತ ಜನತೆಗೆ ಶ್ರೀ ಗುರುನಾನಕ್ ಜಯಂತಿಯ ಹಾರ್ದಿಕ ಶುಭಾಶಯಗಳು
ಸಮಾನತೆ, ಸಹೋದರತೆ ಹಾಗೂ ವಿಶ್ವಪ್ರೇಮದ ಸಂದೇಶವನ್ನು ಸಾರಿದ ಮಹಾನ್ ಸಂತ ಶ್ರೀ ಗುರುನಾನಕರಿಗೆ ಭಕ್ತಿಪೂರ್ವಕ ನಮನಗಳು.
ಅವರ ಬದುಕು, ಚಿಂತನೆಗಳು ಹಾಗೂ ಬೋಧನೆಗಳು ಸರ್ವಕಾಲಕ್ಕೂ ಸ್ಫೂರ್ತಿದಾಯಕ ಮತ್ತು ಅನುಕರಣೀಯ. #ಗುರುನಾನಕ್_ಜಯಂತಿ#GuruNanakJayanti
ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ವೀರಾವೇಶದಿಂದ ಹೋರಾಡಿ ಪ್ರಾಣ ತ್ಯಾಗಗೈದ, ಧೈರ್ಯ–ಶೌರ್ಯಗಳಿಗೆ ಹೆಸರಾದ ಹಾಗೂ ಸ್ತ್ರೀಶಕ್ತಿಯ ಸಂಕೇತವಾಗಿರುವ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಅವರ ಜಯಂತಿಯ ಸಂದರ್ಭದಲ್ಲಿ ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. #ಝಾನ್ಸಿರಾಣಿಲಕ್ಷ್ಮೀಬಾಯಿ#RaniLakshmiBai#JhansiRaniLakshmiBai
ಭಾರತದ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಧೀಮಂತ ನಾಯಕಿ, ದೇಶದ ಮೊದಲ ಮಹಿಳಾ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
ಬಲಿಷ್ಠ ಭಾರತದ ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆ ಹಾಗೂ ನಾಯಕತ್ವ ಸದಾ ಸ್ಮರಣೀಯ.
#IndiraGandhi#IronLadyOfIndia#ಇಂದಿರಾಗಾಂಧಿ#IndiraGandhiJi
ಪ್ರಕೃತಿಯ ಮಡಿಲಲ್ಲಿಯೇ ನಿಜವಾದ ಆರೋಗ್ಯ ಅಡಗಿದೆ ಎಂಬುದನ್ನು ಸಾರುವ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನದ ಶುಭಾಶಯಗಳು.
ಆಧುನಿಕ ಜೀವನದ ಒತ್ತಡಗಳ ನಡುವೆ ಪಂಚಭೂತಗಳ ಶಕ್ತಿಯನ್ನು ಅರಿತುಕೊಂಡು, ನೈಸರ್ಗಿಕ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ.
#NationalNaturopathyDay#NatureCure#HealthyLifestyle#Ayurveda
ಸ್ವಾತಂತ್ರ್ಯ ಹೋರಾಟದ ಕಿಚ್ಚು, ಅಚಲ ದೇಶಭಕ್ತಿ ಹಾಗೂ ತ್ಯಾಗದ ಪ್ರತೀಕವಾಗಿದ್ದ ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಅವರ ಪುಣ್ಯಸ್ಮರಣೆಯಂದು ಶತಕೋಟಿ ನಮನಗಳು.
ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಅವರ ��ೈರ್ಯ, ಹೋರಾಟದ ಮನೋಭಾವ ಮತ್ತು ರಾಷ್ಟ್ರಪ್ರೇಮ ಸದಾ ನಮಗೆ ಸ್ಫೂರ್ತಿಯಾಗಿರಲಿ.
#LalaLajpatRai #PunjabKesari
ಸರ್ವೋದಯ, ಗ್ರಾಮಸ್ವರಾಜ್ಯ ಮತ್ತು ಸರಳ ಜೀವನದ ಉನ್ನತ ಮೌಲ್ಯಗಳನ್ನು ಜನಮಾನಸಕ್ಕೆ ತಲುಪಿಸಿದ ಮಹಾನ್ ಸಮಾಜ ಸುಧಾರಕರಾದ ಭಾರತ ರತ್ನ ಆಚಾರ್ಯ ವಿನೋಬಾ ಭಾವೆ ಅವರ ಪುಣ್ಯಸ್ಮರಣೆಯಂದು ಭಾವಪೂರ್ಣ ನಮನಗಳು.
#VinobaBhave#BhoodanMovement#Sarvodaya#GramSwaraj
"ನಮ್��� ಕಾಡು, ನಮ್ಮ ಭೂಮಿ ನಾವೇ ಆಳಬೇಕಾದವರು" ಎಂದು ಬ್ರಿಟಿಷರ ವಿರುದ್ಧ ಆದಿವಾಸಿ ಬುಡಕಟ್ಟು ಜನರನ್ನು ಸಂಘಟಿಸುವ ಮೂಲಕ ತನ್ನ ಜನ್ಮಭೂಮಿಯನ್ನು ರಕ್ಷಿಸಿಕೊಳ್ಳಲು ಹೋರಾಡಿದ ವೀರ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
#birsamunda
#BirsaMundaJayanti #BhagwanBirsaMunda
ಅಂಡರ್-19 ಏಷ್ಯಾ ಕಪ್ 🏆 ಭಾರತವೇ ಚಾಂಪಿಯನ್ 🇮🇳🏏
ಪಾಕಿಸ್ತಾನ ವಿರುದ್ಧದ ರಣರೋಚಕ ಫೈನಲ್ನಲ್ಲಿ ಕೊನೆಯ ಎಸೆತದವರೆಗೂ ಎದೆಗುಂದದೆ ಚರಿತ್ರೆ ಬರೆದ ನಮ್ಮ ಯುವ ಸಿಂಹಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
#U19AsiaCup#Champions#TeamIndia#INDvPAK
ಸಾವಿರಾರು ಮರಗಳನ್ನು ತಮ್ಮ ಮಕ್ಕಳಂತೆ ಪೋಷಿಸಿ, ಸಮಾಜಕ್ಕೆ ಅದರಲ್ಲಿಯೂ ಹೊಸ ತಲೆಮಾರಿನ ಯುವ ಜನತೆಗೆ ಪರಿಸರ ಪ್ರೇಮದ ಪಾಠ ಕಲಿಸಿದ 'ವೃಕ್ಷಮಾತೆ', ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಅವರ ಪುಣ್ಯಸ್ಮರಣೆಯಂದು ಆ ಚೇತನಕ್ಕೆ ನಮ್ಮ ಪ್ರಣಾಮಗಳು .
#ಸಾಲುಮರದತಿಮ್ಮಕ್ಕ#SaalumaradaThimmakka#ವೃಕ್ಷಮಾತೆ#Vrukshamathe