Word 'Guru' also means 'something that is heavy' in Sanskrit; it is natural for Guru to willingly accept the weight of difficulties of a disciple's life and living! Guru's might is beyond measure; disciple's weight is light like a feather!
#RaamaRashmi
https://t.co/vwdVMJ1tib
#ಗೋಸ್ವರ್ಗ ಮಧ್ಯದ ಗೋತೀರ್ಥ-ಸರೋವರದ ಶುಭಜಲದಲ್ಲಿ ಇಂದು ಮೈಸೂರಿನ ಶ್ರೀ ಶಂಕರನಾರಾಯಣ ಜೋಯಿಸರು ಸಪ್ತದೇವತಾ-ಸಾನ್ನಿಧ್ಯವನ್ನು ನೆ��ೆಗೊಳಿಸಿದರು.
ನಮ್ಮೊಳಗೆ ವಿದ್ಯೆಯನ್ನು ತುಂಬಿದ ಶುಭ-ಹಸ್ತಗಳೇ #ಗೋಸ್ವರ್ಗ ದಲ್ಲಿ ದಿವ್ಯತೆಯನ್ನು ತುಂಬಿದವು!
ಕಳೆದವರ್ಷ ಶಂಕರಪಂಚಮಿಯಲ್ಲಿ ಮಾತೆಯರಿಗೆ ಒಂದು ವರ್ಷದಲ್ಲಿ 45 ಲಕ್ಷ ಶಿವಪಂಚಾಕ್ಷರ ಸ್ತೋತ್ರ ಪಠಣದ ಗುರಿನೀಡಿದ್ದೆವು; ಅವರು ಸಾಧಿಸಿದ್ದು ಒಂದು ಕೋಟಿ, ಇಪ್ಪತ್ತೊಂದು ಲಕ್ಷ, ಐವತ್ತೆಂಟು ಸಾವಿರದ ನೂರ ಹತ್ತು!
ಕೃತಯುಗವನ್ನು ಮರಳ��� ತರುವವರಿವರು!
#ಶಂಕರಪಂಚಮಿ
ಗೋವು ಮತ್ತು ಗುರುತತ್ತ್ವ ಎರಡನ್ನೂ ಒಳಗೊಂಡ ಗೋವು~ಗುರುವಿನ ಅದ್ವೈತವನ್ನು ಸಾರುವ ಕೆಲವೇ ಕೆಲವು ನಂದಿರೂಪದ ಸ್ವಾಮಿಗಳಲ್ಲಿ ಬ್ಯಾಡಗಿ ತಾಲೂಕಿನ ಗುಡ್ಡದಮಲ್ಲಾಪುರದ ಮೂಕಪ್ಪ (ನಂದಿ) ಸ್ವಾಮಿಗಳೂ ಒಬ್ಬರು!
ನಿನ್ನೆ ಸಂಜೆ ಬ್ರಹ್ಮೈಕ್ಯರಾದ ಇವರ ಜತೆಗಿನ ಶ್ರೀಮಠದ ಬಾಂಧವ್ಯವು, ಮಠದ ಇತಿಹಾಸದಲ್ಲಿ, ವಿಶ್ವ ಗೋ ಸಮ್ಮೇಳನದ ನೆನಪಿನಲ್ಲಿ ಶಾಶ್ವತ!
ಗೋವಿಜ್ಞಾನಿಗಳೆಂದರೆ ನವಯುಗದ ಋಷಿಗಳು; ಲೋಕಕಲ್ಯಾಣಕ್ಕಾಗಿ ಪ್ರಾಚೀನ ಋಷಿಗಳು ತಪಗೈದರೆ ಗೋವಿಜ್ಞಾನಿಗಳು ಅದೇ ಕಾರಣಕ್ಕಾಗಿಯೇ ಸಂಶೋಧನೆಯೆಂಬ ತಪಸ್ಸನ್ನು ಆಚರಿಸುತ್ತಾರೆ!
ಅಂಥ ಅನೇಕ ಮಹಾವಿಜ್ಞಾನಿಗಳೊಂದಿಗೆ ಕಳೆಯುತ್ತಿರುವ ಸಮಯವು ಬೆಲೆ ಕಟ್ಟಲಾರದುದ��! https://t.co/hO2OxzLPOO
"ನಾನಿನ್ನೂ ಎಂಟು ತಿಂಗಳ ಶಿಶು; ನನ್ನನ್ನು ದೊಡ್ಡವನನ್ನಾಗಿಸುವ ಹೊಣೆ ನಿಮ್ಮದು!"
"ನಾನು ಬಾ���ಕ; ನೀವು ಪಾಲಕ!"
ಎಂಟು ತಿಂಗಳ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೋಸೇವಾ-ವಿಭಾಗದ ಅಖಿಲ ಭಾರತೀಯ ಹೊಣೆಗಾರಿಕೆಯನ್ನು ಸ್ವೀಕರಿಸಿದ ಅಜಿತ ಮಹಾಪಾತ್ರರ ನುಡಿಗಳಿವು!
'ಸುಗ್ರೀವನ ಸೇನೆಯಲ್ಲಿ ಎನಗಿಂತ ಕಿರಿಯರಿಲ್ಲ!" ಎಂದ ಹನುಮನ ನೆನಪಾಯಿತು..
#ಗೋಸ್ವರ್ಗ ವೆಂಬ ದೈವಶಿಶುವಿನ ಬೆಳವಣಿಗೆಯನ್ನು ನಿತ್ಯ ನೋಡುವ ಉತ್ಸುಕತೆ ಇರುವವರಿಗಾಗಿ #ಗೋವಾಣಿ ಯು ಇಂದಿನಿಂದ ಲೋಕಾರ್ಪಣೆಯ ದಿನದವರೆಗೆ ಪ್ರತಿನಿತ್ಯ ವಿಶೇಷ ಸಂಚಿಕೆಯನ್ನು ತರುತ್ತಿದೆ!
ಇದೋ, ಮೊದಲ ಸಂಚಿಕೆ ನಿಮ್ಮ ಕಣ್ಮುಂದೆ...
ಸಮಸ್ತ ಹವ್ಯಕ ಸಮಾಜದ ಅಧಿಕೃತ ಪ್ರತಿನಿಧಿಯಾದ ಗಿರಿಧರ ಕಜೆ #ಗೋಸ್ವರ್ಗ ದ ಪೋಷಕತ್ವವನ್ನಾಂತುದಕ್ಕೆ ಏನರ್ಥ?
ಸಮಸ್ತ ಹವ್ಯಕ ಸಮಾಜವೇ #ಗೋಸ್ವರ್ಗ ಕ್ಕೆ ಪೋಷಕವಾಯಿತೆಂದೇ ಅರ್ಥ! https://t.co/ZKPaOXtSHN