ತೆಲುಗು ಚಿತ್ರರಂಗದ ನಟರು ಕಳೆದ ವಾರ ಬಿಡುಗಡೆ ಆದ ಇರುಮುಡಿ ಅನ್ನುವ ತೆಲುಗು ಚಿತ್ರಕ್ಕೆ ಈಗ ಹಾರೈಸ್ತಾ ಇದ್ದಾರೆ. ಪಾಪ ಕಳೆದ ವಾರ ಏನ್ ಸಮಸ್ಯೆ ಆಗಿತ್ತೋ ಗೊತ್ತಿಲ್ಲ. ಇವತ್ತು #toxicthemovie ಬಿಡುಗಡೆ ಆದ ದಿನ ಅದರ ಬಗ್ಗೆ ಏನು ಮಾತಾಡದೆ ಕಳೆದ ವಾರದ ಸಿನಿಮಾಗೆ ಇವತ್ತು ಹಾರೈಸೋದು ಕಾಕತಾಳೀಯ ಅಂದುಕೊಳ್ಳುವಷ್ಟು ಅಮಾಯಕರು ನಾ��ಲ್ಲ.
ಅರವತ್ತು ವರ್ಷಗಳ ಹಿಂದೆ ಬೆಂಗಳೂರು ಇಷ್ಟು ದೊಡ್ಡದಾಗಿರಲಿಲ್ಲ. ಆಗ ಎರಡು ಬೆಂಗಳೂರು ಇತ್ತು. ಅತ್ತ ಕಡೆ ದಂಡು ಪ್ರದೇಶದ ಭಾಗ ಮತ್ತು ಇತ್ತ ಕಡೆ ನಗರ ಪ್ರದೇಶದ ಭಾಗ. ನಾವೆಲ್ಲ ನಗರದಲ್ಲಿ ಓಡಾಡುತ್ತಿದ್ದೆವೇ ಹೊರತು ದಂಡು ಪ್ರದೇಶದ ಕಡೆಗೆ ಹೋಗುತ್ತಿರಲಿಲ್ಲ.
ನಾನು ಹುಟ್ಟಿದ್ದು, ಬೆಳೆದಿದ್ದು ವಿದ್ಯಾಭ್ಯಾಸ ಮಾಡಿದ್ದೆಲ್ಲ ಮೈಸೂರಿನಲ್ಲಿ. 1940ರ ವೇಳೆಗೆ ಬೆಂಗಳೂರಿಗೆ ಬಂದೆ. ವಿಜಯಾ ಕಾಲೇಜಿನಲ್ಲಿ ಕೆಲಸ ಸಿಕ್ಕ ನಂತರ ಬೆಂಗಳೂರು ಕಾಯಂ ವಾಸಸ್ಥಳವಾಯಿತು.
ಬೆಂಗಳೂರಿಗೆ ಬಂದ ಹೊಸತರಲ್ಲಿ ವಾಸ ಮಾಡುತ್ತಿದ್ದದ್ದು ವಿಶ್ವೇಶ್ವರಪುರದಲ್ಲಿ. ಆಗ ವಿಶ್ವೇಶ್ವರಪುರ ಬೆಂಗಳೂರಿನ ಕೇಂದ್ರ ಪ್ರದೇಶವಾಗಿತ್ತು. ತುಂಬಾ ಸೊಗಸಾದ ಜಾಗವದು. ಈಗ ಅದನ್ನು ನೆನಪು ಮಾಡಿಕೊಳ್ಳುವುದಕ್ಕೆ ಆಗುವುದೇ ಇಲ್ಲ.
ವಿಶ್ವೇಶ್ವರಪುರದ ವೃತ್ತ ಇದೆ ನೋಡಿ, ಅಲ್ಲಿ ಸುಂದರವಾದ ಹುಲ್ಲುಗಾವಲಿತ್ತು. ಸಾಯಂಕಾಲದ ಹೊತ್ತು ಹೆಂಗಸರೆಲ್ಲ ತಮ್ಮ ಮಕ್ಕಳೊಂದಿಗೆ ಅಲ್ಲಿ ಬಂದು ಕುಳಿತುಕೊಳ್ಳುತ್ತಿದ್ದರು.
ವೈಶ್ಯ ಸಮುದಾಯದವರು ಹೆಚ್ಚಾಗಿದ್ದ ಪ್ರದೇಶವದು. ಈಗ ಅಲ್ಲಿ ವೈಶ್ಯರು ಇಲ್ಲವೇ ಇಲ್ಲ. ಜೈನ ಸಮುದಾಯದವರು ಸೇರಿಕೊಂಡಿದ್ದಾರೆ. ದೇವಸ್ಥಾನ ಕೂಡ ಕಟ್ಟಿಕೊಂಡಿದ್ದಾರೆ.
