ಕನಸಿನ ಉನ್ನತ ಶಿಕ್ಷಣಕ್ಕೆ ಆರ್ಥಿಕ ಬಲ!
ಕಾಲೇಜು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಕನಸುಗಳಿಗೆ ಬೆಂಬಲವಾಗಿ, ಕಾಲೇಜು ಶಿಕ್ಷಣ ಇಲಾಖೆಯು ವಿವಿಧ ವಿದ್ಯಾರ್ಥಿವೇತನ ಮತ್ತು ಸಹಾಯಧನ ಯೋಜನೆಗಳನ್ನು ಜಾರಿಗೆ ತಂದಿದೆ.
ವಿದ್ಯಾರ್ಥಿಗಳು ಈ ಕೆಳಗಿನ ಯೋಜನೆಗಳ ಸದುಪಯೋಗವನ್ನು ಪಡೆದುಕೊಳ್ಳಿ:
ಯೋಜನೆಗಳು:
.ಶುಲ್ಕ ಮರುಪಾವತಿ
.ಸಂಚಿ ಹೊನ್ನಮ್ಮ ವಿದ್ಯಾರ್ಥಿ ವೇತನ
.ಬೋಧನಾ ಶುಲ್ಕ ಮರುಪಾವತಿ
.ಸರ��� ಸಿ.ವಿ. ರಾಮನ್ ವಿದ್ಯಾರ್ಥಿ ವೇತನ
ನಾಡಿನ ಯುವಜನತೆಯ ಉಜ್ವಲ ಭವಿಷ್ಯ ಹಾಗೂ ಶೈಕ್ಷಣಿಕ ಪ್ರಗತಿಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ.
#BasavarajRayareddi #ಉನ್ನತಶಿಕ್ಷಣ #ವಿದ್ಯಾರ್ಥಿವೇತನ #ಕರ್ನಾಟಕಸರ್ಕಾರ #HigherEducationKarnataka
ರಾಜ್ಯದ ಶೈಕ್ಷಣಿಕ ರಂಗವನ್ನು ಜಾಗತಿಕ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ!
ಇಂದು ಆಸ್ಟ್ರೇಲಿಯನ್ ಕಾನ್ಸುಲೇಟ್-ಜನರಲ್ನ ಆಕ್ಟಿಂಗ್ ಕಾನ್ಸುಲ್ ಜನರಲ್ ಸ್ಟೀವನ್ ಕಾನೋಲಿ ಹಾಗೂ ಟ್ರೇಡ್ ಅಂಡ್ ಇನ್ವೆಸ್ಟ್ಮೆಂಟ್ ಎಜುಕೇಶನ್ ವಿಭಾಗದ ನಿರ್ದೇಶಕಿ ಪೂಜಾ ಅಯ್ಯರ್ ಅವರೊಂದಿಗೆ ಸಭೆ ನಡೆಸಿ, ರಾಜ್ಯದ ಶೈಕ್ಷಣಿಕ ಅಭಿವೃದ್ಧಿ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು.
ಅಂತರರಾಷ್ಟ್ರೀಯ ಮಟ್ಟದ ಸಹಯೋಗಗಳೊಂದಿಗೆ ನಮ್ಮ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ, ಹೊಸ ತಂತ್ರಜ್ಞಾನಗಳ ಪರಿಚಯ ಹಾಗೂ ಜಾಗತಿಕ ಮಟ್ಟದ ಉದ್ಯೋಗಾವಕಾಶಗಳನ್ನು ಒದಗಿಸುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ.
#KarnatakaEducation #HigherEducation #GlobalCollaboration #EducationDevelopment #AustraliaIndia
ರಾಜ್ಯದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ಹಾಗೂ ಕೌಶಲ್ಯ ವೃದ್ಧಿಗಾಗಿ ಮಹತ್ವದ ಹೆಜ್ಜೆ!
ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಕೌಶಲ್ಯಾಭಿವೃದ್ಧಿ ಮತ್ತು ತಾಂತ್ರಿಕ ತರಬೇತಿ ನೀಡಲು, ಟೊಯೋಟಾ ಸಂಸ್ಥೆಯ ಸಹಯೋಗದೊಂದಿಗೆ 6 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ 'ಶ್ರೇಷ್ಠತಾ ಕೇಂದ್ರ'ಗಳನ್ನು (Centres of Excellence) ಆರಂಭಿಸಲಾಗುತ್ತಿದೆ. ಹೈಬ್ರಿಡ್ ���ಂಜಿನ್ ತಂತ್ರಜ್ಞಾನ (Hybrid Engine Technology) ಮತ್ತು ಪವರ್ ಟ್ರಾನ್ಸ್ ಮಿಷನ್ (Power Transmission) ಕ್ಷೇತ್ರಗಳಲ್ಲಿ ಈ ತರಬೇತಿಯನ್ನು ಒದಗಿಸಲಾಗುವುದು.
ಈ ಶ್ರೇಷ್ಠತಾ ಕೇಂದ್ರಗಳನ್ನು ಜಿಇಸಿ ರಾಮನಗರ, ಜಿಇಸಿ ಹಾಸನ, ಜಿಇಸಿ ಚಾಮರಾಜನಗರ, ಜಿಇಸಿ ಕುಶಾಲನಗರ ಹಾಗೂ ಜಿಇಸಿ ಕೆ.ಆರ್. ಪೇಟೆ ಕಾಲೇಜುಗಳಲ್ಲಿ ಹೊಂದಿರಲಾಗಿದೆ. ಉನ್ನತ ಶಿಕ್ಷಣದ ಮೂಲಕ ಯುವಜನರ ಸಬಲೀಕರಣವೇ ನಮ್ಮ ಸರ್ಕಾರದ ಪ್ರಮುಖ ಗುರಿ
#KarnatakaEducation #SkillDevelopment #HigherEducation #EngineeringStudents #FutureReady
ಬೆಂಗಳೂರಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ನಲ್ಲಿ
ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ, ಹಾವೇರಿ ವಿಶ್ವವಿದ್ಯಾನಿಲಯ, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಗೋಟಗೋಡಿ ಇವುಗಳ ಪ್ರಗತಿ ಪರಿಶೀಲನಾ ಸಭೆ.
ಸಭೆಯಲ್ಲಿ ವಿಶ್ವವಿದ್ಯಾಲಯಗಳ ವಿಭಜನೆಯ ನಂತರದ ಮೂಲಸೌಕರ್ಯ ಅಭಿವೃದ್ಧಿ, ಕಟ್ಟಡ ಕಾಮಗಾರಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದ�� ವಿವರ, ��ಿದ್ಯಾರ್ಥಿಗಳ ದಾಖಲಾತಿ ಹಾಗೂ ಆರ್ಥಿಕ ಸ್ಥಿತಿಗತಿಯ ಕುರಿತು ಸಮಗ್ರ ಮಾಹಿತಿ ಪಡೆಯಲಾಯಿತು.
ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹಾಗೂ ವಿವಿಗಳ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಬದ್ಧ.
ಸಭೆಯಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಾದ
ಪ್ರೊ.ಎಸ್.ಆರ್.ನಿರಂಜನ, ಕರ್ನಾಟಕ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎ ಎಮ್ ಖಾನ್, ಹಾವೇರಿ ವಿವಿ ಕುಲಪತಿ ಡಾ. ಸುರೇಶ್ ಜಂಗಮಶೆಟ್ಟಿ ಸೇರಿದಂತೆ ವಿವಿಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ, ಕೇಂದ್ರ ಸರ್ಕಾರದ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಕಾಸ್ಮಾಸ್ ಪ್ಲಾನೆಟೋರಿಯಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆನು. ಇದು ಭಾರತದ ಮ��ಟ್ಟಮೊದಲ ಓರೆಯಾದ ಎಲ್.ಇ.ಡಿ ಡೋಮ್ ಹೊಂದಿರುವ ಅತ್ಯಾಧುನಿಕ ತಾರಾಲಯವಾಗಿದೆ. 8K ರೆಸಲ್ಯೂಶನ್ ಹೊಂದಿರುವ ಇದರ ಸ್ಕೈ ಥಿಯೇಟರ್ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಖಗೋಳಶಾಸ್ತ್ರದ ಬಗ್ಗೆ ಉನ್ನತ ಮಟ್ಟದ ಶಿಕ್ಷಣ ಹಾಗೂ ತರಬೇತಿ ನೀಡಲು ಅತ್ಯುತ್ತಮ ಕೇಂದ್ರವಾಗಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ನಾಡಿನ ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗುವ ಈ ಯೋಜನೆ ನಿಜಕ್ಕೂ ಹೆಮ್ಮೆಯ ವಿಚಾರ.
