Sri Vadiraja Matha at Sonda, is the place where Sri Vadirajaru is residing in the Pancha Vrindavana blessing thousands and thousands of devotees everyday.
ತೆಲಂಗಾಣ ನಾರಾಯಣಪೇಟ್ ನಲ್ಲಿ ಜನಮೇಜಯ ಪ್ರತಿಷ್ಠಿತ ಶ್ರೀರಘುಪ್ರೇಮ ತೀರ್ಥರಿಂದ ಪೂಜಿತ ಅನಂತಶಯನ ದೇವಸ್ಥಾನದಲ್ಲಿ ಹನ���ಮದ್ವ್ರತ ಅಂಗವಾಗಿ ಮುಖ್ಯಪ್ರಾಣದೇವರಿಗೆ ಶ್ರೀ ವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ಧರ್ಮಕರ್ತರಾದ ಶ್ರೀಪಾದ ಕುಲಕರ್ಣಿಯವರ ನೇತೃತ್ವದಲ್ಲಿ ವಿಶೇಷ ಅಭಿಷೇಕ ರಥೋತ್ಸವ ನಡೆಯಿತು.
ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಸೋದೆ ವಾದಿರಾಜ ಮಠಕ್ಕೆ ಭೇಟಿ ನೀಡಿ ರಮಾತ್ರಿವಿಕ್ರಮ ದೇವರ , ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ,ಭೂತರಾಜರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
@JoshiPralhad@SodeMatha
ಸಂಸತ್ತಿನ ರಾಜ್ಯಸಭೆಯ ಸದಸ್ಯರಾಗಿ ನಾಮನಿರ್ದೇಶನಗೊಂಡ ಇನ್ಫೋಸಿಸ್ ಫೌಂಡೇಶನ್ ಮಾಜಿ ಅಧ್ಯಕ್ಷೆ ಶ್ರೀಮತಿ ಸುಧಾಮೂರ್ತಿಯವರು ಸೋದೆ ವಾದಿರಾಜ ಮಠಕ್ಕೆ ಆಗಮಿಸಿ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ , ಭೂತರಾಜರ ದರ್ಶನವನ್ನು ಪಡೆದು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಫಲಮಂತ್ರಾಕ್ಷತೆ ಪಡೆದರು
@SmtSudhaMurty@SodeMatha
��ಡುಪಿ ಸೋದೆ ವಾದಿರಾಜ ಮಠದ ಶ್ರೀಭೂತರಾಜರ ಹಾಗೂ ನಾಗದೇವರ ಸನ್ನಿಧಿಯಲ್ಲಿ ಅಕ್ಷಯ ತೃತೀಯಾದಂದು ಪುನಃ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಕಲಶಾಭಿಷೇಕವನ್ನು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು. ರಾತ್ರಿ ಭೂತರಾಜರಿಗೆ ವಿಶೇಷ ಪೂಜೆ ನಡೆಯಿತು.
ದಕ್ಷಿಣ ಕನ್ನಡದ ಉಪ್ಪಿನಂಗಡಿಯ ಕಡೇ ಶಿವಾಲಯದ ಚಿಂತಾಮಣಿ ಶ್ರೀನರಸಿಂಹ ದೇವರ ಸನ್ನಿಧಿಯಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರು ವಿಶೇಷ ಪೂಜೆ ನಡೆಸಿದರು. ಶ್ರೀ��ಾದಿರಾಜ ಗುರುಸಾರ್ವಭೌಮರು ಶ್ರೀನರಸಿಂಹದೇವರನ್ನು ವಿಶೇಷವಾಗಿ ಆರಾಧಿಸಿ ತೀರ್ಥಪ್ರಬಂಧದಲ್ಲಿ ಎರಡು ಶ್ಲೋಕಗಳಿಂದ ವರ್ಣಿಸಿದ್ದಾರೆ.