ಅಂದಿನ ದಿನಗಳಲ್ಲಿ ಬೆಂಗಳೂರು ಎಂದರೆ ಮಲ್ಲೇಶ್ವರ, ಮಾರ್ಕೆಟ್, ಶಂಕರಪುರ, ಚಾಮರಾಜಪೇಟೆ, ಬಸವನಗುಡಿ, ಹನುಮಂತನಗರ, ವಿಶ್ವೇಶ್ವರಪುರ... ಅಲ್ಲಿ ನಾಗಸಂದ್ರ ಅಂತ ಒಂದು ಹಳ್ಳಿ ಇತ್ತು... ಡಿಸ್ಟ್ರಿಕ್ಟ್ ಆಫೀಸ್ ಕಡೆಗೊಂದಿಷ್ಟು ಬೆಳೆದಿತ್ತು. ಇಷ್ಟೇ ಬೆಂಗಳೂರು ಇದ್ದಿದ್ದು.
ರಾಗಿ ಪೈರಿನ ಸಮೃದ್ಧಿ
ವಿಲ್ಸನ್ ಗಾರ್ಡನ್ ಅನ್ನುವುದು ಕೂಡ ಹೊಸದು. ಜಯನಗರವೂ ಹೊಸದು. ನಿಟ್ಟೂರು ಶ್ರೀನಿವಾಸರಾಯರ ಮನೆ ಇದೆ ನೋಡಿ, ಅಲ್ಲಿ ಸೌತ್ ಎಂಡ್ ರಸ್ತೆ ಇದ್ಯಲ್ಲ, ಅದು ನಿಜವಾಗಿಯೂ ಬೆಂಗಳೂರಿನ ಕೊನೆ ಆಗಿತ್ತು. ಅಲ್ಲಿಂದ ಆಚೆಗೆಲ್ಲ ರಾಗಿ ಹೊಲಗಳು. ರಾಗಿಗುಡ್ಡ ಬೇರೆ ಇದೆ ಅಲ್ಲಿ. ನಿಟ್ಟೂರು ಶ್ರೀನಿವಾಸರಾಯರ ಮನೆ ಎದುರು ನಿಂತುಕೊಂಡರೆ ರಾಗಿ ಪೈರು ಕಾಣುತ್ತಿತ್ತು.
ಆಮೇಲೆ ಜಯನಗರ ಅಂತ ದೊಡ್ಡ ಬಡಾವಣೆ ಆರಂಭಿಸಿದರು. ಸೊಗಸಾದ ಮುಖ್ಯರಸ್ತೆ– ಅಡ್ಡರಸ್ತೆಗಳನ್ನು ಮಾಡಿದರು. ಈಗ ಆ ಪ್ರದೇಶವೇ ��ಗರದ ಕೇಂದ್ರವಾಗಿದೆ. ಆಗ ನಮಗೆ ಬೆಂಗಳೂರು ಇಷ್ಟೊಂದು ಬೆಳೆಯುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ.
ವಿಶ್ವೇಶ್ವರಪುರದಲ್ಲಿದ್ದಾಗ ವಾಯುವಿಹಾರಕ್ಕಾಗಿ ಲಾಲ್ಬಾಗ್ಗೆ ಹೋಗುತ್ತಿದ್ದೆ. ಲಾಲ್ಬಾಗ್ಗೆ ಒಂದು ಸುತ್ತು ಹಾಕಿ ಮನೆಗೆ ಬಂದರೆ ದೇಹಕ್ಕೆ ವ್ಯಾಯಾಮವಾಗಿ ಮನಸ್ಸು ಉಲ್ಲಸಿತವಾಗುತ್ತಿತ್ತು. ಅದಿಲ್ಲದೆ ಹೋದರೆ ಬಸವನಗುಡಿ ಗುಡ್ಡ ಇದ್ಯಲ್ಲ, ಅಲ್ಲಿಗೆ ಹೋಗ್ತಾ ಇದ್ದೆ. ಬಸವನಗುಡಿಯಲ್ಲಿನ ಬಸವನ ವಿಗ್ರಹ ನೋಡಿ ನಮಸ್ಕಾರ ಮಾಡಿ ಬರುತ್ತಿದ್ದೆ. ನರಹರಿರಾಯನ ಗುಡ್ಡದ��್ಲಿಯೂ ಒಂದು ದೇವಸ್ಥಾನ ಇದೆ. ಅಲ್ಲಿಗೂ ಸುತ್ತಾಡಲು ಹೋಗುತ್ತಿದ್ದೆ.