#Mysuru #COSMOS #HigherEducation #Astronomy #ScienceAndTech
ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಗಾಗಿ ಕರ್ನಾಟಕ ಸರ್ಕಾರ ಹಾಗೂ HP ಸಂಸ್ಥೆಯ ನಡುವೆ ಮಹತ್ವದ ಒಪ್ಪಂದ!
ಬೆಂಗಳೂರಿನ ಸರ್ಕಾರಿ SKSJTI ಕ್ಯಾಂಪಸ್ನಲ್ಲಿ ತಲೆ ಎ��್ತಲಿದೆ ಅತ್ಯಾಧುನಿಕ "HP AI ಮತ್ತು ಗೇಮಿಂಗ್ ಹಬ್". ಕೃತಕ ಬುದ್ಧಿಮತ್ತೆ (AI), ಗೇಮಿಂಗ್ ವಿನ್ಯಾಸ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಇದೊಂದು ಅದ್ಭುತ ವೇದಿಕೆಯಾಗಲಿದೆ.
#Karnataka #Education #SkillDevelopment #HP #AIHub #GamingHub #Bengaluru
ರಾಜ್ಯದ ಯುವಜನತೆಗೆ ಭವಿಷ���ಯದ ಕೌಶಲ್ಯಗಳ ತರಬೇತಿ!
ಬೆಂಗಳೂರಿನ SKSJTI ಯಲ್ಲಿ 'ಹಸಿರು ಕೌಶಲ್ಯ & AI ತರಬೇತಿ'ಗಾಗಿ ಎಕ್ಸಲೆನ್ಸ್ ಸೆಂಟರ್ ಸ್ಥಾಪನೆ. 2030ರ ವೇಳೆಗೆ 1 ಲಕ್ಷ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ಬೃಹತ್ ಗುರಿಯನ್ನು ಹೊಂದಲಾಗಿದೆ.
#GreenSkills #ArtificialIntelligence #SkillDevelopment #YouthEmpowerment #HigherEducationKarnataka #BasavarajRayareddy
ಇಂದು ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ವಿಶ್ವವಿದ್ಯಾಲಯಗಳಾದ ಗುಲ್ಬರ್ಗ ವಿಶ್ವವಿದ್ಯಾಲಯ, ಬೀದರ್ ವಿಶ್ವವಿದ್ಯಾಲಯ ಹಾಗೂ ರಾಯಚೂರಿನ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಕುಲಸಚಿವರೊಂದಿಗೆ ಮಹತ್ವದ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ವಿಶ್ವವಿದ್ಯಾಲಯಗಳ ಸಮಗ್ರ ಅಭಿವೃದ್ಧಿ, ಶೈಕ್ಷಣಿಕ ಗುಣಮಟ್ಟ ಹೆಚ್ಚಳ, ಪ್��ಸ್ತುತ ವಿವಿಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವುಗಳಿಗೆ ಕೈಗೊಳ್ಳಬೇಕಾದ ಶಾಶ್ವತ ಪರಿಹಾರಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ.
ಈ ಸಭೆಯಲ್ಲಿ ವಿಶ್ವವಿದ್ಯಾಲಯಗಳ ಹಣಕಾಸು ಅಧಿಕಾರಿಗಳು, ಇಲಾಖೆಯ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಎಸ್. ಆರ್. ನಿರಂಜನ್ ಅವರು ���ಪಸ್ಥಿತರಿದ್ದರು.
ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾನ್ ಚೇತನರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.
ಮಹಾತ್ಮ ಗಾಂಧೀಜಿಯವರ ಅಹಿಂಸಾ ಮಾರ್ಗ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜೀಯವರ ದೃಢ ನಾಯಕತ್ವ ಭಾರತದ ಭವಿಷ್ಯಕ್ಕೆ ಎಂದೆಂದಿಗೂ ಸ್ಫೂರ್ತಿ. ಶಾಂತಿ, ಸಮಾನತೆ ಮತ್ತು ಸೇವಾ ಮನೋಭಾವದಿಂದ ಸುಂದರ ಸಮಾಜ ಕಟ್ಟಲು ನಾವೆಲ್ಲರೂ ಪಣತೊಡೋಣ.
