"ಹಾಗಲಕಾಯಿ ಕಹಿಯಾದರೂ ಅದರ ಹೂವಿನಲ್ಲಿ ಮಕರಂದದ ಸವಿಯಿದೆ; ಜೇನುನೊಣವು ಕಹಿಯನ್ನು ಲೆಕ್ಕಿಸದೆ ಸಿಹಿಯನ್ನು ಮಾತ್ರ ಹೀರುತ್ತದೆ. ನಮ್ಮ ಜೀವನವೂ ಅಷ್ಟೇ, ಕಷ್ಟಗಳ ನಡುವೆಯೂ ಸಕಾರಾತ್ಮಕತೆಯನ್ನು ಹುಡುಕುವುದೇ ಬದುಕಿನ ಸೌಂದರ್ಯ."
ಅವಳನ್ನು ಮರೆಯಲೆಂದೇ
ನೆನಪಿಸಿಕೊಳ್ಳುತ್ತೇನೆ,
ಮತ್ತೆ ನೆನೆಯಲೆಂದೇ ,
ಮರೆಯುತ್ತೇನೆ
ಇದರಿಂದ ಬಚಾವಾಗಲು,
ಮತ್ತದೇ,
ನೆನಪ���ಗಳಲ್ಲಿ ಮುಳುಗಿಹೋಗುತ್ತೇನೆ,
ಕಾರಣ,
ಪ್ರೇಮದಿಂದ ಯಾರಿಗೂ
ಬಿಡುಗಡೆಯೇ ಇಲ್ಲ,
ಪಾರಾಗುವ ದಾರಿ ಇದೊಂದೇ.
#ಹನಿಗವನ
ನೂರಾರು ಕಣ್ಣುಗಳ ಮುಂದೆ
ಹಾದುಹೋಗಿರುವೆ,
ಆದರೆ ಅವಳ ಕಣ್ಣುಗಳಿಗಷ್ಟೆ
ಕಳೆದುಹೋಗಿರುವೆ.
ನಾನೋ ಅವಳ ಬಿಟ್ಟು ಕೇವಲ ಹನಿಯಷ್ಟೆ,
ಜೊತೆಗೂಡಿದರೆ ಸಾಗರ ,
ಅವಳೋ ಕಣ್ಮನ ಸೆಳೆಯುವ,
ಕವಿಮನ ಕೆಣಕುವ,
ಸೌಂದರ್ಯ ರಾಶಿಯ ಆಗರ.
#ಹನಿಗವನ
ಸಂಜೆಯಲಿ ಸಿಗುವ ಏಕಾಂತಕ್ಕಿಂತ
ಅವಳ ಸನಿಹ ಹೆಚ್ಚು ಅಪ್ಯಾಯಮಾನ
ಮಧಿರೆಯ ಅಮಲಿನಲಿ ತೇಲುವುದಕ್ಕಿಂತ
ಅವಳ ಸಂದಿಸಿ ಬೆವರುವುದರಲ್ಲಿದೆ
ಅಪರೂಪವಾದ ಉಪಶಮನ
ಅವಳಿಲ್ಲದೆ,ಸಿಹಿಮುತ್ತುಗಳಿಲ್ಲದೆ,
ಶೃಂಗಾರವಿಲ್ಲದೇ ಬದುಕು ಡೋಲಾಯಮಾನ.
#ಹನಿಗವನ
ಶಿವನ ಅರ್ಧನಾರೀಶ್ವರ ರೂಪದಲ್ಲಿ ತಿಳಿದುಕೊಳ್ಳಬೇಕಾದ ಅಂಶವೆಂದರೆ ಸೃಷ್ಟಿಯಲ್ಲಿ ಹೆಣ���ಣಾಗಲಿ ಅಥವಾ ಗಂಡಾಗಲಿ ಯಾರು ಕೂಡ ಮೇಲಲ್ಲ, ಯಾರು ಕೂಡ ಕೀಳಲ್ಲ. ಸೃಷ್ಟಿಯ ದೃಷ್ಟಿಯಲ್ಲಿ ಎರಡು ಜೀವವೂ ಕೂಡ ಸಮಾನರು.
ಈ ಎರಡೂ ಲಿಂಗಗಳು ಸಮಾಜದ ಅಭಿವೃದ್ಧಿಗೆ ಸಮನಾದ ಕೊಡುಗೆಯನ್ನು ನೀಡುತ್ತದೆ.
#ಮಹಾಶಿವರಾತ್ರಿ.
#ಅಂ_ರಾ_ಮಹಿಳಾ_ದಿನ
#ಲಿಂಗ_ಸಮಾನತೆ