ಮಾರ್ಕೆಟ್ನ ಬೆರಕೆ ಸೊಪ್ಪು
ತರಕಾರಿ ತೆಗೆದುಕೊಳ್ಳಬೇಕು ಎಂದರೆ ವಿಶ್ವೇಶ್ವರಪುರದಿಂದ ಮಾರ್ಕೆಟ್ಗೆ ಹೋಗಬೇಕಾಗಿತ್ತು. ಮಾರ್ಕೆಟ್ನಲ್ಲಿ ಒಂದು ಕಡೆ ಬೆರಕೆ ಸೊಪ್ಪು ಅಂತ ಮಾರುತ್ತಿದ್ರು. ಯಾವ್ಯಾವುದೋ ಸೊಪ್ಪುಗಳನ್ನು ಸೇರಿಸಿ ಕೂಡಿಸಿ ಗುಡ್ಡೆ ಮಾಡಿ ಇಟ್ಟಿರುತ್ತಿದ್ದರು. ಎರಡಾಣೆಗೆ ಒಂದು ಗುಡ್ಡೆ ಸಿಗುತ್ತಿತ್ತು. ಒಂದು ಗುಡ್ಡೆ ತಗೊಂಡ್ರೆ ಒಂದು ಸಣ್ಣ ಕುಟುಂಬಕ್ಕೆ ಸಾಕಾಗುವಷ್ಟು ಹುಳ��� ಮಾಡಬಹುದಿತ್ತು.
ಅದು ಬಿಟ್ಟರೆ ಗಾಂಧಿ ಬಜಾರ್ನಲ್ಲಿಯೂ ತರಕಾರಿ ಸಿಗುತ್ತಿತ್ತು. ಈ ಎರಡು ಜಾಗಗಳನ್ನು ಬಿಟ್ಟರೆ, ಈಗಿನ ಹಾಗೆ ಗಾಡಿಯಲ್ಲಿ ತುಂಬಿಕೊಂಡು ಬೀದಿ ಬೀದಿಗೆ ಬರುತ್ತಾರಲ್ಲಾ, ಹಾಗೆ ಯಾರೂ ಬರುತ್ತಿರಲಿಲ್ಲ.
ಆಗ ಹೋಟೆಲ್ಗಳ ಸಂಖ್ಯೆಯೂ ಕಡಿಮೆ ಇತ್ತು. ಹೋಟೆಲ್ಗೆ ಹೋಗಿ ತಿಂಡಿ ತಿನ್ನುವ ಪದ್ಧತಿ ಅಷ್ಟಾಗಿ ಇರಲಿಲ್ಲ. ಈಗ ಬೀದಿಗೊಂದು ಹೋಟೆಲ್ ಇದೆ. ವಿಶ್ವೇಶ್ವರಪುರದಿಂದ ಮಲ್ಲೇಶ್ವರಕ್ಕೆ ಸ್ನೇಹಿತರನ್ನು ನೋಡಲು ನಾನು ನಡೆದುಕೊಂಡು ಹೋಗುತ್ತಿದ್ದೆ. ಅಲ್ಲಿನ ನನ್ನ ಸ್ನೇಹಿತರೂ ಇಲ್ಲಿಗೆ ಬರುತ್ತಿದ್ದರು.
ಪರ್ವತವಾಣಿ ಅಂತ ನನ್ನ ಸ್ನೇಹಿತರಿದ್ದರು. ಆರ್. ಗುರುರಾಜಲು ಅವರೂ ಸ್ನೇಹಿತರಾಗಿದ್ದರು. ನಾವೆಲ್ಲ ಸೇರಿ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಮಾತನಾಡುತ್ತಾ ಕಾಲ ಕಳೆಯುತ್ತಿದ್ದೆವು. ವಿಶ್ವಾಸದ ಮಾತು, ಸಾಹಿತ್ಯದ ಚರ್ಚೆ, ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳನ್ನು ಮಾತನಾಡುತ್ತಿದ್ದೆವು. ಹೊಸದಾಗಿ ಬಂದ ಪುಸ್ತಕಗಳ ಬಗ್ಗೆ ಚರ್ಚಿಸುತ್ತಿದ್ದೆವು. ಆ ಚರ್ಚೆಯೇ ಒಳ್ಳೆಯ ವಿಮರ್ಶೆಯಾಗಿರುತ್ತಿತ್ತು.
ಆಗಿನ ಕಾಲದಲ್ಲಿ ಸಿನಿಮಾ ನೋಡುವುದು ಒಂದು ಹುಚ್ಚು. ‘ಒಪೆರಾ’ದಲ್ಲಿ ಇಂಗ್ಲಿಷ್ ಚಿತ್ರಗಳು ಬರುತ್ತಿದ್ದವು. ಅದನ್ನು ನೋಡಲು ಶನಿವಾರ, ಭಾನುವಾರ ಸ್ನೇಹಿತರ ಜೊತೆಗೆ ಹೋಗುತ್ತಿದ್ದೆ.
