ಕ್ರಾಂತಿಕಾರಕ ಯೋಜನೆಗಳು, ದಿಟ್ಟ ನಿರ್ಧಾರಗಳ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದ ಭಾರತದ ಮೊದಲ ಮಹಿಳಾ ಪ್ರಧಾನಿ, ಉಕ್ಕಿನ ಮಹಿಳೆ, ಭಾರತ ರತ್ನ ಪುರಸ್ಕೃತರಾದ ಶ್ರೀಮತಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆಯಂದು ಅವರನ್ನು ಮನದುಂಬಿ ಸ್ಮರಿಸುತ್ತೇನೆ
ನಿಮ್ಮ ಪ್ರೀತಿ, ಅಭಿಮಾನದ ಅಭಿನಂದನೆಯಲ್ಲಿ ಮಿಂದಿರುವ ನಾನು ಚಿತ್ತಾಪುರ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ಶ್ರಮಿಸುತ್ತೇನೆ. ನೀವು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ.
ಕಾಂಗ್ರೆಸ್ ಪಕ್ಷವು ನನ್ನನ್ನು ಗುರುತಿಸಿ ಟಿಕೆಟ್ ನೀಡಿತು. ನೀವೆಲ್ಲ ಜೊತೆಯಾಗಿ ಕೆಲಸ ಮಾಡಿ, ಮನೆ ಮನೆಗೆ ಹೋಗಿ ಪ್ರಚಾರ ಮಾಡಿ, ಮತ ಕೊಡಿಸಿ ನನ್ನ ಗೆಲುವಿಗೆ ಪ್ರಮುಖವಾಗಿ ಸಹಕಾರಿಸಿದ್ದೀರಿ. ನಿಮಗೆ ನಾನು ಮನಃಪೂರ್ವಕ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
"ಜೈ ಜವಾನ್, ಜೈ ಕಿಸಾನ್” ಎಂಬ ಘೋಷವಾಕ್ಯದ ಮೂಲಕ ದೇಶದ ರೈತರಿಗೆ ಸ್ಪೂರ್ತಿ ತುಂಬಿದ ಮಾಜಿ ಪ್ರಧಾನಿಗಳು, ಭಾರತರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಮನದುಂಬಿ ಸ್ಮರಿಸುತ್ತೇನೆ.
ಭಾರತದ ಸ್ವಾತಂತ್ರ್ಯ ಚಳವಳಿಯ ಹರಿಕಾರ, ಪರಕೀಯರ ಆಡಳಿತದಲ್ಲಿದ್ದ ದೇಶಗಳ ಸ್ವಾತಂತ್ರ್ಯ ಚಳುವಳಿಗಳಿಗೆ ಸ್ಫೂರ್ತಿ ಕೊಟ್ಟ ಮಹಾನ್ ನಾಯಕ, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜಯಂತಿಯಂದು ಮನದುಂಬಿ ಸ್ಮರಿಸುತ್ತೇನೆ.
ಗಾಂಧಿ ಮಾರ್ಗ, ಸತ್ಯ ಮಾರ್ಗ-ಇದೇ ಹಾದಿಯಲ್ಲಿ ಎಲ್ಲರೂ ಸಾಗೋಣ.
ಕಲ್ಯಾಣ ಕರ್ನಾಟಕ ನಾಡಿನ ಸಮಸ್ತ ಜನತೆಗೆ ಕಲ್ಯಾಣ ಕರ್ನಾಟಕ ಉತ್ಸವದ ಶುಭಾಶಯಗಳು.
ಭಾರತದ ಒಕ್ಕೂಟಕ್ಕೆ ನಮ್ಮ ಭಾಗವನ್ನು ಸೇರಿಸುವ ನಿಟ್ಟಿನಲ್ಲಿ ನಡೆಸಿದ ವಿಮೋಚನಾ ಹೋರಾಟದಲ್ಲಿ ತ್ಯಾಗ, ಬಲಿದಾನ ಮಾಡಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ನಾಡಿನ ಸಮಸ್ತ ಜನತೆಗೆ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
ವಿಘ್ನನಿವಾರಕ ಎಲ್ಲರ ಬಾಳಲ್ಲೂ ಸುಖ, ಶಾಂತಿ, ಸಂತೋಷ ಮತ���ತು ನೆಮ್ಮದಿ ತಂದು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.
ಅನಾಥರ, ಬಡವರ ಹಾಗೂ ನಿರ್ಗತಿಕರ ಸೇವೆಯಲ್ಲಿಯೇ ಬದುಕಿನ ಪ್ರೀತಿಯನ್ನು ಕಂಡ ಮಹಾನ್ ಚೇತನ, ಭಾರತ ರತ್ನ ಪುರಸ್ಕೃತರಾದ ಮದರ್ ತೆರೇಸಾ ಅವರ ಜಯಂತಿಯಂದು ಅವರನ್ನು ಮನದುಂಬಿ ಸ್ಮರಿಸುತ್ತೇನೆ.
ಇಂದು ಕಲಬುರಗಿಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಉದ್ಘಾಟನ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿಗಳಾದ @DKShivakumar ಅವರೊಂದಿಗೆ ಭಾಗವಹಿಸಿದೆ.