ಜಿಲ್ಲಾಧಿಕಾರಿಗಳಾದ ಶ್ರೀ ಡಾ. ಸುರೇಶ ಇಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಸಾಹಿಲ್ ಬಾಗ್ಲಾ, ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಹಾಗೂ ಬ್ರಿಟಿಷ್ ಕೌನ್ಸಿಲ್ ಜೊತೆಗಿನ ಪಾಲುದಾರಿಕೆಯಿಂದ ಶೈಕ್ಷಣಿಕ ಕ್ರಾಂತಿ!
ನಮ್ಮ ನಾಡಿನ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ವಿಶ್ವಮಟ್ಟದ ಅವಕಾಶಗಳನ್ನು ತೆರೆಯುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆ ಮತ್ತು ಬ್ರಿಟಿಷ್ ಕೌನ್ಸಿಲ್ (British Council) ನಡುವಿನ ಪಾಲುದಾರಿಕೆ ಹೊಸ ಸಂಚಲನ ಮೂಡಿಸುತ್ತಿದೆ
ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಉನ್ನತ ಶಿಕ್ಷಣ ಇಲಾಖೆಯು ಮೈಕ್ರೋಸಾಫ್ಟ್ ಸಹಯೋಗದಲ್ಲಿ ಜಾರಿಗೆ ತಂದ 'English Skills for Youth' ಯೋಜನೆ ಈಗಾಗಲೇ ೧೬ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ೫,೭೯೫ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿದೆ. ಉನ್ನತ ಶಿಕ್ಷಣ ಇಲಾಖೆಯ ಈ ದೂರದೃಷ್ಟಿಯ ಯೋಜನೆಯನ್ನು 'ನೀತಿ ಆಯೋಗ' (NITI Aayog) ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಅಭ್ಯಾಸವೆಂದು ಕೊಂಡಾಡಿದೆ. ಶೀಘ್ರದಲ್ಲೇ 32 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು 25 ಪಾಲಿಟೆಕ್ನಿಕ್ಗಳ 25,146 ಹೊಸ ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ವಿಸ್ತರಿಸಲು ನಮ್ಮ ಇಲಾಖೆ ಸಜ್ಜಾಗಿದೆ.
ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾದ 'SCOUT' ಯೋಜನೆಯಡಿ ನಮ್ಮ ರಾಜ್ಯದ 29 ಪ್ರತಿಭಾವಂತ ವಿದ್ಯಾರ್ಥಿಗಳು ಯೂನಿವರ್ಸಿಟಿ ಆಫ್ ಈಸ್ಟ್ ಲಂಡನ್ನಲ್ಲಿ ಜಾಗತಿಕ ಮಟ್ಟದ ವಿಶೇಷ ತರಬೇತಿ ಪಡೆದು, ಜಗತ್ತನ್ನೇ ಗೆಲ್ಲುವ ಹುಮ್ಮಸ್ಸಿನೊಂದಿಗೆ ಮರಳಿದ್ದಾರೆ.
ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲು ರಾಜ್ಯದ ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ಯುಕೆಯಲ್ಲಿ ವಿಶೇಷ ನಾಯಕತ್ವ ತರಬೇತಿಯನ್ನು (LDP) ಉನ್ನತ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಯಶಸ್ವಿಯಾಗಿ ನೀಡಲಾಗಿದೆ. ಇದರ ಜೊತೆಗೆ, ವೇಲ್ಸ್-ಕರ್ನಾಟಕ ಸಂಶೋಧನಾ ಅನುದಾನದಡಿ ಹವಾಮಾನ ಬದಲಾವಣೆ, ಕೃತಕ ಬುದ್ಧಿಮತ್ತೆ, ಡಿಜಿಟಲ್ ಹೆಲ್ತ್ನಂತಹ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಬ್ರಿಟನ್ ವಿವಿಗಳೊಂದಿಗೆ ನಮ್ಮ ಸಂಸ್ಥೆಗಳು ಜಂಟಿ ಸಂಶೋಧನೆ ನಡೆಸುತ್ತಿವೆ.
ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಮತ್ತು ದಕ್ಷಿಣ ಭಾರತದ 47 ಉನ್ನತ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಜಾಗತಿಕ ಶೈಕ್ಷಣಿಕ ಕ್ರಾಂತಿ ನಮ್ಮ ಯುವಜನತೆಗೆ ಉಜ್ವಲ ಭವಿಷ್ಯವನ್ನು ಖಾತರಿಪಡಿಸುತ್ತಿದೆ. ಗುಣಮಟ್ಟದ ಶಿಕ್ಷಣ ಮತ್ತು ಜಾಗತಿಕ ಅವಕಾಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ತಲುಪಿಸುವ ನ���್ಮ ಸರ್ಕಾರದ ಈ ಐತಿಹಾಸಿಕ ಪಯಣ ನಿರಂತರ.
#HigherEducation #KarnatakaGovt #KarnatakaEducation #BritishCouncil #EducationRevolution #SkillDevelopment
ಕಠಿಣ ಪರಿಶ್ರಮ ಮತ್ತು ಛಲಕ್ಕೆ ಸಂದ ಜಯ: 12 ಚಿನ್ನದ ಪದಕ ವಿಜೇತ ಎಚ್.ಎಂ. ವಿಶ್ವನಾಥ್ಗೆ ಅಭಿನಂದನೆಗಳು!
ದಾವಣಗೆರೆಯ ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿ, ಬಡ ರೈತನ ಮಗ ಎಚ್.ಎಂ. ವಿಶ್ವನಾಥ್ ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಬರೋಬ್ಬರಿ 12 ಚಿನ್ನದ ಪದಕಗಳೊಂದಿಗೆ ಪ್ರಥಮ ರ್ಯಾಂಕ್ ಪಡೆದಿರುವುದು ಅತ್ಯಂತ ಹೆಮ್ಮೆಯ ಸಂಗತಿ.
ತೀವ್ರ ಅನಾರೋಗ್ಯ ಮತ್ತು ಕುಟುಂಬದ ��ಡತನದಂತಹ ಸವಾಲುಗಳನ್ನು ಮೆಟ್ಟಿ ನಿಂತು ವಿಶ್ವನಾಥ್ ಮಾಡಿರುವ ಈ ಐತಿಹಾಸಿಕ ಸಾಧನೆ ಅಪ್ರತಿಮವಾದದ್ದು. ಎಷ್ಟೇ ಕಷ್ಟಗಳಿದ್ದರೂ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಹಾಗೂ ನಮ್ಮ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ನಿಜವಾದ ಪ್ರತಿಭೆಗೆ ಎಂದಿಗೂ ಮನ್ನಣೆ ಸಿಗುತ್ತದೆ ಎಂಬುದಕ್ಕೆ ಇವರೇ ಜೀವಂತ ಉದಾಹರಣೆ.
ತಮ್ಮ ಕುಟುಂಬದ ಬೆಂಬಲ ಮತ್ತು ಸ್ವಪ್ರಯತ್ನದಿಂದ ಈ ಸಾಧನೆಗೈದಿರುವ ವಿಶ್ವನಾಥ್, ಇಂದಿನ ವಿದ್ಯಾರ್ಥಿ ಸಮೂಹಕ್ಕೆ ಹಾಗೂ ಯುವ ಪೀಳಿಗೆಗೆ ನಿಜವಾದ ಸ್ಫೂರ್ತಿ. ಅವರ ಉನ್ನತ ಶಿಕ್ಷಣದ ಕನಸು ನನಸಾಗಲಿ ಹಾಗೂ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ.
ರಾಜ್ಯದ ಕಾಲೇಜು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಉನ್ನತ ಶಿಕ್ಷಣ ಇಲಾಖೆ ಹಾಗೂ ವಾಧ್ವಾನಿ ಫೌಂಡೇಶನ್ ಸಹಯೋಗದಲ್ಲಿ 120 ಗಂಟೆಗಳ ಸಮಗ್ರ 'ಕೌಶಲ ತರಬೇತಿ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಉದ್ಯೋಗಾರ್ಹತೆ ಹೆಚ್ಚಿಸಲು ಮತ್ತು ಅವರ ವೃತ್ತಿ ಜೀವನಕ್ಕೆ ದಾರಿ ದೀಪವಾಗಲು ನೆರವಾಗಲಿದೆ.