ಡಿವಿಜಿ ಅವರಿಂದ ಭಗವದ್ಗೀತೆ ಪಾಠ
ಬಸವನಗುಡಿ ಪೊಲೀಸ್ ಸ್ಟೇಷನ್ ವೃತ್ತದ ಸನಿಹ ಡಿ.ವಿ.ಗುಂಡಪ್ಪನವರು ಒಂದು ಬಾಡಿಗೆ ಮನೆಯ���್ಲಿ ‘ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ’ ಆರಂಭಿಸಿದ್ದರು. ಅಲ್ಲಿ ನಿತ್ಯ ಸಂಜೆ ಯಾವುದಾದರೂ ವಿಚಾರ ಇಟ್ಟುಕೊಂಡು ಚರ್ಚೆ ಮಾಡುತ್ತಿದ್ದರು.
ಅಲ್ಲಿ ಭಗವದ್ಗೀತೆಯನ್ನು ಮೊದಲಿನಿಂದಲೂ ಕೊನೆಯವರೆಗೆ ಎರಡು ಸಲ ಪಾಠ ಮಾಡಿದ್ದರು. ಸಾಯಂಕಾಲ ಆರರಿಂದ ಏಳೂವರೆ ತನಕ ಭಗವದ್ಗೀತೆ ಶ್ಲೋಕ ಓದಿ ಅರ್ಥ ವ್ಯಾಖ್ಯಾನ ಮಾಡುತ್ತಿದ್ದರು. ನಾವೆಲ್ಲ ಅವರ ಮಾತನ್ನು ಕೇಳಲಿಕ್ಕೆ ಹೋಗುತ್ತಿದ್ದೆವು.
ಅವರು ಪಾಠ ಮಾಡಿದ್ದನ್ನೆಲ್ಲ ಅವರ ಶಿಷ್ಯ ಎಸ್.ಆರ್.ರಾಮಸ್ವಾಮಿ ಸಂಗ್ರಹಿಸಿ ‘ಪ್ರಜಾ���ತ’ ಪತ್ರಿಕೆಗೆ ಬರೆಯುತ್ತಿದ್ದರು. ಆ ಬರಹಗಳೆಲ್ಲ ಸೇರಿ ‘ಜೀವನ ಧರ್ಮ ಯೋಗ’ ಎಂಬ ಒಂದು ಪುಸ್ತಕವೂ ಬಂದಿದೆ.
ಆ ಪುಸ್ತಕಕ್ಕೆ 1964ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. ಆಗ ನಾನು ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿದ್ದೆ. ಅಕಾಡೆಮಿಯಿಂದ ಫೋನ್ ಮಾಡಿ ನನಗೆ ವಿಷಯ ತಿಳಿಸಿದರು. ನಾನು ಹೋಗಿ ಗುಂಡಪ್ಪನವರಿಗೆ, ‘ಸರ್ ನಿಮ್ಮ ಪುಸ್ತಕಕ್ಕೆ ಪ್ರಶಸ್ತಿ ಬಂದಿದೆ’ ಎಂದು ಹೇಳಿದೆ. ‘ನನಗೆ ಬಹುಮಾನ ಬಂದಿದೆಯೇ? ಗೋಖಲೆ ಇನ್ಸ್ಟಿಟ್ಯೂಟ್ಗೆ ಒಂದಿಷ್ಟು ದುಡ್ಡು ಬಂತು’ ಎಂದು ಪ್ರತಿಕ್ರಿಯಿಸಿದ್ದರು.
From FB.
Continues..
ಅಮೇರಿಕಾದಿಂದ ತಾಯ್ನಾಡಿಗೆ ಮರಳಿ ಬಂದಿದ್ದು, ನನ್ನ ಸ್ವಾರ್ಥಕ್ಕಾಗಿ ಅಲ್ಲ…
ನನ್ನ ನಾಡಿಗೆ ಏನಾದರೂ ಮಾಡಬೇಕು, ಹದಗೆಟ್ಟಿರುವ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂಬ ಒಂದೇ ಉದ್ದೇಶದಿಂದ.
ಬರೀ ದುಡ್ಡೇ ಮುಖ್ಯವಾಗಿದ್ದರೆ, ನಾನು ಇವತ್ತು ಒಂದು ಕಂಪನಿಯ CEO ಆಗಿರುತ್ತಿದ್ದೆ.
ಬರೀ ಅಧಿಕಾರವೇ ಮುಖ್ಯವಾಗಿದ್ದರೆ, JDS, BJP ಅಥವಾ Congress ಸೇರಿ ಅಧಿಕಾರದ ರಾಜಕಾರಣ ಮಾಡಬಹುದಿತ್ತು.
ಆದರೆ ನನಗೆ ನನ್ನ ಜೀವನ ಮುಖ್ಯವಲ್ಲ…
ಜನರ ಬದುಕು ಮುಖ್ಯ.
