ರಾಜ್ಯದಲ್ಲಿನ ಆಕಾಶವಾಣಿ ಕೇಂದ್ರಗಳ ಸ್ಥಿತಿ ಗತಿ ಕುರಿತು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ. ಸಿಬ್ಬಂದಿಗಳ ಕೊರತೆ, ಕಾರ್ಯಕ್ರಮಗಳ ಕುಸಿತ, ನಿಗದಿತ ಸಮಯಕ್ಕೆ ಇಲ್ಲದ ವೇತನ, ಕಾಲಕಾಲಕ್ಕೆ ಹುದ���ದೆ ಭರ್ತಿ ಇಲ್ಲದೆ,ಕಲಬುರಗಿ ದೂರದರ್ಶನ ಕೇಂದ್ರದಂತೆ ಮುಚ್ಚುವ ಹಂತಕ್ಕೆ ಬಂದಿದ್ದು ,ಸಂಸದರು,ಕನ್ನಡ ಹೋರಾಟಗಾರರು ಇವುಗಳ ಕಾಯಕಲ್ಪಕ್ಕೆ ಮುಂದಾಗುವರೆ
ಪ್ರತಿ ವಿದ್ಯಾರ್ಥಿ ಓದುವಂತಾಗಲು ಪ್ರತಿದಿನ ಪಿರೇಡ್ ಸಮಯ ನಿಗದಿಪಡಿಸಬೇಕು, ಶಾಲಾ ಅವರಣದಲ್ಲಿ ಬಯಲು ಗ್ರಂಥಾಲಯಕ್ಕಾಗಿ ಚಿಕ್ಕ ಉದ್ಯಾನವನ ನಿರ್ಮಾಣ ಮಾಡಿ, ಪುಸ್ತಕಗಳು, ಪತ್ರಿಕೆಗಳು, ನಿಯತಕಾಲಿಕೆಗಳು ಇಡಲು ಆಲಮಾರ ವ್ಯವಸ್ಥೆ ಮಾಡಬೇಕು, ಟೇಬಲ್ ಕುರ್ಚಿಗಳ ವ್ಯವಸ್ಥೆ ಮಾಡಬೇಕು. ಗ್ರಂಥಾಲಯ ದಲ್ಲಿ ಎಲ್ಲಾ ಪತ್ರಿಕೆಗಳು ಒದಗಿಸಬೇಕು.
ರಾಜ್ಯದ ೨೪, ೩೪೭ ಶಾಲೆಗಳಲ್ಲಿ ರೀಡಿಂಗ್ ಕಾರ್ನರ್ ಸ್ಥಾಪಿಸಲು ಉದ್ದೇಶ ಹೊಂದಿರುವ ಮುಖ್ಯ ಮಂತ್ರಿ ಅವರ ಕ್ರಮ ಸ್ವಾಗತಿಸಲಾಯಿತು. ರೀಡಿಂಗ್ ಕಾರ್ನರ್ ಹೆಸರನ್ನು ಬಯಲು ಗ್ರಂಥಾಲಯ ಎಂದು ಕರೆಯಬೇಕು. ಇದನ್ನು ನೋಡಿಕೊಳ್ಳಲು ಪ್ರತಿಶಾಲೆಯಲ್ಲಿ ಗ್ರಂಥಾಲಯ ಮೇಲ್ವಿಚಾರಕರನ್ನು ನೇಮಕ ಮಾಡಬೇಕು, ಸರಿಯಾದ ನಿರ್ವಹಣೆಗೆ ಗ್ರಂಥಾಲಯ ಸಮಿತಿ ರಚಿಸಬೇಕು,
@CMofKarnataka ರಾಜ್ಯದ ಎಲ್ಲ ಪದವಿ ಕಾಲೇಜುಗಳಲ್ಲಿ ಪತ್ರಿಕೋದ್ಯಮ ವಿಷಯವನ್ನು ಐಚ್ಛಿಕ ವಿಷಯವಾಗಿ ಪ್ರಾರಂಭಿಸಲು ಮನವಿ. ಈ ಕುರಿತು ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಜಗದೀಶ ಶೆಟ್ಟರ್, ಸಿದ್ಧರಾಮಯ್ಯ ಅವರಿಗೆ ಮನವಿ ಅರ್ಪಿಸಲಾಗಿತ್ತು. ಕ್ರಮದ ಭರವಸೆ ನೀಡಿದ್ದರು. ಆದರೆ ಜಾರಿಯಾಗಿಲ್ಲ. ಈ ಕುರಿತು ಕ್ತಮ ಕೈಗೊಳ್ಳಲು ಮನವಿ.