#SkillDevelopment #HigherEducation #KarnatakaGovt #BasavarajRayareddy
ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಕ್ರಾಂತಿ! ವಿದ್ಯಾರ್ಥಿಗಳಿಗೆ ಕಲಿಯಲು, ಕೌಶಲ್ಯ ಬೆಳೆಸಿಕೊಳ್ಳಲು ಮತ್ತು ಯಶಸ್ವಿಯಾಗಲು ಅನುಕೂಲವಾಗುವಂತೆ ADB ಸಹಭಾಗಿತ್ವದಲ್ಲಿ ₹2,500 ಕೋಟಿ ವೆಚ್ಚದ 'ಉನ್ನತ ಶಿಕ್ಷಣ ರೂಪಾಂತರ ಯೋಜನೆ'ಯನ್ನು ಜಾರಿಗೊಳಿಸಲಾಗುತ್ತಿದೆ.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) 26ನೇ ಘಟಿಕೋತ್ಸವದ ಸಂಭ್ರಮ!
ಇಂದು ಪದವಿ ಸ್ವೀಕರಿಸಿದ ನಾಡಿನ ಎಲ್ಲಾ ಯುವ ತಂತ್ರಜ್ಞರಿಗೆ ಹಾಗೂ ವಿದ್ಯಾರ್ಥಿಗಳಿಗೆ ನನ್ನ ಹಾರ್ದಿಕ ಅಭಿನಂದನೆಗಳು. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ, ನಿಮ್ಮ ಜ್ಞಾನ ಹಾಗೂ ಕೌಶಲ್ಯ ದೇಶದ ಅಭಿವೃದ್ಧಿಗೆ ಪೂರಕವಾಗಲಿ ಎಂದು ಆಶಿಸುತ್ತೇನೆ.
ಈ ಅರ್ಥಪೂರ್ಣ ಘಟಿಕೋತ್ಸವ ಸಮಾರಂಭದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ಚಂದ್ ಗೆಹ್ಲೋಟ್ , ಉಪ ಮುಖ್ಯಮಂತ್ರಿಗಳಾದ ಶ್ರೀ ಡಾ ಜಿ ಪರಮೇಶ್ವರ , ವಿವಿಯ ಕುಲಪತಿಗಳಾದ ಪ್ರೊ. ಎಸ್. ವಿದ್ಯಾಶಂಕರ್ ಸೇರಿದಂತೆ ಹಲವು ಗಣ್ಯರು ಹಾಗೂ ಪ್ರಾಧ್ಯಾಪಕರು ಉಪಸ್ಥಿತ���ಿದ್ದರು.
ನಾಡಹಬ್ಬ ಮೈಸೂರು ದಸರಾ ಉದ್ಘಾಟಿಸಲಿರುವ ಕೊಪ್ಪಳದ ಹೆಮ್ಮೆಯ ಗವಿಮಠದ ಶ್ರೀಗಳು!
ಈ ಬಾರಿಯ ಐತಿಹಾಸಿಕ ಮೈಸೂರು ದಸರಾ ಮಹೋತ್ಸವವನ್ನು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠದ ಪರಮ ಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಉದ್ಘಾಟಿಸಲಿರುವುದು ಇಡೀ ಕೊಪ್ಪಳ ಜಿಲ್ಲೆಗೆ ಹಾಗೂ ಸಮಸ್ತ ಕಲ್ಯಾಣ ಕರ್ನಾಟಕ ಭಾಗಕ್ಕೆ ಅತ್ಯಂತ ಹೆಮ್ಮೆಯ ಸಂಗತಿ.
ಅ��್ನ, ಅಕ್ಷರ, ಆಶ್ರಯವೆಂಬ ತ್ರಿವಿಧ ದಾಸೋಹದ ಮೂಲಕ ಸಮಾಜವನ್ನು ಬೆಳಗುತ್ತಿರುವ ಕಾಯಕಯೋಗಿಗಳನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಅತ್ಯಂತ ಸ್ವಾಗತಾರ್ಹ. ನಾಡಿನ ಪರಂಪರೆ ಮತ್ತು ಸಂತರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ ಕೊಪ್ಪಳ ಜಿಲ್ಲೆಯ ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು.