ಅಸಹಾಯಕರು, ಶೋಷಿತರು, ಬಡವರು ಮತ್ತು ಸಾಮಾನ್ಯ ಜನರು ಪ್ರತಿದಿನ ಭ್ರಷ್ಟಾಚಾರ, ಅನ್ಯಾಯ ಹಾಗೂ ಅಧಿಕಾರದ ದರ್ಪದಿಂದ ನರಳುತ್ತಿರುವಾಗ, ಅದನ್ನು ನೋಡಿಕೊಂಡು ಸುಮ್ಮನೆ ಬದುಕುವುದು ನನಗೆ ಸಾಧ್ಯವಿಲ್ಲ.
ನಾನು ರಾಜಕೀಯಕ್ಕೆ ಬಂದಿರುವುದರಿಂದ ನನಗೆ ವೈಯಕ್ತಿಕವಾಗಿ ಏನು ಲಾಭ?
ಏನೂ ಇಲ್ಲ.
ಇಂದಿಗೂ ನಾನು ರಾಜಕೀಯದಿಂದ ಹಿಂದೆ ಸರಿದರೆ, ಆರಾಮವಾಗಿ, ಯಾವುದೇ ಕೊರತೆಯಿಲ್ಲದೆ ರಾಯಲ್ ಜೀವನ ನಡೆಸಬಹುದು.
ಆದರೆ ನಾನು ಆ��ಿಸಿಕೊಂಡಿರುವ ದಾರಿ ಸುಲಭದ ದಾರಿಯಲ್ಲ… ಜನರಿಗಾಗಿ ಹೋರಾಡುವ ದಾರಿ.
ನನ್ನ ಗುರಿ ಅಧಿಕಾರವನ್ನು ಅನುಭವಿಸುವುದಲ್ಲ;
ಅಧಿಕಾರ ವ್ಯವಸ್ಥೆಯನ್ನು ಜನರ ಸೇವೆಗೆ ಬಳಸುವಂತಹ ಬದಲಾವಣೆ ತರುವುದು.
ಭ್ರಷ್ಟಾಚಾರಕ್ಕೆ ಕಡಿವಾಣ, ಆ��ಳಿತದಲ್ಲಿ ಪಾರದರ್ಶಕತೆ, ಸಾಮಾನ್ಯ ಜನರಿಗೆ ನ್ಯಾಯ ಮತ್ತು ಪ್ರತಿಯೊಬ್ಬರಿಗೂ ಗೌರವಯುತ ಬದುಕು ಸಿಗಬೇಕು.
ನನ್ನ ಗೆಲುವಿಗಿಂತ ಜನರ ಗೆಲುವು ಮುಖ್ಯ.
ನನ್ನ ಭವಿಷ್ಯಕ್ಕಿಂತ ನಾಡಿನ ಭವಿಷ್ಯ ಮುಖ್ಯ.
ಅದಕ್ಕಾಗಿಯೇ ಈ ಹೋರಾಟ… ಬದಲಾವಣೆಗಾಗಿ ಈ ಪ್ರಯತ್ನ..
Ravi Krishna Reddy - ಗೌರವಾಧ್ಯಕ್ಷರು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party
@kotakneo@Ashish1Nanda
What is instant withdrawal? why you communication to customer withdrawal instant we are 2026 era we still withdrawal our own money need to be wait for working days but banking working Saturday also why your not considered? First you understand instant
ಕರ್ನಾಟಕಕ್ಕೆ ಎರಡು ಬುಲೆಟ್ ಟ್ರೈನ್ಗಳು!
ಅದ್ಭುತ. ಅಮೋಘ. ಅವಿಸ್ಮರಣೀಯ ಕಾಣಿಕೆಗಳು.
ದಶಕಗಳಿಂದ ತೆರಿಗೆ ರ���ಪದಲ್ಲಿ ಲಕ್ಷಾಂತರ ಕೋಟಿ ಕೊಡುಗೆ ನೀಡುತ್ತಿರುವ ಕರ್ನಾಟಕಕ್ಕೆ ಕೊನೆಗೂ ಸಿಕ್ಕ ಬಹುಮಾನ – ಎರಡು ಬುಲೆಟ್ ಟ್ರೈನ್ಗಳು!
ಧನ್ಯವಾದಗಳು ಹಿಂದಿ ಹೈಕಮಾಂಡ್ ಪಕ್ಷಗಳಿಗೆ.
ನಮ್ಮ ನೆಲ, ನಮ್ಮ ತೆರಿಗೆ, ನಿಮ್ಮ ನಿರ್ಧಾರಗಳು.
#ನಮ್ಮನಾಡು_ನಿಮ್ಮಆಳ್ವಿಕೆ
#ಕರ್ನಾಟಕದಹಕ್ಕು
#KannadaFirst
ಹಿಂದಿ ಬಲ್ಲವರಿಗೆ ಮಾತ್ರ ಬೆಂಗಳೂರಿನ ನಿಮ್ಹಾನ್ಸ್!
ದೇಶವನ್ನೆಲ್ಲ ಹಿಂದಿಮಯ ಮಾಡುವ ಹುಚ್ಚು ಯಾವ ಮಟ್ಟಕ್ಕೆ ಬಂದಿದೆ ನೋಡಿ. ಬಿಜೆಪಿಯ ಉದ್ದೇಶದಲ್ಲಿ ಸ್ಪಷ್ಟತೆ ಇದೆ, ವಿವಿಧತೆಯಲ್ಲಿ ಏಕತೆಯಲ್ಲ, ವಿವಿಧತೆಯ ನಾಶವೇ ಏಕತೆ ಅನ್ನೋದು. ಈ ಕಾಂಗ್ರೆಸ್ನ ಸಿದ್ದರಾಮಯ್ಯ ಮತ್ತು ಈಗಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರುಗಳು ಕಾಟಾಚಾರಕ್ಕೆ ತಂದ ನಾಮಫಲಕದಲ್ಲಿ ಕನ್ನಡ ನಿಯಮ ಕೇವಲ ಖಾಸಗಿ ವರ್ತಕರಿಗೆ ಮಾತ್ರ. ರಾಜ್ಯಪಾಲರ ಲ���ಕಭವನದ ಹೆಸರಲಗೆಯಿಂದ ಹಿಡಿದು ಸರ್ಕಾರಿ ಪೆಟ್ರೋಲ್ ಬಂಕ್, ಬ್ಯಾಂಕುಗಳಿಗೂ ಇದು ಅನ್ವಯ ಆಗುವುದಿಲ್ಲ.
ಕರ್ನಾಟಕದಲ್ಲಿ ಎಲ್ಲಾ ಹೆಸರಲಗೆಗಳು, ಅದು ಬಹುರಾಷ್ಟ್ರೀಯ ಕಂಪನಿಗಳಾಗಿರಲಿ, ಒಕ್ಕೂಟ ಸರ್ಕಾರದ ಸಂಸ್ಥೆಗಳಾಗಿರಲಿ, ಹೆದ್ದಾರಿಗಳಾಗಿರಲಿ, ಅನ್ವಯ ಆಗಬೇಕು ಅನ್ನುವುದು #ನಮ್ಮನಾಡು_ನಮ್ಮಆಳ್ವಿಕೆ ಯ ಹಕ್ಕೊತ್ತಾಯ.
ಹಿಂದಿ ಹೈಕಮಾಂಡ್ ಪಕ್ಷಗಳು ಇರುವವರೆಗೂ ಇದು ಸಾಧ್ಯವಿಲ್ಲ. ನಮ್ಮ ಹೋರಾಟ ನಿಲ್ಲೋದಿಲ್ಲ.
#NaNNA
Now it's turn of Jayadeva Cardiovascular Hospital, #Mysore!
🚨12 deaths in the last 2 days!
🚨64 deaths in the last 17 days!
Acute shortage of Doctors at the Hospital! Gross mismanagement by #Congress government in Karnataka! @utkhader
ನೆನ್ನೆ ತಟ್ಟೆಕೆರೆ ಕಣಿವೆಯ ಕಡಿದಾದ ಇಳಿಜಾರಿನಲ್ಲಿ ನಾನು ಸೈಕಲ್ನಿಂದ ಬಿದ್ದು ಆದ ಅಪಘಾತ ಮಾರಣಾಂತಿಕವಲ್ಲ. ಆದರೆ ದೈಹಿಕವಾಗಿ, ವೈಯಕ್ತಿಕವಾಗಿ, ಆರ್ಥಿಕವಾಗಿ ದುಬಾರಿಯಾದ ಅಪಘಾತ. ಮುಂದಿನ ಎರಡು ತಿಂಗಳ ಕಾಲ ನಾನು ಪ್ರವಾಸ ಮಾಡುವ ಸ್ಥಿತಿಯಲ್ಲಿ ಇಲ್ಲದೇ ಇರುವುದರಿಂದ ಪಕ್ಷದ ಚಟುವಟಿಕೆಗಳಲ್ಲಿ ನೇರವಾಗಿ ಪಾಲ್ಗೊಳ್ಳಲೂ ಆಗುವುದಿಲ್ಲ. ಒಟ್ಟಾರೆಯಾಗಿ ದುಬಾರಿ ಅಪಘಾತ. (ಈ ಕಣಿವೆ ದಾಟಿದರೆ ನಾವು ಈ ಯಾತ್ರೆಯನ್ನು ಜಯಿಸಿದಂತೆ ಎಂದು ನನಗೆ ಮೊದಲಿನಿಂದಲೂ ಅನ್ನಿಸುತ್ತಿತ್ತು. ಆದರೆ ನನ್ನ ಆತಂಕ ಈ ರೀತಿಯಲ್ಲಿ ಕೊನೆಯಾಗುತ್ತದೆ ಎಂದು ಎಣಿಸಿರಲಿಲ್ಲ.)