#MysuruDasara #KoppalaGaviMatha #BasavarajRayareddy #Karnataka
ಉನ್ನತ ಶಿಕ್ಷಣ ಇಲಾಖೆ ಹಾಗೂ ವಾಧ್ವಾನಿ ಫೌಂಡೇಶನ್ ಸಹಯೋಗದಲ್ಲಿ ರಾಜ್ಯದ 235 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉದ್ಯೋಗಾರ್ಹತೆ ಕೌಶಲ ತರಬೇತಿ (ಫೇಸ್-1) ಯಶಸ್ವಿಯಾಗಿ ನಡೆಯುತ್ತಿದೆ. ಒಟ್ಟು 27,575 ವಿದ್ಯಾರ್ಥಿಗಳು ಈ ತರಬೇತಿಗೆ ನೊಂದಾಯಿಸಿಕೊ���ಡಿದ್ದು, 814 ಉಪನ್ಯಾಸಕರಿಗೂ ತರಬೇತಿ ನೀಡಲಾಗಿದೆ.
ಯುವಜನತೆಯ ಉಜ್ವಲ ಭವಿಷ್ಯ ಹಾಗೂ ಕೌಶಲ್ಯಾಭಿವೃದ್ಧಿಗಾಗಿ ನಮ್ಮ ಸರ್ಕಾರ ಸದಾ ಬದ್ಧವಾಗಿದೆ.
#HigherEducation #KarnatakaGovt #SkillDevelopment #BasavarajRayareddy
ಉನ್ನತ ಶಿಕ್ಷಣ ಬಯಸುವ SC/ST ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ! ಎಂಬಿಎ ಹಾಗೂ ಎಂಸಿಎ ಕಲಿ��ುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ನಮ್ಮ ಸರ್ಕಾರವು 'ಶುಲ್ಕ ಮರುಪಾವತಿ ಯೋಜನೆ' ತಂದಿದೆ. ₹2.5 ರಿಂದ ₹10 ಲಕ್ಷ ಆದಾಯ ಮಿತಿ ಹೊಂದಿರುವ���ರು ಈ ಕೂಡಲೇ ಅರ್ಜಿ ಸಲ್ಲಿಸಿ.
ಹೆಚ್ಚಿನ ಮಾಹಿತಿಗೆ: https://t.co/fzLZHkBvqy ಭೇಟಿ ನೀಡಿ.
#BasavarajRayareddi| #KarnatakaHigherEducation| #ScholarshipAlert|
ನುಡಿದಂತೆ ನಡೆದ ಉನ್ನತ ಶಿಕ್ಷಣ ಇಲಾಖೆ: ರಾಜ್ಯದ ವಿವಿಗಳಲ್ಲಿ ನೇಮಕಾತಿ ಭರಾಟೆ ಶುರು!
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿನ ಅಧ್ಯಾಪಕರ ಕೊರತೆ ನೀಗಿಸಲು ನಾವು ನೀಡಿದ್ದ ಭರವಸೆಯಂತೆ ಇದೀಗ ಬೃಹತ್ ನೇಮಕಾತಿಗೆ ಚಾಲನೆ ನೀಡಲಾಗಿದೆ. ಉನ್ನತ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಖಾಲಿ ಇರುವ ಸುಮಾರು 4,000 ಅಧ್ಯಾಪಕ ಹುದ್ದೆಗಳ ಪೈಕಿ ಮೊದಲ ಹಂತದಲ್ಲಿ 1,000 ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮ��್ಟ ಹೆಚ್ಚಿಸಲು ಮತ್ತು ವಿಶ್ವವಿದ್ಯಾಲಯಗಳ ಸಮಸ್ಯೆಗಳನ್ನು ಖುದ್ದಾಗಿ ಆಲಿಸಲು ಶೀಘ್ರದಲ್ಲೇ ರಾಜ್ಯದ ಎಲ್ಲಾ ವಿವಿಗಳಿಗೂ ಭೇಟಿ ನೀಡಲು ಸಿದ್ಧತೆ ನಡೆಸುತ್ತಿದ್ದೇನೆ. ಶೈಕ್ಷಣಿಕ ಸುಧಾರಣೆಗೆ ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ.
.
.
.
#HigherEducation #Karnataka #BasavarajRayareddi