ನನ್ನ ಅನುಪಸ್ಥಿತಿಯಲ್ಲಿ ನೆನ್ನೆ ರಾತ್ರಿ ಸಭೆ ಸೇರಿದ್ದ Karnataka Rashtra Samithi ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯು ಸುದೀರ್ಘ ಚರ್ಚೆ ಮಾ���ಿ #ಚಲಿಸುಕರ್ನಾಟಕ #KRSಸೈಕಲ್ಯಾತ್ರೆ'ಯನ್ನು ಐದನೇ ದಿನದಿಂದ ತಾತ್ಕಾಲಿಕವಾಗಿ ನಿಲ್ಲಿಸುವ ಮತ್ತು ಮುಂದೂಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ನೆನ್ನೆಗೆ ಈ ಸೈಕಲ್ ಯಾತ್ರೆಯು ನಾಲ್ಕು ದಿನ ಪೂರೈಸಿ 235 ಕಿಲೋಮೀಟರ್ ದೂರ ಕ್ರಮಿಸಿ ಹಾರೋಹಳ್ಳಿ ಮುಟ್ಟಿತು. ಅಪಘಾತವಾದಾಗ ನಾನು 215 ಕಿಲೋಮೀಟರ್ ಕ್ರಮಿಸಿದ್ದೆ. ನನ್ನ ಕಾರಣಕ್ಕಾಗಿ ಯಾತ್ರೆ ನಿಲ್ಲುವ ಪರಿಸ್ಥಿತಿ ಬಂದಿದ್ದು ನನಗೆ ಅಪಾರ ನೋವು ಉಂಟು ಮಾಡಿದೆ.
ನೆನ್ನೆ ಆಸ್ಪತ್ರೆ ಸೇರಿದ ಆರಂಭದಲ್ಲಿ ಅಪಘಾತದ ತೀವ್ರತೆ ಸೇರಿದಂತೆ ಕೆಲವು ��ಿಚಾರಗಳು ಗೊತ್ತಾಗಿರಲಿಲ್ಲ. ಬಲಭುಜದ ಮೂಳೆ ಮುರಿದಿರುವುದರಿಂದ ಬಲಗೈ ಬಹುತೇಕ ನಿಷ್ಕ್ರಿಯ. ಬಲಭಾಗದ ದೇಹ ಅಲ್ಲಾಡಿಸಿದರೆ ವಿಪರೀತ ನೋವು. ಮುರಿದ ಮೂಳೆ ಕಟಕ್ ಕಟಕ್ ಎನ್ನುತ್ತದೆ. ಸರ್ಜರಿ ಮಾಡುವ ತನಕ ಇದೇ ಸಮಸ್ಯೆ. ಆದರೆ ಕೋವಿಡ್-19 ಪರೀಕ್ಷೆಯ ಫಲಿತಾಂಶ ಬರುವ ತನಕ ಸರ್ಜರಿ ಎಂದು ಆಗುತ್ತದೆ ಎನ್ನುವ ಬಗ್ಗೆ ಖಚಿತತೆ ಇಲ್ಲ. ಮೊದಲ ದಿನ ಜಿಟಿಜಿಟಿ ಮಳೆಯಲ್ಲಿ ನೆಂದ ಕಾರಣ ಸ್ವಲ್ಪ ನೆಗಡಿ ಆಗಿತ್ತು. ಇಂದು ಸಂಜೆಗೆ ಫಲಿತಾಂಶ ಬರುತ್ತದೆ.
ಹಿಪ್ ಜಾಯಿಂಟ್ಗೂ ಏಟು ಬಿದ್ದಿರುವದ��ಿಂದ ಎದ್ದು ಕೂರುವುದು ಕಷ್ಟವಾಗಿದೆ. ನೆನ್ನೆ ಸಂಜೆ ನಡೆದು ಬಾತ್ರೂಮ್ಗೆ ಹೋಗುವ ಸ್ಥಿತಿಯೂ ಕಷ್ಟವಾಗಿತ್ತು. ನನ್ನ ದೇಹ ಈ ಮಟ್ಟದ ಏಟನ್ನು ಈ ಹಿಂದೆ ತಿಂದಿರಲಿಲ್ಲ.
ಈ ಎಲ್ಲಾ ಅನಿಶ್ಚಿತತೆ ಮತ್ತು ಸಮಸ್ಯೆಗಳ ನಡುವೆ ಪಕ್ಷದ ಚಟವಟಿಕೆಗಳು ಮುಂದುವರೆಯಬೇಕಾಗಿದೆ. ಪಕ್ಷದ ಉಪಾಧ್ಯಕ್ಷರುಗಳಾದ Lingegowda SH ಮತ್ತು Amrith Shenoy ಹಾಗೂ ಪ್ರಧಾನ ಕಾರ್ಯದರ್ಶಿ Deepak Nagaraj ರವರ ನೇತೃತ್ವದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿಯು ಸಂದರ್ಭಾನುಸಾರ ಕೆಲವು ತೀರ್ಮಾನಗಳನ್ನು ತೆಗೆದುಕೊಂಡು ಕಾರ್ಯ ��ಿಭಾಯಿಸಲಿದ್ದಾರೆ. ನಾನೂ ಸಹ ಒಂದೆರಡು ವಾರದ ನಂತರ Virtual ಸಭೆಗಳಲ್ಲಿ ಭಾಗವಹಿಸುವ ಆಶಾಭಾವನೆ ಹೊಂದಿದ್ದೇನೆ. ಹಾಗೆಯೇ ಫೇಸ್ಬುಕ್ ಮೂಲಕ ಸಂವಹನ ಮಾಡಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ.
ಈ ಮಧ್ಯದಲ್ಲಿ ನನಗೆ ಬರುವ ಫೋನ್ ಕರೆಗಳನ್ನು ಸ್ವೀಕರಿಸುವ ಸ್ಥಿತಿಯಲ್ಲಾಗಲಿ ಅಥವ ಸಂದೇಶಗಳಿಗೆ ಉತ್ತರಿಸುವ ಸ್ಥಿತಿಯಲ್ಲಾಗಲಿ ನಾನಿಲ್ಲ. ದಯವಿಟ್ಟು ಕ್ಷಮೆಯಿರಲಿ. 🙏🙏🙏. ಹಾಗೆಯೇ, ಕಾಳಜಿ ತೋರಿಸಿ ಪ್ರತಿಕ್ರಿಯಿಸುತ್ತಿರುವ ಎಲ್ಲರಿಗೂ ಹೃದಯಾಂತರಾಳದ ವಂದನೆಗಳು.
ಮತ್ತೆ ನಾನು ಮೊದಲಿನ ಹಾಗೆ ದೈಹಿಕ ಊನಗಳಿಲ್ಲದ ವ್ಯಕ್ತಿ ಆಗುವುದಿಲ್ಲವಾದರೂ, ಇದು ನನ್ನ ಕಾರ್ಯಗಳನ್ನು ನಿಲ್ಲಿಸುವುದಿಲ್ಲ. ಚಲಿಸುವ ಕರ್ನಾಟಕದ ಜೊತೆಜೊತೆಗೆ ಖಂಡಿತವಾಗಿ ನಾನೂ ಚಲಿಸಲಿದ್ದೇನೆ; ಆದಷ್ಟು ಶೀಘ್ರದಲ್ಲಿ. ರಾಜ್ಯದಲ್ಲಿ ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ಹಿಂದಿನ ದಿನಗಳಂತೆ ನಿರಂತರವಾಗಿ ತೊಡಗುತ್ತೇನೆ. ಈ ತಾತ್ಕಾಲಿಕ ಹಿನ್ನಡೆಯನ್ನು ಅತಿಕ್ರಮಿಸಿ ನಮ್ಮ Shared ಆಶಯಗಳ ಈಡೇರಿಕೆಗಾಗಿ ಸೈಕಲ್ ಯಾತ್ರೆ, ಮೋಟಾರ್ ಸೈಕಲ್ ಯಾತ್ರೆ, ಪಾದಯಾತ್ರೆ, ಜಾಗೃತಿ ಕಾರ್��ಕ್ರಮಗಳು, ಹೋರಾಟಗಳು, ಚುನಾವಣೆಗಳು ��ಡೆಯಲಿವೆ; ಸಶಕ್ತ, ಮೌಲ್ಯಾಧಾರಿತ, ನೆಮ್ಮದಿಯ ಕರ್ನಾಟಕಕ್ಕಾಗಿ ಮತ್ತು ಆ ಮೂಲಕ ಹೊಸ ತರಹದ ಪ್ರಪಂಚಕ್ಕಾಗಿ.
ಈ ಪಯಣದಲ್ಲಿ ಎಂದಿನಂತೆ ನೀವುಗಳೂ ಜೊತೆಯಾಗಿರುತ್ತೀರಿ ಎನ್ನುವ ವಿಶ್ವಾಸದೊಂದಿಗೆ...
ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ರಾಜ್ಯಾಧ್ಯಕ್ಷ, KRS ಪಕ್ಷ.
18-09-2020.